ಅಭಿಪ್ರಾಯ / ಸಲಹೆಗಳು

Crime Report in :   Barke PS

ಫಿರ್ಯಾದಿ ರಾಮ ಮೋಹನ ರೈ  ಎಂಬವರು ಗುರುದೇವ ಎಜುಕೇಶನ್ ಫೌಂಡೇಶನ್ (ರಿ) ನೋಂದಾಯಿತ ಸಂಸ್ಥೆಯ ಅಧ್ಯಕ್ಷರಾಗಿದ್ದು, ಮಂಗಳೂರು ನಗರದ ಬೋಳೂರು ಗ್ರಾಮದ ಮಠದಕಣಿ 3ನೇ ಕ್ರಾಸ್ ನಲ್ಲಿರುವ ಗ್ಲೋಬಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡವನ್ನು ದಿನಾಂಕ:03-09-2021 ರಿಂದ ಮಹೇಶ್ ಫೌಂಡೇಶನ್ ರವರಿಗೆ ಕರಾರಿನಂತೆ ಬಾಡಿಗೆಗೆ ನೀಡಿದಂತೆ 1ನೇ ಆರೋಪಿ ಮಹೇಶ್ ಫೌಂಡೇಶನ್ ಎಂಬ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಮತ್ತು ಆರೋಪಿ 2 ರಿಂದ 4 & 6 ರವರು ಮಹೇಶ್ ಫೌಂಡೇಶನ್ನ ಟ್ರಸ್ಟಿಗಳು ಹಾಗೂ ಆರೋಪಿ ನಂ.5 ಮಹೇಶ್ ಫೌಂಡೇಶನ್  ವ್ಯವಸ್ಥಾಪಕರು ಕಟ್ಟಡದಲ್ಲಿ ಮಹೇಶ್ ಫೌಂಡೇಶನ್ ಟ್ರಸ್ಟ್ ಸಂಸ್ಥೆಯು ಕೂಡ ವಿದ್ಯಾಸಂಸ್ಥೆಯನ್ನು ನಡೆಸುತ್ತಿದ್ದರು ಮತ್ತು 6 ನೇ ಟ್ರಸ್ಟಿ ಮತ್ತು 1 ನೇ ಆರೋಪಿತರು ಜಂಟಿಯಾಗಿ ಫಿರ್ಯಾದಿದಾರರೊಂದಿಗೆ ಬಾಡಿಗೆ ಕರಾರನ್ನು ಪಡೆದುಕೊಂಡು ವಿದ್ಯಾಸಂಸ್ಥೆಯನ್ನು ನಡೆಸುತ್ತಿದೆ. ಫಿರ್ಯಾದಿ ಸದ್ರಿ ಕಟ್ಟಡದಲ್ಲಿ ಶೋನಾ ಪಿಯು ಕಾಲೇಜು ಎಂಬ ಹೆಸರಿನ ಹೊಸ ಪಿಯು ಕಾಲೇಜು ಪ್ರಾರಂಭಿಸಲು, ಸಂಬಂದಪಟ್ಟ ಇಲಾಖೆಯಿಂದ ದಿನಾಂಕ: 14-05-2022 ರಂದು ಅನುಮತಿ ಪಡೆದಿರುವ ವಿಚಾರ ತಿಳಿದ ಆರೋಪಿತರೆಲ್ಲಾ ಸೇರಿ ನಕಲಿ ಮೊಹರು ಹಾಗೂ ದಾಖಲೆಗಳನ್ನು ಸೃಷ್ಟಿಸಿ, ಫಿರ್ಯಾದಿಯ ಪೋರ್ಜರಿ ಸಹಿ ಮಾಡಿ ಶೋನಾ ಪಿಯು ಕಾಲೇಜು ಹೆಸರನ್ನು ಮಂಗಳೂರು ಮಹೇಶ್ ಪಿಯು ಕಾಲೇಜು” ಎಂದು ಬದಲಾಯಿಸಲು ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರಿಗೆ ಅನಧಿಕೃತವಾಗಿ ಫಿರ್ಯಾದಿ ಹೆಸರಿನಲ್ಲಿ ಅರ್ಜಿ ಸಲ್ಲಿಸಿದಂತೆ ನಕಲಿ ದಾಖಲೆಯ ಆಧಾರದಲ್ಲಿ ಫಿರ್ಯಾದಿ ಕಾಲೇಜಿನ ಹೆಸರನ್ನು “ಶೋನಾ ಪಿಯು ಕಾಲೇಜು” ನಿಂದ “ಮಂಗಳೂರು ಮಹೇಶ್ ಪಿಯು ಕಾಲೇಜು” ಎಂದು ಬದಲಾಯಿಸಿದ ಫಿರ್ಯಾದಿ ಸಂಸ್ಥೆಯ ಪ್ರತಿಷ್ಟೆ ಹಾಗೂ ಹೆಸರು ಹಾಳು ಗೆಡವಿ ರೂ. 1,90,00,000/- ಬಾಡಿಗೆ ಹಣ ಬಾಕಿ ಇರಿಸಿದ್ದನ್ನು ಪಾವತಿಸಲು ತಿಳಿಸಿದಾಗ ಪಿರ್ಯಾದಿಗೆ ಜೀವ ಬೆದರಿಕೆಯನ್ನು ಆರೋಪಿತರು ಹಾಕಿದ್ದು  ಫಿರ್ಯಾದಿದಾರರ ವಿಶ್ವಾಸಗಳಿಸಿ ಮೋಸ ಮಾಡುವ ಉದ್ದೇಶದಿಂದ ಮತ್ತು ಫಿರ್ಯಾದಿಗೆ ಅಪರಾಧಿಕ ನಂಬಿಕೆ ದ್ರೋಹ ಮಾಡಿರುವುದಲ್ಲದೆ, ಆರೋಪಿಗಳು ದಿನಾಂಕ: 22-07-2023 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿದಾರರು ಸದ್ರಿ ಕಾಲೇಜಿನ ಒಂದು ಕೋಣೆಯಲ್ಲಿ ಬೀಗ ಹಾಕಿ ಇಟ್ಟಿದ್ದ ಹಾಗೂ ಕಟ್ಟಡದ ಇತರ ಕೋಣೆಗಳಲ್ಲಿದ್ದ 125 ಬೆಂಚು 150 ಡೆಸ್ಕ್ ಹಾಗೂ 50 ಕುರ್ಚಿಗಳನ್ನು ಇವುಗಳ ಅಂದಾಜು ಮೌಲ್ಯ ರೂ.50 ಲಕ್ಷ ಇವುಗಳನ್ನು ಬಂಗೇರ ಬ್ರದರ್ಸ್ ಎಂಬ ಹೆಸರಿನ ಲಾರಿ ನಂಬರ್ ಕೆಎ19-5858ನೇದರಲ್ಲಿ ಕಳ್ಳತನ ಮಾಡಲು ಸಾಗಿಸಿರುತ್ತಾರೆ. ದಿನಾಂಕ:27.07.2023 ರಂದು 1ನೇ ಆರೋಪಿ ಗೂಂಡಾಗಳ ಜೊತೆಯಲ್ಲಿ ನಾಗರಾಜ್ ಕೆ ಎಂಬ ಸೆಕ್ಯೂರಿಟಿ ಗಾರ್ಡ್ ಗೆ ಬೆದರಿಕೆ ಹಾಕಿ ಬೀಗ ಹೊಡೆದು ಟ್ಯಾಕ್ಸ್ ರಶೀದಿ ಪೀಠೋಪಕರಣಗಳ ದಾಖಲೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದ್ದು, ಪಿರ್ಯಾದಿದಾರರಿಗೆ ಆರೋಪಿತರು ಸಮಾನ ಉದ್ದೇಶದಿಂದ ಮೋಸ, ವಂಚನೆ, ವಿಶ್ವಾಸ ದ್ರೋಹ, ಕಳ್ಳತನ, ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

