ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic South Police

ಪಿರ್ಯಾದಾರರಾದ ಮೋಹಮ್ಮದ್ ಇಲಿಯಾಸ್ (45) ಮತ್ತು ನೆರೆ ಮನೆಯ ಅಝ್ವಿರ್ ಎಂಬುವರು ದಿನಾಂಕ:15-03-2024 ರಂದು ಬೆಳಿಗ್ಗೆ 6.00 ಗಂಟೆಗೆ ವಳಚ್ಚಿಲ್ ಮಸೀದಿಯಿಂದ ಮನೆಯಕಡೆ ನಡೆದುಕೊಂಡು ಹೋಗುತ್ತಿರು ಸಮಯ ರಾ.ಹೆ -73 ರಲ್ಲಿ ಫರಂಗಿಪೇಟೆ ಕಡೆಯಿಂದ ಬರುತ್ತಿದ್ದ ಆಟೋ ರಿಕ್ಷಾ ನಂಬ್ರ KA-19-AB-6630 ನೇದರ ಚಾಲಕ ಚೇತನ್ ಕುಮಾರ್ ರವರು ತನ್ನ ಆಟೋ ರಿಕ್ಷಾವನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಹಾಗೂ ಅಝ್ವಿರ್ ರವರಿಗೆ ಡಿಕ್ಕಿ ಪಡಿಸಿ ಪರಿಣಾಮ ಸದ್ರಿಯವರು ಡಾಮರು ರಸ್ತೆಗೆ ಬಿದ್ದು ಪಿರ್ಯಾದಿದಾರರ ತಲೆ,ಸೊಂಟ ಮತ್ತು ಕೈ ಕಾಲಿಗೆ ಚರಚಿದ ರಕ್ತ ಗಾಯವಾಗಿರುತ್ತದೆ.ಹಾಗೂ  ಅಝ್ವಿರ್ ರವರಿಗೆ ಬಲಕೈಗೆ ತರಚಿದ ಗಾಯವಾಗಿರುತ್ತದೆ. ನಂತರ ಆಟೋ ರಿಕ್ಷಾ ಚಾಲಕ ಮತ್ತು ಅಲ್ಲಿ ಸೇರಿದ ಸಾರ್ವಜನಿಕರು ಉಪಚರಿಸಿ ಆಟೋವೊಂದರಲ್ಲಿ ಚಿಕಿತ್ಸೆ ಬಗ್ಗೆ  ನಗರದ ಫಾದರ್ ಮುಲ್ಲಾರ್ ಆಸ್ಪತ್ರೆಗೆ ಕರೆದುಕೊಂಡು  ಹೋಗಿದ್ದು ಪರೀಕ್ಷೀಸಿದ ವೈದ್ಯರು ಪಿರ್ಯಾದಿದಾರರನ್ನು ಫಸ್ಟ ನ್ಯೂರೋ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾಧಿ

 

Urva PS

ಈ ಪ್ರಕರಣದ ಸಾರಾಂಶವೆನೆಂದರೆ ದಿನಾಂಕ 15-03-2024 ರಂದು ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ  ಬಿಜೈ ಕೆ.ಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಇರುವ ಕಟ್ಟಡದ ದೊಣ್ಣೆ ಬಿರಿಯಾನಿ ಹೋಟೆಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಸುನೀಲ್ ಕುಮಾರ್ ಎಂಬವರು ಕಾನೂನು ಬಾಹಿರ ಮಟ್ಕಾ ಚೀಟಿ ದಂಧೆ ನಡೆಸುತ್ತಿದ್ದು  ಘನ ನ್ಯಾಯಾಲಯದಲ್ಲಿ ಅನುಮತಿ ಸ್ಥಳಕ್ಕೆ ದಾಳಿ ನಡೆಸಿ, ಪ್ರಕರಣ ದಾಖಲಿಸಿದರುದಾಗಿದೆ ಎಂಬಿತ್ಯಾದಿ

 

Konaje PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:15-03-2024 ರಂದು ಪಿರ್ಯಾದಿ Puneeth M Gaonkar ಇವರು ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಮಂಗಳೂರು ತಾಲೂಕು, ನರಿಂಗಾನ ಗ್ರಾಮದ ಮೌಂಟುಗೋಳಿ ಮೈದಾನದ ಬಳಿ ತಲುಪಿದಾಗ ಓರ್ವ ಯುವಕನು ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ಮೊಹಮ್ನದ್ ರಿಝ್ವಾನ್ ಪ್ರಾಯ(27) ವರ್ಷ, ತಂದೆ: ಅಬ್ದುಲ್ ಖಾದರ್ , ವಾಸ: # 3/131(11) ಮೌಂಟುಗೋಳಿ ಕೈರಂಗಳ ಗ್ರಾಮ ಮತ್ತು ಅಂಚೆ ಮುಂದಿನ ಕ್ರಮದ ಬಗ್ಗೆ ಮಂಗಳೂರು ಕೆ ಎಸ್ ಹೆಗ್ಡೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿ TETRAHYDROCANNABINOL ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ

 

Traffic South Police Station

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ: 14-03-2024 ರಂದು ಫಿರ್ಯಾದಿ RAVIKUMAR V  ಇವರು ತನ್ನ ಸ್ನೇಹಿತನ ಬಾಬ್ತು KA19MN3154  ನೇ ನಂಬ್ರದ  ಕಾರ್ ನ್ನು ಚಲಾಹಿಸಿಕೊಂಡು ಹೆಂಡತಿ ಮತ್ತು ಮಕ್ಕಳೊಂದಿಗೆ ಕಾಸರಗೊಡು ಕಡೆಯಿಂದ  ಮಂಗಳೂರು ಸೋಮೆಶ್ವರ ಕಡೆಗೆ ಹೊರಟು ತಲಪಾಡಿ ಕೊಟೆಕಾರ್ ಕ್ರಾಸ್ ಬಳಿ  ರಾ.ಹೆ-66 ತಲುಪುತ್ತಿದ್ದಂತೆ ಎದುರುನಿಂದ ಅಂದರೆ ಮಂಗಳೂರುನಿಂದ ತಲಪಾಡಿ ಕಡೆಗೆ ಹೋಗುವ ವಿರುದ್ದ ದಿಕ್ಕಿನಲ್ಲಿ KA23L0008 ನೇ  ನಂಬ್ರದ ಮೋಟಾರ್ ಸೈಕಲ್ ಸವಾರ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸಮಯ ಸುಮಾರು 11-35 ಗಂಟೆಗೆ ಕಾರ್ ನ ಮುಂದಿನ ಬಲಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಕಾರ್ ಜಖಂಗೊಂಡು ಸದ್ರಿ ಅಪಘಾತಪಡಿಸಿದ ಮೋಟಾರ್ ಸೈಕಲ್ ಕೂಡ ಜಖಂಗೊಂಡು ಸದ್ರಿ ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ.ಸದ್ರಿ ಅಪಘಾತಕ್ಕೆ ಕಾರಣವಾದ KA23L0008 ನೇ ನಂಬ್ರದ  ಮೋಟಾರ್ ಸೈಕಲ್ ಸವಾರನ  ಮತ್ತು ಮೋಟಾರ್ ಸೈಕಲ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 16-03-2024 10:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080