ಅಭಿಪ್ರಾಯ / ಸಲಹೆಗಳು

 

 CrimeRreport in Mangalore Rural PS   

ಪಿರ್ಯಾದಿ Keshava ದಾರರು ಎಲ್.ಜಿ ಕಂಪೆನಿಯ ಸರ್ವಿಸ್ ಸೆಂಟರ್ ನಲ್ಲಿ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದು, ಕಂಪೆನಿಗೆ ಕಸ್ಟಮರ್ ಸುಚಿತ್ರಾ ಕೆತ್ತಿಕಲ್ಲು, ಅಮೃತೇಶ್ವರ ದೇವಸ್ಥಾನ ಹತ್ತಿರ ಎಂಬವರು ಕಂಪ್ಲೇಟ್ ರಿಜಿಸ್ಟರ್ ಮಾಡಿದಂತೆ ಪಿರ್ಯಾದಿದಾರರು ಅವರ ಮನಗೆ ಹೋಗಿ ನೋಡಿದಾಗ ಸದ್ರಿಯವರ ವಾಶಿಂಗ್ ಮೆಶಿನ್ ಕೆಟ್ಟು ಹೋಗಿದ್ದು, ವಯರ್ ಮತ್ತು ಪೈಪ್ ನ್ನು ಇಲಿ ತುಂಡು ಮಾಡಿರುತ್ತದೆ.  ಈ ಬಗ್ಗೆ ಕಂಪೆನಿಯಿಂದಲೇ ರಿಪೇರಿ ಮಾಡುವಂತೆ ಮನೆಯವರು ತಿಳಿಸಿದಂತೆ ದಿನಾಂಕ: 16-07-2023 ರಂದು ಮದ್ಯಾಹ್ನ 12.45 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಕಂಪೆನಿಯಿಂದ  ಬಂದ ಸಾಮಾಗ್ರಿಗಳನ್ನು ತೆಗೆದುಕೊಂಡು ಅವರ ಮನೆಗೆ ಹೋದಾಗ  ಒಂದು ಪಾರ್ಟ್ ವಾಶಿಂಗ್ ಮೆಶಿನ್ ಗೆ ಸರಿ ಹೊಂದದೇ ಇದ್ದುದರಿಂದ ಮರು ದಿನ ತಂದು ಹಾಕುವುದಾಗಿ ತಿಳಿಸಿದಾಗ ಸುಚಿತ್ರಾ ರವರ ಮನೆಯಲ್ಲಿದ್ದ ಆರೋಪಿತನು ಕೋಪಗೊಂಡು ಪಿರ್ಯಾದಿದಾರರಿಗೆ ಬೇವರ್ಸಿ, ರಂಡೇ ಮಗ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಎಡ ಕೆನ್ನೆಗೆ ಗುದ್ದಿ, ಕುತ್ತಿಗೆಯನ್ನು ಒತ್ತಿ ಹಿಡಿದು ಕುತ್ತಿಗೆಗೆ ಗಾಯಗೊಳಿಸಿದ್ದು, ಎಂಬಿತ್ಯಾದಿಯಾಗಿರುತ್ತದೆ.

