ಅಭಿಪ್ರಾಯ / ಸಲಹೆಗಳು

Crime Reported in CEN Crime PS Mangaluru City       

ದಿನಾಂಕ:12/05/2023 ರಂದು 9083600335ನೇ ಸಿಮ್ ನಂಬ್ರದಿಂದ ಪಿರ್ಯಾದಿದಾರರ ಮೊಬೈಲಿಗೆ ಪೋನ್ ಕರೆ ಬಂದು ಕೆಮಾರ ಪಾರ್ಸಲ್ ಇದೆ ಎಂದು ಹೇಳಿ ಆಕ್ಟಿವೇಶನ್ ಚಾರ್ಜ್ ಎಂದು ರೂ.5 ನ್ನು ಗೂಗಲ್ ಪೇ ಮಾಡುವಂತೆ ತಿಳಿಸಿ ಒಂದು ಲಿಂಕ್ ನ್ನು ಪಿರ್ಯಾದಿದಾರರ  ಮೊಬೈಲಿಗೆ ಕಳುಹಿಸಿಕೊಟ್ಟರು ನಂತರ  ಪಿರ್ಯಾದಿದಾರರು ಕೆಮಾರ ಪಾರ್ಸಲ್ ಗಾಗಿ ಕಾಯುತ್ತಿದ್ದು, ಸದ್ರಿಯವರೆ  ಕಳುಹಿಸಿರಬೇಕೆಂದು ಲಿಂಕ್ ಗೆ ರೂ.5ರೂ ಕಳುಹಿಸಿಕೊಟ್ಟು ಪಿರ್ಯಾದಿದಾರರಿಗೆ ಬಂದ ಮೇಸೆಜನ್ನು ಸದ್ರಿಯವರು  ಹೇಳಿದಂತೆ 7304499902ನೇದಕ್ಕೆ ಕಳುಹಿಸಿಕೊಟ್ಟೇನು, ನಂತರ ಪಿರ್ಯಾದಿದಾರರಿಗೆ  ಯಾವುದೇ ಪಾರ್ಸಲ್ ಬಾರದೆ ಇದ್ದಾಗ ಪಿರ್ಯಾದಿದಾರರಿಗೆ ಕರೆ ಮಾಡಿದ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಲ್ಲಿ ಆದು ಸ್ವಿಚ್ಡ್ ಆಫ್ ಆಗಿತ್ತು. ಸಂಶಯಗೊಂಡ ಪಿರ್ಯಾದಿದಾರರ  ಖಾತೆಯಲ್ಲಿದ್ದ ಹಣವನ್ನು ಪಿರ್ಯಾದಿದಾರರ ಹೆಂಡತಿಯ ಖಾತೆಗೆ ವರ್ಗಾಯಿಸಿರುತ್ತೇನೆ. ಪಿರ್ಯಾದಿದಾರರ ಖಾತೆಯಿಂದ ಯಾವುದೇ ಹಣ ಡ್ರಾ ಆಗದೆ ಇದ್ದುದರಿಂದ ದಿನಾಂಕ:16/05/2023 ರಂದು ವಾಪಸು ಪಿರ್ಯಾದಿದಾರರ ಖಾತೆಗೆ ಹೆಂಡತಿಯ ಖಾತೆಯಿಂದ ರೂ.45,000/- ಹಣವನ್ನು ವರ್ಗಾಯಿಸಿರುತ್ತೇನೆ, ನಂತರ ಪಿರ್ಯಾದಿದಾರರು ಈ ದಿನ ದಿನಾಂಕ:17/05/2023 ರಂದು ನಾನು ಕಛೇರಿಯಲ್ಲಿರುವಾಗ, ಪಿರ್ಯಾದಿದಾರರ ಮೊಬೈಲ್ ನಂಬ್ರನೇದಕ್ಕೆ ಪಿರ್ಯಾದಿದಾರರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೂಳೂರು ಬ್ರಾಂಚ್ ಖಾತೆ ಸಂಖ್ಯೆ;ನೇದರಿಂದ ರೂ.46,020/- ಮತ್ತು ಕೆನರಾ ಬ್ಯಾಂಕ್, ಲಾಲ್ ಬಾಗ್ ಬ್ರಾಂಚ್ ಖಾತೆ ಸಂಖ್ಯೆ:ನೇದರಿಂದ ರೂ.6,642/-ಹಣ ಕಡಿತಗೊಂಡಿರುವ ಸಂದೇಶ ಬಂತು ಪಿರ್ಯಾದಿದಾರರ ಕೂಡಲೇ ಬ್ಯಾಂಕಿಗೆ ಹೋಗಿ ವಿಚಾರಿಸಿದಲ್ಲಿ ಅನ್ ಲೈನ್ ವಂಚನೆಯಾಗಿರುವುದಾಗಿ ತಿಳಿಸಿ ಸ್ಟೇಟ್ ಮೆಂಟ್ ನೀಡಿರುತ್ತಾರೆ, ಆದ್ದರಿಂದ ಪಿರ್ಯಾದಿದಾರರಿಗೆ ವಂಚನೆ ಮಾಡಿ ಪಿರ್ಯಾದಿದಾರರ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು ರೂ.52,662/-ಹಣ ನಷ್ಟವನ್ನುಂಟು ಮಾಡಿದವರನ್ನು ಪತ್ತೆಹಚ್ಚಿ ಪಿರ್ಯಾದಿದಾರರಿಗೆ ನ್ಯಾಯಾ ದೊರಕಿಸ ಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಎಂಬಿತ್ಯಾದಿ.

