ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

Traffic North Police Station

ದಿನಾಂಕ  14-03-2024 ರಂದು ಪಿರ್ಯಾಧಿ T Nazeer Ahamadಇವರ ಮಗ ಇಸ್ಮಾಯಿಲ್ ಅಜ್ವದ್ (31 ವರ್ಷ) ನು ಆತನ ಭಾವ ಬದ್ರುದ್ದೀನ್ ರವರ ಮಾಲಕತ್ವದ ಕೆಎ 19 HN 5981 ನಂಬ್ರದ ಸ್ಕೂಟರ್ ನ್ನು ಸವಾರಿ ಮಾಡುತ್ತಾ ಮೂಲ್ಕಿಯಿಂದ ಸುರತ್ಕಲ್ ಕಡೆಗೆ ರಾ.ಹೆ-66 ರಲ್ಲಿ ಬರುತ್ತಾ ಸಂಜೆ ಸುಮಾರು 6.45 ಗಂಟೆಗೆ ಮುಕ್ಕ ಜಂಕ್ಷನ್ ತಲುಪುತ್ತಿದ್ದಂತೆ ಅವರ ಹಿಂದುಗಡೆಯಿಂದ ಅಂದರೆ ಮುಲ್ಕಿ ಕಡೆಯಿಂದ ಕೆಎ 19 AB 9425 ನಂಬ್ರದ ಟ್ರಕ್ ನ್ನು ಅದರ ಚಾಲಕ CHANPREET SINGH ಎಂಬವನು ನಿರ್ಲಕ್ಷ್ಯತನದಿಂದ ವೇಗವಾಗಿ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ಸವಾರ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಎಡಕಾಲಿನ ಮಣಿಗಂಟಿಗೆ ಮತ್ತು ಬಲಕೈ ಮೊಣಗಂಟಿನ ಬಳಿ ಮೂಳೆ ಮುರಿತದ ಗಾಯವಾಗಿದ್ದು, ಅಲ್ಲದೇ ಮೈ ಕೈಗಳಿಗೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

 

Mangalore North PS

ಈ ದಿನ ದಿನಾಂಕ: 16-03-2024 ರಂದು  ಸಮಯ ಮುಂಜಾನೆ 11:30 ಗಂಟೆಗೆ ಮಾದಕ ದ್ಯವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿಎಸ್ಐ ಮಂಗಳೂರು ಉತ್ತರ ಪೊಲೀಸ್ ಠಾಣೆ ಸಿಬ್ಬಂದಿವರೊಂದಿಗೆ ರೌಂಡ್ಸ ಕರ್ತವ್ಯ ದಲ್ಲಿರುವ ಸಮಯ ಮಂಗಳೂರು ನಗರದ ಸಿಟಿ ಸೆಂಟರ್ ಬಳಿ ತಲುಪಿದಾಗ ಫೈಸಲ್ ಪಿ ತಂದೆ: ಅಬ್ದುಲ್ ರಹ್ಮನ ಸಫ್ ಮರ್ವ ವಾಸ: Koranpeedika,Pariyaram, Kannuru,Kerala  ಎಂಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಆತನನ್ನು ಅವರ ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಗೆ ಸಿಬ್ಬಂದಿಗಳ ಭದ್ರಿಕೆಯಲ್ಲಿ ಕೋರಿಕೆ ಪತ್ರದೊಂದಿಗೆ ಹಾಜರುಪಡಿಸಿದ್ದು, ಎ ಜೆ ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲ್ಲಿ, ಫೈಸಲ್ ಪಿ ಎಂಬಾತನು, Tetrahydracannabinoid, (Marijuana) And Methamphetamine ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿರುತ್ತಾರೆ.ನಂತರ ಠಾಣೆಗೆ ಕರೆತಂದು ಫೈಸಲ್ ಪಿ ನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೋರಿಕೆ ಎಂಬಿತ್ಯಾದಿ

 

Konaje PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:16-03-2024ರಂದು ಪಿರ್ಯಾದಿ Nagaraj S ಇವರು  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ ಸಮಯ 6.00 ಗಂಟೆಗೆ ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ರೆಂಜಾಡಿ ಬಯಲು ಮೈದಾನದ ಬಳಿ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ರಾಜೇಶ್ ಸುವರ್ಣ, ಪ್ರಾಯ: 23 ವರ್ಷ, ತಂದೆ: ನವೀನ್ ಸುವರ್ಣ, ಹಾಲಿ ವಾಸ: ಮರಿಯಾ ಕ್ಲಬ್ ಬಳಿ ಮನೆ, ಉಳಿಯಾ, ಪೆರ್ಮನ್ನೂರು ಗ್ರಾಮ. ಖಾಯಂ ವಿಳಾಸ: ಮೊಗವೀರ ಪಣ್ಣ, ಸೋಮೇಶ್ವರ ಗ್ರಾಮ, ಉಳ್ಳಾಲ ತಾಲೂಕು. ಮೊಹಮ್ಮದ್ ಇರ್ಷಾದ್, ಪ್ರಾಯ: 29 ವರ್ಷ, ತಂದೆ: ಮೊಹಮ್ಮದ್, ವಾಸ: ಮಲ್ಹಾರ್ ಪದವು ಮನೆ, ಪಜೀರು ಗ್ರಾಮ ಮತ್ತು ಅಂಚೆ, ಉಳ್ಳಾಲ ತಾಲೂಕು ಎಂಬವರು ಮುಂದಿನ ಕ್ರಮದ ಬಗ್ಗೆ ಸಂಜೆ 6.10 ಗಂಟೆಗೆ ವಶಕ್ಕೆ ಪಡೆದುಕೊಂಡು ಮಂಗಳೂರು ಕಣಚೂರು ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು MARIJUANA(THC) ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 16-03-2024 10:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080