Crime Reported in CEN Crime PS
ದಿನಾಂಕ 07-06-2023 ರಂದು ಯಾರೋ ಅಪರಿಚಿತ ವ್ಯಕ್ತಿ ವಾಟ್ಸ್ ಆಪ್ ನಂಬ್ರ-9909436997 ನೇದರಿಂದ ಪಿರ್ಯಾದಿದಾರರ ದೂರವಾಣಿ ಸಂಖ್ಯೆ-ನೇದಕ್ಕೆ ವಾಟ್ಸ್ ಆಪ್ ಸಂದೇಶ ಕಳುಹಿಸಿ ಆನ್ ಲೈನ್ ಗೂಗಲ್ ರಿವೀವ್ ಟಾಸ್ಕ್ ಕೆಲಸ ಮಾಡಿದರೆ ಕಮಿಷನ್ ನೀಡುವುದಾಗಿ ತಿಳಿಸಿ ಆನ್ ಲೈನ್ ಗೂಗಲ್ ರಿವೀವ್ ಟಾಸ್ಕ್ ಟೆಲೆಗ್ರಾಂ ಲಿಂಕ್ http://t.me/AmiyaAmiya ಕಳುಹಿಸಿರುತ್ತಾರೆ.ನಂತರ ಪಿರ್ಯಾದಿದಾರರು ಸದ್ರಿ ಲಿಂಕ್ ಮುಖಾಂತರ ಪಿರ್ಯಾದಿದಾರರು ಟಾಸ್ಕ್ ಎಂಬ ಟೆಲೆಗ್ರಾಂ ಗ್ರೂಪ್ ಜಾಯಿನ್ ಆಗಿರುತ್ತಾರೆ.ಸದ್ರಿ ಗ್ರೂಪ್ ನಲ್ಲಿ ಗೂಗಲ್ ರಿವೀವ್ ಟಾಸ್ಕ್ ಗಳನ್ನು ಕಳುಹಿಸಿರುತ್ತಾರೆ.ಪಿರ್ಯಾದಿದಾರರು ಸದ್ರಿ ಆರು ಟಾಸ್ಕ್ ಗಳನ್ನು ಪೂರ್ಣಗೊಳಿಸಿರುತ್ತಾರೆ,ಅಂತೆಯೇ ಒಂದು ಟಾಸ್ಕ್ ಗೆ 50 ರೂ ನಂತೆ ಒಟ್ಟು 300 ರೂ.ಗಳನ್ನು ಪಿರ್ಯಾದಿದಾರರ ಐಸಿಐಸಿಐ ಬ್ಯಾಂಕ್ ಖಾತೆಗೆ ಪಾವತಿಸಿರುತ್ತಾರೆ. ನಂತರ ಪಿರ್ಯಾದಿದಾರರಿಗೆ ಬೇರೆ ಬೇರೆ ರೀತಿಯ ಗೂಗಲ್ ರಿವೀವ್ ಟಾಸ್ಕ್ ಗಳನ್ನು ಕಳುಹಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್ ನೀಡುವುದಾಗಿ ತಿಳಿಸಿರುತ್ತಾರೆ.ಅದರಂತೆ ಪಿರ್ಯಾದಿದಾರರು ನಿಜವೆಂದು ನಂಬಿಕೊಂಡು ದಿನಾಂಕ 08-06-2023 ರಂದು ಪಿರ್ಯಾದಿದಾರರು ತಮ್ಮ ಬ್ಯಾಂಕ್ ಖಾತೆಯಿಂದ ಮೊದಲಿಗೆ 9,000/- ರೂ ಗಳನ್ನು ಅಪರಿಚಿತ ವ್ಯಕ್ತಿಗಳು ಕಳುಹಿಸಿದ ಪೇಟಿಎಂ 8128860143@PNB ಐಡಿ ಗೆ ಪಾವತಿಸಿರುತ್ತಾರೆ.ದಿನಾಂಕ 08-06-2023 ರಂದು 30,000/- ರೂಗಳನ್ನು ಅಪರಿಚಿತ ವ್ಯಕ್ತಿಯ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ-638605500144, IFSC CODE–ICIC0006386 ನೇದಕ್ಕೆ ಪಾವತಿಸಿರುತ್ತಾರೆ.ಅದೇ ದಿನ ಪಿರ್ಯಾದಿದಾರರು ತಮ್ಮ ಬ್ಯಾಂಕ್ ನಿಂದ ಹಂತ ಹಂತವಾಗಿ 50,000/-ಖಾತೆ ಸಂಖ್ಯೆ.186045500251 ನೇದಕ್ಕೆ ಪಾವತಿಸಿರುತ್ತಾರೆ. ಮತ್ತು ಅದೇ ರೀತಿ ದಿನಾಂಕ 8-06-2023 ರಂದು ಪಿರ್ಯಾದಿದಾರರು ತಮ್ಮ ಬ್ಯಾಂಕ್ ಖಾತೆಯಿಂದ 30,000/- ರೂಗಳನ್ನು ಅಪರಿಚಿತ ವ್ಯಕ್ತಿಯ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ-186045500251, IFSC CODE–ICIC0001864 ನೇದಕ್ಕೆ ಪಾವತಿಸಿರುತ್ತಾರೆ.