ಅಭಿಪ್ರಾಯ / ಸಲಹೆಗಳು

Crime Reports in:Traffic North Police Station

ದಿನಾಂಕ 16-06-2023 ರಂದು ಪಿರ್ಯಾದಿ Abdul Razaq ತಮ್ಮ ಅಬ್ದುಲ್ ಹನೀಫ್ (20 ವರ್ಷ ) ಎಂಬವರು KA-19—HJ-3772 ನಂಬ್ರದ ಮೊಟಾರ್ ಸೈಕಲಿನಲ್ಲಿ ಕೆಲಸದ ಬಗ್ಗೆ ಕಲ್ಲಾಪುವಿಗೆ ಹೋಗುತ್ತಿದ್ದ ಸಮಯ ರಾತ್ರಿ 11:30 ಗಂಟೆಗೆ NH-66 ಗೋವಿಂದ ದಾಸ್ ಜಂಕ್ಷನ್ ಬಳಿ ತಲುಪಿದಾಗ KA-19-MJ-7126 ನಂಬ್ರದ ಕಾರನ್ನು ಅದರ ಚಾಲಕನಾದ ಕೃಷ್ಣ ಎಂಬವರು ಗೋವಿಂದಾಸ ಜಂಕ್ಷನಿನಲ್ಲಿರುವ ತೆರೆದ ಡಿವೈಡರಿನಲ್ಲಿ ಯಾವುದೇ ಸೂಚನೆಯನ್ನು ನೀಡಿದೇ ಕಾರನ್ನು ಒಮ್ಮೆಲೇ ಬಲ ಬದಿಗೆ U ಟರ್ನ್ ತಿರುಗಿಸಿದ ಪರಿಣಾಮ ಪಿರ್ಯಾದಿದಾರರ ತಮ್ಮ ಅಬ್ದುಲ್ ಹನೀಫ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಕಾರಿನ ಹಿಂದಿನ ಎಡಬದಿಯ ಡೋರ್ ಡಿಕ್ಕಿಯಾಗಿ ಅಬ್ದುಲ್ ಹನೀಫ್ ರವರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅಬ್ದುಲ್ ಹನೀಫ್ ರವರ ಎಡ ಕೈ ಕೋಲು ಕೈಗೆ ಮೂಳೆ ಮುರಿತದ ಗಾಯ ಮತ್ತು ಬಲ ಕೈ ಭುಜಕ್ಕೆ ಅಲ್ಲಲ್ಲಿ ತರಚಿದ ರೀತಿಯ ಗಾಯವಾಗಿದ್ದು ಅಲ್ಲದೇ ಕೆಳಗಿನ ಹಲ್ಲು ಮುರಿತಗೊಂಡಿದ್ದು ಗಾಯಾಳು ಅಬ್ದುಲ್ ಹನೀಫ್ ರವರು  ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Mangalore South PS

ದಿನಾಂಕ 16-06-2023 ರಂದು 23-15 ಗಂಟೆಯಿಂದ 23-20 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಸರ್ವಿಸ್ ಬಸ್ ನಿಲ್ದಾಣ ಬಳಿಯಲ್ಲಿರುವ ರಿಕ್ಷಾ ಪಾರ್ಕ್ ಬಳಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿ PRADEEP KUMAR S ಆರ್. ಸಿ. ಮಾಲಕತ್ವದ KA 19 EM 0014 ನೊಂದಣಿ ಸಂಖ್ಯೆಯ ME4JF502GET178791 ಚೆಸಿಸ್ ನಂಬ್ರದ, JF50ET1178890 ಇಂಜೀನ್ ನಂಬ್ರದ 2014 ನೇ ಮೋಡಲ್ ನ ಕಪ್ಪು ಬಣ್ಣದ ಅಂದಾಜು ರೂಪಾಯಿ 15,000/- ಬೆಲೆ ಬಾಳುವ ಹೊಂಡಾ ಆಕ್ಚಿವಾ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿದಾರರು ಕಳವಾದ ದ್ಚಿಚಕ್ರ ವಾಹನವನ್ನು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಕಳವಾದ ದ್ಚಿಚಕ್ರ ವಾಹನದ ಸೀಟ್ ಕೆಳಭಾಗ ಬಾಕ್ಸ್ ನಲ್ಲಿ ವಾಹನಕ್ಕೆ ಸಂಬಂಧಪಟ್ಟ ಆರ್. ಸಿ. ಮತ್ತು ಇನ್ಸೂರೆನ್ಸ್ ನ ಮೂಲ ಪ್ರತಿಗಳು ಕೂಡ ಇತ್ತು  ಎಂಬಿತ್ಯಾದಿಯಾಗಿರುತ್ತದೆ.

