ಅಭಿಪ್ರಾಯ / ಸಲಹೆಗಳು

Barke PS

ಪಿರ್ಯಾದಿ Ramesh ದಿನಾಂಕ: ದಿನಾಂಕ:15.03.2023 ರಂದು ರಾತ್ರಿ ಪಾಳೆಯದ ಕರ್ತವ್ಯದಲ್ಲಿ ಮಹಾನಗರ ಪಾಲಿಕೆಯ ಮುಖ್ಯ  ದ್ವಾರದಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದು ರಾತ್ರಿ 8.00 ಗಂಟೆ ಸಮಯಕ್ಕೆ ಸೆಕ್ಯೂರಿಟಿ ರೂಮ್ ಗೆ ಊಟಕ್ಕೆ ಹೋಗಿರುತ್ತಾರೆ. ಆ ಸಮಯ ಪಿರ್ಯಾದಿ ಸಹೊದ್ಯೋಗಿ ಪ್ರಭಾಕರ ಎಂಬವನು ಸೆಕ್ಯೂರಿಟಿ ರೂಮ್ ಗೆ ಬಂದಿದ್ದು, ಹೀಗೆ ಬಂದವನು ಕೆಲಸದ ವಿಚಾರದಲ್ಲಿ ಪಿರ್ಯಾದಿದಾರರಲ್ಲಿ ಜಗಳಕ್ಕೆ ನಿಂತು ಅವರ ಇಬ್ಬರ ಮಧ್ಯ ವಾಗ್ವಾದ ನಡೆದು ನಂತರ ಪಿರ್ಯದಿದಾರರು ಊಟ ಮಾಡಿ ಕೆಲಸ ಮಾಡುವಲ್ಲಿಗೆ ಹೋಗಿರುತ್ತಾರೆ. ಹೀಗೆ ಪಿರ್ಯಾದಿದಾರರು ಕೆಲಸದಲ್ಲಿರುವಾಗ ಸುಮಾರು ರಾತ್ರಿ 9.00 ಗಂಟೆ ಸಮಯಕ್ಕೆ ಯಾರೋ ಪಿರ್ಯಾದಿದಾರರ ಮೊಬೈಲ್ ಗೆ 9672ನೇ ನಂಬ್ರದಿಂದ ಕರೆ ಮಾಡಿ ತುಳು ಭಾಷೆಯಲ್ಲಿ “ದಾನೆಂಬೆ ನಟ್ಟು ಸೂಳೆ ಮಗ ಬೇವರ್ಸಿ,ಮಹಾನಗರ ಪಾಲಿಕೆ ನಿನ್ನ ಅಮ್ಮನವ ಬೇವರ್ಸಿ ನಿನನ್ ಬುಡುಪುಜ್ಜಿ” ಎಂದು ಬೈದು ಬೆದರಿಕೆ ಹಾಕಿರುತ್ತಾರೆ. ಆದಾದ ಸ್ವಲ್ಪ ಸಮಯದ ನಂತರ ಸುಮಾರು ರಾತ್ರಿ 9.20 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಕೆಲಸ ಮಾಡುವ ಸ್ಥಳಕ್ಕೆ ಯಾರೋ ಇಬ್ಬರು ಅಪರಿಚಿತರು ಬಂದು ಏನು ಬಾರಿ ಮಾತನಾಡುತ್ತೀಯ ಹೊರಗಡೆ ಬಾ ಎಂದು ಕರೆದಾಗ ಪಿರ್ಯಾದಿದಾರರು ಹೋಗಿರುವುದಿಲ್ಲ ಇದರಿಂದ ಆ ಇಬ್ಬರು ಕೋಪಗೊಂಡು ಪಿರ್ಯಾದಿದಾರರು ಇದ್ದಲ್ಲಿ ಬಂದು ಕೈಯಿಂದ ಹೊಡೆಯಲು ಮುಂದಾದಾಗ ಪಿರ್ಯಾದಿ ಅವರ ಸುರಕ್ಷತೆಗಾಗಿ ಅವರ ಕೈಯಲ್ಲಿದ್ದ ಲಾಠಿಯಿಂದ ಆ ಇಬ್ಬರಿಗೆ ಹೊಡೆದಿರುತ್ತಾರೆ. ನಂತರ ಆ ಇಬ್ಬರೂ ಸೇರಿ ಪಿರ್ಯಾದಿ ಕೈಯಲ್ಲಿದ್ದ ಲಾಠಿಯನ್ನು ಎಳೆದು ಅದರಿಂದ ಅವರ ಬಲ ಹಣೆ, ಬಲ ಭುಜ, ಸೊಂಟದ ಬಲ ಬದಿಗೆ ಹಲ್ಲೆ ಮಾಡಿ ಅಲ್ಲಿಂದ ತೆರಳಿರುತ್ತಾರೆ. ಆನಂತರ ಪಿರ್ಯಾದಿದಾರರಿಗೆ ನೋವು ಕಾಣಿಸಿಕೊಂಡಿದ್ದು ಅವರು ಚಿಕಿತ್ಸೆಗಾಗಿ ಮಂಗಳೂರಿನ ಏ.ಜೆ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಲಾಠಿಯಿಂದ ಹಲ್ಲೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿದೆ.

