ಅಭಿಪ್ರಾಯ / ಸಲಹೆಗಳು

Crime Report in  Panambur PS

ದಿನಾಂಕ 16-10-2023 ರಾತ್ರಿ 8-20 ಗಂಟೆಗೆ ಫಿರ್ಯಾದಿ MOHAMMAD AKRAM ದಾರರು ಬೇಂಗ್ರೆ ಸೂಪರ್ ಸ್ಟಾರ್ ಮೈದಾನದ ಬಸ್ ಸ್ಟ್ಯಾಂಡ್ ಬಳಿಯಿಂದಾಗಿ ಪರೋಟ ಪಾಯಿಂಟ್ ಸಮೀಪದ ಮೆಡಿಕಲ್ ಶಾಪ್ ಗೆ ಹೋಗುವರೇ ನಡೆದುಕೊಂಡು ಹೋಗುವ ಸಮಯ ಸಮದ್ , ಇಜಾಝ್ ಮತ್ತು ಇರ್ಫಾನ್ ರವರುಗಳು   ಪಿರ್ಯಾದುದುದಾರರನ್ನು ಅಡ್ಡಗಟ್ಟಿದ್ದು  ಆರೋಪಿಗಳ ಪೈಕಿ ಸಮದ್ ನು  ಪಿರ್ಯಾದುದಾರರ ಕಿಬ್ಬೊಟ್ಟೆಗೆ ಚೂರಿಯಿಂದ ಹಲ್ಲೆ ನಡೆಸಿ ರಕ್ತಗಾಯವನ್ನುಂಟು ಮಾಡಿದ್ದು,  ಅದನ್ನು ತಡೆಯಲು ಪಿರ್ಯಾದುದಾರರ ತನ್ನ ಬಲಗೈಯನ್ನು  ಅಡ್ಡ ಹಿಡಿದ ಪರಿಣಾಮ ಪಿರ್ಯಾದುದಾರರ ಬಲಗೈ ಬೆರಳುಗಳಿಗೆ ಕೊಯ್ದ ರಕ್ತಗಾವಾಗಿರುತ್ತದೆ. ಸಮದ್ ನ ಜೊತೆಗಿದ್ದ  ಇಜಾಝ ಮತ್ತು ಇರ್ಫಾನ್ ರವರುಗಳು ಪಿರ್ಯಾದುದಾರರಿಗೆ ಕೈಯಿಂದ ಹಲ್ಲೆ ನಡೆಸಿ ಪಿರ್ಯಾದುದಾರರನ್ನು ನೆಲಕ್ಕೆ ತಳ್ಳಿದ ಪರಿಣಾಮ ಬಲಗಾಲಿನ ಮಂಡಿಗೆ , ಎಡಗಾಲಿನ ಮೊಣಗಂಟಿನಿಂದ ಸ್ವಲ್ಪ ಕೆಳಗೆ ತರಚಿದ ರಕ್ತಗಾಯವಾಗಿರುತ್ತದೆ.  ನಂತರ ಆರೋಪಿಗಳು ಪಿರ್ಯಾದುದಾರರು  ನೋವಿನಿಂದ ಜೋರಾಗಿ ಬೊಬ್ಬೆ ಹೊಡೆದ ಪರಿಣಾಮ ಅಕ್ಕಪಕ್ಕದವರು ಕೃತ್ಯ ನಡೆದ ಸ್ಥಳಕ್ಕೆ ಬಂದಿದ್ದನ್ನು ನೋಡಿ  ಸಮದ್ ಇಜಾಝ ಮತ್ತು ಇರ್ಫಾನ್ ರವರುಗಳು ಫಿರ್ಯಾದಿದಾರರಿಗೆ ನಿನ್ನನ್ನು ಜೀವ ಸಹಿತ ಬದುಕಲು ಬಿಡುವುದಿಲ್ಲ ರಂಡೆ ಮಗನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ,  ಚಾಕುವಿನೊಂದಿಗೆ ಅಲ್ಲಿಂದ ಓಡಿ ಹೋಗಿರುತ್ತಾರೆ ಆಗ  ಅಲ್ಲಿಯೇ ಸಮೀಪದಲ್ಲಿ ಕೃತ್ಯವನ್ನು ನೋಡಿದ  ಅಶ್ರಫ್ ಮತ್ತು ನೌಫಾಲ್ ರವರುಗಳು ಎ ಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲು ಮಾಡಿರುತ್ತಾರೆ. ಫಿರ್ಯಾದಿದಾರರು ಸಮದ್ ನ ಸಂಬಂಧಿಕರಿಗೆ 2 ತಿಂಗಳ ಹಿಂದೆ ಮದ್ಯ ಕುಡಿಸಿದ ವಿಷಯದಲ್ಲಿ ಇಬ್ಬರ ಮದ್ಯೆ ಜಗಳವಾಗಿದ್ದು ನಂತರ ರಾಜಿಯಾಗಿರುತ್ತಾರೆ. ಇದೇ ಹಳೆಯ ದ್ವೇಷದ ಪ್ರತಿಕಾರವಾಗಿ  ಕೊಲ್ಲುವ ಉದ್ದೇಶದಿಂದ ಚೂರಿಯಿಂದ ಸಮದ್ ನು ಇಜಾಝ್ ಮತ್ತು ಇರ್ಫಾನ್ ರವರೊಂದಿಗೆ ಸೇರಿ ಹಲ್ಲೆ ನಡೆಸಿರುವುದಾಗಿದೆ ಎಂಬಿತ್ಯಾದಿ.

