ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Mangalore West Traffic PS                

ಈ ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾಧಿ VAMANA  PRABHU ಇವರು ದಿನಾಂಕ 16-02-2024 ರಂದು ದಿನ ಪತ್ರಿಕೆ ವಿತರಸುವ ಸಲುವಾಗಿ ಕೆ ಎ-19-ಹೆಚ್ ಡಿ-9892ನೇ ಸ್ಕೂಟರ್ ನ್ನು ಚಲಾಯಿಸಿಕೊಂಡು ಮನೆಯಿಂದ  ಹೊರಟು ಸೆಂಟ್ರಲ್ ಮಾರ್ಕೆಟ್ ರಸ್ತೆ ಮುಖಾಂತರವಾಗಿ ಮೈಧಾನ್ ಒಂದನೇ ಕ್ರಾಸ್ ಮುಖಾಂತರ ಕ್ಲಾಕ್ ಟವರ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಹೊಗುತ್ತೀರುವ ಸಮಯ ಸುಮಾರು ಬೆಳಿಗ್ಗೆ 06;30ಗಂಟೆಗೆ ಸ್ವರ್ಣ ವೃಕ್ಷಸಂಘದ ಎದುರು ತಲುಪುತ್ತಿದಂತೆ ಅಲ್ಲಿಯೇ ಎಡ ಬದಿಯಲ್ಲಿ ನಿಲ್ಲಿಸಿದ್ದ ಅಟೋರಿಕ್ಷಾ ನಂ ಕೆ ಎ-19-ಎಸಿ-7759ನೇದರ ಚಾಲಕ ಎಂ ಕೆ ಮಹಮ್ಮದ್ ರವರು  ಯಾವುದೇ ಸೂಚನೆಯನ್ನು  ನೀಡದೇ ಅಜಾಗುರೂಕತೆಯಿಂದ ಸಾರ್ವಜನಿಕ ರಸ್ತೆಯಲ್ಲಿ  ಹಿಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾಧಿದಾರರ ಸ್ಕೂಟರ್ ನ ಎಡಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾಧಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾಧಿದಾರರ ಎಡಕಾಲಿನ ಮೊಣಕಾಲಿನ ಭಾಗಕ್ಕೆ ರಕ್ತಗಾಯವಾಗಿರುತ್ತದೆ ಎಂಬಿತ್ಯಾದಿ

 

