ಅಭಿಪ್ರಾಯ / ಸಲಹೆಗಳು

 

 

Crime Report in Mangalore East PS

ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸ್ ಉಪ-ನಿರೀಕ್ಷಕಿ ಪ್ರತಿಭಾ ಕೆ ಹೆಚ್  ರವರು ದಿನಾಂಕ: 14-08-2023 ರಂದು ರಂದು ಠಾಣಾ ಸಿಬ್ಬಂದಿ ಸುನೀಲ್ ರವರೊಂದಿಗೆ ನೈಟ್ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಮಾರು 01:00 ಗಂಟೆ ವೇಳೆಗೆ ಮಂಗಳೂರು ನಗರದ ಬಲ್ಮಠ ಜಂಕ್ಷನ್ ಬಳಿಯಲ್ಲಿ ಓರ್ವ ವ್ಯಕ್ತಿಯು ಮಾದಕ ವಸ್ತುವನ್ನು ಸೇವನೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯು ಬಂದಿದ್ದು ಮಾಹಿತಿಯಂತೆ ಸ್ಥಳಕ್ಕೆ ಹೋದಾಗ ಅಲ್ಲಿ ಒಬ್ಬಯುವಕನು ನಿಂತುಕೊಂಡಿದ್ದು ವಶಕ್ಕೆ ತೆಗೆದು ಕೊಂಡು ವಿಚಾರಿಸಲಾಗಿ ಈತನ ಹೆಸರು ಮೊಹಮ್ಮದ್ ಅಬ್ಜಲ್ ಪ್ರಾಯ;22 ವರ್ಷ, ವಾಸ;ಬದ್ರಿಯಾ ಜುಮ್ಮಾ ಮಸೀದಿ ಹತ್ತಿರ ಬೆಳ್ಮ ದೇರಳಕಟ್ಟೆ ಮಂಗಳೂರು ನಗರ ಎಂಬುದಾಗಿ ತಿಳಿಸಿದ್ದು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಬಾಯಿಯಿಂದ ಅಮಲು ಪದಾರ್ಥ ಸೇದಿದ ವಾಸನೆ ಬರುತ್ತಿದ್ದರಿಂದ, ಈತನನ್ನು ವಶಕ್ಕೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ ವ್ಯೆದಕೀಯ ಪರೀಕ್ಷೆಯಿಂದ TETRAHYDRACANNABINOID (MARIJUANA) ಪಾಸಿಟಿವ್ ಎಂದು ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

 

Traffic North Police Station          

ಪಿರ್ಯಾದಿ A.Shrivalsan ದಾರರು ದಿನಾಂಕ 13.08.2023 ರಂದು ರಾತ್ರಿ ಸಮಯ ಸುಮಾರು 7:30 ಗಂಟೆಗೆ ತಮ್ಮ ಮನೆಯ ಹತ್ತಿರ ಮಂಗಳೂರು ತಾಲೂಕು ಮೂಡುಶೆಡ್ಡೆ ಗ್ರಾಮದ ಶಿವನಗರ ಭುವನ ಎಂಟರ್ ಪ್ರೈಸಸ್ ಬಳಿ ಸ್ಕೂಟರ್ ನಂಬ್ರ KA-19EV-0636 ನೇಯದರಲ್ಲಿ ಕುಳಿತು ತಿಂಡಿಯನ್ನು ಮಂಗಳೂರಿಗೆ ಕೊಂಡು ಹೋಗುವರೇ ಸ್ಕೂಟರನ್ನು ಸ್ಟಾರ್ಟ್ ಮಾಡಿ ನಿಂತಿರುವ ಸಮಯ ಶಿವನಗರ ಜಂಕ್ಷನ್ ಕಡೆಯಿಂದ ಮೋಟಾರ್ ಸೈಕಲ್ ನಂಬ್ರ KA-19HD-8111 ನೇಯದನ್ನು ಸದರ ಸವಾರ ಆರೋಪಿ ಸುಧೀರ್ ಶೆಟ್ಟಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರ ಸ್ಕೂಟರಿಗೆ ಢಿಕ್ಕಿ ಪಡಿಸಿದ ಪರಿಣಾಮ ಫೀರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ  ಎಡಕಣ್ಣಿನ ಹುಬ್ಬಿನ ಬಳಿ ರಕ್ತಗಾಯ ಹಾಗೂ ಎಡಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಢಿಕ್ಕಿ ಪಡಿಸಿದ ಮೋಟಾರ್ ಸೈಕಲ್ ಸವಾರನಿಗೂ ಕೂಡಾ ಗಾಯವಾಗಿದ್ದು ಗಾಯಾಳು ಫೀರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಮಂಗಳೂರು ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Mangalore Rural PS

