ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

 

Traffic South Police

ಈ ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿ WAHAB ಇವರು ದಿನಾಂಕ: 17-03-2024 ರಂದು KA-19-HH-1851 ನೇ ನಂಬ್ರದ ಸ್ಕೂಟರ್ ನ್ನು ಉಳ್ಳಾಲದ ಮಿಲ್ಲತ್ ನಗರದ ಕಡೆಯಿಂದ ಕಲ್ಲಾಪುವಿನಲ್ಲಿರುವ ಪೆಟ್ರೋಲ್ ಬಂಕ್ ಗೆ ಪೆಟ್ರೋಲ್ ಹಾಕಿಸಲು ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಸಮಯ ಸುಮಾರು ಮಧ್ಯಾಹ್ನ 2-45 ಗಂಟೆಗೆ ಉಳ್ಳಾಲಬೈಲಿನಲ್ಲಿರುವ ದೇವಿ ಫರ್ನೀಚರ್ ಎದುರು ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಪಿರ್ಯಾದಿದಾರರ ವಿರುದ್ಧ ದಿಕ್ಕಿನಿಂದ ಏಕಮುಖ ರಸ್ತೆಯ ವಿರುದ್ಧವಾಗಿ ಸ್ಕೂಟರ್ ನಂಬ್ರ: KA-19-EN-6529 ನೇದನ್ನು ಅದರ ಸವಾರ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ನ ಮುಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ಬಲಕಾಲಿನ ಪಾದದಲ್ಲಿ ಗುದ್ದಿದ ನಮೂನೆಯ ಮೂಳೆಮುರಿತದ ಗಾಯ, ಬಲಕಾಲಿನ ಮೊಣಗಂಟಿನ ಬಳಿ ತರಚಿದ ಗಾಯ ಹಾಗೂ ಬಲ ಕೈ ಹಸ್ತದ ಬಳಿ ತರಚಿದ ಗಾಯ ಹಾಗೂ ಸೊಂಟದಲ್ಲಿ ಗುದ್ದಿದ ನಮೂನೆಯ ಗಾಯವಾಗಿರುತ್ತದೆ ಕೂಡಲೇ ಅಲ್ಲಿ ಸೇರಿದ ಜನರು ಗಾಯಾಳುವನ್ನು ರಸ್ತೆ ಬದಿಯಲ್ಲಿ ಉಪಚರಿಸಿ ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ತೊಕ್ಕೊಟ್ಟು ಸಹರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Traffic South Police Station

ದಿನಾಂಕ 17/03/2024 ರಂದು ಮಧ್ಯಾಹ್ನದ ವೇಳೆ ಫಿರ್ಯಾದಿದಾರರಾದ ಕಿಶನ್ .ಟಿ  ಎಂಬವರು ತಲಪಾಡಿಯ ಗ್ರಾಮ ಸೌಧ ಬಿಲ್ಡಿಂಗ್ ಬಳಿಯ ಅಂಗಡಿಯ ಬಳಿ ಇರುವ ವೇಳೆ ಮಧ್ಯಾಹ್ನ ಸುಮಾರು 1-00 ಗಂಟೆಗೆ  ತಲಪಾಡಿಯ ಗ್ರಾಮ ಸೌಧ ಬಿಲ್ಡಿಂಗ್ ನಲ್ಲಿ ದಿಶಾ ಬೇಕರಿಯನ್ನು ಇಟ್ಟುಕೊಂಡಿರುವ ರಾಜೇಶ್ ಶೆಟ್ಟಿ ಪ್ರಾಯ 54 ವರ್ಷ ಎಂಬವರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಅವರ ಮನೆಯ ಕಡೆಯಿಂದ ಅವರ ಬೇಕರಿಯ ಕಡೆಗೆ ಬರುವರೇ ತೊಕ್ಕೊಟ್ಟು ಕಡೆಯಿಂದ ತಲಪಾಡಿಯ ಕಡೆಗೆ ಹೋಗುವ ರಾ.ಹೆ-66 ರ ಏಕಮುಖ ರಸ್ತೆಯನ್ನು  ದಾಟಲು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದಾಗ, KL-14-AD-9645  ನೇ ನಂಬ್ರದ ಮೋಟಾರ್ ಸೈಕಲ್ ನ್ನು ಅದರ ಸವಾರನಾದ  ಮೊಹಮ್ಮದ್ ಸುಹೈಲ್ ಎಂಬಾತನು ಸಹಸವಾರ ಮಾಝಿನ್ ಎಂಬಾತನನ್ನು ಕುಳ್ಳಿರಿಸಿಕೊಂಡು ರಸ್ತೆಯ ವಿರುದ್ಧ ದಿಕ್ಕಿನಿಂದ ಅಂದರೆ ತಲಪಾಡಿಯ ಕಡೆಯಿಂದ ಕೆ.ಸಿ ರೋಡು ಕಡೆಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ರಾಜೇಶ್ ಶೆಟ್ಟಿಯವರಿಗೆ  ಡಿಕ್ಕಿ ಹೊಡೆದ ಪರಿಣಾಮ ರಾಜೇಶ್ ಶೆಟ್ಟಿಯವರು ಡಾಮಾರು ರಸ್ತೆಗೆ ಬಿದ್ದು, ಹಣೆಯ ಎಡ ಭಾಗಕ್ಕೆ ರಕ್ತಗಾಯ, ಬಲಕೈ ಮಣಿ ಕಟ್ಟಿನಲ್ಲಿ ರಕ್ತಗಾಯ, ಹಾಗೂ ಮೂಗಿನಲ್ಲಿ ರಕ್ತಗಾಯವಾಗಿ, ಬಲಕಿವಿಯಲ್ಲಿ ರಕ್ತ ಬಂದಿರುವರನ್ನು ಫಿರ್ಯಾದಿದಾರರು  ಹಾಗೂ ಅಲ್ಲಿ ಸೇರಿದ್ದ ಜನರು ಉಪಚರಿಸಿ, ಫಿರ್ಯಾದಿದಾರರು, ಶಶಾಂಕ್ ರವರು  ಹಾಗೂ ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರನು ಅಂಬುಲೆನ್ಸ್ ಒಂದರಲ್ಲಿ ಚಿಕಿತ್ಸೆಯ ಬಗ್ಗೆ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆಕರೆದುಕೊಂಡು ಹೋಗಿ ವೈದ್ಯರ ಮುಂದೆ ಹಾಜರುಪಡಿಸಿದ್ದು, ವೈದ್ಯರು ಪರೀಕ್ಷಿಸಿ ಗಾಯಾಳು ರಾಜೇಶ್ ಶೆಟ್ಟಿಯವರ ತಲೆಗೆ ತೀವ್ರ ಗಾಯವಾಗಿರುವುದರಿಂದ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಹೋಗುವರೇ ತಿಳಿಸಿದ ಮೇರೆಗೆ ಅಲ್ಲಿಂದ  ಅಂಬುಲೆನ್ಸ್ ವಾಹನವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಮುಂದುವರಿಸಿರುತ್ತಾರೆ

