ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic North Police Station

                        

ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿ Ahammad Shakeel  ಇವರು  ದಿನಾಂಕ 15-04-2024 ರಂದು ತಮ್ಮ ಕಂಪನಿಯ ಬಾಬ್ತು KA-21-Y-2776 ನಂಬ್ರದ ಸ್ಕೂಟರಿನಲ್ಲಿ ಸಫರುದ್ದಿನ್ ಅಹಮ್ಮದ್ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಕೂಳೂರುರಿಗೆ ಜೆಸಿಬಿ ಗೆ ಸಂಬಂಧಿಸಿದ ಪಾರ್ಟ್ಸ್ ಗಳನ್ನು ತೆಗೆದುಕೊಂಡು ಹೋಗಲು ಕೂಳೂರಿಗೆ ಬಂದಿದವರು ವಾಪಾಸು ಕೂಳೂರು ಸರ್ವೀಸ್ ರಸ್ತೆಯಲ್ಲಿ ಹೋಗುತ್ತಿದ್ದ ಸಮಯ 15:50 ಗಂಟೆಗೆ ರಿಲಯನ್ಸ್ ಪೆಟ್ರೋಲ್ ಪಂಪ್ ಬಳಿ ತಲುಪಿದಾಗ ಪೆಟ್ರೋಲ್ ಒಳಗಡೆಯಿಂದ ಸರ್ವೀಸ್ ರಸ್ತೆ ಕಡೆಗೆ KA-32-P-4477 ನಂಬ್ರದ ಕಾರನ್ನು ಅದರ ಚಾಲಕ ಆನಂದ ಸಜ್ಜನ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಸಹ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಎಡ ಕೋಲು ಕಾಲಿಗೆ ಮೂಳೆ ಮುರಿತದ ಗಾಯ, ಎರಡೂ ಕೈಗಳ ಅಂಗೈಗೆ, ತರಚಿದ ರೀತಿಯ ಗಾಯ, ಎಡ ಭುಜಕ್ಕೆ ಗುದ್ದಿದ ರೀತಿಯ ನೋವಾಗಿದ್ದು ಅಲ್ಲದೆ ಸಹ ಸವಾರ ಸಫರುದ್ದಿನ್ ಅಹಮ್ಮದ್ ರವರಿಗೆ ಎಡ ಕೈಗೆ ಸಣ್ಣ ಬೆರಳಿಗೆ ರಕ್ತಗಾಯ, ಮತ್ತು ಎಡ ಕಾಲಿನ ಮೊಣಗಂಟಿಗೆ ಗುದ್ದಿದ ರೀತಿಯ ಗಾಯವಾಗಿ ಚಿಕಿತ್ಸೆಯ ಬಗ್ಗೆ ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

 

Traffic South Police Station  

                     

ಪಿರ್ಯಾದಿದಾರ ಮೊಹಮ್ಮದ್ ಕಮಾಲ್  ರವರು  ಮೂಲತಃ ಬಿಹಾರದವರಾಗಿದ್ದು, ಸುಮಾರು ವರ್ಷದಿಂದ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದವರು, ಪ್ರಸ್ತುತ ಕಲ್ಲಾಪುನಲ್ಲಿರುವ ಗಫೂರ್ ಮಾಲಿಕತ್ವದ ಎ.ಹೆಚ್ ಟೈಯರ್ ಶಾಫ್ ನಲ್ಲಿ ಫಂಚರ್ ಹಾಕುವ ಕೆಲಸ ಮಾಡುತ್ತಿದ್ದು, ದಿನಾಂಕ:14-04-2024 ರಂದು ಸಂಜೆ ಸುಮಾರು 6:30 ಗಂಟೆಗೆ ಕಲ್ಲಾಪು ಮಸೀದಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ನ್ನು ದಾಟುತ್ತಿದ್ದಾಗ ,ತೊಕ್ಕೊಟ್ಟು ಕಡೆಯಿಂದ ಮೋಟಾರ್ ಬೈಕ್ KA-19-HJ-2932 ನೇದರ ಸವಾರ ಶಮಂತ್ ರವರು ತನ್ನ ಬೈಕ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಮೊಹಮ್ಮದ್ ಕಮಾಲ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೊಹಮ್ಮದ್ ಕಮಾಲ್ ರವರು ರಸ್ತೆಗೆ ಎಸೆಯಲ್ಪಟ್ಟವರನ್ನು ಅಲ್ಲಿ ಸೇರಿದವರು ವಾಹನವೊಂದರಲ್ಲಿ ದೇರಳಕಟ್ಟೆಯ ಯೆನಫೋಯಾ ಆಸ್ಪತ್ರೆಗೆ ದಾಖಲಿಸಿದ್ದು , ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಮೊಹಮ್ಮದ್ ಕಮಾಲ್ ರವರಿಗೆ ಎಡಕಾಲಿಗೆ ಮೂಳೆ ಮುರಿತದ ಗಾಯ, ಹಲ್ಲುಗಳು ಕಿತ್ತು ಹೋದ ಗಾಯ, ದವಡೆಗೆ ರಕ್ತ ಗಾಯ ಆಗಿರುವುದಾಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Traffic South Police Station

