ಅಭಿಪ್ರಾಯ / ಸಲಹೆಗಳು

Crime Reported in : Bajpe PS

ಪಿರ್ಯಾದಿ Rajesh Kumar ದಾರರ ಮಗನಾದ ಅದ್ವಿತ್ ರಾಜ್ ಎಂಬಾತನು ಮೂಡಬಿದ್ರೆ ಮಹಾವೀರ್ ಕಾಲೇಜ್ ನಲ್ಲಿ ವ್ಯಾಸಾಂಗ ಮಾಡುತ್ತಿದ್ದು ದಿನಾಂಕ 13.08.2022 ರಂದು ಮನೆಯಿಂದ ಕಾಲೇಜ್ ಗೆ ಬೈಕ್ ನಂಬ್ರ ಕೆಎ 19 ಹೆಚ್ ಸಿ 6537 ನೇದರಲ್ಲಿ ಹೋಗಿದ್ದು ಇದೇ ದಿನ ಮಧ್ಯಾಹ್ನ 3.45 ಗಂಟೆಗೆ ಮಂಗಳೂರು ತಾಲೂಕು ಎಡಪದವು ಗ್ರಾಮದ ಮುಚ್ಚೂರು ಕ್ರಾಸ್ ಎಂಬಲ್ಲಿ ಕೆಎ 19 ಡಿ 6116 ನೇ ನಂಬ್ರದ ಬಸ್ ನ  ಚಲಾಕನಾದ ಮನೋಜ್ ರೈಎಂಬಾತನು ಅತೀವೇಗ ಮತ್ತು ಅಜಾಗರುಕತೆಯಿಂದ ಬಸ್ಸನ್ನು ಚಲಾಯಿಸಿ ಪಿರ್ಯಾದಿದಾರರ ಮಗನಾದ ಅದ್ವಿತ್ ರಾಜ್ ರವರ ಬೈಕ್ ಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರ ಮಗನಿಗೆ ಎಡಕಣ್ಣಿಗೆ ಮತ್ತು ಮೂಗಿಗೆ ಗಂಬೀರ ಗಯಗಳಾಗಿದ್ದು ಅವನನ್ನು ಎಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿದೆ ಎಂಬಿತ್ಯಾದಿ

 

Crime Reported in : Traffic South Police Station       

ದಿನಾಂಕ 14.08.2022 ರಂದು ಪಿರ್ಯಾದಿ SANTHOSH PADIL ದಾರರು ಮದ್ಯಾಹ್ನ 15-51  ಗಂಟೆಗೆ ತೊಕ್ಕೊಟ್ಟು ನಾಗನಕಟ್ಟೆ ಬಳಿ ಕರ್ತವ್ಯದಲ್ಲಿರುವಾಗ ತೊಕ್ಕೊಟ್ಟು ಓವರ್ ಬ್ರೀಡ್ಜ್ ಕಡೆಯಿಂದ ಕಲ್ಲಾಪು ಕಡೆಗೆ ಸ್ಕೂಟರ್ ನಂಬ್ರ: KA-19-EX-3770 ನೇದರ ಸವಾರ  ಇಬ್ಬರೂ ಸಹಸವಾರರನ್ನು ಕುಳ್ಳಿರಿಸಿಕೊಂಡು, ಸವಾರರು ತಲೆಗೆ ಹೆಲ್ಮೆಟ್ ಧರಿಸದೇ ಸ್ಕೂಟರನ್ನು ತೀರಾ ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದು ಅಲ್ಲದೇ ಆ ಸ್ಕೂಟರ್ ಗೆ ಸೈಡ್ ಮೀರರ್ ಕೂಡಾ ಇರುವುದಿಲ್ಲ ಇದನ್ನು ಕಂಡು ಪಿರ್ಯಾದಿದಾರರು ಸದ್ರಿ ಸ್ಕೂಟರನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಹೋಗಿರುತ್ತಾನೆ ಎಂಬಿತ್ಯಾದಿ.

