ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

CEN Crime PS Mangaluru City  

 

ಈ ಪ್ರಕರಣದ ಪಿರ್ಯಾದಿ ಅಂಕಿತ ವಿಠಲ ಪೂಜಾರಿ ರವರು ಭೈರವಿ ಎಂಬ ಹೆಸರಿನ ಹೊಟೇಲ್ ಮ್ಯಾನೇಜ್ ಮೆಂಟ್ ಮತ್ತು ಹೌಸ್ ಕೀಪಿಂಗ್ ಎಂಬ ಸಂಸ್ಥೆಯನ್ನು ಮುಂಬಯಿಯಲ್ಲಿ ನಡೆಸಿಕೊಂಡಿದ್ದು, ಸದ್ರಿ ಸಂಸ್ಥೆಯ ಅಂಗ ಸಂಸ್ಥೆಗಳನ್ನು ಉಡುಪಿ ಮತ್ತು ಮಂಗಳೂರಿಗೆ ವಿಸ್ತರಿಸಲು ಹುಡುಕಾಟದಲ್ಲಿರುವಾಗ ಆಪಾದಿತರು ಪಿರ್ಯಾದಿಯನ್ನು ಸಂಪರ್ಕಿಸಿ ತಾವು ಜೀವನ್ ಯಂತ್ರ ಅಗ್ರಿ ಸೊಲ್ಯೂಶನ್ ಎಂಬ ಹೆಸರಿನ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ತಯಾರಿಸುವ ಉದ್ದಿಮೆಯನ್ನು ನಡೆಸಿಕೊಂಡಿದ್ದು ಈ ಕಂಪೆನಿಯ ಇತರ ಶಾಖೆಗಳು ದ.ಕ ಜಿಲ್ಲೆ ಮತ್ತು ಉಡುಪಿಯಲ್ಲಿದ್ದು ಈ ಉದ್ದಿಮೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಾಗಿ ಲಾಭ ಪಡೆಯಬಹುದೆಂದು ಹಣ ಹೂಡಿಕೆ ಮಾಡಿದ ಮೊದಲ ಎರಡು ತಿಂಗಳ ಒಳಗಾಗಿ ರೂ 65,000/- ಹಣವನ್ನು ತಿಂಗಳಿಗೆ ನೀಡುವುದಾಗಿ 2024 ಮಾರ್ಚ್ ಒಳಗೆ ಹೂಡಿಕೆ ಮಾಡಿದ ಸಂಪೂರ್ಣ ಹಣವನ್ನು ವಾಪಾಸು ನೀಡುವುದಾಗಿ ಭರವಸೆ ನೀಡಿ ಪಿರ್ಯಾದಿಯನ್ನು ನಂಬಿಸಿದಂತೆ ಪಿರ್ಯಾದಿ ತನ್ನ ಭೈರವಿ ಸಂಸ್ಥೆಯ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಖಾತೆ ಸಂಖ್ಯೆ ಯಿಂದ  ದಿನಾಂಕ 29-04-2022 ರಂದು ಚೆಕ್ ಮುಖಾಂತರ ಜೀವನ್ ಯಂತ್ರ ಅಗ್ರಿ ಸೊಲ್ಯೂಶನ್ ಖಾತೆಗೆ ರೂ 65,00,000/- ಹಣವನ್ನು ವರ್ಗಾಯಿಸಿದ್ದು ಬಳಿಕ ಆಪಾದಿತರು ಪಿರ್ಯಾದಿಗೆ ನಂಬಿಸಿದಂತೆ ಲಾಭಾಂಶವನ್ನು ನೀಡದೇ ಹಣವನ್ನು ವಾಪಾಸು ಕೊಡದೇ ದಿನ ತಳ್ಳುತ್ತಿದ್ದರಿಂದ ಪಿರ್ಯಾದಿ ಹಣದ ಬಗ್ಗೆ ಆಪಾದಿತರಲ್ಲಿ ವಿಚಾರಿಸಲು ಇನ್ನು ಮುಂದಕ್ಕೆ ಹಣ ಕೇಳಿದರೆ ಪಿರ್ಯಾದಿಯ ಕುಟುಂಬವನ್ನು ಜೀವಂತವಾಗಿ ಉಳಿಸುದಿಲ್ಲವಾಗಿ ಬೆದರಿಕೆ ಹಾಕಿರುವುದಾಗಿದೆ. ಆಪಾದಿತರು ಪಿರ್ಯಾದಿಯನ್ನು ನಂಬಿಸಿ ವಂಚಿಸಿ ಬೆದರಿಸಿ ರೂ 65,00,000/- ಹಣ ನಷ್ಟವನ್ನುಂಟು ಮಾಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ

 

Mangalore North PS

 

ದಿನಾಂಕ: 16-04-2024 ರಂದು  ಸಮಯ ಮುಂಜಾನೆ 11:30 ಗಂಟೆಗೆ ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿ.ಎಸ್.ಐ ಮಂಗಳೂರು ಉತ್ತರ ಪೊಲೀಸ್ ಠಾಣೆ ರವರು  ಮತ್ತು ಸಿಬ್ಬಂದಿಯವರೊಂದಿಗೆ ರೌಂಡ್ಸ ಕರ್ತವ್ಯ ದಲ್ಲಿರುವ ಸಮಯ ಭಾವುಟಗುಡ್ಡ ಬಳಿ ತಲುಪಿದಾಗ Dived Raj, P Age: 20 Years, S/o K. Rajeev Kumar , R/o Chakyar House,, Perumachery Mayyil Post, Cherupazhassi, Kolacherry Kannur Kerala  ಎಂಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಮಂದಿನ ಕ್ರಮದ ಬಗ್ಗೆ  ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಗೆ ಹಾಜರುಪಡಿಸಿದ್ದು,  ಎ ಜೆ ಆಸ್ಪತ್ರೆಯ ವೈದ್ಯರು ಆವನನ್ನು ಪರೀಕ್ಷಿಸಿದಲ್ಲಿ Dived Raj, P ಎಂಬುವನು Tetrahydracannabinoid ( Marijuana) ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿರುತ್ತಾರೆ  ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 16-04-2024 09:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080