ಅಭಿಪ್ರಾಯ / ಸಲಹೆಗಳು

Crime Report in :   Urva PS   

ದಿನಾಂಕ 15-01-2024 ರಂದು ರಾತ್ರಿ 10-00 ರ ವೇಳೆಗೆ ಪಿರ್ಯಾಧಿದಾರರಾದ ಭರತ್ ರವರು  ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಕ್ಲೀನಿಂಗ್  ಕೆಲಸ ಮುಗಿಸಿ, ತಮ್ಮ ರೂಮಿನ ಕಡೆಗೆ ಬರುವರೇ ಉರ್ವಾಸ್ಟೋರ್ ನ  ಪಿ.ಡಬ್ಲೂ.ಡಿ. ಕ್ವಾಟ್ರಸ್ ನ 01  ನೇ ಕ್ರಾಸ್  ಬಳಿ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ KA-19-HJ-4976 ನೇ ಸ್ಕೂಟರ್ ನಲ್ಲಿ ಬಂದಿದ್ದ ಮೂವರು ವ್ಯಕ್ತಿಗಳ ಪೈಕಿ, ಒಬ್ಬನು ಪಿರ್ಯಾಧಿದಾರರಿಗೆ ಚೂರಿ ತೋರಿಸಿ, ಬೆದರಿಸಿ, ಪಿರ್ಯಾಧಿದಾರರ ಕಿಸೆಯಲ್ಲಿದ್ದ ವಿವೋ ಮೊಬೈಲ್ ಅನ್ನು ಬಲವಂತವಾಗಿ ಕಸಿದುಕೊಂಡಿದ್ದಲೇ, ಇನ್ನೊಬ್ಬ ವ್ಯಕ್ತಿ ಪಿರ್ಯಾಧಿದಾರರ ಪ್ಯಾಂಟಿನ ಕಿಸೆಯಲ್ಲಿದ್ದ 500 ರೂಪಾಯಿಯನ್ನು ಕಸಿದು, ಆ ಮೂವರು  ಅಪರಿಚಿತ  ವ್ಯಕ್ತಿಗಳು ಪಿರ್ಯಾಧಿದಾರರಿಗೆ ಕೈಯಿಂದ ಹೊಡೆದು, ನೆಲಕ್ಕೆ ಬೀಳಿಸಿ, ಕಾಲಿನಿಂದ ತುಳಿದು, ಚಾಕುವಿನ ಹಿಡಿಯಿಂದ ಪಿರ್ಯಾಧಿದಾರರ ಬಲಗೈ ಗೆ ಹೊಡೆದು, ಕಿಸೆಯಲ್ಲಿದ್ದ ಮೊಬೈಲ್ ಮತ್ತು ಹಣವನ್ನು ಸುಲಿಗೆ ಮಾಡಿಕೊಂಡು ಸ್ಕೂಟರ್ ನಲ್ಲಿ ಪರಾರಿಯಾಗಿರುವುದಾಗಿದೆ ಎಂಬಿತ್ಯಾದಿ.