 

Traffic South Police Station

ಈ ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿ JOYAL FERAMO ಇವರು ದಿನಾಂಕ: 17-03-2024 ರಂದು ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ: KA-19-HE-7290 ನೇದರಲ್ಲಿ ಅವರ ಮನೆಯಿಂದ ಕೆ.ಸಿ ರೋಡ್ ಕಡೆಗೆ ಅಗತ್ಯ ಸಾಮಾನುಗಳನ್ನು ಖರೀದಿಸಲು ಸವಾರಿ ಮಾಡಿಕೊಂಡು ಹೊರಟು ಸಮಯ ಸುಮಾರು ಮಧ್ಯಾಹ್ನ 3-45 ಗಂಟೆಗೆ ಕಿನ್ಯಾ ವಲವಿನಹಳ್ಳಿ ವೃದ್ಧಾಶ್ರಮದ ಎದುರು ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರಿನಿಂದ ಬರುತ್ತಿದ್ದ ಸ್ಕೂಟರ್ ನಂಬ್ರ: KA-19-EX-5724 ನೇದನ್ನು ಅದರ ಸವಾರನು ಆಟೋರಿಕ್ಷಾವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ, ಪಿರ್ಯಾದಿದಾರರ ಬಲ ಕೈ ಉಂಗುರ ಬೆರಳಿಗೆ ಚರ್ಮ ಹರಿದ ರಕ್ತಗಾಯವಾಗಿ ಮೂಳೆ ಮುರಿತದ ಗಾಯ ಹಾಗೂ ಎಡ ಮೊಣ ಕೈ ಬಳಿ ತರಚಿದ ರಕ್ತಗಾಯ ಮತ್ತು ಎಡಕಾಲಿನ ಪಾದದ ಮೇಲೆ ತರಚಿದ ರಕ್ತಗಾಯ ಹಾಗೂ ಎಡಸೊಂಟದ ಬಳಿ ಗುದ್ದಿದ ಮತ್ತು ತರಚಿದ ನಮೂನೆಯ ಗಾಯವಾಗಿರುತ್ತದೆ. ಕೂಡಲೇ ಅಲ್ಲಿ ಸೇರಿದ್ದ ಜನರು ಗಾಯಾಳುವನ್ನು ರಸ್ತೆ ಬದಿಯಲ್ಲಿ ಉಪಚರಿಸಿರುತ್ತಾರೆ, ಅದೇ ಸಮಯ ಅಪಘಾತ ಸ್ಥಳಕ್ಕೆ ಬಂದ ಪಿರ್ಯಾದಿದಾರರ ಸ್ನೇಹಿತ ರಾಜೇಶ್ ಎಂಬುವರು ಗಾಯಾಳುವನ್ನು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಕಣಚೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 19-03-2024 09:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080