Urva PS

ಪಿರ್ಯಾಧುದಾರರಾದ ಶ್ರೀಮತಿ ಕುಶಾಲಾಕ್ಷಿ ರವರ ಮಗಳಾದ ಕುಮಾರಿ ಪವಿತ್ರ, ಪ್ರಾಯ 24 ವರ್ಷ ಎಂಬವರು ದಿನಾಂಕ 16-01-2024 ರಂದು ಬೆಳಿಗ್ಗೆ ಸುಮಾರು 09-30 ಗಂಟೆಗೆ kodical ಮನೆಯಿಂದ ಕೆಲಸಕ್ಕೆಂದು ಹೋದವರು ಈವರೆಗೆ ಮನೆಗೆ ವಾಪಾಸು ಬಾರದೇ ಕಾಣೆಯಾಗಿರುವುದಾಗಿದೆ.

ಕಾಣೆಯಾದವರ ವಿವರ:

ಹೆಸರು:- ಕುಮಾರಿ ಪವಿತ್ರಾ

ವಯಸ್ಸು: 24 ವರ್ಷ

ಎತ್ತರ:- 4.5 ಅಡಿ

Traffic North Police Station                                                

ದಿನಾಂಕ 16-01-2024 ರಂದು ಕಾವೂರು ಜಂಕ್ಷನ್ KIOCL Qtrs ನ ಮುಖ್ಯ ಗೇಟಿನ ಎದುರುಗಡೆ ಇರುವ ತರೆದ ಡಿವೈಡರ್ ಬಳಿ KA-18-J-5565  ಮೋಟಾರ್ ಸೈಕಲ್ ಒಂದು ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿಕೊಂಡು ನಿಂತಿದ್ದಾಗ ರಾತ್ರಿ ಸಮಯ ಸುಮಾರು 11:25  ಗಂಟೆಗೆ  ಬೋಂದೆಲ್ ಕಡೆಯಿಂದ  KA-19-MM-5679 ಕಾರೊಂದನ್ನು ಅದರ ಚಾಲಕ  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು KIOCl Qtrs ತೆರದ ಡಿವೈಡರ್ ನಲ್ಲಿ ತಿರುಗಲು ನಿಂತಿದ್ದ  ಮೋಟಾರ್ ಸೈಕಲ್ ಎಡಭಾಗಕ್ಕೆ ಡಿಕ್ಕಿ ಪಡಿಸಿ ಮೋಟಾರ್ ಸೈಕಲ್ ಹಾಗೂ ಅದರ ಸವಾರನ್ನು ಕಾಂಕ್ರೀಟ್ ರಸ್ತೆಯಲ್ಲಿ ಡಿವೈಡರ್ ಬದಿಯಲ್ಲಿತಳ್ಳಿಕೊಂಡು ಸ್ವಲ್ಪ ದೂರದ ವರೆಗೆ ಹೋಗಿದು ಗಾಯಾಳುವಿನ ಮೂಗು, ಬಾಯಿಯಲ್ಲಿ  ರಕ್ತ ಬಂದಿದ್ದು ,ಅಲ್ಲಲ್ಲಿ ತರಚಿದ ಗಾಯಾವಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು AJ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಮೃತ ಮಟ್ಟಿರುತ್ತಾರೆ ಕಾರು ಚಾಲಕ ಕಾರಿನಿಂದ ಇಳಿದು ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುವನ್ನು ನೋಡಿ ಆರೈಕೆಯನ್ನು ಮಾಡದೇ ಸ್ಥಳದಿಂದ ಹೋಗಿರುತ್ತಾನೆ  ಎಂಬಿತ್ಯಾದಿ.

