ಅಭಿಪ್ರಾಯ / ಸಲಹೆಗಳು

Mulki PS

ದಿನಾಂಕ 15-02-2023 ರಂದು 10.10 ಗಂಟೆಗೆ ಆರೋಪಿ ಭೀಮರಾಯ ಎಂಬಾತನು ಮಂಗಳೂರು ತಾಲೂಕು ಮುಲ್ಕಿ  ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲನಿ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ  ಬಿಳಿ ಬಣ್ಣದ ಪಾಲಿಥಿನ್ ಗೋಣಿ ಚೀಲದಲ್ಲಿ ಒರಿಜಿನಲ್ ಚಾಯಿಸ್ ಎಂಬ ಹೆಸರಿನ 90  ಎಂಎಲ್ ಮದ್ಯ ತುಂಬಿದ ಒಟ್ಟು 35 ಸ್ಯಾಚೆಟ್ ಗಳು ಹಾಗೂ ಮೈಸೂರ್ ಲ್ಯಾನ್ಸರ್ ಎಂಬ ಹೆಸರಿನ 90 ಎಂ.ಎಲ್. ಮದ್ಯ ತುಂಬಿದ ಒಟ್ಟು 4  ಮದ್ಯದ ಸ್ಯಾಚೆಟ್ ಗಳನ್ನು ಇರಿಸಿಕೊಂಡು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ವಿನಾಯಕ ತೋರಗಲ್ ಮತ್ತು ಸಿಬ್ಬಂದಿಗಳು ಪತ್ತೆ ಹಚ್ಚಿ ಆರೋಪಿಯ ವಶದಲ್ಲಿದ್ದ ಒಟ್ಟು ಸುಮಾರು 1365/ ರೂಪಾಯಿ ಮೌಲ್ಯದ ಒಟ್ಟು 39 ಮದ್ಯದ ಸ್ಯಾಚೆಟ್ ಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿಯ ವಿರುದ್ದ ಕ್ರಮಕ್ಕಾಗಿ ವರದಿ ನಿವೇದಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

 

Ullal PS

ಫಿರ್ಯಾದಿದಾರರು ಸರಕಾರದಿಂದ ಪರಿಶಿಷ್ಟ ಜಾತಿಯವರಿಗೆ ಸಿಗುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಯೋಜನ ಅಡಿಯಲ್ಲಿ ಧನ ಸಹಾಯ ಪಡೆದು ಮೀನುಗಾರಿಕೆಯ ನಾಡ ದೋಣಿಯನ್ನು ವಡೆದು ಅದರಲ್ಲಿ ಮೀನು ಹಿಡಿಯುವ ಕೆಲಸ ಮಾಡಿಕೊಂಡಿದ್ದು, ಸದ್ರಿ ನಾಡ ದೋಣಿಯಲ್ಲಿ ಮೀನು ಹಿಡಿಯುವರೇ ಬೇಕಾಗುವ ಸಲಕರಣೆಗಳನ್ನು, ಅದರ ಚಲಾವಣೆಗೆ ಬೇಕಾಗಿ ಎರಡು ಯಂತ್ರಗಳನ್ನು ಅಳವಡಿಸಿದ್ದು, ಸದ್ರಿ ನಾಡದೋಣಿಯನ್ನು ನಡೆಸುವರೇ ಮಂಗಳೂರಿನ ಮೀನುಗಾರಿಕೆಯ ಉಪನಿರ್ದೇಶಕರಲ್ಲಿ ಕಟಿಲೇಶ್ವರಿ ಹೆಸರಿನ ನಂಬ್ರ IND-KA-01 MO3233 18/01/2016 ರಂದು ನೋಂದಣಿಯಾಗಿರುತ್ತದೆ. ಈ ನಾಡದೋಣಿಯನ್ನು ಫಿರ್ಯಾದಿದಾರರು 3 ವರ್ಷಗಳ ಹಿಂದ ಕಿರಣ್ ಮಾಸ್ಟರ್, ಮಲ್ಪೆ ಕೊಳ ಮಲ್ಪೆ, ಉಡುಪಿ ತಾಲೂಕು ಎಂಬವರಿಗೆ ನಡೆಸುವರೇ‍ ನೀಡಿದ್ದು, ಸದ್ರಿ ದೋಣಿಯ ಆಧಾರದಲ್ಲಿ ಬ್ಯಾಂಕ್‌ ಸಾಲ ಇದ್ದು, ಕಿರಣ್ ರವರು ಸದ್ರಿ, ದೋಣಿಯ ಬಾಬು ಹಣ ನೀಡದೇ ಇದ್ದಾಗ ದೋಣಿಯನ್ನು ವಾಪಾಸು ನೀಡುವಂತೆ ಮೊಬೈಲ್ ಮೂಲಕ ಕೇಳಿಕೊಂಡಾಗ ಸಬೂಬು ಹೇಳಿ ಸಂಪರ್ಕಕ್ಕೆ ಸಿಗದೇ ಇದ್ರು, ನಂತರ ಫಿರ್ಯಾದಿದಾರರು ನಾಡದೋಣಿಯ ಮಾಹಿತಿ ಸಂಗ್ರಹಿಸಿಕೊಂಡು ಉಳ್ಳಾಲ ಕೋಟೆಪುರ, ಡಿ ರೋಡ್ ಎಂಬಲ್ಲಿ ಇರುವುದನ್ನು ನೋಡಿ ಬಂದಿದ್ದು, ಈಗ ದೋಣಿಯನ್ನು ಪರಿಶೀಲಿಸಿದಾಗ ದೋಣಿಗೆ ಅಳವಡಿಸಿದ 2 ಯಮಹ ಇಂಜಿನ್ ಮೀನು ಹಿಡಿಯುವ ಬಲೆ, ಸಿಂಟೆಕ್ಸ್ ಟ್ಯಾಂಕ್ 1, 50 ಲೀಟರ್‌ನ ಕ್ಯಾನ್ 10, ಮೀನು ಹಿಡಿಯುವ ಹಗ, ಬ್ಯಾಟರಿ ಮತ್ತು ನೆಟ್, ಗ್ಯಾಸ್ ಸಿಲಿಂಡರ್-2, ಟರ್ಪಾಲು-3 ಕಳವಾಗಿರುವುದು ಕಂಡು ಬರುತ್ತದೆ. ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ.7,90,000-00 ಆಗಬಹುದು. ಆದುದರಿಂದ ಕಳವಾದ ಮೇಲಿನ ಸೊತ್ತುಗಳನ್ನು ಪತ್ತೆ ಹಚ್ಚಿ ಕೊಡುವಂತೆ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

