ಅಭಿಪ್ರಾಯ / ಸಲಹೆಗಳು

Crime Report in  Mangalore East PS                                        

ದಿನಾಂಕ: 14-09-2023 ರಂದು ಪಿರ್ಯಾದಿ MURUGESH V BOS ದಾರರು ಎಂದಿನಂತೆ ಕದ್ರಿ ಕಂಬಳದಲ್ಲಿರುವ ತಾನು ಸೂಪರ್ ವೈಸರ್ ಕೆಲಸ ಮಾಡುತ್ತಿರುವ ಸೈಟ್ ನಿಂದ ಕೆಲಸ ಮುಗಿಸಿ ತನ್ನ ಬಾಡಿಗೆ ರೂಮ್ ಗೆ ಸುರತ್ಕಲ್ ಹೋಗಿದ್ದು, ದಿನಾಂಕ:15-09-2023 ರಂದು ಬೆಳಿಗ್ಗೆ ಸುಮಾರು 03.00 ಗಂಟೆಗೆ ತನ್ನ ಸೈಟ್ ನಲ್ಲಿ ಕೆಲಸ ಮಾಡುತ್ತಿರುವ ( ಹೊರ ರಾಜ್ಯದವರಾದ ) ಸುರೇಶ್ ಎಂಬವರು ಪೋನ್ ಮಾಡಿ ಶೆಡ್ ಗೆ 3 ಜನ ಯಾರೋ ಕಳ್ಳರು ಬಂದು ತೆರೆದ ಶೆಡ್ ನಲ್ಲಿ ನಾವು ಮಲಗಿದ್ದಾಗ ಮುಂಜಾನೆ ಸುಮಾರು 03.00 ಗಂಟೆಯಿಂದ 03.15 ಗಂಟೆಯ ಒಳಗೆ ಕೆಲಸದವರು ಮಲಗಿದ್ದ ಶೆಡ್ ನ ಬದಿಯಲ್ಲಿದ್ದ ಮರದ ಮೇಜಿನ ಮೇಲೆ ಇಟ್ಟಿದ್ದ ದು ಸುಮಾರು ½ ಗ್ರಾಂ ತೂಕದ ಚಿನ್ನದ ಪೆಂಡೆಂಟ್ ಮತ್ತು MI 5AI ಮೊಬೈಲ್ ಪೋನ್ ಮೊನಂ 6387999048, Techno KB 2 ಮೊಬೈಲ್ ಇದರ ಮೊ ನಂ 9935625185,7380494283. OPPO F11 ಮೊಬೈಲ್ ಪೋನ್ ಇದರ ಮೊ ನಂ 7814423474. VIVO Y11 ಮೊಬೈಲ್ ನಂಬ್ರ 6361762695 ನೇಯದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ಬೆಳಿಗ್ಗೆ ಸುಮಾರು 03.45 ಗಂಟೆಗೆ ಸ್ಥಳಕ್ಕೆ ಹೋಗಿದ್ದು, ಕೆಲಸದವರಲ್ಲಿ ವಿಚಾರಿಸಿದ್ದು ಕಳವಾದ ವಿಚಾರವನ್ನು ತಿಳಿದುಕೊಂಡಿದ್ದು ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ 15,000/- ಆಗಬಹುದು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ

