ಅಭಿಪ್ರಾಯ / ಸಲಹೆಗಳು

Crime Report in : Bajpe PS

ಸಂತೋಷ್ ಬೊಳಿಯ, ತಂದೆ: ಗಂಗಯ್ಯ ಪೂಜಾರಿ ಬೊಳಿಯ ಎಂಬವರು ಮುತ್ತೂರು ಗ್ರಾಮ ಪಂಚಾಯತಿನ ಉಪಾಧ್ಯಕ್ಷೆ ಶ್ರೀಮತಿ ಸುಷ್ಮಾ ರವರ ಗಂಡನಾಗಿದ್ದು, ಮೊನ್ನೆ ಸೋಮವಾರ ಸಂಜೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಶ್ರೀ ನಾರಾಯಣ ಗುರು ಯುವ ವೇದಿಕೆ ಗ್ರೂಪಿನಲ್ಲಿ ವೈರಲ್ ಮಾಡಿರುವುದು ಅಷ್ಟೆ ಅಲ್ಲದೇ ಮಾಜಿ ಅಧ್ಯಕ್ಷಕರಾದ ಶ್ರೀ ಸತೀಶ್ ಪೂಜಾರಿ ಬಲ್ಲಾಜೆ ಯವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವರು ಆದುದರಿಂದ  ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿಯೂ ಹಾಗೂ ಈ ವ್ಯಕ್ರಿಯು ಮುಖ್ಯಮಂತ್ರಿ ಹಾಗು ಉಪಮುಖ್ಯಮಂತ್ರಿಯವರಿಗೆ ಕಳ್ಳರು, ನಾಯಿಗೆ ಹುಟ್ಟಿದವರು, ನಾಯಿದ ಬಾಲೆಲು ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದಿರುವುದು. ಆ ವ್ಯಕ್ತಿಯು ತನ್ನ ಹೆಂಡತಿ ಉಪಾಧ್ಯಕ್ಷೆ ಎಂಬ ಅಹಂ ನಿಂದ ಮುತ್ತೂರು ಗ್ರಾಮ ಪಂಚಾಯತಿನಲ್ಲಿಯೂ ಬಂದು ಫೈಲುಗಳನ್ನು ನೋಡುವುದು, ಅಧಿಕಾರಿಗಳಿಗೆ ಬೇಕಾಬಿಟ್ಟಿ ಆದೇಶ ನೀಡುವುದು ಮಾಡುತ್ತಿರುತ್ತಾನೆ. ಆ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿಯಾಗಿ ನೀಡಿದ ದೂರಿನಂತೆ ಸದ್ರಿ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬುದಾಗಿ ಸಾರಾಂಶ. 

