ಅಭಿಪ್ರಾಯ / ಸಲಹೆಗಳು

Crime Report in  : Mangalore East PS

ದಿನಾಂಕ 15-11-20223 ರಂದು ಸಮಯ ಸುಮಾರು 00.05 ಗಂಟೆಗೆ ಮಂಗಳೂರು ನಗರದ ಕರಂಗಲ್ಪಾಡಿ ಬಳಿಯ ಪವಿ ವೈನ್ಸ್ ಶಾಫ್ ಬಳಿ ಗಲಾಟೆ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಸ್ಥಳಕ್ಕೆ ಹೋಗಿ ನೋಡಿದಾಗ ಮೂರು ಜನ ವ್ಯಕ್ತಿಗಳು ಗಲಾಟೆ ಮಾಡುತ್ತಿದ್ದು ವಶಕ್ಕೆ ಪಡೆದು ವಿಚಾರಿಸಲಾಗಿ 1) ಹಾಶೀಮ್  ಪ್ರಾಯ:22 ವರ್ಷ, ವಾಸ: ಪಾಲತಿಂಗಲ್ ಹೌಸ್ ಮಾನೂರ್ ಕಲಾಡಿ ಪೋಸ್ಟ್, ಮಲಪ್ಪುರಂ, ಕೇರಳ ರಾಜ್ಯ. 2) ಸನೂಪ್   ಪ್ರಾಯ: 32 ವರ್ಷ, ವಾಸ: ಪರಕ್ಕಲ್ ಕೊಲಥರಕುನ್ನು ಕಲಾಡಿ ಜಿಲ್ಲೆ: ಮಲಫುರಮ್ ಕೇರಳ -679582. 3) ಶಹಜಾನ್ ಪಿ.ಕೆ ಪ್ರಾಯ: 30 ವರ್ಷ, ವಾಸ: ತಚರವಲಪ್ಪಿಲ್  ಹೌಸ್ ಅನ್ನಕ್ಕಂಪಡು ಎಡಪ್ಪಾಲ್ ಮಲಪ್ಪುರಮ್ ಕೇರಳ. ಎಂದು ತಿಳಿಸಿದ್ದು ಬಾಯಿಯಿಂದ ಅಮಲು ಪದಾರ್ಥ ಸೇದಿದ ವಾಸನೆ ಬರುತ್ತಿದ್ದರಿಂದ, ಮೂವರನ್ನು ವಶಕ್ಕೆ ಪಡೆದು ವೈದ್ಯಾಧಿಕಾರಿಯವರು ಎ.ಜೆ. ಆಸ್ಪತ್ರೆ ಕುಂಟಿಕಾನ ಮಂಗಳೂರು ಇವರ ಮುಂದೆ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಪರೀಕ್ಷಿಸಿ ವರದಿ ನೀಡುವಂತೆ ಕೋರಿಕೆ ಪತ್ರ ನೀಡಲಾಗಿ ವೈದ್ಯಾಧಿಕಾರಿಯವರು ಮೂವರನ್ನು ಪರೀಕ್ಷಿಸಿದ್ದು ಅದರಲ್ಲಿ ಹಾಶೀಮ್  ಪ್ರಾಯ:22 ವರ್ಷ, ವಾಸ: ಪಾಲತಿಂಗಲ್ ಹೌಸ್ ಮಾನೂರ್ ಕಲಾಡಿ ಪೋಸ್ಟ್, ಮಲಪ್ಪುರಂ, ಕೇರಳ ರಾಜ್ಯ ಮತ್ತು ಸನೂಪ್   ಪ್ರಾಯ: 32 ವರ್ಷ, ವಾಸ: ಪರಕ್ಕಲ್ ಕೊಲಥರಕುನ್ನು ಕಲಾಡಿ ಜಿಲ್ಲೆ: ಮಲಫುರಮ್ ಕೇರಳ ಇಬ್ಬರಿಗೂ Tetrahydracannabinoid (Marijuana) 50 ng per ml POSITIVE ಎಂದು  ವರದಿ ನೀಡಿರುತ್ತಾರೆ. ಆದುದರಿಂದ ಇವರುಗಳು ಮಾದಕ ವಸ್ತು ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ಧೃಢಪಟ್ಟಿರುವುದರಿಂದ ಇವರುಗಳ ವಿರುದ್ದ NARCOTIC DRUGS AND PSYCHOTROPIC SUBSTANCES ACT 1985 ರಂತೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬ ಸಂಗ್ತಿ ಅರಿಕೆ.

