ಅಭಿಪ್ರಾಯ / ಸಲಹೆಗಳು

Crime Report in  Traffic North Police Station             

ಪಿರ್ಯಾದಿ Drukshu Kiran Vasanthದಾರರು ದಿನಾಂಕ 15-10-2023 ರಂದು ತನ್ನ ಸ್ನೇಹಿತನ ತಂದೆಯ ಬಾಬ್ತು ಕಾರು ನಂಬ್ರ KL-60N-2650 ರಲ್ಲಿ ಸ್ನೇಹಿತರೊಂದಿಗೆ ಮಂಗಳೂರಿನಿಂದ ಉಡುಪಿಗೆ ಹೋಗಿ ರಾತ್ರಿ ವಾಪಾಸ್ಸು ಉಡುಪಿಯಿಂದ ಮಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿರುವಾಗ ರಾತ್ರಿ ಸಮಯ ಸುಮಾರು 23:30 ಗಂಟೆಗೆ ಸುರತ್ಕಲ್ SBI ಬ್ಯಾಂಕ್ ಎದುರು ರಸ್ತೆಯ ಹತ್ತಿರ ತಲುಪುತ್ತಿದ್ದಂತೆಯೇ ಅದೇ ರಸ್ತೆಯ ವಿರುದ್ದ ದಿಕ್ಕಿನಿಂದ ಮೋಟಾರ್ ಸೈಕಲ್ ನಂಬ್ರ KA-19EY-1349 ನೇಯದನ್ನು ಹೆಸರು ತಿಳಿಯದ ಅದರ ಸವಾರ ಅರುಣ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು  ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಮೋಟಾರ್ ಸೈಕಲನ್ನು ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರನ ಮೂಗಿಗೆ, ಬಲ ಕೆನ್ನೆಗೆ ಮತ್ತು ಗಲ್ಲದ ಕೆಳಗೆ ತರಚಿದ ಗಾಯ ಸಹಸವಾರ ಅರುಣ್ ರವರ ಮೂಗಿಗೆ ಗುದ್ದಿದ ರಕ್ತಗಾಯ, ಹಣೆಯ ಎಡಬದಿಯ ತಲೆಗೆ ಗುದ್ದಿದ ರಕ್ತಗಾಯ, ಕೆನ್ನೆಯ ಎಡಕಿವಿಯ ಬಳಿ ತರಚಿದ ಗಾಯವಾಗಿದ್ದು ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಕುಂಟಿಕಾನ ಎ.ಜೆ. ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Surathkal PS

ದಿನಾಂಕ : 15-10-2023 ರಂದು ಮಂಗಳೂರು ತಾಲೂಕು ಇಡ್ಯಾ ಗ್ರಾಮದ ಸುರತ್ಕಲ್ ನ ಮೂಡ ಮಾರ್ಕೇಟ್ ಎಂಬಲ್ಲಿ ಪ್ರವೀಣ್ ಎಂಬಾತನು ಸಾರ್ವಜನಿಕರಿಂದ ಹಣ ಪಡೆದು  ಮೊಬೈಲ್ ಪೋನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವನ್ನು ಆಡುತ್ತಿರುವುದಾಗಿ ಮಾಹಿತಿ ಬಂದ ಬಗ್ಗೆ ರಾತ್ರಿ 10.15 ಗಂಟೆಗೆ ದಾಳಿ ನಡೆಸಲಾಗಿ NRS ಕೋಳಿ ಅಂಗಡಿಯ ಎದುರಿನಲ್ಲಿ ಯಾವುದೇ ಪರವಾನಿಗೆಯನ್ನು ಪಡೆಯದೇ  ತಮ್ಮ ಸ್ವಂತ ಲಾಭಗೋಸ್ಕರ ಹಣವನ್ನು ಪಣವಾಗಿರಿಸಿ Lucky Number Winners ಎಂಬ ವಾಟ್ಸಪ್ ಗ್ರೂಫ್ ಮುಖೇನಾ  Innings Last Number, Per Numbers Rs.100, Cash Prize Rs.800 ಎಂದು ಮೇಸೇಜ್ ಮಾಡಿ ಸಾರ್ವಜನಿಕರಿಂದ ಹಣವನ್ನು  ಕ್ರಿಕೆಟ್ ಬೆಟ್ಟಿಂಗ್ ಎಂಬ ಜೂಜಾಟಕ್ಕೆ ತೊಡಗಿಸಿದ್ದ ಪ್ರವೀಣ್ ಹಾಗೂ ಮುನಾರ್ ಇವರನ್ನು ವಶಕ್ಕೆ ಪಡೆದು ವಿಚಾರಿಸಿ ಅವರು ಕ್ರಿಕೆಟ್ ಬೆಟ್ಟಿಂಗ್ ಎಂಬ ಜೂಜಾಟಕ್ಕೆ ತೊಡಗಿಸಿದ್ದರಿಂದ ಅವರು ಇದಕ್ಕೆ ಉಪಯೋಗಿಸಿದ ಮೊಬೈಲ್ ಪೋನುಗಳನ್ನು ಹಾಗೂ ನಗದು ಹಣವನ್ನು ಸ್ವಾಧೀನಪಡಿಸಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಿರುವುದು ಎಂಬಿತ್ಯಾದಿಯಾಗಿರುತ್ತದೆ

