ಅಭಿಪ್ರಾಯ / ಸಲಹೆಗಳು

Crime Report in  : Bajpe PS

ದಿನಾಂಕ 17-11-2023 ರಂದು ಬೆಳಿಗ್ಗೆ 11-15 ಗಂಟೆಗೆ ಪಿರ್ಯಾದಿ Gurappa Kanti ದಾರರು  ಸಿಬ್ಬಂಧಿಗಳ ಜೊತೆ ಕೈಕಂಬ ಪೊಳಲಿ ದ್ವಾರದಿಂದ ಅಡ್ಡೂರು ಕಡೆಗೆ ಹಾದು ಹೋಗುವ ರಸ್ತೆಯಲ್ಲಿ ಕಾಜಿಲ ಎಂಬಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಅಡ್ಡೂರು ಕಡೆಯಿಂದ KA-19-EU-4898 ನಂಬ್ರದ ಕಪ್ಪು ಬಣ್ಣದ ಸ್ಕೂಟರ್ ನಲ್ಲಿ 3 ಜನ ಬರುತ್ತಿದ್ದನ್ನು ಕಂಡು  ಮಿಲ್ಲಿಸುವಂತೆ ಸೂಚನೆ ನೀಡಿದಾಗ ಸವಾರನು ಸ್ಕೂಟರನ್ನು ನಿಲ್ಲಿಸಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದವರನ್ನು ಸಿಬ್ಬಂಧಿಯವರ ಸಹಾಯದಿಂದ ಮೂರು ಜನರನ್ನು ಹಿಡಿದು ವಿಚಾರಿಸಲಾಗಿ 1) ತೇಜಾಕ್ಷ ಪೂಜಾರಿ 2)ಸಂತೋಷ್ ಪೂಜಾರಿ, ಅಬೂಬಕ್ಕರ್ ಸಿದ್ದಿಕ್ ಎಂಬುದಾಗಿ ತಿಳಿಸಿದರು ನಂತರ  ಸದ್ರಿಯವರು ಪರಾಯಾಗಲು ಪರಾರಿಯಾಗಲು ಪ್ರಯತ್ಮಿಸಿದ ಬಗ್ಗೆ  ವಿಚಾರಿಸಿದಾಗ ಸ್ಕೂಟರಿನ ಡಿಕ್ಕಿಯಲ್ಲಿ ಮಾದಕ ವಸ್ತು ಗಾಂಜಾ ಇರುವುದಾಗಿ ತಿಳಿಸಿದ್ದು ಅದರಂತೆ ಆರೋಪಿತರ ವಶದಲ್ಲಿದ್ದ ರೂ. 6000/- ಮೌಲ್ಯದ 340 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ಮತ್ತು ರೂ.40000/- ಮೌಲ್ಯದ ಸ್ಕೂಟರ್ ನ್ನು ಸ್ವಾಧೀನ ಪಡಿಸಿಕೊಂಡು,  ಅಕ್ರಮವಾಗಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ವಶದಲ್ಲಿಟ್ಟುಕೊಂಡಿದ್ದ ಆರೋಪಿತರ ವಿರುದ್ದ ಕಾನೂನು ಕ್ರಮವನ್ನು ಜರುಗಿಸುವಂತೆ ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ .

