ಅಭಿಪ್ರಾಯ / ಸಲಹೆಗಳು

Crime Reports: CEN Crime PS Mangaluru City

ಪಿರ್ಯಾದಿ ಮುಲ್ಕಿ ಎಸ್.ಬಿ.ಐ  ಪಾವಂಜೆ ಬ್ರಾಂಚಿನಲ್ಲಿ  ಎಸ್.ಬಿ.ಐ ಖಾತೆ ಸಂಖ್ಯೆ  ನೇ ದನ್ನು ಹೊಂದಿರುತ್ತಾರೆ.  ದಿನಾಂಕ 09-04-2023 ರಂದು ಪಿರ್ಯಾದಿದಾರರ ಗಂಡ ರವರು ಪುಣೆಯಲ್ಲಿರುವ ತನ್ನ ಮಗನ ಮನೆಯ ಕೀಯನ್ನು ಪಾರ್ಸೆಲ್ ಮಾಡುವರೇ ಗೂಗಲ್ ನಲ್ಲಿ DTDC COURIER COMPANY ಯನ್ನು ಸಂಪರ್ಕಿಸುವರೇ ಹುಡುಕಾಡಿದ್ದು ಸದ್ರಿಯವರಿಗೆ 9827698553ನೇ ಮೊಬೈಲ್ ನಂಬ್ರವು ದೊರೆತಿದ್ದು ಪಿರ್ಯಾದಿದಾರರು ಸದ್ರಿ ವ್ಯಕ್ತಿಯಲ್ಲಿ ಮಾತನಾಡಿದಲ್ಲಿ ಸದ್ರಿ ವ್ಯಕ್ತಿಯು ತಾನು DTDC COURIER COMPANY ಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ತಿಳಿಸಿ https://courierservice8188.wixsite.com/courier-service ಎಂಬ ಲಿಂಕ್ ಒಂದನ್ನು ಕಳುಹಿಸಿ ಸದ್ರಿ ಆಪ್ ಮೂಲಕ ರೂ.5 ನ್ನು ವರ್ಗಾಯಿಸುವರೇ ತಿಳಿಸಿರುವಂತೆ ಪಿರ್ಯಾದಿದಾರರ ಗಂಡ ಪಿರ್ಯಾದಿದಾರರ  ಮೊಬೈಲ್ ನಂಬ್ರ  ನೇ ದರಿಂದ ರೂ.5/- ಗೂಗಲ್ ಪೇ ಮಾಡಿರುತ್ತಾರೆ. ತದನಂತರ ಒಂದು ವಾರ ಕಳೆದರು ಸದ್ರಿ DTDC COURIER COMPANY ಯವರು ಪಾರ್ಸೆಲ್ ತೆಗೆದುಕೊಂಡು ಹೋಗಲು ಬಂದಿರುವುದಿಲ್ಲ. ದಿನಾಂಕ 15-04-2023 ರಂದು ಪಿರ್ಯಾದಿದಾರರ ಎಸ್.ಬಿ.ಐ ಖಾತೆ  ನೇದಕ್ಕೆ ಪರ್ಸನಲ್ ಲೋನ್ ಒಂದು ಮಂಜೂರಾಗಿದ್ದು ಆ ದಿನ ಸಂಜೆ ಸಮಯ ಸುಮಾರು 5.00 ಗಂಟೆಗೆ ಸರಿಯಾಗಿ ಪಿರ್ಯಾದಿದಾರರು ತನ್ನ  ಖಾತೆಯನ್ನು ಪರಿಶೀಲಿಸಿದಲ್ಲಿ ಸದ್ರಿಯವರಿಗೆ ತನ್ನ ಖಾತೆಯಿಂದ ರೂ.71999 ಹಾಗೂ ರೂ.500 ಒಟ್ಟು 72444/- ಕಡಿತಗೊಂಡಿರುವುದು ಕಂಡು ಬರುತ್ತದೆ. ಪಿರ್ಯಾದಿದಾರರು ಗೂಗಲ್ ನಲ್ಲಿ ತನ್ನನ್ನು ತಾನು DTDC COURIER COMPANY ಯಿಂದ ಮಾತನಾಡುವುದಾಗಿ ಪರಿಚಯಿಸಿಕೊಂಡ 9827698553ನೇ ನಂಬ್ರವನ್ನು ಹೊಂದಿರುವ ವ್ಯಕ್ತಯು ಕಳುಹಿಸಿದ ಲಿಂಕ್ ನಲ್ಲಿ ತನ್ನ ಎಸ್.ಬಿ.ಐ ಖಾತೆ ಸಂಖ್ಯೆ  ಖಾತೆಯ ವಿವರವನ್ನು ನೀಡಿದ್ದುದರಿಂದ  ರೂ.72444/- ಅನಧಿಕೃತವಾಗಿ ವರ್ಗಾವಣೆಯಾಗಿರುತ್ತದೆ. ಅಪರಿಚಿತ ವ್ಯಕ್ತಿಯ ತಾನು ಡಿ.ಟಿ.ಡಿ.ಸಿ ಕೊರಿಯರ್ ಕಂಪೆನಿಯವನು ನಂಬಿಸಿ ಪಿರ್ಯಾದಿದಾರರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

