ಅಭಿಪ್ರಾಯ / ಸಲಹೆಗಳು

Mangalore East Traffic PS       

ಪಿರ್ಯಾದಿದಾರರು ದಿನಾಂಕ 17-04-2023 ರಂದು ಸಿ.ಹೆಚ್.ಸಿ ಮೋಹನ್ ದಾಸ್ ಎಂಬುವರೊಂದಿಗೆ ಕೆ.ಪಿ.ಟಿ ಜಂಕ್ಷನ್ ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಸಮಯ ಸುಮಾರು ಬೆಳಿಗ್ಗೆ 9.45 ಗಂಟೆಗೆ  ಸರ್ಕ್ಯೂಟ್ ಹೌಸ್ ಕಡೆಯಿಂದ KA-01-AL-4542  ನೊಂದಣಿ ನಂಬ್ರದ ಗಣೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್ ಬಸ್ಸನ್ನು ಅದರ ಚಾಲಕ ವಿಲಿಯಮ್ ರೋಡ್ರಿಗಸ್ ಎಂಬಾತನು ಸಾರ್ವಜನಿಕರಿಗೆ ಹಾಗೂ ರಸ್ತೆ ದಾಟುವ ಪಾದಚಾರಿಗಳಿಗೆ ಅಪಾಯಕಾರಿಯಾಗುವ ರೀತಿಯಲ್ಲಿ ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ತಡೆಯುಂಟು ಮಾಡಿ, ಬಸ್ಸನ್ನು ಕೆಪಿಟಿ ಜಂಕ್ಷನ್ ಬಳಿ ನಿಲ್ಲಿಸಿಕೊಂಡು ಇತರ ವಾಹನ ಸವಾರರಿಗೆ ಹಾಗೂ ನಡೆದುಕೊಂಡು ರಸ್ತೆ ದಾಟುವ ಪಾದಚಾರಿಗಳಿಗೆ ಅಪಾಯಕಾರಿಯಾದ ಸ್ಥಿತಿ ನಿರ್ಮಾಣವಾಗಲು ಕಾರಣರಾಗಿರುತ್ತಾರೆ ಎಂಬಿತ್ಯಾದಿ.

 