Mulki PS

ದಿನಾಂಕ: 16-03-2023 ರಂದು ಪಿರ್ಯಾದಿ Abdul basheer ತನ್ನ 4 ವರ್ಷದ ಮಗುವಿನ ಜೊತೆ ಮೋಟಾರ್ ಸೈಕಲಿನಲ್ಲಿ ಗುತ್ತಕಾಡಿಗೆ ಹೋಗುತ್ತಿದ್ದ ವೇಳೆ ಬೆಳಗ್ಗೆ 08.30 ಗಂಟೆಗೆ ಮುಲ್ಕಿ ತಾಲೂಕು ಅತ್ತೂರು ಗ್ರಾಮದ ತಿಮ್ಮಕಟ್ಟೆ ಎಂಬಲ್ಲಿ ವಾಟರ್ ಟ್ಯಾಂಕ್ ಬಳಿ ಆರೋಪಿ ಮಹಮ್ಮದ್ ಮುಸ್ತಾಫ ಎಂಬಾತನು ತನ್ನ ಸ್ಕೂಟರನ್ನು ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಅಡ್ಡ ಇರಿಸಿದ್ದು ಈ ವೇಳೆ ಪಿರ್ಯಾದಿದಾರರು ತನ್ನ ಮೋಟಾರ್ ಸೈಕಲ್ ನಿಂದ ಇಳಿದಾಗ ಆರೋಪಿ ತನ್ನ ಕೈಯಲ್ಲಿ ಹರಿತವಾದ ಚಾಕುವನ್ನು ಹಿಡಿದುಕೊಂಡು “ಈಗ ನಿನಗೆ ಧೈರ್ಯ ಇದ್ದರೆ ಬಾ ಬೇವರ್ಸಿ” ಎಂದು ಮುಸ್ಲಿಂ ಭಾಷೆಯಲ್ಲಿ ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ನಡೆಸಲು ಬಂದಾಗ ಪಿರ್ಯಾದಿದಾರರು ಅಲ್ಲೇ ಇದ್ದ ಮರದ ಕೋಲನ್ನು ತನ್ನ ಕೈಯಲ್ಲಿ ಹಿಡಿದುಕೊಂಡರೂ ಆರೋಪಿ ಹಲ್ಲೆ ಮಾಡಲು ಮುಂದೆ ಬರುವುದನ್ನು ಕಂಡು ಪಿರ್ಯಾದಿದಾರರು ತನ್ನ ಮಗುವನ್ನು ಹಿಡಿದುಕೊಳ್ಳಲು ತನ್ನ ಬೈಕಿನ ಬಳಿ ಹೋಗುತ್ತಿದ್ದ ವೇಳೆ ಆರೋಪಿ ಮಹಮ್ಮದ್ ಮುಸ್ತಾಫನು ಪಿರ್ಯಾದಿದಾರರ ಹಿಂದಿನಿಂದ ಬಂದು ಆರೋಪಿಯ ಕೈಯಲ್ಲಿದ್ದ ಹರಿತವಾದ ಚೂರಿಯಿಂದ ಪಿರ್ಯಾದಿದಾರರ ಬೆನ್ನಿನ ಎಡಬದಿಗೆ ಚುಚ್ಚಿ ಗಾಯಗೊಳಿಸಿದ್ದು ಈ ವೇಳೆ ಅಲ್ಲೇ ಇದ್ದ ಇಸ್ಮಾಯಿಲ್, ರಫೀಕ್ ಮತ್ತಿತರರು ಪಿರ್ಯಾದಿದಾರರನ್ನು ರಕ್ಷಿಸಲು ಬಂದಾಗ ಆರೋಪಿಯು ಪಿರ್ಯಾದಿದಾರರಿಗೆ “ಇಂದು ನೀನು ಬಚಾವ್ ಆದೆ, ಇನ್ನು ಸಿಕ್ಕಿದರೆ ನಿನ್ನನ್ನು ಕೊಲ್ಲುತ್ತೇನೆ” ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ತೆರಳಿರುತ್ತಾನೆ. ಗಾಯಗೊಂಡ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ  ಕಿನ್ನಿಗೋಳಿ  ಕನ್ಸೆಟ್ಟಾ ಆಸ್ಪತ್ರೆಗೆ ದಾಖಲಾಗಿರುತ್ತಾರೆ.” ಎಂಬಿತ್ಯಾದಿಯಾಗಿದೆ.

