ಅಭಿಪ್ರಾಯ / ಸಲಹೆಗಳು

 

Crime Reported in Mangalore West Traffic PS                           

ಈ ಪ್ರಕರಣದ ಸಾರಂಶವೇನೆಂದರೆ ಪಿರ್ಯಾದಿ GURURAJ ದಾರರು ದಿನಾಂಕ:15-05-2023 ರಂದು ಸಂಜೆ ಕಾರ್ ಸ್ಟ್ರೀಟ್ ನಿಂದ KA-19-HG-3698ನೇದರಲ್ಲಿ ಪಿ.ವಿ.ಎಸ್ ಜಂಕ್ಷನ್ ನ ಸಿಗ್ನಲ್ ಬಿದ್ದ ಕಾರಣ ಮೋಟಾರು ಸೈಕಲ್ ನ್ನು ನಿಲ್ಲಿಸಿದ ಸಮಯ ಸುಮಾರು ಸಂಜೆ 6-30 ಗಂಟೆಗೆ ನವಭಾರತ್ ಸರ್ಕಲ್ ಕಡೆಯಿಂದ ಪಿ.ವಿ.ಎಸ್ ಜಂಕ್ಷನ್ ಕಡೆಗೆ KA-35-B-7751ನೇ ಬೊಲೋರೋ ಜೀಪನ್ನು ಅದರ ಚಾಲಕನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ನಂತರ ಜೀಪು ಅಲ್ಲಿಯೇ ನಿಂತಿದ್ದ ಇತರ ವಾಹನಗಳಾದ KA-19-MK-7902ನೇ ಕಾರಿನ ಹಿಂಬದಿಗೆ ಹಾಗು KA-19-EV-4484ನೇ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದು ಕಾರು ಮತ್ತು ಸ್ಕೂಟರ್ ಜಖಂಗೊಂಡಿರುತ್ತದೆ. ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಪಿರ್ಯಾದಿದಾರರನ್ನು ಹಾಗೂ ಸ್ಕೂಟರ್ ನ ಹಿಂಬದಿ ಸವಾರೆಯನ್ನು ಉಪಚರಿಸಿದರು ಅಪಘಾತಪಡಿಸಿದ ಜೀಪಿನ ಚಾಲಕನ ಹೆಸರು ವಿ.ಎಸ್ ಜಯಪ್ರಕಾಶ್ ಎಂಬುದಾಗಿ ತಿಳಿಯಿತು. ಈ ಅಪಘಾತದಿಂದ ನನ್ನ ಬಲ ಕೈಗೆ ಹಾಗೂ ತಲೆಗೆ ಗುದ್ದಿದ ನಮೂನೆಯ ಗಾಯವಾಗಿರುತ್ತದೆ ಎಂಬಿತ್ಯಾದಿ

 