Kankanady Town PS        

ಪಿರ್ಯಾದಿ Ronald Jerald Fernandies ದಾರರು ಮಂಗಳೂರು ನಗರದ ಪಂಪವೆಲ್ ಬಳಿ ಇರುವ ಪದ್ಮ ಶ್ರೀ ಕಾಂಪ್ಲೇಕ್ಸ್ ನ 1 ನೇ ಮಹಡಿಯಲ್ಲಿರುವ ನವಯುಗ ಕ್ರೆಡಿಟ್ ಸೌಹರ್ದ ಸಹಕಾರಿ ಸಂಘದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರ ಸಹಕಾರಿ ಸಂಘದಲ್ಲಿ ಚಿನ್ನಾಭರಣಗಳನ್ನು ಅಡಮಾನ ಇರಿಸಿ ಸಾಲ ಪಡೆಯಲು ಬರುವ ಜನರನ್ನು ಸದಸ್ಯರನ್ನಾಗಿ ಮಾಡಿ, ನಂತರ ಅವರಿಗೆ ಚಿನ್ನಾಭರಣಗಳ ಮೇಲಿನ ಅಡಮಾನ ಸಾಲವನ್ನು ನೀಡುತ್ತಿರುವುದಾಗಿದೆ. ನಿನ್ನೆ ವರೆಗೆ ಪಿರ್ಯಾದಿದಾರರ ಸಹಕಾರಿ ಸಂಘದಲ್ಲಿ 127 ಗ್ರಾಂ ತೂಕದ ಚಿನ್ನಾಭರಣ  ಹಾಗೂ ರೂ. 57,832/- ನಗದು ಹಣವನ್ನು ಸಹಕಾರಿ ಸಂಘದಲ್ಲಿನ ಲಾಕರ್ ರೂಮ್ ನ ತಿಜೋರಿಯಲ್ಲಿಟ್ಟು, ಅದನ್ನು ಕಬ್ಬಿಣದ ಗೇಟ್ ನ ಬೀಗವನ್ನು ಲಾಕ್ ಮಾಡಿ ಹಾಗೂ ಕಬ್ಬಿಣದ ಲಾಕರ್ ಡೋರ್ ನ್ನು ಪಿರ್ಯಾದಿದಾರರು ಹಾಗೂ ಅಭಿವೃದ್ದಿ ವ್ಯವಸ್ಥಾಪಕರಾದ ಶರತ್ ಕುಮಾರ್  ಲಾಕ್ ಮಾಡಿ, ಈ ಮೂರು ಕೀಗಳಿರುವ ಕೀಯ ಪೌಚ್ ನಲ್ಲಿಟ್ಟು ಮುಖ್ಯ ಕಾರ್ಯ ನಿರ್ವಾಹಣ ಕೋಠಡಿಯಲ್ಲಿರುವ ಮೇಜಿನ ಡ್ರಾವರ್ ನಲ್ಲಿ ಇಟ್ಟು ಸಹಕಾರಿ ಸಂಘವನ್ನು ಬ್ಯಾಂಕ್ ನ ನ ಮುಂಭಾಗಿಲಿನ ಶಟರ್ ನ್ನು ಬಂದ್ ಸಂಜೆ 5-45 ಗಂಟೆಗೆ ಮನೆಗೆ ಹೋಗಿದ್ದು, ಮರು ದಿನ ದಿನಾಂಕ: 17-11-2023 ರಂದು ಸಹಕಾರಿ ಸಂಘದ ಅಧ್ಯಕ್ಷಕರಾದ ಚೇತನ್ ಕುಮಾರ್ ಹಾಗೂ ಸಿಬ್ಬಂಧಿಯವರಾದ ಕಾವ್ಯ ರವರು  ಬೆಳಿಗ್ಗೆ ಸುಮಾರು 9-40 ಗಂಟೆಗೆ ಬಂದು ಸಹಕಾರಿ ಸಂಘದ ಮುಂಭಾಗದ ಬಾಗಲಿನ್ನು ತೆರೆದು ಒಳಗೆ ಹೋಗಿ ನೋಡಿದಾಗ, ಸಹಕಾರಿ ಸಂಘದ ಲಾಕರ್ ರೂಮ್ ನ ಬಾಗಿಲು ತೆರೆದಿರುವುದು ಕಂಡು ಬಂದಿದ್ದು, ಈ ವಿಚಾರವನ್ನು ಪಿರ್ಯಾದಿದಾರರಾಗಿ ತಿಳಿಸಿದ್ದು, ಪಿರ್ಯಾದಿದಾರರು  ಸಹಕಾರಿ ಸಂಘಕ್ಕೆ ಬಂದು ನೋಡಿದಾಗ ಸಹಕಾರಿ ಸಂಘದ ಸಿ.ಇ.ಓ ಕಚೇರಿಯ ಹಿಂದೆ ಇರುವ ಕಿಟಕಿಯ ಸರಳಗನ್ನು ಯಾವುದೋ ಆಯುಧದಿಂದ  ಕಟ್ ಮಾಡಿ, ಕಟ್ ಮಾಡಿದ ಸ್ಥಳದಿಂದ  ಒಳಗಡೆ ನುಗ್ಗಿ, ಸಿ.ಇ.ಓ ಕಚೇರಿಯ ಮೇಜಿನ ಡ್ರಾವರ್ ನಲ್ಲಿ ನಿನ್ನೆ ಇರಿಸಿದ್ದ ಕೀಗಳನ್ನು ತೆಗೆದುಕೊಂಡು, ಕೀಗಳ ಸಹಾಯದಿಂದ ಕಬ್ಬಿಣದ ಲಾಕರ್ ಡೋರ್ ಹಾಗೂ ನಂತರ ಕಬ್ಬಿಣದ ಗೇಟ್ ನ ಬೀಗವನ್ನು ತೆಗೆದು ಲಾಕರ್ ರೂಮ್ ಒಳಗಡೆ ಪ್ರವೇಶಿಸಿ, ತಿಜೋರಿಯ ಬಾಗಿಲನ್ನು ಕೀಯ ಸಹಾಯದಿಂದ ತೆಗೆದು, ಓಪನ್ ಮಾಡಿ, ತಿಜೋರಿಯ ಒಳಗಡೆ ಇದ್ದ ಚಿನ್ನಾಭರಣಗಳ ಇರಿಸಿದ್ದ ಬಾಕ್ಸ್ ಹಾಗೂ ನಗದು ಬಾಕ್ಸ್ ನಿಂದ ಯಾರೋ ಕಳ್ಳರು ನಿನ್ನೆ ದಿನಾಂಕ: 16-11-2023 ರಂದು ಸಂಜೆ: 5-45 ಗಂಟೆಯಿಂದ, ಈ ದಿನ ದಿನಾಂಕ: 17-11-2023 ರ ಬೆಳಿಗ್ಗೆ 9-40 ಗಂಟೆಯ ಮದ್ಯೆ ರೂ. 7,00,000/- ಬೆಲೆ ಬಾಳುವ ಚಿನ್ನಾಭರಣಗಳನ್ನು ಹಾಗೂ ನಗದು ರೂ. ರೂ. 57,832/- ಕಳವು ಮಾಡಿಕೊಂಡು ಹೋಗಿರುವುದಾಗಿದೆ.