CEN Crime PS Mangaluru City

ಪಿರ್ಯಾದಿ ದೊಡ್ಡಪ್ಪ ಕೆನರಾ ಬ್ಯಾಂಕ್ ಹಳೆಯಂಗಡಿ ಬ್ರಾಂಚ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದು,  ದಿನಾಂಕ: 13-04-2023 ರಂದು 14-30 ಗಂಟೆಗೆ   ಮೊಬೈಲ್ ನೇಯದಕ್ಕೆ 8895427884 ನೇಯದರಿಂದ ಅಪರಿಚಿತ ವ್ಯಕ್ತಿಯಿಂದ ನಿಮ್ಮ ಬ್ಯಾಂಕ್ ಖಾತೆಯ ರದ್ದಾಗಿದ್ದು ಆದ್ದರಿಂದ ಕೆವೈಸಿ ಅಪ್ಡೇಟ್ ಮಾಡುವಂತೆ ಸಂದೇಶ ಬಂದಿದ್ದು ಅದರಲ್ಲಿ ವಿವರದ ಬಗ್ಗೆ ತಿಳಿದುಕೊಳ್ಳಲು 09046400347 ಮೊಬೈಲ್ ನಂಬ್ರ ನಮೂದು ಆಗಿದ್ದು, ಅದರಂತೆ ಪಿರ್ಯಾದಿದಾರರು ಅದಕ್ಕೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿಯು ಪಿರ್ಯಾದಿದಾರರ ದೊಡ್ಡಪ್ಪ ನ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳಿದ್ದು ಅದಕ್ಕೆ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದ್ದು ನಂತರ ಡೇಬಿಟ್ ಕಾರ್ಡ ವಿವರಗಳನ್ನು ಕೇಳಿದ್ದು ಆದರೆ ಸದ್ರಿ ಡೇಬಿಟ್ ಕಾರ್ಡ ನಂಬ್ರ ಇಲ್ಲ ಎಂದು ತಿಳಿಸಿದಾಗ, ಆ ವ್ಯಕ್ತಿಯು ಆ ಕೆನರಾ ಬ್ಯಾಂಕ್ ಖಾತೆಯ ನಾಮಿನೀ ಹೆಸರು ಕೇಳಿದ್ದು ಅದಕ್ಕೆ ಪಿರ್ಯಾದಿದಾರರು ಸದ್ರಿ ಬ್ಯಾಂಕ್ ಖಾತೆಯ ನಾಮಿನೀ ಆದ ತಮ್ಮ ದೊಡ್ಡಮ್ಮ ರವರ ಹೆಸರನ್ನು ತಿಳಿಸಿದ್ದು ನಂತರ ಆ ವ್ಯಕ್ತಿಯು ಪಿರ್ಯಾದಿದಾರರಿಂದ ಅವರ ದೊಡ್ಡಮ್ಮನ ಬ್ಯಾಂಕ್ ಖಾತೆಯಾದ ಕೆನರಾ ಬ್ಯಾಂಕ್ ವಿವರಗಳನ್ನು ಕೇಳಿದ್ದು ಅದಕ್ಕೆ ಪಿರ್ಯಾದಿದಾರರು ದೊಡ್ಡಮ್ಮನ ಕೆನರಾ ಬ್ಯಾಂಕ ಖಾತೆಯ ಡೇಬಿಟ್ ಕಾರ್ಡ ನಂಬ್ರ ವನ್ನು ಆ ವ್ಯಕ್ತಿಗೆ ನೀಡಿದ್ದು ನಂತರ ಆ ವ್ಯಕ್ತಿಯು ಕರೆಯನ್ನು ಸ್ಥಗಿತ ಗೊಳಿಸಿ ಅದೇ ನಂಬ್ರನಿಂದ ಪಿರ್ಯಾದಿದಾರರ ದೊಡ್ಡಮ್ಮನ ಮೊಬೈಲ್ ನಂಬ್ರ  ನೇದಕ್ಕೆ ಕರೆ ಬಂದಿದ್ದು ಪಿರ್ಯಾದಿದಾರರ ದೊಡ್ಡಮ್ಮ ರವರು  ಕೆನರಾ ಬ್ಯಾಂಕ್ ಹಳೆಯಂಗಡಿ  ಬ್ರಾಂಚ್ ನಲ್ಲಿರುವ ಉಳಿತಾಯ ಖಾತೆ ಹೊಂದಿದ್ದು ಖಾತೆ ಸಂಖ್ಯೆ: ಆ ವ್ಯಕ್ತಿಯು ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿಯನ್ನು ತಿಳಿಸುವಂತೆ ಕೋರಿಕೊಂಡಿದ್ದು  ಅದರಂತೆ ಪಿರ್ಯಾದಿಯ ಸದ್ರಿ ಅಪರಿಚಿತ ವ್ಯಕ್ತಿಗೆ ತಮ್ಮ ದೊಡ್ಡಮ್ಮ ನ ಮೊಬೈಲ್ ನಲ್ಲಿ ಸ್ವೀಕೃತವಾದ ಒಟಿಪಿಯನ್ನು ನೀಡಿದ್ದು ಕೂಡಲೇ ಅವರ ಕೆನರಾ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ರೂ 1,61,353/- ಹಣವನ್ನು ವರ್ಗಾಯಿಸಿಕೊಂಡು ಮೋಸ, ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

Traffic South Police Station         

ದಿನಾಂಕ:15-04-2023 ರಂದು ಪಿರ್ಯಾದಿ G RAMESH SHETTY ಕ್ಯಾಂಟಿನಲ್ಲಿ ಕೆಲಸವನ್ನು ಮುಗಿಸಿಕೊಂಡು ತನ್ನ ರೂಂ ನ ಕಡೆಗೆ ಹೋಗಲು ತೊಕ್ಕೊಟ್ಟು ನಾಗನಕಟ್ಟೆ ಬಳಿ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಬರುವ  ರಾ. ಹೆ 66 ನ್ನು ದಾಟುತ್ತಿರುವಾಗ ಸಮಯ ಸುಮಾರು ಸಂಜೆ 07-30 ಗಂಟೆಗೆ ಉಳ್ಳಾಲ ಕಡೆಯಿಂದ ಮಂಗಳೂರು ಕಡೆಗೆ ಬರುವ ಸರ್ವಿಸ್ ಡಾಮಾರು ರಸ್ತೆಯಿಂದ ಮುಖ್ಯ ರಸ್ತೆಗೆ ಬರುತ್ತಿದ್ದ KA-19-EN-9740 ನೇದರ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದು ಅವರ ತಲೆಯ ಹಿಂಬದಿಗೆ ಗುದ್ದಿದ ಗಾಯ, ಎಡಕಿವಿಯಲ್ಲಿ ರಕ್ತ ಬರುವ ಗಾಯ ಹಾಗೂ ಎಡ ಕೈ ಗೆ ರಕ್ತಗಾಯವಾಗಿರುತ್ತದೆ. ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರ ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಆಟೋ ರಿಕ್ಷಾವೊಂದರಲ್ಲಿ ತೊಕ್ಕೊಟ್ಟು ಸಹರಾ ಆಸ್ಪತ್ರಗೆ ತಂದು ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಹೋಗಿದ್ದು ಅಲ್ಲಿನ ವೈದ್ಯರು ಪರಿಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಎಂಬಿತ್ಯಾದಿ.