Mangalore North PS

ಪಿರ್ಯಾದಿ MAHAMMAD NOUSHAD  ಮಂಗಳೂರಿನ ದಕ್ಕೆಯಲ್ಲಿರುವ  ಸಾಗರ್ ಎಂಬ ಹೆಸರಿನ ಬೇಕರಿಯನ್ನು 3 ವರ್ಷದಿಂದ ನಡೆಸಿಕೊಂಡಿರುತ್ತಾರೆ.  ಪಿರ್ಯಾದಿದಾರರು ಕೆಲಸಕ್ಕೆ ಬರಲು ತನ್ನ ಬಾಬ್ತು ಹೋಂಡಾ ಆಕ್ಟೀವಾ ಉಪಯೋಗಿಸುತ್ತಿದ್ದು  ದಿನಾಂಕ  12-05-2023 ರಂದು ಪಿರ್ಯಾದಿದಾರರು ಎಂದಿನಂತೆ ಕೆಲಸದ ನಿಮಿತ್ತ ಬಂದವರು ಮಂಗಳೂರಿನ ದಕ್ಕೆಯಲ್ಲಿರುವ  ಮಂಗಳೂರಿನ ಕಸಬ ಫೆರಿಯಲ್ಲಿ ರಾತ್ರಿ 10.30  ಗಂಟೆಗೆ ಪಾರ್ಕ್ ಮಾಡಿ   ಮನೆಗೆ  ಹೋದವರು  ದಿನಾಂಕ 13-05-2023 ರಂದು ಬೆಳಿಗ್ಗೆ 10.30 ಗಂಟೆಗೆ   ಸ್ಕೂಟರ್ ಪಾರ್ಕ್ ಮಾಡಿದ  ಸ್ಥಳಕ್ಕೆ ಬಂದಾಗ ಸದ್ರಿ ಸ್ಥಳದಲ್ಲಿ ಸ್ಕೂಟರ್  ಅಲ್ಲಿರದೇ ಇದ್ದು ನಂತರ ಪಿರ್ಯಾದಿದಾರರು  ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದು ತನ್ನ ಸ್ನೇಹಿತರಿಗೆ ತಿಳಿಸಿ ಇಷ್ಟರವರೆಗೆ ಹುಡುಕಾಡಿದರೂ  ತನ್ನ ಸ್ಕೂಟರ್   ಸಿಗದೇ ಇದ್ದುದರಿಂದ  ತನ್ನ  ಬಾಬ್ತು KA-19-EK- 5016 ನೇ ನೊಂದಣಿ ನಂಬ್ರದ ಹೋಂಡಾ ಆಕ್ಟಿವಾ  ಸ್ಕೂಟರ್  ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೃಡಪಟ್ಟಿರುವುದರಿಂದ ಪಿರ್ಯಾದಿದಾರರು ಈ ದೂರನ್ನು ಈ ದಿನ ನೀಡಿರುವುದಾಗಿದೆ. ಕಳವಾದ  ತನ್ನ ಸ್ಕೂಟರಿನಲ್ಲಿ ವಾಹನದ ಮೂಲದಾಖಲಾತಿಗಳು ಕೂಡಾ ಇರುತ್ತದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಳವಾದ  ಸ್ಕೂಟರನ್ನು  ಪತ್ತೆ ಮಾಡಿಕೊಡಬೇಕೆಂಬಿತ್ಯಾದಿ ದೂರಿನ ಸಾರಾಂಶ.