Ullal PS

ದಿನಾಂಕ  18.04.2023 ರಂದು ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಗ್ರಾಮದ ಮಾಡೂರು ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಪವನ್ ರಾಜ್(28) ವಾಸ-ಮರಿಯಣ್ಣಪಾಳ್  ಲೇ-ಓಟ್ ಸಾಯಿ ಮಂದಿರದ ಬಳಿ ಮಾಡೂರು ಕೋಟೆಕಾರ್ ರವರು ಯಾವುದೋ ಮಾದಕ ವಸ್ತುವನ್ನು ಸೇವಿಸಿ ನಶೆಯನ್ನು ಹೊಂದಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಭಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಬೆಳಿಗ್ಗೆ 10-50 ಗಂಟೆಗೆ ಸದ್ರಿ ಸ್ಥಳಕ್ಕೆ ಧಾವಿಸಿದ್ದು  ಮಾದಕ ವಸ್ತುವನ್ನು ಸೇವಿಸಿ ನಶೆಯನ್ನು ಹೊಂದಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವವರನ್ನು ವಶಕ್ಕೆ ಪಡೆದು ನಂತರ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆರೋಪಿ ಮಾದಕ ವಸ್ತು ಗಾಂಜಾ ಸೇವನೆ ಬಗ್ಗೆ ಟೊಕ್ಸಿಕೋಲಜಿ ಎನಲೈಸಿಸ್ ರಿಪೋರ್ಟ್ ನ್ನು  ಪಡೆದುಕೊಂಡು ನಂತರ ಆರೋಪಿ ವಿರುದ್ಧ ದಾಖಲಾದ ಪ್ರಕರಣದ ಸಾರಾಂಶ.

 

 

