Mangalore West Traffic PS
ದಿನಾಂಕ:17-02-2023ರಂದು ಸಂಜೆ ಸಮಯ ಪಿರ್ಯಾದುದಾರರು BAIJU K K ತನ್ನ ಅಟೋ ರಿಕ್ಷಾವನ್ನು ಮಂಗಳೂರು ನಗರದ ಕಾರ್ ಸ್ಟ್ರೀಟ್ ಫ್ಲವರ್ ಮಾರ್ಕೆಟ್ ಬಳಿಯ ಅಟೋ ಪಾರ್ಕ್ ನಲ್ಲಿ ಇಟ್ಟುಕೊಂಡು ಬಾಡಿಗೆಗಾಗಿ ಕಾಯುತ್ತಿರುವ ವೇಳೆಯಲ್ಲಿ KA19ET7947ನೇ ದ್ವಿಚಕ್ರ ವಾಹನ ಸವಾರ ಮನೋಜ್ ಎಂಬಾತನು ದ್ವಿಚಕ್ರ ವಾಹನವನ್ನು ಕಾರ್ ಸ್ಟ್ರೀಟ್ ವೆಂಕಟ್ರಮಣ ದೇವಸ್ಥಾನದ ಕಡೆಯಿಂದ ಬಾಲಾಜಿ ಜಂಕ್ಷನ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ತೀರಾ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಸಮಯ ಸುಮಾರು 18:30 ಗಂಟೆಯ ವೇಳೆಗೆ ಕಾರ್ ಸ್ಟ್ರೀಟ್ ಕರ್ನಾಟಕ ಬ್ಯಾಂಕ್ ಎದುರುಗಡೆ ತಲುಪುವಾಗ ರಾಘವೇಂದ್ರ ಮಠದ ಕಡೆಯ ರಸ್ತೆಯಿಂದ ಕಾರ್ ಸ್ಟ್ರೀಟ್ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಸೈಕಲ್ಲೊಂದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸುವ ಸಲುವಾಗಿ ತಾನು ಸವಾರಿ ಮಾಡಿಕೊಂಡಿದ್ದ ದ್ವಿಚಕ್ರ ವಾಹನದ ಬ್ರೇಕನ್ನು ಏಕಾಏಕಿಯಾಗಿ ಒಮ್ಮೆಲೇ ಅದುಮಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಮನೋಜ್ ಎಂಬವರು ರಸ್ತೆಗೆಸೆಯಲ್ಪಟ್ಟು ಹಣೆಗೆ ರಕ್ತ ಗಾಯ ಹಾಗೂ ಗುದ್ದಿದ ನಮೂನೆಯ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್ ನಲ್ಲಿ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ಘಟನೆಯಲ್ಲಿ ಸೈಕಲ್ ಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ, ಆದರೆ ಸೈಕಲ್ ಹಾಗೂ ದ್ವಿಚಕ್ರ ವಾಹನ ಜಖಂಗೊಂಡಿದ್ದು, ಸಾರ್ವಜನಿಕ ಹಿತದೃಷ್ಠಿಯಿಂದ ಈ ದೂರನ್ನು ನೀಡಿರುವುದಾಗಿದೆ ಎಂಬಿತ್ಯಾದಿ.