Urva PS

ಪ್ರಕರಣದ ಪಿರ್ಯಾದಿ KARTHIK ಇವರು ಈ  ಹಿಂದೆ ಪೇಸ್ ಬುಕ್ ನಲ್ಲಿ  STOCK TRADING DEVIL  ಎಂಬ ADVERTISEMENT  ನೋಡಿ ಲೈಕ್ ಮಾಡಿದ ಹಿನ್ನಲೆಯಲ್ಲಿ ಅವರ ಮೊಬೈಲಿಗೆ ದಿನಾಂಕ 25-12-2023 ರಂದು ವಾಟ್ಸ್ ಏಪ್ ನಲ್ಲಿ ಬಂದಿರುವ https://chat.whatsapp.com/LS03cJaihMhlpLcFtfpUnj ಲಿಂಕ್ ಮೂಲಕ BLACK ROCK EQUITY ASSET MANAGEMENT GROUP 605 ವಾಟ್ಸ್ ಏಪ್ ಗ್ರೂಪ್ ಸೇರಿರುತ್ತಾರೆ. ಸದ್ರಿ ಗ್ರೂಪ್ ನಲ್ಲಿ ಸ್ಟಾಕ್ ಟ್ರೇಡಿಂಗ್ ವ್ಯವಹಾರದ ಬಗ್ಗೆ ಮಾಹಿತಿ ನೀಡುತ್ತಿದ್ದು  ಅದರಂತೆ ಸದ್ರಿ ಗ್ರೂಪ್ ನಿಂದ ದಿನಾಂಕ 15-01-2024 ರಂದು 9540642069 ಮೊಬೈಲ್ ನಂಬ್ರದ ಮೂಲಕ ವಾಟ್ಸ್ ಏಪ್ ನಿಂದ ಸಂದೇಶ ಮಾಡಿ ಪಿರ್ಯಾದಿದಾರರಿಗೆ ರೂಪಾಯಿ 8,00,000/- ಮೊತ್ತವನ್ನು  SHRI KRISHNA ENTERPRISES  ಜೈಪುರ್ ಸೆಂಟ್ರಲ್ ಸ್ಪೈನ್ ಶಾಖೆಯಲ್ಲಿರುವ ಖಾತೆ ಗೆ ಸ್ಟಾಕ್ ಟ್ರೇಡಿಂಗ್ ಕುರಿತು  ಹೂಡಿಕೆ ಮಾಡಲು ಸೂಚಿಸಿದಂತೆ ಪಿರ್ಯಾದಿದಾರರು ದಿನಾಂಕ 01-02-2024 ರಂದು ಅವರ ಕೆ ಎಸ್ ರಾವ್ ರಸ್ತೆಯಲ್ಲಿರುವ STATE BANK OF INDIA   ಎಸ್ ಬಿ ಖಾತೆ ಯಿಂದ  ರೂಪಾಯಿ 8,00,000/- ಮೊತ್ತದ ಚೆಕ್ಕನ್ನು  SHRI KRISHNA ENTERPRISES  ಜೈಪುರ್ ಸೆಂಟ್ರಲ್ ಸ್ಪೈನ್ ಶಾಖೆಯಲ್ಲಿರುವ ಖಾತೆ ಗೆ ಸ್ಟಾಕ್ ಟ್ರೇಡಿಂಗ್ ನಿಮಿತ್ತ ಹಾಕಿ ಹಣ ಹಾಕಿದ ವಿಚಾರವಾಗಿ ಸದ್ರಿ ನಂಬ್ರಕ್ಕೆ ಸಂದೇಶ ಕಳುಹಿಸಿರುತ್ತಾರೆ. ಆ  ನಂತರ ಅಂದಾಜು  ಸುಮಾರು 15 ನಿಮಿಷದ ಅಂತರದಲ್ಲಿ ಸದ್ರಿ ಖಾತೆಯಲ್ಲಿ ವ್ಯವಹಾರವನ್ನು ಸ್ಥಗಿತಗೊಳಿಸಿದ ಕಾರಣ ಖಾತೆಗೆ ಹಾಕಿದ ಹಣವನ್ನು ವಾಪಸ್ ಪಡೆಯಲು ವಾಟ್ಸ್ ಏಪ್ ಮೂಲಕ ಬಂದ ಸಂದೇಶದ ಹಿನ್ನಲೆಯಲ್ಲಿ ಪಿರ್ಯಾದಿದಾರರು ಅವರ ಬ್ಯಾಂಕಿಗೆ ಭೇಟಿ ನೀಡಿ ಹಣವನ್ನು ಖಾತೆಗೆ ವಾಪಸ್ ಮಾಡಲು ಲಿಖಿತವಾಗಿ ಕೋರಿಕೆ ಪತ್ರವನ್ನು ಸಲ್ಲಿಸಿದಾಗ ಸದ್ರಿ ಖಾತೆಯನ್ನು ಸೈಬರ್  ಪೋಲಿಸರು ದಿನಾಂಕ 31-01-2024 ದಿಂದ DEBIT FREEZ ಮಾಡಿರುವ ವಿಚಾರ ತಿಳಿಯಿತು ಆದ್ದರಿಂದ ಮೋಸದಿಂದ ಹಣವನ್ನು ಸಂಗ್ರಹಿಸಿ ವಂಚಿಸಿದ BLACK ROCK EQUITY ASSET MANAGEMENT GROUP 605 ವಿರುದ್ದ  ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿರುವ ದೂರಿನ ಸಾರಾಂಶ ಆಗಿರುತ್ತದೆ

 