 

Crime Reported in : Mangalore East PS

ಪಿರ್ಯಾದಿದಾರರು ದಿನಾಂಕ: 14-08-2022 ರಂದು ರಾತ್ರಿ 8-15 ವೇಳೆಗೆ ಮಂಗಳೂರು ನಗರದ ಅಳ್ವಾರೀಸ್ ರಸ್ತೆಯಲ್ಲಿರುವ  ಅಪಾರ್ಟ್ ಮೆಂಟ್ ನ ಬಳಿ ಪಿರ್ಯಾದಿದಾರರರಿಗೆ ಕಾಲು ನೋವು ಆಗಿ ವಿಶ್ರಾಂತಿ ಪಡೆಯಲು ಅಪಾರ್ಟ್ ಮೆಂಟ್ ಸ್ಟೇಪ್ ನ ಬಳಿ ಕುಳಿತುಕೊಂಡಿರುತ್ತಾರೆ. ಆಗ ಪಿರ್ಯಾದಿದಾರರು ಬ್ಯಾಗ್ ನ್ನು ಅಪಾರ್ಟ್ ಮೆಂಟ್ ನ ಸ್ಟೇಪ್ಸ್ ನಲ್ಲಿ ಇಟ್ಟಿರುತ್ತಾರೆ. ಆ ಸಮಯದಲ್ಲಿ ಪೋನ್ ಬಂದಿದ್ದು, ಪೋನ್ ನಲ್ಲಿ ಮಾತನಾಡುವಾಗ, ಪಿರ್ಯಾದಿದಾರರನ್ನು  ಮರೆ-ಮಾಚಿ ಯಾರೋ 2 ಜನ ಅಪರಿಚಿತ ವ್ಯಕ್ತಿಗಳು ಬಂದು, ಪಿರ್ಯಾದಿದಾದರ ಬ್ಯಾಗ್ ನಲ್ಲಿದ್ದ 45 ಗ್ರಾಂ ತೂಕದ MANGALSUTRA ಅಂದಾಜು ಮೌಲ್ಯ ರೂ. ಬೆಲೆ ರೂ. 1,80,000/-  ಕಳವು ಮಾಡಿಕೊಂಡು ಹೋಗಿರುವುದಾಗಿ ಎಂಬಿತ್ಯಾದಿಯಾಗಿದೆ.

 

Konaje PS

ದಿನಾಂಕ 14-08-2022 ರಂದು ಪಿರ್ಯಾದಿ Mallikarjun Biradar ದಾರರು  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮದ್ಯಾಹ್ನ ಸುಮಾರು 13-30 ಗಂಟೆಗೆ  ಉಳ್ಳಾಲ ತಾಲೂಕು, ಬೆಳ್ಮ ಗ್ರಾಮದ, ಯೆನೆಪೋಯ ಆಸ್ಪತ್ರೆಯ ಎದುರು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಸಾಹುಲ್ ಹಮೀದ್ (27) ಅಬ್ಲಮೊಗರು ಮಂಗಳೂರು ಎಂಬಾತನನ್ನು  ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿತನು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ ಗಾಂಜಾ ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

 

Kavoor PS

ದಿನಾಂಕ: 14/08/2022 ರಂದು ಪಿರ್ಯಾದಿ PRATIBHA K H ದಾರರು ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ 12-15 ಗಂಟೆಗೆ ಬಸವನಗರ ಅಂಗನಾವಡಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ  ಸುದೀಪ್ ಪ್ರಾಯ 20 ವರ್ಷ  ಎಂಬವನು ಗಾಂಜಾ ಸೇವನೆ ಮಾಡುತ್ತಿರುವವನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿ ಗಾಂಜಾ ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ  ಎಂಬಿತ್ಯಾದಿ.