          ಕಳವಾದ ಸ್ಕೂಟರಿನ   ವಿವರಗಳು ಈ ಕೆಳಗಿನಂತಿದೆ:

KA-19-EK-5016 ನೇ ನೊಂದಣಿ ನಂಬ್ರದ ಹೋಂಡಾ ಆಕ್ಟಿವಾ ಸ್ಕೂಟರ್ ಮಾಡೆಲ್ 2016 ಬಿಳಿ ಬಣ್ಣದ್ದಾಗಿರುತ್ತದೆ.    ಇದ್ದು, ಅಂದಾಜು ಮೌಲ್ಯ ರೂ. 20,000/-

Traffic South Police Station

ಪಿರ್ಯಾದಿ MOHAMMOD RIZWAM ಸಂಬಂದಿಯಾದ ಅನ್ವರ್ ಹುಸೇನ್ ರವರು ಅವರ ಬಾಬ್ತು ಸ್ಕೂಟರ್ ನಂಬ್ರ; KA-19-EZ-2315 ನೇದನ್ನು ಸವಾರಿ ಮಾಡಿಕೊಂಡು ಬೆಳ್ಳಿಗ್ಗೆ ಸಮಯ ಸುಮಾರು 3-50 ಗಂಟೆಗೆ ರಾ ಹೆ-66 ರ ಅಡಂಕುದ್ರು ನಿಂದ ಮುಂದೆ ತಲುಪಿದಾಗ ಉಳ್ಳಾಲ ಕಡೆಯಿಂದ ಮಂಗಳೂರು ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗಿ ರಾ ಹೆ-66 ರ ಡಾಮಾರು ರಸ್ತೆಯಲ್ಲಿ ಯಾವುದೇ ಸೂಚನಾ ಫಲಕ ಅಳವಡಿಸದೇ ಇತರ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುವಂತೆ ಅಪಾಯಕಾರಿ ರೀತಿಯಲ್ಲಿ ನಿಲ್ಲಿಸಿದ್ದ ಬುಲೆಟ್ ಗ್ಯಾಸ್ ಟ್ಯಾಂಕರ್ ನಂಬ್ರ: TN-28-AJ-9619 ನೇದರ ಹಿಂಬದಿಗೆ ಸ್ಕೂಟರ್ ನ್ನು ಡಿಕ್ಕಿ ಪಡಿಸಿ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಅವರ ಎಡಭಾಗದ ಪಕ್ಕೆಲುಬಿಗೆ ಗುದ್ದಿದ ಗಾಯವಾಗಿದ್ದ ಅವರನ್ನು ಪಿರ್ಯಾದಿದಾರರು ಉಪಚರಿಸಿ ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರ ಟೆಂಪೊದಲ್ಲಿ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಬುಲೆಟ್ ಟ್ಯಾಂಕರ್ ನಂಬ್ರ: TN-28-AJ-9619 ನೇದರ ಚಾಲಕ ಅಪಘಾತದ ಬಳಿಕ ಟ್ಯಾಂಕರ್ ಸಮೇತ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.