Crime Reports: CEN Crime PS Mangaluru City

ಪಿರ್ಯಾದಿ ದಿನಾಂಕ ಮಾರ್ಚ್ 29, 2023 ರಂದು ಪಿರ್ಯಾದಿದಾರರ ವಾಟ್ಸಾಪ್ ನಂಬರ್ ಗೆ Laila ಎಂಬ ವ್ಯಕ್ತಿ (+91 93622 82843) ಚಾಟ್ ಮಾಡಿ ಆನ್ಲೈನ್ ನಲ್ಲಿ ಪಾರ್ಟ್ ಟೈಂ ಜಾಬ್ ಇದೆ ಎಂದು ಹೇಳಿ ಯೂಟ್ಯೂಬ್ ಚಾನಲ್ ಲಿಂಕ್ ಕಳುಹಿಸಿ ಅದನ್ನು subscribe ಮಾಡಿದ್ರೆ  ರೂ.50/- ಮತ್ತು ಇನ್ನೊಂದು ಯೂಟ್ಯೂಬ್ ಚಾನಲ್ ಲಿಂಕ್ ಕಳುಹಿಸಿ ಅದನ್ನು subscribe ಮಾಡಿದ್ರೆ ರೂ.50/- ಎಂದು ನಂತರ ಮೂರನೇ ಟಾಸ್ಕ್ ಅಂತ ಟೆಲಿಗ್ರಾಂ app ನಲ್ಲಿ, ರಿಸೆಪ್ಷನಿಸ್ಟ್ ( Sarah George @Sarah85202 ) ಸಂಪರ್ಕಿಸಿವಂತೆ ಚಾಟ್ ಮಾಡಿರುತ್ತಾರೆ,ಇದನ್ನು ನಂಬಿದ ಪಿರ್ಯಾದಿದಾರು  ಟೆಲಿಗ್ರಾಂ ಆ್ಯಪ್ ನಲ್ಲಿ ರಿಸೆಪ್ಷನಿಸ್ಟ್ ( Sarah George @Sarah85202 ) ರವರನ್ನು ಸಂಪರ್ಕಿಸಿ subscribe ಮಾಡಿದ ನಂತರ ಪಿರ್ಯಾದಿದಾರರ ಬ್ಯಾಂಕ್ ಖಾತೆ ನಂಬರ್ ಕೇಳಿ ಒಟ್ಟು ಮೊತ್ತ ರೂ.150/- ಪೇಟಿಎಂ ಬ್ಯಾಂಕ್ ಖಾತೆ ಗೆ ಜಮಾ ಮಾಡುತ್ತಾಳೆ ಮತ್ತು ಪಿರ್ಯಾದಿದಾರರನ್ನು ಟೆಲಿಗ್ರಾಂ ಪಾರ್ಟ್ ಟೈಮ್ ಜೊಬ್ ಗ್ರೂಪ್ ಗೆ ಸೇರಿಸುತ್ತಾಳೆ. ( Group Name: S715 AKS India part time job ).Telegram Group Name: S715 AKS India part time job ನಲ್ಲಿ ದಿನಕ್ಕೆ 25 ಟಾಸ್ಕ್ ಇದ್ದು, ಅದರಲ್ಲಿ 20 unpaid ಟಾಸ್ಕ್ ಮತ್ತು 5 prepaid ಟಾಸ್ಕ್ ಇರುತ್ತದೆ.Unpaid ಟಾಸ್ಕ್ ನಲ್ಲಿ ಯೂಟ್ಯೂಬ್ ಚಾನಲ್ subscribe link ಕೊಟ್ಟು ಅದನ್ನು subscribe ಮಾಡುವಂತೆ ಪಿರ್ಯಾದಿದಾರರಿಗೆ ಹೇಳುತ್ತಾರೆ ಮತ್ತು ಪ್ರತಿ ಯೂಟ್ಯೂಬ್ ಚಾನಲ್ ಸಬ್ಸ್ಕ್ರಿಬ್ ಮಾಡಿದ್ದಕ್ಕೆ ರೂ. 20/- ರಂತೆ ಒಟ್ಟು 20 YouTube channel subscribe ಮಾಡಿದ್ದಕ್ಕೆ ರೂ.400/- ರಂತೆ ಲೆಕ್ಕ ಹಾಕಲಾಗುತ್ತದೆ.ಹೀಗೆ ಒಟ್ಟು ಮೊತ್ತ ವನ್ನು ಯಾವಗ ಬೇಕು ಅವಾಗ ಪಿರ್ಯಾದಿದಾರರ ಬ್ಯಾಂಕ್ ಖಾತೆ ಗೆ ಜಮಾ ಮಾಡುವ ಅವಕಾಶ ನೀಡಿರುತ್ತಾರೆ.