ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic North Police Station                                 

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 18.02.2024 ರಂದು ಪಿರ್ಯಾದಿ Gayathri C.V ಇವರು ಹಾಗೂ ಅವರ ತಾಯಿ, ತಂಗಿ ಮತ್ತು ತಮ್ಮನ ಜೊತೆಯಲ್ಲಿ ಉಡುಪಿಯಲ್ಲಿ ಕಾರ್ಯಕ್ರಮ ಮುಗಿಸಿ ವಾಪಾಸು ಮಂಗಳೂರಿಗೆ KA-20-AB-4737 ನಂಬ್ರದ ಟೂರಿಸ್ಟ್ ಕಾರನ್ನು ಬಾಡಿಗೆ ಪಡೆದು, ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಾ ಸಮಯ ಸುಮಾರು ಸಂಜೆ 5:00 ಗಂಟೆಗೆ ಸುರತ್ಕಲ್ ಜಂಕ್ಷನ್ ಕಳೆದು ಶುಭಗಿರಿ ಹಾಲ್ ಎದುರು NH-66 ರಸ್ತೆಯಲ್ಲಿ ಬರುತ್ತಿದ್ದಂತೆ ಕಾರಿನ ಚಾಲಕನಾದ ವಿಕ್ರಮ ಎಂಬಾತನು ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಮಧ್ಯದ ಡಿವೈಡರ್ ನಲ್ಲಿ ಅಳವಡಿಸಿದ್ದ ಬೀದಿ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡು, ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ, ಪಿರ್ಯಾದಿದಾರರ ತಾಯಿ ವಿಜಯಲಕ್ಷ್ಮೀಯವರಿಗೆ  ಹಾಗೂ ಪಿರ್ಯಾದಿದಾರರ ತಂಗಿ ಸಂಧ್ಯಾಳಿಗೆ ಗುದ್ದಿದ ಗಾಯ, ಹಾಗೂ ತರಚಿದ ರೀತಿಯ ಗಾಯಗಳಾಗಿದ್ದು , ಪಿರ್ಯಾದಿದಾರರ ತಮ್ಮನಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ನಂತರ ಗಾಯಗೊಂಡವರನ್ನು ಸುರತ್ಕಲ್ ನ ಅರ್ಥವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Traffic North Police Station       

