ಅಭಿಪ್ರಾಯ / ಸಲಹೆಗಳು

Crime Reported in : Mangalore traffi West  ps

ದಿನಾಂಕ 17-08-2022 ರಂದು ಪಿರ್ಯಾದುದಾರರು DEVIPRASAD ಮಂಗಳೂರು ನಗರದ ಹ್ಯಾಮಿಲ್ಟನ್ ವೃತ್ತದ ಬಳಿ ಸಮವಸ್ತ್ರದಲ್ಲಿ ಕರ್ತವ್ಯ ದಲ್ಲಿ ಇರುವ ಸಮಯ ಸುಮಾರು ಬೆಳಿಗ್ಗೆ 10.33 ಗಂಟೆಗೆ  ಹ್ಯಾಮಿಲ್ಟನ್ ವೃತ್ತದ ಕಡೆಯಿಂದ ರೋಜಾರಿಯೋ ವೃತ್ತದ ಕಡೆಗೆ KA-19-HC-1421 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರನು  ಸಹ ಸವಾರನನ್ನು ಕುಳ್ಳಿರಿಸಿಕೊಂಡು ತೀರಾ ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ದ್ವಿ ಚಕ್ರ ವಾಹನದಲ್ಲಿ ಸವಾರ ಹಾಗೂ ಸಹಸವಾರರು ಹೆಲ್ಮೆಟ್ ಧರಿಸದೇ ಚಾಲಾಯಿಸಿಕೊಂಡು ಬರುತ್ತಿದ್ದವರ ವೀಡಿಯೋ ಮತ್ತು ಫೂಟೊವನ್ನು ಸಿಬ್ಬಂದಿಯವರ ಮೊಬೈಲ್ ಫೋನ್ ನಿಂದ ತೆಗೆದಿದ್ದು ಸದ್ರಿ ದ್ವಿ ಚಕ್ರ ಸವಾರನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಎಂಬಿತ್ಯಾದಿ