ದಿನಾಂಕ 02 ಏಪ್ರಿಲ್ 2023 ರಂದು Paid ಟಾಸ್ಕ್ ನಲ್ಲಿ ಮೊದಲಿಗೆ ( ಹೊಸಬರಿಗೆ ಒಮ್ಮೆ ಮಾತ್ರ) 1000/- ಕ್ಕೆ 30% profit ಅಂತ ಹೇಳಿ, ಟಾಸ್ಕ್ ಕೊಟ್ಟಿರುತ್ತಾರೆ, ಪಿರ್ಯಾದಿದಾರರು ರೂ.1000/- ಪಾವತಿಸಿದ ನ೦ತರ ಇನ್ನೊಬ್ಬ ವ್ಯಕ್ತಿ Alexander Wilson @Alexander975 ಅನ್ನು ಸ೦ಪರ್ಕಿಸಲು ಹೇಳಿದಳು. ಆ ವ್ಯಕ್ತಿ  Tutor / ಸಹಾಯಕ ಅಗಿದ್ದು Kila1.com ಎ೦ಬ ವೆಬ್ ಸೈಟ್ ನಲ್ಲಿ ನನ್ನ ಖ್ಹಾತೆ ತೆರೆದು Cryptocurrency ದಲ್ಲಿ ಹೂಡಿಕೆ ಮಾಡಿಸಿ ಲಾಭ ಲೆಕ್ಕ ಮಾಡಿ ರಿಸೆಪ್ಷನಿಸ್ಟ್ ಗೆ ವರದಿ ನೀಡಿದ ನ೦ತರ ಪಿರ್ಯಾದಿದಾರರ ಬ್ಯಾಂಕ್ ಖಾತೆ ಗೆ ಜಮಾ ಮಾಡಿರುತ್ತಾರೆ.ದಿನಾಂಕ ಏಪ್ರಿಲ್ 04, 2023, ರಂದು ರೂ.5000/- ಗಳ prepaid ಟಾಸ್ಕ್ ( ಗ್ರೂಪ್ ಟಾಸ್ಕ್) ಮಾಡಿ 30% profit ಎಂದು ಪಿರ್ಯಾದಿದಾರರಿಗೆ ಒತ್ತಾಯಿಸುತ್ತಾರೆ, ಅದೇ ರೀತಿ ಏಪ್ರಿಲ್ 06, 2023 ರಂದು ರೂ.5000/- ಗಳ ಗ್ರೂಪ್ ಟಾಸ್ಕ್ ಮಾಡಲು ಹೇಳಿ ಈ ಗ್ರೂಪ್ ನಲ್ಲಿ ಮೊದಲು ರೂ.5000/- ನಂತರ 2 ನೇ ಸಬ್ ಟಾಸ್ಕ್ : ರೂ.28600/- 3 ನೇ ಸಬ್ ಟಾಸ್ಕ್ : ರೂ.86500/- 4 ನೇ ಸಬ್ ಟಾಸ್ಕ್ : ರೂ.42000/- ಏಪ್ರಿಲ್ 07 ರಂದು ಈ ಮೂರನೇ ಟಾಸ್ಕ್ ಪೂರ್ಣ ಗೊಳಿಸುವಲ್ಲಿ ಒಬ್ಬ ಗ್ರೂಪ್ ಸದಸ್ಯ ತಪ್ಪು ಮಾಡಿದ್ದರಿಂದ ಗ್ರೂಪ್ ನ ಎಲ್ಲಾ ಸದಸ್ಯರ ಹಣ ಲಾಕ್ ಆಗಿರುತ್ತದೆ ಹಾಗೂ ಅದನ್ನು ಬಿಡಿಸಲು ಮತ್ತೆ ರೂ.1,26,500/- ಗೆ Alexander Wilson @Alexander975 ಎ೦ಬಾತ ಪಿರ್ಯಾದಿದಾರರಿಗೆ ಹಣ ಬೇಡಿಕೆ ಮುಂದಿಟ್ಟು ವಂಚಿಸಿದ್ದಾರೆ. ಈ ರೀತಿಯಾಗಿ ದಿನಾಂಕ 06-04-2023 ರಿಂದ 07-04-2023 ರವರೆಗೆ ಹಂತ ಹಂತವಾಗಿ ಪಿರ್ಯಾದಿದಾರ ಕೆನಾರ ಬ್ಯಾಂಕ್ ಖಾತೆ ಸಂಖ್ಯೆ- ಮತ್ತು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆ ಸಂಖ್ಯೆ- ನೇದರಿಂದ  ಒಟ್ಟು ರೂ.1,62,100/- ರೂಗಳನ್ನು ವರ್ಗಾಯಿಸಿಕೊಂಡಿರುವುದಾಗಿದೆ, ಲೈಲಾ ಹಾಗೂ ಅಲೆಕ್ಸಾಂಡರ್ ವಿಲ್ಸನ್ ಮತ್ತು ಸಾರಾ ಜಾರ್ಜ್ ಎಂಬುವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಿರುವುದಾಗಿದೆ.

