ಅಭಿಪ್ರಾಯ / ಸಲಹೆಗಳು

 

 

Crime Report in Mangalore West Traffic PS  

ದಿನಾಂಕ:15-08-2023 ರಂದು  KA-19-HE-2944ನೇ ನಂಬ್ರದ ದ್ವಿ ಚಕ್ರ ವಾಹನದಲ್ಲಿ ಪಿರ್ಯಾದಿ KHATEEJA ZIYANA ರವರು  ಅವರ ಅಜ್ಜಿ  ಮನೆಯಾದ ಮಂಕಿ ಸ್ಟ್ಯಾಂಡ್ ನಿಂದ ಕಾಸ್ಟಮ್ ಕೊಡಲು ಉರ್ವಸ್ಟೋರ್ ಕಡೆಗೆ ಹೋಗಲು ದ್ವಿ ಚಕ್ರ ಸಹಸವಾರಳಾಗಿ ಪಿರ್ಯಾದಿದಾರರು ಸವಾರನಾಗಿ ಅವರ ಅತ್ತೆಯ ಮಗ ಅಬೂಬಕ್ಕರ್ ಬಾಶಿಲ್ ಹೋಗುತ್ತಿರುವ ಸಮಯ ಸುಮಾರು 11-00 ಗಂಟೆಗೆ ಅಳಕೆ ರಸ್ತೆಯಲ್ಲಿರುವ ನಿರ್ಮಲಾ ಗಾಡ್ವಿನ್ ಬಳಿ ತಲುಪಿದಾಗ ಅಬೂಬಕ್ಕರ್ ಬಾಶಿಲ್ ನು ದ್ವಿ ಚಕ್ರ ವಾಹನವನ್ನು ನಿರ್ಲಕ್ಷ್ಯತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಒಮ್ಮೇಲೆ ಬ್ರೇಕ್ ಹಾಕಿದಾಗ ಸ್ಕೀಡ್ ಆಗಿ ದ್ವಿ ಚಕ್ರ ವಾಹನ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ತಲೆಯ ಬಲಬದಿಗೆ ರಕ್ತ ಗಾಯ ಹಾಗೂ ಹಣೆಗೆ ತರಚಿದ ಗಾಯವಾಗಿರುತ್ತದೆ. ಕೂಡಲೇ ಪಿರ್ಯಾದಿದಾರರನ್ನು ದ್ವಿ ಚಕ್ರ ವಾಹನ ಸವಾರ  ಉಪಚರಿಸಿ ಚಿಕಿತ್ಸೆಯ ಬಗ್ಗೆ ಯೆನಪೋಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿಸಿರುತ್ತಾರೆ ಸವಾರನಿಗೆ ಯಾವುದೆ ಗಾಯವಾಗಿರುವುದಿಲ್ಲ ಎಂಬಿತ್ಯಾದಿ