Traffic South Police Station

ದಿನಾಂಕ 17-07-2023 ರಂದು ಬೆಳಿಗ್ಗೆ 11.45 ಗಂಟೆಗೆ  ಪಿರ್ಯಾದಿದಾರರಾದ ಹುಲುಗಮ್ಮ ನವರಿಗೆ  ಪರಿಚಯದ ಮಂಜುನಾಥ ರವರು ಮೋಬೈಲ್ ಕರೆ ಮಾಡಿ ಪಿರ್ಯಾದಿದಾರರ ಗಂಡ  ಬಸಪ್ಪ ರವರು ತೊಕೊಟ್ಟು ಕಡೆಯಿಂದ ಪಂಪ್ ವೆಲೆ ಕಡೆಗೆ KA-19-HJ-1328 ನೇ ನಂಬ್ರದ ಸ್ಕೂಟರ್ ನಲ್ಲಿ  ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು  ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 11.00 ಗಂಟೆಗೆ ಜಪ್ಪಿನಮೊಗರು ಬಳಿ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಪರಿಣಾಮ ತಲೆಗೆ  ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಅವರನ್ನು ಇಂಡಿಯನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ  ದಾಖಲಿಸಿದ ಬಗ್ಗೆ ತಿಳಿಸಿರುತ್ತಾರೆ ಕೂಡಲೇ ಪಿರ್ಯಾದಿದಾರರು ಇಂಡಿಯನ್ ಆಸ್ಪತ್ರೆಗೆ ಹೋಗಿ ನೊಡಿದಾಗ ಪಿರ್ಯಾದಿದಾರರ ಗಂಡ ಬಸಪ್ಪ ರವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಈ ಘಟನೆಗೆ ಪಿರ್ಯಾದಿದಾರರ ಗಂಡ ಬಸಪ್ಪ ರವರು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿದ ಕಾರಣವಾಗಿರುತ್ತದೆ.ಆದ್ದರಿಂದ ಸದ್ರಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾಧಿ.