 

Traffic North Police Station

ಪಿರ್ಯಾದಿ Rohan Denzil Aiman ತಾನು ಕೆಲಸ ಮಾಡುತ್ತಿದ್ದ ಸೆಕೆಂಡ್ ಹ್ಯಾಂಡ್ ಕಾರುಗಳ ವ್ಯಾಲ್ಯುಯೇಶನ್ ಕೆಲಸದ ನಿಮಿತ್ತ ದಿನಾಂಕ 16:06;2023 ರಂದು ಮಾಲೇಮಾರ್ ಗೆ ಹೋಗಿದ್ದವರು ಕೆಲಸ ಮುಗಿಸಿ ಅಲ್ಲಿಂದ ವಾಪಾಸ್ಸು ತನ್ನ ಹೆಂಡತಿ ಶ್ರೀಮತಿ ಧೀಕ್ಷಾ ಪುತ್ರನ್ ರವರ ಬಾಬ್ತು KA-19-HE-8147 ನಂಬ್ರದ ಸ್ಕೂಟರನ್ನು ಸವಾರಿ ಮಾಡುತ್ತಾ ಹೊರಟು ಮಾಲೇಮಾರ್ ಕೊಟ್ಟಾರ ರಸ್ತೆಯಲ್ಲಿ ಬಂದು ರಾ.ಹೆ.66 ರಲ್ಲಿ ಎಡಕ್ಕೆ ತಿರುಗಿ K.P.T ಕಡೆಗೆ ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 12:00 ಗಂಟೆಗೆ D-MART ನಿಂದ ಸ್ವಲ್ಪ ಹಿಂದೆ “MARQ LAND” ಶೋ ರೂಂ ಎದುರು ತಲುಪುತ್ತಿದ್ದಂತೆ ಪಿರ್ಯಾದಿದಾರರ ಸ್ಕೂಟರಿನ ಹಿಂದಿನಿಂದ ನಂಬ್ರ ತಿಳಿಯದ ವಾಹನವೊಂದನ್ನು ಅದರ ಚಾಲಕನು ವೇಗವಾಗಿ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಡಾಮಾರು ರಸ್ತೆಯಲ್ಲಿ ಬಿದ್ದ ವೇಳೆ ಡಿಕ್ಕಿ ಪಡಿಸಿದ ವಾಹನದ ಹಿಂದಿನ ಚಕ್ರವು ಪಿರ್ಯಾದಿದಾರರ ಬಲ ಭುಜಕ್ಕೆ ಬಡಿದಿದ್ದು, ಅಪಘಾತ ಪಡಿಸಿದ ವಾಹನದ ಚಾಲಕನು ವಾಹನವನ್ನು ನಿಲ್ಲಿಸದೇ ವೇಗವಾಗಿ K.P.T ಕಡೆಗೆ ಚಲಾಯಿಸಿಕೊಂಡು ಹೋಗಿರುತ್ತಾನೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರ ಬಲ ಭುಜದ ಮೂಳೆ ಮುರಿತದ ಗಾಯ ಹಾಗೂ ಬಲಕೆನ್ನೆಗೆ,ಬಲಕಾಲಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ AJ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ ಸಾರಾಂಶ.

