ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic North Police Station                                 

ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿ Colin DSouza ಇವರು  ದಿನಾಂಕ 17-04-2024 ರಂದು ತನ್ನ ಬಾಬ್ತು ಫೋರ್ಡ್ ಕಾರು ನಂಬ್ರ KA-03-MJ-1752 ರಲ್ಲಿ ಮಂಗಳೂರುನಿಂದ ಎಂ.ಆರ್.ಪಿ.ಎಲ್. ಕಾರ್ಗೋ ಗೇಟ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ. ಮದ್ಯಾಹ್ನ ಸಮಯ ಸುಮಾರು 14:00 ಗಂಟೆಗೆ ಸುರತ್ಕಲ್-ಎಂ.ಆರ್.ಪಿ.ಎಲ್. ರಸ್ತೆಯ ಕಾರ್ಗೋ ಗೇಟ್ ಬಳಿ ಕಾರಿನ ಬಲ ಬದಿಯ ಇಂಡಿಕೇಟರ್ ಹಾಕಿ ಕಾರನ್ನು ಯು-ಟರ್ನ್ ತೆಗೆದುಕೊಳ್ಳುತ್ತಿರುವಾಗ ಹಿಂದಿನಿಂದ ಆಕ್ಟಿವಾ ಸ್ಕೂಟರ್ ನಂಬ್ರ KA-19-EK-9895 ನೇಯದನ್ನು ಅದರ ಸವಾರ ಎ.ಮೊಹಮ್ಮದ್ ಶಾಕೀರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಡ್ರೈವಿಂಗ್ ಡೋರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ರಸ್ತೆಗೆ ಬಿದ್ದು ಎಡ ಮತ್ತು ಬಲ ಕೈಗೆ, ಎಡ ಕಾಲಿನ ಮೊಣಗಂಟಿಗೆ ಮತ್ತು ಪಾದಕ್ಕೆ ರಕ್ತ ಗಾಯವಾಗಿದ್ದು ಅಲ್ಲದೇ ಎಡ ಕೈ ಮಣಿಗಂಟಿಗೆ ಮೂಳೆ ಮುರಿತದ ಗಾಯವಾಗಿದ್ದು, ಗಾಯಾಳುವನ್ನು ಪಿರ್ಯಾದಿದಾರರು ಸುರತ್ಕಲ್ ಮುಸ್ಕಿತ್ ಮತ್ತು ತಾರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆ ಬಗ್ಗೆ ಸುರತ್ಕಲ್ ಅಥರ್ವಾ  ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Mangalore North PS

ಈ ಪ್ರಕರಣದ ಸಾರಾಂಶವೇನೆಂದರೇ ಪ್ರಕರಣದ ಪಿರ್ಯಾದಿ Y S GURURAJ ಇವರು ದಿನಾಂಕ 17.04.2024 ರಂದು ನಡೆಯುವ ಮುಖ್ಯಪ್ರಾಣ ದೇವಸ್ಥಾನದ ವಾರ್ಷಿಕ ರಥೋತ್ಸವದ ಸಲುವಾಗಿ ಬ್ರಹ್ಮರಥವನ್ನು ಸ್ವಚ್ಛಗೊಳಿಸುವ ಮತ್ತು ಸಿಂಗರಿಸುವ ಸಲುವಾಗಿ ದಿನಾಂಕ 14.04.2024 ರಂದು  ಶೆಡ್ಡಿನಲ್ಲಿದ್ದ ಮರದ ಬ್ರಹ್ಮರಥವನ್ನು ದೇವಸ್ಥಾನದ ಮುಂಬಾಗ ಸಾರ್ವಜನಿಕ ರಸ್ತೆಯ  ತೀರಾ ಎಡಬದಿಯಲ್ಲಿ ನಿಲ್ಲಿಸಲಾಗಿದ್ದು ಸದ್ರಿ ರಥಕ್ಕೆ ದಿನಾಂಕ 17.04.2024 ರಂದು ಮುಂಜಾನೆ 2.53 ಗಂಟೆಯಿಂದ 2.59 ಗಂಟೆಯ ಮದ್ಯ ಅವಧಿಯಲ್ಲಿ ಕೆಎ 19 ಬಿ 2906 ನೇದರ ಟಿಪ್ಪರ್ ಲಾರಿ  ಚಾಲಕ ಅತಿವೇಗ ಹಾಗೂ ಅಜಾಗೃತಿಯಿಂದ  ಲಾರಿ ಚಲಾಯಿಸಿ ಮರದ ರಥಕ್ಕೆ ಡಿಕ್ಕಿ ನಡೆಸಿ ರಥದ ಕೆಳಗಿನ ದಂಡೆಮರ , ರಥದ ಏಣಿಯನ್ನು ಜಖಂ ಗೊಳಿಸಿ ಸುಮಾರು 3 ಲಕ್ಷ ರೂ ನಷ್ಟ ಉಂಟುಮಾಡಿರುತ್ತಾರೆ ಮತ್ತು ಟಿಪ್ಪರ್ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿ ಸಾರಾಂಶ

ಇತ್ತೀಚಿನ ನವೀಕರಣ​ : 20-04-2024 09:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080