CEN Crime PS Mangaluru City

ಪಿರ್ಯಾದಿ  ದಿನಾಂಕ 13-04-2023 ರಂದು ಪಿರ್ಯಾದಿದಾರರ ವಾಟ್ಸಾಪ್ ನಂಬರ್ ಗೆ Chakrika Patel Oxedent Company ಎಂಬ ವ್ಯಕ್ತಿ (+84587320810) ಚಾಟ್ ಮಾಡಿ ಆನ್ಲೈನ್ ನಲ್ಲಿ ಪಾರ್ಟ್ ಟೈಂ ಜಾಬ್ ಇದೆ ಎಂದು ಹೇಳಿ, ಯೂಟ್ಯೂಬ್ ಚಾನಲ್ ಲಿಂಕ್ ಕಳುಹಿಸಿ ಅದನ್ನು like ಮಾಡಿದ್ರೆ ರೂ.50/-  ರಂತೆ ಯೂಟ್ಯೂಬ್ ಚಾನಲ್ ಲಿಂಕ್ ಕಳುಹಿಸಿ ರೂ.150/- ನ್ನು ಪಿರ್ಯಾದಿದಾರರ ಕೋಟಕ್ ಮಹಿಂದ್ರಾ ಕಂಪೆನಿಯ ಅಕೌಂಟ್ ನಂಬ್ರ: ನೇದಕ್ಕೆ ಕಳುಹಿಸಿರುತ್ತಾರೆ.  ಮೂರನೇ ಟಾಸ್ಕ್ ಅಂತ ಟೆಲಿಗ್ರಾಂ app ನಲ್ಲಿ, ರಿಸೆಪ್ಷನಿಸ್ಟ್  Kiran Rao @aaa0408 ಸಂಪರ್ಕಿಸಿವಂತೆ ಚಾಟ್ ಮಾಡಿರುತ್ತಾರೆ. ಇದನ್ನು ನಂಬಿದ ಪಿರ್ಯಾದಿದಾರು ಟೆಲಿಗ್ರಾಂ ಆ್ಯಪ್ ನಲ್ಲಿ ರಿಸೆಪ್ಷನಿಸ್ಟ್ Kiran Rao ರವರನ್ನು ಸಂಪರ್ಕಿಸಿ Telegram Group Name: Makemoney ನಲ್ಲಿ ದಿನಕ್ಕೆ 20 ಟಾಸ್ಕ್ ಇದ್ದು, ಅದರಲ್ಲಿ 15 youtube like ಟಾಸ್ಕ್ ಮತ್ತು 5 investment ಟಾಸ್ಕ್ ಇರುತ್ತದೆ. ಟಾಸ್ಕ್ ನಲ್ಲಿ ಯೂಟ್ಯೂಬ್ ವಿಡಿಯೋ ಕೊಟ್ಟು ಅದನ್ನು like ಕೊಟ್ಟರೆ ರೂ.50/- ರಂತೆ ಕೊಡುತ್ತಾರೆ. 1 ಟಾಸ್ಕ್ ಮಿಸ್ ಮಾಡಿದರೆ ರೂಪಾಯಿ 25 ರಂತೆ ರೂಪಾಯಿ ಕಟ್ ಮಾಡುತ್ತಾರೆ. Investment ಟಾಸ್ಕ್ ನಲ್ಲಿ ಮೊದಲಿಗೆ ( ಹೊಸಬರಿಗೆ ಒಮ್ಮೆ ಮಾತ್ರ) 1000/- ಕ್ಕೆ 30% profit ಅಂತ ಹೇಳಿ, ಟಾಸ್ಕ್ ಕೊಟ್ಟಿರುತ್ತಾರೆ, ಪಿರ್ಯಾದಿದಾರರು ರೂ.1000/- ಪಾವತಿಸಿದ ನ೦ತರ ಇನ್ನೊಬ್ಬ ವ್ಯಕ್ತಿ Abhivesha  @Abhivesha01 +1(707)408-6488 ಎಂಬಾಕೆಯು tutor ಸಹಾಯಕ ಅಗಿದ್ದು ಚ್ಯಾಟ್ ಮಾಡಿ  ವೆಬ್ ಸೈಟ್ ನಲ್ಲಿ ಪಿರ್ಯಾದಿದಾರರ ಖ್ಹಾತೆ ತೆರೆದು ಹೂಡಿಕೆ ಮಾಡಿಸಿ ರಿಜಿಸ್ಟರ್ ಮಾಡಲು ತಿಳಿಸುತ್ತಾರೆ. ನಂತರ ಏಪ್ರಿಲ್ 15, 2023, ರಂದು 3000/- ರೂ ನಂತೆ ಹಾಕಲು ತಿಳಿಸಿದಂತೆ  ಟಾಸ್ಕ್ ( ಗ್ರೂಪ್ ಟಾಸ್ಕ್) ಮಾಡಿ 30% profit ಎಂದು ಪಿರ್ಯಾದಿದಾರರಿಗೆ ಒತ್ತಾಯಿಸುತ್ತಾರೆ, ಇದನ್ನು ನಂಬಿದ ಪಿರ್ಯಾದಿದಾರರು ದಿನಾಂಕ 15-04-2023 ಮತ್ತು  16-04-2023 ರವರೆಗೆ ತಾನು ಹೊಂದಿರುವ ಕೋಟಕ್ ಮಹಿಂದ್ರಾ ಖಾತೆ ಸಂಖ್ಯೆ-, ಕೆನರಾ ಬ್ಯಾಂಕ್ ಖಾತೆ ನಂಬ್ರ:  ಮತ್ತು ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆ ಸಂಖ್ಯೆ- ನೇದರಿಂದ ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗೆ ಮತ್ತು ಐಎಂಪಿಸಿ ಮತ್ತು ಯುಪಿಐ ಮೂಲಕ ಒಟ್ಟು ರೂ.4,73,000/- ರೂಗಳನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿ ಮೋಸ ಹೋಗಿರುವುದಾಗಿದೆ.

