ಅಭಿಪ್ರಾಯ / ಸಲಹೆಗಳು

Crime Reported in Mulki PS

ಪಿರ್ಯಾದಿ Ahammad Naasir ಹೆಂಡತಿ ಫಾತಿಮಾ ಸಪ್ನಾಜ್ ಳು ಆರೋಪಿ ಇರ್ಪಾನ್ ನೊಂದಿಗೆ ಹೋದ ಬಗ್ಗೆ ವಿಚಾರಿಸಲು ಗೇರುಕಟ್ಟೆಯಲ್ಲಿರುವ ಇರ್ಪಾನ್ ನ ಮನೆಗೆ ಪಿರ್ಯಾದಿದಾರರು ಹೋಗಿದ್ದ ವೇಳೆ ದಿನಾಂಕ 16-05-2023 ರಂದು ರಾತ್ರಿ 08.00 ಗಂಟೆಗೆ ಆರೋಪಿ ಇರ್ಪಾನ್ ನು ಮನೆಯೊಳಗೆ ಕರೆದು “ ಬೇವರ್ಷಿ, ಸೊಳೆ ಮಗನೇ” ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಈ ವೇಳೆಗೆ ಇಮ್ರಾನ್, ಮುನ್ನ ಎಂಬವರು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದು ಇರ್ಪಾನ್ ನ ತಂದೆ ಮುನ್ನ ಎಂಬಾತನು ಕತ್ತಿಯಂತಿರುವ ಸಾಧನದಿಂದ ಪಿರ್ಯಾದಿದಾರರ ತಲೆಯ ಮೇಲ್ಬಾಗಕ್ಕೆ ಬೀಸಿ ಹೊಡೆದು ತಲೆಯ ಮೇಲ್ಬಾಗಕ್ಕೆ ರಕ್ತಗಾಯ ಹಾಗೂ ಎಡಕಿವಿಯ ಮೇಲ್ಬಾಗ ರಕ್ತಗಾಯವಾಗಿದ್ದ ಇರ್ಪಾನ್ ನ ತಾಯಿ Soukath Banu ಒಂದು ಪಾತ್ರೆಯಿಂದ ಪಿರ್ಯಾದಿದಾರರ ಎಡಕಣ್ಣಿನ ಬಳಿ ಗುದ್ದಿದ ಗಾಯವಾಗಿಸಿದ್ದು ಪಿರ್ಯಾದಿದಾರರು ಮುಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ  ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

CEN Crime PS

 ದಿನಾಂಕ 04-05-2023 ರಂದು ಸಂಜೆ 3-32 ಸಮಯಕ್ಕೆ ಟೆಲಿಗ್ರಾಂ App ಮೊಬೈಲ್ ನಂಬ್ರ  ನೇದಕ್ಕೆ Greshma@Greshu8585 ನೇದರದಿಂದ ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಬರುತ್ತದೆ.  ನಂತರ ಸದ್ರಿ ವ್ಯಕ್ತಿಯು ಪಿರ್ಯಾದಿದಾರರಿಗೆ ಟಾಸ್ಕ್ ನೀಡಿ ಮೊದಲು ರೂಪಾಯಿ 1026/- ಪಿರ್ಯಾದಿದಾರ ಎಸ್.ಬಿ.ಐ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿರುತ್ತಾರೆ. ಸದ್ರಿ ವ್ಯಕ್ತಿಯು ಟೆಲಿಗ್ರಾಂ ಆಪ್ ನ ಲಿಂಕ್ ಕಳುಹಿಸಿರುತ್ತಾನೆ. ಅದರಲ್ಲಿ ಪಿರ್ಯಾದಿದಾರರಿಗೆ ಹಣವನ್ನು ಆನ್ ಲೈನ್ ಮೂಲಕ ಹಣ ತೊಡಗಿಸಿ 3 ಟಾಸ್ಕ್ ಮಾಡಲು ತಿಳಿಸಿದ್ದು, ಬಳಿಕ ಪಿರ್ಯಾದಿದಾರರು ವಿವಿಧ ಬ್ಯಾಂಕ್ ಗಳಿಗೆ ಹಂತ ಹಂತವಾಗಿ ದಿನಾಂಕ 09-05-2023 ರಿಂದ 15-05-2023 ರವರೆಗೆ ಆರೋಪಿಯು ಕಳುಹಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ   ರೂಪಾಯಿ 7,65,278/- ವರ್ಗಾಯಿಸಿರುತ್ತಾರೆ. ಆರೋಪಿಯು ನಕಲಿ ಟೆಲಿಗ್ರಾಂ ಲಿಂಕ್ ಗಳನ್ನು ಕಳಿಯಿಸಿ ಪಿರ್ಯಾದಿದಾರರಿಗೆ ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

