Feedback / Suggestions

Traffic North Police Station                               

ದಿನಾಂಕ 16-02-2023 ರಂದು ಪಿರ್ಯಾದಿದಾರರ Dayananda ಅತ್ತೆಯಾದ ಶ್ರೀಮತಿ ಗೀತಾ (74 ವರ್ಷ ) ರವರು ಆಕಾಶಭವನದ ಆನಂದನಗರ ಸರ್ಕಲ್ ಸಮೀಪ ಇರುವ ಭಂಡಾರಿ ಟವರ್ಸ್ ಕಟ್ಟಡದ ಎದುರು ಬೆಳಿಗ್ಗೆ ಸಮಯ ಸುಮಾರು 07:00 ಗಂಟೆಗೆ  ರಸ್ತೆದಾಟುತ್ತಿದ್ದಂತೆ KA-20-AB-3346  ನಂಬ್ರದ ಗೋಲ್ಡನ್  ಟ್ರಾವೆಲ್ಸ್ ಎಂಬ ಹೆಸರಿನ ಪಿಂಕ್  ಬಣ್ಣದ ಬಸ್ಸನ್ನು ಅದರ ಚಾಲಕನಾದ Vaneesh ಎಂಬಾತನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ  ಆಕಾಶಭವನ ಮುಖ್ಯ ರಸ್ತೆಯಲ್ಲಿ 4ನೇ ಮೈಲು ಕಡೆಯಿಂದ ಆನಂದನಗರ ಸರ್ಕಲ್ ಕಡೆಗೆ ರಸ್ತೆಯಲ್ಲಿ ಹಂಪ್ಸ್ ಇರುವ ಜಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಶ್ರೀಮತಿ ಗೀತಾ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಗೀತಾರವರು ಡಾಮಾರು ರಸ್ತೆಯಲ್ಲಿ ಬಿದ್ದ ವೇಳೆ ಬಸ್ಸಿನ ಎದುರಿನ ಬಲ ಬದಿಯ ಚಕ್ರದಡಿಗೆ ಸಿಲುಕಿ ಬಸ್ಸು ಮುಂದಕ್ಕೆ ಚಲಿಸಿ ಅವರ ತಲೆಯ ಬಾಗವು ಬಸ್ಸಿನ ಬಲ ಬದಿಯ ಹಿಂದಿನ ಚಕ್ರದಡಿಗೆ ಕೂಡಾ ಸಿಲುಕಿ ಶ್ರೀಮತಿ ಗೀತಾರವರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿ.

Traffic South Police Station  

ದಿನಾಂಕ:15-02-2023 ರಂದು ಪಿರ್ಯಾದಿದಾರರಾದ ಸೆಲಿನ್ ಡಿಸೋಜಾ(53) ರವರು ಆರ್ಕುಳ ನ್ಯಾಯಬೆಲೆ ಅಂಗಡಿ ಎದುರು ಫರಂಗಿ ಪೇಟೆಯಿಂದ ಮಂಗಳೂರಿಗೆ ಹೋಗುವ ರಾ.ಹೆ-73 ರಸ್ತೆಯನ್ನು ದಾಟುತ್ತಿರುವಾಗ ಸಮಯ ಸುಮಾರು ಸಂಜೆ 05:40 ಗಂಟೆಗೆ ಕಾರು ನಂಬ್ರ:KA19-MK-1406 ಚಾಲಕ ದೇಜು ಪೂಜಾರಿ ರವರು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಡಾಮಾರು ರಸ್ತೆಗೆ ಎಸೆಯಲ್ಪಟ್ಟಿರುತ್ತಾರೆ  ಕೂಡಲೇ ಡಿಕ್ಕಿಪಡಿಸಿದ ಕಾರಿನ ಚಾಲಕ ಪಿರ್ಯಾದಿದಾರರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಕಾರಿನಲ್ಲಿ ನಗರದ ಹೈಲ್ಯಾಂಡ್ ಆಸ್ವತ್ರೆಗೆ ದಾಖಲು ಮಾಡಿದ್ದು ಅಲ್ಲಿಯ ವೈಧ್ಯರು ಪರೀಕ್ಷಿಸಿ ಗಾಯಳುವಿಗೆ ಎಡಕೈಗೆ ಮೂಳೆ ಮುರಿತದ ಗಾಯ,ಬಲಗಾಲಿನ ತೊಡೆಗೆ ಗುದ್ದಿದ ಹಾಗೂ ಎಡ ಕೆನ್ನೆಗೆ ಗುದ್ದಿದ ರೀತಿ ಗಾಯವಾಗಿರುತ್ತದೆ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಯುನಿಟಿ ಆಸ್ವತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Mangalore South PS                                 