Crime Reported in : Barke PS

ಪಿರ್ಯಾದಿದಾರರಾದ ನವೀನ್ ಸಾಲ್ಯಾನ್ ಪ್ರಾಯ 53 ವರ್ಷ ಎಂಬವರು ಮೀನುಗಾರಿಕೆ ವೃತ್ತಿಯನ್ನು ಮಾಡಿಕೊಂಡಿದ್ದು ದಿನಾಂಕ: 16-08-2022 ರಂದು ಮೀನುಗಾರಿಕೆ ಕೆಲಸಕ್ಕೆ ತನ್ನ ಅಣ್ಣ ಶಶಿ ಮತ್ತು ಗಂಗಾಧರ ಎಂಬವರೊಂದಿಗೆ ಹೋಗಿ ಮಧ್ಯಾಹ್ನ ಸಮಯ ಸುಮಾರು 12-15 ಗಂಟೆಗೆ ಮನೆಗೆ ಬಂದಿದ್ದು, ಊಟ ಮಾಡಿ ವಿಶ್ರಾಂತಿ ಪಡೆದು ಸಂಜೆ ಸಮಯ ಸುಮಾರು 06-10 ಗಂಟೆಗೆ ಬೋಳೂರಿನ ಜಾರಂದಾಯ ದೇವಸ್ಥಾನದ ಬಳಿ ವಾಸ್ತವ್ಯವಿದ್ದ ಒಬ್ಬರಿಗೆ ಹಣ ಕೊಡಲು ಹೋಗಿ ಹಣ ನೀಡಿ ವಾಪಾಸು ಮನೆಗೆ ಹೋಗುವರೇ ರಸ್ತೆಯಲ್ಲಿ ನಿಂತಿರುವಾಗ ಪಿರ್ಯಾದಿಗೆ ಪರಿಚಯ ಇರುವ ದೇವದಾಸ್ ಬೋಳೂರು ಮತ್ತು ಅವರ ಮಗ ಸಾಯಿ ಕಿರಣ್ ಎಂಬವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಬೇವರ್ಸಿ ರಂಡೇ ಮಗ ಸೂಳೇ ಮಗ ನಿನ್ನನ್ನು ಕೆರ್ಪೆ ಎಂಬಿತ್ಯಾದಿಯಾಗಿ ಬೈದು ದೇವದಾಸ್ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರ ತಲೆಯ ಎಡಭಾಗಕ್ಕೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದಿದ್ದು ಅದೇ ರಾಡ್ ನಿಂದ ಪಿರ್ಯಾದಿದಾರರ ಎಡ ಕಾಲಿನ ತೊಡೆಗೆ ಹೊಡೆದಿದ್ದು ಈ ಸಮಯ ದೇವದಾಸ್ ರವರ  ಮಗ ಸಾಯಿ ಕಿರಣ್ ಎಂಬಾತನು ಪಿರ್ಯಾದಿಯ ಎದೆಗೆ ಹಾಗೂ ತಲೆಗೆ ಕೈಯಿಂದ ಹೊಡೆದು ಬೇವರ್ಸಿ ರಂಡೆ ಮಗನೇ ನಿನ್ನನ್ನು ಇವತ್ತು ಜೀವ ಸಹಿತ ಬಿಡುವುದಿಲ್ಲ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದು, ಈ ವೇಳೆಗೆ ಶರತ್ ಎಂಬಾತನು ಪಿರ್ಯಾದಿದಾರರ ಹಿಂದಿನಿಂದ ಬಂದು ದೇವದಾಸ್ ರವರಿಂದ ರಾಡ್ ತಗೆದು ಹೊಡೆಯಲು ಬಂದಾಗ ಪಿರ್ಯಾದಿದಾರರು ಬೊಬ್ಬೆ ಹಾಕಿದ್ದು ಪಿರ್ಯಾದಿದಾರರ ಬೊಬ್ಬೆ ಕೇಳಿ ಸಾರ್ವಜನಿಕರು ಸೇರುವುದನ್ನು ಕಂಡು ಕೊಲೆಗೆ ಪ್ರಯತ್ನಿಸಿದವರು ಅಲ್ಲಿಂದ ಹೋಗಿರುತ್ತಾರೆ, ಈ ಘಟನೆಗೆ ನಡೆಯುವಾಗ ಸಮಯ ಸಂಜೆ 06-25 ಗಂಟೆಯಾಗಿರುತ್ತದೆ, ಘಟನೆ ಸಮಯ ದಯಾ ಭಾರತಿ ಮತ್ತು ಹರ್ಷಿತ್ ರವರು ಕಣ್ಣಾರೆ ಕಂಡಿದ್ದು ರಕ್ತಗಾಯಗೊಂಡ ಪಿರ್ಯಾದಿದಾರರನ್ನು ಹರ್ಷಿತ್ ರವರು ತನ್ನ ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ವೆನ್ ಲಾಕ್ ಆಸ್ಪತ್ರೆಗೆ ಹಾಜರುಪಡಿಸಿರುತ್ತಾರೆ ಈ ಘಟನೆಗೆ ಈ ಹಿಂದೆ ಬೋಳೂರು ಮೋಗವೀರ ಮಹಾಸಭಾದ ವಿಚಾರದಲ್ಲಿ ಎರಡು ಮೂರು ಬಾರಿ ತಕರಾರು ಆಗಿದ್ದು, ಪಿರ್ಯಾದಿದಾರರನ್ನು ಗ್ರಾಮದಿಂದ ಹಾಗೂ ಸದಸ್ಯತ್ವದಿಂದ ಅಮಾನತ್ತು ಮಾಡಿದ್ದು ಇದೆ ವಿಚಾರದಲ್ಲಿ ತಗಾದೆ ಇರುವುದರಿಂದ ಉದ್ದೇಶ ಪೂರ್ವಕವಾಗಿ ಪಿರ್ಯಾದಿದಾರರಿಗೆ ಕಬ್ಬಿಣದ ರಾಡ್ ನಿಂದ ತಲೆಗೆ ಸೊಂಟಕ್ಕೆ ಹೊಡೆದು, ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ ಕೊಲೆಗೆ ಪ್ರಯತ್ನಿಸಿರುವುದಾಗಿದೆಂಬಿತ್ಯಾದಿ.

Crime Reported in : Barke PS

ದಿನಾಂಕ: 16-08-2022 ರಂದು ಮಂಗಳೂರು ನಗರದ ಶ್ರೀದೇವಿ ಕಾಲೇಜ್ ಬಳಿ ಗಾಂಜಾ ಎಂಬ ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದ ಮಹಮ್ಮದ್ ರಾಡಿನ್ ಪ್ರಾಯ 20 ವರ್ಷ ವಾಸ: ನರಿಪಟ್ಟ, ವಡಕರ, ಕೊಜಿಕಡ್, ಕೇರಳ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಎ.ಜೆ ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದಲ್ಲಿ ಮಾದಕ ವಸ್ತುಗಳ ಸೇವನೆ ಮಾಡಿರುವ ಕುರಿತಾಗಿ ತಪಾಸಣೆ ನಡೆಸಲಾಗಿ ಸದ್ರಿ ಮಹಮ್ಮದ್ ರಾಡಿನ್ ಗಾಂಜಾ ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವ ಬಗ್ಗೆ ವೈಧ್ಯರ ವೈದ್ಯಕೀಯ ವರದಿಯಲ್ಲಿ ದೃಡಪಟ್ಟಿರುವ ಹಿನ್ನೆಲೆಯಲ್ಲಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿಯಾಗಿರುತ್ತದೆ.