Traffic North Police Station                                    

ಪಿರ್ಯಾದಿ ಡಾ|| ಸಯ್ಯದ್ ಮರಿಯಾ (23 ವರ್ಷ) ಎಂಬುವರು ದಿನಾಂಕ: 16-05-2023 ರಂದು ತನ್ನ ಗೆಳೆಯರೊಂದಿಗೆ ಕುಂಟಿಕಾನ ದೇರೆಬೈಲಿನಲ್ಲಿರುವ ನವಮಿ ಸೂಪರ್ ಮಾರ್ಕೇಟಿಗೆ ಹೋಗಿದ್ದು ಅಲ್ಲಿಂದ ವಾಪಾಸು ರಸ್ತೆಯ ಇನ್ನೊಂದು ಬದಿಯಲ್ಲಿರುವ Essel Heights ಕಟ್ಟಡದ ಕಡೆಗೆ ಹೋಗುವರೇ ರಾತ್ರಿ ಸಮಯ ಸುಮಾರು 8:15 ಗಂಟೆಗೆ ನಡೆದುಕೊಂಡು ಕುಂಟಿಕಾನ –ದೇರೆಬೈಲು ರಸ್ತೆಯನ್ನು ದಾಟಿ ಡಿವೈಡರ್ ಹತ್ತಿ ದೇರೆಬೈಲು- ಕುಂಟಿಕಾನ ರಸ್ತೆಯನ್ನು ದಾಟುತ್ತಿದ್ದಂತೆ ದೇರೆಬೈಲು ಚರ್ಚ್ ಕಡೆಯಿಂದ KL-60-T-3318 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಆನಂದ ಪಿ ಎಂಬಾತನು ವೇಗವಾಗಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಬೆನ್ನು ಮೂಳೆ, ಸೊಂಟದ ಮೂಳೆ ಬಿರುಕು ಬಿಟ್ಟ ಗಾಯ ಹಾಗೂ ಹೊಟ್ಟೆಗೆ ಗುದ್ದಿದ ರೀತಿಯ ಗಾಯವಾಗಿ ಆಂತರಿಕ ರಕ್ತ ಸ್ರಾವವಾಗಿದ್ದು ಚಿಕಿತ್ಸೆ ಬಗ್ಗೆ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾಧಿ ಸಾರಾಂಶ.

