ಅಭಿಪ್ರಾಯ / ಸಲಹೆಗಳು

Crime Reported in : Konaje PS

ದಿನಾಂಕ 15-08-2022  ರಂದು 11-00 ಗಂಟೆಗೆ ಪಿರ್ಯಾದಿದಾರ Sharanappa Bhandari  ಅಂಬ್ಲಮೊಗರು ಗ್ರಾಮದ ಎಲ್ಯಾರು ಪದವು ಎಂಬಲ್ಲಿರುವ ಪ್ರಾಥಮಿಕ ಆರೋಗ್ಯದ ಕೇಂದ್ರದ ಹಿಂಬದಿ ಕಂಪೌಂಡುನ ಬಳಿ ಇರುವ ಖಾಲಿ ಮೈದಾನ ಜಾಗದಲ್ಲಿ ಯಾರೋ ಇಬ್ಬರು ಆಸಾಮಿಗಳು  ಮಾದಕ ವಸ್ತು/ ದ್ರವ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿಯಂತೆ ಪಿರ್ಯಾದಿದಾರರು ಮೇಲಿನ ಸ್ಥಳಕ್ಕೆ ದಾಳಿ ನಡೆಸಿ, 12-45  ಗಂಟೆಗೆ  ಆರೋಪಿಯಾದ ಸದಕತ್ ಯು ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಸಮಯ  ಆರೋಪಿ ಅಮೀರ್ ಎಂಬಾತನು ಓಡಿ ಹೋಗಿದ್ದು, ಆರೋಪಿ ಸದಕತ್ ಯು ಎಂಬಾತನ ವಶದಲ್ಲಿದ್ದ  34,000 ಮೌಲ್ಯದ 17 ಗ್ರಾಂ ತೂಕದ ವೈಟ್ ಮೆಥಾಎಂಪೆಟಾಮೈನ್  ಎಂಬ ಮಾದಕ ದ್ರವ್ಯ,  ಜಿಯೋ ಸಿಮ್ ಇರುವ ಒನ್ ಪ್ಲಸ್  ಕಂಪನಿಯ ಕಪ್ಪು ಬಣ್ಣದ ಮೊಬೈಲ್ , ಕಪ್ಪು ಪ್ಲಾಸ್ಟಿಕ್ ಕವರ್, ಅದರಲ್ಲಿದ್ದ ಸಣ್ಣ, ಸಣ್ಣ ಪ್ಲಾಸ್ಟಿಕ್ ಕವರ್ ಗಳು,   ತೂಕ ಮಾಪನ   ಮತ್ತು ನಗದು ಹಣ ರೂ 2000/-  ನ್ನು ವಶಕ್ಕೆ ಪಡೆದು ಆರೋಪಿಯನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಂಡಿರುತ್ತಾರೆ ಎಂಬಿತ್ಯಾದಿ.

 

Crime Reported in : Mangalore North PS

ಪಿರ್ಯಾದಿದಾರರು ಕೆಲಸ ಕಾರ್ಯಕ್ಕಾಗಿ KA-19-HH -0176 ನೊಂದಣಿ ನಂಬ್ರದ ನೇರಳೆ ಬಣ್ಣದ ಸುಜಿಕಿ ಆಕ್ಷಿಸ್ ಸ್ಕೂಟರ್ ನ್ನು 2021 ನೇ ಇಸವಿಯಲ್ಲಿ ಖರೀದಿ ಮಾಡಿ ಉಪಯೋಗಿಸುತ್ತಿದ್ದು, ಪಿರ್ಯಾದಿದಾರರು ಎಂದಿನಂತೆ ದಿನಾಂಕ: 24-07-2022 ರಂದು ಮದ್ಯಾಹ್ನ 2.00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರು ಕೆಲಸ ಮಾಡುತ್ತಿದ್ದ ಸ್ಥಳವಾದ ನ್ಯೂಚಿತ್ರಾ ಬಳಿಯ ಬಸವನಗುಡಿ ದೇವಸ್ಥಾನದ ಮುಂದೆ ಪಾರ್ಕ್ ಮಾಡಿ ಅಲ್ಲಿಯೇ ಬಿಲ್ಡಂಗ್ ಕೆಲಸ ವಾಗುತ್ತಿದ್ದಲ್ಲಿಗೆ ಹೋಗಿ ಪಿರ್ಯಾದಿದಾರರು ವಾಪಾಸು ಸುಮಾರು 3.15 ಗಂಟೆಯ ಸಮಯಕ್ಕೆ ಸುಜಿಕಿ ಆಕ್ಷಿಸ್ ಸ್ಕೂಟರ್ ಇಟ್ಟಿದ್ದ ಸ್ಥಳಕ್ಕೆ ಬಂದು ನೋಡಿದಾಗ ಪಿರ್ಯಾದಿದಾರರ KA-19-HH -0176 ನೊಂದಣಿ ನಂಬ್ರದ ನೇರಳೆ ಬಣ್ಣದ ಸುಜಿಕಿ ಆಕ್ಷಿಸ್ ಅಲ್ಲಿರದೇ ಇದ್ದು ನಂತರ ಪಿರ್ಯಾದಿದಾರರು ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದು ಈ ಬಗ್ಗೆ ತನ್ನ ಸ್ನೇಹಿತರಲ್ಲಿ ವಿಚಾರ ತಿಳಿಸಿ ಈವರೆಗೂ ಹುಡುಕಾಡಿದರೂ ಸ್ಕೂಟರ್ ಸಿಗದೇ ಇದ್ದುದರಿಂದ  ಪಿರ್ಯಾದಿದಾರರ ಬಾಬ್ತು KA-19-HH-0176 ನೊಂದಣಿ ನಂಬ್ರದ ಸ್ಕೂಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೃಡಪಟ್ಟಿರುವುದರಿಂದ ತಡವಾಗಿ ದೂರನ್ನು ನೀಡಿರುವುದಾಗಿದೆ ಎಂಬಿತ್ಯಾದಿ ದೂರಿನ ಸಾರಾಂಶ.

