ಅಭಿಪ್ರಾಯ / ಸಲಹೆಗಳು

Crime Report in  Mangalore West Traffic PS                              

ಪಿರ್ಯಾದಿ SURESH POOJARY ದಾರರು ಕೋರಿ ರೊಟ್ಟಿ ಜಂಕ್ಷನ್ ನಲ್ಲಿರುವ ವೈನ್ ಗೇಟ್ ನಲ್ಲಿ ವೈಟರ್ ಆಗಿ ಕೆಲಸ ಮಾಡಿಕೊಂಡಿದ್ದವರು ದಿನಾಂಕ: 15-09-2023 ರಂದು ಕೆಲಸವನ್ನು  ಮುಗಿಸಿ ಬಂಟ್ಸ್ ಹಾಸ್ಟೇಲ್ ನಲ್ಲಿರುವ ತಮ್ಮ ರೂಮ್ ಕಡೆಗೆ ತೆರಳುವರೇ ಸಮಯ ಸುಮಾರು ರಾತ್ರಿ 11.30 ಗಂಟೆಗೆ ಮಾನಸ ಟವರ್ಸ್ ಕಟ್ಟಡದ  ಕಡೆಗೆ ರೋಡ್ ಕ್ರಾಸ್ ಮಾಡುತ್ತಿರುವಾಗ ಪಿವಿಎಸ್ ಕಡೆಯಿಂದ KA-19-MK-2135 ನೇ ಕಾರನ್ನು ಅದರ ಚಾಲಕ   ಸೆಂದಿಲ್ ಎಂಬವರು ಸಾರ್ವಜನಿಕ ರಸ್ತೆಯಲ್ಲಿ ದುಡುಕು ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರಿಗೆ ಡಿಕ್ಕಿಪಡೆಸಿದ ಪರಿಣಾಮ ಪಿರ್ಯಾದಿದಾರರ ಎಡ ಮಂಡಿಯ ಬಳಿ ಮೂಳೆ ಮುರಿತದ ಗಾಯ ಹಾಗೂ ಹಣೆಯ ಭಾಗದಲ್ಲಿ  ತರಚಿದ ನಮೂನೆಯ ಗಾಯವಾದವರನ್ನು ಪಿರ್ಯಾದಿದಾರರ ಜೊತೆಗೆ ಬಂದಿದ್ದ ಕೃಷ್ಣಪ್ಪ ಪೂಜಾರಿ ಹಾಗೂ ರಂಜಿತ್ ಎಂಬುವವರು ಉಪಚರಿಸಿ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬಿತ್ಯಾದಿ.   