Ullal PS

ದಿನಾಂಕ.16-5-2023 ರಂದು 18-40 ಗಂಟೆಯ ಸಮಯಕ್ಕೆ ಉಳ್ಳಾಲ ಗ್ರಾಮದ ತೊಕ್ಕೊಟು ಓವರ್ಬ್ರಿ ಡ್ಜ್‍ ಬಳಿಯಲ್ಲಿ ಫಿರ್ಯಾದಿದಾರರಾದ ಕಲಂದರ್ ಶಾಫಿ ರವರು ಕೆಎ-19-ಹೆಚ್ಕೆಟ-5400 ನೇ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಹೋಗುವಾಗ ಇವರ ಹಿಂದಿನಿಂದ ಮುಝಾಂಬಿಲ್ನುರ ಸವಾರಿ ಮಾಡುತ್ತಿದ್ದ ಕೆಎ-19-ಹೆಚ್ಎಂಟ-2564 ನೇ ದ್ವಿಚಕ್ರ ವಾಹನದಲ್ಲಿ ನಿಶಾರ್‍ ಎಂಬಾತನನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಬಂದವನು ಫಿರ್ಯಾದಿದಾರರ ವಾಹನಕ್ಕೆ ಅಡ್ಡ ಇಟ್ಟು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ನಿಶಾರ್‍ ನನ್ನು ಫಿರ್ಯಾದಿದಾರರ ವಾಹನದಲ್ಲಿ ಬಲಾತ್ಕಾರವಾಗಿ ಕುಳ್ಳಿರಿಸಿದಾಗ ಫಿರ್ಯಾದಿದಾರರು ಹೆದರಿ ತನ್ನ ವಾಹನವನ್ನು ಸವಾರಿ ಮಾಡಿ ತೊಕ್ಕೊಟು ಜಂಕ್ಷನ್‍ ತಲುಪುವಾಗ ಮುಝಾಂಬಿಲ್‍ ಕೂಡಾ ಅಲ್ಲಿಗೆ ಬಂದು ಅವರಿಬ್ಬರೂ ಫಿರ್ಯಾದಿದಾರರಿಗೆ ಬೈದು ಕೈಯಿಂದ ಹೊಡೆದಾಗ ಅಲ್ಲಿ ಜನ ಸೇರುವುದನ್ನು ಕಂಡು ಮುಝಾಂಬಿಲ್ ಮತ್ತು ನಿಶಾರ್‍ ಅಲ್ಲಿಂದ ಅವರ ವಾಹನದೊಂದಿಗೆ ಹೊರಟು ಹೋಗಿದ್ದು, ನಂತರ ಫಿರ್ಯಾದಿದಾರರು ತನ್ನ ವಾಹನದೊಂದಿಗೆ ಮನೆಯ ಕಡೆಗೆ ಹೋಗುತ್ತಾ 19:30 ಗಂಟೆಯ ಸಮಯಕ್ಕೆ ಮುನ್ನೂರು ಗ್ರಾಮದ ಕುತ್ತಾರು ಜಂಕ್ಷನ್‍ ಬಸ್ಸು ನಿಲುಗಡೆ ಸ್ಥಳಕ್ಕೆ ತಲುಪುವಾಗ ಮುಝಾಂಬಿಲ್ನು್  ಕೆಎ-19-ಹೆಚ್ಎಂಮ-2564  ನೇ ವಾಹನದಲ್ಲಿ ನಿಶಾರ್ನಲನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಬಂದವನು ಫಿರ್ಯಾದಿದಾರರ ವಾಹನಕ್ಕೆ ಆತನ ವಾಹನವನ್ನು ಅಡ್ಡ ಇಟ್ಟು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಫಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನಲ್ಲಿ ಮಾತನಾಡಲು ಇದೆ, ಬೇವಾರ್ಸಿ ರಂಡೇಮಗ, ನಿನಗೆ ಅಹಂಕಾರ ಇದೆ ಎಂದು ಬೈದು ಅವರುಗಳ ವಾಹನವನ್ನು ನಿಲ್ಲಿಸಿ ಅದರಿಂದ ಇಳಿದು ಬಂದವರು ಮುಝಾಂಬಿಲ್ನುಸ ಆತನ ಕೈಯಿಂದ ಫಿರ್ಯಾದಿದಾರರ ಕುತ್ತಿಗೆಯನ್ನು ಬಲಾತ್ಕಾರವಾಗಿ ಒತ್ತಿ ಹಿಡಿದು ನೋವುಂಟು ಮಾಡಿದಲ್ಲದೆ, ಎದೆಯ ಎಡಭಾಗಕ್ಕೆ ಕೈಯಿಂದ ಗೀರಿ ಗಾಯ ಉಂಟು ಮಾಡಿದ್ದು, ನಿಶಾರ್ನುವ ಕೈಯಿಂದ ಫಿರ್ಯಾದಿದಾರರಿಗೆ ಹೊಡೆದು ತೊಂದರೆ ಮಾಡಿ ಬಳಿಕ ಅವರಿಬ್ಬರೂ ಸೇರಿ   ಫಿರ್ಯಾದಿದಾರರನ್ನು ಉದ್ದೇಶಿಸಿ ರಂಡೇ ಮಗ, ಈಗ ನೀನು ಬಚಾವು ಆಗಿದ್ದೀಯಾ, ಇನ್ನೊಂದು ದಿನ ನಿನ್ನನ್ನು ಹೀಗೇ ಕುತ್ತಿಗೆ ಹಿಸುಕಿ ಕೊಲೆ ಮಾಡದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಆರೋಪಿಗಳಿಂದ ಮುಂದಕ್ಕೆ ಫಿರ್ಯಾದಿದಾರರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಅವರುಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ದಿನಾಂಕ.17-5-2023 ರಂದು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಎಂಬಿತ್ಯಾದಿ.