                       

ದಿನಾಂಕ 15/04/2024 ರಂದು ರಾತ್ರಿ ಫಿರ್ಯಾದಿದಾರರಾದ ನಾಸೀರ್ ಎಂಬವರು ತನ್ನ ಆಟೋರಿಕ್ಷಾಕ್ಕೆ ಗ್ಯಾಸ್ ಪಿಲ್ಲಿಂಗ್ ಮಾಡುವರೇ ಅಡ್ಯಾರ್ ನ  ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ಬಳಿ ಇರುವ ಪೆಟ್ರೋಲ್ ಪಂಪ್ ಗೆ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಬರುತ್ತಾ ಅಡ್ಯಾರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಗೇಟ್ ನಿಂದ ಸ್ವಲ್ಪ ಹಿಂದೆ ಇದ್ದಂತೆ ರಾತ್ರಿ ಸುಮಾರು 9.00 ಗಂಟೆಗೆ, ಫಿರ್ಯಾದಿದಾರರ ಆಟೋರಿಕ್ಷಾದಿಂದ ಮುಂದೆ ಮಂಗಳೂರು ಕಡೆಗೆ ಹೋಗುತ್ತಿದ್ದ  KA-19-MF-8020 ನೇ ನಂಬ್ರದ ಕಾರನ್ನು ಅದರ ಚಾಲಕನಾದ ಶ್ಯಾಮ್ ಸುಧೀರ್ ಎಂಬಾತನು ಬಿ.ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಗೇಟ್ ನ  ಎದುರುಗಡೆ ಇರುವ ತೆರೆದ ರಸ್ತೆ ವಿಭಜಕದಲ್ಲಿ ಯು ಟರ್ನ್ ತೆಗೆದು ಮುಂದೆ ಬರುತ್ತಿದ್ದ KA-70-J-1818 ನೇ ನಂಬ್ರದ ಮೋಟಾರ್ ಸೈಕಲ್ ನ ಎಡಭಾಗಕ್ಕೆ ಕಾರಿನ ಮುಂದಿನ ಎಡಬದಿಯನ್ನು ಡಿಕ್ಕಿ ಹೊಡೆದಿದ್ದು,  ಪರಿಣಾಮ ಮೋಟಾರ್ ಸೈಕಲ್ ಸವಾರ ಹಾಗೂ ಸಹ ಸವಾರನು ರಸ್ತೆಯ  ಎಡಬದಿ ಇಂಟರ್ ಲಾಕ್ ಅಳವಡಿಸಿದ ಜಾಗಕ್ಕೆ ಎಸೆಯಲ್ಪಟ್ಟು, ಮೋಟಾರ್ ಸೈಕಲ್ ಸವಾರನಾದ ಸಾವಿಯೋ ಮಹೇಶ್  ( 21 ವರ್ಷ) ನಿಗೆ ಮೂಗಿಗೆ, ಎಡ ಕೈ ಹಾಗೂ ಎಡ ಕಾಲಿನ ಗಂಟಿಗೆ, ಹಾಗೂ ತಲೆಯ ಹಿಂಭಾಗ ತೀವ್ರ ಸ್ವರೂಪದ ರಕ್ತ ಗಾಯವಾಗಿದ್ದು, ಪ್ರಜ್ಞಾಹೀನನಾಗಿರುತ್ತಾನೆ. ಹಾಗೂ ಮೋಟಾರ್ ಸೈಕಲ್ ಸಹ ಸವಾರ ಪ್ರಣಮ್ ಶೆಟ್ಟಿ (18 ವರ್ಷ) ನಿಗೆ ತಲೆಗೆ, ಬಲಕೈ ಮುಷ್ಥಿಗೆ, ಎಡ ತೋಳಿಗೆ ರಕ್ತ ಗಾಯ, ಎಡಮೊಣ ಕಾಲಿಗೆ  ತೀವ್ರ ಸ್ವರೂಪದ ರಕ್ತ ಗಾಯವಾಗಿರುತ್ತದೆ. ನಂತರ ಫಿರ್ಯಾದಿದಾರರು ಹಾಗೂ ಅಲ್ಲಿ ಸೇರಿದ ಜನರು ಉಪಚರಿಸಿ, ಮೋಟಾರ್ ಸೈಕಲ್ ಸಹ ಸವಾರನಾದ ಪ್ರಣಮ್ ಶೆಟ್ಟಿಯನ್ನು ಫಿರ್ಯಾದಿದಾರರು ತನ್ನ ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಮೋಟಾರ್ ಸೈಕಲ್ ಸವಾರನಾದ ಸಾವಿಯೋ ಮಹೇಶ್  ನನ್ನು  ಅಪಘಾತ ನಡೆದ ಸ್ಥಳದ ಬಳಿ ಇದ್ದವರು ವಾಹನವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರ ಮುಂದೆ ಹಾಜರುಪಡಿಸಿದಾಗ ವೈದ್ಯರು ರಾತ್ರಿ 11.07 ಗಂಟೆಗೆ ಪರೀಕ್ಷಿಸಿ ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಎಂಬಿತ್ಯಾದಿ