Mangalore North PS

ಪಿರ್ಯಾದಿ SATHISH SHETTY ಮೇಲಿನ ವಿಳಾಸದ ಹೋಟೇಲಿನಲ್ಲಿ ಸುಮಾರು 10 ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಇದೇ ಹೊಟೇಲಿನಲ್ಲಿ ಈ ಹಿಂದೆ ಸುಮಾರು 2 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಮಲೇಶ್ ರಾವ್ (29) ವರ್ಷ ,ತಂದೆ: ಲೇಟ್ ಸೂರತ್ ರಾವ್ ,ವಾಸ: ಸಿಂಗ್ರಕಲ ಗ್ರಾಮ,ಸಿಂಗ್ರಕಾಡ್,ಪಿಎಸ್ ಪಠಾನ್ ಪಲಾಮ ಜಾರ್ಖಾಂಡ್ ರಾಜ್ಯದವರಾಗಿದ್ದು ಇವರು ಊರಿಗೆ ಹೋದವರು ದಿನಾಂಕ 31.03.2023 ರಂದು ರಾತ್ರಿ ಸುಮಾರು 7.30 ಗಂಟೆಗೆ ಹೋಟೆಲಿಗೆ ಬಂದಿದ್ದು ,ಪಿರ್ಯಾದಿದಾರರು ಆತನಿಗೆ ನಾಳೆಯಿಂದ ಕೆಲಸಕ್ಕೆ ಹಾಜರಾಗುತ್ತೆನೆಂದು ತಿಳಿಸಿದಾಗ ಪಿರ್ಯಾದಿದಾರರು ಆತನನ್ನು ಹೋಟೆಲಿಗೆ ಸಂಬಂಧಿಸಿದ ಸಿಟಿಸೆಂಟರ್ ನ ಹಿಂಭಾಗ ಇರುವ ಕ್ಲಾಸಿಕ್ ಹೈಡ್ಸ್ ಅಪಾರ್ಟಮೆಂಟ್ ಬಳಿ ಇರುವ ಸ್ಟಾಫ್ ರೂಮ್ನಲ್ಲಿ ವಿಶ್ರಾಂತಿ ಪಡೆಯುವಂತೆ ತಿಳಿಸಿ ಆತನನ್ನು ಅಲ್ಲಿ ಬಿಟ್ಟು ಬಂದಿರುತ್ತಾರೆ.ದಿನಾಂಕ 01.04.2023 ರಂದು ಬೆಳ್ಳಿಗ್ಗೆ 08.30 ಗಂಟೆಗೆ ಪಿರ್ಯಾದಿದಾರರು ರೂಂಗೆ ಬಂದು ನೋಡಿದಾಗ ಕಮಲೇಶ್ ರಾವ್ ಅಲ್ಲಿ ಇರಲಿಲ್ಲ ಈ ಬಗ್ಗೆ ಅಲ್ಲಿದ್ದ ಇತರ ಕೆಲಸಗಾರರಲ್ಲಿ ವಿಚಾರಿಸಿದಾಗ ಆ ವ್ಯಕ್ತಿಯು ರಾತ್ರಿಯೇ ಇಲ್ಲಿಂದ  ಹೋಗಿರುತ್ತಾರೆ ಎಂದು ತಿಳಿಸಿರುತ್ತಾರೆ. ನಂತರ ಪಿರ್ಯಾದಿದಾರರು ಆತನ  ಫೋನ್ ನಂಬರ್ 6360179230 ನೇದಕ್ಕೆ  ಕರೆ ಮಾಡಿದಾಗ ಸ್ವಿಚ್ ಆಫ್ ಎಂದು ಬರುತ್ತಿದ್ದು, ಆತನ ಹೆಂಡತಿ ಮತ್ತು  ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿದಾಗ ಆತನು ಊರಿಗೆ ಕೂಡ ಬಂದಿರುವುದಿಲ್ಲವೆಂದು ತಿಳಿಸಿರುತ್ತಾರೆ,ಆದ್ದರಿಂದ ಆತನನ್ನು ಹುಡುಕುವಂತೆ ಪಿರ್ಯಾದಿದಾರರು ಇತರ ಕೆಲಸಗಾರರಿಗೆ ತಿಳಿಸಿ ಹುಡುಕಿಸಲಾಗಿ ಈವರೆಗೂ ಆತನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಈತನನ್ನು ಈ ದಿನ ದಿನಾಂಕ 16.04.2023 ರವರೆಗೂ ಹುಡುಕಾಡಿದ್ದಲ್ಲಿ ಪತ್ತೆಯಾಗದೇ ಇದ್ದು ಈ ದಿನ ಠಾಣೆಗೆ ಬಂದು  ತಡವಾಗಿ ದೂರನ್ನು ನೀಡುತ್ತಿದ್ದು, ಕಾಣೆಯಾದ ಕಮಲೇಶ್ ರಾವ್ ಎಂಬಾತನನ್ನು ಪತ್ತೆ ಹಚ್ಚಿಕೊಡಬೇಕೆಂಬಿತ್ಯಾದಿ ಸಾರಾಂಶವಾಗಿದೆ.