Mulki PS

ದಿನಾಂಕ: 16-10-2023 ರಂದು ಸಂಜೆ ಸುಮಾರು 6-30 ಗಂಟೆಗೆ ಹಳೆಯಂಗಡಿ ಗ್ರಾಮದ ಹಳೆಯಂಗಡಿ ಎಂಬಲ್ಲಿ ಕಲ್ಲಪ್ಪ ಭಜಂತ್ರಿ ಎಂಬಾತನು ಕ್ರಿಕೇಟ್ ಆಟದ ಬೆಟ್ಟಿಂಗ್ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ವೇಳೆ ಮುಲ್ಕಿ ಠಾಣೆಯ ಪಿಎಸ್ಐ ಮಾರುತಿ ಪಿ  ರವರು ಖಚಿತ ಮಾಹಿತಿಯಂತೆ ದಾಳಿ ನಡೆಸಿ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ 1] ನಗದು ಹಣ 2,100/- ರೂಪಾಯಿ, 2) ಬೆಟ್ಟಿಂಗ್ ಚೀಟಿ-1, 3] ಬಾಲ್ ಪಾಯಿಂಟ್ ಪೆನ್-1 ನ್ನು ಸ್ವಾಧೀನಪಡಿಸಿಕೊಂಡು ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿ  ಎಂಬಿತ್ಯಾದಿ.

2) ದಿನಾಂಕ: 16-10-2023 ರಂದು ರಾತ್ರಿ ಸುಮಾರು 8-30  ಗಂಟೆಗೆ ಕಾರ್ನಾಡು ಗ್ರಾಮದ ಕಾರ್ನಾಡು ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಂದ್ರೇಶ್ ಎಂಬಾತನು ಕ್ರಿಕೆಟ್ ಆಟದ ಬೆಟ್ಟಿಂಗ್ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ವೇಳೆ ಮುಲ್ಕಿ ಠಾಣೆಯ ಪಿಎಸ್ಐ ಮಾರುತಿ ಪಿ  ರವರು ಖಚಿತ ಮಾಹಿತಿಯಂತೆ ದಾಳಿ ನಡೆಸಿ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ 1] ನಗದು ಹಣ 2,400/- ರೂಪಾಯಿ, 2) ಬೆಟ್ಟಿಂಗ್ ಚೀಟಿ-1, 3] ಬಾಲ್ ಪಾಯಿಂಟ್ ಪೆನ್-1 ನ್ನು ಸ್ವಾಧೀನಪಡಿಸಿಕೊಂಡು ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

Traffic South Police Station                                      

ದಿನಾಂಕ: 16-10-2023 ರಂದು ಪಿರ್ಯಾದಿ AKBAR WAHEED ದಾರರು ಅವರ ಸ್ನೇಹಿತ ಉಮ್ಮರ್ ಫಾರೂಖ್ ರವರೊಂದಿಗೆ ಕಾರು ನಂಬ್ರ: KL-14-R-4382 ನೇದರಲ್ಲಿ ಉಮ್ಮರ್ ಫಾರೂಖ್ ರವರು ಚಾಲಕರಾಗಿ ಮತ್ತು ಪಿರ್ಯಾದಿದಾರರು ಪ್ರಯಾಣಿಕರಾಗಿ ಕುಳಿತು ಪ್ರಯಾಣಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಗಿನ ಜಾವ 2-30 ಗಂಟೆಗೆ ತಲಪಾಡಿ ಟೋಲ್ ಗೇಟ್ ಬಳಿ ತಲುಪಿದಾಗ ಲಾರಿ ನಂಬ್ರ: KL-65-F-9655 ನೇದರ ಚಾಲಕ ರಾಜೇಶ್ ಎಂಬುವನು ಲಾರಿಯನ್ನು ಒಮ್ಮೆಲೇ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಎಡಕ್ಕೆ ಚಲಾಯಿಸಿ ಬ್ರೇಕ್ ಹಾಕಿದಾಗ ಅದರ ಹಿಂದಿನಿಂದ ಕಾರು ನಂಬ್ರ: KL-14-R-4382 ನೇದನ್ನು ಅದರ ಚಾಲಕ ಉಮ್ಮರ್ ಫಾರೂಖ್ ರವರು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಲಾರಿಯ ಹಿಂಭಾಗಕಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಮುಭಾಗದ ನಂಬರ್ ಪ್ಲೇಟ್, ಮುಂದಿನ ಗ್ಲಾಸ್, ಬೋನೆಟ್, ಬಂಪರ್, ಮುಂದಿನ ಚೇಸ್, ಹೆಡ್ ಲೈಟ್, ಇಂಜಿನ್ ಹಾಗೂ ಎ.ಸಿ ಸಂಪೂರ್ಣ ಜಖಂ ಗೊಂಡಿದ್ದು ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 17-10-2023 04:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080