Kavoor PS

ಪಿರ್ಯಾದಿದಾರರು ಮಂಗಳೂರು ನಲ್ಲಿ ಮಹಾನಗರ ಪಾಲಕೆಯಲ್ಲಿ ಚಾಲಕನಾಗಿ ಕೆಲಸ ಮಾಡುವುದಾಗಿದೆ  ಪಿರ್ಯಾದಿದಾರರು  KA-17-EF-8416   ನೇ ಹಿರೋ ಹೊಂಡಾ ಸ್ಪೇಂಟರ್ ಪ್ಲಸ್ ನ್ನು ಹೊಂದಿದ್ದು ಈ ಬೈಕ್ ನಲ್ಲಿ ಕೆಲಸ ಕಾರ್ಯಗಳಿಗೆ ಹೋಗುವುದಾಗಿದೆ ದಿನಾಂಕ 21-12-2023 ರಂದು  ಎಂದಿನಂತೆ ಕೆಲಸಕ್ಕಾಗಿ ಕೂಳೂರು 4 ನೇ ಮೈಲು ಬಳಿ ಮಹನಗರಪಾಲಿಕೆಯ ವೇಸ್ಟ್ ವಾಹನ ನಿಲ್ಲಿಸುವ ಸ್ಥಳದಲ್ಲಿ ಪಿರ್ಯಾದಿದಾರರ ಬಾಬ್ತು KA-17-EF-8416   ನೇ ಹಿರೋ ಹೊಂಡಾ ಸ್ಲೇಂಟರ್ ಪ್ಲಸ್  ನ್ನು ಬೆಳಿಗ್ಗೆ 6-00 ಗಂಟೆಗೆ ನಿಲ್ಲಿಸಿ ಕೆಲಸಕ್ಕೆ ಹೋಗಿರುತ್ತಾರೆ ನಂತರ ಕೆಲಸ ಮುಗಿಸಿಕೊಂಡು ಪಿರ್ಯಾದಿದಾರರು ಬೈಕ್ ಇರಿಸಿದ ಸ್ಥಳದಲ್ಲಿ  ಸಂಜೆ 5-30 ಗಂಟೆಗೆ ಬಂದಾಗ ಬೈಕ್ ಇಲ್ಲದೇ ಇದ್ದು ಪಿರ್ಯಾದಿದಾರರು  ಪರಿಸರದಲ್ಲಿ ಹುಡುಕಿದಲ್ಲಿ ಎಲ್ಲಿಯೂ ಪತ್ತೆಯಾಗದೇ ಕಳವು ಆಗಿರುವುದು ಕಂಡು ಬಂತು ನಂತರ ಪಿರ್ಯಾದಿದಾರರು ಮಂಗಳೂರು ನಗರ ಪ್ರದೇಶದಲ್ಲಿ ಬೈಕ್ ಹುಡುಕಾಡಿದಲ್ಲಿ ಎಲ್ಲಿಯೂ ಪತ್ತೆಯಾಗದೇ ಯಾರೋ ಕಳ್ಳರು ಕಳವು ಮಾಡಿರುವುದಾಗಿದೆ  ಪಿರ್ಯಾದಿದಾರರ ಕಳವಾದ ಬೈಕ್ KA-17-EF-8416   ನೇ ಹಿರೋ ಹೊಂಡಾ ಸ್ಪೇಂಟರ್ ಪ್ಲಸ್   ಆಗಿದ್ದು ಇದರ ಇಂಜಿನ್ ನಂಬ್ರ HA10EFCHB16353 ಚಾಸಿಸ್ ನಂಬ್ರ MBLHA10EZCHB45964 ಆಗಿರುತ್ತದೆ ಈ ಬೈಕ್ ಅಂದಾಜು ಮೌಲ್ಯ ರೂ 25.000/- ಆಗಬಹುದು , ಪಿರ್ಯಾದಿದಾರರು ಅವರ ಬೈಕ್ ಎಲ್ಲಿಯದರೂ ಸಿಗಬಹುದು ಎಂದು ಈ ದಿನದ ವರೆಗೆ  ಎಲ್ಲಾ ಕಡೆ ಹುಡುಕಾಡಿದಲ್ಲಿ ಎಲ್ಲಿಯೂ ಪತ್ತೆಯಾಗದೇ ಇರುವುದರಿಂಧ ಈ ದಿನ ದೂರು ನೀಡುವುದಾಗಿದೆ ಕಳ್ಳತನವಾದ ಮೋಟರ್ ಬೈಕ್ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿ

Moodabidre PS

ಪಿರ್ಯಾದಿ Sandesh PG – PI ದಾರರು ಈ ದಿನ ದಿನಾಂಕ: 16/01/2024 ರಂದು 16:00 ಗಂಟೆಗೆ ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದರೆಯ ಮಾರ್ಪಾಡಿ ಗ್ರಾಮದ ಸ್ವರಾಜ್ ಮೈದಾನದ ಇಂಡಿಯನ್ ವೈನ್ಸ್ ಬಳಿಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ದೊರೆತ ಮಾಹಿತಿಯಂತೆ ಪಂಚರೊಂದಿಗೆ ಹೊರಟು 16.15 ಗಂಟೆಗೆ ಸ್ವರಾಜ್ ಮೈದಾನದ ಬಳಿಗೆ ತಲುಪಿ ಇಂಡಿಯನ್ ವೈನ್ಸ್ ಬಳಿ ಮಟ್ಕಾ ಚೀಟಿ ಬರೆಯುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ನಾಗರಾಜ್ ಮತ್ತು ಸುರೇಶ್ ದೇವಾಡಿಗ ಎಂಬುವರನ್ನು ವಶಕ್ಕೆ ಪಡೆದು, ಆರೋಪಿತರ ವಶದಲ್ಲಿದ್ದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Moodabidre PS

ಪಿರ್ಯಾದಿ Divakara Rai M –PSI ದಾರರು ದಿನಾಂಕ: 16/01/2024 ರಂದು 17:00 ಗಂಟೆಗೆ ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದರೆಯ ಬೆಳುವಾಯಿ ಗ್ರಾಮದ ಬೆಳುವಾಯಿ ಜಂಕ್ಷನ್ ನ ಆಟೋ ನಿಲ್ದಾಣದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ದೊರೆತ ಮಾಹಿತಿಯಂತೆ ಪಂಚರೊಂದಿಗೆ ಹೊರಟು 17.30 ಗಂಟೆಗೆ ಸದ್ರಿ ಸ್ಥಳಕ್ಕೆ ತಲುಪಿ ಮಟ್ಕಾ ಚೀಟಿ ಬರೆಯುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ಅರುಣ್ ಕುಮಾರ್  ಮತ್ತು ಸಾಧಿಕ್ ಎಂಬುವರನ್ನು ವಶಕ್ಕೆ ಪಡೆದು, ಆರೋಪಿತರ ವಶದಲ್ಲಿದ್ದ ನಗದು ಹಣ ರೂ: 1300/- ನಗದು, ಮಟ್ಕಾ ನಂಬರ್ ಬರೆದ 01 ಚೀಟಿ ಹಾಗೂ ಮಟ್ಕಾ ಬರೆಯಲು ಉಪಯೋಗಿಸಿದ 01 ಪೆನ್ನನ್ನು  ಸ್ವಾಧೀನಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Mangalore East PS

