ಅಭಿಪ್ರಾಯ / ಸಲಹೆಗಳು

Crime Report in :   CEN Crime PS     

ದಿನಾಂಕ 15-01-2023 ರಂದು ಸೆನ್ ಕ್ರೈಂ ಪೊಲೀಸ್ ಉಪ ನಿರೀಕ್ಷಕರಾದ ಮೋಹನ್ ರವರಿಗೆ ಬಂದ ಮಾಹಿತಿಯಂತೆ ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆ ಬಳಿ  ಒಬ್ಬಾತನು ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ನೆಲ್ಲಿಕಾಯಿ ರಸ್ತೆ ಬಳಿ ನಡೆದಾಡುವ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ತಿಳಿಸಿದ್ದು ಮಾಹಿತಿ ಬಂದ ಸ್ಥಳವಾದ ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆ ಬಳಿ 15-00 ಗಂಟೆಗೆ ಹೋದಾಗ ಒಬ್ಬಾತನು ಯಾವುದೋ ಅಮಲು ವಸ್ತುವನ್ನು ಸೇವನೆ ಮಾಡಿದಂತೆ ಕಂಡುಬಂದಿದ್ದು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ರಾಕೇಶ(20)ವರ್ಷ ವಾಸ: ನಂಬರ್  ಈಸ್ಟ್ ಸ್ರ್ಟೀಟ್ ಶ್ರೀಕಾಲಿ,ಕೂಲಯ್ಯಾರ್ ಮಯಿಲಾಡುತುರೈ,ತಮಿಳುನಾಡು ಎಂಬುದಾಗಿ ತಿಳಿಸಿದ್ದು, ಆತನನ್ನು  ವಶಕ್ಕೆ ಪಡೆದು ಕುಂಟಿಕಾನದಲ್ಲಿರುವ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಾಧಿಕಾರಿಯವರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತನು  ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ನೀಡಿದ ವೈದ್ಯಕೀಯ ಧೃಢಪತ್ರದೊಂದಿಗೆ ಠಾಣೆಗೆ ತಂದು ಆರೋಪಿತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Traffic North Police Station               

ಪಿರ್ಯಾದಿ Smt. Anjana ದಾರರು ಈ ದಿನಾಂಕ 15-01-2024 ರಂದು ತನ್ನ ಅತ್ತೆ ಈರಮ್ಮ (67 ವರ್ಷ) ರವರನ್ನು ಸುರತ್ಕಲ್ ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇದ್ದುದರಿಂದ  ದುರ್ಗಾದಯಾ ಹೋಟೇಲ್ ಸ್ಟಾಪ್ ಬಳಿ ಸುರತ್ಕಲಿಗೆ ಹೋಗುವ KA-19-AA-2519 ನಂಬ್ರದ ಸೈಂಟ್ ಜೋಸೆಪ್ ಬಸ್ಸಿಗೆ ಎದುರು ಬಾಗಿಲಿನಲ್ಲಿ ಹತ್ತಿ ಬಸ್ಸಿನ ಎದುರು ಎಡಬಾಗದಲ್ಲಿ ಬಾಗಿಲ ಬಳಿಯ 1 ನೇ ಸೀಟಿನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಾ ಬೆಳಿಗ್ಗೆ ಸಮಯ ಸುಮಾರು 10:10 ಗಂಟೆಗೆ ಜೋಕಟ್ಟೆ ಕ್ರಾಸ್ ಬಳಿಯ ಗೋಪಾಲಕೃಷ್ಣ ಕ್ರೈನ್ ಸರ್ವೀಸ್ ಸೆಂಟರಿನ ಬಳಿ ತಲುಪಿದಾಗ ಬಸ್ಸನ್ನು ಅದರ  ಚಾಲಕ ಅನಿಲ್ ಜಾನ್ ಲೋಬೋ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿ ತಿರುವಿನಲ್ಲಿ ಬಸ್ಸಿಗೆ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಬಾಗಿಲ ಬಳಿ ಸೀಟಿನಲ್ಲಿ ಕುಳಿತಿದ್ದ ಈರಮ್ಮ ರವರು ಹತೋಟಿ ತಪ್ಪಿ ಬಸ್ಸಿನ ಎದುರಿನ ಬಾಗಿಲಿನ ಮುಖೇನಾ ಡಾಮಾರು ರಸ್ತೆಗೆ ಬಿದ್ದು, ಬಸ್ಸಿನ ಹಿಂಬದಿಯ ಎಡಭಾಗದ ಚಕ್ರವು ಅವರ ತಲೆ ಹಾಗೂ ಮುಖದ ಮೇಲೆ ಚಕ್ರ ಹರಿದು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿ.

