ಅಭಿಪ್ರಾಯ / ಸಲಹೆಗಳು

Crime Reports : CEN Crime PS Mangaluru City

ದಿನಾಂಕ: 05/02/2023 ರಂದು ಪಿರ್ಯಾದಿ ಟೆಲಿಗ್ರಾಂ ಖಾತೆ ಸಂಖ್ಯೆ:  ನೇಯದಲ್ಲಿ ಪಾಲ್ಗುಣಿ ಎಂಬ ಹೆಸರಿನ ಟೆಲಿಗ್ರಾಂ ಖಾತೆಯಿಂದ  ಪಾರ್ಟ್ ಟೈಮ್ ಜಾಬ್ ಬಗ್ಗೆ ಒಂದು ಸಂದೇಶ ಬಂದಿದ್ದು ಅದರಂತೆ  ಪಿರ್ಯಾದಿದಾರರು ಸದ್ರಿ ಖಾತೆದಾರರಿಗೆ ಸಂದೇಶ ಕಳುಹಿಸಿ ಪಾಟರ್್ ಟೈಮ್ ಉದ್ಯೋಗದ ಬಗ್ಗೆ ಮಾಹಿತಿ ವಿಚಾರಿಸಿದಲ್ಲಿ ಇದು ಆನ್ಲೈನ್ ಮೂವಿ ಟಿಕೆಟ್ ರೇಟಿಂಗ್ ಉದ್ಯೋಗ ಆಗಿರುವುದಾಗಿಯೂ Weinstein-movie.com/login (Imagine Entertainment)  ಎಂಬ ಆಪ್ ಇನ್ಸ್ಟಾಲ್ ಮಾಡಿ ಅದರಲ್ಲಿ ಖಾತೆಯನ್ನು ತೆರೆದು ಅದರಲ್ಲಿ ಪ್ರಸಾರವಾಗುವ ವೀಡಿಯೋ ನೋಡಿ ರೇಟಿಂಗ್ ಹಾಕಿ ಕಮೀಷನ್ ಹಣ ಪಡೆದುಕೊಳ್ಳುವುದಾಗಿ ತಿಳಿಸಿರುತ್ತಾರೆ. ಅದರಂತೆ ದಿನಾಂಕ: 06/02/2023 ರಂದು ಆರೋಪಿತರು ಕಳುಹಿಸಿದ Weinstein-movie.com/login (Imagine Entertainment)  ಲಿಂಕ್ ಮೂಲಕ ಆಪ್ ನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿ ಅದರಲ್ಲಿ ತನ್ನ ಮೊಬೈಲ್ ನಂಬ್ರ: ನಮೂದಿಸಿ ಖಾತೆಯನ್ನು ತೆರೆದು ಅದರಂತೆ ಸದ್ರಿ ಆಪ್ನಲ್ಲಿ ಬರುವ ವೀಡಿಯೋಗಳನ್ನು ನೋಡಿ ಅದಕ್ಕೆ ರೇಟಿಂಗ್ ನೀಡಿರುತ್ತಾರೆ ಈ ಬಗ್ಗೆ ಆರಂಭದಲ್ಲಿ ರೂ 1000/- ಗಳನ್ನು ಪಿರ್ಯಾದಿದಾರರಿಗೆ ಕಮಿಷನ್ ನೀಡಿರುತ್ತಾರೆ. ನಂತರ ಪಾರ್ಟ್ ಟೈಮ್ ಜಾಬ್ ಮುಂದುವರಿಸಲು ರೂ 10,500/- ಪಾವತಸುವಂತೆ ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಿದ್ದು ಅದರಂತೆ ದಿನಾಂಕ: 06/02/2023 ಪಿರ್ಯಾದಿದಾರರು   IDFC Bank A/c ನೇಯದರಿಂದ ಆರೋಪಿತರು ಕಳುಹಿಸಿದ YES Bank A/c 016263300008121 IFSC : YESB0000162 ನೇ ಖಾತೆಗೆ ರೂ 10500/- ಪಾವತಿ ಮಾಡಿರುತ್ತಾರೆ ನಂತರ ಅದೇ ದಿನ ಹೆಚ್ಚಿನ ಕಮೀಷನ್ ಪಡೆಯಬೇಕಾಗದಲ್ಲಿ ರೂ 29,936/- ಗಳನ್ನು ಪಾವತಿಸುವಂತೆ ತಿಳಿಸಿರುತ್ತಾರೆ ಅದರಂತೆ ಪಿರ್ಯಾದಿದಾರರು ಹೆಚ್ಚಿನ ಕಮೀಷನ್ ಹಣ ದೊರಕಬಹುದೆಂದು ನಂಬಿ ಪುನಃ ಅದೇ ದಿನ ತನ್ನ Indus Ind Bank A/c no ಖಾತೆಯಿಂದ ಅವರು ಕಳುಹಿಸಿದ YES Bank A/c 016263300008121 IFSC : YESB0000162 ನೇಯದಕ್ಕೆ ರೂ 29,936/- ಜಮಾ ಮಾಡಿರುತ್ತಾರೆ. ನಂತರ ದಿನಾಂಕ: 07/02/2023 ರಂದು ಬೆಳಿಗ್ಗೆ ಪಿರ್ಯಾದಿದಾರರು ಆಪ್ ಮೂಲಕ ವೀಡಿಯೋ ನೋಡಿ ರೇಟಿಂಗ್ ಹಾಕಲು ಪ್ರಯತ್ನಿಸಿದಲ್ಲಿ ಪುನಃ ಹಣ ಪಾವತಿಸುವಂತೆ ಬೇಡಿಕೆ ಇಟ್ಟಿದ್ದು ಅದರಂತೆ ರೂ 74465/- ಗಳನ್ನು ಪಿರ್ಯಾದಿದಾರರು Union Bank of India A/ ನೇಯದರಿಂದ YES Bank A/c 016463300005771 IFSC : YESB0000164 ಮಾಡಿರುತ್ತಾರೆ. ನಂತರ ನಾನು Weinstein-movie.com/login (Imagine Entertainment) ಆಪ್ ನಲ್ಲಿ ಪಾವತಿಸಿದ ಹಣವನ್ನು ಕಮೀಷನ್ ಸೇರಿಸಿ ವಿಡ್ರಾ ಮಾಡಲು ಪ್ರಯತ್ನಿಸಿದಲ್ಲಿ ಪುನಃ ಸದ್ರಿ ಅಪರಿಚಿತ ವ್ಯಕ್ತಿಗಳು ವೀಡಿಯೋ ನೋಡುವಂತೆಯೂ ಹೆಚ್ಚಿನ ಹಣವನ್ನು ಪಾವತಿಸುವಂತೆ ಬೇಡಿಕೆ ಇಟ್ಟಿದ್ದು ಆ ಸಮಯ ಪಿರ್ಯಾದಿದಾರರಿಗೆ ತಾನು ಮೋಸ ಹೋಗಿರುವುದು ಮನವರಿಕೆಯಾಗಿದ್ದು ಈ ಬಗ್ಗೆ ಕೂಡಲೇ ದಿನಾಂಕ: 07/02/2023 ರಂದು ಮಧ್ಯಾಹ್ನ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ನ 1930 ನೇ ನಂಬ್ರಕ್ಕೆ ಕರೆ ಮಾಡಿ ಸೈಬರ್ ವಂಚನೆಗೆ ಒಳಗಾಗಿರುವ ಬಗ್ಗೆ ಎರಡು ಪ್ರತ್ಯೇಕ ದೂರು ದಾಖಲಿಸಿದ್ದು ಅದರಂತೆ ದೂರು ಸಂಖ್ಯೆ: ದಾಖಲಾಗಿರುತ್ತದೆ. ನಂತರ ಪಿರ್ಯಾದಿದಾರರು ಈ ದಿನ ತಡವಾಗಿ ಸೈಬರ್ ಪೋರ್ಟಲ್ನಲ್ಲಿ ಪರಿಶೀಲಿಸಿದಲ್ಲಿ ತಾನು ದಾಖಲಿಸಿದ ದೂರಿಗೆ ಸಂಬಂಧಿಸಿದಂತೆ ತನ್ನ ಖಾತೆಯಿಂದ ಆರೋಪಿತರ ಖಾತೆಗೆ ಹಂತ ಹಂತವಾಗಿ ವರ್ಗಾವಣೆಯಾದ ಒಟ್ಟು ರೂ 1,14,901/- ಗಳನ್ನು  ಸೈಬರ್ ಕ್ರೈಂ ಪೋರ್ಟಲ್ ನವರು ತಡೆ ಹಿಡಿದಿರುವುದು ಕಂಡುಬಂದಿದ್ದು ಸದ್ರಿ ಹಣವನ್ನು ಹಿಂಪಡೆಯುವ ಬಗ್ಗೆ ಕ್ರಮಕೈಗೊಳ್ಳುವಂತೆ ಹಾಗೂ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿ ಎಂಬಿತ್ಯಾದಿ.

