ಅಭಿಪ್ರಾಯ / ಸಲಹೆಗಳು

Crime Report in  : Kavoor PS

ಪಿರ್ಯಾದಿ YADAVA KARKERA ದಾರರ ಮಗಳಾದ ಲಿಖಿತಾ (19 ವರ್ಷ) ತಂದೆ: ಯಾದವ ಕರ್ಕೇರ ವಾಸ: ವಿವೇಕ ನಗರ 1 ನೇ ಕ್ರಾಸ್ ಪಂಜಿಮೊಗರು ಕೂಳೂರು , ಎಂಬುವವರು  ಮಂಗಳೂರಿನ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಶಿಕ್ಷಣ ಪಡೆಯುತ್ತಿದ್ದು ದಿನಾಂಕ 11/11/2023 ರಂದು ಎಂದಿನಂತೆ ಕಾಲೇಜಿಗೆ ಹೋದವರು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು ಅದೇ ದಿನ ರಾತ್ರಿ ಮನೆಗೆ ಪೋನ್ ಮಾಡಿ ತಾನು ಸುರಕ್ಷಿತವಾಗಿದ್ದು ಎಂದು ತಿಳಿಸಿ ಮೂರು ದಿನದಲ್ಲಿ ವಾಪಸ್ಸು ಮನೆಗೆ ಬರುವುದಾಗಿ ಹೇಳಿದ್ದು ನಂತರ 6 ದಿನಗಳಾದರೂ ಈ ವರೆಗೆ ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಎಂಬಿತ್ಯಾದಿ.

Traffic North Police Station                                                  

 ಪಿರ್ಯಾದಿದಾರರು ಈ ದಿನ ದಿನಾಂಕ 16.11.2023 ರಂದು ಮುಂಜಾನೆ ವೇಳೆಗೆ ತನ್ನ ಪರಿಚಯದ ಅಶ್ವಿನಿ ಕಾಮತ್ ಎಂಬವರ ಬಾಬ್ತು ಕಾರು ನಂಬ್ರ KA-19MJ-2907 ನೇಯದನ್ನು ಮಂಗಳೂರು ಪಾಂಡೇಶ್ವರದಿಂದ ಕೂಳೂರು ಕಡೆಗೆ ಅಶ್ವಿನಿ ಕಾಮತ್ ರವರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಕಾರನ್ನು ಚಲಾಯಿಸುತ್ತಾ ಹೋಗುತ್ತಿರುವಾಗ ಮುಂಜಾನೆ ಸಮಯ ಸುಮಾರು 01:15 ಗಂಟೆಗೆ ಮಂಗಳೂರು ತಾಲೂಕು, ಕೂಳೂರು ಅಯ್ಯಪ್ಪ ಗುಡಿ ದೇವಸ್ಥಾನದಿಂದ ಕೂಳೂರು ಸರ್ವೀಸ್ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಬಂದು ಕೂಳೂರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66 ನ್ನು ದಾಟುತ್ತಿದ್ದಂತೆಯೇ ಎದುರಿನಿಂದ ಅಂದರೆ ಕೂಳೂರು ಸೇತುವೆ ಕಡೆಯಿಂದ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಲಾರಿ ನಂಬ್ರ KA-28D-8145 ನೇಯದನ್ನು ಅದರ ಚಾಲಕ ಪ್ರಕಾಶ್ ಹನುಮಂತ ನಾಟೀಕರ್ ಎಂಬವರು ವಾಹನಗಳು ಸಾಗುವ ವಿರುದ್ದ ದಿಕ್ಕಿನಿಂದ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಮುಂದಿನ ಎಡ ಬದಿಗೆ ಡಿಕ್ಕಿ ಹೊಡೆದು ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ ಅಲ್ಲಿಂದ ಹೋಗಿರುತ್ತಾನೆ. ಈ ಅಪಘಾತದಿಂದ ಕಾರಿನ ಮುಂದಿನ ಎಡಭಾಗವು ಸಂಪೂರ್ಣ ಜಖಂಗೊಂಡಿರುತ್ತದೆ ಹಾಗೂ ಈ ಅಪಘಾತದಿಂದ ಯಾರಿಗೂ ಕೂಡಾ ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲ  ಎಂಬಿತ್ಯಾದಿ.