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 18.02.2024 ರಂದು ಪಿರ್ಯಾದಿದಾರರಾದ ಲಕ್ಷ್ಮೀಶ್ ಎಂಬುವರು ಅವರ ಮಗಳಾದ ಅಲಿಸ ಎಲ್ ಶೆಟ್ಟಿಗಾರ್(07) ಳನ್ನು ಪಿರ್ಯಾದಿದಾರರ ಅಳಿಯನಾದ ಸುಕೇಶ್ ಶೆಟ್ಟಿಗಾರ್ ರವರ ಬಾಬ್ತು KA-19-HA-7391 ನಂಬ್ರದ ಸ್ಕೂಟರಿನಲ್ಲಿ ಕುಳ್ಳಿರಿಸಿಕೊಂಡು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಸುರತ್ಕಲ್ ದಂತ ವೈದರಲ್ಲಿಗೆ ಬಂದು ವಾಪಾಸು ಮನೆ ಕಡೆಗೆ ಬರುತ್ತಾ ಸಂಜೆ ಸಮಯ ಸುಮಾರು 4:00 ಗಂಟೆಗೆ ಹೊಸಕಾಡು ಬಸ್ ಸ್ಟಾಪ್ ಬಳಿ ಭಂಡಾರಿ ಎಂಟರ್ ಪ್ರೈಸಸ್ ಅಂಗಡಿ ಎದುರುಗಡೆ ತಲುಪಿದಾಗ ಪಿರ್ಯಾದಿದಾರರ ಎದುರುನಿಂದ ಅಂದರೇ ಕಿನ್ನಿಗೋಳಿ ಕಡೆಯಿಂದ KA-19-HH-4080 ನಂಬ್ರದ ಬೈಕ್ ನ್ನು ಅದರ ಸವಾರ ನಯನ್ ಎಂಬುವರು, ಬೈಕಿನ ಹಿಂಬದಿಯಲ್ಲಿ ವಿಶಾಲ್ ಎಂಬುವರನ್ನು ಸಹ-ಸವಾರರನ್ನಾಗಿ ಕುಳ್ಳಿರಿಸಿಕೊಂಡು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಮಗಳು ಅಲಿಶ್ ಶೆಟ್ಟಿಗಾರ್ ಅಲ್ಲದೇ ಬೈಕನಲ್ಲಿದ್ದ ಇಬ್ಬರೂ ಕೂಡಾ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ತಲೆಯ ಹಿಂಬದಿ ರಕ್ತ ಗಾಯ, ಮುಖಕ್ಕೆ ತರಚಿದ ಗಾಯ ಹಾಗೂ ಹೊಟ್ಟೆಗೆ ಗುದ್ದಿದ ರೀತಿಯ ಗಾಯವಾಗಿದ್ದು, ಪಿರ್ಯಾದಿದಾರರ ಮಗಳು ಅಲಿಶಳಿಗೆ ತಲೆಯ ಹಿಂಭಾಗಕ್ಕೆ ಗುದ್ದಿದ ಗಾಯ ಹಾಗೂ ಹಣೆಯ ಬಲಭಾಗ ರಕ್ತಗಾಯವಾಗಿರುತ್ತದೆ. ಅಲ್ಲದೇ ಬೈಕನಲ್ಲಿದ್ದ ಇಬ್ಬರಿಗೂ ಮುಖಕ್ಕೆ ಹಾಗೂ ತಲೆಗೆ ಗಾಯವಾಗಿರುತ್ತದೆ. ಪಿರ್ಯಾದಿದಾರರ ಮಗಳನ್ನು ಕಿನ್ನಿಗೋಳಿ ಕನ್ಸೆಟಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮುಕ್ಕಾದ  ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು ಹಾಗೂ ಇನ್ನುಳಿದ ಮೂರು ಗಾಯಾಳಗಳನ್ನು ಚಿಕಿತ್ಸೆಯ ಬಗ್ಗೆ ಮುಕ್ಕಾದ  ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

 