Traffic South Police Station
ಪಿರ್ಯಾದುದಾರರು SOUKATH ಬಸ್ಸಿನ ಚಾಲಕರಾಗಿದ್ದು, ದಿನಾಂಕ: 15/02/2023 ರಂದು ತನ್ನ ಹೆಂಡತಿಯನ್ನು ಕರೆತರಲೆಂದು KA-20-EV-2947 ನೇ ಸ್ಕೂಟರಿನಲ್ಲಿ ಮನೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿರುವಾಗ ಸಮಯ ಸುಮಾರು 14-15 ಗಂಟೆಗೆ NH 66, ಗೋರಿಗುಡ್ಡೆ ಎಂಬಲ್ಲಿ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಎಕ್ಕೂರು ಕಡೆಯಿಂದ ಪಂಪ್ ವೆಲ್ ಕಡೆಗೆ ಏಕಮುಖ ರಸ್ತೆಯಲ್ಲಿ KA-19-ES-9052 ಮೊಟರ್ ಸೈಕಲ್ ಸವಾರ ಶಿವ ಎಂಬಾತನು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಯೂಟರ್ನ್ ಮಾಡುತ್ತಾ ಪಿರ್ಯಾದುದಾರರು ಸ್ಕೂಟರ್ ಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಫಿರ್ಯಾದಿದಾರರ ಬಲಕಾಲಿನ ಮೊಣಗಂಟಿಗೆ, ಬಲಕೈಯ ಮೊಣಗಂಟಿಗೆ, ತಲೆಯ ಬಲಬದಿಯ ಕೆನ್ನೆಗೆ ರಕ್ತ ಬರುವ ಗಾಯ, ಮೂಗಿಗೆ ರಕ್ತ ಬರುವ ಗಾಯವಾಗಿರುತ್ತದೆ. ಸ್ಕೂಟರ್ ಜಖಂಗೊಂಡಿದ್ದು, ಡಿಕ್ಕಿ ಪಡಿಸಿದ ಸ್ಕೂಟರ್ ಸವಾರನಿಗೂ ಗಾಯವಾಗಿರುತ್ತದೆ. ಕೂಡಲೇ ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪಿರ್ಯಾದುದಾರರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ.
Traffic South Police Station
ದಿನಾಂಕ 17-02-2023 ರಂದು ಪುರುಷೋತ್ತಮ್ ರವರು ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ KA-19-L-0854 ನೇದರಲ್ಲಿ ಪದವಿನಂಗಡಿ ಕಡೆಯಿಂದ ಯೆಯ್ಯಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 10.15 ಗಂಟೆಗೆ ಮೇರಿಹಿಲ್ ವಿಕಾಸ್ ಕಾಲೇಜ್ ಎದುರುಗಡೆ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಹೋಗುತ್ತಿದ್ದ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ UK-17-L-8506 ನೇದರ ಸವಾರ ವಿಕಾಸ್ ಯಾದವ್ ಎಂಬಾತನು ಮೋಟಾರ್ ಸೈಕಲನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗಿ ಪುರುಷೋತ್ತಮ್ ರವರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಎರಡು ಮೋಟಾರ್ ಸೈಕಲ್ ಸವಾರರು ಕಾಂಕ್ರೀಟ್ ರಸ್ತೆಗೆ ಬಿದ್ದು, ಪುರುಷೋತ್ತಮ್ ರವರ ತಲೆಗೆ ಗುದ್ದಿದ ಗಾಯವಾಗಿ ಕಿವಿಯಲ್ಲಿ ರಕ್ತ ಸೋರುತ್ತಿದ್ದು, ಅವರನ್ನು ಅಲ್ಲಿ ಸೇರಿದ ಜನರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನೊಂದಿಗೆ ಎ.ಜೆ ಆಸ್ಪತ್ರೆಗೆ ಹೋಗುವಂತೆ ಕಳುಹಿಸಿಕೊಟ್ಟಿದ್ದು, ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಪುರುಷೋತ್ತಮ್ ರವರು ಚಿಕಿತ್ಸೆ ಫಲಕಾರಿಯಾಗದೇ 16.20 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬಿತ್ಯಾದಿ
Mangalore West Traffic PS
ಪಿರ್ಯಾದಿದಾರರಾದ ಸಂದೀಪ್ ರವರು ಈ ದಿನ ದಿನಾಂಕ 17-02-2023 ರಂದು ಸಮಯ ಸುಮಾರು ಬೆಳಿಗ್ಗೆ 9.00 ಗಂಟೆಗೆ ಮಂಗಳೂರು ನಗರದ ಬಳ್ಳಾಲ್ ಬಾಗ್ ಕಡೆಯಿಂದ ಪಿವಿಎಸ್ ಕಡೆಗೆ ಹಾದು ಹೋಗುವ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬಂದು ಬಳ್ಳಾಲ್ ಬಾಗ್ ರಿಲಯನ್ಸ್ ಪೆಟ್ರೋಲ್ ಬಂಕ್ ಎದುರು ಟಿ ಎಂ ಎ ಪೈ ಹಾಲ್ ಕಡೆಗೆ ರಸ್ತೆ ದಾಟುತ್ತಿದ್ದಾಗ ಬಳ್ಳಾಲ್ ಬಾಗ್ ಕಡೆಯಿಂದ ಪಿವಿಎಸ್ ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ KA19-HH-2356 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರನು ನಿರ್ಲಕ್ಷ್ಯತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದ ಪರಿಣಾಮ ಬಲಕೈನ ಮೊಣಗೈ ಹಾಗೂ ತಲೆಯ ಬಲಭಾಗಕ್ಕೆ ಸಾಮಾನ್ಯ ಸ್ವರೂಪದ ಗಾಯವಾಗಿ ನಗರದ ವಿಜಯ ಕ್ಲಿನಿಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಅಪಘಾತ ವೆಸಗಿದ KA19-HH-2356 ದ್ವಿಚಕ್ರ ವಾಹನವನ್ನು ಅದರ ಸವಾರನು ಅಪಘಾತ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾರೆ ಎಂಬಿತ್ಯಾದಿ.