 

Mangalore East Traffic PS                                

ಪಿರ್ಯಾದಿ JAGADEESH K P ದಾರರು ದಿನಾಂಕ 14-08-2022 ರಂದು ಅತ್ತಾವರದ ಡಿ ಮಾರ್ಟ್ ಮಾಲ್ ಬಳಿ ರಸ್ತೆ ಬದಿಯಲ್ಲಿ ಕರ್ತವ್ಯದಲ್ಲಿದ್ದಾಗ ಸಮಯ ಸುಮಾರು 10:38  ಗಂಟೆಗೆ ಅತ್ತಾವರ ಕಟ್ಟೆ ಕಡೆಗೆ ಹಾದು ಹೋಗುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ KA-19-EZ-6805 ನಂಬ್ರದ ಸ್ಕೂಟರ್ ಸವಾರನು ತನ್ನ ಸ್ಕೂಟರಿನಲ್ಲಿ ಇಬ್ಬರು ಸಹ ಸವಾರರನ್ನು ಕುಳ್ಳಿರಿಸಿಕೊಂಡು ಮೂವರೂ ತಲೆಗೆ ಹೆಲ್ಮೆಟ್ ಧರಿಸದೇ ನಿರ್ಲಕ್ಷ್ಯತನದಿಂದ ತನ್ನ ಪ್ರಾಣ ಹಾಗೂ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಕಂಡು ಪಿರ್ಯಾದಿದಾರರು ಸದ್ರಿ ಸ್ಕೂಟರನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿ ಸೂಚಿಸಿದಾಗ ಸ್ಕೂಟರ್ ಸವಾರನು ತನ್ನ ಸ್ಕೂಟರನ್ನು ಸ್ಥಳದಲ್ಲಿ ನಿಲ್ಲಿಸದೇ ಅತ್ತಾವರ ಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಮುಂದೆ ಹೋಗಿದ್ದು, ಪಿರ್ಯಾದಿದಾರರು ಜೊತೆಯಲ್ಲಿದ್ದ ಸಿಬ್ಬಂದಿಯವರ ಮೊಬೈಲ್ ನಲ್ಲಿ ವೀಡಿಯೋ ಹಾಗೂ ಪೋಟೋ ತೆಗೆಸಿರುತ್ತಾರೆ.  ಆದ್ದರಿಂದ KA-19-EZ-6805 ಸ್ಕೂಟರ್ ಸವಾರ ಹಾಗೂ ಸಹ ಸವಾರರ ಮೇಲೆ ಸೂಕ್ತ  ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ

Mangalore West Traffic PS               

ದಿನಾಂಕ 14-08-2022 ರಂದು ಪಿರ್ಯಾದು DEVIPRASAD  ಮಂಗಳೂರು ನಗರದ ದುರ್ಗಾ ಮಹಲ್  ರಸ್ತೆಯ ಬಳಿ ಸಮವಸ್ತ್ರದಲ್ಲಿ ಕರ್ತವ್ಯ ದಲ್ಲಿ ಇರುವ ಸಮಯ ಸುಮಾರು 10.11 ಗಂಟೆಗೆ ಮಣ್ಣಗುಡ್ಡ ಕಡೆಯಿಂದ ದುರ್ಗಾ ಮಹಲ್ ಜಂಕ್ಷನ್ ಕಡೆಗೆ KA-19-ES-6291 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರನು 1+1 ರ ಬದಲು 1+2  ಸಹ ಸವಾರನನ್ನು ಕುಳ್ಳಿರಿಸಿಕೊಂಡು ತೀರಾ ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ದ್ವಿ ಚಕ್ರ ವಾಹನದಲ್ಲಿ ಸಹಸವಾರರು ಹೆಲ್ಮೆಟ್ ಧರಿಸದೇ ಚಾಲಾಯಿಸಿಕೊಂಡು ಬರುತ್ತಿದ್ದವರ ವೀಡಿಯೋ ಮತ್ತು ಫೂಟೊವನ್ನು ಸಿಬ್ಬಂದಿಯವರ ಮೊಬೈಲ್ ಫೋನ್ ನಿಂದ ತೆಗೆದಿದ್ದು ಸದ್ರಿ ದ್ವಿ ಚಕ್ರ ಸವಾರನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 15-08-2022 12:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080