ಅಭಿಪ್ರಾಯ / ಸಲಹೆಗಳು

Crime Reported in Traffic South Police Station      

ಪಿರ್ಯಾದಿ MANIKANTA ದಾರರು ಕೊಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:14-07-2023 ರಂದು ಪಿರ್ಯಾದಿದಾರರು ಮನೆಯಲ್ಲಿರುವ ಸಮಯ  ರಾತ್ರಿ ಸುಮಾರು 9.30 ಗಂಟೆಗೆ ಪಿರ್ಯಾದಿದಾರರ ಪರಿಚಯದವರೊಬ್ಬರು ಕರೆಮಾಡಿ ನಿಮ್ಮ ತಮ್ಮ ವಿಜಯ ಕುಮಾರ ಪ್ರಾಯ 25 ವರ್ಷ ಎಂಬವರಿಗೆ ಲಾರಿಯೊಂದು ಡಿಕ್ಕಿ ಹೋಡೆದ ವಿಚಾರನ್ನು ಕೇಳಿ ಪಿರ್ಯದಾರಿದಾರರು ಬೀರಿ ಜಂಕ್ಷನ್ ಕಡೆಗೆ ಹೋಗಿ ವಿಚಾರಿಸಿದಾಗ ಪಿರ್ಯದಾದಿದಾರರ ತಮ್ಮ  ವಿಜಯ ಕುಮಾರ ನು ಕೂಲಿ ಕೆಲಸ ಬಿಟ್ಟು ಮನೆ ಕಡೆಗೆ ಬರುವಾಗ ರಾತ್ರಿ 9.00 ಗಂಟೆಯ ಸುಮಾರಿಗೆ ಬೀರಿ ಜಂಕ್ಷನನಲ್ಲಿ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹೋಗುವ  ರಾಷ್ಟ್ರಿಯ ಹೆದ್ದಾರಿಯ ರಸ್ತೆಯನ್ನು ದಾಟುತ್ತಿರುವ ವೇಳೆ KA49-5349 ನೇ ನಂಬ್ರದ ಲಾರಿಯನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಮ್ಮನಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಮ್ಮ ವಿಜಯ ಕುಮಾರನು ಡಾಮಾರು ರಸ್ತೆಗೆ ಬಿದ್ದು ಅವರ ಹಣೆಗೆ  ತೀವ್ರ ರಕ್ತ ಗಾಯ, ಬಲ ಕಾಲಿಗೆ ಪಾದದ ಗಂಟಿಗೆ ರಕ್ತ ಗಾಯವಾದವರನ್ನು ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಅಪಘಾತ ಪಡಿಸಿದ ಲಾರಿ ಚಾಲಕ ಪಿರ್ಯಾದಿದಾರರ ತಮ್ಮನನ್ನು ಚಿಕಿತ್ಸೆ ಬಗ್ಗೆ ದೇರಳಕಟ್ಟೆಯ ಕೆ .ಎಸ್ ಹೆಗ್ಡೆ ಆಸ್ಪತ್ರಗೆ ತಂದು ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ 108 ಅಂಬುಲೆನ್ಸ್ ನಲ್ಲಿ ಜಿಲ್ಲಾ ಸರ್ಕಾರಿ ವೆನ್ಲಾಕ ಆಸ್ಪತ್ರೆಗೆ ಹೋಗಿದ್ದು ಅಲ್ಲಿನ ವೈದ್ಯರು ಪರಿಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಎಂಬಿತ್ಯಾದಿ.

Mangalore South PS                                     

ದಿನಾಂಕ: 14-07-2023 ರಂದು ರಾತ್ರಿ 10-00 ಗಂಟೆ ಸುಮಾರಿಗೆ ಸೂಟರ್ ಪೇಟೆಯ ಶಾಲೆಯ ಬಳಿ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಮುಹಮ್ಮದ್ ಇರ್ಫಾನ್ ಪ್ರಾಯ: 19 ವರ್ಷ, ವಾಸ: ಮಾಣಿಕೋತ್ ಹೌಸ್, ಪೊನ್ಮೇರಿಪರಂಬಿಲ್ ಪೊಸ್ಟ್, ಆಯಿಂಜೆ ವಿಲೇಜ್, ವಡಗೇರಾ ತಾಲೂಕು, ಕೊಝಿಕೋಡು ಜಿಲ್ಲೆ, ಕೇರಳ ರಾಜ್ಯ  ಎಂಬಾತನು ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಪಡಿಸುತ್ತಿದ್ದವನನ್ನು, ರಾತ್ರಿ 10-15 ಗಂಟೆಗೆ ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ  ಆರೋಪಿಯು  ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು,    ವೈದ್ಯಕೀಯ  ತಪಾಸಣೆಗೆ ಒಳಪಡಿಸಿದಲ್ಲಿ   ಆರೋಪಿಯು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