 

 

Moodabidre PS

 

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ರಾಯನ್ ಪಿಂಟೋ ರವರು ದಿನಾಂಕ:14.04.2024 ರಂದು ಜಿ.ಕೆ ಗಾರ್ಡನ್ ಮಾಲೀಕರಾದ ಲತಾರವರು ವಹಿಸಿಕೊಂಡಂತೆ ಮದುವೆ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಡೆಕೋರೇಷನ್ ಕಾರ್ಯವನ್ನು ನಿರ್ವಹಿಸಿಕೊಂಡಿದ್ದು, ಕಾರ್ಯಕ್ರಮ ಮುಗಿದ ನಂತರ ಮಧ್ಯರಾತ್ರಿ ಸುಮಾರು 12.25 ಗಂಟೆಗೆ ಜಿ.ಕೆ ಗಾರ್ಡನ್ ನಲ್ಲಿ ಎಲೆಕ್ಟ್ರೀಷಿಯನ್ ಕೆಲಸ ಮಾಡಿಕೊಂಡಿರುವ ಸಂದೀಪ್ ಎಂಬಾತನು ಪಿರ್ಯಾದಿದಾರರ ಬಳಿ ಬಂದು ಅವ್ಯಾಚ ಶಬ್ದಗಳಿಂದ ಬೈದು ಆತನು ತಂದಿದ್ದ ಕಬ್ಬಿಣದ ರಾಡಿನಿಂದ ಏಕಾಏಕಿ ಪಿರ್ಯಾದಿದಾರರ ತಲೆಗೆ ಹೊಡೆದು ಹಲ್ಲೆಮಾಡಿದ ಮಾಡಿದ ಪರಿಣಾಮ ಅವರ ತಲೆಗೆ ರಕ್ತಗಾಯವಾಗಿದ್ದು, ಕೂಡಲೇ ಅವರ ಪರಿಚಯದ ಜಸ್ವಿನ್ ಎಂಬುವರು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆಯ ಮೌಂಟ್ ರೋಸಾರಿಯಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

 

 

Moodabidre PS

 