Crime Reported in: mangalore Traffic North Police PS

ಪಿರ್ಯಾದಿದಾರರು Vishwanath N ದಿನಾಂಕ: 16-08-2022 ರಂದು ಕೃಷ್ಣಾಪುರ 5 ನೇ ಬ್ಲಾಕ್  ಬಳಿ ಕರ್ತವ್ಯದಲ್ಲಿದ್ದ ಸಮಯ ಸಂಜೆ ಸುಮಾರು 16.25 ಗಂಟೆಗೆ KA-19-EU-0669 ನಂಬ್ರದ YAMAHA FZ  ಮೋಟಾರ್ ಸೈಕಲಿನ ಸವಾರನು ಹೆಲ್ಮೆಟ್ ಧರಿಸದೇ ಅಲ್ಲದೇ ಹಿಂಬದಿಯಲ್ಲಿ ತಲೆಗೆ ಹೆಲ್ಮೆಟ್ ಧರಿಸದ ಇಬ್ಬರು ವ್ಯಕ್ತಿಗಳನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಕೃಷ್ಣಾಪುರ 5 ನೇ ಬ್ಲಾಕ್  ನಿಂದ ಕೃಷ್ಣಾಪುರ 7 ನೇ ಬ್ಲಾಕ್  ಕಡೆಗೆ ಕಾಂಕ್ರೀಟ್ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬರುತ್ತಿದ್ದವರನ್ನು ಕಂಡು ನಿಗದಿತ ಸಮವಸ್ತ್ರದಲ್ಲಿದ್ದ ಫಿರ್ಯಾದಿದಾರರು ಸದ್ರಿ ಮೋಟಾರ್ ಸೈಕಲನ್ನು ನಿಲ್ಲಿಸಲು ಸೂಚನೆ ನೀಡಿದರೂ ಸೂಚನೆಯನ್ನು ಧಿಕ್ಕರಿಸಿ ದ್ವಿಚಕ್ರ ಮೋಟಾರ್ ಸೈಕಲನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಕೃಷ್ಣಾಪುರ 7 ನೇ ಬ್ಲಾಕ್  ಕಡೆಗೆ ಹೋಗಿರುತ್ತಾರೆ ಎಂಬಿತ್ಯಾದಿ.

 

2) ಪಿರ್ಯಾದಿದಾರರು Yogish  ದಿನಾಂಕ: 16-08-2022 ರಂದು ನೈತಂಗಡಿ ಕೃಷ್ಣಾಪುರ ಬಳಿ ಕರ್ತವ್ಯದಲ್ಲಿದ್ದ ಸಮಯ 5.20 ಗಂಟೆಗೆ KA-19-EM-0802 ನಂಬ್ರದ ಮೋಟಾರ್ ಸೈಕಲಿನ ಮೋಟಾರ್ ಸೈಕಲಿನಲ್ಲಿ ಅದರ ಸವಾರನು ಹೆಲ್ಮೆಟ್ ಧರಿಸದೇ ಹಾಗೂ ಹಿಂಬದಿಯಲ್ಲಿ ತಲೆಗೆ ಹೆಲ್ಮೆಟ್ ಧರಿಸದ ಇಬ್ಬರು ವ್ಯಕ್ತಿಗಳನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ನೈತಂಗಡಿ ಕಡೆಯಿಂದ ಕೃಷ್ಣಾಪುರ 5 ನೇ ಬ್ಲಾಕ್ ಕಡೆಗೆ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಪಿರ್ಯಾದಿದಾರರು ನಿಲ್ಲಿಸಲು ಕೈ ಸನ್ನೆ ಮಾಡಿ ಸೂಚನೆ ನೀಡಿದರೂ ಪಿರ್ಯಾದಿದಾರರ ಸೂಚನೆಯನ್ನು ಧಿಕ್ಕರಿಸಿ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲನ್ನು ನಿಲ್ಲಿಸದೇ ಕೃಷ್ಣಾಪುರ 5 ನೇ ಬ್ಲಾಕ್ ಕಡೆಗೆ ಚಲಾಯಿಸಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.