ಫಿರ್ಯಾದಿದಾರರಾದ ಶ್ರೀಮತಿ ಶಾಂತಾ ರೈ ಹಾಗೂ ಅವರ ಮೈದುನ ನವೀನ್ ರೈ, ಅತ್ತೆ ಶಾಂಭವಿ ಶೆಟ್ಟಿ ರವರು ಮಂಗಳೂರಿನ ಬೋಳಾರದಲ್ಲಿರುವ ಬತ್ತೇರಿ ಗಾರ್ಡನ್ ನ ಪೆಲಿಕ್ಸ್ ಕಂಪೌಂಡ್ ನ ಮನೆಯಲ್ಲಿ ವಾಸ್ತವ್ಯವಿದ್ದು, ದಿನಾಂಕ 16-02-2023 ರಂದು ಮುಂಜಾನೆ 01:30 ಗಂಟೆಗೆ ಪಿರ್ಯಾದಿದಾರರ ಮಗ ರೋಹಿತ್ ಕಬ್ಬಿಣದ ಪಂಚ್ ತರಹದ ವಸ್ತುವನ್ನು ಹಿಡಿದು ತಿರುಗಿಸುತ್ತಾ ಮನೆಯ ಒಳಗೆ ಬಂದು ಪಿರ್ಯಾದಿದಾರರ ಅತ್ತೆ ಶಾಂಭವಿ ಶೆಟ್ಟಿರವರ ಕುತ್ತಿಗೆಯನ್ನು ಹಿಡಿಯಲು ಮುಂದಾದಾಗ ನವೀನನು ರೋಹಿತನ್ನು ತಡೆದಿರುತ್ತಾರೆ. ಈ ಸಮಯ ರೋಹಿತನು ನವೀನನನ್ನು ಉದ್ದೇಶಿಸಿ ನಿನನ್ ದೆಪ್ಪಂದೆ ಬುಡಯೇ( ನಿನ್ನನ್ನು ತೆಗೆಯದೇ ಬಿಡಲಾರೆ)  ಎಂದು ಹೇಳಿ ಆತನ ಕೈಯಲ್ಲಿದ್ದ ಕಬ್ಬಿಣದ ವಸ್ತುವಿನಿಂದ ನವೀನನ ಎದೆಗೆ ಬಲವಾಗಿ ಗುದ್ದಿ ಎಳೆದಾಡಿ ನೆಲಕ್ಕೆ ದೂಡಿ ಹಾಕಿರುತ್ತಾನೆ. ಈ ಸಮಯ ಪಿರ್ಯಾದಿದಾರರು ರೋಹಿತನ ಕೈಯನ್ನು ಹಿಡಿದು ಎಳೆದಾಗ ಆತನು ಪಿರ್ಯಾದಿದಾರರನ್ನು ಉದ್ದೇಶಿಸಿ “ ಈ ಅಡ್ಡ ಬತ್ತ್ಂಡ ಅಪ್ಪೆ ಪಂಡುದುಲ ಬುಡಾಯೆ  ಬೇವರ್ಸಿ” ( ನೀನು ಅಡ್ಡ ಬಂದರೆ ತಾಯಿಯಾದರೂ ಬಿಡಲಾರೆ ಬೇವರ್ಸಿ ) ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು ದೂಡಿ ಹಾಕಿದ್ದು, ನೆಲಕ್ಕೆ ಬಿದ್ದ ಪಿರ್ಯಾದಿದಾರರ ಬಲಕಾಲಿನ ತೊಡೆಗೆ ಕಾಲಿನಿಂದ ತುಳಿದಿರುವುದರಿಂದ ಪಿರ್ಯಾದಿದಾರರ ಬಲತೊಡೆಯ ಮೂಳೆ ಮುರಿತವಾಗಿರುತ್ತದೆ. ಬಳಿಕ ಪಿರ್ಯಾದಿದಾರರನ್ನು ಉದ್ದೇಶಿಸಿ “ ಈ ಬೊಬ್ಬೆ ಪಾಡ್ ರಂಡೆ ದುಂಬುಗು ನಿಕ್ಲೆನ್ ಜೀವಂತ ಉಪ್ಯರೆ ಬುಡಯೇ ಬೇವರ್ಸಿಲೆ “ ( ನೀನು ಬೊಬ್ಬೆ ಹಾಕು ರಂಡೆ ಮುಂದಕ್ಕೆ ನಿಮ್ಮನ್ನು ಜೀವಂತ ಇರಲಿಕ್ಕೆ ಬಿಡುವುದಿಲ್ಲ ಬೇವರ್ಸಿಗಳೆ) ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿ ಹೊರಟುಹೋಗಿದ್ದು, ಪಿರ್ಯಾದಿದಾರು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪಿರ್ಯಾದಿದಾರರ ಮಗ ರೋಹಿತನ ನಡತೆ ಸರಿ ಇಲ್ಲದೇ ಇದ್ದುದರಿಂದ ಪಿರ್ಯಾದಿದಾರರು ಈ ಹಿಂದೆ ಹಲವು ಬಾರಿ ರೋಹಿತನಿಗೆ ಸರಿಯಾಗಿ ಕೆಲಸಕ್ಕೆ ಹೋಗಿ ಹಣ ಸಂಪಾದಿಸುವಂತೆ ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡ ಆರೋಪಿ ರೋಹಿತನು ಕೃತ್ಯವೆಸಗಿರುತ್ತಾನೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿಯಾಗಿರುತ್ತದೆ.