Traffic South Police Station      

ಪಿರ್ಯಾದಿ ಭೀಮಪ್ಪ ಪವಾರ (39 ವರ್ಷ) ರವರು ದಿನಾಂಕ: 16-03-2023 ರಂದು ಬಸ್ಸು ನಂಬ್ರ:KA-19-F-3250 ನೇದನ್ನು ಚಲಾಯಿಸಿಕೊಂಡು ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಿಂದ ಮಂಗಳೂರು ಕಡೆಗೆ ಮಂಗಳಾ ಕ್ರಿಡಾಂಗಣ ಸಮಾವೇಶಕ್ಕೆ ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 10-15 ಗಂಟೆಗೆ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಬಳಿ ತಲುಪಿದಾಗ ರಾ ಹೆ 73 ರಲ್ಲಿ ಮಂಗಳೂರಿನಿಂದ ಬಿಸಿ ರೋಡ್ ಕಡೆಗೆ ಹೋಗುತ್ತಿದ್ದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ ನಂಬ್ರ: KA-19-AD-9043 ನೇದನ್ನು ಅದರ ಚಾಲಕ ಮಹಮ್ಮದ್ ಬಾತಿಶ್ ಎಂಬಾತನು ಡಿವೈಡರ್ ದಾಟಿ ಅತಿವೇಗದಿಂದ ವಿರುದ್ದ ದಿಕ್ಕಿನಲ್ಲಿ  ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಾಲನೆಯಿಂದ ಬಸ್ಸಿನ ಮುಂಭಾಗದ ಬಲಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಬಸ್ಸಿನ ಮುಂಭಾಗದ ಗ್ಲಾಸ್ ಹಾಗೂ ಬಸ್ಸಿನ ಬಲಬದಿಗೆ ಜಖಂ ಆಗಿರುತ್ತದೆ ಬಸ್ಸಿನ ಯಾವುದೇ ಪ್ರಯಾಣಿಕರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ ಎಂಬಿತ್ಯಾದಿ.

Mangalore East PS

ಪಿರ್ಯಾದಿ ತನ್ನ ತಂಗಿಯ ಕೆಲಸದ ಸಲುವಾಗಿ ಮಂಗಳೂರಿನ ಕಂಕನಾಡಿಯ “THE LEGEND” ಎಂಬ ಹೆಸರಿನ ಏಜೆನ್ಸಿಗೆ ಡಿಸೆಂಬರ್ 2022 ರಲ್ಲಿ ಅದರ ಕಂಪನಿಯ ಡೈರಕ್ಟರ್ ಆದ ಆಲ್ವಿನ್ ಡಿಮೆಲ್ಲೋರವರನ್ನು ಭೇಟಿಯಾಗಿ ಅವರು ಕೆನಡ ದೇಶಕ್ಕೆ ಕೆಲಸ ಕೊಡಿಸುವುದಾಗಿ ಭರವಸೆ ಕೊಟ್ಟು ಡಿಸೆಂಬರ್ 28ರಂದು ಪಿರ್ಯಾದಾರರಿಂದ ರೂ.3,50,000/- ಹಣವನ್ನು ಪಡೆದಿರುತ್ತಾರೆ. ನಂತರ ಬೇರೆ ಬೇರೆ ಕಾರಣ ಕೊಟ್ಟು ಕೆಲಸ ಕೊಡಿಸದೆ, ಹಣವನ್ನು ಹಿಂತಿರುಗಿಸದೆ ವಂಚಿಸಿರುತ್ತಾರೆ, ಅವರು ಫೋನ್ ಕರೆ ಕೂಡ ಸ್ವೀಕರಿಸದೆ ಇದ್ದ ಕಾರಣ ಮಾರ್ಚ್ 02 ರಂದು ಅರ್ಜಿದಾರರು ಆಫೀಸಿಗೆ ತೆರಳಿ ವಿಚಾರಿಸಿದಾಗ ಬೇರೆಯವರನ್ನು ಕೂಡ ಇದೇ ರೀತಿ ವಂಚಿಸಿರುವುದಾಗಿ ತಿಳಿದುಬಂದಿರುತ್ತದೆ. ನಂತರ ಅವರ ಆಫೀಸಿಗೆ ಕರೆ ಮಾಡಿದಾಗ ತಮ್ಮ ಹಣವನ್ನು ಮಾರ್ಚ್ 03 2023ರಂದು ಬ್ಯಾಂಕ್ ಚೆಕ್ ಮೂಲಕ ಹಿಂತಿರುಗಿಸುವುದಾಗಿ ಇ-ಮೇಲ್ ಮಾಡಿದ್ದು, ಆಫೀಸ್ ತೆರಳಿದಾಗ ಬ್ಯಾಂಕ್ ಚೆಕ್ ಕೊಡದೆ ವಂಚಿಸಿರುತ್ತಾರೆ ಎಂಬಿತ್ಯಾದಿ.

