ಅಭಿಪ್ರಾಯ / ಸಲಹೆಗಳು

 

 

 

Crime Report in Bajpe PS

ಪಿರ್ಯಾದಿ Santhosh S Kaggal ದಾರರ ತಮ್ಮ ಪ್ರಭು ಎಸ್ ಕಗ್ಗಲ್ ಎಂಬವರು ಗಂಜಿಮಠ ಎಂಬಲ್ಲಿರುವ ಬಿಗ್ ಬ್ಯಾಗ್ ಎಂಬ ಕಂಪನಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 16.08.2023 ರಂದು ಬೆಳಗ್ಗೆ ಸಮಯ ಸುಮಾರು 5.40 ಗಂಟೆಗೆ ಕೆಲಸಕ್ಕೆಂದು  ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮ, ತೇಜೆಸ್ವಿನಿ ಬಿಲ್ಡಿಂಗ್, ಗರಡಿ ಬಳಿ ಎಂಬಲ್ಲಿರುವ ಮನೆಯಿಂದ ಪ್ರಭುರವರು ಹೊರಟು ಹೋಗಿದ್ದು, ಪರ್ಸ್, ಮೊಬೈಲ್ ಹಾಗೂ ಬೈಕ್ ನ್ನು ಬಿಟ್ಟುಹೋಗಿದ್ದು, ಈವರೆಗೆ ಮನೆಗೆ ಬಂದಿರುವುದಿಲ್ಲ. ಪಿರ್ಯಾದಿದಾರರು ಕಾಣೆಯಾದ ಪ್ರಭುರವರ ಬಗ್ಗೆ ಹಲವು ಕಡೆ ಹುಡುಕಾಡಿ ಸಂಬಂಧಿಸಿಕರಲ್ಲಿ ವಿಚಾರಿಸಿದಾಗ  ಈವರೆಗೆ ಸಿಕ್ಕಿರುವುದಿಲ್ಲ. ಆದುದರಿಂದ ಕಾಣೆಯಾದ ಪ್ರಭು ಎಸ್ ಕಗ್ಗಲ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ದೂರು ನೀಡಿರುವುದಾಗಿದೆ.

 