Mangalore South PS                    

ಪಿರ್ಯಾದಿ ಎಡ್ವರ್ಡ್ ರವರು ಮಂಗಳೂರುನಗರದ ವೆಲೆನ್ಸಿಯಾದಲ್ಲಿರುವ ಮೋರ್ ಸೂಪರ್ ಮಾರ್ಕೆಟ್ ಬಳಿಯ ಗೋಲಾ ರೆಸಿಡೆನ್ಸಿಯಲ್ಲಿ ಅಂಗಡಿ ಕಟ್ಟಡ ನಂಬ್ರ 2P2 ಹೊಂದಿದ್ದು, ಆರೋಪಿಗಳಾದ  ಐವನ್ ಸಿಕ್ವೇರಾ, ನಿತಿನ್ ಸಿಕ್ವೇರಾ, ನೋಲನ್ ಸಿಕ್ವೇರಾ ಮತ್ತು ಶ್ರಿಮತಿ ಸೆಲ್ಮಾ ಸಿಕ್ವೇರಾ ಎಂಬವರು ಸೇರಿ ಸಮಾನ ಉದ್ದೇಶದಿಂದ ಅಕ್ರಮವಾಗಿ ಪ್ರವೇಶಿಸಿ ಅಂಗಡಿ ಕಟ್ಟಡದಲ್ಲಿ ಗೋಡೆ ನಿರ್ಮಿಸಿದ್ದು, ದಿನಾಂಕ 14-07-2023 ರಂದು ರಾತ್ರಿಯಿಂದ ದಿನಾಂಕ 15-07-2023 ರ ಬೆಳಿಗ್ಗೆ ಮದ್ಯಕಾಲದಲ್ಲಿ  ಅಕ್ರಮವಾಗಿ ಅಂಗಡಿಯನ್ನು ಪ್ರವೇಶೀಸಿ ಪಿರ್ಯಾದಿದಾರರು ಅಂಗಡಿಗೆ ಹಾಕಿದ್ದ ಬೀಗ ತುಂಡರಿಸಿ ತೆಗೆದು ನಷ್ಟ ಉಂಟು ಮಾಡಿ ಆರೋಪಿಗಳು ತಂದಿದ್ದ ಬೀಗವನ್ನು ಹಾಕಿ ಹೋಗಿರುತ್ತಾರೆ.ಎಂಬಿತ್ಯಾದಿಯಾಗಿರುತ್ತದೆ.

CEN Crime PS

ದಿನಾಂಕ: 15-07-2023 ರಂದು ಮಧ್ಯಾಹ್ನ 13-00 ಗಂಟೆಯಿಂದ 14:00 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರು ಫೇಸ್ಬುಕ್ ನಲ್ಲಿ ಸರ್ಚ್ ಮಾಡುತ್ತಿರುವಾಗ ಬಿಗ್ ಬಾಸ್ಕೆಟ್ ಎಂಬ ಫೇಸ್ಬುಕ್ ಆ್ಯಪ್ ನಲ್ಲಿ ಕೆಲವು ಕ್ಯಾಟ್ರಿನ್ ವ್ಯವಹಾರಕ್ಕೆ ಬೇಕಾಗುವು ವಸ್ತುಗಳನ್ನು ನೋಡಿ ಬಿಗ್ ಬಾಸ್ಕಟ್ ಎಂಬ ಫೇಸ್ಬುಕ್ ಖಾತೆದಾರರ ಜೋತೆ ಚ್ಯಾಟಿಂಗ್ ಮಾಡಿದಾಗ ಆರೋಪಿತರು ಪಿರ್ಯಾದಿದಾರರಿಗೆ ಕಡಿಮೆ ಬೆಲೆಗೆ ಕ್ಯಾಟ್ರಿನ್ ವ್ಯವಹಾರಕ್ಕೆ ಬೇಕಾಗುವು ವಸ್ತುಗಳನ್ನು ಕೊಡುವುದಾಗಿ ತಿಳಿಸಿ ಆರೋಪಿತರು ಪಿರ್ಯಾದಿದಾರರ ಫೇಸ್ಬುಕ್ ಖಾತೆಗೆ ಬಿಗ್ ಬಾಸ್ಕೆಟ್ ಎಂಬ ಫೇಸ್ಬುಕ್ ಲಿಂಕ್ ಕಳುಹಿಸಿ ಅದರಲ್ಲಿ ಪಿರ್ಯಾದಿದಾರರ ಮಾಹಿತಿಯನ್ನು ಕಳುಹಿಸುವಂತೆ ತಿಳಿಸಿದಾಗ ಪಿರ್ಯಾದಿದಾರರು ತಮ್ಮ ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸಂಖ್ಯೆ. ನೇದರದ ವಿವರನ್ನು ನೀಡಿದಾಗ ಪಿರ್ಯಾದಿದಾರರ ಕ್ರೆಡಿಟ್ ಕಾರ್ಡ್ ಖಾತೆಯಿಂದ ಹಂತ ಹಂತ ವಾಗಿ ರೂ.1,16,000/-ಹಣವನ್ನು ಆನ್ ಲೈನ್ ಮೂಲಕ ಮೋಸದಿಂದ ವರ್ಗಾಯಿಸಿಕೊಂಡು  ಆನ್ ಲೈನ್ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 02:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080