Mangalore East PS

ಪಿರ್ಯಾದಿ Mohamad Kalik ಮಗಳು ಕುಮಾರಿ ಆಸ್ಮಾ ಬಾನೊ ಪ್ರಾಯ ಸುಮಾರು 18 ವರ್ಷ 03 ತಿಂಗಳು ಎಂಬುವವರು ಮಂಗಳೂರು ನಗರದ  ಖಾಸಗೀ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ವ್ಯಾಸಂಗ ಮಾಡಿಕೊಂಡಿದ್ದು ದಿನಾಂಕ 15-05-2023 ರಂದು ಬೆಳಿಗ್ಗೆ 09:15 ಕ್ಕೆ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತೇನೆಂದು ಹೋದವರು ಮನೆಗೆ ಮರಳಿ ಬಾರದೆ ಕಾಣೆಯಾಗಿದ್ದು ಈ ಬಗ್ಗೆ ಕಾಣೆಯಾದ ಹುಡುಗಿಯ ತಂದೆ ಮಹಮ್ಮದ್ ಖಾಲಿಕ್ ಎಂಬುವವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

CEN Crime PS

ದಿನಾಂಕ-08-05-2023 ರಂದು ಪಿರ್ಯಾದಿದಾರರಿಗೆ ಮೊಬೈಲ್ ನಂಬ್ರ-8860256449 ನೇದ್ದರಿಂದ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು,  ಹೆಚ್.ಡಿ.ಎಫ್.ಸಿ ಲೈಫ್ ಇನ್ಶೂರೆನ್ಸ್ ನವರು ಎಂದು ಪರಿಚಯಿಸಿಕೊಂಡು ಪಿರ್ಯಾದಿದಾರರು ಹೊಂದಿದ್ದ ಹೆಚ್.ಡಿ.ಎಫ್.ಸಿ ಲೈಫ್ ಇನ್ಶೂರೆನ್ಸ್ ಪಾಲಿಸಿಯ ವಾರ್ಷಿಕ ಪ್ರಿಮಿಯಮ್ ರಿನಿವಲ್ ಮಾಡಲು ಬಾಕಿ ಇದೆ ಎಂದು ತಿಳಿಸಿರುತ್ತಾರೆ ಮತ್ತು ಈ ಕೂಡಲೇ ವಾರ್ಷಿಕ ಪ್ರಿಮಿಯಮ್ ರಿನಿವಲ್ ಮಾಡಿದಲ್ಲಿ ಏಜೆಂಟ್ ಕಮಿಷನ್ ಕಟ್ಟುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿ, ರೂ-75,990/- ಮಾತ್ರ ಪಾವತಿ ಮಾಡಲು ತಿಳಿಸಿರುತ್ತಾರೆ. ಇದನ್ನು ನಂಬಿದ ಪಿರ್ಯಾದಿದಾರರು ಹೆಚ್.ಡಿ.ಎಫ್.ಸಿ ಲೈಫ್ ಇನ್ಶೂರೆನ್ಸ್ ಹೊಂದಿದ್ದು   ವಾರ್ಷಿಕ ಪ್ರಿಮಿಯಮ್ ಅನ್ನು  ಈ ಹಿಂದೆ ಏಜೆಂಟ್ ಕಮಿಷನ್  ಜೊತೆಗೆ ಪಾವತಿ ಮಾಡಿರುವುದರಿಂದ,  ಮೊಬೈಲ್ ನಂಬ್ರ-8860256449 ನೇದ್ದರಿಂದ ಕರೆ ಮಾಡಿದ ವ್ಯಕ್ತಿಯನ್ನು ನಂಬಿ ಅವರು ತಿಳಿಸಿದ ಅಕೌಂಟ್ ನಂಬ್ರಕ್ಕೆ- ರೂ-75,990/- ಗೂಗಲ್ ಪೇ ಮುಖಾಂತರ ಹಣವನ್ನು ಪಾವತಿ ಮಾಡಿರುತ್ತಾರೆ.ಆದರೆ ಪಿರ್ಯಾದಿದಾರರು ಈ ವರೆಗೆ ಪ್ರಿಮಿಯಮ್ ಪಾವತಿಸಿದ ಯಾವುಧೇ ರಶೀದಿ ದೊರಕದ ಕಾರಣ ತಾವು ಮೋಸ ಹೋಗಿರುವುದು ತಿಳಿದು ಬಂದಿದ್ದು, ಹೀಗೆ  ಮೊಬೈಲ್ ನಂಬ್ರ-8860256449 ನೇದ್ದರಿಂದ ಕರೆ ಮಾಡಿದ  ವ್ಯಕ್ತಿ  ಹೆಚ್.ಡಿ.ಎಫ್.ಸಿ ಲೈಫ್ ಇನ್ಶೂರೆನ್ಸ್ ನವರು ಎಂದು ನಂಬಿಸಿ ಪಿರ್ಯಾದಿದಾರರಿಂದ ರೂ-75,990/- ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

