ಅಭಿಪ್ರಾಯ / ಸಲಹೆಗಳು

Crime report in CEN Crime PS  

ದಿನಾಂಕ 06-06-2023 ರಂದು ಯಾರೋ ಅಪರಿಚಿತ ವ್ಯಕ್ತಿ ವಾಟ್ಸ್ ಆಪ್ ನಂಬ್ರ-8964029717 ನೇದರಿಂದ ಪಿರ್ಯಾದಿದಾರರ ದೂರವಾಣಿ ಸಂಖ್ಯೆ-ನೇದಕ್ಕೆ ವಾಟ್ಸ್ ಆಪ್ ಸಂದೇಶ ಕಳುಹಿಸಿ ಆನ್ ಲೈನ್ ಗೂಗಲ್ ರಿವೀವ್ ಟಾಸ್ಕ್ ಕೆಲಸ  ಮಾಡಿದರೆ ಕಮಿಷನ್ ನೀಡುವುದಾಗಿ ತಿಳಿಸಿ ಆನ್ ಲೈನ್ ಗೂಗಲ್ ರಿವೀವ್ ಟಾಸ್ಕ್ ಟೆಲೆಗ್ರಾಂ ಲಿಂಕ್ http://t.me/Receptionist3134 ಕಳುಹಿಸಿರುತ್ತಾರೆ.ನಂತರ ಪಿರ್ಯಾದಿದಾರರು ಸದ್ರಿ ಲಿಂಕ್ ಮುಖಾಂತರ ಪಿರ್ಯಾದಿದಾರರು ಟಾಸ್ಕ್ ಎಂಬ ಟೆಲೆಗ್ರಾಂ ಗ್ರೂಪ್ ಜಾಯಿನ್  ಆಗಿರುತ್ತಾರೆ.ಸದ್ರಿ ಗ್ರೂಪ್ ನಲ್ಲಿ ಗೂಗಲ್ ರಿವೀವ್ ಟಾಸ್ಕ್ ಗಳನ್ನು ಕಳುಹಿಸಿರುತ್ತಾರೆ.ಪಿರ್ಯಾದಿದಾರರು ಸದ್ರಿ ಮೂರು ಟಾಸ್ಕ್ ಗಳನ್ನು ಪೂರ್ಣಗೊಳಿಸಿರುತ್ತಾರೆ,ಅಂತೆಯೇ ಒಂದು ಟಾಸ್ಕ್ ಗೆ 50 ರೂ ನಂತೆ ಒಟ್ಟು 150 ರೂಗಳನ್ನು ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆಗೆ ಪಾವತಿಸಿರುತ್ತಾರೆ.ನಂತರ ಪಿರ್ಯಾದಿದಾರರಿಗೆ ಬೇರೆ ಬೇರೆ ರೀತಿಯ ಗೂಗಲ್ ರಿವೀವ್ ಟಾಸ್ಕ್ ಗಳನ್ನು ಕಳುಹಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್ ನೀಡುವುದಾಗಿ ತಿಳಿಸಿರುತ್ತಾರೆ.ಅದರಂತೆ ಪಿರ್ಯಾದಿದಾರರು ನಿಜವೆಂದು ನಂಬಿಕೊಂಡು ದಿನಾಂಕ 07-06-2023 ರಂದು ಪಿರ್ಯಾದಿದಾರರು ತಮ್ಮ ಕೆನರಾ ಬ್ಯಾಂಕ್,ಕೆಂಜಾರು ಶಾಖೆ ಖಾತೆ ಸಂಖ್ಯೆ- ನೇದರಿಂದ ಮೊದಲಿಗೆ 7,000/- ರೂ ಗಳನ್ನು ಅಪರಿಚಿತ ವ್ಯಕ್ತಿಗಳು ಕಳುಹಿಸಿದ ಪೇಟಿಎಂ ಐಡಿ ಗೆ ಪಾವತಿಸಿರುತ್ತಾರೆ.ದಿನಾಂಕ 08-06-2023 ರಂದು ಅದೇ ರೀತಿ ತಮ್ಮ ಎಸ್ ಬಿ ಐ ಬ್ಯಾಂಕ್ ಖಾತೆ ಸಂಖ್ಯೆ-ನೇದರಿಂದ 24,000/- ರೂಗಳನ್ನು ಅಪರಿಚಿತ ವ್ಯಕ್ತಿಯ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ-673105500292, IFSC CODE–ICIC0006731 ನೇದಕ್ಕೆ ಪಾವತಿಸಿರುತ್ತಾರೆ.ಅದೇ ದಿನ ಪಿರ್ಯಾದಿದಾರರು ತಮ್ಮ ಕೆನರಾ ಬ್ಯಾಂಕ್ ನಿಂದ ಹಂತ ಹಂತವಾಗಿ 39,000/- ರೂ ಮತ್ತು ಅದೇ ರೀತಿ ದಿನಾಂಕ 9-06-2023 ರಂದು ಪಿರ್ಯಾದಿದಾರರು ತಮ್ಮ ಎಸ್ ಬಿ ಐ ಬ್ಯಾಂಕ್ ಖಾತೆಯಿಂದ 25,000/- ರೂಗಳನ್ನು ಅಪರಿಚಿತ ವ್ಯಕ್ತಿಯ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ-730805500043, IFSC CODE–ICIC0007308 ನೇದಕ್ಕೆ ಪಾವತಿಸಿರುತ್ತಾರೆ.ಹಾಗೂ ಅದೇ ರೀತಿ 20,180/- ರೂಗಳನ್ನು ಅಪರಿಚಿತ ವ್ಯಕ್ತಿಯ ಪೇಟಿಎಂ ಐಡಿ ಗೆ ಪಾವತಿಸಿರುತ್ತಾರೆ.ನಂತರ ಇದೇ ರೀತಿ ಪಿರ್ಯಾದಿದಾರರಿಂದ ಇನ್ನೂ ಹೆಚ್ಚಿನ ಹಣ ಪಾವತಿಸುವಂತೆ ಹೇಳಿದಾಗ ಪಿರ್ಯಾದಿದಾರರು ಹಣ ಪಾವತಿಸಲು ನಿರಾಕರಿಸಿರುತ್ತಾರೆ,ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರಿಗೆ ಆನ್ ಲೈನ್ ಗೂಗಲ್ ರಿವೀವ್ ಟಾಸ್ಕ್ ನ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 1,15,180/- ರೂಗಳನ್ನು ಮೋಸದಿದಂದ ಪಾವತಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

