ಅಭಿಪ್ರಾಯ / ಸಲಹೆಗಳು

Crime Reported in Urva PS

ಪಿರ್ಯಾದಿದಾರರಾದ ಸವಿತಾ.ಕೆ ರವರು ಮಂಗಳೂರು ನಗರದ ಚಿಲಿಂಬಿಯಲ್ಲಿರುವ ಆರ್.ಎನ್ ಟವರ್ಸ್ ಕಟ್ಟಡದ ಒಂದನೇ ಮಹಡಿಯಲ್ಲಿರುವ ಮಣಪುರಂ ಪೈನಾನ್ಸ್ ಶಾಖೆಯ ಶಾಖಾಧಿಕಾರಿಯಾಗಿದ್ದು, ದಿನಾಂಕ 15-05-2023 ರಂದು ಮುಂಜಾನೆ ಸುಮಾರು 12:00 ಗಂಟೆಯಿಂದ 12:30 ಗಂಟೆಯ ನಡುವೆ ಯಾರೋ ಅಪರಿಚಿತ ವ್ಯೆಕ್ತಿಯು ಕಬ್ಬಿಣದ ರಾಡಿನ ಸಹಾಯದಿಂದ ಮಣಪುರಂ ಪೈನಾನ್ಸ್ ಗೆ ಹೊರಗಡೆ ಅಳವಡಿಸಿದ ಶಟರ್ ಬೀಗವನ್ನು ಒಡೆದು ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿದೆ ಎಂಬಿತ್ಯಾದಿ.

 

CEN Crime PS

ದಿನಾಂಕ 14-02-2023 ರಂದು ಯಾರೋ ಅಪರಿಚಿತ ವ್ಯಕ್ತಿ ಟೆಲಿಗ್ರಾಂ ನಂಬ್ರ 6005642676 ನೇದರಿಂದ  ಪಿರ್ಯಾದಿದಾರರಿಗೆ ಸಂದೇಶ ಕಳುಹಿಸಿ ಆನ್ ಲೈನ್ ನಲ್ಲಿ ಹಣ ಗಳಿಸುವ ಜಾಬ್ ನೀಡುವುದಾಗಿ ತಿಳಿಸಿರುತ್ತಾರೆ.ನಂತರ ಪಿರ್ಯಾದಿದಾರರಿಗೆ ಹಣ ಹೂಡಿಕೆ ಮಾಡಿದರೆ ಕಮಿಷನ್ ಸಹಿತ ಹೆಚ್ಚಿನ ಹಣ ದೊರಕುತ್ತದೆ ಎಂದು ಪಿರ್ಯಾದಿದಾರರಿಗೆ ಅಪರಿಚಿತ ವ್ಯಕ್ತಿಯು ಟೆಲಿಗ್ರಾಂ ಮೂಲಕ ತಿಳಿಸಿರುತ್ತಾರೆ.ಇದನ್ನು ನಂಬಿದ ಪಿರ್ಯಾದಿದಾರರು ಹಣ ಹೂಡಕೆ ಮಾಡಲು ಮುಂದಾಗಿ,ಮೊದಲಿಗೆ  ತಮ್ಮ  ಯೆಸ್ ಬ್ಯಾಂಕ್ ಖಾತೆ ಸಂಖ್ಯೆ  ನೇದರಿಂದ ದಿನಾಂಕ 14-02-2023 ರಿಂದ ದಿನಾಂಕ 16-02-2023 ರವರೆಗೆ ಹಂತ ಹಂತವಾಗಿ ಯುಪಿಐ ಮುಖಾಂತರ 1,88,000/- ರೂಗಳು ಮತ್ತು ಐ ಎಂ ಪಿ ಎಸ್ ಮುಖಾಂತರ ಅಪರಿಚಿತ ವ್ಯಕ್ತಿಯ ಆಕ್ಸಿಸ್ ಬ್ಯಾಕ್ ಖಾತೆ ಸಂಖ್ಯೆ-922020049657530 IFSC CODE:UTIB0001498 ನೇದಕ್ಕೆ 75,000/- ಹಾಗೂ  ಅಪರಿಚಿತ ವ್ಯಕ್ತಿಯ ಐಸಿಐಸಿಐ ಬ್ಯಾಕ್ ಖಾತೆ ಸಂಖ್ಯೆ-099805500808, IFSC CODE:ICIC000098 ನೇ ದಕ್ಕೆ 1,00,000/- ರೂಗಳು  ಹೀಗೆ ಒಟ್ಟು 3,63,000/- ರೂಗಳನ್ನು ವರ್ಗಾಹಿಸಿರುತ್ತಾರೆ. ಪಿರ್ಯಾದಿದಾರರಿಗೆ ಯಾರೋ ಅಪರಿಚಿತ ವ್ಯಕ್ತಿ ಆನ್ ಲೈನ್ ಮೂಲಕ ಹಣ ಗಳಿಸುವ ಜಾಬ್  ನೀಡುವುದಾಗಿ ತಿಳಿಸಿ ಮೋಸದಿಂದ ಹಣ ವರ್ಗಾಹಿಸಿಕೊಂಡು ವಂಚನೆ ಮಾಡಿರುತ್ತಾರೆ. ಎಂಬಿತ್ಯಾದಿ