Urva PS   

ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ AMRUTHA NAYAKಇವರು PIX MEDIA ಎಂಬ ಕಂಪೆನಿಯನ್ನು ನಡೆಸಿಕೊಂಡಿದ್ದು, ದಿನಾಂಕ 16-02-2024 ರಂದು ಮದ್ಯಾಹ್ನ ಪಿರ್ಯಾದಿದಾರರ ಕಂಪನಿಯಲ್ಲಿ ಗ್ರಾಫಿಕ್ ಡಿಸೈನ್ ಆಗಿ ಕೆಲಸ ಮಾಡಿಕೊಂಡಿದ್ದ ಭೂಮಿಕ ಮತ್ತು ಗೋಪಾಲ ಗೌಡ ಎಂಬುವರುಗಳ ಲ್ಯಾಪ್ ಟಾಪ್ ಕಳೆದುಹೋದ ಬಗ್ಗೆ ಪಿರ್ಯಾದಿದಾರರಿಗೆ ತಿಳಿಸಿದ್ದು, ಈ ಬಗ್ಗೆ ವಿಚಾರಿಸಿದಾಗ ಅದೇ ದಿನ 1-45 ಗಂಟೆಗೆ ಕಚೇರಿಯಲ್ಲಿ ಕೆಲಸಮಾಡಿಕೊಂಡಿದ್ದವರೆಲ್ಲ ಊಟಕ್ಕೆ ಹೋಗಿದ್ದು ವಾಪಸ್ಸು 2-15 ಗಂಟೆಗೆ ಬಂದು ನೋಡಲಾಗಿ ಕಛೇರಿಯ ಟೇಬಲ್ ನಲ್ಲಿರಿಸಿದ್ದ ಭೂಮಿಕ ರವರ ASUS ( SL No-R6NRCX00P958234) ಕಂಪೆನಿಯ LAPTOP ಅಂದಾಜು ಮೌಲ್ಯ 60.000/- ರೂ ಹಾಗು ಗೋಪಾಲ ಗೌಡ ಎಂಬವರ HP VICTUS ( SL No-5CD2505K26) ಕಂಪೆನಿಯ LAPTOP ಅಂದಾಜು ಮೌಲ್ಯ 60.000/- ರೂ ಆಗಿದ್ದು ಒಟ್ಟು 1.20.000/- ರೂ ಮೌಲ್ಯದ  2 LAPTOP ಗಳನ್ನು ಯಾರೋ ಅಪರಿಚಿತ ವ್ಯಕ್ತಿ ಕೆಲಸಮಾಡಿಕೊಂಡಿದ್ದವರೆಲ್ಲ ಕಛೇರಿಯಲ್ಲಿ ಇಲ್ಲದ ಸಮಯ ಒಳಗೆ ಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ.

 

Traffic South Police

ಈ ಪ್ರಕರಣದ ಸಾರಾಂಶವೇನೆಂದರೆ ಫಿರ್ಯಾದಿ K H HAMEED  ಇವರು ದಿನಾಂಕ: 16/02/2024 ರಂದು ಆಟೋರಿಕ್ಷಾವೊಂದರಲ್ಲಿ ಮನೆಯಿಂದ ಅಡ್ಯಾರ್ ನ ಕಣ್ಣೂರಿಗೆ ಬಂದಿದ್ದು, ಕಣ್ಣೂರು ಮಸೀದಿ ಬಳಿಯಿಂದ ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ಹೇವೆಯನ್ನು ದಾಟುತ್ತಿದ್ದಾಗ ಸಮಯ ಸುಮಾರು 08-20 ಗಂಟೆಗೆ ಬಿ.ಸಿ. ರೋಡ್ ಕಡೆಯಿಂದ ಬಂದ KA-70-J-7649 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ಅಕ್ಷಯ್ ಎಂಬಾತನು ಸಹ ಸವಾರ ಸಂದೀಪ್ ಎಂಬಾತನನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮೊಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿದಾರರು ಮತ್ತು ಸ್ಕೂಟರ್ ಸವಾರ, ಸಹ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದವರನ್ನು ಸ್ಕೂಟರ್ ಸವಾರ ಮತ್ತು ಸಾರ್ವಜನಿಕರು ಉಪಚರಿಸಿ ರಿಕ್ಷಾವೊಂದರಲ್ಲಿ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದುಪರೀಕ್ಷಿಸಿದ ವೈಧ್ಯರು ಫಿರ್ಯಾದಿದಾರರ ಬಲಕಾಲಿನ ಪಾದದ ಬಳಿ ಮೂಳೆ ಮುರಿತದ ಗಾಯ ಮತ್ತು ಬಲ ಭುಜದಲ್ಲಿ ಗುದ್ದಿದ  ಗಾಯವಾಗಿರುವುದಾಗಿ ತಿಳಿಸಿದ್ದು, ಒಳರೋಗಿಯಾಗಿ ದಾಖಲಿಸಿರುತ್ತಾರೆ. ಸಹ ಸವಾರ ಸಂದೀಪ್ ಎಂಬವರಿಗೆ ಬಲಭುಜದಲ್ಲಿ ಮತ್ತು ಬಲಸೊಂಟದಲ್ಲಿ ತರಚಿದ ಗಾಯವಾಗಿರುತ್ತದೆ ಎಂಬಿತ್ಯಾದಿ