 

Traffic North Police Station              

ಪಿರ್ಯಾದಿದಾರರಾದ ಬೃಂದಾಬನ್ ದಾಸ್ ನಾಯಕ್ (25 ವರ್ಷ) ಎಂಬುವರು ದಿನಾಂಕ: 14-06-2023 ರಂದು ಮುಕ್ಕಾ ಜಂಕ್ಷನ್ ಬಳಿ ಶ್ರೀನಿವಾಸ ಆಸ್ಪತ್ರೆಯ ಎದುರು ರಸ್ತೆ ಬದಿಯಲ್ಲಿರುವ ಫಾಸ್ಟ್ ಫುಡ್ ಗಾಡಿಯಲ್ಲಿ ಊಟ ಮಾಡಲು ಹೋಗಿದ್ದ ಸಮಯ ಸುಮಾರು ರಾತ್ರಿ 07:30 ಗಂಟೆಗೆ ಮುಕ್ಕಾ ಜಂಕ್ಷನ್ ಮಂಗಳೂರು – ಊಡುಪಿ NH 66ನೇ ಡಾಮಾರು ರಸ್ತೆಯಲ್ಲಿ ನಡೆದುಕೊಂಡು ದಾಟಿ ಉಡುಪಿ- ಮಂಗಳೂರು ರಸ್ತೆಯ ಮಧ್ಯೆ ಭಾಗಕ್ಕೆ ತಲುಪುತ್ತಿದ್ದಂತೆ ಹಳೆಯಂಗಡಿ ಕಡೆಯಿಂದ KA-19-AD-7493 ನಂಬ್ರದ ಆಟೊರಿಕ್ಷಾವನ್ನು ಅದರ ಚಾಲಕ ಮಹಮ್ಮದ್ ಸಫ್ವಾನ್ ಎಂಬಾತನು ದುಡುಕುತನದಿಂದ ವೇಗವಾಗಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ತಲೆಯ ಎಡಭಾಗಕ್ಕೆ ಗುದ್ದಿದ ರೀತಿಯ ಗಂಭೀರ ರಕ್ತ ಗಾಯವಾಗಿದ್ದು ಅಲ್ಲದೇ ಗಲ್ಲಕ್ಕೆ ಹಾಗೂ ಕೈಗೆ ತರಚಿದ ರೀತಿಯ ಗಾಯ ಮತ್ತು ಸೊಂಟದ ಬಳಿ ಗುದ್ದಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿ ಸಾರಾಂಶ.

 

Traffic North Police Station

ದಿನಾಂಕ: 13-06-2023 ರಂದು ಪಿರ್ಯಾದಿದಾರರ ಪತ್ನಿ ಶ್ರೀಮತಿ ಗೀತಾ ಶೆಟ್ಟಿಗಾರ್ (61) ಎಂಬವರು ಅವರ ತಾಯಿ ಮನೆಗೆ ಹೋಗಿದ್ದವರು ವಾಪಸ್ಸು ಮನೆ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಕೋಲ್ನಾಡು ಕೈಗಾರಿಕಾ ಪ್ರದೇಶದಲ್ಲಿರುವ ದುರ್ಗಾ ಫ್ಯಾಬ್ರಿಕೇಷನ್ಸ್ ಕಟ್ಟಡದ ಎದುರು ತಲುಪುತಿದ್ದಂತೆ ಸಮಯ ಸುಮಾರು 19:30 ಗಂಟೆಗೆ ಲಿಂಗಪ್ಪಯ್ಯ ಕಾಡು ಕಡೆಯಿಂದ KA-19-HH-7971 ನಂಬ್ರದ ಸ್ಕೂಟರನ್ನು ಅದರ ಸವಾರನಾದ ಆಶ್ರಫ್ ಎಂಬವರು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಸವಾರಿ ಮಾಡಿಕೊಂಡು ಬಂದು ಗೀತಾ ಶೆಟ್ಟಿಗಾರ್ ರವರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಗೀತಾ ಶೆಟ್ಟಿಗಾರ್ ರವರು ಕಾಂಕ್ರೀಟ್ ರಸ್ತೆಗೆ ಬಿದ್ದು ಅವರ ತಲೆಗೆ ಮತ್ತು ಸೊಂಟದ ಬಲಬದಿಗೆ ಗುದ್ದಿದ ರೀತಿಯ ಒಳಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ  ಹೋಗಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅತ್ತಾವರ KMC ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದು ಬಳಿಕ ಈ ದಿನ ದಿನಾಂಕ: 15-06-2023 ರಂದು ಗೀತಾ ಶೆಟ್ಟಿಗಾರ್ ರವರಿಗೆ  ಆಗಿದ್ದ ನೋವು ಉಲ್ಬಣಗೊಂಡಿದ್ದರಿಂದ ಜೈಲ್ ರಸ್ತೆಯಲ್ಲಿರುವ ವಿನಯ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾಧಿ.

 

 

 

    

ಇತ್ತೀಚಿನ ನವೀಕರಣ​ : 21-08-2023 01:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080