CEN Crime PS

ಪಿರ್ಯಾದಿದಾರರಿಗೆ ದಿನಾಂಕ 30-08-2023 ರಂದು ಮಧ್ಯಾಹ್ನ 1.50 ಗಂಟೆಗೆ ಯಾರೋ ಅಪರಿಚಿತ ವ್ಯಕ್ತಿ ಟೆಲೆಗ್ರಾಂ ಮೂಲಕ ಆನ್ ಲೈನ್ ಪಾರ್ಟ್ ಟೈಂ ಜಾಬ್ ನ ಬಗ್ಗೆ ಸಂದೇಶ ಕಳುಹಿಸಿದ್ದು ನಂತರ ಸ್ಕೈ ಸ್ಕ್ಯಾನರ್ ವರ್ಡ್ ಟ್ರಾವೆಲ್5241 ಎಂಬ ಟೆಲೆಗ್ರಾಂ ಗ್ರೂಪ್ ನ ಲಿಂಕನ್ನು ಕಳುಹಿಸಿರುತ್ತಾರೆ. ಪಿರ್ಯಾದಿದಾರರು ಸದ್ರಿ ಗ್ರೂಪ್ ಸೇರಿಕೊಂಡಿದ್ದು ನಂತರ ಸದ್ರಿ ಗ್ರೂಪ್ ನಲ್ಲಿ http://www.skyscannerwork.com/? ಎಂಬ ಲಿಂಕ್ ಕಳುಹಿಸಿ ಆರ್ಡರ್ ರಿಸೀವ್ ಟುಡೇ ಎಂಬ ಟಾಸ್ಕ ನ ಬಗ್ಗೆ ತಿಳಿಸಿದ್ದು, ಪಿರ್ಯಾದಿದಾರರು ಸದ್ರಿ ಲಿಂಕ್ ಮೂಲಕ ಪ್ರವೇಶಿಸಿ ಟಾಸ್ಕ್ ಆಡಲು ಆರಂಭಿಸಿದ್ದು, ಮೊದಲಿಗೆ ಪಿರ್ಯಾದಿದಾರರು ಯಾವುದೇ ಹಣ ಹೂಡಿಕೆ ಮಾಡದೇ ಕಂಪನಿಯವರೇ ಹಂತ ಹಂತವಾಗಿ  ಸ್ಕೈ ಸ್ಕ್ಯಾನರ್ ಅಕೌಂಟ್ ಗೆ 10,000/- ರೂ ಬೊನಸ್ ಅಮೌಂಟ್ ಕ್ರೆಡಿಟ್ ಮಾಡಿರುತ್ತಾರೆ ಪಿರ್ಯಾದಿದಾರರು ಸದ್ರಿ ಬೋನಸ್ ಅಮೌಂಟ್ ನಲ್ಲಿ 1,044/- ರೂಗಳನ್ನು ದಿನಾಂಕ 11-09-2023 ರಂದು ತಮ್ಮ ಕೆನರಾ ಬ್ಯಾಂಕ್ ಖಾತೆಗೆ ವಿತ್ ಡ್ರಾ ಮಾಡಿಕೊಂಡಿರುತ್ತಾರೆ. ನಂತರ ಇದೇ ರೀತಿ ಬೇರೆ ಬೇರೆ ಟಾಸ್ಕಗಳನ್ನು ಆಡಿದರೆ ಹೆಚ್ಚಿನ ಕಮಿಷನ್ ಸಿಗಬಹುದೆಂಬ ಆಸೆಯಿಂದ ಅಪರಿಚಿತ ವ್ಯಕ್ತಿಯು ತಿಳಿಸಿದಂತೆ ಮುಂದಿನ ಹಂತದ ಟಾಸ್ಕ್ ನ್ನು ಪೂರ್ಣಗೊಳಿಸಲು 10,000/-ರೂ ಹಣವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ನಂಬ್ರ-9930002100001306, IFSC CODE:PUNB0006200 ನೇದಕ್ಕೆ ಡೆಪಾಸಿಟ್ ಮಾಡಿದ್ದು, ನಂತರ ಟಾಸ್ಕ್ ಪೂರ್ಣಗೊಳಿಸಿದ ಬಳಿಕ ಕಮಿಷನ್ ಸೇರಿ ಒಟ್ಟು 16,269/- ರೂಗಳು ತನ್ನ ಕೆನರಾ ಬ್ಯಾಂಕ್ ಖಾತೆಗೆ ದಿನಾಂಕ 11-09-2023 ರಂದು ವಿತ್ ಡ್ರಾ ಮಾಡಿಕೊಂಡಿರುತ್ತಾರೆ. ನಂತರ ದಿನಾಂಕ 13-09-2023 ರಂದು ತನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 42,342/- ರೂಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ನಂಬ್ರ-045020210000451, IFSC CODE:PUNB0006200 ನೇದಕ್ಕೆ ಡೆಪಾಸಿಟ್ ಮಾಡಿದ್ದು, ನಂತರ ಟಾಸ್ಕ್ ಪೂರ್ಣಗೊಳಿಸಿದ ಬಳಿಕ ಕಮಿಷನ್ ಸೇರಿ ಒಟ್ಟು 53,848/- ರೂಗಳು ತನ್ನ ಕೆನರಾ ಬ್ಯಾಂಕ್ ಖಾತೆಗೆ ದಿನಾಂಕ 13-09-2023 ರಂದು ವಿತ್ ಡ್ರಾ ಮಾಡಿರುತ್ತಾರೆ. ಇದೇ ರೀತಿ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿ ಕಮಿಷನ್ ಗಳಿಸಬಹುದೆಂಬ ಆಸೆಯಿಂದ ತನ್ನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ-ನೇದರಿಂದ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ- ಮತ್ತು ತನ್ನ ಸ್ನೇಹಿತನ ಐಸಿಐಸಿಐ ಬ್ಯಾಂಕ್ ಖಾತೆ ನೇದರಿಂದ ಹಂತ ಹಂತವಾಗಿ,ಒಟ್ಟು 9,29,986/- ರೂಗಳನ್ನು ದಿನಾಂಕ 14-09-2023 ರಿಂದ ದಿನಾಂಕ 15-09-2023 ರವರೆಗೆ ಅಪರಿಚಿತ ವ್ಯಕ್ತಿಯ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ-132405500352, IFSC:ICIC0000212 ಮತ್ತು ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ-260805002547, IFSC:ICIC0002608, ಮತ್ತು ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ-272505500485, IFSC:ICIC0002725, ನೇದಕ್ಕೆ ವರ್ಗಾಹಿಸಿರುತ್ತಾರೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಆನ್ ಲೈನ್ ಮೂಲಕ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ತಿಳಿಸಿ ಒಟ್ಟು 9,29,986/- ರೂ ಹಣವನ್ನು ಮೋಸದಿಂದ ವರ್ಗಾಹಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುತ್ತಾರೆ ಎಂಬಿತ್ಯಾದಿ ದೂರಿನ ಸಾರಾಂಶ.