Traffic North Police Station               

ದಿನಾಂಕ 15-01-2024 ರಂದು ಸಂಜೆ 3:20 ಗಂಟೆಗೆ  ಪಣಂಬೂರು NMPA ಒಳಗಡೆ ಭರ್ತ್ ನಂಬ್ರ 2ರಲ್ಲಿ KA-19-AD-7151 ನಂಬ್ರದ ಟಿಪ್ಪರನ್ನು ಅದರ ಚಾಲಕ ರಾಜ ಎಂಬಾತನು ಭರ್ತ್ ಬಳಿಗೆ ಚಲಾಯಿಸಿಕೊಂಡು ಬಂದು ಮೈನ್ಸ್ ಅನ್ನು ಅನ್ ಲೋಡ್ ಮಾಡುವರೇ ಟಿಪ್ಪರ್ ಲಾರಿಯನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಹಿಂದಕ್ಕೆ ಚಲಾಯಿಸಿ ಭರ್ತ್ ನಂಬ್ರ 2 ರಲ್ಲಿ ಸಿಗ್ನಲ್ ಕೊಡುವ ( ವಾರ್ಫ್ ಕೀಪರ್ ) ಕೆಲಸ ಮಾಡಿಕೊಂಡಿದ್ದ ಶಿವಮೂರ್ತಿ ಎಂಬವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಶಿವಮೂರ್ತಿ ರವರು ಲಾರಿಯ ಅಡಿಗೆ ಬಿದ್ದು ಲಾರಿ ಬಲಬದಿಯ ಹಿಂಬದಿ ಚಕ್ರವು ಶಿವಮೂರ್ತಿರವರ ದೇಹದ ಮೇಲೆ ಹರಿದು ದೇಹವು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಎಂಬಿತ್ಯಾದಿ.

Traffic South Police Station                      

ದಿನಾಂಕ-14-01-2024 ರಂದು ದೇರಳಕಟ್ಟೆಯ ಬಳಿ ಇರುವ ಗುಡ್ಡೆಮಾರ್ ನಲ್ಲಿರುವ ಸಂಬಂಧಿಕರ ಮನೆಗೆ ಹೊಗಿದ್ದು, ವಾಪಸ್ಸು  ಮನೆಗೆ ಹೋಗಲು ಗೇಟ್  ಹೊರಗಡೆ ರಸ್ತೆಯಲ್ಲಿ ಪಿರ್ಯಾದು AVVAMMA  L ದಾರರ ಮೈದುನ ಶರೀಫ್ ರವರ ಕಾರಿಗಾಗಿ ಕಾಯುತ್ತಿರುವ  ಸಮಯ ಸುಮಾರು 14-00 ಗಂಟೆಗೆ KA 19 MD 6769 ನೇ ನಂಬ್ರದ ಒಮಿನಿ ಕಾರ್ ನ್ನು ಅದರ ಚಾಲಕ ಮುಸ್ತಫಾ ಎಂಬುವರು ಮನೆಯ ಕಂಪೌಂಡ್ ಒಳಗೆ ಕಾರನ್ನುನಿರ್ಲಕ್ಷತನದಿಂದ ನ್ಯೂಟ್ರಲ್ ನಲ್ಲಿ ನಿಲ್ಲಿಸಿದ್ದ ಸಮಯ ಕಾರು ಹಿಂದಕ್ಕೆ ತನ್ನಿಂದ ತಾನೆ ಚಲಿಸಿ ಗೇಟ್  ಹೊರಗಡೆ ರಸ್ತೆಯಲ್ಲಿ ಕಾರಿಗಾಗಿ ಕಾಯುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿಯಾದುದರಿಂದ ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಮೋನಪ್ಪ ಭಂಡಾರಿ ರವರ ಮನೆಯ ಹಿತ್ತಲಿನ ತಗ್ಗು ಪ್ರದೇಶಕ್ಕೆ ಪಿರ್ಯಾದಿದಾರರು ಹಾಗೂ ಕಾರು ಸಮೇತ ಬಿದ್ದಿದ್ದು, ಇದರ ಪರಿಣಾಮ ಪಿರ್ಯಾದಿದಾರರ ಎಡಕಾಲು  ಕಾರಿನಡಿಯಲ್ಲಿ ಸಿಲುಕಿ ಎಡಕಾಲಿನ ಮೊಣಗಂಟಿಗೆ ಗುದ್ದಿದ ರಕ್ತ ಗಾಯ,ಎಡ ತೊಡೆಗೆ ಮೂಳೆ ಮುರಿತದ ಗಾಯ, ಮತ್ತು ಮುಖಕ್ಕೆ ತೆರಚಿದ ಗಾಯಗಳಾಗಿದ್ದು ಅಲ್ಲಿಯೇ ಇದ್ದ  ಅವರ ಸಂಬಧಿಕರು ಹಾಗೂ ಸದ್ರಿ ಹಿತ್ತಲಿನ ಮೊನಪ್ಪ ಭಂಡಾರಿ ಮತ್ತು ಕಾರು ಚಾಲಕರು ಉಪಚರಿಸಿ ಕೆ,ಎಸ್ ಹೆಗ್ಡೆ  ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಕಂಕನಾಡಿಯ ಯೆನಪೋಯ ನರ್ಸಿಂಗ್ ಹೋಂ ನಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಅಪಘಾತದ ಬಗ್ಗೆ ಸಂಬಂಧಿರಲ್ಲಿ ವಿಚಾರಿಸಿ ಈ ದಿನ ತಡವಾಗಿ ದೂರು ನಿಡಿರುವುದಾಗಿದೆ  ಎಂಬಿತ್ಯಾದಿ