Traffic South Police Station

ಪಿರ್ಯಾದಿ ಇಬ್ರಾಹೀಂ ನಯಾಝ್ ರವರು ನಿನ್ನೆ ದಿನ ದಿನಾಂಕ: 17-05-2023 ರಂದು ಲಾರಿ ನಂಬ್ರ: KA-21-B-1732 ನೇದರಲ್ಲಿ ಅಬ್ದುಲ್ ಖಾದರ್ ಎಂಬುವರು ಚಾಲಕರಾಗಿ ಪಿರ್ಯಾದಿದಾರರು ಮತ್ತು ಲಾರಿ ಕಂಡೆಕ್ಟರ್ ಜಿಯಾನ್ ಎಂಬುವರು ಲಾರಿಯ ಎದುರಿನ ಚಾಲಕನ ಹತ್ತಿರದ ಸೀಟಿನಲ್ಲಿ ಕುಳ್ಳಿತುಕೊಂಡು ಮಂಗಳೂರಿನಿಂದ ಪುತ್ತೂರು ಕಡೆಗೆ ರಾ ಹೆ -73 ರ ರಸ್ತೆಯಲ್ಲಿ ಹೋಗುತ್ತಿರುವಾಗ ಸಂಜೆ ಸಮಯ ಸುಮಾರು 7-00 ಗಂಟೆಗೆ ಕೊಡಕ್ಕಲ್ ಫಸ್ಟ್ ನ್ಯೂರೋ ಆಸ್ಪತ್ರೆಯ ಬಳಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಪಿರ್ಯಾದಿದಾರರ ಲಾರಿಯ ಹಿಂದಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ:KA-19-HG-0310 ನೇದನ್ನು ಅದರ ಸವಾರ ನಬೀಲ್ ಅಹಮ್ಮದ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಅವರ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ರಸ್ತೆಗೆ ಬಿದ್ದು ಆತನ ಮೋಟಾರ್ ಸೈಕಲ್ ರಸ್ತೆಯ ತೀರ ಎಡಬದಿಗೆ ಚಲಿಸಿ ಅಲ್ಲೆ ರಸ್ತೆ ಬದಿಯಲ್ಲಿ ಮಣ್ಣು ರಸ್ತೆಗೆ ನಿಲ್ಲಿಸಿದ ಕಾರು ನಂಬ್ರ: KA-19-MF-2323 ನೇದರ ಹಿಂಭಾಗಕ್ಕೆ ಡಿಕ್ಕಿ ಪಡಿಸಿ ರಸ್ತೆಗೆ ಬಿದ್ದ ಪರಿಣಾಮ KA-19-HG-0310 ನೇದರ ಮೋಟಾರ್ ಸೈಕಲ್ ಸವಾರನಿಗೆ ಎದೆಗೆ,ಕುತ್ತಿಗೆಗೆ ಗುದ್ದಿದ ರೀತಿಯ ಗಾಯ ಹಾಗೂ ಕೈ ಮತ್ತು ಕಾಲಿಗೆ ತರಚಿದ ಗಾಯವಾಗಿದ್ದ ಅವರನ್ನು ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರು ಮತ್ತು ಅಲ್ಲಿ ಸೇರಿದ ಜನರೊಂದಿಗೆ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೋಡಿಯಲ್ ಬೈಲ್ ಯೆನೆಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.

                                    

West Traffic PS                                     

ದಿನಾಂಕ 17-05-2023 ರಂದು ಸಮಯ ಸುಮಾರು ಮದ್ಯಾಹ್ನ 01.00 ಗಂಟೆಗೆ  ಪಿರ್ಯಾದಿದರರು NALINI SHETTY J ಕೆ ಎಸ್ ರಾವ್ ರಸ್ತೆಯ ಬಾಟಾ ಶೋ ರೂಮ್ ಎದುರುಗಡೆ ರಸ್ತೆ ದಾಟುತ್ತಿದ್ದಾಗ ನವಭಾರತ ಸರ್ಕಲ್ ಕಡೆಯಿಂದ  ಹಂಪನ ಕಟ್ಟೆ ಕಡೆಗೆ  ಹಾದು ಹೋಗುವ ಕೆ ಎಸ್ ರಾವ್  ಸಾರ್ವಜನಿಕ ರಸ್ತೆಯಲ್ಲಿ  KA19-HH-8408 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರ ರವಿ ರವರು ನಿರ್ಲಕ್ಷ್ಯತನದಿಂದ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಮಣಿ ಗಂಟಿಗೆ ತರಚಿದ  ಗಾಯ ಹಾಗೂ ಎಡಗೈ ಭುಜಕ್ಕೆ   ಮೂಳೆ ಮುರಿತದ ಗಾಯವಾಗಿ ನಗರದ ಎಸ್ ಸಿ ಎಸ್  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