CEN Crime PS

ಪಿರ್ಯಾದಿದಾರರ ಬೆಂಗಳೂರಿನಲ್ಲಿ ಬಾಡಿಗೆಗೆ ಫ್ಲಾಟ್‌ ಇದೆ ಎಂದು N0BROKER.Com ನಲ್ಲಿ ಜಾಹೀರಾತನ್ನು ಪೋಸ್ಟ್ ಮಾಡಿರುತ್ತಾರೆ. ಇದನ್ನು ನೋಡಿದ ಭಾರತೀಯ ಸೇನೆಯ ಶ್ರೀ.ದೀಪಕ್ ಪವಾರ್ (PhNo.9395873969) ಎಂಬವರು ದೆಹಲಿಯಿಂದ ಬೆಂಗಳೂರಿಗೆ ವರ್ಗಾವಣೆಯಾಗಿರುವುದಾಗಿ ತಿಳಿಸಿ ಪಿರ್ಯಾದಿದಾರರ ಫ್ಲಾಟ್‌ನ್ನು ಖರೀದಿ ಮಾಡಲು ಆಸಕ್ತಿಯಿದೆ ಎಂದು ತಿಳಿಸಿ, ದಿನಾಂಕ  15 ಮೇ 2023 ರಂದು ಸಂಜೆ 6:50 ರ ಶ್ರೀ.ದೀಪಕ್ ಪವಾರ್ ಎಂಬವರು ಮುಂಗಡವಾಗಿ 50000/- ಹಣವನ್ನು ಪಾವತಿಸುವುದಾಗಿ ತಿಳಿಸಿರುವುದಲ್ಲದೇ ಈ ಬಗ್ಗೆ ಶಿಬಿರದ ಮೇಲಾಧಿಕಾರಿಗಳು ಫೋನ್ ಮಾಡುತ್ತಾರೆ ಎಂದು ತಿಳಿಸಿದಾಗ ಕ್ಯಾಪ್ಟನ್ ಆಫೀಸ್ 8317838829 ನಂಬ್ರದಿಂದ ಕರೆ ಬಂದಿರುತ್ತದೆ.  ಕರೆ ಮಾಡಿದ ವ್ಯಕ್ತಿಯು ಪಿರ್ಯಾದಿದಾರರ Uco ಬ್ಯಾಂಕ್ ಖಾತೆಗೆ ಸಂಪರ್ಕಗೊಂಡಿರುವ ಪಿರ್ಯಾದಿದಾರರ Google Pay ಅಪ್ಲಿಕೇಶನ್ ಅನ್ನು ತೆರೆಯಲು ಅವರು ಸಲಹೆ ನೀಡಿರುತ್ತಾರೆ ಇದನ್ನು ನಂಬಿದ ಪಿರ್ಯಾದಿದಾರರು ಹಣವನ್ನು ಸ್ವೀಕರಿಸಲು ಆರೋಪಿಯು ಸೂಚಿಸಿದಂತೆಯೇ ಪಿರ್ಯಾದಿದಾರರು ಮಾಡಿರುತ್ತಾರೆ. ಆಗ ಆರೋಪಿಯು  ಪಿರ್ಯಾದಿದಾರರ ಖಾತೆಗೆ ಹಣ ಸಂದಾಯ ಮಾಡಿದಂತೆ ಮಾಡಿ, ವಹಿವಾಟು ವಿಫಲವಾದಂತೆ ತೋರಿಸಿರುತ್ತಾನೆ.. ಆಗ ಪಿರ್ಯಾದಿದಾರರು ಈ ಬಾರಿ ಕೇವಲ 49000 ರೂ ಮಾತ್ರ ಮಾಡುವಂತೆ ತಿಳಿಸಿದಾಗ, ಆರೋಪಿಯು ಹಣವನ್ನು ಕಳುಹಿಸಿದ್ದೇನೆ ಎಂದು ತಿಳಿಸಿ ನಂತರ ಕೂಡಾ ವಿಫಲವಾದಂತೆ ಮಾಡಿ, ಫಿರ್ಯಾದುದಾರರ UCo ಬ್ಯಾಂಕ್ ಖಾತೆಯಿಂದಲೇ ರೂ 50,000 /- ಮತ್ತು 49,000/- ರೂ ಗಳು  ಎರಡು ಸಲ ಆತನ ಖಾತೆ ವರ್ಗಾಯಿಸಿಕೊಂಡು ಪಿರ್ಯಾದಿದಾರರನ್ನು ನಂಬಿಸಿ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ

 