ಹಾಗೂ ಅದೇ ರೀತಿ 1,40,000/- ರೂಗಳನ್ನು ಅಪರಿಚಿತ ವ್ಯಕ್ತಿಯ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ-638605500144, IFSC CODE–ICIC0006386 ನೇದಕ್ಕೆ ಪಾವತಿಸಿರುತ್ತಾರೆ.ನಂತರ ಇದೇ ರೀತಿ ಪಿರ್ಯಾದಿದಾರರಿಂದ ಇನ್ನೂ ಹೆಚ್ಚಿನ ಹಣ ಪಾವತಿಸುವಂತೆ ಹೇಳಿದಾಗ ಪಿರ್ಯಾದಿದಾರರು ಹಣ ಪಾವತಿಸಲು ನಿರಾಕರಿಸಿರುತ್ತಾರೆ,ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರಿಗೆ ಆನ್ ಲೈನ್ ಗೂಗಲ್ ರಿವೀವ್ ಟಾಸ್ಕ್ ನ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 2,59,000/- ರೂಗಳನ್ನು ಮೋಸದಿದಂದ ಪಾವತಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.
Traffic South Police Station
ದಿನಾಂಕ: 15-06-2023 ರಂದು ಫಿರ್ಯಾದಿ BASAVARAJ SURESH KADARAGAR ಪತ್ನಿ ಮಮತಾ ರವರು ಕೆಲಸವನ್ನು ಮುಗಿಸಿ ಮಂಗಳೂರು ಕಡೆಯಿಂದ ಬಸ್ಸಿನಲ್ಲಿ ಹೊರಟು ಚೆಂಬುಗುಡ್ಡೆ ಶ್ರೀ ಕೊರಗಜ್ಜ ದೈವಸ್ಥಾನದ ಬಳಿ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿರುವಾಗ ಸಮಯ ಸುಮಾರು ಸಂಜೆ 6-26 ಗಂಟೆಗೆ ತೊಕ್ಕೊಟ್ಟು ಕಡೆಯಿಂದ ಕುತ್ತಾರು ಕಡೆಗೆ ಅಪರಿಚಿತ ಮೊಟಾರು ಸೈಕಲ್ ಸವಾರನೊಬ್ಬನು ತನ್ನ ಮೊಟಾರು ಸೈಕಲನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿದಾರರ ಪತ್ನಿ ಮಮತಾ ರವರಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಮೊಟಾರು ಸೈಕಲ್ ಸಮೇತ ಪರಾರಿಯಾಗಿರುತ್ತಾನೆ. ಈ ಅಪಘಾತದ ಪರಿಣಾಮ ಮಮತಾ ರವರು ಡಾಮಾರು ರಸ್ತೆಗೆ ಬಿದ್ದು ಅವರ ತಲೆಗೆ ರಕ್ತ ಗಾಯ ಮತ್ತು ಎಡಕಾಲಿನ ಮೂಳೆ ಮುರಿತದ ರಕ್ತಗಾಯವಾಗಿರುತ್ತದೆ. ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಫಿರ್ಯಾದಿದಾರರ ಅತ್ತೆ ಗಾಯಾಳುವನ್ನು ಚಿಕಿತ್ಸೆ ಬಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಯೆನಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ.
