ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

 

Mangalore West Traffic PS                

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ 17-04-2024 ರಂದು ಪಿರ್ಯಾದಿದಾರರಾದ ತುಕ್ಕಯ್ಯನ್ ರವರ ತಾಯಿ ಪಚ್ಚಿಯಮ್ಮಲ ರವರು ಮಂಗಳೂರು ನಗರದ ಧಕ್ಕೆಯಲ್ಲಿರುವ ಕೆ ಎಫ್ ಡಿ ಸಿ ಐಸ್ ಫ್ಲಾಂಟ್ ನ ಎದುರು ಸಾರ್ವಜನಿಕ ರಸ್ತೆ ದಾಟುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ  07;30  ಗಂಟೆಗೆ ಹಳೆ ಧಕ್ಕೆ ಕಡೆಯಿಂದ ಹೊಸ ಧಕ್ಕೆ ಕಡೆಗೆ ಕೆ ಎ-19-ಎಡಿ-2414ನೇ ಗೂಡ್ಸ್ ಟೆಂಪೋ  ಚಾಲಕ ಅಬೂಬ್ಬಕ್ಕರ್ ಇರ್ಫಾನ್ ರವರು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಚ್ಚಿಯಮ್ಮಲ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ರಸ್ತೆಗೆ ಬಿದ್ದು ಬೆನ್ನಿನ ಭಾಗಕ್ಕೆ ತೀವ್ರ ಸ್ವರೂಪದ ಗುದ್ದಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ನಗರದ ಕೆ ಎಂ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

 

 

Mangalore West Traffic PS                

ಈ ಪ್ರಕರಣದ ಸಾರಾಂಶವೇನೆಂದರೆ ಫಿರ್ಯಾದಿ VIVEKANANDA  ಇವರು ದಿನಾಂಕ 17-04-2024 ರಂದು ರಾತ್ರಿ ಬಲ್ಲಾಳ್ ಬಾಗ್ ಬಳಿ ಇರುವ ಇನ್ ವೆಂಜರ್ ಕಂಪನಿಯ ಎದುರುಗಡೆ ಸಾರ್ವಜನಿಕ ಮುಖ್ಯ ರಸ್ತೆಯ ಬದಿಯಲ್ಲಿ ಫಿರ್ಯಾದಿದಾರ ಕೆ ಎ-19-ಎಂಬಿ-5347ನೇ ಕಾರನ್ನು  ನಿಲ್ಲಿಸಿದ್ದು , ಮಣ್ಣಗುಡ್ಡೆ ಕಡೆಯಿಂದ ಬಲ್ಲಾಳ್ ಬಾಗ್ ಕಡೆಗೆ ಸಮಯ ಸುಮಾರು ರಾತ್ರಿ 10;30 ಗಂಟೆಗೆ ಸಾರ್ವಜನಿಕ ರಸ್ತೆಯಲ್ಲಿ ಕೆ ಎ-19-ಎಂ ಕೆ-8477 ನೇದರ ಚಾಲಕ ರಾಕೇಶ್ ಕಾಮತ್ ಎಂಬುವವರು  ಫಿರ್ಯಾದಿದಾರರು ನಿಲ್ಲಿಸಿದ್ದ ಕಾರಿಗೆ ಹಿಂಬದಿಯಿಂದ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಪರಿಣಾಮ  ಫಿರ್ಯಾದಿದಾರರ ಕಾರಿನ ಎಡಬದಿಯ ಎರಡು ಡೋರ್  ಹಿಂಬದಿ ಮತ್ತು ಮುಂಬದಿ ಟೈರ್ ಗಳು ಹಾಗೂ ಟೈಲ್ ಲೈಟ್ ಜಖಂ ಗೊಂಡಿರುತ್ತದೆ ಎಂಬಿತ್ಯಾದಿ

 