CEN Crime PS Mangaluru City

ಪಿರ್ಯಾದಿ ಮೊಹಮ್ಮದ್  ನೆಲ್ಲಿಕಾರ್ ಎಂಬವರು ಕನ್ಸಲ್ಟಿಂಗ್ ಕೆಲಸ ಮಾಡಿಕೊಂಡಿರುವುದಾಗಿದೆ.  ದಿನಾಂಕ 24-01-2023 ರಂದು ಮದ್ಯಾಹ್ನ 1-01 ಗಂಟೆಗೆ ಯಾರೋ ಅಪರಿಚಿತರ ವ್ಯಕ್ತಿಯ 8505084914 ಮೊಬೈಲ್  ನಂಬ್ರದಿಂದ ಪಿರ್ಯಾದಿದಾರರ ಮೊಬೈಲ್ ನಂಬ್ರ ನೇದರ ವಾಟ್ಸಾಫ್ ಖಾತೆಗೆ ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಬರುತ್ತದೆ. ನಂತರ ಆರೋಪಿಯು http://t.me/Bumati168168 ಮತ್ತು @Dian_a190 ಎಂಬ ಟೆಲಿಗ್ರಾಮ್ ಲಿಂಕ್ ಕಳುಹಿಸಿ ಪೇಮೆಂಟ್ ಕೋಡ್ ನಂಬ್ರ: IR242302 ನ್ನು ನೀಡಿ ಅದರಲ್ಲಿ ಪಿರ್ಯಾದಿದಾರರಿಗೆ ಹಣವನ್ನು ತೊಡಗಿಸಿದರೆ ಆನ್ ಲೈನ್ ಮೂಲಕ ದ್ವಿಗುಣ ಮಾಡಲು ಟಾಸ್ಕ್  ಕಂಪ್ಲೀಟ್ ಮಾಡಲು ತಿಳಿಸಿದ್ದು, ಸದ್ರಿ ವ್ಯಕ್ತಿಯು ಪಿರ್ಯಾದಿದಾರರಲ್ಲಿ ಪ್ರತಿ ಟಾಸ್ಕ್ ಗೆ ರೂಪಾಯಿ 70/- ಹಣವನ್ನು ಹಾಕುವುದಾಗಿ ತಿಳಿಸಿರುತ್ತಾರೆ.  ಈ ರೀತಿ 2-3 ದಿನ ಆರೋಪಿಯು ಇನ್ನೊಂದು ಟಾಸ್ಕ್ ಅಂತ ರೂಪಾಯಿ 2000/- ಪಾವತಿಸಿದರೆ 20% ಲಾಭ ಕೊಡುತ್ತೇವೆ, ದೊಡ್ಡ ಮೊತ್ತ ಕಳುಹಿಸಿದರೆ ಇನ್ನೂ ಹೆಚ್ಚಿನ ಲಾಭ ಕೊಡುತ್ತೇವೆ ಎಂದು ನಂಬಿಸಿ 2400/- ಹಣವನ್ನು ಪಿರ್ಯಾದಿದಾರರ ಖಾತೆಗೆ ವರ್ಗಾಯಿಸಿರುತ್ತಾರೆ. ಇದನ್ನು ನಂಬಿದ ಪಿರ್ಯಾದಿದಾರರು ನಂಬ್ರ: ನಂತರ 07-02-2023  ರಂದು 68,000/-, 86,800, 2,30,000/- ಮತ್ತು ದಿನಾಂಕ 08-02-2023 ರಂದು 1,68,000/-  ಬ್ಯಾಂಕ್ ಮೂಲಕ ವರ್ಗಾಯಿಸಿರುತ್ತಾರೆ. ನಂತರ ಆರೋಪಿತರು ಇನ್ನೂ ಹಣವನ್ನು ವರ್ಗಾಯಿಸಿದರೆ ಲಾಭ ಸಿಗುವುದಾಗಿ ತಿಳಿಸಿದಾಗ, ಪಿರ್ಯಾದಿದಾರರು ಮೋಸ ಹೋಗಿರುವುದು ತಿಳಿಯಿತು. ಹೀಗೆ ದಿನಾಂಕ 24-01-2023 ರಿಂದ 08-02-2023ರ ವರೆಗೆ ಹಂತ ಹಂತವಾಗಿ ಒಟ್ಟು ರೂಪಾಯಿ 5,52,800/- ಹಣವನ್ನು ಅರೋಪಿಗಳು ಪಿರ್ಯಾದಿದಾರರ ಖಾತೆಯಿಂದ ವರ್ಗಾಯಿಸಿಕೊಂಡು ಮೋಸ, ವಂಚನೆ ಮಾಡಿದ್ದು, ಆರೋಪಿಗಳು ಹಣವನ್ನು ಎಪ್ರಿಲ್ ಮೊದಲ ವಾರದಲ್ಲಿ ಹಿಂತಿರುಗಿಸುವುದಾಗಿ ನಂಬಿಸಿದ ಕಾರಣ ದೂರು ನೀಡಲು ವಿಳಂಬರುವುದಾಗಿದೆ ಎಂಬಿತ್ಯಾದಿ.