Surathkal PS     

ದಿನಾಂಕ 16-07-2023 ರಂದು ಸಂಜೆ 4:30 ಗಂಟೆಗೆ ಪಿರ್ಯಾದಿದಾರರಾದ ರೋಜರ್ ಡಿ ಕೋಸ್ಟಾ ರವರು ಅವರ ಪರಿಚಯಾದ ಜಾರ್ಖಂಡ್ ವಾಸಿ ಶಾಹಿಲ್ ಎಂಬವರೊಂದಿಗೆ ಮಳೆ ಬಂದ ಕಾರಣ ಜನತಾ ಕಾಲೋನಿಗೆ ಹೋಗುವ ರಸ್ತೆಯ ಬದಿಯಲ್ಲಿರುವ ಪಾಳು ಬಿದ್ದ ಮನೆಯ ಬಳಿ ನಿಂತುಕೊಂಡಿದ್ದ ಸಮಯ ಪಿರ್ಯಾದಿದಾರರ ಪರಿಚಯದ ಪ್ರಶಾಂತ್ ಭಂಡಾರಿ ಎಂಬಾತನು ಯುವಕನೊಬ್ಬನೊಂದಿಗೆ ದ್ವಿಚಕ್ರ ವಾಹನವೊಂದರಲ್ಲಿ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ನೀನು ಗಾಂಜಾ ಸೇವನೆ ಮಾಡುತ್ತೀಯಾ ಎಂದು ವಿಚಾರಿಸಿದಾಗ ಪಿರ್ಯಾದಿದಾರರು ತನ್ನನ್ನು ಚಕ್ ಮಾಡಲು ತಿಳಿಸಿದಂತೆ ಪ್ರಶಾಂತ್ ಭಂಡಾರಿಯು ಮೈಮೇಲೆ ಕೈಹಾಕಿ ಚಕ್ ಮಾಡಿದ್ದು ಗಾಂಜಾ ಇಲ್ಲದ್ದಿದ್ದನ್ನು ಕಂಡು ನಿನ್ನನ್ನು ಬಿಡುವುದಿಲ್ಲ ಕೊಂದು ಹಾಕುತ್ತೇನೆ ಎಂದು ಹೇಳುತ್ತಾ ಮರದ ಸೊಂಟೆಯಿಂದ ತಲೆಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದಾಗ ಪಿರ್ಯಾದಿದಾರರು ಕೈಯನ್ನು ಅಡ್ಡ ಹಿಡಿದಾಗ ಅವರ ಬಲಗೈ, ಎಡಗೈ, ಬೆನ್ನಿಗೆ ಹಾಗೂ ಎಡಗಾಲಿನ ಮೊಣಗಂಟಿಗೆ ಗಾಯವಾಗಿದ್ದು ಪ್ರಶಾಂತ್ ಭಂಡಾರಿ ಜೊತೆಯಲ್ಲಿ ಬಂದಿದ್ದ ಯುವಕನು ಪಿರ್ಯಾದಿದಾರರನ್ನು ಉದ್ದೇಶಿಸಿ ಬೇವರ್ಸಿ ರಂಡೆ ಮಗ ಆತನನ್ನು ಬಿಡಬೇಡ ಎಂದು ಅವಾಚ್ಯ ಶಬ್ಧಗಳಿಂದ ಬೈದು ಬೆದರಿಕೆ ಹಾಕಿದ ಸಮಯ ಪಿರ್ಯಾದಿದಾರರನ್ನು ಬಿಡಿಸಲು ಬಂದ ಶಾಹಿಲ್ ನ ಕೈಗಳಿಗೆ ಪ್ರಶಾಂತ್ ಭಂಡಾರಿಯು ಮರದ ಸೊಂಟೆಯಿಂದ ಹಲ್ಲೆ ಮಾಡಿದ್ದಾಗಿರುತ್ತದೆ. ಬಳಿಕ ಸ್ವಲ್ಪ ಸಮಯದಲ್ಲಿ ಇನ್ನೊಂದು ದ್ವಿಚಕ್ರ ವಾಹನದಲ್ಲಿ ಯುವಕನೊಬ್ಬನೊಂದಿಗೆ ಬಂದ ಪಿರ್ಯಾದಿದಾರರ ಪರಿಚಯದ ಹಾಗೂ ಪ್ರಶಾಂತ್ ಭಂಡಾರಿಯ ಸ್ನೇಹಿತನಾದ ರಾಜು ಎಂಬವನಿಗೆ ಪ್ರಶಾಂತ್ ಭಂಡಾರಿಯು ಗಾಂಜಾ ಸೇವನೆ ಬಗ್ಗೆ ತಿಳಿಸಿದಾಗ ಆತನು ಸೂಳೆಮಗ ಸತ್ಯ ಹೇಳು ಎಂದು ಅವಾಚ್ಯ ಶಬ್ಧಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿದಾರರ ತಲೆಗೆ ಹಲ್ಲೆ ಮಾಡಲು ಯತ್ನಿಸಿದ್ದು ಆ ಸಮಯ ಪಿರ್ಯಾದಿದಾರರು ಬಗ್ಗಿದ್ದು ಬೆನ್ನಿಗೆ ಬಲವಾಗಿ ಹಲ್ಲೆ ಮಾಡಿದ್ದು ರಾಜುನ ಜೊತೆಯಲ್ಲಿ ಬಂದಿದ್ದ ಯುವಕನು ಪಿರ್ಯಾದಿದಾರರಿಗೆ ಅವಾಚ್ಯ ಶಬ್ಧಗಳಿಂದ ಬೈದು ಕೈಯಿಂದ ಹಲ್ಲೆ ಮಾಡಿರುವುದಾಗಿದೆ ಮುಂದು ಕಾಣಸಿಕ್ಕಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾಗಿರುತ್ತದೆ ಮೇಲ್ಕಾಣಿಸಿದ ಆರೋಪಿ ಪ್ರಶಾಂತ್ ಭಂಡಾರಿಯು ಈ ಹಿಂದೆ ಕೂಡ ವಿನಾಕಾರಣ ಹಲ್ಲೆ ನಡೆಸಿದ್ದು ಅದೇ ರೀತಿಯಾಗಿ ಈ ದಿನ ಕೂಡ ರಾಜು ಹಾಗೂ ಮತ್ತಿಬ್ಬರು ಯುವಕರೊಂದಿಗೆ ಪಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಮರದ ಸೊಂಟೆಯಿಂದ ಹಲ್ಲೆ ಮಾಡಿ ಕೊಲೆಗೆ ಪ್ರಯತ್ನಿಸಿದಲ್ಲದೆ ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾಗಿರುತ್ತದೆ ಗಾಯಾಳು ಪಿರ್ಯಾದಿದಾರರು ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಎಂಬಿತ್ಯಾದಿಯಾಗಿರುತ್ತದೆ.