CEN Crime PS Mangaluru City

ದಿನಾಂಕ: 14/12/2022 ರಂದು 11:25 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ಸಂಖ್ಯೆನೇಯದಕ್ಕೆ  9863457064 ನೇ ನಂಬ್ರದಿಂದ ವಾಟ್ಸ್ಆಪ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್  ಮೂಲಕ ಹಣಗಳಿಸುವ ಬಗ್ಗೆ ಅಪರಿಚಿತ ವ್ಯಕ್ತಿ ಸಂದೇಶ ಕಳುಹಿಸಿರುತ್ತಾರೆ. ಅದನ್ನು ನಂಬಿದ ಪಿರ್ಯಾದಿದಾರರು ಸದ್ರಿ ಅಪರಿಚಿತ ವ್ಯಕ್ತಿ ತಿಳಿಸಿದಂತೆ ಅವರು ಕಳುಹಿಸಿದ ಟೆಲಿಗ್ರಾಂ ಚಾನೆಲ್ ಆದ @Supervisor167 ರಲ್ಲಿ ಪಿರ್ಯಾದಿದಾರರು ಸದಸ್ಯರಾಗಿರುತ್ತಾರೆ. ನಂತರ ಸದ್ರಿ ಚಾನೆಲ್ ಮೂಲಕ  www.cayprobe.cc ನೆ ವೆಬ್ ಸೈಟ್ ನಲ್ಲಿ ನೊಂದಣಿ ಮಾಡುವಂತೆ ತಿಳಿಸಿರುತ್ತಾರೆ . ಅದರಂತೆ ಅವರು ಸದ್ರಿ ವೆಬ್ ಸೈಟ್ ನಲ್ಲಿ ನೊಂದಣಿ ಮಾಡಿ ಅಪರಿಚಿತ ವ್ಯಕ್ತಿ ತಿಳಿಸಿದಂತೆ ಪ್ರಥಮವಾಗಿ ದಿನಾಂಕ: 18/12/2022 ರಂದು ರೂ 9000/- ಗಳನ್ನು ಪಿರ್ಯಾದಿದಾರರು ತನ್ನ  ಆಕ್ಸಿಸ್ ಬ್ಯಾಂಕ್ ಖಾತೆಯಿಂದ ಪಾವತಿಸಿದ್ದು ಸದ್ರಿ ಹಣವು ವಾಪಾಸು ಬಂದಿರುತ್ತದೆ. ನಂತರ ಹಂತ ಹಂತವಾಗಿ ಹಣವನ್ನು ಕಳುಹಿಸುವಂತೆ ತಿಳಿಸಿದ್ದು  ಕಳುಹಿಸಿದ ಹಣವು www.cayprobe.cc  ನೇ ವೆಬ್ ಸೈಟ್ ನಲ್ಲಿ ಪಿರ್ಯಾದಿದಾರರ ಖಾತೆಯಲ್ಲಿ ದ್ವಿಗುಣಗೊಂಡಿರುವಂತೆ ಕಾಣಿಸುತ್ತಿತ್ತು ಅದನ್ನು ನಂಬಿದ ಪಿರ್ಯಾದಿದಾರರು ಹೆಚ್ಚಿನ ಲಾಭ ಗಳಿಸುವ ಬಗ್ಗೆ ದಿನಾಂಕ: 18/12/2022 ರಿಂದ ದಿನಾಂಕ: 19/12/2022 ರ ಮಧ್ಯಾವಧಿಯಲ್ಲಿ ಒಟ್ಟು ರೂ 