Barke PS

ಮಂಗಳೂರು ಜಿಲ್ಲಾ ಕಾರಾಗೃಹದ ವಿಚಾರಣಾ ಬಂದಿ ಸಂಖ್ಯೆ:17194 ಮಹೇಂದ್ರ ಶೆಟ್ಟಿ ತಂದೆ:ಪುರುಷೋತ್ತಮ ಶೆಟ್ಟಿ ದಿನಾಂಕ:17.05.2023 ರಂದು ಸಮಯ ಸುಮಾರು 17.00 ಗಂಟೆಗೆ ಸಂದರ್ಶನಕ್ಕೆಂದು ಬಂದಿದ್ದ ಅನಿಶ್ ವಾಟ್ಸನ್ ಡಿ ಸೋಜಾ ಎಂಬವರು ಬಟ್ಟೆ ಹಾಗೂ ಕಪ್ಪು ಮತ್ತು ಬೂದು ಬಣ್ಣ ಮಿಶ್ರಿತ ಚಪ್ಪಲಿಗಳನ್ನು ತಂದಿದ್ದು ಕೆ.ಎಸ್.ಐ.ಎಸ್.ಎಫ್ ನ ಸಿಬ್ಬಂದಿಗಳಾದ ಎ.ಆರ್.ಎಸ್.ಐ ಮಹಾಬಲ ನಾಯ್ಕ, ಹೆಚ್.ಸಿ ನೇ ಕೀರ್ತಿಕುಮಾರ.ಎಸ್.ಎ ಹಾಗೂ ಪಿಸಿ ನೇ ಇನಾಯತುಲ್ಲಾ ಇವರುಗಳು ಪರಿಶೀಲಿಸುವ ಸಂದರ್ಭದಲ್ಲಿ ಚೆಪ್ಪಲಿಗಳಲ್ಲಿ ಹೆಚ್ಚುವರಿಯಾಗಿ ಹೊಲಿಗೆ ಹಾಕಿರುವ ರೀತಿಯಲ್ಲಿ ಕಂಡು ಬಂದಿದ್ದರಿಂದ ಹೊಲಿಗೆ ಬಿಚ್ಚಿ ಪರಿಶೀಲಿಸಲಾಗಿ ಒಂದು ಚೆಪ್ಪಲಿಯಲ್ಲಿ ಪ್ಲಾಸ್ಟಿಕ್ ಕವರ್ ನ ಒಳಗೆ ಗಡಸು ಎಣ್ಣೆಯಂತಹ ಕಪ್ಪು ಬಣ್ಣದ ಗಾಂಜಾದಂತಹ ವಾಸನೆಯುಳ್ಳ ವಸ್ತು ಇದ್ದು ಹಾಗೂ ಇನ್ನೊಂದು ಚೆಪ್ಪಲಿಯಲ್ಲಿ ಕಪ್ಪು ಅಂಟು ಪಟ್ಟಿಯಿಂದ ಸುತ್ತಿದ್ದ ಅನುಮಾವಾಸ್ಪದ ವಸ್ತು ಪತ್ತೆಯಾಗಿರುತ್ತದೆ ಈ ಬಗ್ಗೆ ಪಿರ್ಯಾದಿದಾರರು B.T.Obaleshappa ವಿಚಾರಿಸಲಾಗಿ ಸರಿಯಾಗಿ ಮಾಹಿತಿಯನ್ನು ನೀಡಿರುವುದಿಲ್ಲ ಆದುದರಿಂದ  ಈ ಬಗ್ಗೆ ಪಿರ್ಯಾದಿದಾರರಾದ ಜೈಲ್ ಅಧೀಕ್ಷಕರಿಗೆ ಅನುಮಾನ ಬಂದು ಸದ್ರಿ ವ್ಯಕ್ತಿಯನ್ನು ಹಾಗೂ ಅನುಮಾನಾಸ್ಪದ ಮಾದಕ ವಸ್ತುವಿನೊಂದಿಗೆ ಠಾಣೆಗೆ ಹಾಜರು ಪಡಿಸಿ ಈತನ ಮೇಲೆ ಕರ್ನಾಟಕ ಕಾರಾಗೃಹ ಅಧಿನಿಯಮ 1963 ಹಾಗೂ ಭಾರತೀಯ ದಂಡ ಸಂಹಿತೆಯ ಕಲಂ ಮತ್ತು ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಹಾಗೂ ಐಪಿಸಿ ಕಲಂನಲ್ಲಿ ಪ್ರಕರಣ ದಾಖಲಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿಯಾಗಿ  ಸಾರಾಂಶವಾಗಿರುತ್ತದೆ.