Panambur PS   

ದಿನಾಂಕ 14-01-2024ರಂದು ಸಮಯ ಸಂಜೆ 4-00 ಗಂಟೆಗೆ ಫಿರ್ಯಾದಿ Sharmila ದಾರರ ತಂದೆಯಾದ ರಾಮೋಜಿ ರಾವ್ (63)ರವರು  ಮನೆಯಿಂದ ವಾಕಿಂಗ್ ಎಂದು ಹೊರಗೆ ಹೋದವರು ವಾಪಾಸು ಬಂದಿರುವುದಿಲ್ಲ, ಫಿರ್ಯಾದಿದಾರರ ತಂದೆ MND ರೋಗಿ ಆಗಿದ್ದು ಅವರಿಗೆ ಮಾನಸಿಕ ಕಾಯಿಲೆ ಇದ್ದು ಇವರ ಕೈ ಕಾಲುಗಳು ಬೇಗ ಕೆಲಸ ಮಾಡುತ್ತರಲಿಲ್ಲ. ಹಾಗೂ ಅವರಿಗೆ ಮಾತು ಬರುತ್ತಿರಲಿಲ್ಲ, ಫಿರ್ಯಾದಿದಾರರು ನೆರೆ ಕೆರೆ ಮತ್ತು ರಕ್ತ ಸಂಬಂದಿಕರಲ್ಲಿ ಹುಡುಕಾಡಿದಲ್ಲಿ ಈ ವರೆಗೆ ಪತ್ತೆಯಾಗಿರುವುದಿಲ್ಲ, ಫಿರ್ಯಾದಿದಾರರು ಈ ದಿನ ಠಾಣೆಗೆ ಬಂದು ಅವರ ತಂದೆಯವರನ್ನು ಪತ್ತೆ ಮಾಡಿಕೊಡಬೇಕಾಗಿ  ಕೋರಿಕೆ

Konaje PS

ಪಿರ್ಯಾದಿ Sundari ದಾರರ ಮಗನಾದ ಗಣೇಶ್ ಪ್ರಾಯ 37 ವರ್ಷ, ಎಂಬುವರು ದಿನಾಂಕ 14-01-2024 ರಂದು ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಹತ್ತಿರದ ಸಂತೋಷ್ ಕುಮಾರ್ ಬೊಳಿಯಾರ್ ರವರ ತೋಟಕ್ಕೆ ಹೋಗಿದ್ದು. ಪಿರ್ಯಾದಿದಾರರು ಮಧ್ಯಾಹ್ನ ಸುಮಾರು 15.00 ಗಂಟೆಗೆ ತೊಟದ ಬಳಿ ಹೋಗಿ ನೊಡಿದಾಗ ಮಗನು ತೋಟದಲ್ಲಿ ಸಿಗದೇ ನಾಪತ್ತೆಯಾಗಿದ್ದು, ನಂತರ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ಪತ್ತೆಯಾಗದೆ ಇದ್ದು ಹಾಗು ಈವರೆಗೂ ಆತನು ಮನೆಗೆ ಬಾರದೇ ಕಾಣೆಯಾದ ಪಿರ್ಯಾದದಾರರ ಮಗ ಗಣೇಶ್ ರವರನ್ನು ಪತ್ತೆಮಾಡಿ ಕೊಡುವರೇ ಎಂಬಿತ್ಯಾದಿ