Traffic North Police Station               

ದಿನಾಂಕ 15-09-2023 ರಂದು ಪಿರ್ಯಾದಿ Smt Kusala ದಾರರ ತಂದೆ ಮಹಾಬಲ ದೇವಾಡಿಗ ರವರು ಮನೆಗೆ ಸಾಮಾನು ಖರೀದಿಸುವ ಸಲುವಾಗಿ ಕಿನ್ನಿಗೋಳಿಗೆ ಹೋದವರು ಮದ್ಯಾಹ್ನ ಸಮಯ ಸುಮಾರು 1:00 ಗಂಟೆಗೆ ಕಿನ್ನಿಗೋಳಿ ಜಂಕ್ಷನ್ ಬಳಿ ರಸ್ತೆ ದಾಟುತ್ತಿರುವಾಗ ಕಟೀಲು ರಸ್ತೆ ಕಡೆಯಿಂದ ಮುಲ್ಕಿ ಕಡೆಗೆ ಟಿಪ್ಪರ್ ಲಾರಿ KA-19-AD-9837 ನಂಬ್ರದ ಅದರ ಚಾಲಕ ಅಕ್ಬರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ತಂದೆಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು, ಬಲ ಕಾಲಿನ ತೊಡೆಯ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ರೀತಿಯ ಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಮುಕ್ಕಾದ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

Mangalore East PS                                   

ಫಿರ್ಯಾದಿದಾರರಿಗೆ ದಿನಾಂಕ: 15-09-2022 ರಂದು ಒಂದು ರಿಜಿಸ್ಟರ್ಡ್ ಅಂಚೆ ಬಂದಿದ್ದು, ಅದನ್ನು ತೆರೆದು ನೋಡಿದಾಗ ಅದು ಮಣಿಪಾಲ್ ಹೌಸಿಂಗ್ ಫೈನಾನ್ಸ್ ಸಿಂಡಿಕೇಟ್ ಲಿ. ಸಿಂಡಿಕೇಟ್ ಲಿ. ನವರ ಕಡೆಯಿಂದ ಬಂದ ನೋಟೀಸಿನ ಪ್ರತಿ ಆಗಿತ್ತು. ಫಿರ್ಯಾದುದಾರರು ಮಣಿಪಾಲ್ ಹೌಸಿಂಗ್ ಫೈನಾನ್ಸ್ ಸಿಂಡಿಕೇಟ್ ಲಿ. ನೊಂದಿಗೆ ಯಾವುದೇ ರೀತಿಯಲ್ಲಿ ವ್ಯವಹಾರ ಹೊಂದಿಲ್ಲದ ಕಾರಣ  ಗಾಬರಿಗೊಂಡು ವಕೀಲರನ್ನು ಸಂಪರ್ಕಿಸಿ ವಿಚಾರ ತಿಳಿಯಲಾಗಿ ಫಿರ್ಯಾದುದಾರರ ಗಂಡ ಡಾ| ಬಿ. ರಾಮ್ ಪ್ರಸಾದ್ ರವರು ಮಣಿಪಾಲ್ ಹೌಸಿಂಗ್ ಫೈನಾನ್ಸ್ ಸಿಂಡಿಕೇಟ್ ಲಿ. ನಲ್ಲಿ ಮೈತ್ರಿ ಮನೆಯ ಮೇಲೆ ಮತ್ತು ಅತ್ತಾವರ ಚಕ್ರಪಾಣಿ ದೇವಸ್ಥಾನದ ಹತ್ತಿರ ಇರುವ ಜಾಗದ ಮೇಲೆ 2017 ರಲ್ಲಿ ಸಾಲ ಪಡೆದಿದ್ದು  ಅದು ಬಡ್ಡಿ ಸೇರಿ ಸುಮಾರು 8 ಕೋಟಿಗಳಷ್ಟು ಆಗಿದ್ದು, ಅದಕ್ಕೆ ಫಿರ್ಯಾದುದಾರರ ಗಂಡ ಹಾಗೂ ಮಣಿಪಾಲ್ ಹೌಸಿಂಗ್ ಫೈನಾನ್ಸ್ ಸಿಂಡಿಕೇಟ್ ಲಿ. ನವರು ಫಿರ್ಯಾದುದಾರರ ಸಹಿಯನ್ನು  ನಕಲಿಯಾಗಿ  ಹಾಕಿ ಫಿರ್ಯಾದುದಾರರು ಸಹ ಸಾಲಗಾರರೆಂದು ದಾಖಲೆ ಪತ್ರಗಳನ್ನು ಸೃಷ್ಟಿ ಮಾಡಿ ಜಾಗವನ್ನು ಬ್ಯಾಂಕಿಗೆ ಅಡಮಾನ ಹಾಕಿ ಫಿರ್ಯಾದುದಾರರ ಗಂಡ ಲೋನ್ ಪಡೆದಿದ್ದು, ಫಿರ್ಯಾದುದಾರರ ಗಂಡ ಮತ್ತು ಮಣಿಪಾಲ್ ಹೌಸಿಂಗ್ ಫೈನಾನ್ಸ್ ಸಿಂಡಿಕೇಟ್ ಲಿ. ನ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿಕೊಂಡು ಫಿರ್ಯಾದುದಾರರ ಸಹಿಯನ್ನು ನಕಲಿಯಾಗಿ ಹಾಕಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ, ಸಾಲ ತೆಗೆದು  ವಂಚಿಸಿ ಮೋಸಮಾಡಿದ್ದು, ಈ ಬಗ್ಗೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿ ಎಂಬಿತ್ಯಾದಿ.