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಪ್ರವೀಣ ಪೂಜಾರಿ ಮತ್ತು ಸುದೇಶ್ ಎಂಬುವರು ದಿನಾಂಕ: 14-04-2024 ರಂದು ಮದ್ಯಾಹ್ನ 3.45 ಗಂಟೆಗೆ ಮೂಡಬಿದರೆಯ ಮೀನು ಮಾರ್ಕೆಟ್ ಬಳಿಯಲ್ಲಿರುವ ಆಟೋ ಸ್ಟ್ಯಾಂಡ್ ನಲ್ಲಿ ತಮ್ಮ ಆಟೋಗಳಲ್ಲಿ ಬಾಡಿಗೆಗೆ ಕಾಯುತ್ತಿರುವಾಗ ರವಿ ಯಾನೆ ಮಾರ್ಕೆಟ್ ರಾಜ ನು ಆಟೋ ಸ್ಟ್ಯಾಂಡ್ ಬಳಿಯಿಂದ ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಸುದೇಶ್ ನು ಆತನನ್ನು ಕರೆದಿದ್ದು, ಅಲ್ಲಿಗೆ ಬಂದ ರವಿ ಯಾನೆ ಮಾರ್ಕೆಟ್ ರಾಜ ನು ಪಿರ್ಯಾದಿದಾರರಲ್ಲಿ ಯಾಕೆ ಕರೆದದ್ದು ಎಂದು ಕೇಳಿದಾಗ ಪಿರ್ಯಾದಿದಾರರು ನಾನು ನಿನ್ನನ್ನು ಕರೆದಿಲ್ಲ, ಸುದೇಶ್ ನಿಗೆ ನೀನು ಬಾಡಿಗೆ ಕೊಡಲು ಬಾಕಿಯಿದೆ ಅದಕ್ಕೆ ಆತನು ನಿನ್ನನ್ನು ಕರೆದಿದ್ದು ಎಂದು ಹೇಳಿದಾಗ ರವಿ ಯಾನೆ ಮಾರ್ಕೆಟ್ ರಾಜ ನು ಅವ್ಯಾಚ ಶಬ್ದಗಳಿಂದ ಬೈದು ಪಿರ್ಯಾದಿದಾರರ ಅಂಗಿಯ ಕಾಲರ್ ಪಟ್ಟಿಯನ್ನು ಹಿಡಿದು ಜೀವ ಬೆದರಿಕೆಯನ್ನು ಹಾಕಿ ಅಲ್ಲಿಯೇ ಇದ್ದ ಸೋಡಾ ಬಾಟಲಿಯಿಂದ ಪಿರ್ಯಾದಿದಾರರ ತಲೆಗೆ ಹೊಡೆದು ಹಲ್ಲೆ ಮಾಡಿರುತ್ತಾನೆ. ಆದ್ದರಿಂದ ರವಿ ಯಾನೆ ಮಾರ್ಕೆಟ್ ರಾಜನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರು  ಎಂಬಿತ್ಯಾದಿ

 

 

Moodabidre PS

 

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಜೆಸಿಂತಾ ಡಿಸಿಲ್ವಾ ರವರು ಮೂಡಬಿದ್ರೆಯಲ್ಲಿರುವ ಭಾರತ್ ಗ್ಲಾಸ್ ವೇರ್ ಎಂಬಲ್ಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ 06-04-2024 ರಂದು ಸಂಜೆ 6.30 ಗಂಟೆಗೆ ಕೆಲಸ ಮುಗಿಸಿಕೊಂಡು ತನ್ನ ಬಾಬ್ತು KA-19-EV-2717 ನೇ ಸ್ಕೂಟರನ್ನು ತನ್ನ ಮನೆಯ ಎದುರಿನ ಪಾಟೇಲ್ ಹೌಸ್ ಎಂಬ ಮನೆಯ ಮುಂದೆ ನಿಲ್ಲಿಸಿದ್ದು, ದಿನಾಂಕ 08-04-2024 ರಂದು ಬೆಳಿಗ್ಗೆ 9.15 ಗಂಟೆಗೆ ಎಂದಿನಂತೆ ಕೆಲಸಕ್ಕೆಂದು ಹೊರಟು ಸ್ಕೂಟರ್ ನೋಡಿದಾಗ ಸ್ಕೂಟರ್ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇದ್ದು, ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳುವಾದ ಸ್ಕೂಟರ್ ಪತ್ತೆಯ ಬಗ್ಗೆ ಪಿರ್ಯಾದಿದಾರರು ಮತ್ತು ಅವರ ಗಂಡ ಸೇರಿ ಅಕ್ಕ ಪಕ್ಕದಲ್ಲಿ, ನೆರೆಕೆರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿದ್ದು, ಸ್ಕೂಟರ್ ಪತ್ತೆಯಾಗಿರುವುದಿಲ್ಲ. ಕಳುವಾದ ಸ್ಕೂಟರ್ ನ ಅಂದಾಜು ಮೌಲ್ಯ 15.000/- ಆಗಬಹುದು ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 16-04-2024 09:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080