Ullal PS

 ದಿನಾಂಕ.17.01.2024 ರಂದು ಸಂಜೆ ಸುಮಾರು 6-00 ಗಂಟೆಗೆ ಸಿಬ್ಬಂದಿಯವರಾದ  ಅಶೋಕ್ ಕುಮಾರ್, ಮಂಜುನಾಥ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ  ಸಂಜೆ ಸುಮಾರು 6-30 ಗಂಟೆಗೆ ಸೋಮೆಶ್ವರ ಗ್ರಾಮದ ಸೋಮೆಶ್ವರ ಕಡಲ ಕಿನಾರೆಯಿಂದ ಕೆಎಲ್ 60 2885 ನೇ ನಂಬ್ರದ ಈಚರ್ ವಾಹನದಲ್ಲಿ ಸಾಮಾನ್ಯ ಮರಳನ್ನು ಕಳ್ಳತನ ಮಾಡಿ ತುಂಬಿಸಿಕೊಂಡು ಅದರ ಚಾಲಕ ಸದ್ರಿ ವಾಹನವನ್ನು ಸೋಮೇಶ್ವರ ನೆಹರು ನಗರದ ಕಡೆಗೆ ಸಾಗಾಟ ಮಾಡಿಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ದೊರೆತ್ತಿದ್ದು, ಸದ್ರಿ ಈಚರ್ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಅದರ ಚಾಲಕನು ಸದ್ರಿ ಈಚರ್ ಲಾರಿಯನ್ನು ಅಲ್ಲಿಯೇ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಸಮವಸ್ತದಲ್ಲಿದ್ದ ನಮ್ಮನ್ನು ಕಂಡು ಓಡಿ ಹೋಗಿರುತ್ತಾನೆ. ನಂತರ ಹತ್ತಿರ ಹೋಗಿ ಈಚರ್ ವಾಹನದ ಬಾಡಿಯನ್ನು ನೋಡಲಾಗಿ ಮರಳನ್ನು ತುಂಬಿಸಿರುವುದು ಕಂಡು ಬಂದಿರುತ್ತದೆ. ನಂತರ ವಾಹನದ ನೊಂದಣಿ ನಂಬ್ರವನ್ನು ನೋಡಲಾಗಿ ಮಾಹಿತಿದಾರರು ತಿಳಿಸಿದಂತೆ ಕೆಎಲ್ 60 2885 ನೇ ನಂಬ್ರ ಆಗಿರುತ್ತದೆ. ಸದ್ರಿ  ಕೆಎಲ್ 60 2885 ನೇ ಚಾಲಕ ಹಾಗೂ ಮಾಲಕರು ಅಕ್ರಮ ಲಾಭಗಳಿಸುವ ಉದ್ದೇಶದಿಂದ ಸರಕಾರಿ ಜಾಗವಾದ ಸೋಮೇಶ್ವರ ಸಮುದ್ರ ಕಿನಾರೆಯಿಂದ ಸಾಮಾನ್ಯ ಮರಳನ್ನು ಕದ್ದು ಲಾರಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಸದ್ರಿ ಲಾರಿಯ ಕೆಎಲ್ 60 2885 ನೇದರ ವಾಹನದ ಅಂದಾಜು ಮೌಲ್ಯ ರೂ.4,00,000/- ಮತ್ತು ಸಾಮಾನ್ಯ ಮರಳಿನ ಅಂದಾಜು ಮೌಲ್ಯ ರೂ.2,000/- ಆಗಬಹುದು. 