ಕಾಣೆಯಾದ  ಕಮಲೇಶ್ ರಾವ್ ರವರ ಚಹರೆ ವಿವರಗಳು             

ಎಣ್ಣೆ ಕಪ್ಪು ಮೈಬಣ್ಣ ,ದುಂಡು ಮುಖ ,ಸಫೂರ ಶರೀರ ,ಎತ್ತರ 4.5 ಇಂಚು ,ಕಪ್ಪು ಕೂದಲು ಹೊಂದಿದ್ದು ತೆಳು ಗಡ್ಡ, ಮತ್ತು ಮೀಸೆ ಇರುತ್ತದೆ.ಈತನು ರೂಮಿನಿಂದ ಹೊರಹೋಗುವ ಸಮಯ ನೀಲಿ ಕಲರ್ ಉದ್ದ ತೋಳಿನ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.ಇವರು ಬಿಹಾರಿ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.

Bajpe PS

ಪಿರ್ಯಾದಿ Taranatha Shetty ಸಂಬಂದಿಕರಾದ  ಸುರೇಂದ್ರ ಶೆಟ್ಟಿ ರವರು  ದಿನಾಂಕ 15.04.2023 ರಂದು ಮಧ್ಯಾಹ್ನ ಸಮಯ 3.00 ಗಂಟೆಗೆ ಕೆಂಜಾರು ಗ್ರಾಮದ ಪರ್ಕೋಡಿ ಕಡಂಬಿ ಸ್ಥಾನ ಎಂಬಲ್ಲಿ KA19HG1859 ನೇ ಬೈಕಿನಲ್ಲಿ ಸವಾರನಾಗಿ  ಸರೇಂದ್ರ ಶೆಟ್ಟಿರವರು ಮತ್ತು ಸಹಸವಾರರಾಗಿ ಮಗಳಾದ ರಕ್ಷಾ ಶೆಟ್ಟಿ(15 ವರ್ಷ) ರವರ ಜೊತೆ  ಪರ್ಕೋಡಿ ಕಡೆಯಿಂದ ಜೋಕಟ್ಟೆ ಕಡೆಗೆ    ಹೋಗುತ್ತಿರುವಾಗ KA19B5951 ನೇ ಟೆಂಪೋ ಚಾಲಕನು ತನ್ನ ಟೆಂಪೋವನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ ಸುರೇಂದ್ರ ಶೆಟ್ಟಿ ರವರು ಚಲಾಯಿಸುತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಾದ ಸುರೇಂದ್ರ ಶೆಟ್ಟಿರವರಿಗೆ ಕೈಕಾಲುಗಳಿಗೆ ಮತ್ತು ಮುಖಕ್ಕೆ ಹಾಗೂ ತಲೆಗೆ ರಕ್ತಗಾಯವಾಗಿದ್ದು ಸಹಸವಾರರಾದ ರಕ್ಷಾಳ ಬಲಕಿವಿಗೆ ರಕ್ತಗಾಯವಾಗಿದ್ದು ಗಾಯಾಳುಗಳನ್ನು ಎಜೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Kavoor PS     