Traffic South Police Station                                                    

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:14-02-2024 ರಂದು ಬೆಳಿಗ್ಗೆ ಪಿರ್ಯಾದಿ ABDUL SALAM ಇವರ ಮಕ್ಕಳಾದ ಮಹಮ್ಮದ್ ಮುಸ್ತಾಫ ಎಸ್ (11), ಫಾತಿಮಾ (9) , ಮಹಮ್ಮದ್ ಆಲಿ (7) ರವರು ಶಾಲೆಗೆ ತೆರಳುವ ಅಟೋ ರಿಕ್ಷಾ ನೊಂದಣಿ ನಂಬ್ರ KA-19-AD-6358 ರಲ್ಲಿ ರೆಹಮಾನಿಯಾ ಶಾಲೆಗೆ ತೆರಳಿದ್ದು ದಿನಾಂಕ:14-02-2024 ರಂದು ಅಟೋ ರಿಕ್ಷಾ ನೊಂದಣಿ ನಂಬ್ರ KA-19-AD-6358  ರಲ್ಲಿ ಪಿರ್ಯಾದಿದಾರರ ಮಕ್ಕಳಾದ ಮಹಮ್ಮದ್ ಮುಸ್ತಾಫ ಎಸ್ (11), ಫಾತಿಮಾ (9) , ಮಹಮ್ಮದ್ ಆಲಿ (7) ಇವರುಗಳನ್ನು ಕುಳ್ಳಿರಿಸಿಕೊಂಡು ಮನೆಯ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ಸಂಜೆ 4.00 ಗಂಟೆಗೆ ಉಚ್ಚಿಲ ರೆಹೆಮಾನಿಯಾ ಶಾಲೆಯ ಬಳಿಯಲ್ಲಿ ಆಟೋ ರಿಕ್ಷಾ ಚಾಲಕ ಹಬೀಬ್ ನು ತನ್ನ ಅಟೋ ರಿಕ್ಷಾವನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಚಲಾಯಿಸಿದ್ದರಿಂದ ಅಟೋ ರಿಕ್ಷಾದಲ್ಲಿ ಕುಳಿತಿದ್ದ ಪಿರ್ಯಾದಿದಾರರ  ಮಗ ಮಹಮ್ಮದ್ ಮುಸ್ತಾಫ ಎಸ್ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ಮತ್ತು ರಿಕ್ಷಾ ಚಾಲಕ ಹಬೀಬ್ ಉಪಚರಿಸಿಕೊಂಡಿದ್ದರು. ಪಿರ್ಯಾದಿದಾರರ ಮಗನಿಗೆ ತುಟಿಗೆ, ಮೂಗಿನ ಮೇಲ್ಬಾಗ, ಎಡ ಕಾಲಿನ ಕೋಲು ಕಾಲಿಗೆ, ಎಡ ಕೈಯ ಕಿರು ಬೆರಳಿಗೆ ತರಚಿದ ಗಾಯ, ಮೂರು ಹಲ್ಲುಗಳು ಕಿತ್ತು ಹೋಗಿದ್ದು  ನಂತರ  ಅಟೋ ರಿಕ್ಷಾದಲ್ಲಿ ಮನೆಗೆ ಕರೆದುಕೊಂಡು ಬಂದಿದ್ದು  ಮನೆಯಲ್ಲಿ ಅಪಘಾತದಿಂದ ಉಂಟಾದ ನೋವು ಹೆಚ್ಚಾಗಿದ್ದರಿಂದ ಚಿಕಿತ್ಸೆಯ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆ, ಪಳ್ನೀರ್ ಇಲ್ಲಿ ದಾಖಲಿಸಿಕೊಂಡಿರುವುದು ಎಂಬಿತ್ಯಾದಿ,

 

Traffic North Police Station                         

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ,ಪಿರ್ಯಾದಿ Halesh ಇವರ  ಅತ್ತೆಯ ಮಗನಾದ ಕಿರಣ ಎಂಬುವರನ್ನು ನಿನ್ನೆ ದಿನಾಂಕ 17-02-2024 ರಂದು ಸುರತ್ಕಲಿನ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದರನ್ನು ಈ ದಿನ ದಿನಾಂಕ 18.02.2024 ರಂದು ಶ್ರೀನಿವಾಸ ಆಸ್ಪತ್ರೆಯಿಂದ ಡಿಸ್-ಚಾರ್ಜ್ ಮಾಡಿಕೊಂಡು KA-20-4099 ನಂಬ್ರದ ಆಂಬ್ಯುಲೇನ್ಸ್ ನಲ್ಲಿ ಪಿರ್ಯಾದಿದಾರರು, ಪಿರ್ಯಾದಿದಾರರ ಅತ್ತೆ ಶಾರದಾಬಾಯಿ, ಅವರ ಮಗ ಕಿರಣ, ಗೆಳಯ ರಾಜು ನಾಯ್ಕ ರವರನ್ನು ಕುಳ್ಳಿರಿಸಿಕೊಂಡು ಪಿರ್ಯಾದಿದಾರರ ಗೆಳಯ ಚರಣ್ ಎಂಬಾತನು ಆಂಬ್ಯುಲೇನ್ಸ್ ನ್ನು ಚಲಾಯಿಸಿಕೊಂಡು ಶ್ರೀನಿವಾಸ ಆಸ್ಪತ್ರೆಯಿಂದ ಶಿವಮೊಗ್ಗ ಕಡೆಗೆ ಹೊರಟು ಸಂಜೆ ಸಮಯ ಸುಮಾರು 4:30 ಗಂಟೆಗೆ ಮುಲ್ಕಿ ಬಪ್ಪನಾಡು ದೇವಸ್ಥಾನದ ಎದುರುಗಡೆ ತಲುಪುತ್ತಿದ್ದಂತೆ ಬಪ್ಪನಾಡು ದೇವಸ್ಥಾನದ ಒಳಗಡೆ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ KA-19-MN-0568 ನಂಬ್ರದ ಕಾರಿನ ಚಾಲಕರಾದ ಸತೀಶ್ ಅಂಚನ್ ಎಂಬುವರು ಯಾವುದೇ ಸೂಚನೆಯನ್ನು ನೀಡದೇ ಒಮ್ಮಲೇ ನಿರ್ಲಕ್ಷ್ಯತನದಿಂದ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಗೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರ ಹೋಗುತ್ತಿದ್ದ ಅಂಬ್ಯಲೇನ್ಸ್ ಗೆ ಡಿಕ್ಕಿ ಹೊಡೆದು, ಅಂಬ್ಯಲೇನ್ಸ್ ನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರ ಅತ್ತೆ ಶಾರದಾಬಾಯಿ ರವರಿಗೆ ಎಡಕೈ ಭುಜಕ್ಕೆ, ಮೂಳೆ ಮುರಿತದ ಗಾಯ, ಸೊಂಟಕ್ಕೆ, ಕಾಲಿಗೆ ಗುದ್ದಿದ ರೀತಿಯ ಗಾಯವಾಗಿರುತ್ತದೆ. ಇನ್ನುಳಿದವರಿಗೆ ಯಾವುದೇ ರೀತಿಯ ಗಾಯವಾಗಿರುವುದಿಲ್ಲ.ನಂತರ ಚಿಕಿತ್ಸೆಯ ಬಗ್ಗೆ ಮುಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಇನ್ನೊಂದು ಆಂಬ್ಯಲೇನ್ಸ್ ನಲ್ಲಿ ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟಿರುವುದಾಗಿದೆ ಎಂಬಿತ್ಯಾದಿ