 

Mangalore East PS

ಪಿರ್ಯಾದಿದಾರರಾದ  ಚೆನ್ನಪ್ಪ ಶೆಟ್ಟಿ ಬಣಜಿಗೇರ್ ರವರು ದಿನಾಂಕ: 09-05-2023 ರಂಧು ಸಂಜೆ 4-00 ಗಂಟೆಗೆ ತನ್ನ ಬಾಬ್ತು KA-19-EC-5467  ನೇ ಹೊಂಡಾ ಶೈನ್ ಬೈಕ್ ನ್ನು  ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ಅಂಚನ್ ಬಾರ್ ಬಳಿ ಪಾರ್ಕ್ ಮಾಡಿ ಕೆಲಸಕ್ಕೆ ಹೋಗಿದ್ದು, ನಂತರ ದಿನಾಂಕ: 10-05-2023 ರಂದು ಬೆಳಗ್ಗಿನ ಜಾವ 2-30 ಗಂಟೆಗೆ ಬಂದು ನೋಡಿದಾಗ ಬೈಕ್ ಇಲ್ಲದೇ ಇದ್ದು, ಈ ಬೈಕ್ ನ್ನು ದಿನಾಂಕ: 09-05-2023 ರಂಧು ಸಂಜೆ 4-00  ಗಂಟೆಯಿಂದ ದಿನಾಂಕ: 10-05-2023 ರಂದು ಬೆಳಗ್ಗಿನ ಜಾವ 2-30 ಮಧ್ಯೆ ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿದ್ದು, ಚಾಸಿಸ್ ನಂಬರ್: ME4JC36DBB8086822, ಇಂಜಿನ್ ನಂಬರ್: JC36E2265144, ಬಣ್ಣ: ಗ್ರೇ ಬಣ್ಣ, ಮಾಡೆಲ್: 2011, ಮೌಲ್ಯ ರೂ. 12,000/- ಗಬಹುದು,  ಪಿರ್ಯಾದಿದಾರರು ಕಳವಾದ ತನ್ನ ಬೈಕ್ ನ್ನು ನಗರ ಎಲ್ಲಾ ಕಡೆ ಹುಡುಕಾಡಿ, ಸಿಗದ ಕಾರಣ ಠಾಣೆಗೆ ತಡವಾಗಿ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