ಪಿರ್ಯಾದಿ TRAPTHI ಗಂಡನಾದ ಜೀತೇಂದ್ರ, (44  ವರ್ಷ) ರವರು ನೀರುಮಾರ್ಗದ ಅವೀನ್ ಅಮೀನ್ ರವರ ಕಾಂಟ್ರಾಕ್ಟರ್ ನಲ್ಲಿ ಸುಮಾರು 6 ತಿಂಗಳಿಂದ ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಎಂದಿನಂತೆ ದೇರೆಬೈಲ್ ಕೊಂಚಾಡಿಯ ಲ್ಯಾಂಡ್ ಲಿಂಕ್ಸ್ ಪ್ಯಾರಾಡೈಸ್ ಅಪಾರ್ಟಮೆಂಟ್ ನ ಹಳೆ ಪೈಬರ್ ಶೀಟ್ ಬದಲಿ ಮಾಡುವುದು ಮತ್ತು ಕಬ್ಬಿನ ಶೀಟ್ ಗಳಿಗೆ ಸ್ಕ್ರೂ ಗಳನ್ನು ಅಳವಡಿಸುವ ಬಗ್ಗೆ, ಅವೀನ್ ಅಮೀನ್ ರ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಪಿರ್ಯಾದಿದಾರರ ಗಂಡ ದಿನಾಂಕ 15-04-2023 ರಂದು ಬೆಳಿಗ್ಗೆ   08-00 ಗಂಟೆಗೆ  ದೇರೆಬೈಲ್ ಕೊಂಚಾಡಿಯ ಲ್ಯಾಂಡ್ ಲಿಂಕ್ಸ್ ಪ್ಯಾರಾಡೈಸ್ ಅಪಾರ್ಟಮೆಂಟ್ ಕೆಲಸಕ್ಕೆ ಹೋಗಿದ್ದು, ನಂತರ ಮಧ್ಯಾಹ್ನ ಸಮಯ ಸುಮಾರು 12-00ರ ವೇಳೆಗೆ ಪಿರ್ಯಾದಿದಾರರ ತಂಗಿ ಪೋನ್ ಮಾಡಿ ಜೀತೇಂದ್ರ ರವರು ಕೆಲಸ ಮಾಡುತ್ತಿರುವ ಪ್ಲಾಟಿನಿಂದ ಕೆಳಗೆ ಬಿದ್ದವರನ್ನು ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾದ ಬಗ್ಗೆ ತಿಳಿಸಿದಂತೆ ಪಿರ್ಯಾದಿದಾರರು  ಕೂಡಲೇ ಎ.ಜೆ. ಆಸ್ಪತ್ರೆಗೆ ಹೋಗಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇರುವ ತನ್ನ ಗಂಡನ ಆರೋಗ್ಯದ ಬಗ್ಗೆ ವೈದ್ಯರಲ್ಲಿ ವಿಚಾರಿಸಿದಾಗ ಅವರು ತಲೆಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದ್ದು, ಅಪರೇಷನ್ ಮಾಡಿದರೂ ಪ್ರಯೋಜನವಿಲ್ಲ ಹಾಗೂ ಮಾಡಲೇ ಬೇಕೆಂದರೇ ತುಂಬಾ ಹಣ ಖರ್ಚಾಗುತ್ತದೆ ಎಂದು ತಿಳಿಸಿದ್ದರಿಂದ ಪಿರ್ಯಾದಿದಾರರಿಗೆ ಅಷ್ಟು ಹಣ ಖರ್ಚು ಮಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ತನ್ನ ಗಂಡನನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈಧ್ಯರು ಜಿತೇಂದ್ರ (44) ಮೃತ ಪಟ್ಟಿರುವುದಾಗಿ ತಿಳಿಸಿದ್ದು, ಸದ್ರಿ ಘಟನೆಗೆ ನೀರುಮಾರ್ಗದ ಕಾಂಟ್ರಾಕ್ಟರ್ ಆದ ಅವೀನ್ ಅಮೀನ್ ಎಂಬುವರು ಪಿರ್ಯಾದಿದಾರರ ಗಂಡನನ್ನು ಕೆಲಸಕ್ಕೆ ಕರೆಸಿಕೊಂಡು ಕೆಲಸ ಮಾಡಿಸುವ ಸಮಯದಲ್ಲಿ ಸರಿಯಾದ ಮುಂಜಾಗ್ರತಾ ಕ್ರಮ ವಹಿಸದೇ ನಿರ್ಲಕ್ಷ್ಯತನದಿಂದ ಕೆಲಸ ಮಾಡಿಸುತ್ತಿದ್ದರಿಂದ ಈ ಘಟನೆ ನಡೆದಿದ್ದು, ಈ ಅವಘಡಕ್ಕೆ ಅವೀನ್ ಅಮೀನ್ ಪ್ರಮುಖ ಕಾರಣವಾಗಿರುತ್ತಾರೆ. ಆದುದರಿಂದ ಸದ್ರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ .

Mangalore North PS

 ಪ್ರಕರಣದ ಪಿರ್ಯಾದಿ Sri. Kishan Hegde Kolkebail ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯರಾಗಿದ್ದು, ಸದ್ರಿ ಸಂಘವು ಮಂಗಳೂರಿನ ಎಸ್ಸಿಡಿಸಿಸಿ ಬ್ಯಾಂಕ್ನ ಸಹವರ್ತಿತ ಸಂಘವಾಗಿರುತ್ತದೆ. ಆರೋಪಿ 1 Sri M N Rajendra Kumar ರವರು ಮಂಗಳೂರಿನ ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷರಾಗಿದ್ದು ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಆಡಳಿತ ಟ್ರಸ್ಟಿಯಾಗಿರುತ್ತಾರೆ. ಆರೋಪಿ 6 Sri  Ravindra B ರವರು ದಿನಾಂಕ 01-06-2018 ರಿಂದ ಇಲ್ಲಿಯವರೆಗೆ ಮತ್ತು ಆರೋಪಿ 7ನೇ Sri  Sathish S ರವರು 01-12-2016 ರಿಂದ 31-5-2018 ರವರೆಗೆ ಎಸ್ಸಿಡಿಸಿಸಿ ಬ್ಯಾಂಕ್ನ ಕಾರ್ಯನಿರ್ವಹಣಾಧಿಕಾರಿಯಾಗಿರುತ್ತಾರೆ.   ಆರೋಪಿ 01 ನೇಯವರು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಎಂಬ ಹೆಸರಿನ ಟ್ರಸ್ಟ್ ಅನ್ನು ನಡೆಸುತ್ತಿದ್ದು, ಮತ್ತು ಆರೋಪಿ ನಂ. 2, Sri  Bhaskar Kotian, 3, Sri Monappa Shetty 4 Sri Sunil Kumar ಮತ್ತು 5 Sri  Vadhiraja Shetty ರವರು ಮೇಲಿನ ಟ್ರಸ್ಟ್ನ ಟ್ರಸ್ಟಿಗಳಾಗಿದ್ದಾರೆ.  ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ನ ಉದ್ಯೋಗಿಗಳ ಮಾಸಿಕ ವೇತನವನ್ನು ಎಸ್ಸಿಡಿಸಿಸಿ ಬ್ಯಾಂಕ್ ಮುಖೇನ ಕಾನೂನುಬಾಹಿರ ರೀತಿಯಲ್ಲಿ ಮತ್ತು ನಿಭಂದಕರು ಸಹಕಾರ ಸಂಘಗಳ ರಿಜಿಸ್ಟ್ರಾರ್, ಬೆಂಗಳೂರು ಮತ್ತು ನಬಾರ್ಡ್ ಅವರ ಅನುಮತಿಯಿಲ್ಲದೆ ವೇತನ ಪಾವತಿಸಲಾಗಿದೆ. ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಕಾಯಂ ನೌಕರರನ್ನು ಹೊಂದಿದೆ. ತನ್ನ ವೈಯಕ್ತಿಕ ಲಾಭಕ್ಕಾಗಿ, ಆರೋಪಿ 6 ನೇಯವರು  ತನ್ನ ಅಧಿಕೃತ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮಂಗಳೂರಿನ ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನ ನೌಕರರಿಗೆ ಅಕ್ರಮವಾಗಿ ಸಂಬಳ ನೀಡಿದ್ದಾರೆ. ಸದರಿ ಕೃತ್ಯದಲ್ಲಿ ಆರೋಪಿಗಳಿಂದ ಹಣ ದುರ್ಬಳಕೆಯಾಗಿದೆ. 