ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

CEN Crime PS Mangaluru City

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ Mr.Annappa Swami ಇವರು ಮಂಗಳೂರು ನಗರದ ಕಿಲ್ಪಾಡಿ ಗ್ರಾಮ್ ದಲ್ಲಿ ವಾಸವಾಗಿದ್ದು ವಿದ್ಯುತ್ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ಬ್ಯಾಕ್ ಆಫ್ ಬರೋಡ ಖಾತೆ ಕಿನ್ನಿಗೋಳಿ ಬ್ರಾಂಚ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದು ದಿನಾಂಕ:11-01-2024 ರಂದು ಯಾರೋ ಅಪರಿಚಿತರು ಪಿರ್ಯಾದಿದಾರರ ವಾಟ್ಸಪ್ ಮೊಬೈಲ್ ನಂಬ್ರ ಕ್ಕೆ Stockmarket vip.com ಎಂಬ ಲಿಂಕ್ ಕಳುಹಿಸಿ ಆನ್ ಲೈನ್ ನಲ್ಲಿ ಶೇರ್ ಮಾರ್ಕೇಟ್ ಟ್ರೇಡಿಂಗ್ ಮಾಡಲು ಅವಕಾಶ ಪಡೆದಿರುತ್ತಿರಿ ಎಂದು ತಿಳಿಸಿ vip.99 ಎಂಬ ವಾಟ್ಸಪ್ ಮೂಲಕ ಪಿರ್ಯಾದಿದಾರರಿಗೆ ವಿವಿಧ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ಹೇಳಿ ಪಿರ್ಯಾದಿದಾರರನ್ನು ನಂಬಿಸಿ ದಿನಾಂಕ 11-01-2024 ರಿಂದ 31-01-2024 ರ ವರೆಗೆ  ಪಿರ್ಯಾದಿದಾರರ ವಿವಿಧ ಬ್ಯಾಂಕ್ ಖಾತೆಗಳಿಂದ ಅಪರಿಚಿತನು ಕಳುಹಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂ. 44.50 ಲಕ್ಷಗಳನ್ನು ಹೂಡಿಕೆ ಮಾಡಿದ್ದು ಅದರಲ್ಲಿ  ರೂ. 8.50 ಲಕ್ಷಗಳನ್ನು ಪಿರ್ಯಾದಿದಾರರ ಖಾತೆಗೆ ಲಾಭಾಂಶ ಎಂದು ತಿಳಿಸಿ ವರ್ಗಾಯಿಸಿರುತ್ತಾರೆ. ಬಾಕಿ ಇರುವ ರೂ. 36 ಲಕ್ಷ ಹಣವನ್ನು ಪಡೆಯಬೇಕಾದರೆ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ತಿಳಿಸಿರುತ್ತಾರೆ. ಒಟ್ಟು 36,00,000/-ರೂ.ಗಳನ್ನು ಹಂತ ಹಂತವಾಗಿ ವರ್ಗಾಯಿಸಿಕೊಂಡು ಈ ವರೆಗೆ ಪಿರ್ಯಾದಿದಾರರಿಗೆ ಯಾವುದೇ ಹಣವನ್ನು ಮರುಪಾವತಿ ಮಾಡದೆ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ.

 

Barke PS

ಪಿರ್ಯಾದಿದಾರರಾದ ಸುನೀತ ಶೆಟ್ಟಿರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರರ ಗಂಡ ಯಜ್ಞೇಶ್ ರಾಜ್ ಶೆಟ್ಟಿ ಪ್ರಾಯ 45  ವರ್ಷ ವರ್ಷ ಎಂಬವರು ದಿನಾಂಕ:14.02.2024 ರಂದು ಬೆಳಿಗ್ಗೆ ಎಂದಿನಂತೆ ಧಕ್ಕೆಗೆ ಕೆಲಸಕ್ಕೆ ಹೋಗಿ ಸಂಜೆ ಸಮಯ ಸುಮಾರು 6.30 ಗಂಟೆಗೆ ಮಗಳಿಗೆ ಖರ್ಚಿಗಾಗಿ ರೂ. 4000/- ಹಣವನ್ನು ಮತ್ತು ಆತನು ಉಪಯೋಗಿಸಿಕೊಂಡಿದ್ದ ಕಪ್ಪು ಬಣ್ಣದ ರೆಡ್ ಮಿ ಕಂಪೆನಿ ಹ್ಯಾಂಡ್ರೈಡ್ ಮತ್ತು ನೋಕಿಯಾ ಕಂಪೆನುಯ ಕೀ ಪ್ಯಾಡ್ ಮೊಬೈಲ್ ನ್ನು ಮನೆಯಲ್ಲಿಯೇ ಬಿಟ್ಟು ಮನೆಯಿಂದ ಯಾವುದೇ ಬಟ್ಟೆ ಬರೆಗಳನ್ನು ತೆಗೆದುಕೊಂಡು ಹೋಗದೆ ಬಟ್ಟೆಯನ್ನು ಬದಲಾಯಿಸಿಕೊಂಡು ಮನೆಯಿಂದ ಹೋದವರು ಈ ದಿನ ಬೆಳಿಗಿನವರೆಗೂ ವಾಪಾಸ್ಸು ಮನೆಗೆ ಬಾರದೇ ಇದ್ದುದ್ದನ್ನು ಕಂಡು ಎಲ್ಲಾ ಕಡೆ ಹುಡುಕಾಡಿದಲ್ಲಿ ಸಿಕ್ಕಿರುವುದಿಲ್ಲ. ಮನೆಯಿಂದ ಹೋದವನು ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೆ ಎಲ್ಲಿಯೋ ಕಾಣೆಯಾಗಿರುತ್ತಾನೆ ಎಂಬಿತ್ಯಾದಿ ಆಗಿರುತ್ತಾದೆ