Ullal PS

ದಿನಾಂಕ 13/12/2023 ರಂದು ರಾತ್ರಿ ಸುಮಾರು 11-30 ಗಂಟೆಯ ಸಮಯಕ್ಕೆ ಮಾನ್ಯ ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಒಳಪಟ್ಟ ಉಳ್ಳಾಲ ಪೊಲೀಸ್ ಠಾಣಾ ಸರಹದ್ದಿನ ಸೋಮೇಶ್ವರ ಗ್ರಾಮದ ಜಾಯ್ ಲ್ಯಾಂಡ್ ಶಾಲೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳಾದ ಸೂರಜ್ ಮತ್ತು ರವಿರಾಜ್ ಎಂಬವರು ತಮ್ಮ ದ್ವಿಚಕ್ರ ವಾಹನ ನಂಬ್ರ KA-19-HG-4550 ಮತ್ತು KA-19-HJ-3018 ನೇದರಲ್ಲಿ ಕುಳಿತುಕೊಂಡು ಬಳಿಯಲ್ಲಿಯೇ ಇದ್ದ ಪಿರ್ಯಾದಿ Sharan ದಾರರ ಅಣ್ಣ ವರುಣ್ ಗಟ್ಟಿ ಮತ್ತು ಅಕ್ಷಯ್ ರವರನ್ನು ಉದ್ದೇಶಿಸಿ  “ ಏನು ಬೇವರ್ಸಿಗಳೇ ನಿಮಗೆ ಬಾರಿ ಅಹಂಕಾರ ಉಂಟಾ ” ಎಂದು ಉಡಾಫೆ ಮಾತನಾಡಿ ವರುಣ್ ಗಟ್ಟಿ ಮತ್ತು ಅಕ್ಷಯ್ ರವರನ್ನು ತಡೆದು ನಿಲ್ಲಿಸಿ ಆರೋಪಿಗಳು ವರುಣ್ ಗಟ್ಟಿಯನ್ನು ಉದ್ದೇಶಿಸಿ ರಂಡೆ ಮಗ ಇಲ್ಲಿಯೇ ಕೊಂದು ಹಾಕುತ್ತೇವೆ ಎಂದು ಹೇಳಿ ಆರೋಪಿಗಳು ವರುಣ್ ಗಟ್ಟಿಯನ್ನು ಕೊಲೆಮಾಡಬೇಕೆನ್ನುವ ಉದ್ದೇಶದಿಂದಲೇ ಆರೋಪಿ ಸೂರಜ್ ನು ಆತನ ಪ್ಯಾಂಟಿನ ಕಿಸೆಯಲ್ಲಿ ಇರಿಸಿಕೊಂಡಿದ್ದ ಚೂರಿಯಿಂದ ವರುಣ್ ಗಟ್ಟಿಯ ಎಡ ಭಾಗದ ಪಕ್ಕೆಗೆ ಎರಡು ಬಾರಿ ಹಾಗೂ ಎದೆಗೆ ಒಂದು ಭಾರಿ ಚುಚ್ಚಿ ಗಂಭೀರ ಸ್ವರೂಪದ ರಕ್ತಗಾಯವನ್ನುಂಟುಮಾಡಿ ಸ್ಕೂಟರ್ ನಲ್ಲಿ ಪರಾರಿಯಾಗಿದ್ದು, ಗಾಯಾಳು ವರುಣ್ ಗಟ್ಟಿ (29) ರವರು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 14/12/2023 ರಂದು ಮುಂಜಾನೆ 2-26 ಗಂಟೆಯ ಸಮಯಕ್ಕೆ ಮೃತಪಟ್ಟಿರುವುದಾಗಿ ಆರೋಪಿಗಳು ವರುಣ್ ಗಟ್ಟಿ ರವರ ಮೇಲೆ ಇರುವ ಹಳೇ ದ್ವೇಷದ ಕಾರಣದಿಂದ ಕೊಲೆ ಮಾಡಿರುವುದಾಗಿದೆ ಎಂಬಿತ್ಯಾದಿ ಪಿರ್ಯಾದಿದಾರರ ಲಿಖಿತ ದೂರಿನ ಸಾರಾಂಶ.

