ಅಭಿಪ್ರಾಯ / ಸಲಹೆಗಳು

Crime Report in : Urva PS

ಪಿರ್ಯಾದಿದಾರರಾದ ಚಂದ್ರಪ್ಪ ಗೊನ್ಯಾಳ ರವರು ಶಂಗ್ರಿಲಾ ಅಪಾರ್ಟ್ ಮೆಂಟ್, ಅತೂರು ಲೈನ್, ಚಿಲಿಂಬಿ, ಉರ್ವಾ, ಮಂಗಳೂರು ನಗರ ಇಲ್ಲಿ ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದು, ಈ ಅಪಾರ್ಟ್ ಮೆಂಟ್ ನ ಸೆಕ್ಯುರಿಟಿ ರೂಂ ನಲ್ಲಿ ಸಂಸಾರದೊಂದಿಗೆ ವಾಸವಾಗಿದ್ದು, ಪಿರ್ಯಾದಿದಾರರ ಮಗಳಾದ 18 ವರ್ಷ ಪ್ರಾಯದ ಲಕ್ಷ್ಮಿ ಬಾಯಿ ಈಕೆಯು ಫೇಸ್ ಬುಕ್ ನ ಮುಖೇನ ಪರಿಚಯವಾದ ಬಾಗಲಕೋಟೆಯ ಸೋರ್ ಕೊಪ್ಪ ವಾಸಿ ಆಕಾಶ ಎಂಬಾತನನ್ನು ಪ್ರೀತಿಸುತ್ತಿದ್ದು, ದಿನಾಂಕ 06-12-2023 ರಂದು ಬೆಳಿಗ್ಗೆ 06-00 ಗಂಟೆಗೆ ಪಿರ್ಯಾದಿದಾರರು ಮತ್ತು ಅವರ ಹೆಂಡತಿ ಅದೇ ಅಪಾರ್ಟ್ ಮೆಂಟ್ ನ ಇತರ ಕೆಲಸದಲ್ಲಿರುವ ಸಮಯ  ಪಿರ್ಯಾದಿದಾರರ ಮಗಳು ಅಲ್ಲಿಯೇ ವಾಕಿಂಗ್ ಮಾಡುತ್ತಿದ್ದು, ಪಿರ್ಯಾದಿದಾರರು ಕೆಲಸ ಮುಗಿಸಿ ಬೆಳಿಗ್ಗೆ 06-30ರ ವೇಳೆಗೆ ರೂಂ ಗೆ ಬಂದಾಗ ಪಿರ್ಯಾದಿದಾರರ ಮಗಳು ಕಾಣೆಯಾಗಿದ್ದು, ಪಿರ್ಯಾದಿದಾರರ ಮಗಳು ಆಕಾಶ್ ಎಂಬಾತನ ಹುಡಗನ ಜೊತೆಗೆ ಹೋಗಿರಬಹುದಾಗಿದ್ದು, ಈಕೆಯನ್ನು ಪತ್ತೆ ಹಚ್ಚಿ ಕೊಡುವಂತೆ ನೀಡಿದ ಫಿರ್ಯಾಧಿ.  (ಕಾಣೆಯಾದ ಲಕ್ಷ್ಮಿ ಬಾಯಿ, ಪ್ರಾಯ 18 ವರ್ಷ, ಸುಮಾರು 4 ಅಡಿ 6 ಇಂಚು ಎತ್ತರ, ಸಾಧರಣ ಮೈಕಟ್ಟು, ಉರುಟು ಮುಖ, ಗೋದಿ ಮೈ ಬಣ್ಣ, ಉದ್ದ ಜಡೆ, ಬಲ ಮೂಗಿನಲ್ಲಿ, ಮತ್ತು ಬಲ ಕೆನ್ನೆಯಲ್ಲಿ ಎಳ್ಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ, ಮನೆಯಿಂದ ಹೋಗುವಾಗ ನಸು ಕೆಂಪು ಬಣ್ಣದ ಚೂಡಿದಾರ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ.