Traffic North Police Station              

ಪಿರ್ಯಾದಿ ಗುರುಪ್ರಸಾದ್ (26) ರವರು ನಿನ್ನೆ ದಿನ ದಿನಾಂಕ: 15-05-2023 ರಂದು ಅವರ ಅಕ್ಕನ ಬಾಬ್ತು KA-19-HL-1823 ನಂಬ್ರದ ಸ್ಕೂಟರಿನಲ್ಲಿ ತನ್ನ ಸ್ನೇಹಿತ ನಾಗರಾಜ್ ಎಂಬುವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಪೊಳಲಿಯಿಂದ ತನ್ನ ಮನೆ ಕಡೆಗೆ ಬರುತ್ತಾ ಸಂಜೆ ಸಮಯ ಸುಮಾರು 5:00 ಗಂಟೆಗೆ ಮೇರಿ ಹಿಲ್ ಅಬಕಾರಿ ಭವನದ ಬಳಿ ತಲುಪಿದಾಗ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಕಡೆಯಿಂದ DUSTER ಕಂಪೆನಿಯ ಕಾರೊಂದನ್ನು ಅದರ ಚಾಲಕನು ವೇಗವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿ ಕಾರನ್ನು ನಿಲ್ಲಿಸದೇ ಹೊರಟು ಹೋಗಿದ್ದು ಈ ಅಪಘಾತದಿಂದ ಪಿರ್ಯಾದಿದಾರರು ಮತ್ತು ಸಹಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸಹ ಸವಾರನಾದ ನಾಗರಾಜ್ ರವರಿಗೆ ಬಲ ಮುಂಗೈ ಯಿಂದ ಮೊಣಕೈ ವರೆಗೆ ಚರ್ಮ ಸುಲಿದ ರೀತಿಯ ಗಾಯ, ಬಲಕೋಲು ಕಾಲಿನ ಬಳಿ ಮೂಳೆ ಮುರಿತದ ಗಾಯ ಹಾಗೂ ಎಡಕಾಲಿನ ಪಾದದ ಬಳಿ ತರಚಿದ ರೀತಿಯ ಗಾಯವಾಗಿದ್ದು ಈ ಬಗ್ಗೆ ನಾಗರಾಜ್ ರವರು ಮಂಗಳೂರು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕತ್ಸೆ ಪಡೆದಿರುತ್ತಾರೆ ಹಾಗೂ ಪಿರ್ಯಾದಿದಾರರಿಗೆ ಎಡ ಮಂಡಿಯ ಬಳಿ ಚರ್ಮ ತರಚಿದ ರೀತಿಯ ಗಾಯವಾಗಿದ್ದು ಈ ಬಗ್ಗೆ ಯಾವುದೇ ಚಿಕಿತ್ಸೆ ಪಡೆದಿರುವುದಿಲ್ಲ ಎಂಬಿತ್ಯಾದಿ ಸಾರಾಂಶ.

