ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

CEN Crime PS

ಪ್ರಕರಣದ ಸಾರಾಂಶವೆನಂದರೆ ದಿನಾಂಕ 18-03-2024 ರಂದು ಉಳ್ಳಾಲ ತಾಲೂಕು ಅಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮೈದಾನದಲ್ಲಿ ಆರೋಪಿಗಳಾದ 1) ಸದಕತ್.ಯು @ ಶಾನ್ ನವಾಜ್,2) ಮಹಮ್ಮದ್ ಅಶ್ಫಕ್ @ ಅಶ್ಫಾ ಎಂಬವರಿಂದ  ಮಾರಾಟ  ಮಾಡಲು.  ತಮ್ಮ ವಶದಲ್ಲಿರಿಸಿದ್ದ ಮಾದಕ ವಸ್ತುವಾದ ಕೊಕೇನ್ ಒಟ್ಟು 34 ಗ್ರಾಂ ತೂಕದ  ಕೊಕೇನ್ ಅಂದಾಜು  2,72,000/- ಮೌಲ್ಯದ (Cocaine)  ಮಾದಕ ವಸ್ತು, ಸಿಲ್ವರ್ ಡಿಜಿಟಲ್ ತೂಕ ಮಾಪನ, ಹಾಗೂ ಸುಮಾರು 1,00,000/- ಮೌಲ್ಯದ KA- 19- HL-2021 ನೇ ಗ್ರೇ ಬಣ್ಣದ ಹೊಂಡಾ ಅಕ್ಟಿವಾ ಸ್ಕೂಟರ್ ಒಟ್ಟು ರೂ 3,99,060/- ಸೊತ್ತನ್ನು ಸ್ವಾಧೀನಪಡಿಸಿಕೊಂಡು ಆರೋಪಿ ಗಳ ಸೂಕ್ತ ಕಾನೂನು ಕ್ರಮ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

 