CEN Crime PS Mangaluru City

ಪಿರ್ಯಾದಿ ದಿನಾಂಕ 10-04-2023 ರಂದು ಪಿರ್ಯಾದಿದಾರರ ಮೊಬೈಲ್ ನಂಬ್ರ:  ನೇದಕ್ಕೆ ಮೊಬೈಲ್ ನಂಬ್ರ: 9046400347 ನೇದರಿಂದ ಕರೆ ಮಾಡಿ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ಬ್ಲಾಕ್ ಆಗಿರುವುದಾಗಿಯೂ 24 ಗಂಟೆಯೊಳಗೆ ಕೆವೈಸಿ ಅಪ್ ಡೇಟ್ ಮಾಡಬೇಕೆಂದು ತಿಳಿಸಿ ಮೆಸೇಜ್ ಬಂದಿರುತ್ತದೆ. ನಂತರ ಸದ್ರಿ ವ್ಯಕ್ತಿಯು ಪಿರ್ಯಾದಿದಾರರಿಗೆ ಕರೆ ಮಾಡಿ ಬ್ಯಾಂಕ್ ಮೆನೇಜರ್ ಎಂದು ತಿಳಿಸಿ ಒಟಿಪಿ ಶೇರ್ ಮಾಡುವಂತೆ ತಿಳಿಸಿದಂತೆ ಪಿರ್ಯಾದಿದಾರರು ತಿಳಿಸಿರುತ್ತಾರೆ. ಪಿರ್ಯಾದಿದಾರರು ಒಟಿಪಿ ನೀಡಿದ ಕೂಡಲೇ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ನಂಬ್ರ:  ನೇದರಿಂದ ರೂಪಾಯಿ 30,677/- ಅನಧಿಕೃತವಾಗಿ ವರ್ಗಾವಣೆಯಾಗಿರುತ್ತದೆ. ಅಪರಿಚಿತ ವ್ಯಕ್ತಿಯ ತಾನು ಬ್ಯಾಂಕ್ ಮೆನೇಜರ್ ಎಂದು ನಂಬಿಸಿ ಪಿರ್ಯಾದಿದಾರರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ. 

Mangalore Rural PS

ಪಿರ್ಯಾದಿ Ismail ದಿನಾಂಕ: 16-04-2023 ರಂದು ಬೆಳಿಗ್ಗೆ 05-00 ಗಂಟೆಗೆ ತನ್ನ ಬಾಬ್ತು ಪಲ್ಸರ್ ಬೈಕ್ ಕೆಎ 19 ಹೆಚ್.ಡಿ. 1833 ನೇದರಲ್ಲಿ ವಳಚ್ಚಿಲ್ ಜುಮ್ಮಾ ಮಸೀದಿಗೆ ನಮಾಜ್ ಮಾಡಲು ಬಂದು ಬೈಕನ್ನು ಮಸೀದಿಯ ಕಂಪೌಂಡ್ ಒಳಗಡೆ ನಿಲ್ಲಿಸಿ ಬೈಕಿನ ಕೀಯನ್ನು ಅದರಲ್ಲಿಯೇ ಬಿಟ್ಟು ನಮಾಜ್ ಮಾಡಲು ಮಸೀದಿಯ ಒಳಗಡೆ ಹೋಗಿ ನಮಾಜ್ ಮುಗಿಸಿ ವಾಪಸ್ ಬಂದು  ನೋಡಿದಾಗ ಬೈಕ್ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇದ್ದು ಯಾರೋ ಅದನ್ನು ವಳಚ್ಚಿಲ್ ರೈಲ್ವೆ ಗೇಟ್ ಬಳಿಯ ಅಲ್ತಾಫ್ ನು ಕಳವು ಮಾಡಿಕೊಂಡು ಹೋಗಿರುವ ಸಂಶಯವಿದ್ದು, ಕಳವು ಮಾಡಿರುವ ಬೈಕನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರು ಎಂಬಿತ್ಯಾದಿ ಕಳುವಾದ ಬೈಕಿನ ಮೌಲ್ಯ ಅ.ಕಿ 70,000/- ಆಗಬಹುದು.