Mangalore East PS  

ದಿನಾಂಕ: 15-03-2023 ರಂದು ಮಂಗಳೂರು ನಗರದ  ಜ್ಯೋತಿ ಜಂಕ್ಷನ್ ಹತ್ತಿರದ ಮೋನಾ ಎಂಟರ್ ಪ್ರೈಸಸ್ ಎದುರು ಇರುವ ಸ್ಮಾರ್ಟ ಟವರ್ ನ ನೆಲಮಹಡಿಯ ಕೋಣೆಯೊಳಗಡೆ ಅಕ್ರಮವಾಗಿ ಅದೃಷ್ಟದ ಮಟ್ಕಾ ಜುಗಾರಿ ಆಟ  ಆಟವಾಡುತ್ತಿದ್ದಾರೆ ಭಾತ್ಮೀದಾರರಿಂದ ಮಾಹಿತಿಯ ಬಂದ ಮೇರೆಗೆ ಸಂಜೆ  06-15  ಗಂಟೆಗೆ ಧಾಳಿ ಮಾಡಿ ನೋಡಲಾಗಿ ಮಟ್ಕಾ ಆಟಗಾರರಿಂದ ಮೊಬೈಲ್ ನಿಂದ ಅದೃಷ್ಟದ ನಂಬ್ರಗಳನ್ನು ವಾಟ್ಸಾಪ್ ಮುಖಾಂತರ ತಂದು  ಅಪಲೋಡ ಮಾಡಿತ್ತಿದ್ದ  ಮೂರು ಜನ ಆಪಾಧಿತರು ಹಾಗೂ ಇತರ ಆರೋಪಿಗಳು ಅದೃಷ್ಟದ  ಆಟಕ್ಕೆ ಉಪಯೋಗಿಸಿದ ನಗದು ಹಣ 3000/- ರೂ, ಸಾಮ್ ಸಂಗ್ ಮೊಬೈಲ್ ಫೋನ್-2, ಕಂಪ್ಯೂಟರ್-2, ಹಾಗೂ ಇತರ ಪರಿಕರಗಳು ಸೇರಿದಂತೆ ಅಂದಾಜು ಒಟ್ಟು ರೂಪಾಯಿ 75,000/- ಬೆಲೆ ಬಾಳುವ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಈ ಸೊತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡಿದ್ದಾಗಿದೆ ಎಂಬಿತ್ಯಾದಿ.