Mangalore East Traffic PS         

ಪಿರ್ಯಾದಿದಾರರಾದ  ಹರೀಶ್ ಪ್ರಾಯ 39  ವರ್ಷ ರವರು ನಿನ್ನೆ ದಿನ ದಿನಾಂಕ 17-04-2024 ರಂದು ರಾತ್ರಿ 21:00 ಗಂಟೆ ಸುಮಾರಿಗೆ ತನ್ನ ಮನೆಯಾದ ಮಹಾಕಾಳಿ ಪಡ್ಪು ಕಡೆಯಿಂದ  ತಮ್ಮ ಬಾಬ್ತು ಸ್ಕೂಟರ್ ನೊಂದಣಿ ಸಂಖ್ಯೆ: KA-19-HN-7729 ನೇಯದನ್ನು ಚಲಾಯಿಸಿಕೊಂಡು ನಂದಿಗುಡ್ಡೆ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 21:30 ಗಂಟೆಗೆ ಮಾರ್ಗನ್ ಗೇಟ್ ,ಮಾರ್ನಮಿಕಟ್ಟೆ ಸರ್ಕಲ್ ತಿರುಗಿಕೊಂಡು ಬಲಬದಿಗೆ ತಿರುಗಿಸಿ ನಂದಿಗುಡ್ಡೆ ಕಡೆಗೆ ಹೋಗುತ್ತಿದಂತೆ ನಂದಿಗುಡ್ಡೆ ಕಡೆಯಿಂದ KL-62-E-2117 ನಂಬ್ರದ ಮೋಟಾರ್ ಸೈಕಲ್ ನ್ನು ಅದರ ಸವಾರನಾದ ಅಭಿಷೇಕ್ ಎಂಬಾತನು ಸಹ ಸವಾರನ್ನು ಕುಳ್ಳಿರಿಸಿಕೊಂಡು ಮಾರ್ನಮಿಕಟ್ಟ ಸರ್ಕಲ್ ನ್ನು ಬಳಸದೇ ಸರ್ಕಲ್ ನಾ ಬಲ ಬದಿಯಿಂದ ನಿರ್ಲಕ್ಷತನದಿಂದ  ಚಲಾಯಿಸಿಕೊಂಡು  ಪಿರ್ಯಾದಿದಾರರ ಸ್ಕೂಟರರಿಗೆ ಡಿಕ್ಕಿಪಡಿಸಿದ ಪರಿಣಾಮ  ಪಿರ್ಯಾದಿದಾರರು ಮತ್ತು ಅಪಘಾತ ಪಡಿಸಿದ ಮೋಟಾರ್ ಸೈಕಲ್ ನ್ನು ಸವಾರ ಮತ್ತು ಸಹ ಸವಾರರು ಕೂಡಾ ವಾಹನ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದ ಪರಣಾಮ ಪಿರ್ಯಾದಿದಾರಿಗೆ ಬಲಕಾಲಿನ ಮೂಳೆ ಮುರಿತದ ಗಂಭೀರ ಸ್ವರೂಪಪದ ಗಾಯಾವಾಗಿದ್ದು KMC ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ ಅಪಘಾತ ಪಡಿಸಿದ ಮೋಟಾರ ಸೈಕಲ್ ಸವಾರ ಮತ್ತು ಸಹಸವಾರನಿಗೂ ಕೂಡಾ ಸಣ್ಣಪುಟ್ಟ ಗಾಯಾಳಾಗಿದ್ದು ಜಿಲ್ಲಾ ಸರ್ಕಾರಿ ವೆನಲಾಕ್ ಅಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ ಎಂಬಿತ್ಯಾದಿ

 

Traffic South Police Station                        

ಪಿರ್ಯಾದಿದಾರರಾದ ಉಬೈದ್ (33) ರವರು  ದಿನಾಂಕ 18-04-2024 ರಂದು ಮದ್ಯಾಹ್ನ 3-40  ಗಂಟೆಗೆ ಕೊಡಕಲ್ ನಲ್ಲಿರುವ ಯು ಚಾಯ್ಸ್ ಎಂಬ ಶಾಫ್ ಎದುರಿನ  ರಾ.ಹೆ.73  ರಲ್ಲಿ  ರಸ್ತೆ ದಾಟುತ್ತಿರುವ ಸಮಯ KA-19-HE-1075  ನೇ ನಂಬ್ರದ ಬೈಕ್ ಸವಾರನಾದ ಪ್ರಜ್ವಲ್ ಮ್ಯಾಕ್ಸಿಂ ಕ್ರಾಸ್ತಾ  ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ  ಡಾಮಾರು  ರಸ್ತೆಗೆ ಬಿದ್ದಿದ್ದು, ಪಿರ್ಯಾದುದಾರರ ಎಡ ತಲೆಗೆ ಚರ್ಮ ಹರಿದ ರಕ್ತಗಾಯ, ಎಡಭುಜಕ್ಕೆ ಗುದ್ದಿದ ಗಾಯ , ಹಾಗೂ ತರಚಿದ ಗಾಯ ಮತ್ತು ಬಲಕಾಲಿನ ಹೆಬ್ಬೆರಳಿಗೆ ತೆರಚಿದ ರಕ್ತ ಗಾಯ ಹಾಗೂ ಎಡ ಕೆನ್ನೆಯಲ್ಲಿ ಗುದ್ದಿದ ನಮೂನೆಯ ಗಾಯವಾಗಿದ್ದು ಗಾಯಾಳು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ  ಎಂಬಿತ್ಯಾದಿ