Panambur PS

ದಿನಾಂಕ: 17-01-2024 ರಂದು ಮಂಗಳೂರು ನಗರ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಎಂದಿನಂತೆ ಪಿ.ಎಸ್.ಐ. ಜ್ಞಾನಶೇಖರವರು ಸಿಬ್ಬಂದಿಗಳೋಂದಿಗೆ ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸಾರ್ವಜನಿಕರೊಬ್ಬರ ಮಾಹಿತಿಯಂತೆ ಜೋಕಟ್ಟೆ ಕ್ರಾಸಿನ ಬಳಿ gurudeep singh(23) and Rahul  (24) ಯುವಕರುಗಳು ಅಮಲಿನಲ್ಲಿದಂತೆ ಕಂಡು ಬಂದವರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಯ ಬಗ್ಗೆ ಎ.ಜೆ.ಆಸ್ಪತ್ರೆ ವೈದ್ಯಾಧಿಕಾರಿಗಳ ಮುಂದೆ ಹಾಜರುಪಡಿಸಿ, ವೈದ್ಯಕೀಯ ಪರೀಕ್ಷಾ ವರದಿಯ ಪ್ರತಿಯನ್ನು ಪಡೆಯಲಾಗಿ “TETRAHYDRACANNABINOID (MARIJUANA) is Positive” ಎಂದು ವರದಿ ಬಂದಿರುವುದರಿಂದ ಸದ್ರಿ ಆಪಾಧಿತರ ವಿರುದ್ದ ನ್.ಡಿ.ಪಿ.ಎಸ್ ಕಾಯ್ದೆ- 1985 ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿರುವುದಾಗಿದೆ ಎಂಬಿತ್ಯಾದಿ.

CEN Crime PS

ದಿನಾಂಕ 17-01-2024 ರಂದು ಸೆನ್ ಕ್ರೈಂ ಪೊಲೀಸ್ ಠಾಣಾ ಉಪ-ನಿರೀಕ್ಷಕಳಾದ ಕುಮಾರಿ ಶೋಭಾ ರವರಿಗೆ ಬಂದ ಮಾಹಿತಿಯಂತೆ ಮಂಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ  ಬಳಿ  ಒಬ್ಬಾತನು ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕುಳಿತುಕೊಂಡ ಪ್ರಯಾಣಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ತಿಳಿಸಿದ್ದು ಮಾಹಿತಿ ಬಂದ ಸ್ಥಳವಾದ ಮಂಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ 15-00 ಗಂಟೆಗೆ ಹೋದಾಗ ಒಬ್ಬಾತನು ಯಾವುದೋ ಅಮಲು ವಸ್ತುವನ್ನು ಸೇವನೆ ಮಾಡಿದಂತೆ ಕಂಡುಬಂದಿದ್ದು ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಕೆ ಪಿ ಹೈದರ್ ಆಲಿ ಮೊಹಮ್ಮದ್ (53) ವಾಸ:ಮನೆ ನಂಬ್ರ.3-150.ಅಜ್ಜಿನಡ್ಕ, ಬದ್ರಿಯಾ ನಗರ,ಮಂಗಳೂರು-575022  ಎಂಬುದಾಗಿ ತಿಳಿಸಿದ್ದು, ಆತನನ್ನು  ವಶಕ್ಕೆ ಪಡೆದು 15-30 ಗಂಟೆಗೆ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಾಧಿಕಾರಿಯವರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತನು  ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ನೀಡಿದ ವೈದ್ಯಕೀಯ ಧೃಢಪತ್ರದೊಂದಿಗೆ ಠಾಣೆಗೆ ತಂದು ಆರೋಪಿತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Mangalore Rural PS

ದಿನಾಂಕ: 17-01-20243 ರಂದು 17.00 ಗಂಟೆಗೆ ಮಂಗಳೂರು ತಾಲೂಕು ವಳಚಿಲ್ ಜಂಕ್ಷನ್ ಎಂಬಲ್ಲಿ  ಸಾರ್ವಜನಿಕ ಸ್ಥಳದಲ್ಲಿ  ಮಾದಕ ವಸ್ತುವಾದ ಗಾಂಜ ಸೇವನೆ ಮಾಡುತ್ತಿದ್ದ  ಮಹಮ್ಮದ್ ಮುನಾಜ್ (20) ವಾಸ- ಅಡ್ಯಾರ್ ಮಸೀದಿ ಹತ್ತಿರ ಅಡ್ಯಾರ್ ಕಟ್ಟೆ, ಅಡ್ಯಾರ್ ಅಂಚೆ ಮತ್ತು ಗ್ರಾಮ ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ. 

 

ಇತ್ತೀಚಿನ ನವೀಕರಣ​ : 18-01-2024 04:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080