Traffic North Police Station                            

ದಿನಾಂಕ: 14-05-2023 ರಂದು ಪಿರ್ಯಾದಿ Jagadish Kumar Chaurasiya ದಾರರೊಂದಿಗೆ ವೆಲ್ಡಿಂಗ್ ಕೆಲಸ ಮಾಡಿಕೊಂಡಿರುವ ಅಬ್ದುಲ್ ಫೈಜಲ್ ಎಂಬುವರು ತಮ್ಮ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-EL-1422 ನೇದರಲ್ಲಿ ಪಿರ್ಯಾದಿದಾರರ ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ತಾನು ಸವಾರಿ ಮಾಡಿಕೊಂಡು ಯೆಯ್ಯಾಡಿ ಪಣಂಬೂರು ಜೋಕಟ್ಟೆ ಕ್ರಾಸ್ ಮೂಲಕ ಅಂಗರಗುಂಡಿ ರೈಲ್ವೆ ಬ್ರಿಡ್ಜ್ ಅಂಡರ್ ಪಾಸ್ ಹತ್ತಿರ ಸಂಜೆ ಸಮಯ ಸುಮಾರು 5:30 ಗಂಟೆಗೆ ತಲುಪುತ್ತಿದ್ದಂತೆ ಮೋಟಾರ್ ಸೈಕಲನ್ನು ಅದರ ಸವಾರನು ವೇಗವಾಗಿ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ ಮೋಟಾರ್ ಸೈಕಲಿಗೆ ಬ್ರೇಕ್ ಹಾಕಿದ ಪರಿಣಾಮ ಚಾಲನಾ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್ ಸವಾರ ಮತ್ತು ಸಹಸವಾರ ಇಬ್ಬರೂ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದಿರುತ್ತಾರೆ ಇದರ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಪಾದದ ಹಿಮ್ಮಡಿ ಬಳಿ ಮೂಳೆ ಮುರಿತದ ಗಾಯವಾಗಿ ಚಿಕಿತ್ಸೆ ಬಗ್ಗೆ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಹಾಗೂ ಈ ಅಪಘಾತದಿಂದ ಮೋಟಾರ್ ಸೈಕಲ್ ಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ.

 

Traffic South Police Station         

ಪಿರ್ಯಾದಿ SUGADAN ದಾರರ ಸಹೋದ್ಯೋಗಿಯಾದ ಸೋಜ (45 ವರ್ಷ) ರವರು ದಿನಾಂಕ:15-05-2023 ರಂದು ಬೋಳಿಯಾರ್ ಜಂಕ್ಷನ್ ಹತ್ತಿರ ಸಮಾಧಾನ್ ಬಾರ್ ನ ಮುಂದಿನ ರಸ್ತೆಯನ್ನು ದಾಟಿ ಮನೆ ಕಡೆಗೆ ಬರುವ ಸಮಯ ಸುಮಾರು ರಾತ್ರಿ 09:00 ಗಂಟೆಗೆ ಮುಡಿಪುವಿನಿಂದ ಚೇಳಾರ್ ಕಡೆಗೆ ಹೋಗುತ್ತಿದ್ದ ಸ್ಕೂಟರ್ ನಂಬ್ರ KA-19-HJ-4702 ನೇದನ್ನು ಅವರ ಸವಾರ ರಕ್ಷಿತ್ (26 ವರ್ಷ) ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸೋಜ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಮುಖಕ್ಕೆ, ತಲೆಗೆ, ಗಂಭೀರ ಸ್ವರೂಪದ ಗಾಯವಾಗಿರುತ್ತದೆ ಹಾಗೂ ಈ ಅಪಘಾತ ಪಡಿಸಿದ ಸ್ಕೂಟರ್ ಸವಾರ ರಕ್ಷಿತ್ ರವರಿಗೂ ಕಣ್ಣನ ಭಾಗ ಮತ್ತು ತಲೆಗೆ ಗಂಬೀರ ಸ್ವರೂಪದ ಗಾಯವಾಗಿರುತ್ತದೆ ಕೂಡಲೇ ಅಲ್ಲಿ ಸೇರಿ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಓಮಿನಿ ಕಾರ್ ನಲ್ಲಿ ಕರೆದುಕೊಂಡು ಹೋಗಿದ್ದು ಅಲ್ಲಿ ಸೋಜಾ ರವರನ್ನು ಪರೀಕ್ಷಿಸಿ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿದ್ದು ರಕ್ಷಿತ್ ರವರು ಅಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೊಂದು ಆಸ್ಪತ್ರೆಗೆ ಹೋಗಿರುವುದಾಗಿದೆ, ಎಂಬಿತ್ಯಾದಿ.