Mulki PS

ದಿನಾಂಕ 15-04-2023 ರಂದು ರಾತ್ರಿ 00.05 ಗಂಟೆಗೆ  ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ರವರು ಮಂಗಳೂರು ಉತ್ತರ ಉಪವಿಭಾಗ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಹಳೆಯಂಗಡಿಯಲ್ಲಿ ಸಂಚಾರ ಮಾಡಿಕೊಂಡಿದ್ದ ವೇಳೆ ಏಳಿಂಜೆ ಗ್ರಾಮದ ಪಟ್ಟೆ ಕ್ರಾಸ್ ಎಂಬಲ್ಲಿ ಯಾರೋ ಅಪರಿಚಿತರು ಶಾಂಭವಿ ನದಿಯಿಂದ ಮರಳನ್ನು ಕಳ್ಳತನ ಮಾಡುತ್ತಿದ್ದಾರೆಂದು ಅಲ್ಲಿಗೆ  ಹೋಗಿ ದಾಳಿ ನಡೆಸುವಂತೆ ಮಾನ್ಯ ಪೊಲೀಸ್ ಆಯುಕ್ತರು ಪಿರ್ಯಾದಿದಾರರಿಗೆ ಆದೇಶಿಸಿದ ಮೇರೆಗೆ ಪಿರ್ಯಾದಿದಾರರು ರಾತ್ರಿ, ಸಿಬ್ಬಂದಿಗಳ ಜೊತೆ 00.35 ಗಂಟೆಗೆ ಏಳಿಂಜೆ ಗ್ರಾಮದ ಪಟ್ಟೆಕ್ರಾಸ್ ಎಂಬಲ್ಲಿ ಶಾಂಭವಿ ನದಿ ದಡದಲ್ಲಿ ಹೋಗಿ ನೋಡಲಾಗಿ 03 ಟಿಪ್ಪರ್ ಲಾರಿಗಳು ನಿಂತಿದ್ದು,  ನದಿ ದಡದಲ್ಲಿ ನಿಂತಿದ್ದ ಕೆಎ 19 ಬಿ 9019 ನಂಬ್ರದ ಲಾರಿ ಪಕ್ಕದಲ್ಲಿ ಇರಿಸಿದ್ದ ಕಬ್ಬಿಣದ ರಾಂಪ್ ಸ್ಟಾಂಡ್ ಗೆ ಅಡ್ಡಲಾಗಿ ಇರಿಸಿದ್ದ ಮರದ ಹಲಗೆಯ ಮೇಲೆ ಹತ್ತಿ ಪ್ಲಾಸ್ಟಿಕ್ ಚಟ್ಟಿಯಿಂದ ಟಿಪ್ಪರ್ ನ ಬಾಡಿಯ ಒಳಗೆ ಮರಳು ತುಂಬಿಸುತ್ತಿರುವುದು ಕಂಡುಬಂದಿದ್ದು, ಟಿಪ್ಪರ್ ಲಾರಿಗಳ ಚಾಲಕರು ಟಿಪ್ಪರ್ ಗಳಲ್ಲಿ ಕುಳಿತುಕೊಂಡಿದ್ದು ಒಬ್ಬ ವ್ಯಕ್ತಿಯು ಕೆಳಗೆ ನಿಂತ್ತಿದ್ದು ಪಿರ್ಯಾದಿದಾರರ ಜೀಪ್ ನ್ನು ನೋಡಿ ಪೊಲೀಸರು ಬಂದರು ಓಡಿ ತಪ್ಪಿಸಿಕೊಳ್ಳಿ ಎಂದು ತುಳು ಭಾಷೆಯಲ್ಲಿ ಹೇಳುತ್ತಾ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರನ್ನು  ಪಿರ್ಯಾದಿದಾರರು ವಶಕ್ಕೆ ಪಡೆದಿದ್ದು  ನದಿಯ ನೀರಿನ ಬಾಗದ ಬಳಿ ನೋಡಲಾಗಿ 01 ಮರಳು   ತುಂಬಿದ ಕಬ್ಬಿಣದ ದೋಣಿ ಇದ್ದು  ಟಿಪ್ಪರ್ ಲಾರಿಗೆ ಮರಳು ತುಂಬಿಸಲು ಪ್ರಯತ್ನಿಸುತ್ತಿದ್ದ ಸುಮಾರು 3-4 ಜನ  ವ್ಯಕ್ತಿಗಳು ನೀರಿಗೆ ಹಾರಿ ತಪ್ಪಿಸಿಕೊಂಡಿರುತ್ತಾರೆ. ವಶಕ್ಕೆ ಪಡೆದ ಆರೋಪಿತರಾದ  ಕೆಎ 19 ಬಿ 9019 ಲಾರಿಯ ಕಂಡಕ್ಟರ್ ಸಪ್ವಾನ್, ಕೆಎ 70 4914 ನೇ ಟಿಪ್ಪರ್ ಲಾರಿಯ ಚಾಲಕ ಅಲ್ಪಾಸ್ , ಕೆಎ19 ಬಿ 9019 ಟಿಪ್ಪರ್ ಲಾರಿಯ ಚಾಲಕ ಸಿಯಾನ್, ಕೆಎ 70 2835 ನಂಬ್ರದ ಟಿಪ್ಪರ್ ಚಾಲಕ ಪ್ರದೀಪ್ ಎಂಬವರುಗಳು ಬಳ್ಕುಂಜೆ ಗ್ರಾಮದ ಸಿನೋಜ್ ಎಂಬಾತನು ನೇಮಿಸಿದ ಕಾರ್ಮಿಕರ ಸಹಾಯದಿಂದ  ಮುಲ್ಕಿ ಠಾಣಾ ವ್ಯಾಪ್ತಿಯ ಏಳಿಂಜೆ ಗ್ರಾಮ ಪಟ್ಟೆಕ್ರಾಸ್ ಎಂಬಲ್ಲಿ ಶಾಂಭವಿ ನದಿಯ ತೀರದಲ್ಲಿ ಸರ್ಕಾರದ ಗಣಿ ಮತ್ತ ಭೂ ವಿಜ್ಞಾನ ವ್ಯಾಪ್ತಿಗೆ ಬರುವ  ಸರ್ಕಾರದ ಸ್ವತ್ತಿಗೆ ಬರುವ ಮರಳನ್ನು ಸ್ಥಳೀಯ ಅಡಳಿತದಿಂದ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ, ಅಕ್ರಮ ಮರಳು ಗಣಿಗಾರಿಕೆ ನಡೆಸಿ ಅದನ್ನು ಮಾರಾಟ ಮಾಡುವ ಸಲುವಾಗಿ ಮರಳು ಕಳ್ಳತನ ಮಾಡುತ್ತಿರುವುದು ಕಂಡುಬಂದಿದ್ದು. 04 ಜನ ಆರೋಪಿತರನ್ನು ವಶಕ್ಕೆ ಪಡೆದಿದ್ದು,  03 ಟಿಪ್ಪರ್ ಲಾರಿ ಹಾಗೂ 02 ಟಿಪ್ಪರ್ ಲೋಡಿನಷ್ಟು ಮರಳು ತುಂಬಿದ ಕಬ್ಬಿಣದ ದೋಣಿ, ದೋಣಿಯಲ್ಲಿದ್ದ 05 ಸಲಾಕೆ, 05 ಚಟ್ಟೆಗಳು, 01 ಹಲಗೆ ಮತ್ತು 01  ಕಬ್ಬಿಣದ ಹುಟ್ಟು , ಕೆಎ 19ಬಿ 9019, ಲಾರಿಯ ಬಾಡಿಯ ಒಳಗಡೆ ಇದ್ದ ಸುಮಾರು 04 ಚಟ್ಟೆ ಅಷ್ಟು ಮರಳು, ದಡದಲ್ಲಿದ  04 ಮರದ ಹಲಗೆ ಸಹಿತ ಇದ್ದ 04 ರಾಂಪ್ ಸ್ಟಾಂಡ್ ಗಳು, 09  ಚಟ್ಟೆಗಳು, 08  ಮರದ ಹಲಗೆಗಳಿಗೆ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿರುವುದಾಗಿದೆ ಎಂಬಿತ್ಯಾದಿ.