Traffic South Police Station                                                       

ಫಿರ್ಯಾದಿ SMT FAIROZA BANU ದಾರರ ಗಂಡನಾದ ಹಸನ್ ಸಾಹೇಬ್ ( 73 ವರ್ಷ) ಎಂಬವರು ದಿನಾಂಕ 14/11/2023 ರಂದು ಸಂಜೆ ಮನೆಯ ಹತ್ತಿರದಲ್ಲಿರುವ ನೂರಾನಿ ಮಸೀದಿಗೆ  ಪ್ರಾರ್ಥನೆ  ಬಗ್ಗೆ ತೆರಳಿ, ಸಂಜೆ ಸುಮಾರು 6.30 ಗಂಟೆಗೆ ಕುಂಪಲ ಬೈಪಾಸ್ ನ ಕರಾವಳಿ ಗ್ರಾನೈಟ್ ಅಂಗಡಿ ಬಳಿ ವಾಪಾಸು ಮನೆ ಕಡೆಗೆ  ನಡೆದುಕೊಂಡು ಬರುವಾಗ ತಲಪಾಡಿ ಕಡೆಯಿಂದ KA-19-MJ-2412 ನೇ ನೊಂದಣಿ ನಂಬ್ರದ ಕಾರೊಂದನ್ನು ಅದರ ಚಾಲಕನಾದ ಮೊಹಮ್ಮದ್ ಜವಾದ್ ಆಹ್ಮದ್ ಎಂಬಾತನು ರಾ. ಹೆದ್ದಾರಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ತೀರಾ ರಸ್ತೆಯ ಎಡಕ್ಕೆ ಚಲಾಯಿಸಿಕೊಂಡು ಬಂದು ಹಸನ್ ಸಾಹೇಬ್ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಹಸನ್ ಸಾಹೇಬ್ ರವರು ಮಣ್ಣು  ರಸ್ತೆಗೆ ಬಿದ್ದು, ತಲೆಯ ಹಿಂಭಾಗ ಜಜ್ಜಿದ ರಕ್ತ ಗಾಯ, ಎಡ ಕೈಯ ಮೊಣಗಂಟಿಗೆ , ಕಿರುಬೆರಳಿಗೆ ಗುದ್ದಿದ ರಕ್ತ ಗಾಯ,  ಎಡ ಕಾಲಿನ ತೊಡೆಗೆ, ಪಾದದ ಮಣಿ ಗಂಟಿಗೆ, ಮೊಣಗಂಟಿಗೆ ತರಚಿದ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ಗಾಯವಾದವರನ್ನು ಅಪಘಾತದ ವಿಚಾರ ತಿಳಿದು ಘಟನಾ ಸ್ಥಳಕ್ಕೆ ಬಂದ ಫಿರ್ಯಾದಿದಾರರು, ಅಶ್ರತ್ ಹುಸೇನ್ ಎಂಬವರೊಂದಿಗೆ ಸೇರಿ ಅಪಘಾತ ಪಡಿಸಿದ ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು,  ಚಿಕಿತ್ಸೆಯಲ್ಲಿದ್ದ ಹಸನ್ ಸಾಹೇಬ್ ರವರು ದಿನಾಂಕ 15/11/2023 ರಂದು ಬೆಳಿಗ್ಗೆ 02.40 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿದೆ.