Ullal PS     

ಪಿರ್ಯಾದಿ  Sharanappa Bhandari  ರವರಿಗೆ ದಿನಾಂಕ 16/06/2023 ರಂದು ಬೆಳಿಗ್ಗೆ 11-00 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕು ದೇರಳಕಟ್ಟೆ ಕೋಟೆಕಾರು ಗ್ರಾಮದ ಕೆ ಎಸ್ ಹೆಗ್ಡೆ ಕ್ಷೇಮ ಕಾಲೇಜಿನ ಪುರುಷರ ವಸತಿ ಗೃಹದ ಹತ್ತಿರ ವೈದ್ಯನಾಥ ನಗರದ ಬಗಂಬಿಲ ಹೌಸ್ ಎಂಬಲ್ಲಿ ವಾಸವಿರುವ ಅಕ್ಷತ್ ಕುಮಾರ್ ನು ತನ್ನ ಮನೆಯ ಮನೆಯ ಬಳಿ ಇರುವ ಶೆಡ್ ನಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ MDMA ನೇದನ್ನು ವಶದಲ್ಲಿರಿಸಿಕೊಂಡು ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಬಾತ್ಮಿದಾರರಿಂದ ಖಚಿತ ಮಾಹಿತಿ ತಿಳಿದುಬಂದಂತೆ, ಮಾಹಿತಿಯ ಸ್ಥಳಕ್ಕೆ ತಲುಪಿ ದಾಳಿ ಮಾಡಿ, ಅಕ್ಷತ್ ಕುಮಾರ್ ಪ್ರಾಯ 34 ವರ್ಷ ವಾಸ: ನಂ: 2-318, ವೈದ್ಯನಾಥ ನಗರ, ಬಗಂಬಿಲ ಹೌಸ್, ಕೋಟೇಕಾರು ಗ್ರಾಮ, ದೇರಳ ಕಟ್ಟೆ ಪೋಸ್ಟ್, ಬೆಳ್ಮ  ಉಳ್ಳಾಲ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತನ್ನಲ್ಲಿರುವ ಪ್ಲಾಸ್ಟಿಕ್ ಲಕೋಟೆಯಲ್ಲಿರುವ ಪ್ಲಾಸ್ಟಿಕ್ ಡಬ್ಬದಲ್ಲಿ MDMA ಮಾದಕ ವಸ್ತು ಇರುವುದಾಗಿ ತಿಳಿಸಿರುತ್ತಾನೆ ಇದನ್ನು ತಾನು ತೌಡುಗೊಳಿ ಕ್ರಾಸ್ ನ ನಾಜಿಮ್ @ ನಿಜ್ಜು ಎಂಬಾತನಿಂದ ಮಹಮ್ಮದ್ ರಿಫಾಸ್  @ ರಿಫಾಸ್ ನಿಪ್ಪು ಎಂಬಾತನ ಮುಖಾಂತರ ಖರೀದಿ ಮಾಡಿರುವುದಾಗಿ ಹಾಗೂ ಅದನ್ನು ಯುವಕರಿಗೆ ವಿಧ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಲು ಇಟ್ಟಿರುವುದಾಗಿ ತಿಳಿಸಿದ್ದು, ಆರೋಪಿ ದಸ್ತಗಿರಿ  ಮಾಡಿ ಈ ಕೆಳಗಿನ ಸ್ವತ್ತುಗಳನ್ನು ವಶಕ್ಕೆ ಪಡೆದಿರುವುದಾಗಿದೆ. 1) ಕಪ್ಪು  ಬಣ್ಣದ VIVO ಕಂಪೆನಿಯ VIVO Y27- ಮೊಡಲ್ ನ ಮೊಬೈಲ್-1 , 2) ಆರೋಪಿ ಹಾಜರು ಪಡಿಸಿದ ನಗದು ರೂ. 20880/-, 3) ಸುಮಾರು 25ಗ್ರಾಂ ತೂಕದ ಬಿಳಿ ಬಣ್ಣದ ಹರಳುನಂತಿರುವ MDMA ಮಾದಕ ವಸ್ತು ಇರುವ ಪ್ಲಾಸ್ಟಿಕ್ ಪ್ಯಾಕೆಟ್ -1, 4) ಸುಮಾರು 27ಗ್ರಾಂ ತೂಕದ ಬಿಳಿ ಬಣ್ಣದ ಹರಳುನಂತಿರುವ MDMA ಮಾದಕ ವಸ್ತು ಇರುವ ಪ್ಲಾಸ್ಟಿಕ್ ಪ್ಯಾಕೆಟ್ -1, 5) ಸುಮಾರು 20 ಗ್ರಾಂ ತೂಕದ ಬಿಳಿ ಬಣ್ಣದ ಹರಳುನಂತಿರುವ MDMA ಮಾದಕ ವಸ್ತು ಇರುವ ಪ್ಲಾಸ್ಟಿಕ್ ಪ್ಯಾಕೆಟ್ -1, 6) ಸಿಲ್ವರ್ ಬಣ್ಣದ ಸಣ್ಣ ಡಿಜಿಟಲ್ ತೂಕ ಮಾಪನ -1  ಇದು ಸುಸ್ಥಿತಿಯಲ್ಲಿ ಇರುತ್ತದೆ. ಮೌಲ್ಯ: ರೂ: 500/-, 7) ಸಣ್ಣ ಸಣ್ಣ ವಿವಿಧ ಗಾತ್ರ ಖಾಲಿ ಪ್ಲಾಸ್ಟಿಕ್ ಲಕೋಟೆಗಳು – 56, 8) ನೀಲಿ ಬಣ್ಣದ  ಪ್ಲಾಸ್ಟಿಕ್ ಡಬ್ಬ  - 1, 9) ಬಿಳಿ ಬಣ್ಣದ ಪ್ಲಾಸ್ಟಿಕ್ ಕವರ್ -1, 10) ಕೆಂಪು ಬಣ್ಣದ Svojas ಕಂಪನಿಯ PFS PLASTIC FILM SEALER ಮಿಶಿನ್ -1  ಇದರ ಮೌಲ್ಯ ರೂ:1000/- ಆಗಬಹುದು ಸದ್ರಿ ಈ ಎಲ್ಲಾ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿ ಮತ್ತು ಅಂದಾಜು 3,60,000/- ರೂಪಾಯಿ (ಮೂರು ಲಕ್ಷದ ಅರವತ್ತು ಸಾವಿರ ) ಮೌಲ್ಯದ 72 ಗ್ರಾಂ ತೂಕದ MDMA ಮಾದಕ ವಸ್ತು ಹಾಗೂ ಇತರ ಸೊತ್ತುಗಳೊಂದಿಗೆ ಸೂಕ್ತ ಕ್ರಮಕ್ಕಾಗಿ ನೀಡಿದ ಪಿರ್ಯಾದಿಯಂತೆ ದಾಖಲಾದ  ಪ್ರಕರಣದ ಸಾರಾಂಶ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 01:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080