18,43,000/- ಗಳನ್ನು ಹಂತ ಹಂತವಾಗಿ ಅವರು ಕಳುಹಿಸಿ ಬ್ಯಾಂಕ್ ಖಾತೆಗಳಿಗೆ  ತನ್ನ ಬಾಬ್ತು ಬ್ಯಾಂಕ್ ಖಾತೆ ಗಳಿಂದ ಕಳುಹಿಸಿರುವುದಾಗಿದೆ. ನಂತರ ಪಿರ್ಯಾದಿದಾರರು ತಾನು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಲ್ಲಿ ಪುನಃ  ಹಣ ಪಾವತಿಸುವಂತೆ ತಿಳಿಸಿರುತ್ತಾರೆ, ನಂತರ ಈವರೆಗೆ ಹಣ ಮರುಪಾವತಿ ಆಗಬಹುದೆಂದು ಕಾದಿದ್ದು ಈವರೆಗೆ ಹಣ ವಾಪಾಸು ಬರದೇ ಇರುವುದರಿಂದ  ದೂರು ನೀಡಿರುವುದಾಗಿದೆ. ಆದುದರಿಂದ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಹಣವನ್ನು ವರ್ಗಾಯಿಸಿಕೊಂಡು ಮೋಸಮಾಡಿದ ಅಪರಿಚಿತ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ.

Mangalore East PS

ದಿನಾಂಕ: 15-02-2023 ರಂದು ಸಂಜೆ 16.30 ಗಂಟೆ ಸಮಯಕ್ಕೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಂಗಳೂರು ನಗರದ ಕೆಪಿಟಿ ಜಂಕ್ಷನ್ ಬಳಿಯ ಬಸ್ ಸ್ಟಾಪ್ ನಲ್ಲಿ ಚರಣ್ (23) ವಾಸಃ ಪದವು ಚೌಟ ಹೌಸ್ ಬಿಕರ್ನಕಟ್ಟೆ ಮಂಗಳೂರು ಎಂಬಾತನು  ಯಾವುದೋ ಮಾದಕ ವಸ್ತು ಸೇವಿಸಿದಂತೆ ಕಂಡು ಬಂದಿರುವುದರಿಂದ ಮೂಲಕ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ತಪಾಸಣೆಗೆ ಏ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ವೈದ್ಯರು ಪರೀಕ್ಷಿಸಿ Tetrahydracannabinoid (Marijuana) 50 ng per ml POSITIVE ಎಂದು ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ. 