    

Kankanady Town PS               

ಪಿರ್ಯಾದಿದಾರರಾದ ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಿವಕುಮಾರ್ ಕೆ ರವರು ಸಿಬ್ಬಂಧಿಗಳ ಜೊತೆ ದಿನಾಂಕ:17-07-2023 ರಂದು ಸಮಯ ಬೆಳಗ್ಗೆ 10-45 ಗಂಟೆಗೆ  ಶಕ್ತಿನಗರ ಕಾನಡ್ಕದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಆರೋಪಿ ಜಗದೀಶ ಪ್ರಾಯ:31 ವರ್ಷ ವಾಸ: 8-108, ಕಾನಡ್ಕ ಶಕ್ತಿನಗರ ಮಂಗಳೂರು ಎಂಬಾತನು ಗಾಂಜಾ ಸೇವನೆ ಮಾಡಿದ ಬಗ್ಗೆ ಸಂಶಯದಲ್ಲಿ 11-00 ಗಂಟೆಗೆ ವಶಕ್ಕೆ ಪಡೆದು ಆರೋಪಿಯು ಗಾಂಜಾ ಸೇವನೆ ಮಾಡಿದ ಬಗ್ಗೆ ಕುಂಟಿಕಾನ ಎ.ಜೆ. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ, ಆರೋಪಿ ಜಗದೀಶನು ಗಾಂಜಾ ಸೇವನೆ ಮಾಡಿರುವುದು ದೃಢ ಪಟ್ಟಿರುವುದರಿಂದ ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿಯಾಗಿರುತ್ತದೆ.

 

Mangalore South PS                

ಪ್ರಕರಣದ ಪಿರ್ಯಾದಿದಾರರಾದ ರವೀಂದ್ರ ಬೆಳೆಯೂರು ರವರು Insolvency and Bankruptcy code 2016 (IBC 2016) ರ ಪ್ರಕಾರ ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯೂನಲ್ (NCLT) ಚೆನ್ನೈ ನ  ದಿನಾಂಕ : 22-06-2023 ರ ಆದೇಶದಂತೆ M/S Reliable Cashew Company Private Limited ನ ಇಂಟರೀಮ್ ರೆಸಲ್ಯೂಷನ್ ಪ್ರೋಫೆಷನಲ್ ಆಗಿ ನೇಮಕಗೊಂಡಿದ್ದು, IBC 2016 ರ ಪ್ರಕಾರ ಈ ಮೇಲಿನ ಆದೇಶ ಬಂದ ದಿನದಿಂದ ಈಗಿರುವ ನಿರ್ದೇಶಕರುಗಳು ಅಧಿಕಾರ ಕಳಕೊಂಡಿರುತ್ತಾರೆ. ಪಿರ್ಯಾದಿದಾರರೇ ಸದ್ರಿ ಕಂಪೆನಿಯ ಎಲ್ಲಾ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಸದ್ರಿ ಕಂಪೆನಿಯು ಮಂಗಳೂರು ನಗರದ ಮಲ್ಲಿಕಟ್ಟ, ಕದ್ರಿ ಕಂಬಳ ರಸ್ತೆಯಲ್ಲಿರುವ “ಮೌರಿಷ್ಕ ಪ್ಯಾಲೇಸ್” ನಲ್ಲಿರುವ ಪ್ಲಾಟ್ ನಂಬರ್  ಮತ್ತು ಪ್ಲಾಟ್ ನಂಬರ್ ಮಾಲೀಕತ್ವವನ್ನು ಹೊಂದಿರುತ್ತದೆ. ಪಿರ್ಯಾದಿದಾರರು ಸದ್ರಿ ಕಂಪೆನಿಯ ಸದ್ರಿ ಪ್ಲಾಟ್ ಗಳ ಮೇಲೆ ಇರುವ ಬ್ಯಾಂಕ್ ಗಳಲ್ಲಿರುವ ಸಾಲಗಳನ್ನು ಪರಿಶೀಲಿಸುವ ಸಮಯ  ಸದ್ರಿ ಪ್ಲಾಟ್ ಗಳನ್ನು ಶ್ರೀ ನೀತ್ ಶರಣ್ ಎಂಬವವರು ತಾವೇ ಕಂಪೆನಿಯ ನೊಂದಾಯಿತ ಡೈರೆಕ್ಟರ್ ಎಂದು ಬಿಂಬಿಸಿಕೊಂಡು ತಮಗೆ ಈ ಪ್ಲಾಟ್ ಗಳ ಮಾರಾಟದ ಬಗ್ಗೆ ಯಾವುದೇ ಹಕ್ಕು ಇರದಿದ್ದರೂ ಕೂಡಾ, ಶ್ರೀ ಶೆರ್ವಿನ್ ಡಿʼಸೋಜಾ, ಶ್ರೀ ಶಂತನು ಮಲ್ನಾಡರ್ ಹಾಗೂ ಶ್ರೀಮತಿ ಸುಕೇತ ಎಂಬವರೊಂದಿಗೆ ಸೇರಿಕೊಂಡು ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು  ಮಾರ್ಚ್ 2022 ರಲ್ಲಿ ಶ್ರೀ ರಾಮದಾಸ್ ಮತ್ತು ಶ್ರೀಮತಿ  ಶ್ರೀಲತಾ ಎಂಬುವವರಿಗೆ ಮಾರಾಟ ಮಾಡಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