Traffic South Police Station                                      

ಪಿರ್ಯಾದಿ DARVIN COELHO ದಾರರು ಮನೆಗೆ ತೆರಳಲು ಜಪ್ಪಿನಮೊಗೆರು ಬಸ್ ಸ್ಟಾಪ್ ಬಳಿ ಬಸ್ ಗಾಗಿ ಕಾಯುತ್ತಿರುವಾಗ ಸಮಯ ಸುಮಾರು ರಾತ್ರಿ 7.40 ಗಂಟೆಗೆ ತೊಕ್ಕೊಟ್ಟು ಕಡೆಯಿಂದ ಪಂಪವೆಲ್ ಕಡೆಗೆ ಹೋಗುತ್ತಿದ್ದ KA 19 HH 6107 ನೇದರ ಸವಾರ ಜೆವೆಲ್ ಸನ್  ಡೆರಿಲ್ ಲೋಬೊ ಸಹ ಸವಾರನಾಗಿ ಜೆರೊಮ್ ಲೋಬೊ ರವರನ್ನು ಕುಳ್ಳಿರಿಸಿಕೊಂಡು ದುಡುಕುತನ ಮತ್ತು ಅಜಾಗರೂಕತೆಯಿಂದ ಬೈಕ್ ನಲ್ಲಿ ಸವಾರಿಮಾಡಿಕೊಂಡು ಬಂದು ಬಸ್ ಸ್ಟಾಫ್ ಎದುರಿದ್ದ ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮತ್ತು ಸಹ ಸವಾರ ಬೈಕ್ ಸಮೇತ ಡಿವೈಡರ್ ಮೇಲೆ ಬಿದ್ದುದ್ದುನ್ನು ನೋಡಿ ಹತ್ತಿರ ಹೋಗಿ ನೋಡಲಾಗಿ ಪರಿಚಯದವರರೇ ಆಗಿದ್ದು, ಸಹಸವಾರನ ಮುಖಕ್ಕೆ ಮತ್ತು ತೆಲೆಗೆ ಗಂಭಿರ ಸ್ವರೂಪದ ರಕ್ತಗಾಗಳಾಗಿದ್ದು, ಸವಾರನಿಗೆ ಎಡಕೈಗೆ ಮೂಳೆ ಮುರಿತದ ಗಾಯವಾಗಿದ್ದು ಸಾರ್ವಜನಿಕರ ಸಹಾಯದೊಂದಿಗೆ ಆಟೋ ರಿಕ್ಷಾವೊಂದರಲ್ಲಿ ಗಾಯಾಳುಗಳನ್ನು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈಧ್ಯರು ಒಳರೋಗಿಯಾಗಿ ದಾಖಲುಮಾಡಿರುತ್ತಾರೆ ಎಂಬಿತ್ಯಾದಿ.

Urva PS

ದಿನಾಂಕ: 15.11.2023  ರಂದು  ರಾತ್ರಿ  20:30 ಗಂಟೆ  ವೇಳೆಗೆ ಬಿಜೈ  ಕೆ,ಎಂ.ಸಿ ಹಾಸ್ಟೇಲ್  ಹತ್ತಿರ ಸಾರ್ವಜನಿಕ ರಸ್ತೆ ಬದಿಯಲ್ಲಿ ಇಬ್ಬರು ಯುವಕರು ಸೀಗರೇಟ್ ಸೇದುತ್ತಾ ನಿಂತಿದ್ದು, ವಿಚಾರಿಸಲಾಗಿ ನೌಶೀನ್  ಬಾನ್  (20)  ವಾಸ:   ರಮತ್  ಹೌಸ್  ವಿಲ್ಯಪಳ್ಳಿ  ಪೋಸ್ಟ್,  ಕೋಯಿಕ್ಕೋಡ್  ಕೇರಳ ,  2)  ಇನೋಸ್  ನೋಬಿ (20) ವಾಸ:  ತಾನಿಪಿಲ್ಲಿ  ಹೌಸ್  ಪಲ್ಲಿಪೋರ್ಟ್  ಪೋಸ್ಟ್  ಆಲುವ  ತಾಲೂಕು ಎರ್ನಾಕುಲಂ  ಜಿಲ್ಲೆ  ಕೇರಳ  ಎಂಬುದಾಗಿ ತಿಳಿಸಿದ್ದು, ಅವರು ಸಿಗರೇಟಿನ ಒಳಗಡೆ ಗಾಂಜ ತುಂಬಿಸಿ ಸೇವನೆ ಮಾಡಿರುವ  ಬಗ್ಗೆ ಮಾದಕ ದ್ರವ್ಯ ಸೇದಿರುವ ಬಗ್ಗೆ ಸಂಶಯಗೊಂಡು ವೈದ್ಯಕೀಯ ಪರೀಕ್ಷೆಯಿಂದ ದೃಢಪಡಿಸಿಕೊಳ್ಳುವ ಸಲುವಾಗಿ ಎ.ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರ ಬಳಿ ಕಳುಹಿಸಿಕೊಟ್ಟಲ್ಲಿ ಸದ್ರಿಯವರು ಗಾಂಜ ಸೇವನೆ ಮಾಡಿರುವುದಾಗಿ ದೃಢಪತ್ರವನ್ನು ನೀಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 16-11-2023 03:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080