CEN Crime PS

ಪ್ರಕರಣದ ಸಂಕ್ಪಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Deepa M Karkera ಇವರು  ಮಂಗಳೂರು ನಗರದ ಸುರತ್ಕಲ್ ನಿವಾಸಿಯಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ರಿಸ್ಪ್ಶನಿಸ್ಟ್ ಆಗಿ  ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 04-03-2023 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರು ಮನೆಯಲ್ಲಿದ್ದ ಸಮಯ ಅವರ  ಮೊಬೈಲ್ ಗೆ,  7085321920 ನೇದರಿಂದ ಯಾರೋ ಅಪರಿಚಿತ ವ್ಯಕ್ತಿ ತಾನು ಡೆಲ್ಲಿ ಕಸ್ಟಮ್ಸ್ ನಿಂದ ಮಾತನಾಡುವುದಾಗಿ ಪಿರ್ಯಾದಿದಾರರಿಗೆ ತಿಳಿಸಿ ಹಾಗೂ  ಪಿರ್ಯಾದಿದಾರರಿಗೆ ಒಂದು ಪಾರ್ಸೆಲ್ ಇರುವುದಾಗಿ ತಿಳಿಸಿದ್ದು ಅದರಲ್ಲಿ  ವಿದೇಶಿ ಹಣ ಇರುವುದಾಗಿ ತಿಳಿಸಿರುತ್ತಾರೆ. ಹಾಗೂ ಪಿರ್ಯಾದಿದಾರರ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದುಕೊಂಡಿರುತ್ತಾರೆ. ನಂತರ ಪಿರ್ಯಾದಿದಾರರಿಗೆ ಬಂದಿರುವ ಪಾರ್ಸೆಲ್ ಅನ್ನು ಭದ್ರತೆ  ಮಾಡಬೇಕಾಗಿರುವ ಸಲುವಾಗಿ ಮೊದಲಿಗೆ 97,000/-ರೂ ಹಣವನ್ನು ಸುರಕ್ಷತಾ ಭದ್ರತೆಗಾಗಿ ಪಾವತಿಸಬೇಕೆಂದು ಪಿರ್ಯಾದಿದಾರರಿಗೆ ತಿಳಿಸಿದ್ದು ಪಿರ್ಯಾದಿದಾರರಲ್ಲಿ ಅಷ್ಟು ಹಣ ಇಲ್ಲವೆಂದು ತಿಳಿಸಿದ ಕಾರಣ ಅಪರಿಚಿತ ವ್ಯಕ್ತಿಯು 20,000/ ರೂಗಳನ್ನು ಪಾವತಿಸುವಂತೆ ತಿಳಿಸಿದಾಗ ಪಿರ್ಯಾದಿದಾರರು ತಮ್ಮ ಬ್ಯಾಂಕ್ ಆಪ್ ಬರೋಡ ಖಾತೆ ಯಿಂಧ ದಿನಾಂಕ:05-03-2024 ರಂದು 20,000/- ರೂ ಪಾವತಿಸಿರುತ್ತಾರೆ. ನಂತರ ಇನ್ನೂ ಹೆಚ್ಚಿನ ಹಣವನ್ನು ಪಾವತಿಸುವಂತೆ ಪಿರ್ಯಾದಿದಾರಿಗೆ ಒತ್ತಾಯಿಸಿದಾಗ  ಪಿರ್ಯಾದಿದಾರರು  ಗೋಕರ್ಣನಾಥ ಕೋ-ಆಪರೇಟಿವ್  ಬ್ಯಾಂಕ್ ನ ಬಾಬ್ತು ಉಳಿತಾಯ  ಖಾತೆ ಯಿಂದ  ದಿನಾಂಕ:05-03-2024 ರಿಂದ 11-03-2024 ರವರೆಗೆ ಹಂತ ಹಂತವಾಗಿ ಒಟ್ಟು 7,07,000/- ರೂಗಳನ್ನು ಅಪರಿಚಿತ ವ್ಯಕ್ತಿಯು ನೀಡಿದ ಬೇರೆ ಬೇರೆ ಖಾತೆಗಳಿಗೆ ಪಾವತಿಸಿರುವುದಾಗಿದೆ.ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಡೆಲ್ಲಿ ಕಸ್ಟಮ್ಸ್ ಹೆಸರಿನಲ್ಲಿ ಪರಿಚಯಸಿಕೊಂಡು ಪಿರ್ಯಾದಿದಾರರಿಂದ ಒಟ್ಟು 7,27,000/- ರೂಗಳನ್ನು ಆನ್ ಲೈನ್ ಮುಖಾಂತರ ಪಾವತಿಸಿಕೊಂಡು ಆನ್ ಲೈನ್ ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

 

Traffic North Police

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 17-03-2024 ರಂದು ಪಿರ್ಯಾದಿ Anand G Bangera ಇವರು ಎಂದಿನಂತೆ ಸಾಯಂಕಾಲ ವಾಕಿಂಗ್ ಗೆ ಮನೆಯಿಂದ ಮಾಲೆಮಾರಿಗೆ ಹೋಗುವ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ನಡೆದುಕೊಂಡು ಮಾಲೆಮಾರು ಕಡೆಗೆ ಹೋಗುತ್ತಿದ್ದಂತೆ ಸಾಯಂಕಾಲ ಸುಮಾರು 7:20 ಗಂಟೆಗೆ ವಿಷ್ಣು ಗೀತಾ ಕಾಂಪ್ಲೇಕ್ಸ್ ಎದುರುಗಡೆ ಬರುತ್ತಿದ್ದಂತೆ ಪಿರ್ಯಾದಿಯ ಹಿಂದಿನಿಂದ ಅಂದರೆ ಕೊಂಚಾಡಿ ಜಂಕ್ಷನಿಂದ ಮಾಲೆಮಾರು ಕಡೆಗೆ KA-19-EM-6811 ನಂಬ್ರದ ದ್ವಿಚಕ್ರ ವಾಹನವನ್ನು ಅದರ ಸವಾರನಾದ ಸುಜಿತ್ ಕುಡ್ವ ಎಂಬುವರು ದುಡುಕುತನ ಹಾಗೂ ಅಜಾಗುರಕತೆಯಿಂದ ರಸ್ತೆಯ ತೀರಾ ಎಡಬದಿಗೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿಯ ಹಿಂಬದಿಗೆ ಅಂದರೇ ಬೆನ್ನಿನ ಕೆಳಗಿನ ಭಾಗಕ್ಕೆ ಡಿಕ್ಕಿಪಡಿಸಿದ್ದು, ಇದರ ಪರಿಣಾಮ ಪಿರ್ಯಾದಿದಾರರು ಹಾಗೂ ದ್ವಿಚಕ್ರ ವಾಹನಸವಾರ ವಾಹನ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಬೆನ್ನು ಮೂಳೆಯ ಕೆಳಭಾಗಕ್ಕೆ ಗುದ್ದಿದ ರೀತಿಯ ನೋವು ಅಲ್ಲದೇ ಬಲಕಾಲಿನ ಅಲ್ಲಲ್ಲಿ ಚರ್ಮ ತರಚಿದ ರೀತಿಯ ಗಾಯವಾಗಿರುತ್ತದೆ. ನಂತರ ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಎ,ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