Traffic North Police Station
ಪಿರ್ಯಾದಿ Pradeep T R ರವರು ದಿನಾಂಕ: 16-02-2023 ರಂದು ಠಾಣಾ ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಾ ಸೂರಜ್ ಹೋಟೆಲ್ ಕಡೆಯಿಂದ ಕಡೆಯಿಂದ ಚೊಕ್ಕಬೆಟ್ಟು ಕಡೆಗೆ ಹೋಗುವ ರಸ್ತೆ ಬಳಿ ನಿಗದಿತ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿದ್ದ ಸಮಯ ಮದ್ಯಾಹ್ನ ಸುಮಾರು 2:30 ಗಂಟೆಗೆ KL-55-J-9360 ನಂಬ್ರದ ಮೋಟಾರ್ ಸೈಕಲಿನಲ್ಲಿ ಅದರ ಸವಾರನು ಹೆಲ್ಮೇಟ್ ಧರಿಸದೇ ಅಲ್ಲದೇ ಹಿಂಬದಿಯಲ್ಲಿ ತಲೆಗೆ ಹೆಲ್ಮಟ್ ಧರಿಸದ ಇಬ್ಬರು ವ್ಯಕ್ತಿಗಳನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ರಾಹೆ 66ರ ಕಡೆಯಿಂದ ಸೂರಜ್ ಹೋಟೆಲ್ ಆಗಿ ಚೊಕ್ಕಬೆಟ್ಟು ಕಡೆಯಿಂದ ಬೊಬ್ಬೆ ಹೊಡೆಯುತ್ತಾ ನಿರ್ಲಕ್ಷ್ಯತನದಿಂದ ಹಾಗೂ ಅಜಾಗರುಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸ್ಕೂಟರ್ ಸವಾರಿ ಮಾಡಿಕೊಂಡು ಬರುತ್ತಿದ್ದವರನ್ನು ಕಂಡು ನಿಗದಿತ ಸಮವಸ್ತ್ರದಲ್ಲಿದ್ದ ಫಿರ್ಯಾದಿದಾರರು ಸದ್ರಿ ಮೋಟಾರ್ ಸೈಕಲನ್ನು ನಿಲ್ಲಿಸಲು ಕೈ ಸನ್ನೆ ಮಾಡಿ ಸೂಚನೆ ನೀಡಿದರೂ ಸೂಚನೆಯನ್ನು ಧಿಕ್ಕರಿಸಿ ಹೋಗು ಹೋಗು ನಿಲ್ಲಿಸುವುದು ಬೇಡ ಎಂಬು ಪ್ರಚೋದನೆ ನೀಡುತ್ತಾ ಜಿಗ್ ಜಾಗ್ ರೈಡಿಂಗ್ ಮಾಡಿಕೊಂಡು ಮೋಟಾರ್ ಸೈಕಲನ್ನು ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.