 

Crime Reports :Mangalore East Traffic PS               

ಪಿರ್ಯಾದಿ ನಾಗೇಶ್ ರೈ ಮಾಲ ರವರು ದಿನಾಂಕ 12-04-2023 ರಂದು ತನ್ನ ಬಾಬ್ತು KA-19-Z-0264 ನೊಂದಣಿ ನಂಬ್ರದ ಕಾರನ್ನು ಕೆಪಿಟಿ ಕಡೆಯಿಂದ ವ್ಯಾಸನಗರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಮದ್ಯಾಹ್ನ ಸಮಯ ಸುಮಾರು 3.30 ಗಂಟೆಗೆ  ಎಸ್.ಕೆ.ಎಸ್ ಅಪಾರ್ಟ್ ಮೆಂಟ್ ಜಂಕ್ಷನ್ ತಲುಪಿ ವ್ಯಾಸನಗರ ಕಡೆಗೆ ಹೋಗುವರೇ ಯು ಟರ್ನ್ ತೆಗೆಯುತ್ತಿದ್ದಾಗ KA-21-C-1051  ನಂಬ್ರದ ಆಂಬುಲೆನ್ಸ್ ವಾಹನವನ್ನು ಅದರ ಚಾಲಕ ಪ್ರಕಾಶ್ ಎಂಬುವರು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಢಿಕ್ಕಿಪಡಿಸಿದ್ದು, ಢಿಕ್ಕಿಯ ಪರಿಣಾಮ ಕಾರಿನ ಬಲಬದಿಯ ಮುಂಭಾಗದ ಮತ್ತು ಹಿಂಭಾಗದ ಡೋರ್ ಗಳು ಜಖಂಗೊಂಡಿದ್ದು, ಅಂಬುಲೆನ್ಸ್ ಚಾಲಕ ಮೊದಲಿಗೆ ಕಾರಿನ ಜಖಂ ಬಗ್ಗೆ ಹಣ ನೀಡುವುದಾಗಿ ತಿಳಿಸಿ ನಂತರ ನಿರಾಕರಿಸಿದ್ದರಿಂದ ದೂರು ನೀಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Urva PS