01-04-2017 ರಿಂದ 31-03-2018 ರವರೆಗೆ ಪ್ರತಿ ತಿಂಗಳು ರೂ. 14,55,000/- ಎಸ್ಸಿಡಿಸಿಸಿ ಬ್ಯಾಂಕ್ನಿಂದ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ಗೆ ವರ್ಗಾವಣೆಯಾಗಿರುತ್ತದೆ. 01-04-2018 ರಿಂದ 31-03-2019 ರವರೆಗೆ ಪ್ರತಿ ತಿಂಗಳು ರೂ. 16,75,000/- ಎಸ್ಸಿಡಿಸಿಸಿ ಬ್ಯಾಂಕ್ನಿಂದ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ಗೆ ವರ್ಗಾವಣೆಯಾಗಿರುತ್ತದೆ. 01-04-2019 ರಿಂದ 31-01-2020 ರವರೆಗೆ ಪ್ರತಿ ತಿಂಗಳು ರೂ. 16,75,000/- ಎಸ್ಸಿಡಿಸಿಸಿ ಬ್ಯಾಂಕ್ನಿಂದ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ಗೆ ವರ್ಗಾವಣೆಯಾಗಿರುತ್ತದೆ. 01-01-2020 ರಿಂದ ಇಂದಿನವರೆಗೆ ಪ್ರತಿ ತಿಂಗಳು ರೂ. 19,00,000/- ಅನ್ನು ಎಸ್ಸಿಡಿಸಿಸಿ ಬ್ಯಾಂಕ್ನಿಂದ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ಗೆ ವರ್ಗಾವಣೆಯಾಗಿರುತ್ತದೆ. ರೂ. 1,52,00,000/- ಎಸ್ಸಿಡಿಸಿಸಿ ಬ್ಯಾಂಕ್ನಿಂದ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ಗೆ ವರ್ಗಾವಣೆಯಾಗಿರುತ್ತದೆ. ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ನ ನೌಕರರ ವೇತನಕ್ಕಾಗಿ ವಾರ್ಷಿಕ ರೂ. ಎಸ್ಸಿಡಿಸಿಸಿ ಬ್ಯಾಂಕ್ ಮಂಗಳೂರಿನಿಂದ ಚಾರಿಟೇಬಲ್ ಟ್ರಸ್ಟ್ಗೆ 2 ಕೋಟಿ ವರ್ಗಾವಣೆಯಾಗಿರುತ್ತದೆ.2016 ರಲ್ಲಿ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ನಿಂದ ಯಾವುದೇ ಭದ್ರತೆಯನ್ನು ಪಡೆಯದೆ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್ NARARD ನಿಂದ ರೂ. 43 ಕೋಟಿ ಹಣವನ್ನು ಆರೋಪಿ 01 ರಿಂದ 05 ನೇ ರವರು ಟ್ರಸ್ಟಿಯಾಗಿರುವ ಖಾಸಗಿ ಸಂಸ್ಥೆಗೆ  ಹಣ ವರ್ಗಾವಣೆಯಾಗಿರುತ್ತದೆ. ಸದ್ರಿ ಕೃತ್ಯಕ್ಕೆ ವೈಯಕ್ತಕ ಹಿತಾಸಕ್ತಿಗಾಗಿ ಆರೋಪಿ 06 ಮತ್ತು 07 ನೇ ರವರು, ಆರೋಪಿ 01 ಮತ್ತು 05 ನೇ ರವರೊಂದಿಗೆ ಕೈಜೋಡಿಸಿ ಅಪರಾಧಿಕ ವಂಚನೆ, ನಂಬಿಕೆ ದ್ರೋಹ, ನಕಲಿ ದಾಖಲೆ ಸೃಷ್ಟಿ ಮಾಡಿ ಎಸ್ಸಿಡಿಸಿಸಿ ಬ್ಯಾಂಕ್ ಹಾಗೂ ಅದರ ಗ್ರಾಹಕರಿಗೆ ವಂಚನೆ ಮಾಡಲಾಗಿರುತ್ತದೆ ಎಂಬಿತ್ಯಾದಿ.