 

Traffic South Police Station                                                    

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿದಾರರಾದ ಪ್ರಸಾದ್ ರವರು ದಿನಾಂಕ 18/03/2024 ರಂದು ಮದ್ಯಾಹ್ನ ಮನೆಯಲ್ಲಿದ್ದಾಗ ಪಿರ್ಯಾದಿದಾರರ ಮೊಬೈಲ್ ನಂಬ್ರ ಗೆ  ಅವರ ಅಕ್ಕನ ಮಗ ವಿಜಯ್ ನ ಮೊಬೈಲ್ ನಂಬ್ರದಿಂದ ಮೊಹಮ್ಮದ್ ರಾಯೀಸ್ ಎಂಬವರು ಕರೆ ಮಾಡಿ ಈ ಮೊಬೈಲ್ ನಂಬ್ರ ಇರುವ ಯುವಕನ KA-19-EE-4463 ನೇ ನಂಬ್ರದ ಸ್ಕೂಟರ್ ಕಲ್ಲಾಪು ವಿನ ಬಳಿ ರಸ್ತೆಯಲ್ಲಿ ಸ್ಕಿಡ್ ಆಗಿ ಡಾಮಾರು ರಸ್ತೆಗೆ  ಬಿದ್ದು ಯುವಕನ ತಲೆಯ ಹಿಂಬದಿಗೆ ರಕ್ತ ಗಾಯವಾಗಿದ್ದು, ಗಾಯಾಳನ್ನು  ಮೊಹಮ್ಮದ್ ರಾಯೀಸ್ ರವರು ಆಟೋರಿಕ್ಷಾವೊಂದರಲ್ಲಿ ಸಹರಾ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದು ಪಿರ್ಯಾದಿದಾರರು ಸಹರಾ ಆಸ್ಪತ್ರೆಯ ಬಳಿ ಹೋದಾಗ ಗಾಯಾಳು ವಿನ ತಲೆಯ ಹಿಂಬದಿಗೆ ತೀವ್ರ ಸ್ವರೂಪದ ಗಾಯವಾಗಿರುವುದರಿಂದ ಆತನನ್ನು ಅಂಬುಲೆನ್ಸ್ ವೊಂದರಲ್ಲಿ ಚಿಕಿತ್ಸೆಯ ಬಗ್ಗೆ ದೇರಳಕಟ್ಟೆಯ ಯೆನಾಪೋಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ದೇರಳಕಟ್ಟೆಯ ಯೆನಾಪೋಯಾ ಆಸ್ಪತ್ರೆಗೆ ಹೋದಾಗ ವೈದ್ಯರು ಪಿರ್ಯಾದಿದಾರರ ಅಕ್ಕನ ಮಗ ಗಾಯಾಳು ವಿಜಯ್ ಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡುತ್ತಿದ್ದು, ಗಾಯಾಳು ವಿಜಯ್ ತಲೆಯ ಹಿಂಬದಿಗೆ ರಕ್ತ ಗಾಯವಾಗಿರುತ್ತದೆ, ಆಸ್ಪತ್ರೆಯಲ್ಲಿದ್ದ ಮೊಹಮ್ಮದ್ ರಾಯೀಸ್ ರವರಲ್ಲಿ ವಿಚಾರಿಸಿದಲ್ಲಿ ವಿಜಯ್ ಮಂಗಳೂರು ಕಡೆಯಿಂದ ತೊಕ್ಕೋಟು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ KA-19-EE-4463 ನೇ ನಂಬ್ರದ ಸ್ಕೂಟರ್ ನ್ನು ದುಡುಕುತನ ಹಾಗೂನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಧ್ಯಾಹ್ನ ಸುಮಾರು 3.00 ಗಂಟೆಯ ಸುಮಾರಿಗೆ ಕಲ್ಲಾಪುವಿನ ಅಜ್ವತ್ ಬಟ್ಟೆಯಂಗಡಿ ಪಕ್ಕದಲ್ಲಿರುವ ನಿರ್ಮಾಣ ಹಂತದ ಬಿಲ್ಡಿಂಗ್ ಬಳಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಗಾಯಗೊಂಡಿರುವುದಾಗಿದೆ ಎಂಬಿತ್ಯಾದಿ