Ullal PS       

ಪಿರ್ಯಾದಿ ಧನರಾಜ್  – ಪಿ.ಎಸ್.ಐ ಉಳ್ಳಾಲ ಪೊಲೀಸ್ ಠಾಣೆ ರವರು ಮಂಗಳೂರು ದಕ್ಷಿಣ ಉಪ ವಿಭಾಗದ Anti-Drug Team ನ ಸಿಬ್ಬಂದಿಯವರೊಂದಿಗೆ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು, ತೊಕ್ಕೊಟ್ಟು ಜಂಕ್ಷನ್ ಬಳಿ ಇದ್ದ ಸಮಯ ಸಂಜೆ 4-00 ಗಂಟೆಗೆ ಪೆರ್ಮನ್ನೂರು ಗ್ರಾಮದ ಕಲ್ಲಾಫು ಯುನಿಟಿ ಹಾಲ್ ಹತ್ತಿರದ ಮೈದಾನದಲ್ಲಿ  ವ್ಯಕ್ತಿಯೊಬ್ಬ ನಿಷೇದಿತ ಮಾದಕ ವಸ್ತುವಾದ METHAMPHETAMINE ಹರಳುಗಳನ್ನ ಎಲ್ಲಿಂದಲೋ ಖರೀದಿ ಮಾಡಿ, ಅಕ್ರಮವಾಗಿ ವಶದಲ್ಲಿರಿಸಿಕೊಂಡು ಸಾಗಾಟ ಮಾಡಿಕೊಂಡು ಬಂದು ಸದ್ರಿ ಪರಿಸರದಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿ ಸಿಯಾಮು ಪ್ರಾಯ 26 ವರ್ಷ ತಂದೆ ದಿ| ಮುಸ್ತಫ. ವಾಸ : 3-192, ಬಿ.ಕೆ.ಕಾಟೇಜ್, ಚೆಂಬುಗುಡ್ಡೆ, ಪೆರ್ಮನ್ನೂರು ಗ್ರಾಮ, ಉಳ್ಳಾಲ ತಾಲೂಕು, ಮಂಗಳೂರು, ಕೂಲಿ ಕೆಲಸ ಎಂಬಾತನನ್ನು ವಶಕ್ಕೆ ಪಡೆದು, ಆರೋಪಿಯಲ್ಲಿ ನಿಷೇದಿತ ಮಾದಕ ವಸ್ತು METHAMPHETAMINE ಇರುವ ಬಗ್ಗೆ ಖಚಿತಪಡಿಸಿಕೊಂಡು ಸುಮಾರು 1.05 ಗ್ರಾಂ ತೂಕದ ಬಿಳಿ ಬಣ್ಣದ ಹರಳುನಂತಿರುವ METHAMPHETAMINE ಮಾದಕ ವಸ್ತು ಇರುವ ಝಿಪ್ ಲಾಕ್ ಪ್ಲಾಸ್ಟಿಕ್ ಪ್ಯಾಕೆಟ್ -1, ಅಂದಾಜು ಮೌಲ್ಯ : ರೂ : 2,000/-, (2) ಸಣ್ಣ ಸಣ್ಣ ಟ್ರಾನ್ಸ್ಫರೆಂಟ್ ಝಿಪ್ ಲಾಕ್ ಪ್ಲಾಸ್ಟೀಕ್ ಕವರ್‌ಗಳು – 05 ನೇ ಸೊತ್ತುಗಳನ್ನು ಸ್ವಾದೀನ ಪಡಿಸಿ ಆರೋಪಿ ವಿರುದ್ದ ಪ್ರಕರಣ ದಾಖಲಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Konaje PS

ದಿನಾಂಕ:15-01-2023 ರಂದು  ಸಂಜೆ 16.30 ಗಂಟೆಗೆ ಉಳ್ಳಾಲ ತಾಲೂಕು ಬೋಳಿಯಾರ್ ಗ್ರಾಮದ ರಂತಡ್ಕ ಕ್ರಾಸ್ ಗೋಳಿದಡಿ ಮೈದಾನದ  ಬಳಿ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ 1)ಚರಣ್ ರಾಜ್, ಪ್ರಾಯ: 24 ವರ್ಷ, ವಾಸ: ಕುಡು ಮುನ್ನೂರು ಬಂಟ್ವಾಳ ತಾಲೂಕು. 2) ಜೀವನ್, ಪ್ರಾಯ: 24 ವರ್ಷ,  ವಾಸ: ಪೆರ್ವ, ಸಜಿಪ, ಮೂಡ ಬಂಟ್ವಾಳ ತಾಲೂಕು ಎಂಬವರನ್ನು  ವಶಕ್ಕೆ ಪಡೆದುಕೊಂಡು ಮಂಗಳೂರು ಕಣಚೂರು ಆಸ್ಪತ್ರೆಯ  ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿ ಚರಣ್ ರಾಜ್ ಎಂಬಾತನು BENZODIANZEPINES(BZO) ಎಂಬ ಮಾದಕ ವಸ್ತುವನ್ನು ಜೀವನ್ ಎಂಬಾತನು MARIJUANA(THC),METHAMPHETAMINE(MET), BENZODIANZEPINES(BZO) TETRAHYDROCANNABINOL ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದಾಗಿ ನೀಡಿದ ವರದಿ ಮೇರೆಗೆ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 16-01-2024 05:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080