ಪಿರ್ಯಾದಿ ಗೋಪಾಲ ಗಿಡ್ಡಪ್ಪ ಬಂಡಿವಡ್ಡರ (27) ರವರು ಅಬಕಾರಿ ಇಲಾಖೆಯಲ್ಲಿ ಪೇದೆಯಾಗಿ ಕರ್ತವ್ಯದಲ್ಲಿದ್ದು, 2023 ರ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಮೇಲಾಧಿಕಾರಿಗಳ ಆದೇಶದಂತೆ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ದಿನಾಂಕ 12-04-2023 ರಂದು ಗಸ್ತಿನಲ್ಲಿರುವಾಗ ಉರ್ವಾಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ ಜೆ.ಬಿ ಲೋಬೊ ರಸ್ತೆಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಶ್ರೀನಿವಾಸ ಎಂಬ ವ್ಯಕ್ತಿಯು ತನ್ನ ಇತರ ಇಬ್ಬರು ಸಹಚರೊಂದಿಗೆ ಕೆ ಎ 19 ಎಮ್ ಕೆ 7534 ನೀಲಿ ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಬಾತ್ಮೀದಾರರಿಂದ ಬಂದ ಮಾಹಿತಿಯಂತೆ ಕೊಟ್ಟಾರ ಫ್ಲೈಓವರ್ ಬಳಿಗೆ ಬಂದು ನಿಂತಿದ್ದು ನಂತರ ನಿರೀಕ್ಷಕರು ತಿಳಿಸಿದಂತೆ ಪಿರ್ಯಾದಿದಾರರು ವಾಹನದಿಂದ ಕೆಳಗಿಳಿದು ಮಾಹಿತಿ ಬಂದ ಸ್ಥಳಕ್ಕೆ ರಾತ್ರಿ 11-40 ಗಂಟೆಗೆ ತಲುಪಿದ್ದು ಪಿರ್ಯಾದಿದಾರರ ಹಿಂದಿನಿಂದ ಉಳಿದ ಅಧಿಕಾರಿ ಮತ್ತು ಸಿಬ್ಬಂದಿಯವರು ಸ್ಥಳಕ್ಕೆ ಬಂದಿದ್ದು ಸದ್ರಿ ಸ್ಥಳದಲ್ಲಿ ಮಾಹಿತಿಯಲ್ಲಿ ತಿಳಿಸಿದ ಕಾರು ನಿಂತಿರುವುದನ್ನು ಕಂಡ ಪಿರ್ಯಾದಿದಾರರು ಕಾರಿನ ಚಾಲಕನ ಬಾಗಿಲಿನ ಬಳಿ ಹೋಗಿ ಕಾರಿನ ಚಾಲಕನಲ್ಲಿ ವಿಚಾರಿಸಲು ಪ್ರಯತ್ನಿಸಿದಾಗ ಕಾರಿನ ಚಾಲಕನು ಮುಷ್ಠಿ ಬಿಗಿದು ಪಿರ್ಯಾದಿದಾರರ ಎಡ ಕಣ್ಣಿಗೆ ಬಲವಾಗಿ ಹೊಡೆದು ಪಿರ್ಯಾದಿದಾರರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಕಾರಿನಿಂದ ಇಳಿದು ಓಡಿ ಹೋಗಿರುವುದಾಗಿದೆ. ಎಂಬಿತ್ಯಾದಿ.

Bajpe PS

ಪಿರ್ಯಾದಿ Thousif ಅಣ್ಣನಾದ ನಜೀರ್ ಎಂಬುವರು ದಿನಾಂಕ 13.04.2023 ರಂದು ತನ್ನ ಸ್ಕೂಟರ್ ನಂ KA19HG6564 ನೇದರಲ್ಲಿ ಮನೆಯಿಂದ ಕೆಲಸಕ್ಕೆ ತೆರಳಿದ್ದು ಸಮಯ ಬೆಳಗ್ಗೆ 07.00 ಗಂಟೆಗೆ ಪಿರ್ಯಾದಿದಾರರಿಗೆ ಅಣ್ಣನಾದ ನಜೀರ್ ಪೋನ್ ಮಾಡಿ ಗಂಜೀಮಠ ಕಡೆಗೆ ತನ್ನ ಸ್ಕೂಟರ್ ನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಸೂರಲ್ಪಾಡಿಯ ಸಲ್ವಾ ಚಿಕನ್ ಸೆಂಟರ್ ಎದುರು ತಲುಪಿದಾಗ ನಜೀರ್ ನು ಚಲಾಯಿಸುತಿದ್ದ ಸ್ಕೂಟರ್ ಹಿಂದಿನಿಂದ ಅಂದರೆ ಕೈಕಂಬ ಕಡೆಯಿಂದ ಗಂಜಿಮಠ ಕಡೆಗೆ ವೇಗವಾಗಿ ಬರುತಿದ್ದ KA20HA6053 ನೇ ದರ ಬುಲೆಟ್ ಬೈಕ್ ಚಾಲಕನಾದ ಜಿತೇಶ್ ಶೆಟ್ಟಿ  ತನ್ನ ಬೈಕನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ ನಜೀರ್  ಚಲಾಯಿಸುತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ನಜೀರ್ ಗೆ ಕೈಕಾಲುಗಳಿಗೆ ತರಚಿದ ಗಾಯವಾಗಿದ್ದು ,ಬಲಮುಂಗೈನ ಮಣಿಕಟ್ಟಿನ ಮೂಳೆ ಮುರಿದ ಗಾಯವಾಗಿದ್ದು ಗಾಯಾಳುವನ್ನು ಮಂಗಳೂರಿನ ತೇಜಶ್ವಿನಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ.