Traffic North Police Station                                                        

ಪಿರ್ಯಾದಿದಾರರ MUKESH B SUVRNA  ತಂದೆ ಬಾಲಕೃಷ್ಣ ಸುವರ್ಣ (78 ವರ್ಷ) ರವರು ದಿನಾಂಕ: 15-02-2023 ರಂದು ಕೆಲಸದ ನಿಮಿತ್ತ ಕುಂಜತ್ ಬೈಲಿಗೆ ಹೋಗಿದ್ದವರು ವಾಪಾಸು ಮನೆ ಕಡೆಗೆ ಬರುತ್ತಾ ಗೋವಿಂದದಾಸ ಜಂಕ್ಷನಿನಲ್ಲಿ ಬಸ್ಸಿನಿಂದ ಇಳಿದು ತನಗೆ ಮತ್ತು ಹೆಂಡಿತಿಗೆ ಮಾತ್ರೆಗಳನ್ನು ತೆಗೆದುಕೊಳ್ಳುವ ಸಲುವಾಗಿ ಸುರತ್ಕಲಿನ ಶಿಶಿರಾ ಮೆಡಿಕಲಿಗೆ ಹೋಗಿ ಅಲ್ಲಿ ಮಾತ್ರೆ ಸಿಗದೇ ಇದ್ದ ಕಾರಣ ಬೇರೆ ಮೆಡಿಕಲಿಗೆ ಹೋಗಲು ಶಿಶಿರಾ ಮೆಡಿಕಲ್ ಎದುರು ರಸ್ತೆ ದಾಟುತ್ತಿದ್ದಾಗ ಸಂಜೆ ಸಮಯ ಸುಮಾರು 4:00 ಘಂಟೆಗೆ ಗೋವಿಂದ ದಾಸ ಬಸ್ ಸ್ಟಾಪ್ ಕಡೆಯಿಂದ ಸುರತ್ಕಲ್ ಕಡೆಗೆ KA-19-MC-4635 ನಂಬ್ರದ ಕಾರನ್ನು ಅದರ ಚಾಲಕ M ISMAIL ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಾಹೆ 66ರ ಡಾಮಾರು ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ತಂದೆ ಬಾಲಕೃಷ್ಣ ಸುವರ್ಣ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ತಂದೆ ಕಾರಿನ ಮುಂಭಾಗದ ಗಾಜಿನ ಮೇಲೆ ಬಿದ್ದು ನಂತರ ಡಾಮಾರು ರಸ್ತೆಗೆ ಬಿದ್ದು ಬಾಲಕೃಷ್ಣ ಸುವರ್ಣ ರವರಿಗೆ ತಲೆಯ ಹಿಂಭಾಗ ರಕ್ತ ಗಾಯ, ಬೆನ್ನಿನ ಬಲಭಾಗ, ಎಡಕಾಲಿನ ಮಂಡಿಗೆ ಗುದ್ದಿದ ಗಾಯ, ಎಡಕಣ್ಣಿನ ಹುಬ್ಬಿನಲ್ಲಿ ರಕ್ತ ಹೆಪ್ಪು ಗಟ್ಟಿದ ರೀತಿಯ ಗಾಯ ಮತ್ತು ಬಲಕೈ ಹೆಬ್ಬೆರಳಿನಲ್ಲಿ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಪದ್ಮಾವತಿ ಆಸ್ಪತ್ರೆಗೆ ಸಾಗಿಸಲ್ಪಟ್ಟು ಹೆಚ್ಚಿನ ಚಿಕಿತ್ಸೆ ಬಗ್ಗೆ ಮುಕ್ಕಾದ ಶ್ರೀನಿವಾಸ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Traffic North Police Station                                                