Moodabidre PS

ಪಿರ್ಯಾದಿದಾರರಾದ ಸುಧಾಕರ ದೇವಾಡಿಗ ರವರು ದೀಪಾವಳಿ ಹಬ್ಬಕ್ಕಾಗಿ ನಾರಾವಿಯಲ್ಲಿರುವ ತನ್ನ ಅಣ್ಣನ ಮನೆಗೆ ಹೋಗಿ ಅಲ್ಲಿ ಪೂಜಾ ಕಾರ್ಯಕ್ರಮಗಳನ್ನೆಲ್ಲ ಮುಗಿಸಿಕೊಂಡು ದಿನಾಂಕ: 14-11-2023 ರಂದು ಮದ್ಯಾಹ್ನ 2.00 ಗಂಟೆಗೆ ತನ್ನ ಕೆ.ಎ-19-ಹೆಚ್.ಈ-1856 ನೇ ಸ್ಕೂಟರ್ ನಲ್ಲಿ ಮಗಳಾದ ಪ್ರಕ್ಷಳನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಮೂಡಬಿದರೆಯ ಗಂಟಾಲಕಟ್ಟೆ ಮಾರ್ಗವಾಗಿ ಬಂಟ್ವಾಳ ಕಡೆಗೆ ಹೊರಟಿದ್ದು ಸಮಯ ಸುಮಾರು 02.40 ಗಂಟೆಗೆ ಹನ್ನೆರಡು ಕವಲು ದೇವಸ್ಥಾನದ ಬಳಿ ತಲುಪುತ್ತಿದ್ದಂತೆ ಎದುರಿನಿಂದ ಬಂದ ಕೆ.ಎ-19-ಹೆಚ್.ಈ-0762 ನೇ ಬೈಕ್ ಸವಾರ ಮೂಡಬಿದ್ರೆಯ ಗಂಟಾಲಕಟ್ಟೆ ನಿವಾಸಿ ಕಾರ್ತಿಕ್ ಎಂಬಾತನು  ಅತೀ ವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತಪ್ಪು ದಾರಿಯಲ್ಲಿ ಅಂದರೆ ಬಲಬದಿಯಲ್ಲಿ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಮಗಳು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರ ಬಲಗಾಲಿನ ಗಂಟಿಗೆ ರಕ್ತ ಗಾಯ, ಪಾದಕ್ಕೆ, ತೊಡೆಗೆ ಮತ್ತು ಬಲ ಕೋಲು ಕೈಗೆ ತರಚಿದ ನಮೂನೆಯ ಹಾಗೂ ಗುದ್ದಿದ ಗಾಯದ ನೋವುಗಳಾಗಿರುತ್ತವೆ. ಅಲ್ಲದೇ ಪಿರ್ಯಾದಿದಾರರ ಮಗಳಾದ ಪ್ರಕ್ಷಾಳಿಗೆ ಬಲ ಪಾದದ ಬಳಿ ಮೂಳೆ ಮುರಿತದ ಗಾಯ ಹಾಗೂ ಕೈ ಕಾಲುಗಳಿಗೆ ಗಾಯದ ನೋವುಗಳಾಗಿದ್ದು ಅಲ್ಲಿ ಸೇರಿದ ಸಾರ್ವಜನಿಕರು ಅವರನ್ನು ಬೇರೆ ಬೇರೆ ಕಾರುಗಳಲ್ಲಿ ಬಂಟ್ವಾಳದ ಸೋಮಯಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ, ಅವರ ಮಗಳಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆ ಎಂದು ತಿಳಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಎಂಬಿತ್ಯಾದಿ