Urva PS

ಪಿರ್ಯಾಧಿ ALEX DSOUZA ದಾರರು ತಾನು ಬಾಡಿಗೆಗೆ ನಡೆಸುತ್ತಿದ್ದ ನೀತಾ ಚರಣ್ ಎಂಬುವರ ಮಾಲಕತ್ವದ KA 19 AC 8179 ನೇ ಟೆಂಪೋಟ್ರಾವೆಲರ್ ನ್ನು ದಿನಾಂಕಃ 14-09-2023 ರಂದು ರಾತ್ರಿ 8-30 ರ ವೇಳೆಗೆ ಕುಂಟಿಕಾನದ ಪ್ಲೈಓವರ್ ಅಡಿಬಾಗದಲ್ಲಿ  ನಿಲ್ಲಿಸಿ ಪಿರ್ಯಾಧಿದಾರರು ಮನೆಗೆ ಹೋಗಿದ್ದು.  ಈ ದಿನ ಮದ್ಯಾಹ್ನ ಸಮಯ ಸುಮಾರು  12-30 ವೇಳೆಗೆ ಪಿರ್ಯಾಧಿದಾರರು ಟೆಂಫೋ ಟ್ರಾವೆಲರ್ ನ್ನು ನಿಲ್ಲಿಸಿದ್ದ ಜಾಗಕ್ಕೆ ಬಂದು ನೋಡಿದಾಗ ಟೆಂಪೋಟ್ರಾವೆಲರ್ ಕಂಡುಬಾರದೇ ಕಾಣೆಯಾಗಿದ್ದು, ಈ ಬಗ್ಗೆ ಪಿರ್ಯಾಧಿದಾರರು ಎಲ್ಲಾ ಕಡೆ ಹುಡುಕಾಡಿ ಇತರೆ ಚಾಲಕರಲ್ಲಿ ವಿಚಾರಿಸಿ ಟೆಂಪೋಟ್ರಾವೆಲರ್ ಬಗ್ಗೆ ಯಾವುದೇ ಮಾಹಿತಿ  ಕಂಡುಬಾರದೇ ಇದ್ದು,  ಟೆಂಪೋಟ್ರಾವೆಲರ್ ನ್ನು ಯಾರೋ ಕಳ್ಳರು  ನಿಲ್ಲಿಸಿದ್ದ ಜಾಗದಿಂದ ವಾಹನದ ಲಾಕ್ ಬ್ರೇಕ್ ಮಾಡಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳವಾಗಿರುವ  ಟೆಂಪೋ ಟ್ರಾವೆಲರ್ ನ ಅಂದಾಜು ಮೌಲ್ಯ ಸುಮಾರು ರೂ 10,00,000/- ಆಗಬಹದು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 16-09-2023 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080