Moodabidre PS

ಪಿರ್ಯಾದಿ Melwin Rodrigues ದಾರರು ತನ್ನ ಅಣ್ಣನಾದ ನವೀನ್ ರೋಡ್ರಿಗಸ್ ಎಂಬವರ ಮುಖಾಂತರ ಕೆನಡಾದಲ್ಲಿ ಉದ್ಯೋಗದ ಬಗ್ಗೆ ವಿಸಾ ಮತ್ತು ಅಪ್ಲಿಕೇಶನ್ ನ ಶುಲ್ಕದ ಬಗ್ಗೆ ಪಡೆದುಕೊಂಡ ಹಣದ ವಿಚಾರವಾಗಿ ಪಿರ್ಯಾದಿದಾರರ ವಿರುದ್ಧ ನಿತಿನ್ ಶೆಟ್ಟಿ ದರೆಗುಡ್ಡೆ ಮತ್ತು ಸಂದೀಪ್ ಪೂಜಾರಿ ಎಂಬವರು +971543436550 ನಂಬರ್ ನಿಂದ ಕೆನಡಾಕ್ಕೆ ಹೋಗಲು ವೀಸಾ ಕೊಡಿಸುವುದಾಗಿ ಹಣವನ್ನು ಪಡೆದು ವಂಚಿಸಿರುವುದಾಗಿ ಪಿರ್ಯಾದಿದಾರರ ಮತ್ತು ಅವರ ಅಣ್ಣನವರ ಬಗ್ಗೆ ಇಲ್ಲ ಸಲ್ಲದ ಬರಹಗಳನ್ನು ಬರೆದು ವಾಟ್ಸಾಪ್ ನಲ್ಲಿ ಹರಿಬಿಡುವುದರ ಜೊತೆಗೆ ಪಿರ್ಯಾದಿದಾರರಿಗೆ ಕರೆ ಮಾಡಿ ರೂ 2,00,000/- ನೀಡುವಂತೆ ಬೇಡಿಕೆ ಇಟ್ಟಿದ್ದು, ನಂತರ ಕರೆ ಸ್ವೀಕರಿಸಿದೇ ಇದ್ದಾಗ ವಾಯ್ಸ್ ಮೆಸೇಜ್ ಮಾಡಿ ತನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಮಾಡುತ್ತಿರುವ ವಾಟ್ಸಾಪ್ ಮೆಸೇಜ್ ಅನ್ನು ನಿಲ್ಲಿಸಬೇಕಾದರೆ ರೂ 1,00,000/- ವನ್ನು ಒಂದು ವಾರದ ಒಳಗೆ ನೀಡದೇ ಹೋದಲ್ಲಿ ಇದೇ ರೀತಿಯಾಗಿ ಪಿರ್ಯಾದಿದಾರರ ಮತ್ತು ಅವರ ಮನೆಯವರ ಬಗ್ಗೆ ಬರೆದು ವಾಟ್ಸಾಪ್ ಮುಖಾಂತರ ಹಾಕಿ ಮಾನ ಮರ್ಯಾದೆ ತೆಗೆಯುತ್ತೇವೆ ಎಂದು ಬೆದರಿಕೆ ಒಡ್ಡಿ, ಪಿರ್ಯಾದಿದಾರರ ಮತ್ತು ಅವರ ಅಣ್ಣ ಹಾಗೂ ಅವರ ಪತ್ನಿಯ ಫೋಟೋವನ್ನು ಎಡಿಟ್ ಮಾಡಿ ಅವಾಚ್ಯವಾಗಿ ನಿಂದಿಸಿ ವಾಟ್ಸಾಪ್ ಮುಖಾಂತರ ಮೆಸೇಜ್ ಗಳನ್ನು ಇತರರಿಗೆ ಕಳುಹಿಸಿ ಮಾನಸಿಕ ಕಿರುಕುಳ ನೀಡಿರುವುದಲ್ಲದೇ, ಅರುಣ್  ಡಿಸಿಲ್ವಾ ಎಂಬಾತನು ಕಟ್ಟಿರುವ 3,50,000/- ಹಣವನ್ನು ವಾಪಾಸ್ ಪಡೆದು ಪಿರ್ಯಾದಿದಾರರ ಅಣ್ಣನಿಗೆ ಕರ ಮಾಡಿ ಆ ಹಣಕ್ಕೆ ಬಡ್ಡಿ ಕೊಡುವಂತೆ ಬೇಡಿಕೆ ಇಟ್ಟಿದ್ದು ಕೊಡದೇ ಇದ್ದಲ್ಲಿ ಫೋಟೋವನ್ನು ವೈರಲ್ ಮಾಡುತ್ತೇವೆ ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ

Urva PS

ಪಿರ್ಯಾಧಿದಾರರಾದ ರೋಹನ್ ಆರ್ ಶೆಟ್ಟಿ ರವರು ದಿನಾಂಕ 08-08-2023 ರಂದು ಬಿಜೈಯಲ್ಲಿರುವ ತನ್ನ ಮನೆಯಿಂದ ಬಿಜೈ ಕಾಪಿಕಾಡ್ ಮುಖ್ಯ ರಸ್ತೆಯಲ್ಲಿರುವ ಗ್ರೇಸ್ ಟವರ್ಸ್ ನ 3 ನೇ ಮಹಡಿಯಲ್ಲಿರುವ “Absolute Fitness “ ಜಿಮ್ ಗೆ ರಾತ್ರಿ ಸೈಕಲಿನಲ್ಲಿ ಹೋಗಿ ಜಿಮ್ ಇರುವ ಕಟ್ಟಡದ ರಸ್ತೆ ಬದಿಯಲ್ಲಿ ತನ್ನ ಸೈಕಲನ್ನು ರಾತ್ರಿ ಸಮಯ 08:45 ಗಂಟೆಗೆ ಲಾಕ್ ಮಾಡಿ ನಿಲ್ಲಿಸಿ ಜಿಮ್ ಗೆ ಹೋಗಿ ವಾಪಸ್ಸು ಜಿಮ್ ಮುಗಿಸಿ ಅದೇ ದಿನ ರಾತ್ರಿ 09:30 ಗಂಟೆಗೆ ಬಂದು ನೋಡಿದಾಗ ಪಿರ್ಯಾಧಿದಾರರು ಪಾರ್ಕ್ ಮಾಡಿದ ಸ್ಥಳದಲ್ಲಿ ಸೈಕಲ್ ಕಾಣದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಸೈಕಲ್ Fantom Rapid ಎಂಬ ಕಂಪನಿಯದ್ದಾಗಿದ್ದು, ಇದರ ಬಣ್ಣ- Black with Orange Lines, ಇದರ ಅಂದಾಜು ,ಮೌಲ್ಯ ಸುಮಾರು ರೂ 21000/- ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

