ಅಭಿಪ್ರಾಯ / ಸಲಹೆಗಳು

Barke PS

ಸಿಸಿಬಿ ಘಟಕದ ಪೊಲೀಸ್ ಉಪ ನಿರೀಕ್ಷಕರಾದ ರಾಜೇಂದ್ರ ಬಿ ರವರಿಗೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾ ಬಂದಿಗಳನ್ನು ಬೇಟಿಯಾಗಲು ಬರುವ 2 ಜನ ವ್ಯಕ್ತಿಗಳು ವಿಚಾರಣಾ ಬಂದಿಗಳಿಗೆ ತರುವ ಬೇಕರಿ ವಸ್ತುಗಳ ಜೊತೆಗೆ ಉಪ್ಪಿನ ಕಾಯಿ ಪ್ಯಾಕೆಟ್ ನಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ MDMA ನೇದನ್ನು ಹಾಕಿಕೊಂಡು ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾ ಬಂದಿಗಳಿಗೆ ನೀಡಲು ತರುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿತರುಗಳು ಸಮಾನ ಉದ್ದೇಶ ಹೊಂದಿ ಎನ್ ಡಿ ಪಿ ಎಸ್ ಕಾಯ್ದೆಯನ್ನು ಉಲ್ಲಂಘಿಸಿ  ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾ ಬಂದಿಗಳಿಗೆ ಮಾದಕ ವಸ್ತುವಾದ  MDMA ಮಾದಕ ವಸ್ತು  ಮತ್ತು ಗಾಂಜಾ ವೀಡ್ ಆಯಿಲ್ ನ್ನು  ಜಿಲ್ಲಾ ಕಾರಾಗೃಹಕ್ಕೆ ಕೊಂಡು ಹೋಗುತ್ತಿರುವುದು ಪತ್ತೆಯಾಗಿದ್ದು, ಆರೋಪಿಗಳಿಂದ ಸುಮಾರು ರೂ 15,000/- ಬೆಲೆ ಬಾಳುವ 3 ಗ್ರಾಂ MDMA ಮಾದಕ ವಸ್ತು ಮತ್ತು ಸುಮಾರು ರೂ 5,000/- ರೂ ಬೆಲೆ ಬಾಳುವ 1.30 ಗ್ರಾಂ ಗಾಂಜಾ ವೀಡ್ ಆಯಿಲ್ ನ್ನು  ಸ್ವಾಧೀನಪಡಿಸಿದ್ದು,   ಆರೋಪಿಗಳು  NDPS Act 1985 ರಂತೆ ಅಪರಾಧ ಎಸಗಿರುತ್ತಾರೆ.  ಆರೋಪಿಗಳನ್ನು ಮತ್ತು ವಶಪಡಿಸಿಕೊಂಡ ಸೊತ್ತುಗಳಾದ (1) ತಲಾ 1 ಗ್ರಾಂ ತೂಕವಿರುವ MDMA ಮಾದಕ ವಸ್ತು  ಇರುವ ಪೊಟ್ಟಣ- 3  (2) 1.30 ಗ್ರಾಂ ತೂಕದ ಗಾಂಜಾ ವೀಡ್ ಆಯಿಲ್  (3)  ಆರೋಪಿಗಳು MDMA ಮಾದಕ ವಸ್ತು, ಮತ್ತು  ಗಾಂಜಾ ಆಯಿಲ್ ನ್ನ ಕಟ್ಟಲು ಉಪಯೋಗಿಸಿದ ಕಪ್ಪು ಬಣ್ಣದ ಗಮ್ ಟೇಪ್, ಬಿಳಿ ಬಣ್ಣದ ಪ್ಲಾಸ್ಟಿಕ್ ತುಂಡು ಮತ್ತು  ನೂಲು ಇರುವ ಪ್ಯಾಕೇಟ್, (4) ಉಪ್ಪಿನ ಕಾಯಿ ಪ್ಯಾಕೇಟ್ (5) ಬೇಕರಿ ವಸ್ತು ಮತ್ತು ಹಣ್ಣು ಹಂಪಲು ಇರುವ ಪ್ಲಾಸ್ಟಿಕ್ ಚೀಲ (6) ನೀಲಿ ಬಣ್ಣದ ಸ್ಯಾಮ್ ಸಂಗ್ ಕಂಪನಿಯ ಮೊಬೈಲ್ ಪೋನ್-01 ಮತ್ತು ಆರೋಪಿಗಳಾದ  (1) ದೀಕ್ಷಿತ್  ಕಾಪಿಕಾಡು ಮತ್ತು  (2) ಅಭಿಷೇಕ್ @ ಅಭಿ   ಎಂಬವರನ್ನು ಸ್ವಾದೀನ ಪಡಿಸಿ  ಆರೋಪಿಗಳ  ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿ

Mangalore East Traffic PS            

ಪಿರ್ಯಾದಿದಾರರಾದ ಜಯ ಪೂಜಾರಿರವರು ದಿನಾಂಕ: 13-02-2023 ರಂದು ಕೆಲಸ ಮುಗಿಸಿ ಜಲ್ಲಿಗುಡ್ಡೆಯಲ್ಲಿರುವ ತಮ್ಮ ಮನೆಗೆ ಹೋಗಲು ತನ್ನ ಬಾಬ್ತು KA-19-EN-6737  ನಂಬ್ರದ ಸ್ಕೂಟರಿನಲ್ಲಿ ಸವಾರನಾಗಿ ಲಾಲ್ ಭಾಗ್ ನಿಂದ ಹೊರಟು ಗೋಲ್ಡ್  ಫಿಂಚ್ ಕಡೆಯಿಂದ ಬಲ್ಮಠ ಜಂಕ್ಷನ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಾ ಸಂಜೆ ಸಮಯ ಸುಮಾರು 19:30 ಗಂಟೆಗೆ ಬಲ್ಮಠ ಜ್ಯೂಸ್ ಜಂಕ್ಷನ್ ಬಳಿ ಇರುವ ಪೆಟ್ರೋಲ್ ಬಂಕ್ ಎದುರುಗಡೆ ಹಾದು ಹೋಗಿರುವ ಬಲ್ಮಠ ಮುಖ್ಯ ರಸ್ತೆಗೆ  ಬಂದು ತಲುಪಿದಾಗ ನಂಬರ್ ತಿಳಿಯದ ದ್ವಿಚಕ್ರ ವಾಹನವೊಂದನ್ನು ಅದರ ಸವಾರ ಅಂಬೇಡ್ಕರ್ ಸರ್ಕಲ್ ಕಡೆಯಿಂದ ಬಲ್ಮಠ ಜಂಕ್ಷನ್ ಕಡೆಗೆ ಹಾದು ಹೋಗಿರುವ ಬಲ್ಮಠ ಮುಖ್ಯ ರಸ್ತೆಯಲ್ಲಿ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅಪಾಯಕಾರಿಯಾಗಿ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಪಿರ್ಯಾದಿದಾರರ ಸ್ಕೂಟರಿನ ಬಲಭಾಗದ ಮಧ್ಯಭಾಗಕ್ಕೆ ಢಿಕ್ಕಿ ಪಡಿಸಿ ಪರಾರಿಯಾಗಿದ್ದು, ಢಿಕ್ಕಿಯ ಪರಿಣಾಮ  ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಬಲ ಕೈಕೋಲು ಕೈಗೆ ಚರ್ಮ ಸುಲಿದ ರಕ್ತಗಾಯ, ಸೊಂಟದ ಬಲಭಾಗಕ್ಕೆ ಗುದ್ದಿದ ಗಾಯವಾಗಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೋರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಪಿರ್ಯಾದಿದಾರರು ತಾನು ಕೆಲಸ ಮಾಡಿಕೊಂಡಿರುವ ಇಲಾಖೆಯ ಮೇಲಾಧಿಕಾರಿಯವರಲ್ಲಿ ಅಪಘಾತದ ಬಗ್ಗೆ ವಿಚಾರಿಸಿ ಈ ದಿನ ತಡವಾಗಿ  ಬಂದು ದೂರು ನೀಡುತ್ತಿದ್ದು, ಅಪಘಾತ ಪಡಿಸಿ ಪರಾರಿಯಾದ ದ್ವಿಚಕ್ರ ವಾಹನ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Mangalore Rural PS                                         