KA-19-AD-6963 ನಂಬ್ರದ ಆಟೋರಿಕ್ಷಾದಲ್ಲಿ  ದಿನಾಂಕ; 15-02-2023 ರಂದು ಪಿರ್ಯಾದಿದಾರರಾದ RESHMA ARIF HAMMAJI ರವರು ಅವರ ಮಗ  MOHAMMED ATIF HAMMAJI (12 ವರ್ಷ) ಎಂಬವನನ್ನು ಸುರತ್ಕಲ್ ವಿಧ್ಯಾದಾಯಿನಿ ಶಾಲೆಯಿಂದ ಪ್ರಯಾಣಿಕನಾಗಿ ಕುಳ್ಳಿರಿಸಿಕೊಂಡು ತಡಂಬೈಲಿನ ಸುಪ್ರೀಂಮಹಲ್ ಕಟ್ಟಡದ ಎದುರಿನಲ್ಲಿರುವ ತೆರೆದ ಡಿವೈಡರಿನಲ್ಲಿ ಸಾಯಂಕಾಲ ಸುಮಾರು 4:20 ಘಂಟೆಗೆ ನಿರ್ಲಕ್ಷ್ಯತನದಿಂದ ಬಲಕ್ಕೆ ಮುಚ್ಚೂರು ಕಡೆಗೆ ಹೋಗುವ ಸಲುವಾಗಿ KA-19-AD-6963 ನಂಬ್ರದ ಆಟೋರಿಕ್ಷಾವನ್ನು ತಿರುಗಿಸಿಕೊಂಡು ಹೋಗಿದ್ದು ಇದೇ ವೇಳೆ NITK ಕಡೆಯಿಂದ KA-20-Z-7391 ನಂಬ್ರದ ಕಾರನ್ನು ಅದರ ಚಾಲಕನಾದ RONY D MELLO ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು KA-19-AD-6963 ನಂಬ್ರದ ಆಟೋ ರಿಕ್ಷಾದ ಹಿಂದಿನ ಎಡಬದಿ ಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಅಟೋರಿಕ್ಷಾದಲ್ಲಿ ಪ್ರಯಾಣಿಕನಾಗಿ ಕುಳಿತಿದ್ದ MOHAMMED ATIF HAMMAJI ಎಂಬಾತನಿಗೆ ಎರಡೂ ಕೈಗಳ ಭುಜಕ್ಕೆ ಮತ್ತು ಎದೆಗೆ ಗುದ್ದಿದ ರೀತಿಯ ಗಾಯವಾಗಿ ಚಿಕಿತ್ಸೆ ಬಗ್ಗೆ ಅಥರ್ವ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Traffic South Police Station  

ದಿನಾಂಕ:15-02-2023 ರಂದು ಪಿರ್ಯಾದಿದಾರರಾದ ಮಸೂದ್ ಆಲಿ ಅಶ್ರಫ್ (39 ವರ್ಷ) ರವರು ಅವರ ಬಾಬ್ತು ಕಾರು ನಂಬ್ರ KA-19-MJ-2748 ನೇದನ್ನು ಜಪ್ಪಿನಮೊಗೆರು ಕಡೇಕಾರ್ ನಿಂದ ಅತ್ತಾವರ ಮಂಗಳೂರು  ಕಡೆಗೆ ಹೋಗುತ್ತಿರುವ ಸಮಯ ಸುಮಾರು ಸಂಜೆ 5:40 ಗಂಟೆಗೆ ರಾ.ಹೆ-66 ಜಪ್ಪಿನಮೊಗೆರು ಜಂಕ್ಷನ್ ಬಳಿ ತಲುಪಿದಾಗ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹೋಗುತ್ತಿದ್ದ ಕೆಎಸ್ಆರ್ ಟಿಸಿ ಬಸ್ ನಂಬ್ರ KL-15-9994 ನೇದರ ಚಾಲಕ ಸಾಲು ಎ.ಜೆ ಕಾಸರಗೋಡ್ ಎಂಬಾತನು ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾರ ಕಾರಿನ ಬಲ ಭಾಗಕ್ಕೆ ಡಿಕ್ಕಿ ಪಡಿಸಿ ಕಾರನ್ನು 50 ಮೀಟರ್ ಎಳೆದೊಯ್ದ ಪರಿಣಾಮ ಕಾರಿನ ಬಲ ಬಾಗದ ಎರಡೂ ಬಾಗಿಲು ಮತ್ತು ಎರಡು ಬಲ ಬಾಗದ ಎರಡು ಚಕ್ರಗಳು ಸಂಪೂರ್ಣವಾಗಿ ಜಖಃಗೊಂಡಿರುತ್ತವೆ, ಎಂಬಿತ್ಯಾದಿ.