 Bajpe PS

ಪಿರ್ಯಾದಿ Ajarath ಅಣ್ಣನಾದ ದಿಲೀಪ್ ಪಿಂಜಾರ ರವರು ದಿನಾಂಕ 13.04.2023 ರಂದು ಕೆಲಸಕ್ಕೆ ತನ್ನ ಬೈಕ್ ನಂ KA19HJ9658 ನೇದರಲ್ಲಿ ತನ್ನ ಹೆಂಡತಿ ರೇಷ್ಮ ಬಾನು ರವರೊಂದಿಗೆ  ತೆರಳಿದ್ದು ನಂತರ ಅದೇ ದಿನ ಸಂಜೆ ಕೆಲಸ ಮುಗಿಸಿ ಮನೆಗೆ ಬರುವ ಸಮಯ ಸಂಜೆ ಸುಮಾರು 5.15 ಗಂಟೆಗೆ ಮಂಗಳೂರು ತಾಲೂಕು ಕೆಂಜಾರು ಗ್ರಾಮದ ಕೆಂಜಾರು ಕಾನ ಬಳಿ ತಲುಪಿದಾಗ ಎದುರಿನಿಂದ KA19HB6254 ನೇದರ ಚಾಲಕನಾದ ಅಬೂಬಕ್ಕರ್ ಸಿದ್ದಿಕ್ ಎಂಬುವನು ತನ್ನ ಸ್ಕೂಟರ್ ನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಅಣ್ಣನಾದ ದಿಲೀಪ್ ಪಿಂಜಾರು ಚಲಾಯಿಸುತಿದ್ದ ಬೈಕ್ ಗೆ ಡಿಕ್ಕಿಹೊಡೆದ ಪರಿಣಾಮ ದಿಲೀಪ್ ಪಿಂಜಾರ ತಲೆಗೆ ಮತ್ತು ಮುಖಕ್ಕೆ ಗಂಬೀರ ಗಾಯವಾಗಿದ್ದು ದಿಲೀಪ್ ನ ಹೆಂಡತಿ ರೇಷ್ಮಾ ಬಾನು ರವರಿಗೂ ಸಣ್ಣ ಪುಟ್ಟ ಗಾಯಾಗಳಾಗಿದ್ದು ಡಿಕ್ಕಿ ಹೊಡೆದ ಆರೋಪಿ ಅಬೂಬಕ್ಕರ್ ಸಿದ್ದಿಕ್ ರವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಪಿರ್ಯಾದಿದಾರರ ಅಣ್ಣನನ್ನು ಎಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ.

Traffic North Police Station

ಪಿರ್ಯಾದಿ Girish Hegde B.N ದಿನಾಂಕ 14-04-2023 ರಂದು ತಾನು ಕೆಲಸ ಮಾಡುತ್ತಿದ್ದ ಧರ್ಮಸ್ಥಳದ ಮೇಳದ ಯಕ್ಷಗಾನವು ಮುಕ್ಕಾದ ಸತ್ಯಧರ್ಮ ದೇವಸ್ಥಾನದಲ್ಲಿದ್ದುದರಿಂದ ಅದರ ತಯಾರಿಯಲ್ಲಿದ್ದವರು ಮೇಳದ ಪೂಜಾ ಸಾಮಾಗ್ರಿಗಳನ್ನು ತರಲು ತಾನು ಹಾಗೂ ತನ್ನ  ಜೊತೆ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ  ಜೀವನ್ ಕುಮಾರ್(36) ರವರ ಜೊತೆ ಮುಕ್ಕಾದ ರಾ.ಹೆ66 ರ ಇನ್ನೊಂದು ಬದಿಯಲ್ಲಿರುವ ಅಂಗಡಿಗೆ ಹೋಗಿ ಸಾಮನುಗಳನ್ನು ಖರೀದಿಸಿ ವಾಪಾಸು ಸತ್ಯಧರ್ಮ ದೇವಸ್ಥಾನದ ಕಡೆ ನಡೆದುಕೊಂಡು ಬರುತ್ತಾ ಜೀವನ್ ಕುಮಾರ್ ರವರು ಸಿಂಧೂರ ಕಾಂಪ್ಲೆಕ್ಸ್ ಎದುರು ರಾ.ಹೆ.66 ನೇದನ್ನು ದಾಟುತ್ತಾ ಮಧ್ಯದ ಡಿವೈಡರ್ ಬಳಿ ತಲುಪುತ್ತಿದ್ದಂತೆ ಸಂಜೆ ಸಮಯ ಸುಮಾರು ಸಂಜೆ 4:35 ಗಂಟೆಗೆ ಸುರತ್ಕಲ್ ಕಡೆಯಿಂದ KA-20-AA-0119 ನಂಬ್ರದ ಕಾರನ್ನು ಅದರ ಚಾಲಕನು ವೇಗವಾಗಿ ಚಲಾಯಿಸಿಕೊಂಡು ಬಂದು  ರಸ್ತೆ ದಾಟುತ್ತಿದ್ದ ಜೀವನ್ ಕುಮಾರ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಜೀವನ್ ಕುಮಾರ್ ರವರು ಡಾಮಾರು ರಸ್ತೆಗೆ ಎಸೆಯಲ್ಪಟ್ಟು,ಅವರ ತಲೆಯ ಬಲ ಭಾಗ ಜಜ್ಜಿ ಹೋದಂತಾಗಿ, ಬಾಯಿ, ಮೂಗು, ಮತ್ತು ಕಿವಿಯಲ್ಲಿ ರಕ್ತ ಬಂದಿದ್ದು, ಬಲಕೈ ಮೊಣಗಂಟಿನ ಬಳಿ ಚರ್ಮ ಹರಿದ ರೀತಿಯ ಗಾಯ, ಬಲ ತೊಡೆಯ ಬಳಿ ಮತ್ತು ಬಲ ಕೋಲು ಕಾಲಿನ ಮೂಳೆ ಮುರಿತದ ರೀತಿಯ ಗಾಯವಾಗಿ ಮಾತನಾಡದ ಸ್ಥಿತಿಯಲ್ಲಿದ್ದುದರಿಂದ ಕೂಡಲೇ ಆ್ಯಂಬುಲೆನ್ಸ್ ನಲ್ಲಿ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ವೈದ್ಯರು ಅವರನ್ನು ಸಂಜೆ 5:15 ಗಂಟೆಗೆ ಪರೀಕ್ಷಿಸಿ ಜೀವನ್ ಕುಮಾರ್ ರವರು ಆಸ್ಪತ್ರೆಗೆ ಕರೆ ತರುವಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅಪಘಾತ ಪಡಿಸಿದ ಕಾರಿನ ಚಾಲಕನು ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.