Mangalore East Traffic PS                    

ಪಿರ್ಯಾದಿದಾರರಾದ ದೀಪಕ್ ಕುಮಾರ್ ರವರು  ದಿನಾಂಕ: 10-08-2023 ರಂದು 17:00 ಗಂಟೆಗೆ ತನ್ನ ಬಾಬ್ತು ಕಾರಿನಲ್ಲಿ ಬಿಜೈ ಕಡೆಯಿಂದ ಪದವಿನಂಗಡಿ ಕಡೆಗೆ ಹೋಗುತ್ತಾ ಕೆಪಿಟಿ ಸಪ್ತಗಿರಿ ಪೆಟ್ರೋಲ್ ಪಂಪ್ ನ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಾಗ ರುಕ್ಮಿಣಿ ( ಪ್ರಾಯ-70 ವರ್ಷ)  ಎಂಬವರು ಉದಯ ನಗರ ಕಡೆಯಿಂದ ಐಟಿಐ ಕಾಲೇಜು ಕಡೆಗೆ ರಸ್ತೆ ದಾಟುತ್ತಿದ್ದ ವೇಳೆ KA-19-MJ-9981 ನೇ ಕಾರಿನ ಚಾಲಕ ರಿಯಾನ್ ಡೆಕ್ಟನ್ ನೊರೊನ್ಹಾ ಎಂಬವರು ಯೆಯ್ಯಾಡಿ ಕಡೆಯಿಂದ ಕೆಪಿಟಿ ಕಡೆಗೆ ತನ್ನ ಬಾಬ್ತು ಕಾರನ್ನು ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಡಿಕ್ಕಿಪಡಿಸಿದ್ದು, ಈ ಡಿಕ್ಕಿಯ ಪರಿಣಾಮ ರುಕ್ಮಿಣಿಯವರು ರಸ್ತೆಗೆ ಬಿದ್ದು ಅವರ ಎಡಕಾಲಿಗೆ ಗುದ್ದಿದ ರಕ್ತ ಗಾಯವಾಗಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರು ಮತ್ತು ಅಪಘಾತಪಡಿಸಿದ ಕಾರಿನ ಚಾಲಕನು ಅಪಘಾತಪಡಿಸಿದ ಕಾರಿನಲ್ಲಿಯೇ    ಚಿಕಿತ್ಸೆಯ ಬಗ್ಗೆ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯರು ರುಕ್ಮಿಣಿಯವರನ್ನು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆಯನ್ನು ನೀಡಿರುತ್ತಾರೆ. ಅಪಘಾತವಾದ ದಿನದಂದು ಕದ್ರಿ ಟ್ರಾಫಿಕ್ ಪೊಲೀಸರು ಆಸ್ಪತ್ರೆಗೆ ಬಂದಾಗ ರುಕ್ಮಿಣಿಯವರು ಅಪಘಾತದ ಬಗ್ಗೆ ಗದಗದಲ್ಲಿರುವ ತನ್ನ ಸಂಬಂದಿಕರೊಂದಿಗೆ ಚರ್ಚಿಸಿ ನಂತರ ದೂರು ನೀಡುವುದಾಗಿ ತಿಳಿಸಿರುತ್ತಾರೆ.

 

ಇತ್ತೀಚಿನ ನವೀಕರಣ​ : 21-08-2023 02:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080