 

Mulki PS


ಪಿರ್ಯಾದಿ Shashikala ಇವರ ಮಗನಾದ ಕಿಶಾನ್ ಕೊಟ್ಯಾನ್ ಎಂಬಾತನು ಮನೆಯಲ್ಲಿ ಮಲಗಿದ್ದವನು ದಿನಾಂಕ 17-04-2024 ರಂದು ಬೆಳಗ್ಗೆ 10.15 ಗಂಟೆಗೆ ಪಿರ್ಯಾದಿದಾರರು ಮನೆಯಿಂದ ರೇಶನ್ ತರಲು ಹೊರಟು ವಾಪಸ್ಸು ಸುಮಾರು 11.00 ಗಂಟೆಗೆ ವಾಪಸ್ಸು ಮನೆಗೆ ಬಂದಾಗ ಪಿರ್ಯಾದಿದಾರರ ಮಗ ಮನೆಯಲ್ಲಿ ಇರುವುದಿಲ್ಲ ನೆರೆಕೆರೆಯವರಲ್ಲಿ ಕೇಳಿದಾಗ ರಸ್ತೆಯ ಕಡೆಗೆ ನಡೆದುಕೊಂಡು ಹೋದನೆಂದು ತಿಳಿಸಿರುತ್ತಾರೆ ಆತನ ಸ್ಕೂಟರ್, ಪರ್ಸ್ ಮತ್ತು ಮೊಬೈಲ್ ಮನೆಯಲ್ಲಿಯೆ ಇದ್ದು ,ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

 

Bajpe PS

 

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ದಿನಾಂಕ 17.04.2024 ರಂದು ರಾತ್ರಿ ಪಿರ್ಯಾದಿ Jakariya Shahik ಇವರು  ಮನೆಗೆ ಹೋಗುತ್ತಾ ರಾತ್ರಿ ಸುಮಾರು 08.30 ಗಂಟೆಗೆ ಅಡ್ಡೂರು ಗ್ರಾಮದ ಕಾಜಿಲ ಎಂಬಲ್ಲಿ ತಲುಪಿದಾಗ ಪಿರ್ಯದಾದಿದಾರರ ಮುಂದಿನಿಂದ ಅಂದರೆ ಕೈಕಂಬ ಕಡೆಯಿಂದ ಅಡ್ಡೂರು ಕಡೆಗೆ ಹೋಗುತ್ತಿದ್ದ ಸ್ಕೂಟರ್ ಗೆ ಅಡ್ಡೂರು ಕಡೆಯಿಂದ ಕೈಕಂಬ ಕಡೆಗೆ ವೇಗವಾಗಿ ಬರುತ್ತಿದ್ದ KA19 MK5439 ನೇ ನಂಬ್ರದ ಕಾರು ಡಿಕ್ಕಿಯಾಗಿದ್ದು, ಇದರಿಂದ KA19 HL 8172 ನೇ ನಂಬ್ರದ ಸ್ಕೂಟರ್ ನಲ್ಲಿದ್ದ ಅಡ್ಡೂರಿನ ಅಲ್ಪಾಝ್, ಅಕ್ಮಲ್ ಮತ್ತು ಝಿಯಾದ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಅಪಘಾತದಿಂದ ಝಿಯಾದ್ ರವರ ಬಲಗಾಲಿಗೆ ತರಚಿದ ಗಾಯವಾಗಿದ್ದು, ಅಕ್ಮಲ್ ಮತ್ತು ಅಲ್ಪಾಝ್ ರವರ ಬಲಕಾಲಿಗೆ ಮೂಳೆಮುರಿತದ ಗಾಯವಾಗಿರುತ್ತದೆ. ಅತೀವೇಗ ಮತ್ತು ದುಡುಕುತನದಿಂದ ಕಾರು ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿದ ಚಾಲಕನ ಹೆಸರು ಪ್ರವೀಣ್ ಎಮ್ ಶೆಟ್ಟಿ ಎಂಬುದಾಗಿ ತಿಳಿದಿರುತ್ತದೆ. ಈ ಘಟನೆ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುಬೇಕಾಗಿ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 20-04-2024 09:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080