Urva PS

ದಿನಾಂಕ 17-05-2023 ರಂದು ಸಂಜೆ ಸಮಯ ಸುಮಾರು 6-15 ಗಂಟೆಗೆ ನಾನು SUDARSHAN B N ಇಲಾಖಾ ವಾಹನದಲ್ಲಿ ಸಿಬ್ಬಂಧಿಗಳೊಂದಿಗೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ರೌಂಡ್ಸ್‌ ಕರ್ತವ್ಯದಲ್ಲಿದ್ದ ಸಮಯ ಕೊಟ್ಟಾರಚೌಕಿ ಜೆ ಬಿ ಲೋಬೊ ರಸ್ತೆಯ ಬಳಿ ಇರುವ ಸಾರ್ವಜನಿಕ ಗ್ರೌಂಡ್ ಬದಿಯಲ್ಲಿಯರುವ ನೀರಿನ ತೋಡಿನ ಬಳಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ನಿಂತುಕೊಂಡು ಸಿಗರೇಟನ್ನು ಸೇದುತ್ತಿದ್ದು, ಆತನ ಬಳಿ ಹೋಗಿ ವಿಚಾರಿಸಿದಾಗ ಅಸ್ಪಷ್ಟವಾಗಿ ಮಾತನಾಡಿದ್ದು, ಆತನ ಬಾಯಿಂದ ಗಾಂಜಾ ಸೇವನೆ ಮಾಡಿರುವ ವಾಸನೆ ಬಂದಿದ್ದರಿಂದ, ಸದ್ರಿಯವರನ್ನು ವಿಚಾರಿಸಿ ಹೆಸರು ವಿಳಾಸ ಕೇಳಲಾಗಿ ರಿತೇಶ್ ರಾಮನಾಥ ಪೂಜಾರಿ, ಪ್ರಾಯ: 22 ವರ್ಷ, 7ನೇ ಕ್ರಾಸ್ ರೋಡ್, ಪಾಲ್ದಾಡಿ, ಕೊಟ್ಟಾರಚೌಕಿ, ಮಂಗಳೂರು ಎಂಬುದಾಗಿ ತಿಳಿಸಿದ್ದು, ನಂತರ ಆತನನ್ನು ವಶಕ್ಕೆ ಪಡೆದು ಆತನು ಗಾಂಜಾ ಸೇವನೆ ಮಾಡಿರುವ ಬಗ್ಗೆ ಎ ಜೆ ಆಸ್ಪತ್ರೆಯ  ವೈಧ್ಯಾಧಿಕಾರಿಯವರಲ್ಲಿ ಪರೀಕ್ಷೆಗೊಳಪಡಿಸಿದ್ದು, ವೈದ್ಯರು ಈತನನ್ನು ವೈದ್ಯಕೀಯ ತಪಾಸಣೆ ನಡೆಸಿ ಈತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ದೃಡಪಡಿಸಿರುವುದರಿಂದ ಈತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ. ಎಂಬಿತ್ಯಾದಿ.

 