Panambur PS   

ದಿನಾಂಕ: 15-10-2023 ರಂದು ಪಣಂಬೂರು ಠಾಣಾ ಸರಹದ್ದಿನ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದ ದುರ್ಗಾ ಹೋಟೇಲ್ ಎದುರಿನ ಅಂದರೆ ಉರ್ದು ಶಾಲೆಯ ಗೇಟಿನ ಎದುರಿನ ಸಾರ್ವಜನಿಕ ಸ್ಥಳದಲ್ಲಿ 4-5 ಯುವಕರುಗಳು ಅದೃಷ್ಟದ ಆಟವಾದ ಅಂದರ್ ಬಾಹರ್ ಜೂಜಾಟವನ್ನು ಆಡುತ್ತಿರುವ ಬಗ್ಗೆ ಮಾಹಿತಿಯು ದೊರೆತಂತೆ ಪರಿಶೀಲಿಸಿಕೊಂಡು ಸ್ಥಳಕ್ಕೆ 16.00 ಗಂಟೆಗೆ ಧಾಳಿ ಮಾಡಿ 5 ಜೂಜಾಟದಲ್ಲಿ ಭಾಗಿಯಾದ UTTAM GHOSH, PRAMOD KUMAR, SANJAY MEHETHU, KAVINDRA KUMAR, VIJESH  KISHUN 5 ಜನ ಯುವಕರುಗಳು ಹಾಗೂ ಈ ಜೂಜಾಟಕ್ಕೆ ಉಪಯೋಗಿಸಿದ ರೂ. 1040 .00 ಹಣ, 52 ಇಸ್ಪೀಟು ಎಲೆಗಳು ಹಾಗೂ 1 ಪೊಲೀಥಿನ್ ಸೀಟ್ ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ಸದ್ರಿ 5 ಜನ ಯವಕರುಗಳ ವಿರುದ್ದ ಕಾನೂನು ಕ್ರಮಕ್ಕಾಗಿ ವರದಿ ಎಂಬಿತ್ಯಾದಿ.

Panambur PS

ದಿನಾಂಕ 14.10.2023 ರಂದು 21:45 ಗಂಟೆಗೆ ಕಸಬಾ ಬೆಂಗ್ರೆಯ ಗಢಾಫಿ ಮೈದಾನದ ಹತ್ತಿರ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡು ಬಂದ ಮಹಮ್ಮದ್ ನಿಜಾಮುದ್ದಿನ್ (26), ವಾಸ:ಎಮ್.ಜೆ.ಎಮ್ 974, ಕಸಬಾ ಬೆಂಗ್ರೆ ಮಂಗಳೂರು ಎಂಬವನನ್ನು  ವಶಕ್ಕೆ ಪಡೆದು  ಸದ್ರಿಯವರನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದಲ್ಲಿ  ವೈದ್ಯಾಧಿಕಾರಿಗಳು ಪರೀಕ್ಷಿಸಿ The Urine Sample Tested For The Presence of Tetrahydracannabinoid ( Marijuana and benzodiazepines ) are Positive ಎಂದು ವರದಿ ನೀಡಿರುತ್ತಾರೆ. ಆಪಾದಿತನು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Urva PS

ದಿನಾಂಕ 15-10-2023 ರಂದು  ಪಿರ್ಯಾದಿದಾರರಾದ ಸತೀಶ್ ರವರು AKMS KA20AA0855 ಬಸ್ಸಿನ ರ್ವಾಹಕರಾಗಿದ್ದು, ಸದ್ರಿ ಬಸ್ ರಾತ್ರಿ ಸುಮಾರು 08-57 ಗಂಟೆಗೆ ಸ್ಟೇಟ್ ಬ್ಯಾಂಕ್ ನಿಂದ ಮಣಿಪಾಲ್ ಕಡೆಗೆ  ಹೊರಟಿದ್ದು, ಬಸ್ ಸುಮಾರು ರಾತ್ರಿ 09-35 ಗಂಟೆಗೆ ಲಾಲ್ ಬಾಗ್ ತಲುಪಿದಾಗ ಹಿಂದಿನಿಂದ KA19HR0562 ಮೋಟಾರ್ ಬೈಕ್ ನಲ್ಲಿ ಬಂದ ಮೂವರು ಸವಾರರು ಬಸ್ಸಿಗೆ ಅಡ್ಡದಾಗಿ ಬೈಕ್ ನಿಲ್ಲಿಸಿ, ಬೈಕ್ ನಿಂದ ಇಳಿದು ಬಂದು ಡ್ರೈವರ್ ಸೀಟ್ ನಲ್ಲಿದ್ದ ಚಾಲಕರಾದ ಶ್ರೈಲೇಶ್ ರವರಿಗೆ ಅವಾಚ್ಯ ಶಬ್ಧಗಳಿಂದ ಬೈದು, ಒರ್ವನು ಕಿಟಕಿ ಮೂಲಕ ಕೈಯಿಂದ ಹಲ್ಲೆ ಮಾಡಿ, ಹೊರಟುಹೋಗಿರುತ್ತಾರೆ.  ಶೈಲೇಶ್ ರವರು  ಬಸ್ ಅನ್ನು ಮಣಿಪಾಲ್ ಕಡೆಗೆ ಚಲಾಯಿಸಿದ್ದು, ಬಸ್ ಕೊಟ್ಟಾರ ಚೌಕಿ ತಲುಪಿದಾಗ ಸದ್ರಿ ಬೈಕ್ ಸವಾರು ಪುನಃ ಬಸ್ ಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ,  ಬಸ್ಸಿನ ಮುಂದಿನ ಗ್ಲಾಸಿಗೆ ಕಲ್ಲು ಎಸೆದು ಪರಾರಿ ಆಗಿರುತ್ತಾರೆ. ಕಲ್ಲು ಎಸೆದ ಪರಿಣಾಮ  ಬಸ್ಸಿನ ಗಾಜು ಪುಡಿಯಾಗಿ ಸುಮಾರು ರೂ. 30,000 ನಷ್ಷವಾಗಿರುತ್ತದೆ. ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 16-10-2023 05:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080