ಕಾಣೆಯಾದವರ ಚಹರೆ.

ಹೆಸರು : ಯಜ್ಞೇಶ್ ರಾಜ್ ಶೆಟ್ಟಿ ಪ್ರಾಯ: 45 ವರ್ಷ ಎತ್ತರ:  ಸುಮಾರು 5.8 ಅಡಿ ಮೈ ಬಣ್ಣ : ಎಣ್ಣೆಕಪ್ಪು ಮೈ ಬಣ್ಣ, ಸಾಧಾರಣ ಶರೀರ, ಕೋಲು ಮುಖ, ಕಪ್ಪು ಕೂದಲು, ಉದ್ದನೆಯ ಮೂಗು ಬಾಷೆ: ತುಳು, ಕನ್ನಡ, ಇಂಗ್ಲೀಷ್ ಧರಿಸಿದ ಬಟ್ಟೆ: ಕಪ್ಪು ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ

 

Traffic South Police Station

ಈ ಪ್ರಕರಣದ ಸಾರಾಂಶವೇನೆಂದರೆ ಫಿರ್ಯಾದಿ NEERAJ M G  ಇವರು  ದಿನಾಂಕ: 14-02-2024 ರಂದು ಪಂಪವೆಲ್ ನಲ್ಲಿರುವ ರಾಯಲ್ ಬ್ರದರ್ಸ್ ಶೋ ರೂಮ್ ನಿಂದ ಸ್ಕೂಟರ್ ನಂಬ್ರ: KA-51-AH-0093 ನೇದನ್ನು ಬಾಡಿಗೆ ತೆಗೆದುಕೊಂಡಿದ್ದು, ದಿನಾಂಕ: 15-02-2024 ರಂದು ಫಿರ್ಯಾದಿದಾರರ ಸ್ನೇಹಿತ ಶಿವಶರಣ್ ನು ಫಿರ್ಯಾದಿದಾರರು ಬಾಡಿಗೆ ಪಡೆದಿದ್ದ ಸ್ಕೂಟರ್ ನಂಬ್ರ: KA-51-AH-0093 ನೇದನ್ನು ತೆಗೆದುಕೊಂಡು ಅವನ ಸ್ನೇಹಿತ ಸುಜಲ್  ಶಿರೋಡ್ಕರ್ ನನ್ನು ಡ್ರಾಪ್ ಮಾಡಲು ಸಹ್ಯಾದ್ರಿ ಕಾಲೇಜು ಕಡೆಗೆ ಹೋಗಿದ್ದು, ಶಿವಶರಣ್ ನು ಸ್ಕೂಟರ್ ನಂಬ್ರ: KA-51-AH-0093 ನೇದರಲ್ಲಿ ಅಡ್ಯಾರ್ ಕಡೆಯಿಂದ ಸೋಮನಾಥ ಕಟ್ಟೆ ಕಡೆಗೆ ರಾ.ಹೆ 73 ರ ಡಾಮಾರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 08-30 ಗಂಟೆಗೆ ಅಡ್ಯಾರ್ ಸೋಮನಾಥ್ ಕಟ್ಟೆ ಡಿವೈಡರ್ ಬಳಿ ತಲುಪಿದಾಗ ಅದೇ ರಸ್ತೆಯಲ್ಲಿ ಅವನ ಹಿಂದಿನಿಂದ ಬರುತ್ತಿದ್ದ ಕೆನರಾ ಕಾಲೇಜು ಬಸ್ಸು ನಂಬ್ರ KA-19-C-5359 ನೇದನ್ನು ಅದರ ಚಾಲಕ ರಾಜೇಂದ್ರ ಆಚಾರ್ಯ ಎಂಬಾತನು ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಮುಂಭಾಗವನ್ನು ಸ್ಕೂಟರ್ ನ ಹಿಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಶಿವಶರಣ್ ಗಂಭೀರ ಗಾಯಗೊಂಡಿರುವುದಾಗಿದೆ  ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ಫಿರ್ಯಾದಿ ಎಂಬಬಿತ್ಯಾದಿ.