CEN Crime PS

 ದಿನಾಂಕ 05-05-2023 ರಂದು ಯಾರೋ ಅಪರಿಚಿತ ವ್ಯಕ್ತಿ ಇನ್ಸ್ಟಾಗ್ರಾಂ ಖಾತೆ ಹೆಸರು darshela_fx_trader ನ ಮೂಲಕ ಆನ್ ಲೈನ್ ಇನ್ವೆಸ್ಟ್ ಮೆಂಟ್ ಪ್ಲಾನ್ ಬಗ್ಗೆ ಪೋಸ್ಟ್ ಮಾಡಿರುತ್ತಾರೆ.ಸದ್ರಿ ಪೋಸ್ಟ್ ಅನ್ನು ನೋಡಿದ ಪಿರ್ಯಾದಿದಾರರು ಇನ್ಸ್ಟಾಗ್ರಾಂ ಮೂಲಕ ಸಂದೇಶ ಕಳುಹಿಸಿ ವಿಚಾರಿಸಿರುತ್ತಾರೆ. ನಂತರ ಅಪರಿಚಿತ ವ್ಯಕ್ತಿಯು ತಾನು ದರ್ಶೆಲಾ ಎಂದು ಪರಿಚಯಿಸಿಕೊಂಡು ಇನ್ವೆಸ್ಟ್ ಮೆಂಟ್ ಪ್ಲಾನ್ ಬಗ್ಗೆ ವಿವರಿಸಿರುತ್ತಾರೆ. ಹತ್ತು ಸಾವಿರದಿಂದ ಹತ್ತು ಲಕ್ಷದವರೆಗೆ ಹಣ ಇನ್ವೆಸ್ಟ್ ಮೆಂಟ್ ಮಾಡಿದರೆ ಅಧಿಕ ಲಾಭ ಗಳಿಸಬಹುದೆಂದು ತಿಳಿಸಿರುತ್ತಾರೆ.ನಂತರ ಸದ್ರಿ ಸಂಗತಿಯನ್ನು ಪಿರ್ಯಾದಿದಾರರು ಸತ್ಯವೆಂದು ನಂಬಿ ಹಣ ಹೂಡಿಕೆ ಮಾಡಲು ಮುಂದಾಗುತ್ತಾರೆ.ದಿನಾಂಕ 05-05-2023 ರಂದು ಪಿರ್ಯಾದಿದಾರರು ತಮ್ಮ ಯೂನಿಯನ್ ಬ್ಯಾಂಕ್ ಖಾತೆ ನಂಬ್ರ- ಮತ್ತು ಎಸ್ ಬಿ ಐ ಬ್ಯಾಂಕ್ ಖಾತೆ ನಂಬ್ರ- ನೇದರಿಂದ ಕ್ರಮವಾಗಿ 55,000/- ಮತ್ತು 20,000/- ಹಾಗೂ 10,000 ಒಟ್ಟು 85,000/- ರೂಗಳನ್ನು ಆರೋಪಿತನ ಮೊಬೈಲ್ ನಂಬ್ರ: 8980055313 ನೇದಕ್ಕೆ ಯುಪಿಐ ಮುಖಾಂತರ ವರ್ಗಾಯಿಸಿರುತ್ತಾರೆ. ನಂತರ ಪಿರ್ಯಾದಿದಾರರಿಂದ ಇನ್ನೂ ಹೆಚ್ಚಿನ ಹಣ ಇನ್ವೆಸ್ಟ್ ಮಾಡಲು ತಿಳಿಸಿದಾಗ ಪಿರ್ಯಾದಿದಾರರು ನಿರಾಕರಿಸಿದ ಕಾರಣ, ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರನ್ನು ಇನ್ಸ್ಟಾಗ್ರಾಂ ನಲ್ಲಿ ಬ್ಲಾಕ್ ಮಾಡಿರುತ್ತಾರೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಇನ್ಸ್ಟಾಗ್ರಾಂ ಖಾತೆಯ ಮೂಲಕ ದರ್ಶೆಲಾ ಎಂಬ ಹೆಸರಿನ ಮೂಲಕ ಪರಿಚಯಿಸಿಕೊಂಡು ಆನ್ ಲೈನ್ ಇನ್ವೆಸ್ಟ್ ಮೆಂಟ್ ಹೆಸರಿನಲ್ಲಿ ಮೋಸದಿಂದ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿರುತ್ತಾರೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 21-08-2023 12:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080