Kankanady Town PS

ಪಿರ್ಯಾದಿದಾರರು ದಿನಾಂಕ:03-12-2023 ರಂದು ಬೆಳಿಗ್ಗೆ 06-00 ಗಂಟೆಗೆ ತನ್ನ ಮನೆಯಿಂದ ಕಣ್ಣೂರಿನಲ್ಲಿರುವ  ತನ್ನ  ಅಂಗಡಿಗೆ ಹೋಂಡಾ ಆಕ್ಟೀವಾ ಸ್ಕೂಟರ್ ನಲ್ಲಿ ಹೋದಾಗ,  OPPO ಕಂಪೆನಿಯ ಮೊಬೈಲ್ ಹ್ಯಾಂಡ್ ಸೆಟ್ ಹಾಗೂ ಅದರಲ್ಲಿದ್ದ    ನೇ ಜಿಯೊ ಕಂಪೆನಿಯ ಸಿಮ್ ಮತ್ತು MI 11X ಕಂಪೆನಿಯ ಮೊಬೈಲ್ ಹ್ಯಾಂಡ್ ಸೆಟ್ ಹಾಗೂ ಅದರಲ್ಲಿದ್ದ   ಏರ್ ಟೆಲ್ ಕಂಪೆನಿಯ ಸಿಮ್ ಕಳೆದು ಹೋಗಿರುವುದರಿಂದ  ದಿನಾಂಕ:04-12-2023 ರಂದು ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ. ದೂರು ನೀಡಿದ ಎರಡು ದಿವಸಗಳ ಬಳಿಕ  ಜಿಯೋ ಸಿಮ್ ಆನ್ ಆಗಿರುವುದರಿಂದ ಆ ನಂಬರ್ ಗೆ  ಪಿರ್ಯಾದಿದಾರರ ಸಂಬಂಧಿಕರ ಫೋನ್ ಮುಖಾಂತರ ಸಂಪರ್ಕಿಸಿ ಮಾತನಾಡಿದಾಗ, ಕರೆಯನ್ನು ಸ್ವೀಕರಿಸಿದ ವ್ಯಕ್ತಿ ಹಿಂದಿ  ಭಾಷೆಯಲ್ಲಿ ಮಾತನಾಡಿ, ಮಂಗಳೂರಿನ ಪಡೀಲ್ ನಲ್ಲಿ ಮೊಬೈಲ್ ಫೋನ್ ಬಿದ್ದು ಸಿಕ್ಕಿರುವುದಾಗಿಯೂ,  ಕಡಬದಲ್ಲಿ ಇದ್ದೇನೆ. ನಾಲ್ಕು ದಿವಸ ಕಳೆದು ಮಂಗಳೂರಿಗೆ ಬಂದು  ಮೊಬೈಲ್ ತಂದು ಕೊಡುತ್ತೇನೆ ಎಂದು ಪಿರ್ಯಾದಿದಾರರಿಗೆ ತಿಳಿಸಿರುತ್ತಾರೆ. ಆ ವ್ಯಕ್ತಿಯು ಮೊಬೈಲ್ ತಂದು ಕೊಡದೇ ಇದ್ದುದರಿಂದ ದಿನಾಂಕ:12-12-2023 ರಂದು ಪಿರ್ಯಾದಿದಾರರು ತನ್ನ ಹಳೆಯ ನೇ ನಂಬ್ರದ ಮೊಬೈಲ್ ಸಿಮ್ ನ್ನು ಬ್ಲಾಕ್ ಮಾಡಿ,  ಅದೇ ದಿನ ಮದ್ಯಾಹ್ನ 12-30 ಗಂಟೆ ಸುಮಾರಿಗೆ ಹೊಸ ಸಿಮ್ ನ್ನು ಖರೀದಿಸಿರುತ್ತಾರೆ.  ಆರೋಪಿಗಳು ಪಿರ್ಯಾದಿದಾರರ ಮೊಬೈಲ್ ನಲ್ಲಿದ್ದ   PHONEPE ಅಪ್ಲಿಕೇಶನ್ ಉಪಯೋಗಿಸಿಕೊಂಡು  ದಿನಾಂಕ:12-12-2023 ಪಿರ್ಯಾದಿದಾರರ ಖಾತೆಯಿಂದ  ಮಂಗಳೂರು ಪಡೀಲ್   ಬ್ರಾಂಚ್ ನ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ನ  ನೇ ಖಾತೆಯಿಂದ  PHONEPE  ಮುಖಾಂತರ rakesh6958paytm ಎಂಬ  INDUSIND BANK ನ ಖಾತೆ ಸಂಖ್ಯೆ  259279686958  (IFSC CODE: INDB0001389)  ನೇಯದಕ್ಕೆ 1,000/- ರೂ ಹಣ, ಹಾಗೂ  ಉತ್ತಮ್ ಕುಮಾರ್ ಗುಪ್ತ ರವರ INDUSIND BANK ನ ಖಾತೆ ಸಂಖ್ಯೆ 259241039262 (IFSC CODE: INDB0001389) ನೇಯದಕ್ಕೆ  1,82,000/- ರೂ ಹಣ ಫೋನ್ ಪೇ ಮುಖಾಂತರ ಬೇರೆ ಬೇರೆ  ಟ್ರಾನ್ಸಾಕ್ಷನ್ ನಲ್ಲಿ  ವರ್ಗಾವಣೆ ಮಾಡಿ, ಪಿರ್ಯಾದಿದಾರರಿಗೆ ಮೋಸ ಮಾಡಿ, ಅಕ್ರಮ ನಷ್ಟ ಉಂಟು ಮಾಡಿರುತ್ತಾರೆ.  ಎಂಬಿತ್ಯಾದಿಯಾಗಿರುತ್ತದೆ.