 

Traffic South Police Station                        

ಪಿರ್ಯಾದಿ MAHAMMED AREES ಇವರು  ದಿನಾಂಕ 18-02-2024 ರಂದು ತನ್ನ ತಮ್ಮನ ಬಾಬ್ತು KA-19-HN-0481 ನಂಬ್ರದ ಸ್ಕೂಟರಿನಲ್ಲಿ ಮಂಗಳೂರಿಗೆ ತೆರಳಿ ಮಧ್ಯಾಹ್ನ ಕಣ್ಣೂರು ಕಡೆಗೆ ಸವಾರಿ ಮಾಡಿಕೊಂಡು ಹೊರಟು ಸಮಯ ಸುಮಾರು 1-30 ಗಂಟೆಗೆ ಅಡ್ಯಾರ್ ಕಣ್ಣೂರು ಬಳಿ ರಾ.ಹೆ 73 ರಲ್ಲಿ ಮಿನರ್ವ ಕಾಲೇಜು ಬಳಿಗೆ ತಲುಪುತ್ತಿದ್ದಂತೆಯೇ KA-21-A-8180 ನಂಬ್ರದ ಪಿಕ್ ಆಪ್ ವಾಹನವನ್ನು ಪಿರ್ಯಾದಿದಾರರ ಮುಂದುಗಡೆಯಿಂದ ಅಂದರೆ ಏಕಮುಖ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಬಂದು ಪಿಕ್ ಆಪ್ ವಾಹನದ ಚಾಲಕ  ಅನಿಲ್  ಡಿಸೋಜಾ ರವರು ದುಡುಕುತನ ಹಾಗು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ  ಸ್ಕೂಟರ್ ಸಮೇತಾ ರಸ್ತೆಗೆ  ಬಿದ್ದ ಪರಿಣಾಮ  ಗುದ್ದಿದ ತರಚಿದ ರಕ್ತಗಾಯವಾಗಿರುತ್ತದೆ. ಅಪಘಾತವಾದ ಕೂಡಲೇ ಸಾರ್ವಜನಿಕರು ಮತ್ತು ಅಪಘಾತಪಡಿಸಿದ ಪಿಕ್ ಆಪ್ ಚಾಲಕ ಗಾಯಾಳುವನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕದ್ರಿ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 20-02-2024 10:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080