Mangalore South PS  

ಪಿರ್ಯಾದಿ ಪ್ರತ್ಯುಶ್ ಸಾಲಿಯಾನ್ ರವರು ಆರೋಪಿ ಸಂಜಯ್  ಪೂಜಾರಿ  ಎಂಬುವರನ್ನು  Free Fire ಎಂಬ ಮೊಬೈಲ್ ಆನ್ ಲೈನ್ ಗೇಮ್ ನಲ್ಲಿ ಸೋಲಿಸಿದ ವಿಚಾರವಾಗಿ, ಪಿರ್ಯಾದಿದಾರರ ಮೇಲೆ ಆರೋಪಿಗೆ ದ್ವೇಷವಿದ್ದು, ದಿನಾಂಕ 17-05-2023 ರಂದು 15-40 ಗಂಟೆಗೆ  ಪಿರ್ಯಾದಿದಾರರು ಮಂಗಳೂರು ನಗರದ ಜೆಪ್ಪು ಬಪ್ಪಾಲ್ ನ ತನ್ನ ಮನೆಯಿಂದ ನಡೆದುಕೊಂಡು ನಂದಿಗುಡ್ಡೆ ಕಡೆಗೆ ಹೋಗುತ್ತಿದ್ದಾಗ, ಜೆಪ್ಪು ಬಪ್ಪಾಲ್ ರಸ್ತೆಯಲ್ಲಿರುವ ಧ್ವಜ ಸ್ಥಂಭದ ಬಳಿ ಸ್ಕೂಟರ್ ನಲ್ಲಿ ಕುಳಿತ್ತಿದ್ದ ಆರೋಪಿಯು ಪಿರ್ಯಾದಿದಾರರನ್ನು ನೋಡಿ, ಅವರ ಬಳಿಗೆ ಬಂದು ಪಿರ್ಯಾದಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಪಿರ್ಯಾದಿದಾರರನ್ನು ಉದ್ದೇಶಿಸಿ “ಏ ಬೇವರ್ಷಿ ನನ್ನನ್ನೆ ಗೇಮ್ ನಲ್ಲಿ ಸೋಲಿಸುತ್ತೀಯಾ? ನಿನ್ನನ್ನು ಈ ದಿನ ಇಲ್ಲಿಯೇ ಮುಗಿಸುತ್ತೇನೆ” ಎಂದು ಹೇಳಿ, ತನ್ನ ಪ್ಯಾಂಟಿನ ಕಿಸೆಯಿಂದ ಮಾರಕಾಯುಧವಾದ ಚೂರಿಯನ್ನು ತೆಗೆದು ಪಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಚೂರಿಯಿಂದ ಪಿರ್ಯಾದಿದಾರರ ಎದೆಗೆ ಗುರಿ ಇಟ್ಟು ಬಲವಾಗಿ ತಿವಿಯಲು ಬಂದಾಗ, ಪಿರ್ಯಾದಿದಾರರು ತನ್ನ ಬಲ ಕೈಯನ್ನು ಅಡ್ಡ ಹಿಡಿದಿದ್ದು, ಆ ಏಟು ಪಿರ್ಯಾದಿದಾರರ ಬಲಕೈ ಹೆಬ್ಬೆರಳಿನ  ಹಸ್ತದ ಬಳಿ ತಾಗಿ  ರಕ್ತ ಗಾಯವಾಗಿರುತ್ತದೆ. ಆರೋಪಿ ಮತ್ತೊಮ್ಮೆ ಪುನಃ ಚೂರಿಯಿಂದ ಪಿರ್ಯಾದಿದಾರರ ಎದೆಗೆ ತಿವಿಯಲು ಹೋದಾಗ  ಪಿರ್ಯಾದಿದಾರರು ತಪ್ಪಿಸಲು ಪ್ರಯತ್ನಿಸಿದ್ದು, ಆ ಏಟು ಪಿರ್ಯಾದಿದಾರರ ಎಡ ಪಕ್ಕೆಯ ಬಳಿ ತಾಗಿ ರಕ್ತಗಾಯವಾಗಿರುತ್ತದೆ.  ಆಗ ಪಿರ್ಯಾದಿದಾರರು ನೋವಿನಿಂದ ಜೋರಾಗಿ ಬೊಬ್ಬೆ ಹಾಕಿದ್ದು, ಸುತ್ತ ಮುತ್ತಲಿನ ಜನರು ಹಾಗೂ ಪಿರ್ಯಾದಿದಾರರ ತಂದೆಯವರು ಸ್ಥಳಕ್ಕೆ ಬಂದಾಗ,  ಆರೋಪಿಯು ಪಿರ್ಯಾದಿದಾರರನ್ನು ಉದ್ದೇಶಿಸಿ “ಈ ದಿನ ಬದುಕಿದೆ, ಮುಂದೆ ಸಿಗು ನಿನ್ನನ್ನು ಮುಗಿಸದೇ ಬಿಡುವುದಿಲ್ಲ”ಎಂದು ಕೊಲೆ ಬೆದರಿಕೆ ಹಾಕಿ, ತಾನು ಬಂದಿದ್ದ ಸ್ಕೂಟರ್ ನಲ್ಲಿ  ಹಲ್ಲೆ ಮಾಡಲು ಬಳಸಿದ ಚೂರಿಯೊಂದಿಗೆ ಪರಾರಿಯಾಗಿರುತ್ತಾನೆ ಎಂಬಿತ್ಯಾದಿಯಾಗಿರುತ್ತದೆ.