 

Traffic South Police Station

ಈ ಪ್ರಕರಣದ ಸಾರಾಂಶವೇನೆಂದರೆ ಫಿರ್ಯಾದಿ MOOSA B A  ಇವರು  ದಿನಾಂಕ: 14-02-2024 ರಂದು ಅಗತ್ಯ ಕೆಲಸಕ್ಕೆಂದು ಮನೆಯಿಂದ ಮಂಗಳೂರಿನ ತಲಪಾಡಿಗೆ ಬಂದಿದ್ದು, ವಾಪಸ್ಸು ಕೆಲಸ ಮುಗಿಸಿ ತಲಪಾಡಿ ಬಳಿ ಇರುವ ದಿವ್ಯಶ್ರೀ ಬಾರ್ ನ ಹತ್ತಿರ ಇರುವ ಗೋಲ್ಡನ್ ಬೇಕರಿಯ ಎದುರು ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಸ್ತೆಯನ್ನು  ದಾಟಿ ನಂತರ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹೋಗುವ ರಾ.ಹೆ. 66ರ ಡಾಮಾರು ರಸ್ತೆಯನ್ನು ದಾಟುತ್ತಿರುವಾಗ ಸಮಯ ಸುಮಾರು ರಾತ್ರಿ 7-15 ಗಂಟೆಗೆ ಮಂಗಳೂರು ಕಡೆಯಿಂದ ಕಾರೊಂದನ್ನು ಅದರ ಚಾಲಕ ಒಮ್ಮೆಲೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿದಾರರಿಗೆ ಡಿಕ್ಕಿ ಪಡಿಸಿ ಅಪಘಾತ ಸ್ಥಳದಿಂದ ಕಾರು ಸಮೇತ ಪರಾರಿಯಾಗಿರುತ್ತಾನೆ. ಈ ಅಪಘಾತದ ಸಮಯ ಸಾರ್ವಜನಿಕರ ಫಿರ್ಯಾದಿದಾರರನ್ನು ಉಪಚರಿಸಿ ವಾಹನವೊಂದರಲ್ಲಿ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ  ಆಂಬ್ಯುಲೆನ್ಸ್ ನಲ್ಲಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಹೋಗಿದ್ದು ಫಿರ್ಯಾದಿದಾರರನ್ನು ಪರೀಕ್ಷಿಸಿದ ವೈಧ್ಯರು ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಹಾಗೂ ಎಡಕಾಲಿಗೆ, ಕೈಗೆ ತರಚಿದ ರಕ್ತಗಾಯವಾಗಿದೆ ಎಂದು ತಿಳಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Traffic North Police Station                         

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Kumara Devadiga  ದಾರರು ಈ ದಿನ ದಿನಾಂಕ 15.02.2024 ರಂದು ಬೆಳಿಗ್ಗೆ ತನ್ನ ಬಾಬ್ತು ಓಮಿನಿ ವಾಹನ ನಂಬ್ರ KA-19MA-4294 ನೇಯದನ್ನು ಸುರತ್ಕಲ್ ಕಡೆಯಿಂದ ಕೆಂಚನಕೆರೆ ಕಡೆಗೆ ಸುರತ್ಕಲ್ ಪಕ್ಷಿಕೆರೆ ಮಾರ್ಗವಾಗಿ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 08:20 ಗಂಟೆಗೆ ಪಕ್ಷಿಕೆರೆ ಚರ್ಚ್ ಬಳಿ ತಲುಪುತ್ತಿದ್ದಂತೆಯೇ ಮುಂದಿನಿಂದ ಆಟೋ ರಿಕ್ಷಾ ನಂಬ್ರ  KA-19AD-4085 ನೇಯದನ್ನು ಅದರ ಚಾಲಕ ಅಬುಬಕ್ಕರ್  ಎಂಬವರು ನಿರ್ಲಕ್ಷತನ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಓಮ್ನಿ ವಾಹನದ ಬಲ ಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಆಟೋ ರಿಕ್ಷಾ ಚಾಲಕ ಅಬುಬಕ್ಕರ್ ರವರ ಗದ್ದದ ಬಳಿ ಚರ್ಮ ತರಚಿದ ಗಾಯ, ಮತ್ತು ತುಟಿಯ ಬಳಿ ರಕ್ತ ಗಾಯವಾಗಿದ್ದು ಕಿನ್ನಿಗೋಳಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಅಪಘಾತದಿಂದ ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿಗೆ ಗುದ್ದಿದ ರೀತಿಯ ನೋವು ಆಗಿದ್ದು ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ. ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿರುತ್ತದೆ  ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 16-02-2024 08:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080