Mangalore South PS    

ಪಿರ್ಯಾದುದಾರರಾದ ಶ್ರಿ, ಸಂದೀಪ್ ಹನುಮಗೌಡ [24] ರವರು ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಪಿರ್ಯಾದಿ ಅಣ್ಣ ಕಾಶಿನಾಥ ಹನುಮಾಗೌಡ [31] ಎಂಬಾತನು ಸುಮಾರು 5 ದಿನಗಳ ಹಿಂದೆ ಮಂಗಳೂರು ನಗರದ ದಕ್ಷಿಣ ದಕ್ಕೆಯಲ್ಲಿ ರಕ್ಷಾ ಲಕ್ಷ್ಮಿ ಎಂಬ ಹೆಸರಿನ ಬೋಟ್ ನಲ್ಲಿ ಮೀನುಗಾರಿಕೆಗೆ ಕೆಲಸಕ್ಕೆಂದು ಬಂದಿರುತ್ತಾನೆ. ದಿನಾಂಕ 15-02-2023 ರಂದು ಬೆಳಿಗ್ಗೆ 08-00 ಗಂಟೆಗೆ ಪಿರ್ಯಾದಿಗೆ ತನ್ನ ಊರಿನ ಶ್ರೀ, ಮಂಜುನಾಥ ಗಣಪತಿ ಕಾರ್ವಿರವರು ಪೋನ್ ಮಾಡಿ ನಾವುಗಳು ಮತ್ತು ನಿಮ್ಮ ಮಗ ಕಾಶಿನಾಥ ಹನುಮಾಗೌಡ ಜೊತೆಯಾಗಿ ದಿನಾಂಕ 12-02-2023 ರಂದು ಮಂಗಳೂರು ನಗರದ ದಕ್ಕೆಯಿಂದ IND-KA-01-MM4390 ನಂಬ್ರದ ರಕ್ಷಾ ಲಕ್ಷ್ಮೀ ಎಂಬ ಹೆಸರಿನ ಬೋಟ್ ನಲ್ಲಿ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದು, ದಿನಾಂಕ 13-02-2023 ರಂದು ರಾತ್ರಿ ಮೀನುಗಾರಿಕೆ ಮಾಡುತ್ತಿರುವ ಸಮಯ ನಾವು ಬಂದ ಜನರಲ್ಲಿ ನೋಡಲಾಗಿ ಕಾಶಿನಾಥ ಹನುಮಾಗೌಡ ಎಂಬಾತನು ಕಾಣೆಯಾಗಿದ್ದು, ಕೂಡಲೇ ನಾವುಗಳು ಸೆರಿಕೊಂಡು ಬೋಟಿನಲ್ಲಿ ಹುಡುಕಿದರೂ ಪತ್ತೆಯಾಗಲಿಲ್ಲ, ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪತ್ತೆಗೆ ಪ್ರಯತ್ನಿಸಿದರೂ ಇದುವರೆಗೆ ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಶಿನಾಥ ಹನುಮಾಗೌಡರವರು ಆಕಸ್ಮಿಕವಾಗಿ ಆಯಾತಪ್ಪಿ ನೀರಿಗೆ ಬಿದ್ದಿರಬಹುದು ಎಂಬುದಾಗಿ ತಿಳಿಸಿದ ಕೂಡಲೇ ಮಲ್ಪೆಯಿಂದ ಹೊರಟು ಮಂಗಳೂರಿಗೆ ಬಂದಿರುವುದಾಗಿದೆ. ಕಾಣೆಯಾದ ತನ್ನ ಅಣ್ಣ ಕಾಶಿನಾಥ ಹನುಮಾಗೌಡರವರನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿಯಾಗಿರುತ್ತದೆ.