ದಿನಾಂಕ: 14-08-2023 ರಂದು ಅರ್ಕುಳ ಗ್ರಾಮದ ವಳಚ್ಚಿಲ್ ಪದವು ಎಂಬಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಚೀಟಿಯನ್ನು ಬರೆದು ಹಣವನ್ನು ಸಂಗ್ರಹಿಸಿತ್ತಿರುವುದಾಗಿ ಮಾಹಿತಿಯಂತೆ 18-45 ಗಂಟೆಗೆ ವಳಚ್ಚಿಲ್ ಪದವು ವ್ಯೂ ಪಾಯಿಂಟ್ ನಲ್ಲಿ ಚೀಟಿ ಬರೆಯುತ್ತಿದ್ದ ಫೆಡ್ರಿಕ್ ಮಿರಾಂಡಾ ಎಂಬವನನ್ನು  ವಶಕ್ಕೆ ಪಡೆದು ಈತನು ಸಾರ್ವಜನಿಕರಿಂದ ಮಟ್ಕಾ ಜೂಜಾಟಕ್ಕೆ ಹಣವನ್ನು ಸಂಗ್ರಹಿಸುತ್ತಿರುವುದಾಗಿಯೂ  000 ಸಂಖ್ಯೆಯಿಂದ 999 ಸಂಖ್ಯೆಯವರೆಗೆ ಯಾವುದಾದರೂ ಸಂಖ್ಯೆಗೆ ಹತ್ತು ರೂಪಾಯಿ ಹಾಕಿದಲ್ಲಿ ಕೇರಳ ರಾಜ್ಯದ ಪ್ರತೀ ದಿನ ನಡೆಯುವ ಲಾಟರಿ ಡ್ರಾದಲ್ಲಿ ಕೊನೆಯ ಮೂರು ನಂಬ್ರಕ್ಕೆ ಹತ್ತು ರೂಪಾಯಿಗೆ ಐದು ಸಾವಿರ ರೂಪಾಯಿ ನೀಡುವುದಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದು ಆರೋಪಿತನ ವಶದಲ್ಲಿದ್ದ ರೂ1800/- ನಗದು ಹಣ, ಮಟ್ಕಾ ಚೀಟಿ ಬರೆದ 4 ಚೀಟಿ,  ಮಟ್ಕಾ ಚೀಟಿ ಬರೆಯಲು ಉಪಯೋಗಿಸಿದ 1 ಬಾಲ್ ಪೆನ್ ಹಾಗೂ ವಿವೋ ಕಂಪನಿಯ ಮೊಬೈಲ್ ನ್ನು ಸ್ವಾಧೀನ ಪಡಿಸಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