Mangalore South PS

ದಿನಾಂಕ 14-12-2023 ರಂದು ಬೆಳಿಗ್ಗೆ 10-30 ಗಂಟೆಯಿಂದ ಮದ್ಯಾಹ್ನ 12-30 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಜೆಪ್ಪು, ಮಂಕಿಸ್ಟಾಂಡ್ ನ್ಯೂ ರಸ್ತೆಯಲ್ಲಿರುವ ಎಮ್ನಾರ್ಕ್ ಎಮರಲ್ಡ್ ಅಪಾರ್ಟ್ ಮೆಂಟ್ ನ ಎದುಗುಗಡೆ, 1ನೇ ರೈಲ್ವೆ ಬ್ರಿಡ್ಜ್ ಬಳಿಯಲ್ಲಿರುವ,  ಪಿರ್ಯಾದಿದಾರ ಮನೆಯ ಕಂಪೌಂಡಿನ ಗೇಟ್ ಬಳಿಯಲ್ಲಿ ಕೀ ಸಹಿತ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದುದಾರರ ಆರ್. ಸಿ. ಮಾಲಕತ್ವದ KA 19 EG 3729 ನೊಂದಣಿ ಸಂಖ್ಯೆಯ ME4JF391KC8081575 ಚೆಸಿಸ್ ನಂಬ್ರದ, JF39E0081824 ಇಂಜೀನ್ ನಂಬ್ರದ 10/2012 ನೇ ಮೋಡಲ್ ನ ಮ್ಯಾಟ್ ಗ್ರೆ ಬಣ್ಣದ ಅಂದಾಜು ರೂಪಾಯಿ 15,000/- ಬೆಲೆ ಬಾಳುವ HONDA DIO BS III ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿದಾರರು ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಎಂಬಿತ್ಯಾದಿಯಾಗಿರುತ್ತದೆ.