ಫಿರ್ಯಾದಿದಾರರು ಸುಮಾರು 7 ತಿಂಗಳಿನಿಂದ George Martis Road Kadri  ಇಲ್ಲಿ ಬಾಡಿಗೆ ಮನೆಯಲ್ಲಿ ಸಂಸಾರದೊಂದಿಗೆ ವಾಸ ಮಾಡಿಕೊಂಡಿದ್ದು, ಅವರ ಸ್ವಂತ ಊರು ಮೈಸೂರನಲ್ಲಿರುವ ದೊಡ್ಡಬಾಗಿಲು ಆಗಿರುತ್ತದೆ. ದಿನಾಂಕ 14-12-2023 ಮತ್ತು 15-12-2023 ರಂದು ರಜೆ ಇದ್ದುದರಿಂದ ತನ್ನ ಹೆಂಡತಿ ಮತ್ತು ನನ್ನ ಇಬ್ಬರ ಮಕ್ಕಳ ಜೊತೆ ಅವರ ಸ್ವಂತ ಊರಾದ ಮೈಸೂರಿಗೆ ದಿನಾಂಕ 14-12-2023 ರಂದು ಬೆಳಿಗ್ಗೆ ಸುಮಾರು 06-00 ಗಂಟೆಗೆ ತೆರಳಿದ್ದು, ದಿನಾಂಕ 16-01-2024 ರಂದು ಸಂಜೆ ಸುಮಾರು 3-30 ಗಂಟೆಗೆ ಮನೆಗೆ ಬಂದಾಗ ಮನೆಯ ಎದುರು ಬಾಗಿಲಿನ ಲಾಕ್ ಮುರಿದು ಸ್ವಲ್ಪ ತೆರೆದ ರೀತಿಯಲ್ಲಿ ಇದ್ದು, ಒಳಗೆ ಹೋಗಿ ನೋಡಿದಾಗ ಬೆಡ್ ರೂಮಿನಲ್ಲಿದ್ದ ಆಲ್ಮೇರ್ ನ ಲಾಕ್ ಮುರಿದು ಅದರಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿ ಆಗಿದ್ದು ಹಾಗೂ ಅದರಲ್ಲಿಟ್ಟಿದ್ದ 70,000/- ರೂ ಹಣ ಹಾಗೂ ವಾರ್ಡ್ ರೋಬ್  ನಲ್ಲಿ ಒಂದು ಸೂಟ್ ಕೇಸ್ ನಲ್ಲಿಟಿದ್ದ ಬೆಳ್ಳಿ ಸಾಮಾಗ್ರಿಗಳಾದ ಬೆಳ್ಳಿ ಬಟ್ಟಲು-2, ಬೆಳ್ಳಿ ಕಳಶ -1, ಬೆಳ್ಳಿ ಚಮಚ-1, ಬೆಳ್ಳಿ ಕಪ್-1, ಬೆಳ್ಳಿಯ ಸುಮಾರು 20 ನಾಣ್ಯಗಳು, ಬೆಳ್ಳಿ ಸರ (ಪೆಂಡೆಂಟ್ ಸಹಿತ), ಬೆಳ್ಳಿಯ ದೀಪ-2 ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವು ಮಾಡಿದ ಬೆಳ್ಳಿ ಸೊತ್ತುಗಳ ಒಟ್ಟು ಮೌಲ್ಯ  56,000/-  ಆಗಿರುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳವರೆ ಕೋರಿಕೆ ಎಂಬಿತ್ಯಾದಿ.

Ullal PS

ಫಿರ್ಯಾದಿದಾರರಾದ ಮೊಹಮ್ಮದ್ ಫಾರೂಕ್ ಪಾಷಾ ರವರ ಪತ್ನಿ ಶ್ರೀಮತಿ. ಶಬಾನಾ (34) ರವರು ತನ್ನ ಮಗಳಾದ (10), ರವರನ್ನು  ಉಳ್ಳಾಲ ತಾಲೂಕಿನ ಪೆರ್ಮನ್ನೂರು ಗ್ರಾಮದ ಮಂಚಿಲದ ಪಿರ್ಯಾದಿದಾರರ ವಾಸದ ಮನೆಯಿಂದ ದಿನಾಂಕ. 11-01-2024 ರಂದು ಸಂಜೆ 5-00 ಗಂಟೆಯ ಸಮಯಕ್ಕೆ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೊರಗೆ ಹೋದವರು ವಾಪಾಸು ಮನೆಗೆ ಬಾರದೇ ಇದ್ದವರನ್ನು ಫಿರ್ಯಾದಿದಾರರು ಹಾಗೂ ಮನೆಯವರು ಸೇರಿ ಆಸುಪಾಸಿನಲ್ಲಿ, ಸಂಬಂಧಿಕರ ಮನೆಯಲ್ಲಿ ಹಾಗೂ ಹೆಚ್ಚಿನ ಕಡೆಗಳಲ್ಲಿ ಈ ತನಕ ಹುಡುಕಾಡಿ ಪತ್ತೆಯಾಗದೇ ಇದ್ದ ಕಾರಣ ಈ ಎರಡು ಜನರನ್ನು ಪತ್ತೆ ಹಚ್ಚಿ ಕೊಡುವಂತೆ ಫಿರ್ಯಾದಿದಾರರು ದಿನಾಂಕ. 16-01-2024 ರಂದು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