 

Bajpe PS

ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿ Ashok ಇವರು ದಿನಾಂಕ 15.02.2024 ರಂದು ಮನೆಯಿಂದ ಕೆಲಸದ ನಿಮಿತ್ತ ಕೈಕಂಬ ಕಡಗೆ ಮೋಟಾರ್ ಸೈಕಲ್ ನಂ KA19 HB5122 ನೇದರಲ್ಲಿ ಹೋಗುತ್ತಿರುವ ಸಮಯ ಮಂಗಳೂರು ತಾಲೂಕು ಮೂಳೂರು ಗ್ರಾಮದ ವೈದ್ಯನಾಥ ದ್ವಾರದ ಮುಂಭಾಗ ರಸ್ತೆಯ ಎಡಬದಿಯಲ್ಲಿ ಪಿರ್ಯಾದಿದಾರರು ತನ್ನ ಬೈಕನ್ನು ನಿಲ್ಲಿಸಿ ಬಲ ಬದಿಗೆ ಹೋಗುವರೇ ಹಿಂಬಾಗ ನೋಡುತ್ತಿರುವಾಗ ವಾಮಂಜೂರು ಕಡೆಯಿಂದ ಕೈಕಂಬದ ಕಡೆಗೆ KA70H5946 ಮೋಟಾರ್ ಸೈಕಲ್ ನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗಾರುಕತಿಯಿಂದ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲ್ ನ ಹ್ಯಾಂಡಲ್ ನ ಬಲಭಾಗಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು ಬಲಕೈ ಮಧ್ಯದ ಬೆರಳು ತುಂಡಾಗಿರುತ್ತದೆ ಮತ್ತು ಎಡಕೈ ಕೂಡ ಗಾಯವಾಗಿರುತ್ತದೆ ಮತ್ತು ಪಿರ್ಯಾದಿದಾರರ ಮೊಟಾರ್ ಸೈಕಲ್ ಕೂಡ ಜಖಂ ಗೊಂಡಿರುತ್ತದೆ ನಂತರ ಗಾಯಾಳು ಪಿರ್ಯಾದಿದಾರರನ್ನು ಅಘಪಾತಪಡಿಸಿದ ಮೋಟಾರ್ ಸೈಕಲ್ ನ ಚಾಲಕ ಮತ್ತು ಅವನ ಗೆಳೆಯ ಆಟೋರಿಕ್ಷಾದಲ್ಲಿ ಎಜೆ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

 

Traffic South Police

ಫಿರ್ಯಾದಿ GUNJA JESVALಇವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ-16-02-2024 ರಂದು ತಮ್ಮ ಮಕ್ಕಳಾದ ರೀಯಾ(7) ಮತ್ತು ಬೀರಟ್ ಕುಮಾರ್(6) ರವರುಗಳನ್ನು ವಿದ್ಯಾಜೋತಿ ಶಾಲೆಯಿಂದ ಮನೆಕಡೆಗೆ ಕರೆದುಕೊಂಡು ಹೋಗುವಾಗ ವಾಮಂಜೂರು ಎಂಬಲ್ಲಿ ರಸ್ತೆಯನ್ನು ದಾಟುತ್ತಿದ್ದ ಸಮಯ ಸುಮಾರು 03-45 ಗಂಟೆಗೆ ಮಂಗಳೂರು ಕಡೆಯಿಂದ ಮೋಟಾರ್ ಸೈಕಲ್ KA20EF4220 ನೇ ದರ ಸವಾರ ಮೊಹಮ್ಮದ್  ರಿಷಾದ್ ನು ಸಹಸವಾರ ಗೌರವರಾಜ್ ನನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ವಾಮಂಜೂರು ಕಡೆಗೆ ಚಲಾಯಿಸಿ  ರಸ್ತೆ ದಾಟುತ್ತಿದ್ದ ಬೀರಟ್ ಕುಮಾರ್ ನಿಗೆ ಡಿಕ್ಕಿ ಪಡಿಸಿದ್ದು ಪರಿಣಾಮ ಮೋಟಾರ್ ಸೈಕಲ್ ಸವಾರ ಮತ್ತು ಸಹಸವಾರ ಹಾಗೂ ಮಗು ರಸ್ತೆಗೆ ಎಸೆಯಲ್ಪಟ್ಟುಮಗುವಿನ ತಲೆಯ ಎಡಬಾಗಕ್ಕೆ ಗಂಭೀರ ಸ್ವರೂಪದ ಗಾಯ, ಬಲ ಮೊಣಗಂಟಿಗೆ ತೀವ್ರ ತರದ ರಕ್ತ ಗಾಯ, ಎಡಕಾಲಿನಲ್ಲಿ ತೆರಚಿದ ಗಾಯ ಹಾಗೂ ಮೋಟಾರ್ ಸೈಕಲ್ ಸವಾರನಿಗೆ ಬಲಭುಜ ಮತ್ತು ಬಲ ಕಾಲಿಗೆ ಗಾಯ,ಸಹಸವಾರನಿಗೆ ಬಲಕಾಲಿಗೆ ಗಾಯವಾಗಿದ್ದು  ಗಾಯಾಳುಗಳು ವಾಮಂಜೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.ಅಪಘಾತಪಡಿಸಿದ ಬೈಕ್ ಸವಾರ ಮೊಹಮ್ಮದ್  ರಿಷಾದ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ

 

Ullal PS

ದಿನಾಂಕ 16/02/2024 ರಂದು ಪಿರ್ಯಾದಿ Mohammad Arif ಇವರು ಮೋಟಾರ್ ಸೈಕಲ್‌ನಲ್ಲಿ ಕೊಲ್ಯದಿಂದ ಕುಂಪಳದ ಕಡೆಗೆ ರಾ.ಹೆ 66 ರ ವಿರುದ್ದ ದಿಕ್ಕಿನಲ್ಲಿ ಹೋಗುತ್ತಾ ಕೊಲ್ಯ ಲಿಂಗಪ್ಪ ಪೂಜಾರಿ ರವರ ಮನೆಯ ಎದುರು ತಲುಪುತ್ತಿದ್ದಂತೆ ಬೆಳಿಗ್ಗೆ 10-00 ಗಂಟೆಯ ಸಮಯಕ್ಕೆ ಕುಂಪಳ ಕಡೆಯಿಂದ ಕೊಲ್ಯ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ19 ಹೆಚ್.ಪಿ. 2403 ರಲ್ಲಿ ಆರೋಪಿಗಳಾದ ಮುಜಾಂಬಿಲ್ ಸವಾರನಾಗಿಯೂ ಆತನ ಸಂಬಂದಿ ನಿಸಾರ್ ಸಹ ಸವಾರನಾಗಿಯೂ ಮೋಟಾರ್ ಸೈಕಲ್‌ನ್ನು ಸವಾರಿಮಾಡಿಕೊಂಡು ಬಂದು ಪಿರ್ಯಾ ದಿ ಹೋಗುತ್ತಿದ್ದ ಮೋಟಾರ್ ಸೈಕಲ್‌ಗೆ ಅಡ್ಡವಾಗಿ ಇಟ್ಟು ಪಿರ್ಯಾದಿ ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಆರೋಪಿ ಮುಜಾಂಬಿಲ್‌ನು ಮೋಟಾರ್ ಸೈಕಲ್‌ನಿಂದ ಇಳಿದು ಬಂದು ಪಿರ್ಯಾ ದಿಯನ್ನು ಉದ್ದೇಶಿಸಿ ಅವ್ಯಾಚ ಶಬ್ದಗಳಿಂದ ಬೈದು ಇವತ್ತು ನಿನ್ನನ್ನು ಚೂರಿ ಹಾಕಿ ಕೊಂದು ಬಿಡುತ್ತೇನೆ ಎಂದು ಹೇಳಿ ಆರೋಪಿ ಮುಜಾಂಬಿಲನು ಆತನ ಸೊಂಟದಲ್ಲಿ ಇಟ್ಟುಕೊಂಡು ಬಂದಿದ್ದ ಚಾಕುವನ್ನು ಬಲ ಕೈಯಿಂದ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾ ದಿಯ ಹೊಟ್ಟೆಗೆ ತಿವಿದು ಕೊಲೆ ಮಾಡಲು ಬಂದಾಗ, ಕೂಡಲೇ ಪಿರ್ಯಾ ದಿಯು ಕುಳಿತಿದ್ದ ಮೋಟಾರ್ ಸೈಕಲ್‌ನಿಂದ ಒಮ್ಮೆಲೆ ಜಿಗಿದು ತಪ್ಪಿಸಿಕೊಂಡಾಗ ಆರೋಪಿ ಮುಜಾಂಬಿಲ್ ಬೀಸಿದ ಚಾಕುವು ಪಿರ್ಯಾ ದಿಯ ಎಡ ಕೈಯ ಬುಜಕ್ಕಿಂತ ಕೆಳಗೆ ಇರುವ ಮಾಂಸ ಖಂಡಕ್ಕೆ ತಾಗಿ ರಕ್ತ ಗಾಯವಾಗಿರುತ್ತದೆ. ಪಿರ್ಯಾ ದಿಯನ್ನು ಚಾಕುವಿನಲ್ಲಿ ಚುಚ್ಚಿ ಕೊಲೆ ಮಾಡಲೇಬೇಕೆಂಬ ಉದ್ದೇಶದಿಂದ ಆರೋಪಿ ಮುಜಾಂಬಿಲ್ ನ ಜೊತೆಯಲ್ಲಿದ್ದ ಆರೋಪಿ ನಿಸಾರ್ ಓಡಿಕೊಂಡು ಬಂದು ಮುಜಾಂಬಿಲ್‌ನಿಂದ ತಪ್ಪಿಸಿಕೊಳ್ಳದಂತೆ ಪಿರ್ಯಾ ದಿಯನ್ನು ಹಿಡಿಯಲು ಬಂದ ಸಮಯ ಪಿರ್ಯಾ ದಿ ಅವರಿಂದ ತಪ್ಪಿಸಿಕೊಂಡು ದೂರದಲ್ಲಿ ನಿಂತುಕೊಂಡಿದ್ದ ಶ್ರವಣ್ ಮತ್ತು ಉತ್ತಮ್ ಎಂಬವರುಗಳು ಬಂದು ಚಿಕಿತ್ಸೆಯ ಬಗ್ಗೆ ಪಿರ್ಯಾ ದಿಯನ್ನು ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ ಸಾರಾಂಶ.