ಪ್ರಕರಣದ ಪಿರ್ಯಾದಿದಾರರು Loyal Gladson Miranda ದಿನಾಂಕ 16/02/2023 ರಂದು ಬೆಳಿಗ್ಗೆ 10-00 ಗಂಟೆಗೆ ತಮ್ಮ ಕಛೇರಿಯಲ್ಲಿ ಕೆಲಸ ಮಾಡುವ ಉಪ ನಿರ್ದೆಶಕರಾದ ಭೂ ವಿಜ್ಞಾನಿ ಮಹಾದೇಶ್ವರ ಹೆಚ್. ಎಸ್ ರವರೊಂದಿಗೆ ಅಕ್ರಮವಾಗಿ ನೇತ್ರಾವತಿ ನದಿಯಲ್ಲಿ ಮರಳು ಕಳವು ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ವಳಚ್ಚಿಲ್ ನೇತ್ರಾವತಿ ನದಿ ತೀರದಿಂದ ಸಾರ್ವಜನಿಕ ದೋಣಿಯಲ್ಲಿ ಹೊರಟು 10-45 ಗಂಟೆಗೆ ಉಳಿಯಾ ದ್ವೀಪದಿಂದ ಸುಮಾರು 01 ಕಿ.ಮಿ ವ್ಯಾಪ್ತಿಯ ಸ್ಥಳದಲ್ಲಿ ಆರೋಪಿಗಳಾದ ಶರೀಪ್ ಅಬ್ದುಲ್ ಖಾದರ್ ಮತ್ತು ಮಹಮ್ಮದ್ ಇಸ್ಮಾಯಿಲ್ ಅಜರುದ್ದಿನ್ ಎಂಬುವವರ ಸೂಚನೆಯಂತೆ ಕಾರ್ಮಿಕರ ಸಹಕಾರದಿಂದ ಯಾವುದೇ ಮರಳು ಗಾರಿಕೆ / ಸಾಗಣಾಣಿಕೆ ಮತ್ತು ಶೇಖರಣೆ ನಿಷೇಧಿಸಿರುವ ಪ್ರದೇಶದಲ್ಲಿ ಕಳ್ಳತನದಿಂದ ಮರಳನ್ನು ತೆಗೆದು ಮೋಟಾರ್ ಅಳವಡಿಸಿದ 2 ದೋಣಿಗಳಲ್ಲಿ ಅಂದಾಜು 2.800 ರೂಪಾಯಿ ಮೌಲ್ಯದ ಒಟ್ಟು 4 ಟನ್ ಮರಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದಾಗಿದೆ ಸದ್ರಿ ಮರಳನ್ನು ಸಾಗಾಟ ಮಾಡುವರೇ  1] ಕಪ್ಪು ಬಣ್ಣದ ಕಬ್ಬಿಣ್ಣದ ದೋಣಿ -01. ( ಅಂದಾಜು ಮೌಲ್ಯ 2 ಲಕ್ಷ ರೂಪಾಯಿ), 2] ಕೆಂಪು ಬಣ್ಣದ ಫೈಬರ್ ದೋಣಿ -01.( ಅಂದಾಜು  ಮೌಲ್ಯ ಒಂದುವರೇ ಲಕ್ಷ ರೂಪಾಯಿ), 3] ಮರಳು ತೆಗೆಯುವ ಜಲ್ಲಗಳು – 4, ( ಅಂದಾಜು ಮೌಲ್ಯ 4 ಸಾವಿರ ರೂಪಾಯಿಗಳು), 4] ಮರಳು ತೆಗೆಯಲು ಉಪಯೋಗಿಸುವ ಕಬ್ಬಿಣದ ಹಾರೆಗಳು -8, (ಅಂದಾಜು ಮೌಲ್ಯ 2 ಸಾವಿರ), 5] ಪ್ಲಾಸ್ಟಿಕ್ ಬುಟ್ಟಿಗಳು – 11, ( ಅಂದಾಜು ಮೌಲ್ಯ 1,100/- ರೂಪಾಯಿ), 6] ದೋಣಿಯನ್ನು ಚಲಾಯಿಸಲು ಉಪಯೋಗಿಸುವ ಸುಜುಕಿ ಕಂಪನಿಯ ಯಾಂತ್ರಿಕ ಮೋಟಾರು – 2. ಮೌಲ್ಯ ಸುಮಾರು 75 ಸಾವಿರ ರೂಪಾಯಿಗಳು), 7] ಎಲ್.ಪಿ.ಜಿ ಸಿಲಿಂಡರ್ ಗಳು -2, (ಮೌಲ್ಯ ಸುಮಾರು ಒಂದುಸಾವಿರ), 8] ಎರಡೂ ದೋಣಿಗಳಲ್ಲಿ ತುಂಬಿಸಿರುವ ಮರಳು ಹಾಗೂ ಮೇಲಿನ ಎಲ್ಲಾ ಸ್ವತ್ತುಗಳನ್ನು ಭದ್ರಿಕೆಯ ಹಿತದೃಷ್ಠಿಯಿಂದ ಮುಕ್ಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಖನಿಜ ಠಾಣೆ ಚೆಕ್ ಪೋಸ್ಟ್ ನಲ್ಲಿ ಭದ್ರಿಕೆಯಲ್ಲಿ ಇಡಲಾಗಿದೆ ಎಂಬಿತ್ಯಾದಿ