Ullal PS

ದಿನಾಂಕ.17-5-2023 ರಂದು 13:30 ಗಂಟೆಯ ಸಮಯಕ್ಕೆ ಉಳ್ಳಾಲ ತಾಲೂಕು ಮುನ್ನೂರು ಗ್ರಾಮದ ಮದನಿನಗರ ಕ್ಕಿಂತ ಸ್ವಲ್ಪ ದೂರದ ಸ್ವಲ್ಲತ್ನತಗರ ಎಂಬಲ್ಲಿ ರಸ್ತೆಯ ಬದಿಯಲ್ಲಿ ಕೆಎ-19-ಎಂಜಿ-4669 ನೇ ಐ20 ಬಿಳಿ ಬಣ್ಣದ ಕಾರನ್ನು ನಿಲ್ಲಿಸಿ ಅದರ ಬಳಿ ನಿಂತುಕೊಂಡ ಆರೋಪಿಗಳಾದ ಉಮ್ಮರ್‍ ಶರೀಫ್‍ ಮತ್ತು ಜಮಾಲುದ್ಧೀನ್‍ ರವರು ಯಾವುದೇ ಪರವಾನಿಗೆ ಯಾ ದಾಖಲಾತಿ ಇಲ್ಲದೆ ನಿಷೇದಿತ ಮಾದಕ ವಸ್ತು ಆಗಿರುವ ಎಂ.ಡಿ.ಎಂ.ಎ. ನ್ನು ಹಣಕ್ಕಾಗಿ ಗಿರಾಕಿಗಳಿಗೆ ಮಾರಲು ಬಂದವರು ಅಲ್ಲಿನ ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರನ್ನು ನಿಲ್ಲಿಸಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ಪ್ರಕರಣದ ಫಿರ್ಯಾದಿದಾರರಾದ ಉಳ್ಳಾಲ ಠಾಣಾ ಪಿಎಸ್ಐ  ಸಂತೋಷ್ ಕುಮಾರ್.ಡಿ. ರವರು ಸಿಬ್ಬಂದಿಯವರ ಜೊತೆಯಲ್ಲಿ ಪತ್ತೆ ಮಾಡಿ ಆರೋಪಿ ಉಮ್ಮರ್‍ ಶರೀಫ್ನಐ ಕೈಯಲ್ಲಿದ್ದ ಪೇಪರ್‍ ಲಕೋಟೆಯ ಒಳಗೆ ಇದ್ದ ಟ್ರಾನ್ಸ್ಫವರೆಂಟ್ ಪ್ಲಾಸ್ಟಿಕ್‍ ಕವರಿನ ಒಳಗೆ ತುಂಬಿಸಿದ್ದ ಸುಮಾರು 10 ಗ್ರಾಂ ತೂಕದ ಹರಳಿನಂತಿರುವ ಎಂ.ಡಿ.ಎಂ.ಎ (ಅಂದಾಜು ಮೌಲ್ಯ ರೂ.20,000/-), ಕೆಎ-19-ಎಂಜಿ-4669 ನೇ ಐ20 ಬಿಳಿ ಬಣ್ಣದ ಕಾರು (ಅಂದಾಜು ಮೌಲ್ಯ ರೂ.3 ಲಕ್ಷ), ಉಮ್ಮರ್‍ ಶರೀಫನ ಕೈಯಲ್ಲಿದ್ದ ಐಫೋನ್‍ ಕಂಪೆನಿಯ ಕೆಂಪು ಬಣ್ಣದ ಟಚ್ಸ್ಕ್ರೀ ನ್ ಮೊಬೈಲ್‍ ಪೋನ್‍-1 ಇದರ ಅಂದಾಜು ಮೌಲ್ಯ ರೂ.50,000/-, ಮತ್ತು ವೀವೋ ಕಂಪೆನಿಯ ಬಿಳಿ ಮತ್ತು ನಸು ನೀಲಿ ಬಣ್ಣದ ಟಚ್ಸ್ಕ್ರೀ ನ್ ಮೊಬೈಲ್‍ ಪೋನ್-1  ಅಂದಾಜು ಮೌಲ್ಯ ರೂ.8,000/- ಹಾಗೂ ಮಹಮ್ಮದ್‍ ಜಮಾಲುದ್ಧೀನ್ನಲ ಕೈಯಲ್ಲಿದ್ದ ಎಂ.ಐ. ಕಂಪೆನಿಯ ಕಪ್ಪು ಬಣ್ಣದ ಟಚ್ ಸ್ಕ್ರೀನ್ ಮೊಬೈಲ್ ಪೋನ್ ಒಂದು ಅಂದಾಜು ಮೌಲ್ಯ ರೂ. 7,000/- ಹೀಗೇ ಎಲ್ಲಾ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ.3,85,000-00 ದ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

            

ಇತ್ತೀಚಿನ ನವೀಕರಣ​ : 21-08-2023 12:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080