Mangalore North PS                                  

ಪಿರ್ಯಾದಿದಾರರಾದ ಪ್ರಮೋದ್  ಕುಮಾರ್ ಎಂಬುವವರು ತನ್ನ ಬಾಬ್ತು ಸುಜುಕಿ ಕಂಪನಿಯ LET S ಎಂಬ ನೋಂದಣಿ  ನಂಬ್ರ KA -20-EH- 5867 ನೇ ಕೆಂಪು ಬಣ್ಣದ ದ್ವಿಚಕ್ರ ವಾಹನವನ್ನು ಹೊಂದಿದ್ದು, ದಿನಾಂಕ  09.09.2023 ರಂದು ಮಂಗಳೂರಿನ ಕೇಂದ್ರ ಮಾರುಕಟ್ಟೆಗೆ ಅಗತ್ಯ ವಸ್ತು ಖರೀದಿಗೆಂದು ಬಂದಿದ್ದು, ಸಮಯ ಸುಮಾರು 17.00 ಗಂಟೆ ಸಮಯದಲ್ಲಿ ಮೈದಾನ 2 ನೇ ಕ್ರಾಸ್ ಬಾಲಾಜಿ ಬ್ಯಾಂಗಲ್ಸ್ ಸ್ಟೋರ್ ನ ಎದುರುಗಡೆ ಪಾರ್ಕಿಂಗ್ ಸ್ಥಳದಲ್ಲಿ ಸ್ಕೂಟರನ್ನು  ನಿಲ್ಲಿಸಿ ನಂತರ ಬಾಲಾಜಿ ಬ್ಯಾಂಗಲ್ ಸ್ಟೋರ್ ಗೆ ತೆರಳಿ ಸಮಯ ಸುಮಾರು 18.00 ಗಂಟೆಗೆ  ಸ್ಕೂಟರ್ ನಿಲ್ಲಿಸಿದ್ದ ಸ್ಥಳಕ್ಕೆ ಮರಳಿ ಬಂದು ನೋಡಿದಾಗ  ಸದ್ರಿ ಸ್ಥಳದಲ್ಲಿ ಸ್ಕೂಟರ್  ಇರದೇ ಇದ್ದು, ನಂತರ ಎಲ್ಲಾ ಕಡೆ ಹುಡುಕಾಡಿದರೂ ಈವರೆಗೆ ಸ್ಕೂಟರ್  ಸಿಗದೇ ಇದ್ದುದರಿಂದ ಪಿರ್ಯಾಧಿದಾರರ ಬಾಬ್ತು KA -20-EH- 5867 ನೊಂದಣಿ ನಂಬ್ರದ  ಸುಜುಕಿ ಕಂಪನಿಯ ಸ್ಕೂಟರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೃಡಪಟ್ಟಿರುವುದರಿಂದ ಕಳವಾದ  ಸ್ಕೂಟರನ್ನು ಪತ್ತೆ ಮಾಡಿಕೊಡಬೇಕೆಂಬಿತ್ಯಾದಿ .

Kankanady Town PS                                         

ದಿನಾಂಕ 13-09-2023 ರಂದು ರಾತ್ರಿ 20-00 ಗಂಟೆಗೆ ಪ್ರಕರಣದ ಪಿರ್ಯಾದಿ Prajwal ದಾರರು ತನ್ನ ದೊಡ್ಡಪ್ಪನ ಮಂಗಳೂರು ನಗರದ ಎಕ್ಕೂರು ಮೇಗಿನ ಮನೆ ಎಸ್.ಡಿ.ಜನರಲ್ ಸ್ಟೊರ್ ಎಂಬ ದಿನಸಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಸಮಯ   ಆರೋಪಿ ಧನುಷ್ ಭಂಡಾರಿ, ಅಂಗಡಿಗೆ ಬಂದು ಜ್ಯೂಸ್ ಹಾಗೂ ತಿಂಡಿ ತನಿಸುಗಳನ್ನು ತಿಂದು ಹಣ ಕೊಡದೇ ಹೋದವನು,  ದಿನಾಂಕ 14-09-2023 ರಂದು 21-00 ಗಂಟೆ ಸುಮಾರಿಗೆ ಬಂದು ಪಿರ್ಯಾದಿದಾರರಲ್ಲಿ ಸಿಗರೇಟನ್ನು ಕೇಳಿದಾಗ, ಪಿರ್ಯಾದಿದಾರರು ಆರೋಪಿಯಲ್ಲಿ ನಿನ್ನೆಯ ಹಣವನ್ನು ಕೊಟ್ಟ ಬಳಿಕ ಸಿಗರೇಟು ಕೊಡುವುದಾಗಿ ಹೇಳಿದಾಗ,  ಆರೋಪಿಯು ಪಿರ್ಯಾದಿದಾರರನ್ನು ಉದ್ದೇಶಿಸಿ “ಬೇವರ್ಷಿ, ಸೂಳೆಮಗ, ನಾನು ಯಾರು ಗೊತ್ತಾ? ನನ್ನನ್ನೆ ಹಣ ಕೇಳುತ್ತೀಯಾ, ನಾನು 2 ಕೊಲೆ ಮಾಡಿದವನು ಎಂದು ಅವಾಚ್ಯ ಶಬ್ದಗಳಿಂದ ಬೈದು,  ಆರೋಪಿಯು ತನ್ನ ಕಿಸೆಯಿಂದ ಚೂರಿಯೊಂದನ್ನು ತೆಗೆದು, ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿದಾರರ ಕುತ್ತಿಗೆಗೆ ಗುರಿಯಿಟ್ಟು ಬಲವಾಗಿ ಬೀಸಿದ್ದು, ಪಿರ್ಯಾದಿದಾರರು ಬೊಬ್ಬೆ ಹಾಕಿ ಹಿಂದಕ್ಕೆ ಹಾರಿ ತಪ್ಪಿಸಿಕೊಂಡಾಗ, ಆರೋಪಿಯು ಪಿರ್ಯಾದಿದಾರರನ್ನುದ್ದೇಶಿಸಿ. ನಿನ್ನನ್ನು ಬಿಡುವುದಿಲ್ಲ ಮಗನೆ ಎಂದು ಹೇಳಿ ಅಂಗಡಿಯ ಒಳಗೆ ಹೋಗಲು ಪ್ರಯತ್ನ ಪಟ್ಟಾಗ, ಪಿರ್ಯಾದಿದಾರರ ದೊಡ್ಡಮ್ಮ ಸುಮತಿ, ನೆರೆ ಕೆರೆಯ ಸಂಜಯ್, ರಾಮ್ ಪ್ರಸಾದ್, ಪ್ರಶಾಂತ್ ಹಾಗೂ ಇತರರು  ಬಂದು ಅಡ್ಡ ನಿಂತು ಆರೋಪಿಯು ಅಂಗಡಿಯ  ಒಳಗೆ ಹೋಗದಂತೆ ತಡೆದಿರುತ್ತಾರೆ. ಆ ಸಮಯ ಆರೋಪಿಯು “ಇವತ್ತು ಇವರು ಇರುವುದರಿಂದ ನೀನು ಬದುಕಿದೆ, ನಾಳೆ ಸಿಗು ನಿನ್ನನ್ನು ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ, ಎಂಬಿತ್ಯಾದಿಯಾಗಿರುತ್ತದೆ.