Ullal PS

ದಿನಾಂಕ: 17.11.2023 ರಂದು ಬೆಳಿಗ್ಗೆ ಸುಮಾರು 10.00 ಗಂಟೆಗೆ    ಉಳ್ಳಾಲ ತಾಲೂಕು ಕೋಟೆಕಾರು ಗ್ರಾಮದ ಕೆ ಸಿ ರೋಡ್ ಸಾರ್ವಜನಿಕ ಸ್ಥಳದಲ್ಲಿ ಎಂಬಲ್ಲಿ ಒರ್ವ ಯುವಕನು ನಿಷೇದಿತ ಮಾದಕ ವಸ್ತು ಅಥವಾ ತಂಬಾಕನ್ನು ಸೇವಿಸಿ ನಶೆಯಲ್ಲಿ ತೂರಾಡುತ್ತಾ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾನೆಂದು ಮಾಹಿತಿ ನೀಡಿದಂತೆ ಸುಮಾರು 10.30 ಗಂಟೆಗೆ ತಲುಪಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲಾಗಿ ತನ್ನ ಹೆಸರು ಅಬ್ಬಾಸ್ , ಪ್ರಾಯ: 45 ವರ್ಷ, ವಾಸ: ಡೋರ್ ನಂಬ್ರ 3-129/26 ಹಿದಾಯತ್ ನಗರ, ಮುಳ್ಳುಗುಡ್ಡೆ, ಕೆ ಸಿ ರೋಡ್, ಕೋಟೆಕಾರ ಗ್ರಾಮ, ಉಳ್ಳಾಲ ತಾಲೂಕು  ಎಂಬುದಾಗಿ ತಿಳಿಸಿದ್ದು, ಆತ ತಾನು ನಿಷೇದಿತ ಮಾದಕ ವಸ್ತು ಸೇವಿಸಿದ್ದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ನಂತರ ಆತನನ್ನು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕೋರಿಕೆ ಪತ್ರದೊಂದಿಗೆ ವೈದ್ಯಕೀಯ ತಪಾಸಣೆಗೊಳಪಡಿಸಿದಂತೆ ವೈದ್ಯರು ಪರೀಕ್ಷೀಸಿ ಅಬ್ಬಾಸ್ ನು    ನಿಷೇಧಿತ ಮಾದಕ ವಸ್ತು Tetrahydrocannabinol ಸೇವನೆ ಮಾಡಿರುವುದಾಗಿ ವೈದ್ಯಕೀಯ ದೃಢಪತ್ರ ನೀಡಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