 

Mangalore North PS                

ದಿನಾಂಕ 16-07-2023 ರಂದು ಮದ್ಯಾಹ್ನ 2-30 ಗಂಟೆಗೆ ಮಂಗಳೂರು ಉತ್ತರ ಧಕ್ಕೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಒಟ್ಟುಗೂಡಿ ಹಣವನ್ನು ಪಣವಾಗಿಟ್ಟು ಉಲಾಯಿ ಪಿದಾಯಿ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆಂಬ ಮಾಹಿತಿಯನುಸಾರ ಸದ್ರಿ ಸ್ಥಳಕ್ಕೆ ಪಿಎಸ್ಐ ವಿನಾಯಕ ತೋರಗಲ್ ರವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಹಣವನ್ನು ಪಣವಾಗಿರಿಸಿ ಉಲಾಯಿ ಪಿದಾಯಿ ಎಂಬ ಇಸ್ಪೀಟ್  ಜುಗಾರಿ ಆಟವಾಡುತ್ತಿದ್ದ  1)ನವಾಝ್, 2)ಅಬೂಬಕ್ಕರ್ ಸಿದ್ದಿಕ್, 3)ಅಬ್ದುಲ್ ರಜಾಕ್, 4) ರಾಸಿಕ್ ಮೊಹಮ್ಮದ್, 5)ಇಬ್ರಾಹಿಂ ಫೈಸಲ್, 6)ಅಬ್ದುಲ್ ರಹಿಮಾನ್, 7)ರಿಜ್ವಾನ್ ಅಹಮ್ಮದ್ ಇವರನ್ನು ದಸ್ತಗಿರಿ ಮಾಡಿ ಇವರುಗಳಿಂದ ಜುಗಾರಿ ಆಟಕ್ಕೆ ಉಪಯೋಗಿಸಿದ ರೂ. 3,580/- ನಗದು ಹಣ, ಇಸ್ಪೀಟ್ ಎಲೆ ಇತ್ಯಾದಿಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ ಎಂಬಿತ್ಯಾದಿ ಸಾರಾಂಶ.

 

ಇತ್ತೀಚಿನ ನವೀಕರಣ​ : 21-08-2023 02:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080