 

Bajpe PS

ಈ ಪ್ರಕರಣದ ಸಾರಾಂಶವೆನೆಂದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ  ಭೂ ವಿಜ್ಞಾನಿಯಾದ ಪಿರ್ಯಾದಿ K M Nagabhushan ಇವರು ದಿನಾಂಕ 14.03.2024 ರಂದು ಖನಿಜ ರಕ್ಷಕರಾದ ರೋಹಿತಾಶ್ವ ಎಂಬುವರೊಂದಿಗೆ ಸಂಜೆ 7.00 ಗಂಟೆಗೆ ಅಕ್ರಮ ಗಣಿಗಾರಿಕೆ ನೆಡೆಯುತಿದ್ದ ಸ್ಥಳವಾದ ಮಂಗಳೂರು ತಾಲೂಕು ಕಂದಾವರ ಗ್ರಾಮದ ಸರ್ವೆ ನಂ 140 ಕ್ಕೆ ಹೋದಾಗ ಸ್ಥಳದಲ್ಲಿ ಕಲ್ಲು ತೆಗೆಯುವ ಕೆಲಸ ನೆಡೆಸುತಿದ್ದ ಆರೋಪಿತರಾದ ನಿತೀಶ್ ಮತ್ತು ಶರಣ ರಾವ್ ರವರು ಪಿರ್ಯಾದಿದಾರರಿಗೆ ಅಡ್ಡಗಟ್ಟಿ ನಿಂತು ಸರ್ಕಾರಿ ಕೆಲಸ ನಿರ್ವಹಿಸಲು ತೊಂದರೆ ನೀಡಿದಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ಮಾಡುತ್ತಿದ್ದನ್ನು ವಿಡಿಯೋ ಮಾಡುತಿದ್ದ ಖನಿಜ ರಕ್ಷಕರಾದ ರೋಹಿತಾಶ್ವ ರವರಿಂದ ರೂ 24000 ಮೌಲ್ಯದ  ಮೊಬೈಲ್ ಫೋನ್ ನ್ನು ಕಿತ್ತು ನೆಲಕ್ಕೆ ಹೊಡೆದು ಜಖಂಗೊಳಿಸಿರುವುದಲ್ಲದೆ ಪಿರ್ಯಾದಿದಾರರು ಕರ್ತವ್ಯ ನಿರ್ವಹಿಸದಂತೆ ಜೀವ ಬೆದರಿಕೆ ಹಾಕಿರುವುದಾಗಿದೆ. ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 20-03-2024 09:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080