Mangalore South PS

ಪಿರ್ಯಾದಿದಾರರಾದ ಗಣೇಶ್.ಎಂ ಪ್ರಾಯ: 44 ವರ್ಷ ಎಂಬವರು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯ ಹೆಚ್.ಆರ್ ಎಕ್ಷಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 04-12-2023 ರಂದು ಮಂಗಳೂರು ನಗರದ ಉಳ್ಳಾಲ ಮುಕ್ಕಚ್ಚೇರಿಯ ನೌಫಾಲ್ (25 ವರ್ಷ) ಎಂಬವರನ್ನು ಅವರ ಸಂಬಂಧಿಕರು ಚಿಕಿತ್ಸೆ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದ ನೌಫಾಲ್ ರವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 05-12-2023 ರಂದು ಮುಂಜಾನೆ 2-20 ಗಂಟೆಗೆ ಮೃತಪಟ್ಟಿರುತ್ತಾರೆ. ಈ ವಿಚಾರದಲ್ಲಿ ಮೃತ ನೌಫಾಲ್ ರವರ ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿಯವರ ಜೊತೆ ಮಾತುಕತೆ ನಡೆಸುವ ಸಮಯ ದಿನಾಂಕ 05-12-2023 ರಂದು ಮುಂಜಾನೆ 2-25 ಗಂಟೆಗೆ ಆ ಗುಂಪಿನಲ್ಲಿದ್ದ ಮುಕ್ಕಚ್ಚೇರಿ ನಿವಾಸಿ ಆರೋಪಿ ಅಬ್ದುಲ್ ಜಬ್ಬರ್ ಎಂಬಾತನು ಆಸ್ಪತ್ರೆಯ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಆಸ್ಪತ್ರೆಯ ರಿಸೆಪ್ಷನ್ ಕಚೇರಿಗೆ ಅಳವಡಿಸಿದ ಗಾಜಿಗೆ ಹೊಡೆದು ಗಾಜನ್ನು ಒಡೆದು ಹಾಕಿ ಆಸ್ಪತ್ರೆಗೆ ಸುಮಾರು 15,000/- ರಷ್ಟು ನಷ್ಟ ಉಂಟು ಮಾಡಿರುತ್ತಾನೆ ಎಂಬಿತ್ಯಾದಿಯಾಗಿರುತ್ತದೆ.