CEN Crime PS

ದಿನಾಂಕ 30-10-2023 ರಂದು ಪಿರ್ಯಾದಿದಾರರ ವಾಟ್ಸಪ್ ನಂಬ್ರ ಗೆ +84965437794  ನೇದರಿಂದ ಪಾರ್ಟ್ ಟೈಮ್ ಜಾಬ್ ನೀಡುವುದರ ಬಗ್ಗೆ ಹಾಗೂ ಟಾಸ್ಕ್ ಕಂಪ್ಲೀಟ್ ಮಾಡಿದರೆ ಹಣ ಗಳಿಸಬಹುದು ಎಂಬ ಬಗ್ಗೆ ಮೆಸೇಜ್ ಬಂದಿರುತ್ತದೆ. ನಂತರ ಪಿರ್ಯಾದಿದಾರರನ್ನು ಟೆಲಿಗ್ರಾಂ ಆಪ್ ಮೂಲಕ 1 ಟಾಸ್ಕ್ ಗೆ 50/- ರೂಪಾಯಿಯಂತೆ 3 ಟಾಸ್ಕ್ ಕಂಪ್ಲೀಟ್ ಮಾಡಿದರೇ 150/- ರೂಗಳನ್ನು ನೀಡುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಆ 3 ಟಾಸ್ಕ್ ಗಳನ್ನು ಕಂಪ್ಲೀಟ್ ಮಾಡಿರುತ್ತಾರೆ ಅದರಂತೆ ಪಿರ್ಯಾದಿದಾರರ ಖಾತೆಗೆ 150/- ರೂ ಹಣ ಜಮಾ ಆಗಿರುತ್ತದೆ. ನಂತರ 1,000 ರೂ ಹಣ ಹೂಡಿಕೆ ಮಾಡಿದ ನಂತರ 1300/- ರೂ ಹಾಗೂ 3,000/- ಹೂಡಿಕೆ ಮಾಡಿದ ನಂತರ 8,350/- ರೂ ಹಣವನ್ನು ಪಿರ್ಯಾದಿದಾರರ ಅಕೌಂಟ್ ಗೆ ಹಾಕಲಾಗಿರುತ್ತದೆ. ಇದನ್ನು ನಂಬಿದ ಪಿರ್ಯಾದಿದಾರರು ಇನ್ನು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಅವರು ತಿಳಿಸಿದಂತೆ ಹಂತಹಂತವಾಗಿ ರೂ 20,000/-, 65,000/-, 2,00,000/- ಹಾಗೂ 3,00,000/- ಗಳಂತೆ ಒಟ್ಟು 5,85,000/- ರೂ ಹಣವನ್ನು IMPS, UPI ಮುಖೇನಾ ಆರೋಪಿತರುಗಳು ತಿಳಿಸಿದ ಬ್ಯಾಂಕ್ ಅಕೌಂಟ್ ಗಳಿಗೆ ಹಾಕಿರುತ್ತಾರೆ.  ಹೀಗೆ ದಿನಾಂಕ 30-10-2023 ರಿಂದ 13-11-2023 ರವರೆಗೆ ಪಿರ್ಯಾದಿದಾರರನ್ನು ನಂಬಿಸಿ ಮೊಸ ವಂಚನೆಯಿಂದ ಹಣ ವರ್ಗಾವಣೆ ಮಾಡಿಕೊಂಡಿರುತ್ತಾರೆಂಬಿತ್ಯಾದಿ ದೂರಿನ ಸಾರಾಂಶ.

Bajpe PS.

ಆರೋಪಿ Nilesh Levele(A1) Anil Bhagavatharwa Parge(A2)  Abhaya Narayana Jadhava(A3)ತರು ಕೆಲಸ ಮಾಡಿಕೊಂಡಿರುವ Harsh Construction Pvt Ltd ಕಂಪನಿಗೆ 2022 ನೇ ಇಸವಿಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಇಲ್ಲಿ ಕಾಮಗಾರಿಯು ಗುತ್ತಿಗೆಗೆ ದೊರೆತಿರುತ್ತದೆ ಸದರಿ Harsh Construction Pvt Ltd  ರವರು ಪಿರ್ಯಾದಿದಾರರ ಕಂಪನಿಗೆ ಉಪ ಗುತ್ತಿಗೆಯನ್ನು ನೀಡಿರುತ್ತಾರೆ ಈ ಕೆಲಸದ ಬಗ್ಗೆ ಪಿರ್ಯಾದಿದಾರರು Viz Shabari Constructions ಕಂಪನಿ ಕಡೆಯಿಂದ H, Frame-940 ,X Cross-884 ,Jaali -70,  Bracing Pipe -200 , Clamp-100 ಗಳನ್ನು ಬಾಡಿಗೆಗೆ ತಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿ ಕೆಲಸ ಆರಂಭಿಸಿರುತ್ತಾರೆ ಸದರಿ ಕೆಲಸವನ್ನು ಪೆಬ್ರವರಿ 2023 ರಲ್ಲಿ ಮುಗಿಸಿದ್ದು ಆರೋಪಿತರು ಪಿರ್ಯಾದಿದಾರರಿಂದ ಪಡೆದ ಸೊತ್ತುಗಳ ಪೈಕಿ H Frame-776 ,X Cross -685 ,Jaali 70 , Bracing Pipe-129 ,Clamp-100  ಗಳನ್ನು ವಾಪಾಸ್ಸು ನೀಡಿರುತ್ತಾರೆ ಆರೋಪಿತರು ಉಳಿದ 164- H Frame ,199- X Cross , 71 Bracing Pipes ಗಳನ್ನು ಪಿರ್ಯಾದಿದಾರರಿಗೆ ವಾಪಾಸ್ಸು ನೀಡದೇ ಪಿರ್ಯಾದಿದಾರರಿಗೆ ಮೋಸ ಮತ್ತು ನಂಬಿಕೆ ದ್ರೋಹ ಮಾಡಿ ಸುಮಾರು 6 ಲಕ್ಷ ರೂಪಾಯಿ ನಷ್ಟ ಉಂಟುಮಾಡಿರುತ್ತಾರೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 17-11-2023 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080