Surathkal PS
ಪಿರ್ಯಾದಿದಾರರಾದ ಮಹಮ್ಮದ್ ಶಾಫಿ ಪ್ರಾಯ 38 ವರ್ಷ, ತಂದೆ: ಎಸ್.ಬಿ ಹುಸೆನಬ್ಬ, ವಾಸ: 8-116/3(1), ನುಷರತ್ ಗಾರ್ಡನ್, ಜನತಾ ಕಾಲೋನಿ, ಇಡ್ಯಾ ಗ್ರಾಮ, ಸುರತ್ಕಲ್ ಅಂಚೆ, ಮಂಗಳೂರು ತಾಲೂಕು ರವರು ಜನತಾ ಕಾಲೋನಿಯ ಶಾಝಲಿ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ತಿಂಗಳಿಗೊಮ್ಮೆ ಸದ್ರಿ ಮಸೀದಿಯಲ್ಲಿ ಕುತುಬಿಯತ್ ವಿಶೇಷ ಪ್ರಾರ್ಥನೆ ನಡೆಯಲಿದ್ದು, ಪ್ರತಿ ತಿಂಗಳು ನಮಾಜ್ ಮಾಡುವ ಜಾಗವನ್ನು ಮತ್ತು ಕುತುಬಿಯತ್ ಪ್ರಾರ್ಥನೆ ಮಾಡುವ ಜಾಗವನ್ನು ಸ್ಕ್ರೀನ್ ಮೂಲಕ ಬೆರ್ಪಡಿಸಿ ಕುತುಬಿಯತ್ ಪ್ರಾರ್ಥನೆ ಮಾಡುವ ಜಾಗದಲ್ಲಿ ಯಾವುದೇ ವಿದ್ಯುತ್ ದೀಪ ಇಲ್ಲದೇ ಕತ್ತಲೆಯಲ್ಲಿಯೆ ಪ್ರಾರ್ಥನೆ ಮಾಡುವ ರೂಡಿ ಇರುತ್ತದೆ ಅದರಂತೆ ನಿನ್ನೆ ದಿನಾಂಕ 15-06-2023 ರಂದು ರಾತ್ರಿ 9:45 ಗಂಟೆಗೆ ಪಿರ್ಯಾದಿದಾರರು ನಮಾಜ್ ಮಾಡುವ ಮಸೀದಿ ಗೆ ಬಂದಾಗ ಮಸೀದಿಯಲ್ಲಿ ಬಶೀತ್, ಇಮ್ರಾನ್ ಮತ್ತು ಇತರರ ಇದ್ದರು ಕುತುಬಿಯತ್ ಪ್ರಾರ್ಥನೆಯಲ್ಲಿ ತೋಹಿರ್ ಹಾಗೂ ಇತರರು ಇದ್ದರು, ಪಿರ್ಯಾದಿದಾರರು ನಮಾಜ್ ಮಾಡುವ ಹಾಲಿನ ವಿದ್ಯುತ್ ಸ್ವಿಚ್ ಅನ್ ಮಾಡಿದಾಗ ತೋಹಿರ್ ಬಂದು ಸ್ವಿಚ್ ಆಫ್ ಮಾಡಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ಧಗಳಿಂದ ಬೈದು, ನೀನು ಸ್ವಿಚ್ ಅನ್ ಮಾಡಲು ದೊಡ್ಡ ಜನನಾ ಎಂದು ಹೇಳಿ ಕೈಯಿಂದ ದೂಡಿದ್ದು ಆಗ ಪಿರ್ಯಾದಿದಾರರು ನಮಾಜ್ ಮಾಡುವ ಜಾಗದಲ್ಲಿ ಲೈಟ್ ಆನ್ ಮಾಡಲು ಕಮಿಟಿಯಲ್ಲಿ ತಿರ್ಮಾನವಾಗಿದೆ ಎಂದು ಹೇಳಿ ಲೈಟ್ ಆನ್ ಮಾಡಿ ನಮಾಜಿಗೆ ತಯಾರಾದಾಗ ತೋಹಿರ್ ರವರು ಹೋರಗೆ ಹೋಗಿ ಯಾವುದೇ ಒಂದು ಹರಿತವಾದ ಆಯುಧವನ್ನು ತಂದು ಪಿರ್ಯಾದಿದಾರರ ಎಡ ಬೆನ್ನಿಗೆ ಮತ್ತು ಬಲ ಭುಜಕ್ಕೆ ಚುಚ್ಚಿ ಗಾಯಗೊಳಿಸಿದ್ದು ಆ ಸಮಯದಲ್ಲಿ ಮಸೀದಿಯಲ್ಲಿ ಇದ್ದ ಜನರು ಪಿರ್ಯಾದಿದಾರರ ರಕ್ಷಣೆಗೆ ಬಂದಾಗ ನಿನ್ನನ್ನು ಕೊಲ್ಲದೆ ಬಿಡಲ್ಲ ಎಂದು ಬೆದರಿಸುತ್ತಾ ತೋಹಿರ್ ನು ಓಡಿ ಹೋಗಿರುತ್ತಾನೆ, ಪಿರ್ಯಾದಿದಾರರು ಸುರತ್ಕಲ್ ಪದ್ಮಾವತಿ ಆಸ್ಪತ್ರೆ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.