Panambur PS

ದಿನಾಂಕ 12.08.2023 ರಂದು 11:00 ಗಂಟೆಗೆ ಪಿರ್ಯಾದಿ SAFIYAದಾರರು ಹಾಗೂ ಅವರ ಮಕ್ಕಳು ಸೂರಲ್ಪಾಡಿ ಎಂಬಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಸೀಮಂತ ಕಾರ್ಯಕ್ರಮಕ್ಕೆ ತೆರಳಿದ್ದು, ದಿನಾಂಕ 14.08.2023 ರಂದು ರಾತ್ರಿ 20:50 ಗಂಟೆಗೆ ಪಿರ್ಯಾದಿದಾರರ ಮಗ ಸಾಹುಲ್ ಹಮೀದ್ ಬೇಂಗ್ರೆ ಗ್ರಾಮದ ಕಸಬ ಬೇಂಗ್ರೆ ಎಂಬಲ್ಲಿರುವ ತನ್ನ ಮನೆಗೆ ಬಂದವನು, ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ ಯಾರೋ ತಮ್ಮ ಮನೆಯ ಹೆಂಚನ್ನು ತೆಗೆದು ಒಳಗೆ ಬಂದು ಕಪಾಟುಗಳನ್ನು ತೆರೆದು ಕಳ್ಳತನ ಮಾಡಿರುತ್ತಾರೆ ಕೂಡಲೇ ಬರುವಂತೆ ತಿಳಿಸಿದಂತೆ ಪಿರ್ಯಾದಿದಾರರು ತನ್ನ ಮಗಳೊಂದಿಗೆ ಮನೆಗೆ ಬಂದು ನೋಡಲಾಗಿ, ಮನೆಯ ಛಾವಣಿಯ ಹೆಂಚು ತೆಗೆದು ಒಳಗೆ ಪ್ರವೇಶಿಸಿದ್ದ ಕಳ್ಳರು, ನಾಲ್ಕು ಬೆಡ್ ರೂಮ್ ನಲ್ಲಿದ್ದ ನಾಲ್ಕು ಕಪಾಟುಗಳನ್ನು ತೆರೆದು ಬಟ್ಟೆಬರೆ, ವಸ್ತುಗಳನ್ನು ಚೆಲಾಪಿಲ್ಲಿ ಮಾಡಿದ್ದು ಕಂಡುಬಂದಿದ್ದು, ಪರಿಶೀಲಿಸಲಾಗಿ, ಕಿಚನ್ ಬಳಿಯ ಬೆಡ್ ರೂಮ್ ನ ಕಪಾಟಿನ ಲಾಕನ್ನು ಯಾವುದೋ ಸಾಧನದಿಂದ ಮುರಿದು ತೆರೆದು, ಅದರಲ್ಲಿಟ್ಟಿದ್ದ ಪಿರ್ಯಾದಿದಾರರು ಸದಸ್ಯೆಯಾಗಿರುವ ನವೋದಯ ಸ್ವ ಸಹಾಯ ಸಂಘದ ಸದಸ್ಯರುಗಳಿಂದ ಸಂಗ್ರಹಿಸಿದ ಸಾಲದ ಕಂತಿನ ಬಾಬ್ತು ರೂ 50,000/- ನಗದು ಕಳ್ಳತನಮಾಡಿರುವುದು ಕಂಡುಬಂದಿದ್ದು, ಮಗಳು ಇಶ್ರತ್ ಳ ಬೆಡ್ ರೂಮ್ ಕಪಾಟಿನ ಲಾಕನ್ನು ಸಹ ಯಾವುದೋ ಸಾಧನದಿಂದ ಮುರಿದು, ತುಂಡಾಗಿದ್ದರಿಂದ ಧರಿಸದೇ ಒಂದು ಕರಂಡಿಕೆಯಲ್ಲಿರಿಸಿ ಕಪಾಟಿನಲ್ಲಿರಿಸಿದ್ದ 03 ಪವನ್ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿರುತ್ತಾರೆ. ಚಿನ್ನದ ಚೈನ್ ನ ಮೌಲ್ಯ ಸುಮಾರು 1,20,000/ ಆಗಿದೆ. ತಾವು ಮನೆಯಲ್ಲಿಲ್ಲದ ವೇಳೆ ಯಾರೋ ಕಳ್ಳರು ಮನೆಯ ಹೆಂಚು ತೆಗೆದು ಮನೆಯೊಳಗೆ ಪ್ರವೇಶಿಸಿ, ಕಳ್ಳತನ ಮಾಡಿದ್ದಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ವಿನಂತಿ ಎಂಬಿತ್ಯಾದಿ.  ಮೂಲ ಪಿರ್ಯಾದಿಯನ್ನು ಲಗತ್ತಿಸಿದೆ.