Mangalore North PS                              

ಪಿರ್ಯಾದಿ SATHISH RAO ದಾರರು ದಿನಾಂಕ 12.05.2023 ರಂದು ತನ್ನ ಮಗ ರಿಶಬ್ ಸೂರ್ಯನ್ನು ಚಿಕಿತ್ಸೆಗಾಗಿ ಜಿ.ಎಚ್. ಎಸ್ ರಸ್ತೆಯಲ್ಲಿರುವ ತಾರಾ ಕ್ಲಿನಿಕ್ ಗೆ ಸಂಜೆ ಸುಮಾರು 7:30 ಗಂಟೆಗೆ ಕರೆದುಕೊಂಡು ಹೋಗಿದ್ದು, ಮಗನ ಟ್ರೀಟ್ ಮೆಂಟ್ ಮುಗಿಸಿ ಹೊರರೋಗಿ ವಿಭಾಗದಿಂದ ಹೊರ ಬರುತ್ತಿರುವ ಸಮಯದಲ್ಲಿ ಒಬ್ಬ ವ್ಯಕ್ತಿ ಪಿರ್ಯಾದಿದಾರರನ್ನು ಬಲವಾಗಿ ಹಿಡಿದಿದ್ದು, ಇನ್ನೊಬ್ಬ ವ್ಯಕ್ತಿ ಪಿರ್ಯಾದಿದಾರರ ಬಲಗೈಯಲ್ಲಿದ್ದ ಸುಮಾರು 22.50 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್ ಅನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿರುತ್ತಾರೆ. ಸದ್ರಿ ಬ್ರಾಸ್ ಲೈಟ್ ನ ಬೆಲೆ ಸುಮಾರು 1.35 ಲಕ್ಷ ರೂಪಾಯಿ ಆಗಿರುತ್ತದೆ. ಆ ಸಮಯದಲ್ಲಿ ಅವರೊಳಗೆ ಉರುಡಾಟ ನಡೆದಿದ್ದು ಸಿ.ಸಿ ಕ್ಯಾಮೆರಾದಲ್ಲಿ ದಾಖಲಾಗಿರುತ್ತದೆ. ಸದ್ರಿ ಘಟನೆಯಿಂದ ಪಿರ್ಯಾದಿದಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಈ ಬಗ್ಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಸದ್ರಿ ವ್ಯಕ್ತಿಗಳ ಮುಖ ಚಹರೆಗಳನ್ನು ಗಮನಿಸಿದಾಗ ಪಿರ್ಯಾದಿದಾರರ ಪರಿಚಯದ ವ್ಯಕ್ತಿಗಳಾದ ಗೋವಿಂದರಾಜ್ ನಾಯಕ್ ರವರು ಹಾಗೂ ಅವರ ಮಗ ಗಿರೀಶ್ ನಾಯ್ಕ್ ಎಂದು ತಿಳಿದು ಬಂದಿರುತ್ತದೆ. ಆದ್ದರಿಂದ  ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬಿತ್ಯಾದಿಯಾಗಿ ನೀಡಿದ ದೂರಿನ ಸಾರಾಂಶ.

 

Konaje PS

ಪಿರ್ಯಾದಿ Asfar P ದಾರರು ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆ ಎಂಬಲ್ಲಿರುವ ದುಬೈ ಪ್ಲಾಜಾ ಎಂಬ ಕಟ್ಟಡದಲ್ಲಿರುವ  ಪಾರ್ಕೋ ಗೋಲ್ಡ್ ಅಂಡ್ ಡೈಮೆಂಡ್ ಎಂಬ ಚಿನ್ನದ ಅಂಗಡಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರಿಗೆ ಸದ್ರಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೌಫಾಲ್ ಎಂಬವರು ಕರೆ ಮಾಡಿ 11-05-2023 ರಂದು ಸಮಯ ಸುಮಾರು 13.10 ಗಂಟೆಗೆ ಕುಮಾರ್ ಅಸೈಗೋಳಿ ಎಂಬ ಹೆಸರಿನ ವ್ಯಕ್ತಿ ಚಿನ್ನದ ಅಂಗಡಿಗೆ ಬಂದು ಒಟ್ಟು 34.616 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ತಂದು ಬೇರೆ ಸರಗಳನ್ನು ಎಕ್ಸ್ ಚೇಂಜ್ ಮಾಡಿ ಕೊಡಲು ತಿಳಿಸಿದಂತೆ ಆರೋಪಿ ಕುಮಾರ್ ಎಂಬಾತನು ತಂದಿದ್ದ ಎರಡು ಚಿನ್ನದ ಸರಗಳನ್ನು ಚೆಕ್ ಮಾಡಿ, ಟೈಸ್ಟಿಂಗ್ ಮಿಶಿನ್ ಮೂಲಕ ಚೆಕ್ ಮಾಡಿದಾಗ 916 ಚಿನ್ನ ಎಂದು ತೋರಿಸಿದ್ದರಿಂದ ನೌಫಾಲ್ ರವರು ಎರಡು ಚಿನ್ನದ ಸರಗಳನ್ನು ಪಡೆದುಕೊಂಡು, 11.863 ಗ್ರಾಂ ತೂಕದ ಮತ್ತು 20.095 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಕುಮಾರ್ ರವರಿಗೆ ನೀಡಿರುವುದಾಗಿ, ಹಾಗೂ ನಂತರ ಆರೋಪಿಯಿಂದ ಪಡೆದ 2 ಚಿನ್ನದ ಸರಗಳಿಗೆ ಫೈರ್ ಮಾಡಿ ಪರೀಕ್ಷಿಸಿ ನೋಡಿದಾಗ ನಕಲಿ ಎಂದು ತಿಳಿದು ಬಂದಿರುವುದಾಗಿ ಪಿರ್ಯಾದಿದಾರರಿಗೆ ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ಅಂಗಡಿಗೆ ಬಂದು ಚೆಕ್ ಮಾಡಿದಾಗ ನಕಲಿ ಎಂದು ಕಂಡು ಬಂದಿರುತ್ತದೆ. ಆದುದರಿಂದ ನಕಲಿ ಸರವನ್ನು ಚಿನ್ನದ ಸರವೆಂದು ನಂಬಿಸಿ, ನಕಲಿ ಸರಗಳನ್ನು ನೀಡಿ ಮೋಸ ಮಾಡಿದ ಆರೋಪಿ ಕುಮಾರ್ ಆಸೈಗೋಳಿ ಎಂಬಾತನ ಮೇಲೆ ಸೂಕ್ತ ಕಾನೂನ ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