 

Crime Reported in: mangalore Traffic North Police PS

ಪಿರ್ಯಾದಿದಾರರು Yogish ಈ ದಿನ ದಿನಾಂಕ: 15-08-2022 ರಂದು  ಬೈಕಂಪಾಡಿ ಜಂಕ್ಷನಿನಲ್ಲಿ ನಿಗದಿತ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿದ್ದ ಸಮಯ ಸುಮಾರು 17.28 ಗಂಟೆಗೆ ನಂಬ್ರ ಪ್ಲೇಟ್ ಇಲ್ಲದ ಸ್ಕೂಟರಿನಲ್ಲಿ ಅದರ ಸವಾರನು ಹಿಂಬದಿಯಲ್ಲಿ ತಲೆಗೆ ಹೆಲ್ಮೆಟ್ ಧರಿಸದ ಇಬ್ಬರು ವ್ಯಕ್ತಿಗಳನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಹೊನ್ನಕಟ್ಟೆ ಕಡೆಯಿಂದ ಬೈಕಂಪಾಡಿ ಕಡೆಗೆ ರಾ.ಹೆ 66 ಸಾರ್ವಜನಿಕ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಬೈಕಂಪಾಡಿ ಜಂಕ್ಷನ್ ನಲ್ಲಿ ಪಿರ್ಯಾದಿದಾರರು ನಿಲ್ಲಿಸಲು ಸೂಚನೆ ನೀಡಿದ ಸಮಯ ಸ್ಥಳದಲ್ಲಿ ನಿಲ್ಲಿಸದೇ ಮುಂದೆ ಹೋಗಿ ನಿಲ್ಲಿಸಿದವರನ್ನು ಪಿರ್ಯಾದಿದಾರರು ವಿಚಾರಿಸಲಾಗಿ  ಸ್ಕೂಟರ್ ಸವಾರನ ಹೆಸರು ಮೊಹಮ್ಮದ್ ಆಶ್ವಿರ್ ಪ್ರಾಯ 27 ವರ್ಷ ಹಾಗೂ  ಸಹ ಸವಾರರಾಗಿದ್ದವರ ಹೆಸರು ಮೊಹಮ್ಮದ್ ಶಂಶೀರ್ ಮತ್ತು ಮೊಹಮ್ಮದ್ ಫಯಾಕ್ ಎಂಬುದಾಗಿದ್ದು, ಸ್ಕೂಟರ್ ನ ENGINE NO JK13EG0035860 ಆಗಿದ್ದು ಚಾಸಿಸ್ ನಂಬ್ರ ME4JK131GNG035756  ಆಗಿರುವುದಾಗಿದೆ ಎಂಬಿತ್ಯಾದಿ.