Crime Reported in: Kankanady Town PS

ದಿನಾಂಕ:17-08-2022 ರಂದು ಪಿರ್ಯಾದಿ ಪೊಲೀಸ್ ನಿರೀಕ್ಷರಾದ ಎಸ್ ಹೆಚ್ ಭಜಂತ್ರಿ ರವರು ಪಡೀಲ್ ಬಳಿ ರೌಂಡ್ಸ್ ನಲ್ಲಿದ್ದ ಸಮಯ ಬೆಳಗ್ಗೆ 07.00  ಗಂಟೆಗೆ ಕಣ್ಣೂರು ಕಡೆಯಿಂದ ಪಡೀಲ್ ಕಡೆಗೆ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯಂತೆ 07:05 ಗಂಟೆಗೆ ಪಡೀಲ್ ಓವರ್ ಬ್ರಿಡ್ಜ್ ಬಳಿ ಬಂದಾಗ  KA-23-A-5472  ನೇ ಮಿನಿ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಸಾಗಾಟ ಮಾಡುತ್ತಿರುವ ಲಾರಿಯನ್ನು ಸಿಬ್ಬಂದಿರವರೊಂದಿಗೆ ತಡೆದು ನಿಲ್ಲಿಸಿದಾಗ ಟಿಪ್ಪರ್ ಲಾರಿಯಲ್ಲಿ ಮರಳನ್ನು  ತುಂಬಿಸಿರುವುದು ಕಂಡು ಬಂದಿದ್ದು, ಸದ್ರಿ ಟಿಪ್ಪರ್ ಲಾರಿಯ ಚಾಲಕ ಹಾಗೂ ಮಾಲೀಕನಾದ ಅಫಪುಲ್ಲಾ @ಅಪ್ಪು ಸರಕಾರಕ್ಕೆ ಸೇರಿದ ಸಾರ್ವಜನಿಕ ಖನಿಜ ವಸ್ತುವಾದ ಮರಳನ್ನು ನದಿ ಕಿನಾರೆಯಿಂದ ಯಾವುದೇ ಪರವಾನಿಗೆಯನ್ನೂ ಪಡೆಯದೆ ಸರಕಾರಕ್ಕೆ ರಾಜಧನವನ್ನು ಪಾವತಿಸದೇ ಅಕ್ರಮವಾಗಿ ಲಾರಿಯಲ್ಲಿ ಮರಳು ತುಂಬಿಸಿ ಸಾಗಾಟವನ್ನು ಮಾಡುತ್ತಿರುವುದರಿಂದ ವಶಕ್ಕೆ ಪಡೆದಿರುವುದಾಗಿದೆ, ಸದ್ರಿ  ಟಿಪ್ಪರ್ ಲಾರಿ  ಹಾಗೂ ಮರಳಿನ ಅಂದಾಜು ಮೌಲ್ಯ ರೂಪಾಯಿ 4,07,000/- ಆಗಬಹದು ಎಂಬಿತ್ಯಾದಿ.

Crime Reported in: Mangalore Traffic South PS

ದಿನಾಂಕ 16.08.2022 ರಂದು ಪಿರ್ಯಾದಿದಾರರು SANTHOSH PADIL  ಮದ್ಯಾಹ್ನ 02.45 ಗಂಟೆಗೆ ಗೋರಿಗುಡ್ಡೆ ಬಳಿ ಕರ್ತವ್ಯದಲ್ಲಿರುವಾಗ ಎಕ್ಕೂರು ಕಡೆಯಿಂದ ಗೋರಿಗುಡ್ಡೆ ಕಡೆಗೆ ಸ್ಕೂಟರ್ ನಂಬ್ರ  KA-70-H-9048 ನೇದನ್ನು ಅದರ ಸವಾರ ಇಬ್ಬರೂ ಸಹಸವಾರರನ್ನು ಕುಳ್ಳಿರಿಸಿಕೊಂಡು, ಸವಾರರು ತಲೆಗೆ ಹೆಲ್ಮೆಟ್ ಧರಿಸದೇ, ಸ್ಕೂಟರನ್ನು ತೀರಾ ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದುದ್ದನ್ನು ಕಂಡು ಸದ್ರಿ ಸ್ಕೂಟರನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಹೋಗಿರುತ್ತಾನೆ ಎಂಬಿತ್ಯಾದಿ.