Ullal PS

ದಿನಾಂಕ. 1-5-2023 ರಂದು ಸಾಯಂಕಾಲ ಸುಮಾರು 5-00 ಗಂಟೆಯ ಸಮಯಕ್ಕೆ ಮಂಗಳೂರು ಧಕ್ಕೆಯಿಂದ ಪಿರ್ಯಾದಿದಾರರ  ಬೋಟಿನಲ್ಲಿ ಕೆಲಸಗಾರರಾದ 1)ಹನೀಫ್ ಬೆಂಗ್ರೆ (ಬೋಟಿನ ಚಾಲಕ) 2)ಮಲ್ಲಪಿಳ್ಳಿ ಕೃಷ್ಣ, ಆಂಧ್ರಪ್ರದೇಶ ವಾಸಿ 3)ಕಮ್ಮೇಶ್ವರ್, ಸಾಯಿ- ಒರಿಶಾ ವಾಸಿ 4)ಸರುದ ರಾಮರಾವ್-ಆಂಧ್ರಪ್ರದೇಶ ವಾಸಿ 5)ಕರಣ್ ಜಾರ್ಖಾಂಡ್ ವಾಸಿ ಇವರೆಲ್ಲರೂ ಜೊತೆ ಸೇರಿಕೊಂಡು ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಯ ಬಗ್ಗೆ ಹೊರಟಿದ್ದು, ದಿನಾಂಕ, 2-5-2023 ರಂದು ರಾತ್ರಿ 2-15 ಗಂಟೆಯ ಸಮಯಕ್ಕೆ ಪಿರ್ಯಾದಿ Mohammed Saleem Ullala  ಬೋಟು ಸೋಮೇಶ್ವರ ಗ್ರಾಮದ ಸೋಮೇಶ್ವರ ಅರಬ್ಬಿ ಸಮುದ್ರದಿಂದ ಸುಮಾರು 28 ಮಾರ್ ದೂರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಮಯದಲ್ಲಿ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಾಂಡ್‌ ವಾಸಿ ಕರಣ್ (45) ಎಂಬವರು ಆಕಸ್ಮಿಕವಾಗಿ ಅರಬ್ಬಿ ಸಮುದ್ರದ ನೀರಿಗೆ ಬಿದ್ದ ಕಾರಣ  ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಇತರರು ಅರಬ್ಬಿ ಸಮುದ್ರದ ನೀರಿಗೆ ಬಿದ್ದ ಕರಣ್‌ನನ್ನು ಹುಡುಕಾಡಿದರೂ ಆತನು ಸಿಕ್ಕಿರುವುದಿಲ್ಲ. ಆ ಬಳಿಕ ದಿನಾಂಕ. 3-5-2023 ರಂದು ಸಮುದ್ರ ದಡಕ್ಕೆ ಬಂದ  ಬೋಟಿನವರು ನಂತರ ಇತರ ಮೀನುಗಾರಿಕಾ ಬೋಟಿನವರ ಜೊತೆ ಸೇರಿಕೊಂಡು ಸಮುದ್ರದ ನೀರಿಗೆ ಬಿದ್ದ ಕರಣ್‌ನನ್ನು ದಿನಾಂಕ, 16-5-2023 ರ ತನಕ ಹುಡುಕಾಡಿದರು ಕರಣ್ ಪತ್ತೆಯಾಗಿರುವುದಿಲ್ಲ, ಅರಬಿ ಸಮುದ್ರದ ನೀರಿನಲ್ಲಿ  ಆಕಸ್ಮಿಕವಾಗಿ ಬಿದ್ದು  ಕಾಣೆಯಾಗಿರುವ ಕರಣ್ ನನ್ನು ಪತ್ತೆ ಹಚ್ಚಿ ಕೊಡುವಂತೆ ಪಿರ್ಯಾದಿದಾರರು ದಿನಾಂಕ 16-05-2023 ರಂದು ನೀಡಿದ ದೂರಿನ ಮೇರೆಗೆ ದಾಖಲಾದ  ಪ್ರಕರಣದ ಸಾರಾಂಶ.

 

 

 

 

ಇತ್ತೀಚಿನ ನವೀಕರಣ​ : 21-08-2023 12:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080