Traffic South Police Station  

ದಿನಾಂಕ:15-03-2023 ರಂದು ಪಿರ್ಯಾದಿ ನವೀನ್ (33 ವರ್ಷ) ರವರು ಹಾಗೂ ಅವರ ಮಾವನವರಾದ ಶ್ರೀನಿವಾಸ ರವರ ಜೊತೆಯಲ್ಲಿ ಕುಟುಂಬದ ದೈವಸ್ಥಾನವಾದ ಚೇಳೂರುನಲ್ಲಿ ಕೆಲಸ ಮುಗಿಸಿ ಜೊತೆಗೆ ಮನೆಗೆ ಹೋಗಲು ಚೇಳೂರು ಜಂಕ್ಷನ್ ಬಳಿ ರಸ್ತೆ ದಾಟುತ್ತಿರುವಾಗ ಸಮಯ ಸುಮಾರು ಸಂಜೆ 07:30 ಗಂಟೆಗೆ ಪಿರ್ಯಾದಿದಾರರ ಮಾವನಾದ ಶ್ರೀನಿವಾಸ ರವರಿಗೆ ಮೇಲ್ಕಾರ ಕಡೆಯಿಂದ ಮುಡಿಪು ಕಡೆಗೆ ಹೋಗುತ್ತಿದ್ದ ಮಹೇಂದ್ರ ಜೀತುನ ವಾಹನ ನಂಬ್ರ: KA-19-AC-7270 ನೇದರ ಚಾಲಕ ಲೋಹಿತಾಕ್ಷ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ  ಪಿರ್ಯಾದಿದಾರರ ಮಾವನವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಡಾಮಾರು ರಸ್ತೆಗೆ ಬಿದ್ದು ಅವರ ಎಡ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ, ಬಲಗಾಲಿನ ಪಾದದ ತೀವ್ರತರದ ರಕ್ತಗಾಯ, ಬಲ ಗೈ ಮೊಣಗಂಟಿಗೆ ಮೂಳೆ ಮುರಿತದ ಗಾಯ, ಮೂಗಿಗೆ ರಕ್ತ ಗಾಯ ಹಾಗೂ ತಲೆ ಮತ್ತು ಹಣೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಅವರನ್ನು ಕೂಡಲೇ ಅಲ್ಲಿ ಸೇರಿದ್ದ ಸಾರ್ವಜನಿಕರು ಮತ್ತು ಪಿರ್ಯಾದಿದಾರರು ರಿಕ್ಷಾವೊಂದರಲ್ಲಿ ದೇರಳಕಟ್ಟೆಯ ಕೆ,ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಶ್ರೀನಿವಾಸರವರನ್ನು ಪರೀಕ್ಷಿಸಿ ಮಾತನಾಡದ ಸ್ಥಿತಿಯಲ್ಲಿದ್ದ ಅವರನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ,ಎಂಬಿತ್ಯಾದಿ.

Traffic North Police Station                                    

ಪಿರ್ಯಾದಿ ಉದಯ ಕುಮಾರ್ (43 ವರ್ಷ) ರವರು ದಿನಾಂಕ: 13-03-2023 ರಂದು ತನ್ನ ಬಾಬ್ತು KA-05-MF-1775 ನಂಬ್ರದ ಕಾರಿನಲ್ಲಿ ಹೆಂಡತಿ ಮಕ್ಕಳೊಂದಿಗೆ ಸಂಭಂದಿಕರ ಮನೆಗೆ ತೆರಳಿ ಬಳಿಕ ಅದೇಕಾರಿನಲ್ಲಿ ವಾಪಾಸು ಮನೆ ಕಡೆಗೆ ಬುರುತ್ತಾ ರಾಹೆ 66ರ ಕೊಟ್ಟಾರ- ಕೂಳೂರು ಮಾರ್ಗವಾಗಿ ಪಣಂಬೂರು ಕಡೆಗೆ ಬರುತ್ತಿರುವ ಸಮಯ ಸುಮಾರು ಮದ್ಯಾಹ್ನ 3:50 ಘಂಟೆಗೆ ಪಣಂಬೂರು ಇಂಡಿಯನ್ ಆಯಿಲ್ ಪಂಪಿನ ಎದರು ರಸ್ತೆಯ ಎಡಭಾಗದಲ್ಲಿ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದಂತೆ ಪಿರ್ಯಾದಿದಾರರ ಕಾರಿನ ಹಿಂದುಗಡೆಯಿಂದ KA-19-AE-0399 ನಂಬ್ರದ ಕಾಂಕ್ರೀಟ್ ರೆಡಿಮಿಕ್ಸ್ ಲಾರಿಯನ್ನು ಅದರ ಚಾಲಕ DILWAR HUSSAIN ಎಂಬಾತನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಭಾಗದ ಬಲಬದಿ ಪೆಂಡರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಭಾಗದ ಬಲಬದಿ ಪೆಂಡರ್ ಮತ್ತು ಬಲಭಾಗದ ಎರಡೂ ಡೋರುಗಳು ಜಖಂಗೊಂಡಿರುತ್ತವೆ ಹಾಗೂ ಈ ಅಪಘಾತದಿಂದ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ ಎಂಬಿತ್ಯಾಧಿ ಸಾರಾಂಶ.

ಇತ್ತೀಚಿನ ನವೀಕರಣ​ : 16-03-2023 07:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080