Kankanady Town PS                

ಪಿರ್ಯಾದುದಾರರ Savitri  ಗಂಡ ಸಂಗಪ್ಪ ನಂದ್ಯಾಳ ಎಂಬುವವರು ಸುಮಾರು 4 ರಿಂದ 5 ವರ್ಷಗಳಿಂದ ಮಂಗಳೂರಿನ ಬಸ್ತಿಕಾರ್ ಕಂಪೆನಿಯ ಸಿಮೆಂಟ್ ಗೋಡೌನ್ ನಲ್ಲಿ ಸಿಮೆಂಟ್ ಮೂಟೆ ಹೊರುವ ಕೆಲಸ ಮಾಡುತ್ತಿರುತ್ತಾರೆ. ದಿನಾಂಕ 28-01-2023 ರಂದು ಮದ್ಯಾಹ್ನ 1:00 ಗಂಟೆಗೆ ಪಿರ್ಯಾದುದಾರರ ಗಂಡ ಮಂಗಳೂರಿನ ಯೆಯ್ಯಾಡಿಯ ಮಹಾವೀರ ಎಂಟರ್ ಪ್ರೈಸಸ್ ಗೋಡಾನ್ ನಲ್ಲಿ KA 29 C 0973 ಲಾರಿಯಿಂದ ಸಿಮೆಂಟ್ ನ್ನು ಅನ್ ಲೋಡ್ ಮಾಡುತ್ತಿರುವ ಸಮಯ ಲಾರಿಗೆ ಹತ್ತಿ, ಸಿಮೆಂಟ್ ಮೂಟೆಯನ್ನು ಕಬ್ಬಿಣದ ಹುಕ್ ಮೂಲಕ  ಎಳೆದಾಗ, ಸಿಮೆಂಟ್ ಚೀಲ ಹರಿದು, ಆಯತಪ್ಪಿ, ಲಾರಿಯಿಂದ ಕೆಳಗಡೆ ಬಿದ್ದು ಗಾಯಗೊಂಡಿರುವುದಾಗಿದೆ. ಚಿಕಿತ್ಸೆಯ ಬಗ್ಗೆ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಅಲ್ಲಿಂದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ  ತಂದು  2 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದು,  ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಪಿರ್ಯಾದುದಾರರ ಗಂಡನಿಗೆ  ಹಣೆಯ ಭಾಗದಲ್ಲಿ ಉಬ್ಬಿದ ಗಾಯ, ಎಡಕಣ್ಣಿನ ಬಳಿ ತರಚಿದ ಗಾಯ, ಬೆನ್ನುಮೂಳೆಗೆ  ಹಾಗೂ ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು ಚಿಕಿತ್ಸೆಗೆ ಸುಮಾರು 45,000/- ಖರ್ಚು ಆಗಿರುತ್ತದೆ. ಬಸ್ತಿಕಾರ್ ಕಂಪೆನಿಯ ಮಾಲೀಕರಾದ  ಪುರುಷೋತ್ತಮ ಶೆಣೈ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಹಾಗೂ ವಿಶ್ರಾಂತಿಯಲ್ಲಿರುವ ಸಮಯದ ಸಂಬಳವನ್ನು ಕೊಡುವುದಾಗಿ ತಿಳಿಸಿ ಕೇವಲ 15000/- ರೂ ಮಾತ್ರ ಕೊಟ್ಟಿರುತ್ತಾರೆ. ಕೆಲಸ ಮಾಡುತ್ತಿರುವ ಸಮಯ ಸರಿಯಾದ ಸುರಕ್ಷತಾ ಸಾಮಾಗ್ರಿಗಳನ್ನು ನೀಡದೆ, ಬಸ್ತಿಕಾರ್ ಕಂಪೆನಿಯ ಮಾಲೀಕರಾದ  ಪುರುಷೋತ್ತಮ ಶೆಣೈ ರವರ ನಿರ್ಲಕ್ಷ್ಯತನದಿಂದಲೇ ಆಗಿರುವುದರಿಂದ, ಅವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Last Updated: 16-02-2023 06:40 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080