Surathkal PS

ದಿನಾಂಕ 16-01-2024 ರಂದು ಸಂಜೆ 3:40 ಗಂಟೆಗೆ ಪಿರ್ಯಾದಿದಾರರಾದ ಸೋಹನ್ ಆಳ್ವ ರವರ ವಾಟ್ಸಪ್ ನಂಬ್ರ  ನೇಯದಕ್ಕೆ  ಬಂದ ವೀಡಿಯೊದಲ್ಲಿ ಗಂಡಸೊಬ್ಬನು ಮಾನ್ಯ ಮುಖ್ಯಮಂತ್ರಿಯವರನ್ನು ಉದ್ದೇಶಿಸಿ ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳನ್ನು ಅವಾಚ್ಯ ಶಬ್ದಗಳಿಂದ ಬೈದು  ಪಕ್ಷ ಪಕ್ಷಗಳ ನಡುವೆ ಹಾಗೂ ಧರ್ಮ ಧರ್ಮಗಳ ನಡುವೆ ದ್ವೇಷ ಉಂಟಾಗುವಂತೆ, ಸಾರ್ವಜನಿಕ ನೆಮ್ಮದಿ ಕದಡುವಂತೆ ದ್ವೇಷವನ್ನು ಹೆಚ್ಚಿಸುವ ಮಾತುಗಳನ್ನಾಡಿ ಕೋಮುಗಳ ನಡುವೆ ಸೌಹರ್ದಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ ಮಾತನಾಡಿದ್ದಲ್ಲದೆ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಹಾಗೂ ಮಾನ್ಯ ಉಪ ಮುಖ್ಯಮಂತ್ರಿ ಇವರುಗಳಿಗೆ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿದೆ, ಆದ್ದರಿಂದ ಸದ್ರಿ ವೀಡಿಯೊದಲ್ಲಿ ಮತಾನಾಡಿದ ಆರೋಪಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಎಂಬಿತ್ಯಾದಿಯಾಗಿರುತ್ತದೆ.

Surathkal PS

ಪಿರ್ಯಾದಿ Ashwini ದಾರರ ತಂದೆ ರಾಜು ಕುಲಾಲ್ (55) ರವರು ನರದ ಹಾಗೂ ಪಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದು  ದಿನಾಂಕ 16-01-2024 ರಂದು ಪಿರ್ಯಾದಿದಾರರು ಎಂದಿನಂತೆ ಕೆಲಸಕ್ಕೆ ಹೋಗಿದ್ದು ಹಾಗೂ ಪಿರ್ಯಾದಿದಾರರ ತಾಯಿ ತರಕಾರಿ ತರಲೆಂದು ಕಾನಾ ಎಂಬಲ್ಲಿಗೆ ಹೋದ ಸಮಯ ಸುಮಾರು ರಾತ್ರಿ 7.00 ಗಂಟೆಗೆ ರಾಜು ಕುಲಾಲ್  ರವರು ಮನೆಯಿಂದ ಹೊರಟು ಹೋದವರು ವಾಪಸು ಮನೆಗೆ ಬಾರದೇ ಇದ್ದಾಗ ಪಿರ್ಯಾದಿದಾರರು ನೆರೆಹೊರೆಯವರಲ್ಲಿ ಮತ್ತು ಇತರೆ ಸ್ನೇಹಿತರಲ್ಲಿ ವಿಚಾರ ತಿಳಿಯಲಾಗಿ ರಾಜು ಕುಲಾಲ್ ರವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಈ ವರೆಗೂ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು ಕಾಣೆಯಾದರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 17-01-2024 05:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080