Kavoor PS   

ಪಿರ್ಯಾದಿ JYOTHI JAIN ದಾರರ ನಂದನ ಪುರದ ಮಂಜಲ್ ಕಟ್ಟೆ ಎಂಬಲ್ಲಿನ ತಮ್ಮ ಸೈಟಿನಲ್ಲಿ ಮನೆ ನಿರ್ಮಾಣ ನಡೆಯುತ್ತಿದ್ದು ಅಲ್ಲಿ ಒಂದು ರೂಮ್ ಕಟ್ಟಿ ಕೆಲಸದ ಸಾಮಾಗ್ರಿಗಳನ್ನು ಇರಿಸಿ ಬಾಗಿಲು ಹಾಕಿ ಬೀಗ ಹಾಕಿದ್ದು  ದಿನಾಂಕ 13/11/2023 ರಂದು ರಾತ್ರಿ ಸುಮಾರು 10:00 ಗಂಟೆಗೆ ಬೀಗ ಹಾಕಿ ತೆರಳಿದ್ದು ಈ ದಿನ ಬೆಳಗ್ಗೆ ಕೆಲಸದ ಕಾಂಟ್ರಕ್ಟರ್ ಅಜೀಮ್ ಎಂಬಾತನು ಫೋನು ಮಾಡಿ ರೂಂ ನ ಬಾಗಿಲು ತೆರೆದಿದ್ದು ಒಳಗಿದ್ದ ಸಾಮಾಗ್ರಿಗಳನ್ನು ಯಾರೋ ಕಳವು ಮಾಡಿದ್ದಾರೆ ಎಂದು ತಿಳಿಸಿದಂತೆ ಪಿರ್ಯಾದುದಾರರು ಕೂಡಲೇ ಸ್ಥಳಕ್ಕೆ ಹೋಗಿ ನೋಡಿದಾಗ ರೂಮ್ ನ ಬಾಗಿಲು ತೆರೆದಿದ್ದು ಒಳಗಿದ್ದ (1) ವಾಟರ್ ಪಂಪ್ -2 , (2) ಕಟ್ಟಿಂಗ್ ಮಿಶನ್ (ಟೈಲ್ಸ್ ಮತ್ತು ಟೂಲ್ಸ್) -3, (3) ಪೈಂಟ್ ಕ್ಯಾನ್ (4) ಸಿಮೆಂಟ್ ಬ್ಯಾಗ್ಸ್, (5) ಕೇಬಲ್ ,ಈ ಮೇಲಿನ ಸಾಮಾಗ್ರಿಗಳು ಕಳವಾಗಿದ್ದು, ಅಂದಾಜು ಮೌಲ್ಯ ಸುಮಾರು 65,000/- ವಾಗಿದ್ದು ನಿನ್ನೆ ರಾತ್ರಿಯಿಂದ ಈ ದಿನ ಬೆಳಗಿನ ಜಾವ 09:00 ಗಂಟೆ ಮಧ್ಯ ಯಾರೋ ಕಳ್ಳರು ಕಳವು ಮಾಡಿರುವುದಾಗಿದೆ ಎಂಬಿತ್ಯಾದಿ.

Traffic North Police Station                               

ಪಿರ್ಯಾದಿ Lakshman Devadiga ದಾರರು ದಿನಾಂಕ 14-11-2023 ರಂದು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-ED-7259 ರಲ್ಲಿ ಮನೆಗೆ ಬೇಕಾದ ಜಿನಸು ಸಾಮಾಗ್ರಿಗಳನ್ನು ತರುವ ಸಲುವಾಗಿ ಹಳೆಯಂಗಡಿ ಜಂಕ್ಷನ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಾಯಂಕಾಲ ಸಮಯ ಸುಮಾರು 6:45 ಗಂಟೆಗೆ ಹಳೆಯಂಗಡಿ ಜಂಕ್ಷನ್ ಸಮೀಪ ಇರುವ ಬಸ್ ಸ್ಟಾಪ್ ಕಟ್ಟಡದ ಎದುರಿನಲ್ಲಿ ಹೋಗುತ್ತಿದ್ದಂತೆ ಹಿಂದಿನಿಂದ ಅಂದರೆ ಪಾವಂಜೆ ಜಂಕ್ಷನ್ ಕಡೆಯಿಂದ ಶ್ರೀನಿವಾಸ ಕಾಲೇಜಿಗೆ ಸಂಬಂಧಿಸಿದ KA-19-C-4762 ನಂಬ್ರದ ಬಸ್ಸನ್ನು ಅದರ ಚಾಲಕನು ಹಳೆಯಂಗಡಿ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿನ ಹಿಂಭಾಗಕ್ಕೆ ಢಿಕ್ಕಿ ಪಡಿಸಿಕೊಂಡು  ಅಪಘಾತ ಸ್ಥಳದ ಬಳಿ ತನ್ನ ವಾಹನವನ್ನು ನಿಲ್ಲಿಸದೇ ವಾಹನ ಸಮೇತ ಅಲ್ಲಿಂದ ಹೋಗಿರುತ್ತಾನೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ರಾಷ್ಟ್ರೀಯ ಹೆದ್ದಾರಿ 66ನೇ ಡಾಮಾರು ರಸ್ತೆಗೆ ಬಿದ್ದು, ಅವರ ಕುತ್ತಿಗೆಯ ಹಿಂಭಾಗ, ಬೆನ್ನಿನ ಮೇಲಿನ  ಭಾಗದಲ್ಲಿ ಗುದ್ದಿದ ರೀತಿಯ ಒಳವಾಗಿದ್ದು ಗಾಯಾಳು ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಮುಕ್ಕಾದ ಶ್ರೀನಿವಾಸ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 15-11-2023 03:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080