Mulki PS        

ಆರೋಪಿ ಮೈಕಲ್ ಡಿ. ಸೋಜಾನ  ಆಡುಗಳು ದಿನಾಂಕ: 13-08-2023 ರಂದು ಮದ್ಯಾಹ್ನ 13-00 ಗಂಟೆಯ ಸಮಯಕ್ಕೆ ಫಿರ್ಯಾದಿ Mr. Jerome Prakash D. Souza ದಾರರ ಕಂಪೌಂಡಿಗೆ ಬಂದು ಫಿರ್ಯಾದಿದಾರರಿಗೆ ಸಂಬಂಧಪಟ್ಟ ತರಕಾರಿ ಗಿಡಗಳನ್ನು, ಹೂವಿನ ಗಿಡಗಳನ್ನು ಹಾಗೂ ಹಾಗೂ ಇತರ ಬೆಳೆಗಳನ್ನು ನಾಶಮಾಡುತ್ತಿದ್ದು ಇದನ್ನು ನೋಡಿದ ಫಿರ್ಯಾಧಿದಾರರು ಕಂಪೌಂಡಿನಿಂದ ಆಡುಗಳನ್ನು ಓಡಿಸಲು ಬಂದಾಗ ಅಲ್ಲೇ ಇದ್ದ ಆರೋಪಿ ಮೈಕಲ್ ಡಿ.ಸೋಜಾನು ಮರದ ಸೋಂಟೆಯನ್ನು ಹಿಡಿದುಕೊಂಡು ಬಂದು ಫಿರ್ಯಾಧಿಯನ್ನು ಉದ್ದೇಶಿಸಿ ಬೇವಾರ್ಸಿ, ಸೂಳೆ ಮಗ, ಯಾರಿಗೋ ಹುಟ್ಟಿದವನು ನೀನು, ಇದೇ ಸೋಂಟೆಯಿಂದ ನಿನ್ನ ತಲೆಯನ್ನು ಹೊಡೆದು ಹಾಕುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದಲ್ಲದೇ , ಇದನ್ನು ಕಂಡ ಫಿರ್ಯಾಧಿದಾರರ ತಾಯಿ ಶ್ರೀಮತಿ ಫಿಲೋಮಿನಾ ರವರು ಆರೋಪಿಯನ್ನು  ಉದ್ದೇಶಿಸಿ ನೀನು ಯಾಕೆ ಹೀಗೆ ಆಡುಗಳನ್ನು ಬಿಟ್ಟು ನಮಗೆ ತೊಂದರೆ ಕೊಡುತ್ತೀ ಎಂದು ಹೇಳಿದಾಗ ಆರೋಪಿಯು ಆಕೆಯನ್ನು ಉದ್ದೇಶಿಸಿ ಸೂಳೆ, ರಂಡೇ, ನೀನು ಯಾರೊಟ್ಟಿಗೆ ಮಲಗುವವಳು, ನನ್ನೊಂದಿಗೆ ಮಲಗಲು ಬಾ ಎಂಬುದಾಗಿ ಮಾನಕ್ಕೆ ಕುಂದುಂಟಾಗುವ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದುದಲ್ಲದೇ ನೀನು ನಮ್ಮ ಮಧ್ಯಕ್ಕೆ ಬಂದರೆ ನಿನ್ನನ್ನು ಬಿಡುವುದಿಲ್ಲ, ಇಲ್ಲೇ ಹೂತು ಹಾಕುತ್ತೇನೆ ಎಂದು ಬೈದು ಬೆದರಿಕೆ ಹಾಕಿದ್ದಾಗಿದೆ.

                  