 

Ullal PS

ದಿನಾಂಕ 16/02/2024 ರಂದು ಮಧ್ಯಾಹ್ನ 12-30 ಗಂಟೆಗೆ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಒಳಪೇಟೆ ರೈಲ್ವೇ ಟ್ರಾಕ್ನ ಬಳಿ ಆರೋಪಿ ಮೊಹಮ್ಮದ್ ಮಿಸ್ತಾ ಇಸ್ಮಾಯಿಲ್ ಎಂಬಾತನು ದಾರಿಯಲ್ಲಿ ಹೋಗಿ ಬರುವವರಿಗೆ ಕಲ್ಲು ಬಿಸಾಡುತ್ತಿದ್ದುದನ್ನು ಪ್ರಶ್ನಿಸಿದಕ್ಕೆ ಆರೋಪಿಯು ಪಿರ್ಯಾದಿ Rajesh S Shetty ಇವರ ಮೇಲೆ ಕಲ್ಲು ಮತ್ತು ಬಾಟಲಿಗಳನ್ನು ಬಿಸಾಡಿದ ಪರಿಣಾಮ ತಲೆಗೆ ರಕ್ತಗಾಯವಾಗಿ ನಂತರ ಆರೋಪಿಯು ಪಿರ್ಯಾದಿದಾರನ್ನು ತಡೆದು ನಿಲ್ಲಿಸಿ ತನ್ನ ಕೈಯಲ್ಲಿದ್ದ ಮತ್ತೊಂದು ಬಾಟಲಿಯಿಂದ ತಲೆಗೆ ಹೊಡೆದು ರಕ್ತ ಗಾಯಗೊಳಿಸಿದ್ದು ಆ ಸಮಯ ಸದ್ರಿ ಸ್ಥಳದಲ್ಲಿದ್ದ ಸೀತಾ ರಾಮ ಎಂಬರಿಗೂ ಕಲ್ಲು ಬಿಸಾಡಿ ಅವರ ಎಡ ಕೈಯ ಮಾಂಸ ಖಂಡಕ್ಕೆ ರಕ್ತ ಗಾಯವಾಗಲು ಆರೋಪಿಯು ಕಾರಣಕರ್ತನಾಗಿರುವುದಾಗಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರಾಂಶ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 17-02-2024 09:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080