Mangalore South PS

 ಪಿರ್ಯಾದಿದಾರರಾದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಮನೋಹರ್ ಪ್ರಸಾದ್ ಪಿ. ರವರು ದಿನಾಂಕ 15-12-2023 ರಂದು ಠಾಣಾ ಸಿಬ್ಬಂದಿಯವರ ಜೊತೆಯಲ್ಲಿ ಠಾಣಾ ವ್ಯಾಪ್ತಿ ರೌಂಡ್ಸ್ ರಲ್ಲಿ ಸಮಯ ಸಂಜೆ 15-00 ಗಂಟೆಗೆ ದಕ್ಷಿಣ ಗೂಡ್ಸಶೆಡ್ಡೆಯ ಪರಿಸರದಲ್ಲಿ ಇಬ್ಬರು ಯುವಕರು ಸಂಶಯಾಸ್ಪದ ರೀತಿಯಲ್ಲಿ ಕೆಲವು ಮೊಬೈಲ್ ಪೋನ್ ಗಳನ್ನು ನೋಡಿಕೊಂಡಿದ್ದು, ಅವರುಗಳ ಪೈಕಿ ಓರ್ವ ಕಪ್ಪು ಬಣ್ಣದ ಉದ್ದ ತೋಳಿನ ಟೀ-ಶರ್ಟ್ ಮತ್ತು ಬೂದು ಬಣ್ಣದ ಬರ್ಮುಡಾ ಹಾಗೂ ಇನ್ನೋರ್ವ  ತಿಳಿ ಹಸಿರು ಬಣ್ಣದ ಉದ್ದ ತೋಳಿನ ಅಂಗಿ ಹಾಗೂ ನೀಲಿ ಬಣ್ಣ್ದ ಬರ್ಮುಡಾ ಚಡ್ಡಿ ಧರಿಸಿರುತ್ತಾರೆ ಎಂಬುದಾಗಿ ದೊರೆತ ಮಾಹಿತಿಯಂತೆ ಕೂಡಲೇ 15-20 ಗಂಟೆಗೆ ಸ್ಥಳಕ್ಕೆ ತೆರಳಿ ಗೂಡ್ಸಶೆಡ್ ರಸ್ತೆಯ ಮಾಹಿತಿಯಲ್ಲಿ ದೊರೆತ ಸ್ಥಳಕ್ಕೆ ತಲುಪಿ  ಸ್ವಲ್ಪ ದೂರದಿಂದ ಪರಿಶೀಲಿಸಿ ನೋಡಿದಾಗ ಬಾತ್ಮೀದಾರರು ತಿಳಿಸಿದ ಚಹರೆ ಗುರತೀನ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದ ರೀತಿ ಮೊಬೈಲ್ ಫೋನ್ ಗಳನ್ನು ನೋಡುತ್ತಿರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರು ಸಿಬ್ಬಂದಿಗಳೊಂದಿಗೆ ಅವರುಗಳನ್ನು ಸುತ್ತುವರಿದು ಸಿಬ್ಬಂದಿಗಳ ಸಹಾಯದಿಂದ ವಶಕ್ಕೆ ಪಡೆದು ಸ್ಥಳದಲ್ಲಿ ಅವರುಗಳ ಇರುವಿಕೆಯ ಬಗ್ಗೆ ವಿಚಾರಿಸಿದಾಗ ಮೊದಲು ಅವರಿಬ್ಬರು ಸರಿಯಾಗಿ ಉತ್ತರ ನೀಡದೇ ಪರಸ್ಪರರು ಬೇರೆ ಬೇರೆ ರೀತಿಯಲ್ಲಿ ಉತ್ತರಿಸುತ್ತಾ ತಡವರಿಸತೊಡಗಿದ್ದು, ಪಿರ್ಯಾದಿದಾರರರು ಅವರುಗಳ ಹೆಸರು, ವಿಳಾಸವನ್ನು ವಿಚಾರಿಸಲಾಗಿ, ಒರ್ವ ತನ್ನ ಹಸೆರು  ಕುಣ್ಣನ್ @ ಗುಣ ಪ್ರಾಯ: 23 ವರ್ಷ, ತಂದೆ: ಸಡೆಯನ್, ವಾಸ: ಈಸ್ಟ್ ಸ್ಟ್ರೀಟ್, ಪುಕ್ರವಾರೆ ವಿಲೇಜ್, ಕಲ್ಲಕುರ್ಚಿ ತಾಲೂಕು ಮತ್ತು ಜಿಲ್ಲೆ-606204 ತಮಿಳುನಾಡು ರಾಜ್ಯ, ಎಂಬುದಾಗಿ ಹಾಗೂ ಇನ್ನೋರ್ವ ತನ್ನ ಹೆಸರು ರಾಮಕಿ ಪ್ರಾಯ: 25 ವರ್ಷ, ತಂದೆ: ಮುರುಗೇಶ, ವಾಸ: ಈಸ್ಟ್ ಸ್ಟ್ರೀಟ್, ಪುಕ್ರವಾರೆ ವಿಲೇಜ್, ಕಲ್ಲಕುರ್ಚಿ ತಾಲೂಕು ಮತ್ತು ಜಿಲ್ಲೆ-606204 ತಮಿಳುನಾಡು ರಾಜ್ಯ ಎಂಬುದಾಗಿ ನುಡಿದಿರುತ್ತಾರೆ. ಈ ಪೈಕಿ ಕುಣ್ಣನ್ ಎಂಬಾತನು ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರ್ ವೊಂದರಲ್ಲಿ ಇರುವ ವಸ್ತುಗಳನ್ನು ಬಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದ ಸಂಶಯಗೊಂಡ ನಾನು ಆತನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಏನಿದೆ ಎಂದು ಪ್ರಶ್ನಿಸಿದಾಗ ಆತನು ಪ್ಲಾಸ್ಟಿಕ್ ಕವರ್ ಅನ್ನು ತೆರೆದು ತೋರಿಸಿದ್ದು ಅದರಲ್ಲಿ ಒಟ್ಟು 5 ಬೇರೆ ಬೇರೆ ಕಂಪನಿಯ ಮೊಬೈಲ್ ಫೋನ್ ಗಳಿರುವುದು ಕಂಡು ಬಂತು. ಅವುಗಳ ಪೈಕಿ 1)  ಕಡು ನೀಲಿ ಬಣ್ಣದ OPPO ಕಂಪನಿಯ ಮೊಬೈಲ್ ಫೋನ್-1, 2) ಕಪ್ಪು ಬಣ್ಣದ OPPO ಕಂಪನಿಯ ಮೊಬೈಲ್ ಫೋನ್-1, 3) ನೀಲಿ ಬಣ್ಣದ Redmi  ಕಂಪನಿಯ ಮೊಬೈಲ್ ಫೋನ್-1, 4) ಹಸಿರು ಬಣ್ಣದ ITEL ಕಂಪನಿಯ ಕೀಪ್ಯಾಡ್ ಮೊಬೈಲ್ ಫೋನ್-1, 5) ಕಪ್ಪು ಬಣ್ಣದ ಜಿಯೋ ಕಂಪನಿಯ ಕೀಪ್ಯಾಡ್ ಮೊಬೈಲ್ ಫೋನ್-1,  ಹೀಗೆ ಒಟ್ಟು 5 ಮೊಬೈಲ್ ಫೋನ್ ಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಬಚ್ಚಿಟ್ಟುಕೊಳ್ಳುವ ರೀತಿಯಲ್ಲಿ ವಶದಲ್ಲಿಟ್ಟುಕೊಂಡಿರುವುದು ಸಂಶಯಾಸ್ಪದವಾಗಿ ಕಂಡು ಬಂತು. ನಾನು ಆ ಮೊಬೈಲ್ ಫೋನ್ ಗಳ ಕಂಪನಿ ಮತ್ತು ಅದರಲ್ಲಿರುವ ಸಿಮ್ ನಂಬ್ರಗಳ ಬಗ್ಗೆ ವಿಚಾರಿಸಿದಾಗ ಆತನು ಸರಿಯಾದ ವಿವರಣೆಯನ್ನು ನೀಡಲಿಲ್ಲ. ಹಾಗೂ ಸದ್ರಿ 5 ಮೊಬೈಲ್ ಫೋನ್ ಗಳು ಯಾರಿಗೆ ಸೇರಿದ್ದವುಗಳು ಎಂದು ಸರಿಯಾದ ವಿವರಣೆ ನೀಡಿರುವುದಿಲ್ಲ. ಬಳಿಕ ರಾಮಕಿ ಯಲ್ಲಿ ಮೊಬೈಲ್ ಫೋನ್ ಗಳ ಬಗ್ಗೆ ವಿಚಾರಿಸಿದಾಗ ಆ ಮೊಬೈಲ್ ಫೋನ್ ಗಳು ತನ್ನದೆಂದು ತಿಳಿಸಿದ್ದು ಆತನಲ್ಲಿ ಕೂಡಾ ಆ ಮೊಬೈಲ್ ಫೋನ್ ಗಳ ಕಂಪನಿ ಮತ್ತು ಅದರಲ್ಲಿರುವ ಸಿಮ್ ನಂಬ್ರಗಳ ವಿವರಗಳನ್ನು ಕೇಳಿದಾಗ ಸರಿಯಾದ ವಿವರಣೆ ನೀಡಿರುವುದಿಲ್ಲ. ಸದ್ರಿ ಮೊಬೈಲ್ ಫೋನ್ ಗಳನ್ನು ಆರೋಪಿಗಳಾದ ಕುಣ್ಣನ್ ಮತ್ತು ರಾಮಕಿ ರವರಿಬ್ಬರು ಜೊತೆ ಸೇರಿ ಯಾರಿಂದಲೋ ಅಥವಾ ಎಲ್ಲಿಂದಲೋ ಕಳವು ಮಾಡಿಕೊಂಡು ತಮ್ಮ ವಶದಲ್ಲಿಟ್ಟುಕೊಂಡು ಮುಂದಕ್ಕೆ ಮಾರಾಟ ಮಾಡಿ ಅಕ್ರಮ ಲಾಭಗಳಿಸುವ ಉದ್ದೇಶದಲ್ಲಿರುವ ಬಗ್ಗೆ ಬಲವಾದ ಸಂಶಯ ಉಂಟಾಗಿದ್ದು ಈ ಬಗ್ಗೆ   ಆರೋಪಿಗಳ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿಯಾಗಿದೆ.

 

ಇತ್ತೀಚಿನ ನವೀಕರಣ​ : 16-12-2023 07:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080