Mangalore South PS

ದಿನಾಂಕ:15-04-2023 ರಂದು ಬೆಳಿಗ್ಗೆ 11-00 ಗಂಟೆಗೆ ಪ್ರಕರಣದ ಪಿರ್ಯಾದಿದಾರರಾದ ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸ್ ಉಪ ನಿರೀಕ್ಷಕರಾದ ರಾಜೇಂದ್ರ ಬಿ ರವರಿಗೆ,   ಮಂಗಳೂರು ಪಾಂಡೇಶ್ವರದ ಪೈ ಸೇಲ್ಸ್  ಹತ್ತಿರ ತಾಜ್ ಟವರ್  ಬಳಿ  ಬಿ ಅಮರ್ ಸುವರ್ಣ ಎಂಬಾತನು  ಸಾರ್ವಜನಿಕರಿಂದ  ಹಣ ಪಡೆದು  ಮೊಬೈಲ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಪ್ ಮುಖಾಂತರ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವನ್ನು ಆಡುತ್ತಿರುವುದಾಗಿ  ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಗಳೊಂದಿಗೆ ಖಚಿತ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿ, ಬಿ ಅಮರ್ ಸುವರ್ಣ ಪ್ರಾಯ; 42 ವರ್ಷ, ವಾಸ: ಪ್ಲಾಟ್ ನಂಬರ್: 202, ತಾಜ್ ಟವರ್, ದೂಮಪ್ಪ ಕಂಪೌಂಡು, ನಿಯರ್ ಪೈ ಸೇಲ್ಸ್ ಪಾಂಡೇಶ್ವರ  ಮಂಗಳೂರು ಎಂಬಾತನು ಮೊಬೈಲ್ ನಲ್ಲಿ Star Exchange ಬೆಟ್ಟಿಂಗ್ ಆಪ್ ಉಪಯೋಗಿಸಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಸಿ ಸಾರ್ವಜನಿಕರಿಂದ ಹಣ ಪಡೆದು ಜೂಜಾಟ ನೀಡುತ್ತಿದ್ದವನನ್ನು,  ಬೆಳಿಗ್ಗೆ  11-30 ಗಂಟೆಗೆ ವಶಕ್ಕೆ ಪಡೆದು ದಸ್ತಗಿರಿ ಮಾಡಿ, ಆರೋಪಿತನು ಅಕ್ರಮ ಜೂಜಾಟವಾದ ಕ್ರಿಕೆಟ್ ಬೆಟ್ಟಿಂಗ್ ಗಾಗಿ ಬಳಸಿದ 2 ಮೊಬೈಲ್ ಪೋನ್ ನ್ನು ಮತ್ತು ನಗದು ಹಣ ರೂ: 6,000/- ನ್ನು ಸ್ವಾಧೀನ ಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Surathkal PS

ದಿನಾಂಕ 15-04-2023 ರಂದು ಪಿರ್ಯಾದಿ Danappa ತಮ್ಮನಾದ ರವಿ (21) ಬೆಳಿಗ್ಗೆ 07:30 ಗಂಟೆಗೆ ಮನೆಯಿಂದ ಅಡ್ಯಾರ್ ಸಹ್ಯಾದ್ರಿ ಕಾಲೇಜಿಗೆ ಹೋದವರು ರಾತ್ರಿ 8:00 ಗಂಟೆಯಾದರು ಮನೆಗೆ ವಾಪಸ್ಸು ಬಾರದೇ ಇರುವುದನ್ನು ಕಂಡು ಪಿರ್ಯಾದಿದಾರರು ಆತನ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಪಿರ್ಯಾದಿದಾರರು ರವಿಯ ಸ್ನೇಹಿತರಾದ ನಮಿತ್ ಶೆಟ್ಟಿ ಹಾಗೂ ಅಭಿಷೇಕ್ ರವರಿಗೆ ಪೋನ್ ಕರೆ ಮಾಡಿ ವಿಚಾರಿಸಿದ್ದು ರವಿಯು ಈ ದಿನ ಕಾಲೇಜಿಗೆ ಹೋಗಿರುವುದಿಲ್ಲ ಎಂದು ತಿಳಿದು ಬಂದಿರುತ್ತದೆ, ಆತನನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.

 

    

 

    

 

 

 

 

 

 

 

ಇತ್ತೀಚಿನ ನವೀಕರಣ​ : 21-08-2023 12:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080