Surathkal PS

ದಿನಾಂಕ 14-02-2023 ರಂದು ಕಾಟಿಪಳ್ಳ ಗ್ರಾಮದ ಚೊಕ್ಕಬೆಟ್ಟು ಚಕ್ರವರ್ತಿ ಗ್ರೌಂಡ್ ನಲ್ಲಿಗೆ ಸುಮಾರು 20.00 ಗಂಟೆಗೆ  1) ಕಲಂದರ್ ಶಾಫಿ,ಪ್ರಾಯ:38 ವರ್ಷ, ವಾಸ:ಮನೆ ನಂಬ್ರ:2/26,ನಾಸಿರ್ ಕಂಪೌಂಡ್, ವಿದ್ಯಾನಗರ ಶಾಲೆಯ ಬಳಿ,ಪಂಜಿಮೊಗರು, ಕೂಳೂರು ಅಂಚೆ, ಕಾವೂರು, ಮಂಗಳೂರು. 2) ಇರ್ಷಾದ್, ಪ್ರಾಯ:38 ವರ್ಷ,  ವಾಸ:ಸಫಾ ನಗರ, ಎಂ.ವಿ.ಶೆಟ್ಟಿ ಕಾಲೇಜು ಬಳಿ, ಕಾವೂರು ಅಂಚೆ, ಕಾವೂರು, ಮಂಗಳೂರು. 3) ಕಲಂದರ್ ಶಾಫಿ,ಪ್ರಾಯ:35 ವರ್ಷ,  ವಾಸ:ಮನೆ ನಂಬ್ರ:ಜಿ.ಎಲ್.53, ಈದ್ಗಾ ರಸ್ತೆ, 7ನೇ ಬ್ಲಾಕ್ ಮಸೀದಿ ಬಳಿ, 7ನೇಬ್ಲಾಕ್, ಕೃಷ್ಣಾಪುರ, ಕಾಟಿಪಳ್ಳ ಗ್ರಾಮ, ಸುರತ್ಕಲ್, ಮಂಗಳೂರು ಎಂಬವರುಗಳು ನಡವಳಿಕೆಯಲ್ಲಿ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಕಂಡುಬಂದಿದ್ದು  ವಿಚಾರಿಸಿದಾಗ ಈ ದಿನ ಮುಂಜಾನೆ ಓರ್ವ ವ್ಯಕ್ತಿಯಿಂದ ಸ್ವಲ್ಪ ಗಾಂಜಾ ವನ್ನು ಖರೀದಿಸಿ ಸ್ವಲ್ಪ ಹೊತ್ತಿನ ಮುಂಚೆ ಸಿಗರೇಟಿಗೆ ಹಾಕಿ ಸೇವಿಸಿರುವುದಾಗಿ ತಿಳಿಸಿರುತ್ತಾರೆ,  ಸದ್ರಿಯವರನ್ನು ಏ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಲ್ಲಿ ಅಲ್ಲಿನ ಕಾರ್ಯನಿರತ ವೈದ್ಯಾದಿಕಾರಿಯವರು ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಯವರು ತಮ್ಮ ವರದಿಯಲ್ಲಿ Tetrahydracannabinoid – POSITIVE.   The drug one step screen test panel(Urine) is an immunoassay based on the principle of competive binding  ಎಂಬುದಾಗಿ ನೀಡಿದ ವರದಿಯನ್ನು ಸ್ವೀಕರಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 15-02-2023 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080