Mangalore North PS                                                        

ದಿನಾಂಕ: 14-04-2023 ರಂದು 19-30 ಗಂಟೆಗೆ ಮಂಗಳೂರು ನಗರ ಅಪರಾಧ ವಿಭಾಗದಲ್ಲಿ ಪೊಲೀಸ್ ಉಪ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶರಣಪ್ಪ ಭಂಡಾರಿಯವರಿಗೆ  ಕಛೇರಿಯಲ್ಲಿದ್ದ ಸಮಯ ಬಾತ್ಮೀದಾರರೊಬ್ಬರು ಕರೆ ಮಾಡಿ ಮಾಹಿತಿಯೊಂದನ್ನು ನೀಡಿದ್ದು ಅದೇನೆಂದರೆ ಮಂಗಳೂರು ನಗರದ ರಾವ್ & ರಾವ್ ವೃತ್ತದ ಬಳಿಯ ಮೈದಾನ್ 4 ನೇ ಕ್ರಾಸ್ ರಸ್ತೆಯಲ್ಲಿರುವ ಗ್ಲೋಬಲ್ ರೆಸಿಡೆನ್ಸಿ ಪರಿಸರದಲ್ಲಿ ಓರ್ವ ವ್ಯಕ್ತಿಯು ಅಕ್ರಮ ಜೂಜಾಟವಾದ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಮೊಬೈಲ್ ಫೋನ್ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನ ಈ ದಿನ ನಡೆಯುವ ಕ್ರಿಕೆಟ್ ಪಂದ್ಯಾಟದ ಕ್ರಿಕೆಟ್ ಬೆಟ್ಟಿಂಗ್ ಅದೃಷ್ಟ್ಷದ ಜೂಜಾಟವನ್ನು ಆಡುತ್ತಾನೆ ಎಂಬುದಾಗಿರುತ್ತದೆ. ಅದರಂತೆ ಆತನನ್ನು ವಶಕ್ಕೆ ಪಡೆದುಕೊಳ್ಳುವ ಸಲುವಾಗಿ ಪಿರ್ಯಾದಿದಾರರು  ಮತ್ತು ಸಿಬ್ಬಂದಿಯವರಾದ ಹೆಚ್ ಸಿ  ಸುಬ್ರಹ್ಮಣ್ಯ, ಹೆಚ್ ಸಿ  ಶಾಜು ಕೆ ನಾಯರ್, ಹೆಚ್ ಸಿ, ಎ ಆರ್ ಎಸ್ ಐ ತೇಜಕುಮಾರ್ ರವರ ಜೊತೆ ನಗರದ ರಾವ್ & ರಾವ್ ವೃತ್ತದ ಬಳಿಯ ಮೈದಾನ್ 4 ನೇ ಅಡ್ಡ ರಸ್ತೆಯ ಗ್ಲೋಬಲ್ ರೆಸಿಡೆನ್ಸಿ ಹೊಟೇಲ್  ಬಳಿಗೆ ಸಂಜೆ ಸುಮಾರು 20-00 ಗಂಟೆಗೆ  ತಲುಪಿ ಅಲ್ಲಿಯ ಪರಿಸರದಲ್ಲಿ ಮಾಹಿತಿಯಲ್ಲಿ ನೀಡಲಾದ ವ್ಯಕ್ತಿಯ ಚಹರೆಯುಳ್ಳ ಒಬ್ಬಾತನು ಕೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ಕುಳಿತುಕೊಂಡು ಎಸ್ ಆರ್ ಹೆಚ್  ಗೆ 10000/- ಕೆಕೆಆರ್  ಗೆ 5000/-ಎಂದು ಹೇಳುತ್ತಾ ಮೊಬೈಲ್ನಲ್ಲಿ ಮಾತನಾಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವುದು ಕ್ರಿಕೆಟ್ ತಂಡಗಳ ಪಂದ್ಯಾವಳಿ ನಡೆಯುವ ಸಮಯ ತಂಡಗಳ ಮೇಲೆ ಹಣವನ್ನು ಪಣವಾಗಿಟ್ಟುಕೊಂಡು ಕ್ರಿಕೆಟ್ ಬೆಟ್ಟಿಂಗ್ ಅದೃಷ್ಟ್ಷದ ಜೂಜಾಟ ನಡೆಯುತ್ತಿರುವುದು ಖಚಿತಗೊಂಡಿದ್ದರಿಂದ ಆತನನ್ನು ಹಿಡಿಯಲು ಸಮೀಪಕ್ಕೆ ಓಡಿ ತಲುಪುವಾಗ ಆತನು ಓಡಲು ಪ್ರಯತ್ನಿಸಿದ್ದು, ಆತನ ಹೆಸರು ವಿಳಾಸವನ್ನು ವಿಚಾರಿಸಲಾಗಿ 1) ಯಶ್ ಜೈನ್, ಪ್ರಾಯ(26), ವಾಸ: ಆರ್ ಎಚ್ 2, ಪೃಥ್ವಿ ಪ್ಯಾಲೆಸ್, ನ್ಯೂ ಲಿಂಕ್ ರಸ್ತೆ, ಕಂದಾರ್ಪಡ, ದೈಸರ್ ವೆಸ್ಟ್, ಮುಂಬೈ, ಮಹಾರಾಷ್ಟ್ರ ಎಂದು ತಿಳಿಸಿರುತ್ತಾನೆ. ಆತನಲ್ಲಿ ಮಾಹಿತಿ ಬಂದ ವಿಷಯವಾದ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ವಿಚಾರಿಸಿದಾಗ, ತಾನು ಈಗ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ನ ಕ್ರಿಕೆಟ್ ಪಂದ್ಯಾಟದ ಸಮಯ ಮೊಬೈಲ್ ನಲ್ಲಿ “Cricket Live Line”ಎಂಬ ಆಪ್ಲಿಕೇಶನ್ ಮೂಲಕ ಐಪಿಎಲ್ ಕ್ರಿಕೆಟ್ ಪಂದ್ಯಾಟದ ಲೈವ್ ರನ್ ಗಳ ಮಾಹಿತಿಗಳನ್ನು ಪಡೆದು ತನ್ನ ಸ್ನೇಹಿತರಾದ ಪ್ರಜ್ವಲ್ ಹಾಗೂ ಇತರರ ಜೊತೆ ಅದೃಷ್ಟ್ಷದ ಜೂಜಾಟವಾದ ಕ್ರಿಕೆಟ್ ಬೆಟ್ಟಿಂಗ್ ಮಾಡಿರುತ್ತೇನೆ ಹಾಗೂ ನಮ್ಮೊಳಗೆ ಈ ಕ್ರಿಕೆಟ್ ಬೆಟ್ಟಿಂಗ್ ಆಟವನ್ನು ಆಡುತ್ತಿದ್ದೇವೆ ಎಂಬುದಾಗಿ ತಿಳಿಸಿದ್ದು, ಆತನು ಅಕ್ರಮ ಜೂಜಾಟವಾದ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ನಿರತನಾಗಿದ್ದುದರಿಂದ ಆತನನ್ನು ಸ್ಥಳದಲ್ಲಿ 20-30 ಗಂಟೆಗೆ ವಶಕ್ಕೆ ಪಡೆದುಕೊಂಡಿದ್ದು, ಆತನ ವಿರುದ್ದ ಸೂಕ್ತ ಕ್ರಮಕ್ಕಾಗಿ  ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