 

Traffic North Police Station                   

ಪಿರ್ಯಾದಿ Smt. Prema DSouza ದಾರರು ದಿನಾಂಕ 11.05.2023 ರಂದು ಕೋಡಿಕಲ್ಲಿನ ತನ್ನ ಅಕ್ಕನ ಮನೆಗೆ ಮಗಳು ಕೇಟ್ ಶಾಲೆಟ್ ಫೆರಾವೋ (13 ವರ್ಷ) ಎಂಬವರೊಂದಿಗೆ ಹೋಗಿದ್ದು ಅಲ್ಲಿಂದ ರಾತ್ರಿ ವೇಳೆಗೆ ಕಾವೂರು ಶಾಂತಿನಗರಕ್ಕೆ ತನ್ನ ಬಾಬ್ತು ಸ್ಕೂಟರ್ ನಂಬ್ರ KA-19EK-0575 ರಲ್ಲಿ ಕೇಟ್ ಶಾಲೆಟ್ ಫೆರಾವೋಳನ್ನು ಸಹಸವಾರೆಯಾಗಿ ಕುಳ್ಳಿರಿಸಿಕೊಂಡು ಕಾವೂರು ಕಡೆಗೆ ಕೂಳೂರು ಪಂಜಿಮೊಗರು ರಸ್ತೆಯಾಗಿ ಹೋಗುತ್ತಾ ರಾತ್ರಿ ಸಮಯ ಸುಮಾರು 8:35 ಗಂಟೆಗೆ ಪಂಜಿಮಗರು ಜಂಕ್ಷನ್ ಬಳಿ ತಲುಪಿದಾಗ JMJ ಬಿಲ್ಡಿಂಗ್ ಎದುರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ನಂಬ್ರ KA-19MJ-4276 ನೇಯದನ್ನು ಅದರ ಚಾಲಕ ಜೋಬಿ ವರ್ಗೀಸ್ ಎಂಬವರು ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೇ ರಸ್ತೆಯ ಬಲಕ್ಕೆ ವೇಗವಾಗಿ ತಿರುಗಿಸಿದ ಪರಿಣಾಮ ಕಾರು ಫಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ ಢಿಕ್ಕಿಯಾಗಿ ಇಬ್ಬರೂ ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದ ಪರಿಣಾಮ ಫಿರ್ಯಾದಿದಾರರ ಬಲಕಾಲಿಗೆ ಮತ್ತು ಬೆನ್ನಿಗೆ ಮೂಳೆ ಮುರಿತದ ಗಾಯ, ಮೊಣಗಂಟಿಗೆ ಗುದ್ದಿದ ನೋವು ಮತ್ತು ಕೇಟ್ ಶಾಲೆಟ್ ಫೆರಾವೋಳ ಬಲಕಾಲಿಗೆ ಅಲ್ಲಲ್ಲಿ ತರಚಿದ ಮತ್ತು ಗುದ್ದಿದ ನೋವು ಬಲಕೈ ಭುಜಕ್ಕೆ ಗುದ್ದಿದ ನೋವು ಹೊಟ್ಟೆಯ ಬಲಭಾಗದಲ್ಲಿ ತರಚಿದ ಗಾಯವಾಗಿದ್ದು ಗಾಯಾಳುಗಳನ್ನು ಆರೋಪಿ ಕಾರಿನ ಚಾಲಕನು ಚಿಕಿತ್ಸೆಯ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆ ತಂದಲ್ಲಿ ಅಲ್ಲಿಯ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಫಿರ್ಯಾದಿದಾರರನ್ನು ಒಳರೋಗಿಯಾಗಿ ದಾಖಲಿಸಿದ್ದು ಕೇಟ್ ಶಾಲೆಟ್ ಫೆರಾವೋರವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 12:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080