Traffic North Police Station
ಪಿರ್ಯಾದಿ ಅರುಣ್ ಕುಮಾರ್ ರವರು ದಿನಾಂಕ: 16-02-2023 ರಂದು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಾ ರಾಹೆ 66ರ ಮುಕ್ಕಾ ಜಂಕ್ಷನ್ ಬಳಿ ನಿಗದಿತ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿದ್ದ ಸಮಯ ಸಂಜೆ ಸುಮಾರು 5:12 ಗಂಟೆಗೆ KA-19-HK-1986 ನಂಬ್ರದ ಸ್ಕೂಟರಿನಲ್ಲಿ ಅದರ ಸವಾರನು ಹೆಲ್ಮೇಟ್ ಧರಿಸದೇ ಅಲ್ಲದೇ ಹಿಂಬದಿಯಲ್ಲಿ ತಲೆಗೆ ಹೆಲ್ಮಟ್ ಧರಿಸದ ಇಬ್ಬರು ವ್ಯಕ್ತಿಗಳನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಮುಕ್ಕಾ ಜಂಕ್ಷನ್ ಕಡೆಯಿಂದ ಬೊಬ್ಬೆ ಹೊಡೆಯುತ್ತಾ ನಿರ್ಲಕ್ಷ್ಯತನದಿಂದ ಹಾಗೂ ಅಜಾಗರುಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸ್ಕೂಟರ್ ಸವಾರಿ ಮಾಡಿಕೊಂಡು ಬರುತ್ತಿದ್ದವರನ್ನು ಕಂಡು ನಿಗದಿತ ಸಮವಸ್ತ್ರದಲ್ಲಿದ್ದ ಫಿರ್ಯಾದಿದಾರರು ಸದ್ರಿ ಸ್ಕೂಟರನ್ನು ನಿಲ್ಲಿಸಲು ಕೈ ಸನ್ನೆ ಮಾಡಿ ಸೂಚನೆ ನೀಡಿದರೂ ಸೂಚನೆಯನ್ನು ಧಿಕ್ಕರಿಸಿ ಜಿಗ್ ಜಾಗ್ ರೈಡಿಂಗ್ ಮಾಡಿಕೊಂಡು ಸ್ಕೂಟರನ್ನು ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.
Traffic North Police Station
ಪಿರ್ಯಾದಿದಾರರು Vasanth Kumar ದಿನಾಂಕ 16-02-2023 ರಂದು ತನ್ನ ಬಾಬ್ತು KA-19-EX-6705 ನಂಬ್ರದ ಮೋಟಾರ್ ಸೈಕಲಿನಲ್ಲಿ ತನ್ನ ಮನೆಯಿಂದ ಹೊರಟು BASF ಕಂಪೆನಿಗೆ ಕೆಲಸಕ್ಕೆ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 06:00 ಗಂಟೆಗೆ ಹೊನ್ನಕಟ್ಟೆ ಜಂಕ್ಷನ್ ತಲುಪಿ ಹೊನ್ನಕಟ್ಟೆಯಿಂದ ಕಾನ ಕಡೆಗೆ ಹೋಗುವ ಸಲುವಾಗಿ ಮೋಟಾರು ಸೈಕಲಿನ ಬಲಭಾಗದ ಇಂಡಿಕೇಟರ್ ಹಾಕಿ ನಿಧಾನವಾಗಿ ಬಲಕ್ಕೆ ತಿರುಗಿಸುತ್ತಿದ್ದಂತೆ ಸುರತ್ಕಲ್ ಕಡೆಯಿಂದ KA-19-HD-7607 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಮೊಹಮ್ಮದ್ ಆಶಿಕ್ ಎಂಬಾತನು ದುಡುಕುತನ ಹಾಗೂ ನಿರ್ಕಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿನ ಮುಂಭಾಗ ಎಡಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ತಲೆಯ ಹಿಂಬದಿಯಲ್ಲಿ ಚರ್ಮ ಕಿತ್ತ ರಕ್ತಗಾಯ, ಎಡಕಣ್ಣಿನ ಬಳಿ ಮತ್ತು ಎಡಭುಜದಲ್ಲಿ ಗುದ್ದಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರಿನ SCS ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.