Mangalore South PS

ಮಂಗಳೂರು ದಕ್ಷಿಣ ಪೊಲೀಸು ಠಾಣಾ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಶೀತಲ್ ಅಲಗೂರು ದಿನಾಂಕ 14-04-2023 ರಂದು ಬೆಳಿಗ್ಗೆ 11-30 ಗಂಟೆಗೆ ಠಾಣೆಯಿಂದ ರೌಂಡ್ಸ್ ಕರ್ತವ್ಯಕ್ಕೆ ಹೊರಟವನು ರೊಸಾರಿಯೋ ರಸ್ತೆಯಲ್ಲಿರುವ ಸಮಯ 11-45 ಗಂಟೆಗೆ ನನಗೆ ಮಂಗಳೂರು ನಗರದ ವೆಲೆನ್ಸಿಯ ಸೈಂಟ್ ಅಂಟೋನಿ ಕೃಪಾ ಎಂಬ  ಅಪಾರ್ಟ್ ಮೆಂಟ್ 2 ನೇ ಮಹಡಿಯಲ್ಲಿರುವ ರೂಮ್ ನಂಬ್ರ 201 ರಲ್ಲಿ ವಾಸವಾಗಿರುವ ಪ್ರಜ್ವಲ್ ಫಿನಿಹಾಸ ಎಂಬಾತನು ಸುಮಾರು 1 ಕೆ.ಜಿ ಗಿಂತಲೂ ಅಧಿಕ ಪ್ರಮಾಣದ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ತನ್ನ ವಶದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಪ್ರಕರಣ ದಾಖಲಿಸುವರೇ ಠಾಣೆಗೆ ಬಂದು 11-50 ಗಂಟೆಯಿಂದ 12-00 ರ ತನಕ ಸ್ವ-ದೂರನ್ನು ತಯಾರಿಸಿ ಆರೋಪಿತ ಪ್ರಜ್ವಲ್ ಫಿನಿಹಾಸ್ ವಿರುದ್ದ NDPS Act.  ಪ್ರಕಾರ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ

Mangalore South PS  

ಪಿರ್ಯಾದಿ Siddappa Inalli  ದಿನಾಂಕ 14-04-2023 ರಂದು ಮಧ್ಯಾಹ್ನ ಸಮಯ ಕೆಲಸ ಮುಗಿಸಿ ಮನೆಗೆ ಬಂದಾಗ ಅವರ 3 ನೇ ಮಗುವಿನ ತಲೆಯ ಮುಭಾಗದ ಕೂದಲು ಕಟ್ ಆಗಿದ್ದು,  ಸಂಶಯಗೊಂಡ ಪಿರ್ಯಾದಿದಾರರು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಮಂಗಳೂರು ನಗರದ ಅತ್ತಾವರ ಬಾಬುಗುಡ್ಡೆ 2 ನೇ ಕ್ರಾಸ್ ನಲ್ಲಿರುವ ಇನ್ ಕಮ್ ಟ್ಯಾಕ್ಸ್  ಇಲಾಖೆಯ ಉದ್ಯೋಗಿಗಳ  ಕ್ವಾಟ್ರಸ್ ನ  ಸಿ-2  ಬ್ಲಾಕ್  ಬಳಿ ಬಂದಾಗ ಸ್ಥಳದಲ್ಲಿದ್ದ ಆರೋಪಿ ಮಾಧವ ರವರು ಪಿರ್ಯಾದಿದಾರರನ್ನು ಉದ್ದೇಶಿಸಿ “ಬೇವರ್ಷಿ ಒಂದು ಸಲ ಕೆಲಸ ಬಿಟ್ಟ ಮೇಲೆ ವಾಪಾಸ್ಸು ಯಾಕೆ ಇಲ್ಲಿಗೆ ಬರುತ್ತೀಯಾ? ಎಂದು ಅವಾಚ್ಯ ಶಬ್ದದಿಂದ ನಿಂದಿಸಿ, ಏಕಾ  ಏಕಿ ಸ್ಥಳದಲ್ಲಿದ್ದ ಒಂದು ಮರದ ವಿಕೆಟ್ ನಿಂದ ಪಿರ್ಯಾದಿದಾರರ ಎಡ ಕಿವಿಯ ಹಿಂದೆ ತಲೆಗೆ, ಹಣೆಯ ಮೇಲ್ಬಾಗ  ಹೊಡೆದು, ತನ್ನ ಕೈಯಿಂದ ಪಿರ್ಯಾದಿದಾರರ ಎಡ ಪಕ್ಕೆಲುಬು ಹಾಗೂ ಬೆನ್ನಿನ ಹಿಂಭಾಗಕ್ಕೆ ಹಲ್ಲೆ ನಡೆಸಿದ್ದು, ಆ ಸಮಯ ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿದಾಗ, ಸುತ್ತ ಮುತ್ತಲಿನ ಸಾರ್ವಜನಿಕರು ಸ್ಥಳಕ್ಕೆ ಬಂದಾಗ, ಆರೋಪಿಯು ಪಿರ್ಯಾದಿದಾರರನ್ನು ಉದ್ದೇಶಿಸಿ “ನಾಳೆ ಎಲ್ಲಿಯಾದರು ಸಿಗು, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ, ಹಲ್ಲೆ ಮಾಡಲು ಬಳಸಿದ ವಿಕೇಟ್ ಅನ್ನು ಸ್ಥಳದಲ್ಲಿ  ಬಿಸಾಡಿ ಅಲ್ಲಿಂದ ಹೋಗಿರುತ್ತಾರೆ, ಎಂಬಿತ್ಯಾದಿಯಾಗಿರುತ್ತದೆ.

                                                  

 

 

 

ಇತ್ತೀಚಿನ ನವೀಕರಣ​ : 21-08-2023 12:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080