 

Crime Reported in: Mangalore Traffic South PS

ಪಿರ್ಯಾದಿದಾರರು YASHWANTH ದಿನಾಂಕ:14-08-2022 ರಂದು ಅವರಿಗೆ ಠಾಣೆಯಲ್ಲಿ ರಾತ್ರಿ ಠಾಣಾ ಪ್ರಭಾರ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ಅವರು ಕರ್ತವ್ಯಕ್ಕೆ ಹಾಜರಾಗಲು ಅವರ ಮನೆಯಾದ ಯೆಯ್ಯಾಡಿಯಿಂದ ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ:KA-19-HF-3914 ನೇದನ್ನು ನಂತೂರು ಮಾರ್ಗವಾಗಿ ಅವರ ಠಾಣೆಯಾದ ಜಪ್ಪಿನಮೊಗರು ಕಡೆಗೆ ರಾ.ಹೆ -66 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು ರಾತ್ರಿ 8-00 ಗಂಟೆಗೆ ಪಂಪ್ ವೇಲ್ ಪ್ಲೈ ಓವರ್ ಮೇಲೆ ತಲುಪಿದಾಗ ಅವರ ಹಿಂದಿನಿಂದ ಅಂದರೆ ನಂತೂರು ಕಡೆಯಿಂದ ಜಪ್ಪಿನಮೊಗೆರು ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂಬ್ರ:KA-19-HK-3310 ನೇದರ ಸವಾರ ರವಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಅವರ ಮೋಟಾರ್ ಸೈಕಲ್ ನ ಬಲಬದಿ ಸೈಲೆನ್ಸ್ ರನ ಹಿಂದಕ್ಕೆ ಮೋಟಾರ್ ಸೈಕಲ್ ನ್ನು ಡಿಕ್ಕಿ ಪಡಿಸಿದ ಪರಿಣಾಮ ಅವರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಯ ಬಲಬದಿಗೆ ಬಿದ್ದಿದ್ದು ಹಾಗೂ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರ ಕೂಡ ಅವರಿಗಿಂತ ಮುಂದೆ ಹೋಗಿ ಮೋಟಾರ್ ಸೈಕಲ್ ಸಮೇತ ರಸ್ತೆಯ ಬಲಬದಿಗೆ ಬಿದ್ದಿದ್ದು ಇದರ ಪರಿಣಾಮ ಪಿರ್ಯಾದಿದಾರರಿಗೆ ಬಲಕೈ ಮೊಣಗಂಟಿಗೆ ತರಚಿದ ಗಾಯ ,ಎಡಕೈಗೆ ತರಚಿದ ಗಾಯ ಹಾಗೂ ಬೆನ್ನಿಗೆ ಗುದ್ದಿದ ಗಾಯ ಮತ್ತು ಎರಡು ಕಾಲಿನ ಮೊಣಗಂಟಿಗೆ ತರಚಿದ ಗಾಯ,ಬಲಕಾಲಿನ ಕೋಲು ಕಾಲಿಗೆ ಸಣ್ಣ ಪ್ರಮಾಣದ ಮೂಳೆ ಮುರಿತದ ಗಾಯವಾಗಿದ್ದು ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನಿಗೂ ಕೂಡಾ ಗಾಯವಾಗಿದ್ದು ನಂತರ ಅಲ್ಲಿ ಸೇರಿದ ಜನರು ಮೋಟಾರ್ ಸೈಕಲ್ ಸವಾರರನ್ನು ಕಾರೊಂದರಲ್ಲಿ ಚಿಕಿತ್ಸೆ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪಿರ್ಯಾದಿದಾರರು ಅವರ ಠಾಣಾ ಸಹದ್ಯೋಗಿ ಅಮರ್ ನಾಥ್ ರೈ ರವರ ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ.ಎಂಬಿತ್ಯಾದಿ.

 

Crime Reported in: Bajpe PS

ದಿನಾಂಕ 15.08.2022 ರಂದು ಬೆಳಗ್ಗೆ 10.30 ಗಂಟೆ ಸಮಯಕ್ಕೆ ಪಿರ್ಯಾದಿದಾರರು Mohammed Zahid ಮಂಗಳೂರು ತಾಲೂಕು ಅಡ್ಡೂರು ಗ್ರಾಮದ SDPI ಕಛೇರಿ ಬಳಿ ತಲಪುತಿದ್ದಂತೆ ಅಲ್ಲಿ ಜನ ಸೇರಿದ್ದು ಪಿರ್ಯಾದಿದಾರರು ಬಂದು ನೋಡಿದಾಗ ಪಿರ್ಯಾದಿದಾರರ ಮಾವನಾದ ಯೊಸೆಫ್ ಎಂಬುವರು ರಸ್ತೆ ದಾಟುವಾಗ KA 19 HC 5992 ನೇ ಸ್ಕೂಟರ್ ಚಾಲಕನು ಅತೀವೇಗ ಮತ್ತು ಅಜಾಗರುಕತೆಯಿಂದ ರಸ್ತೆ ದಾಟುತಿದ್ದ ಯೊಸೆಪ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಮಾವನಾದ ಯೊಸೆಪ್ ರವರಿಗೆ ತಲೆಗೆ ತೀವ್ರ ತರಹದ ಗಾಯವಾಗಿದ್ದು ಅವರನ್ನು ಮಂಗಳೂರಿನ ಎಸ್ ಸಿ ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ

 

Crime Reported in: Mangalore  traffic West PS

ದಿನಾಂಕ 16-08-2022 ರಂದು ಪಿರ್ಯಾದುದಾರರು DEVIPRASAD ಮಂಗಳೂರು ನಗರದ ದುರ್ಗಾ ಮಹಲ್ ಜಂಕ್ಷನ್  ಬಳಿ ಸಮವಸ್ತ್ರದಲ್ಲಿ ಕರ್ತವ್ಯ ದಲ್ಲಿ ಇರುವ ಸಮಯ ಸುಮಾರು 11.34 ಗಂಟೆಗೆ ಕುದ್ರೋಳಿ ಕಡೆಯಿಂದ ಮಣ್ಣಗುಡ್ಡ ಕಡೆಗೆ KA-19-HG-4368 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರನು 1+1 ರ ಬದಲು 1+2 ಸಹ ಸವಾರನನ್ನು ಕುಳ್ಳಿರಿಸಿಕೊಂಡು ಸಾರ್ವಜನಿಕ ರಸ್ತೆಯಲ್ಲಿ ತೀರಾ ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ದ್ವಿ ಚಕ್ರ ವಾಹನದಲ್ಲಿ ಸವಾರ ಹಾಗೂ ಸಹಸವಾರರು ಹೆಲ್ಮೆಟ್ ಧರಿಸದೇ ಚಾಲಾಯಿಸಿಕೊಂಡು ಬರುತ್ತಿದ್ದವರ ವೀಡಿಯೋ ಮತ್ತು ಫೂಟೊವನ್ನು ಸಿಬ್ಬಂದಿಯವರ ಮೊಬೈಲ್ ಫೋನ್ ನಿಂದ ತೆಗೆದಿದ್ದು ಸದ್ರಿ ದ್ವಿ ಚಕ್ರ ಸವಾರನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಎಂಬಿತ್ಯಾದಿ

 

Crime Reported in: Mangalore  traffic East PS

ಪಿರ್ಯಾದಿದಾರರು MADHAVA K ದಿನಾಂಕ 16-08-2022 ರಂದು ಮಂಗಳೂರು ನಗರದ ಮಂಗಳಾದೇವಿ ಬಸ್ ನಿಲ್ದಾಣದ ಎದುರು ರಸ್ತೆ ಬದಿಯಲ್ಲಿ ಕರ್ತವ್ಯದಲ್ಲಿದ್ದಾಗ ಸಮಯ ಸುಮಾರು 10:30 ಗಂಟೆಗೆ ಮಂಕಿಸ್ಟ್ಯಾಂಡ್ ಕಡೆಯಿಂದ ಕಾಸಿಯಾ ಜಂಕ್ಷನ್ ಕಡೆಗೆ ಹಾದು ಹೋಗುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ KA-19-HE-4763 ನಂಬ್ರದ ಸ್ಕೂಟರ್ ಸವಾರನು ತನ್ನ ಸ್ಕೂಟರಿನಲ್ಲಿ ಇಬ್ಬರೂ ಸಹ ಸವಾರನನ್ನು ಕುಳ್ಳಿರಿಸಿಕೊಂಡು ಮೂವರು ತಲೆಗೆ ಹೆಲ್ಮೆಟ್ ಧರಿಸದೇ ನಿರ್ಲಕ್ಷ್ಯತನದಿಂದ ತನ್ನ ಪ್ರಾಣ ಹಾಗೂ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಕಂಡು ಪಿರ್ಯಾದಿದಾರರು ಸದ್ರಿ ಸ್ಕೂಟರನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿ ಸೂಚಿಸಿದಾಗ ಸ್ಕೂಟರ್ ಸವಾರನು ತನ್ನ ಸ್ಕೂಟರನ್ನು ಸ್ಥಳದಲ್ಲಿ ನಿಲ್ಲಿಸದೇ ಕಾಸಿಯಾ ಜಂಕ್ಷನ್ ಕಡೆಗೆ ಸವಾರಿ ಮಾಡಿಕೊಂಡು ಮುಂದೆ ಹೋಗಿದ್ದು, ಪಿರ್ಯಾದಿದಾರರು ತನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರ ಮೊಬೈಲ್ ನಲ್ಲಿ ವೀಡಿಯೋ ಹಾಗೂ ಪೋಟೋ ತೆಗೆಸಿರುತ್ತಾರೆ.  ಆದ್ದರಿಂದ KA-19-HE-4763 ಸ್ಕೂಟರ್ ಸವಾರ ಹಾಗೂ ಸಹ ಸವಾರರ ಮೇಲೆ ಸೂಕ್ತ  ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 16-08-2022 06:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080