Mangalore South PS

ಪಿರ್ಯಾದಿದಾರರಾದ ಅಸ್ತರ್ ಆಲಿ ರವರಲ್ಲಿ ಆರೋಪಿ ಮೊಹಮ್ಮದ್ ಶಮ್ಲಾನ್ ಆಲಿ ರವರು 3,00,000/- ರೂಪಾಯಿ ಕೊಟ್ಟಲ್ಲಿ ಜಿದ್ದಾದಲ್ಲಿ ಲೈನ್ ಸೇಲ್ ಸಂಸ್ಥೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಸಂಬಂಳ ಸಿಗುವ ಕೆಲಸ ಕೊಡಿಸುವುದಾಗಿಯೂ ಮತ್ತು ವೀಸಾ ಹಾಗೂ ಟಿಕೇಟು ಕಳುಹಿಸುವುದಾಗಿಯೂ ಆಮಿಷ ಒಡ್ಡಿರುತ್ತಾರೆ. ಪಿರ್ಯಾದಿದಾರರು ಆರೋಪಿಯ ಮಾತನ್ನು ನಂಬಿ ಚಿನ್ನಾಭರಣಗಳನ್ನು ಮಾರಿ ದಿನಾಂಕ : 09-08-2023 ರಂದು 2,00,000/- ರೂಪಾಯಿ ಹಣವನ್ನು ಆರೋಪಿಗೆ ನೀಡಿರುತ್ತಾರೆ. ಆ ಬಳಿಕ ಆರೋಪಿ ಮೊಹಮ್ಮದ್ ಶಮ್ಲಾನ್ ಆಲಿ ಜಿದಾಗೆ ಹೋಗಿ ಪುನಃ 1 ಲಕ್ಷರೂಪಾಯಿ ಕೊಡಬೇಕೆಂದು ಹೇಳಿದ್ದರಿಂದ ಪಿರ್ಯಾದಿದಾರರು ಬಜಾಜ್ ಫೈನಾನ್ಸ್ ನಿಂದ ಸಾಲ ಪಡೆದು ಆರೋಪಿ ಮೊಹಮ್ಮದ್ ಶಮ್ಲಾನ್ ಆಲಿ ರವರಿಗೆ ಕೊಟ್ಟಿರುತ್ತಾರೆ. ಸುಮಾರು 1 ತಿಂಗಳಾದರೂ ಆರೋಪಿಯು ಟಿಕೇಟ್ ಮತ್ತು ವೀಸಾ ಕಳುಹಿಸದೇ ಇದ್ದುದ್ದರಿಂದ ಪಿರ್ಯಾದಿದಾರರು ಫೋನ್ ಮಾಡಿದಾಗ ಆರೋಪಿಯು ಪಿರ್ಯಾದಿದಾರರಿಗೆ ರಿಯಾದ್ ಗೆ ಬರುವಂತೆ ತಿಳಿಸಿದಂತೆ ಪಿರ್ಯಾದಿದಾರರು ದಿನಾಂಕ : 12-09-2023 ರಂದು 20,300/- ಖರ್ಚು ಮಾಡಿ ಜಿದಾಗೆ ಹೋಗಿರುತ್ತಾರೆ. ಆರೋಪಿ ಅಲ್ಲಿ ಕೂಡಾ ಪಿರ್ಯಾದಿದಾರರಿಗೆ ಕೆಲಸವನ್ನು ಕೊಡಿಸದೇ ಪಿರ್ಯಾದಿದಾರರನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು, ರೂಮಿನಿಂದ ಹೊರಗೆ ಹೋದರೆ 10 ವರ್ಷ ಜೈಲಿಗೆ ಕಳುಹಿಸುತ್ತೇನೆಂದು ಬೆದರಿಕೆ ಹಾಕಿರುತ್ತಾರೆ. ಆ ಬಳಿಕ ಪಿರ್ಯಾದಿದಾರರು ಆರೋಪಿಯನ್ನು ತನ್ನನ್ನು ವಾಪಾಸು ಕಳುಹಿಸುವಂತೆ ಕೇಳಿಕೊಂಡಾಗ, ಆರೋಪಿಯು 80,000/- ರೂ ಕೊಡುವಂತೆ ತಿಳಿಸಿದ್ದು, ಈ ಸಮಯ ಪಿರ್ಯಾದಿದಾರರ ತಂದೆ ಇಬ್ರಾಹಿಂ ಆಲಿ ಹಾಗೂ ಪಿರ್ಯಾದಿದಾರರ ಹೆಂಡತಿ ಮಿಸ್ರಿಯಾ ರವರು ಸಾಲ ಮಾಡಿ 69,000/- ಹಣವನ್ನು ಆರೋಪಿ ಮೊಹಮ್ಮದ್ ಶಮ್ಲಾನ್ ಆಲಿ ತಿಳಿಸಿದಂತೆ ರಫೀದಾ ಎಂಬವರಿಗೆ ಗೂಗಲ್-ಪೇ ಮಾಡಿ, ಉಳಿದ ಹಣವನ್ನು ನಗದಾಗಿ ನೀಡಿರುತ್ತಾರೆ. ಆ ಬಳಿಕ ಆರೋಪಿಯು ಪಿರ್ಯಾದಿದಾರರನ್ನು ರಿಯಾದ್ ನಿಂದ ಹೋಗಲು ಬಿಟ್ಟಿರುತ್ತಾರೆ. ಆರೋಪಿಯು ಪಿರ್ಯಾದಿದಾರರಿಗೆ ರಿಯಾದ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಹಣ ಪಡೆದು ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ ನಂಬಿಕೆ ದ್ರೋಹ ಮಾಡಿರುವುದಾಗಿ ಎಂಬಿತ್ಯಾದಿಯಾಗಿರುತ್ತದೆ.

Kankanady Town PS

ದಿನಾಂಕ 14-12-2023 ರಂದು   ಮಹಮ್ಮದ್ ಯೂನುಸ್,  ಎಂಬಾತನು ಮಂಗಳೂರು ನಗರದ ಕೊಡಕ್ಕಲ್ ಜಂಕ್ಷನ್ ಬಳಿ ಮಾದಕ ವಸ್ತು ಗಾಂಜಾವನ್ನು  ಸೇವನೆ ಮಾಡುತ್ತಿರುವವನನ್ನು ಮದ್ಯಾಹ್ನ 11-40 ಗಂಟೆಗೆ ವಶಕ್ಕೆ ಪಡೆದುಕೊಂಡು ಮಂಗಳೂರು ಎಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ, ಆರೋಪಿಯು ಮಾದಕ ವಸ್ತು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ ವಿರುದ್ದ  ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

 

ಇತ್ತೀಚಿನ ನವೀಕರಣ​ : 15-12-2023 05:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080