Crime Reported in: Moodabidre PS

 ದಿನಾಂಕ 04.08.2022 ರಂದು ಪಿರ್ಯಾದಿದಾರರ Pooja ತಂದೆ ಪ್ರಮೋದ್ ಎಂಬುವರು ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 07.30 ಗಂಟೆಗೆ ಸೂಪರ್ ಮಾರ್ಕೆಟ್ ಮುಂಭಾಗದಲ್ಲಿ ತಲುಪುತ್ತಿದ್ದಂತೆ ಹಿಂದಿನಿಂದ ಕೆಎ-19-ಹೆಚ್.ಜೆ-1562 ನಂಬ್ರದ ಸ್ಕೂಟರ್ ನ್ನು ಅದರ ಸವಾರನಾದ ರಾಕೇಶ್ ಎಂಬುವರು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಬಲಕಾಲಿನ ಮೊಣಗಂಟಿಗೆ ಮತ್ತು ಪಾದದ ಮೇಲ್ಭಾಗದ ಮಣಿಗಂಟಿಗೆ ಗಂಭೀರ ರೀತಿಯ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಆಳ್ವಾಸ್ ಆಸ್ಪತ್ರೆಯಲ್ಲಿ ದಾಖಲಾಗಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದು,  ಡಿಕ್ಕಿಪಡಿಸಿದ ಸ್ಕೂಟರ್ ಚಾಲಕನು ಆಸ್ಪತ್ರೆಯ ಖರ್ಚುವೆಚ್ಚಗಳನ್ನು ಭರಿಸುವುದಾಗಿ ಹೇಳಿ ಈಗ ನಿರಾಕರಿಸಿರುವುದರಿಂದ ತಡವಾಗಿ ದೂರು ನೀಡಿರುವುದಾಗಿದೆ ಎಂಬಿತ್ಯಾದಿ

Crime Reported in: Ullal PS

ಪಿರ್ಯಾದಿ Sundar Poojary ದಿನಾಂಕ:22-06-2022 ರಂದು ಬೆಳಿಗ್ಗೆ 06-00 ಗಂಟೆಗೆ ತನ್ನ ಸ್ಕೂಟರ್ ನೊಂದಣಿ ನಂಬ್ರ ಕೆಎ 19 ಇ ಎಫ್ 0041 ನೇದರಲ್ಲಿ ಕುತ್ತಾರು, ಸಂತೋಷ್ ನಗರ, 1 ನೇ ಬ್ಲಾಕ್ , ಕಲ್ಲುರ್ಟಿ ದೈವಸ್ಥಾನದ ಬಳಿಗೆ ಬಂದವರು  ರಾತ್ರಿ 8-00 ಗಂಟೆಗೆ ಸ್ಕೂಟರ್ ನ್ನು ಕಲ್ಲುರ್ಟಿ ದೈವಸ್ಥಾನ ಕಂಪೌಂಡ್ ಒಳಗೆ ಪಾರ್ಕಿಂಗ್ ಮಾಡಿದ ನಂತರ ಪಿರ್ಯಾದಿದಾರರು ಚಬ್ಬಿ ಎಂಬರವರ ಆಟೋ ರಿಕ್ಷಾದಲ್ಲಿ ಮನೆಗೆ ತೆರಳಿದ್ದು, ದಿನಾಂಕ:23-06-2022 ರಂದು ಬೆಳಗಿನ ಜಾವ  02-30 ಗಂಟೆಗೆ  ಪಿರ್ಯಾದಿದಾರರ ಸ್ಕೂಟರ್ ಪಾರ್ಕಿಂಗ್ ಮಾಡಿದ ಸ್ಥಳದಲ್ಲಿ ನೋಡಿದಾಗ ಸ್ಕೂಟರ್ ಕಾಣಿಸದೇ ಇದ್ದು, ಅಲ್ಲೇ ಅಕ್ಕಪಕ್ಕದಲ್ಲಿ , ಬೇರೆ ಬೇರೆ ಕಡೆಗಳಲ್ಲಿ ಸ್ಕೂಟರ್ ನ್ನು ಹುಡುಕಾಡಿದ್ದು, ವಿಚಾರಿಸಿಕೊಂಡಿದ್ದರೂ ಸ್ಕೂಟರ್ ಪತ್ತೆಯಾಗಿರುವುದಿಲ್ಲ. ಸ್ಕೂಟರ್ ತೆಗೆದುಕೊಂಡು ಹೋದವರು ಪುನಃ ತಂದು ಇಡಬಹುದೆಂದು ಠಾಣೆಗೆ ದೂರು ನೀಡಲು ವಿಳಂಬವಾಗಿರುತ್ತದೆ. ಪಿರ್ಯಾದಿದಾರರ ಹೀರೋ ಮೇಸ್ಟ್ರೋ ಸ್ಕೂಟರ್ ಕೆಎ 19 ಇ ಎಫ್ 0041 ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ಪಿರ್ಯಾದಿ.

 

ಇತ್ತೀಚಿನ ನವೀಕರಣ​ : 17-08-2022 07:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080