Mangalore South PS
ದಿನಾಂಕ;- 15-06-2023 ರಂದು ಮಧ್ಯಾಹ್ನ 13-00 ಗಂಟೆಯಿಂದ 15-00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರ, ಕೆ.ಎಂ.ಸಿ. ಆಸ್ಪತ್ರೆ ಸಮೀಪದಲ್ಲಿರುವ ಬಿಜೇಶ್ ಅಪಾರ್ಟ್ ಮೆಂಟ್ ನ ಟಾರೇಸ್ ನಲ್ಲಿದ್ದ ಪಿರ್ಯಾದಿ POOJA ವಾಸ್ತವ್ಯದ ರೂಮ್ ನ ಎದುರು ಬಾಗಿಲನ್ನು ಬಲತ್ಕಾರವಾಗಿ ಮೀಟಿ ತೆರೆದು ಒಳಗಡೆ ಬೆಡ್ ರೂಮ್ ನ ಗೊದ್ರೇಜ್ ಕಪಾಟಿನಲ್ಲಿದ್ದ ವಿವಿಧ ನಮೂನೆಯ 71 ಗ್ರಾಂ ಚಿನ್ನಾಭರಣ, ನಗದು ಹಣ 45,000/- ರೂಪಾಯಿ ಸೇರಿ ಒಟ್ಟು 4,00,000/- ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದು ಹಾಗೂ ಅದೇ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಲ್ಲಿ ವಾಸ್ತವ್ಯ ಇದ್ದ ಮನಿರಿ ರವರ ರೂಮ್ ನ ಎದುರು ಬಾಗಿಲನ್ನು ಕೂಡ ತುಂಡರಿಸಿ ಅಲ್ಲಿಂದ ಕೂಡ ಕ್ಯಾಸಿಯೋ ಕಂಪನಿಯ ವಾಚ್-01 ಹಾಗೂ ನಗದು ಹಣ 43,000/- ರೂಪಾಯಿ ಸೇರಿ ಒಟ್ಟು 45,000/- ಮೌಲ್ಯ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಎರಡು ಮನೆಗಳಿಂದ ಕಳವಾದ ಸೊತ್ತುಗಳ ಒಟ್ಟು ಮೌಲ್ಯ 4,45,000/- ಆಗಬಹುದು ಎಂಬಿತ್ಯಾದಿಯಾಗಿದೆ.
Ullal PS
ದಿನಾಂಕ 15/06/2023 ರಂದು ಸಂಜೆ 5-00 ಗಂಟೆಗೆ ಉಳ್ಳಾಲ ತಾಲೂಕು ಮುನ್ನೂರು ಗ್ರಾಮದ ರಾಣಿಪುರ ಚರ್ಚ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಇಜಾಝ್ ಅಹಮ್ಮದ್ ಪ್ರಾಯ 35 ವರ್ಷ ವಾಸ : ಡೋರ್ ನಂಬ್ರ 2-131-2, ಸುಭಾಶ್ ನಗರ, ಮುನ್ನೂರು ಗ್ರಾಮ, ಉಳ್ಳಾಲ ತಾಲೂಕು, ಯಾವುದೋ ಮಾಧಕ ವಸ್ತು ಸೇವನೆ ಮಾಡಿ ನಶೆಯಲ್ಲಿ ಇದ್ದು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದವನ್ನು ವಶಕ್ಕೆ ಪಡೆದು ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ಹಾಜರುಪಡಿಸಿದಾಗ, ಸದ್ರಿ ವ್ಯಕ್ತಿಯು ಮಾಧಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ದೃಡಪತ್ರ ನೀಡಿರುತ್ತಾರೆ. ಆದುದರಿಂದ ಕಾನೂನು ಬಾಹಿರವಾಗಿ ನಿಷೇದಿತ ಮಾಧಕ ವಸ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ ಕಾನೂನು ಕ್ರಮ ಕೈಗೊಂಡಿರುವುದು ಪ್ರಕರಣದ ಸಾರಾಂಶ ಎಂಬಿತ್ಯಾದಿ.