Mangalore North PS

 ಮಂಗಳೂರು ನಗರದ ಸಿಸಿಬಿ ಘಟಕದ  ಪೊಲೀಸ್  ಉಪ ನಿರೀಕ್ಷಕರಾದ  ಶರಣಪ್ಪ ಭಂಡಾರಿ ಎಂಬವರಿಗೆ ದಿನಾಂಕ 15-08-2023 ರಂದು 11-00 ಗಂಟೆ ಸುಮಾರಿಗೆ  ಬಂದ ಮಾಹಿತಿಯಂತೆ ದಿನಾಂಕ 15-08-2023 ರಂದು ಮಧ್ಯಾಹ್ನ ವೇಳೆ ಕೆ.ಎ 19 ಎಂ.ಜಿ 2744 ನೇ  ಗ್ರೇ ಬಣ್ಣದ ಮಾರುತಿ ಸ್ವಿಪ್ಟ್  ಕಾರಿನಲ್ಲಿ ಮೂರು  ಜನ ವ್ಯಕ್ತಿಗಳು ಅಕ್ರಮವಾಗಿ ಎಂ.ಡಿ.ಎಂ.ಎ ಮಾದಕ ವಸ್ತುವನ್ನು  ವಶದಲ್ಲಿ  ಇರಿಸಿಕೊಂಡು ಸಾಗಾಟ ಮಾಡಿಕೊಂಡು ಬಂದು ಮಂಗಳೂರಿನ ಪಳ್ನೀರ್ ಎಂಬಲ್ಲಿನ  ಬ್ಲೂಸ್ಟಾರ್ ಲಾಡ್ಜ್ ನ ಬಳಿಗೆ ಮಾರಾಟ ಮಾಡಲು ಬರುತ್ತಿರುವುದನ್ನು ಖಚಿತ ಪಡಿಸಿ,  ಮಾಹಿತಿಯಲ್ಲಿ ತಿಳಿಸಿದ ಕಾರು ಮತ್ತು ವ್ಯಕ್ತಿಗಳನ್ನು  ಖಚಿತ ಪಡಿಸಿಕೊಂಡು ಸದ್ರಿ ಸ್ಥಳಕ್ಕೆ ಮಧ್ಯಾಹ್ನ 12-10 ಕ್ಕೆ ದಾಳಿ ನಡೆಸಿದಾಗ, ಕಾರಿನಲ್ಲಿದ್ದವರು ಕಾರಿನಿಂದ ಇಳಿದು ಓಡಿ ತಪ್ಪಿಸಿ ಕೊಳ್ಳಲು ಪ್ರಯತ್ನಿಸಿದ   ಮೊಹಮ್ಮದ್ ಹನೀಫ್,  ಸೈಯ್ಯದ್ ಫೌಜಾನ್, ಸಿರಾಜುದ್ದೀನ್ ಅಬೂಬಕ್ಕರ್ ಎಂಬವರನ್ನು ವಶಕ್ಕೆ ಪಡೆದು ಅಂದಾಜು  ರೂ, 2,50,000/- ಮೌಲ್ಯದ ಸುಮಾರು 50 ಗ್ರಾಂ ತೂಕದ ಕಂದು ಬಣ್ಣದ  ಹರಳಿನಂತಿರುವ  ಎಂ.ಡಿ.ಎಂ.ಎ ಮಾದಕ ವಸ್ತುವನ್ನು ಸ್ವಾದೀನಪಡಿಸಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Kankanady Town PS

ಪ್ರಕರಣದ  ಪಿರ್ಯಾದಿದಾರರಾದ  ಮಂಗಳೂರು ಸಿಸಿಬಿ ಘಟಕದ ಪಿಎಸ್ಐ ನರೇಂದ್ರ  ರವರಿಗೆ,   ದಿನಾಂಕ : 15-08-2023 ರಂದು ಮದ್ಯಾಹ್ನ:1-00  ಗಂಟೆಗೆ ಮಂಗಳೂರು ನಗರದ ಅಳಪೆ ಗ್ರಾಮದ ಕಂಕನಾಡಿ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಆರೋಪಿಯು ಮಾದಕ ವಸ್ತುವಾದ MDMA ನೇದನ್ನು ವಶದಲ್ಲಿರಿಸಿಕೊಂಡು ಮಾರಾಟ ಮಾಡುತ್ತಿರುವುದಾಗಿ  ಬಂದ ಖಚಿತ ವರ್ತಮಾನದಂತೆ  ಅಳಪೆ ಗ್ರಾಮದ ಕಂಕನಾಡಿ ರೈಲ್ವೆ ಸ್ಟೇಷನ್  ರಸ್ತೆಯ ಬಳಿ ಮದ್ಯಾಹ್ನ: 2-20 ಗಂಟೆಗೆ ದಾಳಿ ನಡೆಸಿ,  ಆರೋಪಿ ಇಬ್ರಾಹಿಂ ಅರ್ಷಾದ್ ವಿ ಕೆ, ಪ್ರಾಯ: 30 ವರ್ಷ, ಆಯಿಷಾ ಮಂಝಿಲ್, ಧೂಮರ ಕಾಡು, ಮಿಂಜಾ ಪಂಚಾಯತ್, ಮಿಯಾಪದವು, ಮಂಜೇಶ್ವರ, ಕಾಸರಗೋಡು, ಕೇರಳ ರಾಜ್ಯ  ಎಂಬಾತನನ್ನು ವಶಕ್ಕೆ ಪಡೆದುಕೊಂಡು 100 ಗ್ರಾಂ MDMA ಮಾದಕ ವಸ್ತುವನ್ನು ಬೆಂಗಳೂರಿನ ತಣ್ಣಿಸಂದ್ರದ  ರಾಚೇನಹಳ್ಳಿ ಬಳಿ ನೈಜಿರಿಯನ್ ಮಹಿಳೆಯಿಂದ  ಖರೀದಿ ಮಾಡಿ,  ಮಂಗಳೂರಿಗೆ  ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿರುವುದಾಗಿ ನುಡಿದಂತೆ  ಆರೋಪಿ ವಶದಿಂದ 100 ಗ್ರಾಂ   MDMA ಮೌಲ್ಯ  ಒಟ್ಟು ಸುಮಾರು 5,00,000/-ರೂಪಾಯಿ. ವಶಪಡಿಸಿಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