 

Mangalore East PS                      

ಪಿರ್ಯಾದಿ Paskol Farask Rodrigues ದಾರರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ದವರಾಗಿದ್ದು ಪಿರ್ಯಾದುದಾರರ ಎರಡನೇ ಮಗಳಾದ ಸೋನಿಯಾ ರೋಡ್ರಿಗಸ್ (ಪ್ರಾಯ 23) ಎಂಬುವವರು ಸುಮಾರು 8 ತಿಂಗಳ ಹಿಂದೆ ಉದ್ಯೋಗಕ್ಕಾಗಿ ಮಂಗಳೂರಿಗೆ ಬಂದು ಬೆಂದೂರಿನ ಸೆಲೆಸಾ ಅಪಾರ್ಟ್ ಮೆಂಟ್ ಫ್ಲಾಟ್ ರಲ್ಲಿ ವಾಸ ಮಾಡಿಕೊಂಡಿರುವುದಾಗಿ ಪಿರ್ಯಾದುದಾರರಿಗೆ ತಿಳಿಸಿದ್ದು. ಇದೀಗ ಪಿರ್ಯಾದುದಾರರ ಮಗಳು ಪಿರ್ಯಾದಿದಾರರ ಕರೆಗಳನ್ನು ಸ್ವೀಕರಿಸದೇ ಇದ್ದು, ಪಿರ್ಯಾದುದಾರರು ಮಂಗಳೂರಿಗೆ ಬಂದು ಮಗಳು ತಿಳಿಸಿದ ಅಪಾರ್ಟ್ ಮೆಂಟ್ ನಲ್ಲಿ ಬಂದು ನೋಡಿದಾಗ ಕಾಣದೇ ಇದ್ದು  ಮಗಳ ಬಗ್ಗೆ ಅಪಾರ್ಟ್ ಮೆಂಟ್ ನ  ನಿವಾಸಿಗಳ ಬಳಿ ವಿಚಾರಿಸಲಾಗಿ ಯಾವುದೇ ಮಾಹಿತಿ ಇಲ್ಲವೆಂದು ತಿಳಿಸಿದರು, ನಂತರ ಸಂಬಂಧಿಕರಲ್ಲಿ ಪೋನ್ ಕರೆ ಮೂಲಕ ವಿಚಾರಿಸಿದ್ದು ಮಗಳ ಬಗ್ಗೆ ಯಾವುದೇ ಮಾಹಿತಿ ತಿಳಿಯದೇ ನಂತರ ಠಾಣೆಗೆ ಬಂದು  ಕಾಣೆಯಾಗಿರುವುದಾಗಿ  ಪತ್ತೆ ಮಾಡಿ ಕೊಡಬೇಕಾಗಿ  ನೀಡಿರುವ ದೂರು ಎಂಬಿತ್ಯಾದಿ.

    

Mangalore South PS                                                       

 ದಿನಾಂಕ 14-08-2023 ರಂದು 16-05 ಗಂಟೆಗೆ ಮಂಗಳೂರು ನಗರದ ಶಿವನಗರ ರೈಲ್ವೇ ಟ್ರ್ಯಾಕ್ ಬಳಿಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಆರೋಪಿ ಮೊಹಮ್ಮದ್ ಶಾ, ಪ್ರಾಯ 20 ವರ್ಷ,  ವಿಳಾಸ : ನೆಡುಪುರತಿ, ಕಿಜಕೋತಿಲ್, ವೆಂಗ, ಕೊಲ್ಲಮ್ ಜಿಲ್ಲೆ, ಕೇರಳ ರಾಜ್ಯ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ತಪಾಸಣೆಗಾಗಿ ಮಂಗಳೂರು ಎ.ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ಪರೀಕ್ಷೆಗೊಳಪಡಿಸಿದಾಗ, ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಆರೋಪಿಯ ವಿರುದ್ದ ಎನ್ ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

 

                                                                

ಇತ್ತೀಚಿನ ನವೀಕರಣ​ : 21-08-2023 02:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080