Surathkal PS

ಪಿರ್ಯಾದಿದಾರರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಪಿರ್ಯಾದಿದಾರರ ಮೊಬೈಲ್ ನಂಬ್ರ ನೇದಕ್ಕೆ ಆರೋಪಿ ಧನಂಜಯನು ಉಷಾ ಎಂಬ ಹುಡುಗಿಯ ಹೆಸರಿನಲ್ಲಿ ತನ್ನನ್ನು ಪರಿಚಯಿಸಿಕೊಂಡು ಮೊಬೈಲ್ ನಂಬ್ರ 8792282418, 8431367385 ಹಾಗೂ 9741994210 ನೇದರಿಂದ  ವಿಡಿಯೋ ಕಾಲ್ ಮಾಡಿ,  ಹುಡುಗಿಯ ಅರೆ ನಗ್ನ ಚಿತ್ರಗಳನ್ನು ತೊರಿಸಿ, ಪಿರ್ಯಾದಿದಾರರು ಸದ್ರಿ ಕರೆಯನ್ನು ಮಾತಾಡುವುದನ್ನು ಸ್ರ್ಕೀನ್ ರೆಕಾರ್ಡ್ ಮಾಡಿ ಕೊಂಡು ಅದನ್ನು ವಾಪಾಸು ಪಿರ್ಯಾದಿದಾರರಿಗೆ ಕಳುಹಿಸಿ, ಹಣಕ್ಕೆ ಬೇಡಿಕೆ ಇರಿಸಿ, ಪಿರ್ಯಾದಿದಾರರಿಗೆ ಪದೇ ಪದೇ ವಿಡೀಯೋ ಕಾಲ್ ಮಾಡಿ ಹಣಕ್ಕೆ ಬೇಡಿಕೆ ಇರಿಸಿ,ಈ ವಿಚಾರದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಲ್ಲಿ ಜೀವ ಸಹಿತ ಬಿಡುವುದಿಲ್ಲವಾಗಿ ಬೆದರಿಸಿರುತ್ತಾರೆ.