 

Moodabidre PS

ಪಿರ್ಯಾದಿ Sri Mahesh Chandra ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರ(201) ದ ಚುನಾವಣಾಧಿಕಾರಿಯಾಗಿದ್ದು, ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಶ್ರೀ ಮೋಹನ ಕೋಟ್ಯಾನ್ ರವರು ಚುನಾವಣಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ “ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯ ಬಿ.ಜೆ.ಪಿ ಯ ಅಭ್ಯರ್ಥಿಯಾದ ಶ್ರೀ ಉಮಾನಾಥ ಕೋಟ್ಯಾನ್ ರವರು ತನ್ನ ಪಕ್ಷದ  ಪದಾಧಿಕಾರಿಯಾದ ಅಮರ್ ಶೆಟ್ಟಿಯವರ ಮೂಲಕ ರೂ 50,000/- ಹಣವನ್ನು ಕಾಂಗ್ರೇಸ್ ಪಕ್ಷದ ಸದಸ್ಯರಾದ ರಾಜೇಶ್ ಶೆಟ್ಟಿ ಎಂಬವರ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಹಣದ ಆಮಿಷ ತೋರಿಸಿ ಬಿ.ಜೆ.ಪಿ ಗೆ ಸೇರಲು ಒತ್ತಾಯ ಮಾಡುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ”  ಎಂಬಿತ್ಯಾದಿ.