Traffic North Police Station
ಪಿರ್ಯಾದಿ Arun Kumar ದಿನಾಂಕ: 16-02-2023 ರಂದು ರೌಂಡ್ಸ್ ಮಾಡುತ್ತಾ ಚೇಳ್ಯಾರು ಖಂಡಿಕೆ ದೇವಸ್ಥಾನ ಕಡೆಯಿಂದ MRPL ಕಾಲೋನಿ ಹೋಗುವ ರಸ್ತೆ ಬಳಿ ನಿಗದಿತ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿದ್ದ ಸಮಯ ಮದ್ಯಾಹ್ನ ಸುಮಾರು 12:15 ಗಂಟೆಗೆ KA-20-EN-6430 ನಂಬ್ರದ ದ್ವಿಚಕ್ರ ವಾಹನದಲ್ಲಿ ಅದರ ಸವಾರನು ಹೆಲ್ಮೇಟ್ ಧರಿಸದೇ ಅಲ್ಲದೇ ಹಿಂಬದಿಯಲ್ಲಿ ತಲೆಗೆ ಹೆಲ್ಮಟ್ ಧರಿಸದ ಇಬ್ಬರು ವ್ಯಕ್ತಿಗಳನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಮುಕ್ಕಾ ಜಂಕ್ಷನ್ ಕಡೆಯಿಂದ ನಿರ್ಲಕ್ಷ್ಯತನದಿಂದ ಹಾಗೂ ಅಜಾಗರುಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸ್ಕೂಟರ್ ಸವಾರಿ ಮಾಡಿಕೊಂಡು ಬರುತ್ತಿದ್ದವರನ್ನು ಕಂಡು ನಿಗದಿತ ಸಮವಸ್ತ್ರದಲ್ಲಿದ್ದ ಫಿರ್ಯಾದಿದಾರರು ಸದ್ರಿ ದ್ವಿಚಕ್ರ ವಾಹನವನ್ನು ನಿಲ್ಲಿಸಲು ಕೈ ಸನ್ನೆ ಮಾಡಿ ಸೂಚನೆ ನೀಡಿದರೂ ಸೂಚನೆಯನ್ನು ಧಿಕ್ಕರಿಸಿ ರೈಡಿಂಗ್ ಮಾಡಿಕೊಂಡು ದ್ವಿಚಕ್ರ ವಾಹನವನ್ನು ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.
Traffic North Police Station
ಪಿರ್ಯಾದಿದಾರರು Pradeep T R ದಿನಾಂಕ: 16-02-2023 ರಂದು ರೌಂಡ್ಸ್ ಮಾಡುತ್ತಾ ಸೂರಜ್ ಹೋಟೆಲ್ ಕಡೆಯಿಂದ ಕಡೆಯಿಂದ ಚೊಕ್ಕಬೆಟ್ಟು ಕಡೆಗೆ ಹೋಗುವ ರಸ್ತೆ ಬಳಿ ನಿಗದಿತ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿದ್ದ ಸಮಯ ಮದ್ಯಾಹ್ನ ಸುಮಾರು 2:00 ಗಂಟೆಗೆ KA-19-HM-0550 ನಂಬ್ರದ ಮೋಟಾರ್ ಸೈಕಲಿನಲ್ಲಿ ಅದರ ಸವಾರನು ಹೆಲ್ಮೇಟ್ ಧರಿಸದೇ ಅಲ್ಲದೇ ಹಿಂಬದಿಯಲ್ಲಿ ತಲೆಗೆ ಹೆಲ್ಮಟ್ ಧರಿಸದ ಇಬ್ಬರು ವ್ಯಕ್ತಿಗಳನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ರಾಹೆ 66ರ ಕಡೆಯಿಂದ ಸೂರಜ್ ಹೋಟೆಲ್ ಆಗಿ ಚೊಕ್ಕಬೆಟ್ಟು ಕಡೆಯಿಂದ ನಿರ್ಲಕ್ಷ್ಯತನದಿಂದ ಹಾಗೂ ಅಜಾಗರುಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸ್ಕೂಟರ್ ಸವಾರಿ ಮಾಡಿಕೊಂಡು ಬರುತ್ತಿದ್ದವರನ್ನು ಕಂಡು ನಿಗದಿತ ಸಮವಸ್ತ್ರದಲ್ಲಿದ್ದ ಫಿರ್ಯಾದಿದಾರರು ಸದ್ರಿ ಮೋಟಾರ್ ಸೈಕಲನ್ನು ನಿಲ್ಲಿಸಲು ಕೈ ಸನ್ನೆ ಮಾಡಿ ಸೂಚನೆ ನೀಡಿದರೂ ಸೂಚನೆಯನ್ನು ಧಿಕ್ಕರಿಸಿ ರೈಡಿಂಗ್ ಮಾಡಿಕೊಂಡು ಮೋಟಾರ್ ಸೈಕಲನ್ನು ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.