Mangalore South PS

ಪಿರ್ಯಾದಿದಾರರಾದ ಎ.ಎಸ್.ಐ. ಬಾಲಕೃಷ್ಣ ಸಿ.ಹೆಚ್. ರವರು ದಿನಾಂಕ 16-02-2023 ರಂದು ಮಹಾಂತೇಶ್ ರವರೊಂದಿಗೆ ಹೊಯ್ಸಳ -5 ವಾಹನದಲ್ಲಿ ಕರ್ತವ್ಯದಲ್ಲಿದ್ದು,  ಸಮಯ 18:56  ಗಂಟೆಗೆ ಎಬಿ ಶೆಟ್ಟಿ ಸರ್ಕಲ್ ಬಳಿ ಇದ್ದಾಗ ಠಾಣೆಯಿಂದ ದೂರವಾಣಿ ಕರೆ ಮಾಡಿ ಸರ್ವೀಸ್ ಬಸ್ ನಿಲ್ದಾಣದಲ್ಲಿ ಅನಾಥ ಸ್ಥಿತಿಯಲ್ಲಿ ಮಗು ಇರುತ್ತದೆ. ಕೂಡಲೇ ಅಲ್ಲಿಗೆ ಹೋಗುವಂತೆ ತಿಳಿಸಿದ ಮೇರೆಗೆ ಸರ್ವೀಸ್ ನಿಲ್ದಾಣಕ್ಕೆ ಹೋಗಿ ನೋಡಿದಾಗ ಎಡಪದವು ಕಡೆಗೆ ಹೋಗುವ ಬಸ್ಸುಗಳು ನಿಲ್ಲುವ ಸ್ಥಳದ ಬಳಿ ಇರುವ ಪ್ರಯಾಣಿಕರು ಕುಳಿತುಕೊಳ್ಳುವ ಕಟ್ಟೆಯ ಮೇಲೆ ಬೇಬಿ ಕೇರಿಂಗ್ ಬ್ಯಾಗ್ ನಲ್ಲಿ ಒಳಗಡೆ ಮುಖ ಕಾಣುವ ರೀತಿ ಸುಮಾರು 1 ವಾರ ಪ್ರಾಯದ ಗಂಡು ಶಿಶುವನ್ನು ಮಲಗಿಸಿರುವುದು ಕಂಡು ಬಂದಿದ್ದು, ಬಳಿಕ ಶಿಶುವಿನ ತುರ್ತು ಚಿಕಿತ್ಸೆ ಬಗ್ಗೆ ಸದ್ರಿ ಶಿಶುವನ್ನು ವೆನ್ ಲಾಕ್ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಬಗ್ಗೆ ದಾಖಲಿಸಿರುತ್ತಾರೆ.  ಈ ಶಿಶುವನ್ನು ಅದರ ತಂದೆ ಅಥವಾ ತಾಯಿ ಅಥವಾ ಆ ಶಿಶುವಿನ ರಕ್ಷಣೆಯ ಹೊಣೆ ಹೊತ್ತಿರುವ ವ್ಯಕ್ತಿಯು ಶಿಶುವನ್ನು ಯಾವುದೋ ಕಾರಣಕ್ಕೆ ತೊರೆದುಬಿಡುವ ಉದ್ದೇಶದಿಂದ ಮಂಗಳೂರು ನಗರದ ಸರ್ವೀಸ್ ಬಸ್ ನಿಲ್ದಾಣದಲ್ಲಿ ಅನಾಥ ಸ್ಥಿತಿಯಲ್ಲಿ ಬಿಟ್ಟುಹೋಗಿರುವುದಾಗಿದೆ ಸದ್ರಿ ಶಿಶುವಿನ ಪೋಷಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿಯಾಗಿರುತ್ತದೆ.                            

 

ಇತ್ತೀಚಿನ ನವೀಕರಣ​ : 17-02-2023 07:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080