Kankanady Town PS

ದಿನಾಂಕ 17-04-2023 ರಂದು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ತೆಯಲ್ಲಿ ದಾಖಲಾಗಿದ್ದ ಪಿರ್ಯಾದಿ Filomena Rodrigues  ಕೆಂಬಾರು, ಆಳಪೆ ಗ್ರಾಮ, ಮಂಗಳೂರಿನವರಾಗಿದ್ದು, ಮನೆವಾರ್ತೆ ಕೆಲಸ ಮಾಡಿಕೊಂಡಿದ್ದು. ಪಿರ್ಯಾದುದಾರರು ಸುಮಾರು 47 ವರ್ಷಗಳಿಂದ  ಸಿರೀಲ್ ನೋರೊನ್ಹ ಎಂಬುವರ  ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿರುವುದಾಗಿದೆ ಹಾಗೂ ಸುಮಾರು 46 ವರ್ಷಗಳ ಹಿಂದೆ ಸಿರೀಲ್ ನೋರೊನ್ಹ ರವರ ಹೆಂಡತಿ ಮತ್ತು ಮಕ್ಕಳು ಅವರನ್ನು ಬಿಟ್ಟು ಹೋದ ನಂತರ ಅವರ ಆರೈಕೆಯನ್ನು ಮಾಡಿಕೊಂಡಿರುವುದಾಗಿದೆ. ಸಿರೀಲ್ ನೋರೊನ್ಹ ರವರ ಬಾಬ್ತು ಅವರ ಮನೆಯನ್ನು ಸಂತ ಆಂತೋಣಿ ಆಶ್ರಮ, ಜೆಪ್ಪು, ಮಂಗಳೂರು ಹಾಗೂ ಸುಮಾರು 1 ಎಕರೆಯಷ್ಟು ಜಾಗವನ್ನು ಪಿರ್ಯಾದುದಾರರ ಹೆಸರಿಗೆ ವಿಲುನಾಮೆ ಮಾಡಿರುತ್ತಾರೆ. ದಿನಾಂಕ 25-03-2023 ರಂದು ಸಿರೀಲ್ ನೋರೊನ್ಹ ರವರು ಮೃತಪಟ್ಟಿದ್ದು, ದಿನಾಂಕ 28-03-2023 ರಂದು ಅಂತ್ಯಕ್ರಿಯೆಯೆ ಕಾರ್ಯಕ್ರಮದಲ್ಲಿ ಮೃತರ ಹೆಂಡತಿ, ಮಕ್ಕಳು ಮತ್ತು ಸೊಸೆಯಂದಿರು ಬಾಗವಹಿಸಿ ಅಂತ್ಯಕ್ರಿಯೆ ನೇರವೆರಿಸಿ, ಮೃತರು ಮತ್ತು ಪಿರ್ಯಾದುದಾರರು ವಾಸವಿದ್ದ ಮನೆಗೆ ಬಂದು ಉಳಿದುಕೊಂಡಿರುವುದಾಗಿದೆ. ದಿನಾಂಕ 16-04-2023 ರಂದು ಸಂಜೆ ಸುಮಾರು 5:30 ಗಂಟೆಗೆ ಪಿರ್ಯಾದುದಾರರು ತೋಟಕ್ಕೆ ನೀರನ್ನು ಬಿಟ್ಟು, ಮನೆಯ ಒಳಗಡೆ ಬರುವಾಗ ಮೃತ ಸಿರೀಲ್ ನೋರೊನ್ಹ ಮಗ ಆಲ್ವೀನ್ ನೋರೊನ್ಹ ಮತ್ತು ಅವರ ಹೆಂಡತಿ ಪ್ಲೋರೀನ್ ನೋರೊನ್ಹ ಎಂಬುವರು ತಡೆದು ನಿಲ್ಲಿಸಿ, ಮನೆಯ ಒಳಗಡೆ ಹೋಗದಂತೆ ತಡೆದು ಎಡೆಕೆನ್ನೆಗೆ ಕೈಯಿಂದ ಹೊಡೆದು ನಂತರ ಅಲ್ಲಿಗೆ ರೀನಾ ನೋರೊನ್ಹಾ, ಪ್ರದೀಪ್ ಸಿಂಗ್ ಮತ್ತು ಇನ್ನೊಬ್ಬರು ಬಂದು, ಎಲ್ಲರೂ ಒಟ್ಟಾಗಿ ಪಿರ್ಯಾದುದಾರರ ಕುತ್ತಿಗೆಗೆ ಕೈಹಾಕಿ ಹೊರಗಡೆ ತಳ್ಳಿದ್ದರಿಂದ ಪಿರ್ಯಾದುದಾರರ ಎಡ ಕಿವಿಯಿಂದ ರಕ್ತ ಬಂದಿದ್ದು, ಕುತ್ತಿಗೆ, ಭುಜ ಮತ್ತು ಮುಖದ ಮೇಲೆ ನೋವುಂಟಾಗಿದ್ದರಿಂದ ಚಿಕಿತ್ಸೆ ಪಡೆಯುವರೇ ಫಾದರ್ ಮುಲ್ಲರ್ ಆಸ್ಪತ್ರಗೆ ತೆರಳಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಮೃತ ಸಿರೀಲ್ ನೊರೊನ್ಹಾ ರವರು ಮನೆಯನ್ನು ಆಶ್ರಮಕ್ಕೆ ಹಾಗೂ ಜಾಗವನ್ನು ಪಿರ್ಯಾದುದಾರರ ಹೆಸರಿಗೆ ವಿಲುನಾಮೆ ಮಾಡಿಸಿರುವುದೇ ಕಾರಣವಾಗಿಟ್ಟುಕೊಂಡು ಆಲ್ವೀನ್ ನೋರೊನ್ಹ ಮತ್ತು ಅವರ ಹೆಂಡತಿ ಪ್ಲೋರೀನ್ ನೋರೊನ್ಹ, ರೀನಾ ನೋರೊನ್ಹ ಮತ್ತು ಅವರ ಸ್ನೇಹಿತ ಪ್ರದೀಪ್ ಸಿಂಗ್ ಹಾಗೂ ಇನ್ನೂಬ್ಬರು ಸೇರಿಕೊಂಡು ಪಿರ್ಯಾದುದಾರರಿಗೆ ಹಲ್ಲೆ ನಡೆಸಿ ಮನೆಯಿಂದ ಹೊರಗಡೆ ದೋಡಿ ಹಾಕಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

 

                      

 

ಇತ್ತೀಚಿನ ನವೀಕರಣ​ : 21-08-2023 12:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080