Moodabidre PS

ದಿನಾಂಕ: 15-8-2023 ರಂದು 12.15 ಗಂಟೆಗೆ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ನಿರಂಜನ್ ಕುಮಾರ್ ಕೆ.ಈ ರವರಿಗೆ  ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದ್ರೆ ತಾಲೂಕು ಪುತ್ತಿಗೆ ಗ್ರಾಮದ ಪಟ್ಲ ಎಂಬಲ್ಲಿ ಕೆಲವು ವ್ಯಕ್ತಿಗಳು ಸೇರಿ ಎರಡು ಅಂಕದ ಕೋಳಿಗಳಿಗೆ ಹರಿತವಾದ ಬಾಲ್ ಗಳನ್ನು  ಕಟ್ಟಿ ಹಿಂಸಾತ್ಮಕವಾಗಿ ಕಾದಾಡಲು ಬಿಟ್ಟು ಅವುಗಳ ಮುಂದೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದಾರೆ ಎಂಬುದಾಗಿ  ಖಚಿತ ಮಾಹಿತಿ ಬಂದ ಮೇರೆಗೆ ಪುತ್ತಿಗೆ ಗ್ರಾಮದ ಪಟ್ಲ ಪ್ರದೇಶದ ಕಡೆಗೆ ನೋಡಲಾಗಿ ಕೆಲವು ಜನರು ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಮದ್ಯಾಹ್ನ 14.00 ಗಂಟೆಗೆ ದಾಳಿ ನಡೆಸಿದಾಗ ಕೋಳಿ ಅಂಕದ ಕೆಲವು ಜೂಜಾಟಗಾರರು ಓಡಿ ಪರಾರಿಯಾಗಿದ್ದು, ಉಳಿದವರನ್ನು ಸುತ್ತುವರಿದು ವಶಕ್ಕೆ ಪಡೆದುಕೊಂಡು ಅವರುಗಳ ವಶದಲ್ಲಿದ್ದ ಜೂಜಾಟಕ್ಕೆ ಪಣವಾಗಿ ಉಪಯೋಗಿಸಿದ 12,250/- ರೂ ನಗದು, ಸ್ಥಳದಲ್ಲಿ ದೊರೆತ  ಹುಂಜಗಳು, ಹಾಗೂ ಕೋಳಿ ಅಂಕ ಆಟ ಆಡಲು ಬಳಸಿದ ಬಾಲುಗಳು (ಸಣ್ಣ ಕತ್ತಿ) , ಪ್ಲಾಸ್ಟಿಕ್ ಕುರ್ಚಿಗಳು ಮತ್ತು ಕೋಳಿ ಅಂಕಕ್ಕೆ ಬಂದಂತಹ ವ್ಯಕ್ತಿಗಳು ಅಲ್ಲೆ ಪಕ್ಕದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಇವುಗಳನ್ನು ಸ್ವಾಧಿನಪಡಿಸಿಕೊಂಡಿದ್ದು, ನಗದು ಹಣ ಹಾಗೂ ಇತರ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 2,37,750/- ಆಗಿರುತ್ತದೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 21-08-2023 02:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080