Moodabidre PS

ದಿನಾಂಕ 11-09-2023 ರಂದು ಪಿರ್ಯಾದಿದಾರರ ತಮ್ಮ ಆಸೀಫ್ ಎಂಬುವವರು ಅವರ ತಂದೆಯನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿ ರಾತ್ರಿ ಅಲ್ಲಿಂದ ಮನೆ ಕಡೆಗೆ ಕೆಎ-17-ಎನ್-1511  ನೇ ಬೊಲೆರೋ ಕಾರಿನಲ್ಲಿ ಹೊರಟಿದ್ದು ದಿನಾಂಕ 12-09-2023 ರ ಬೆಳಗಿನ ಜಾವ ಸುಮಾರು 03.00 ಗಂಟೆ ಸಮಯಕ್ಕೆ ವಾಲ್ಪಾಡಿ ಬಳಿ ತಲುಪುತಿದ್ದಂತೆ ಕಾರು ಚಾಲಕ ಹನೀಫ್ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿ ರಸ್ತೆಯ ಬದಿಯಲ್ಲಿರುವ ಚರಂಡಿಗೆ ಬೀಳಿಸಿ ಮಣ್ಣಿನ ಗುಡ್ಡೆಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾರದಿದಾರರ ತಮ್ಮ ಆಸೀಫ್ ಮತ್ತು ಅವರ ಹೆಂಡತಿಯಾದ ಐಫಾ ರವರಿಗೆ ಗಾಯದ ನೋವುಗಳಾಗಿದ್ದು, ಆಸೀಫ್ ರವರು ಆಳ್ವಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಐಫಾ ರವರು ಆಸ್ಪತ್ರೆಗೆ ಹೋಗದೆ ವಿಶ್ರಾಂತಿ ಪಡೆದುಕೊಂಡಿದ್ದು ಹಾಗೂ ಫಿರ್ಯಾದಿದಾರರ ಅಣ್ಣನ ಮಗಳಾದ ಸಕೀಫಾ ಸಾನಿಯಾ ರವರಿಗೆ ಎಡ ಕೆನ್ನೆಯ ಬಳಿ ರಕ್ತ ಗಾಯವಾಗಿದ್ದು ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 15-09-2023 04:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080