Feedback / Suggestions

Crime Report in Mangalore West Traffic PS

ದಿನಾಂಕ 17-07-2023 ರಂದು ರಾತ್ರಿ 11.00 ಗಂಟೆಗೆ ಮಂಗಳೂರು ನಗರದ ಕುಂಟಿಕಾನಾ ಜಂಕ್ಷನ್ ಬಳಿ ಪಿರ್ಯಾದಿ VENKATASHIVA K V ದಾರರು ಕೆ.ಎಸ್.ಆರ್.ಟಿ.ಸಿ KA19-F-3437 ನಂಬ್ರದ ಬಸ್ಸನ್ನು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಕುಂಟಿಕಾನಾದಲ್ಲಿರುವ 3ನೇ ಡಿಪ್ಪೋಗೆ  ಹಾಲ್ಟ್ ಮಾಡುವರೇ ಡಿಪ್ಪೋ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಕುಂಟಿಕಾನಾ ಜಂಕ್ಷನ್ ಬಳಿ ಬಸ್ಸನ್ನು ಯು ಟರ್ನ್ ಹೊಡೆಯುವ ಸಮಯ ತನ್ನ  ಹಿಂದುಗಡೆಯಿಂದ KA19-P-5695 ನಂಬ್ರದ ಅದರ ಚಾಲಕ ರವೀಂದ್ರನಾಥ ಎಂಬುವವರು ದುಡುಕು ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತಿರುಗುತ್ತಿದ್ದ ಬಸ್ಸಿನ ಹಿಂದುಗಡೆಯ ಬಲಬದಿಯ ಚಕ್ರದ ಬಳಿ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಎದುರು ಭಾಗ ಜಖಂ ಗೊಂಡಿರುವುದಲ್ಲದೇ ಚಾಲಕ ರವೀಂದ್ರನಾಥ ರವರ ಬಲಗಾಲಿನ ಮೊಣಗಂಟಿಗೆ ರಕ್ತಗಾಯವಾಗಿದ್ದು ಗಾಯಗೊಂಡವರನ್ನು ಬಸ್ಸಿನ ಚಾಲಕರು ಆಟೋ ರಿಕ್ಷಾ ವೊಂದರಲ್ಲಿ ಮಂಗಳೂರು ಎಜೆ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ. ಎಂಬಿತ್ಯಾದಿ

 

Urva PS

ಪಿರ್ಯಾಧಿ NANJESH S B ದಾರರು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಮತ್ತಿಕೋಟೆ ಗ್ರಾಮದ ನಿವಾಸಿಯಾಗಿದ್ದು, ಸುಮಾರು 4 ವರ್ಷಗಳಿಂದ ಅಶೋಕನಗರದಲ್ಲಿರುವ ಮೊಡರ್ನ್ ಇಂಡಸ್ಟ್ರೀಸ್ ಕಾರ್ಪೋರೇಶನ್ ನಲ್ಲಿ ಸುಪರ್ ವೈಸರ್ ಆಗಿ ಕೆಲಸ ಮಾಡಿಕೊಂಡು ಇಂಡಸ್ಟ್ರೀಸ್ ಯವರು ನೀಡಿದ ರೂಮ್ ನಲ್ಲಿ ಕುಟುಂಬದೊಂದಿಗೆ ವಾಸ ಮಾಡಿಕೊಂಡಿರುತ್ತಾರೆ. ಸದ್ರಿ ಮೊಡರ್ನ್ ಇಂಡಸ್ಟ್ರಿಯ (ರೈಸ್ ಮಿಲ್) ಕಂಪೌಂಡ್ ವಾಲ್ ನ ಒಳಗಡೆಯ ಉತ್ತರ ಬದಿಯಲ್ಲಿ,  ರೈಸ್ ಮಿಲ್ ನಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಉಳ ಕೊಳ್ಳಲು ಒಟ್ಟು 6 ಶೆಡ್ಡ್ ಗಳಿದ್ದು, 7 ನಂಬರ್ ನ ಶೆಡ್ಡನಲ್ಲಿ  ಬಿಹಾರ ಮೂಲದ ಇಮ್ತಿಯಾಜ್ ಮತ್ತು ಆತನ ಹೆಂಡತಿ ನಗ್ಮಾ ಹಾಗೂ 3 ಗಂಡು ಮಕ್ಕಳು ವಾಸವಿದ್ದು, ಇಮ್ತಿಯಾಜ್ ರವರು ಸುಮಾರು 5 ತಿಂಗಳಿನಿಂದ  ರೈಸ್ ಮಿಲ್ ನಲ್ಲಿ ಕೂಲಿ ಕೆಲಸ ಹಾಗೂ ಅವರ ಹೆಂಡತಿ ನಗ್ಮಾರವರು ಮಾಲಕರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡ್ಡಿದ್ದರು. ತಾರೀಖು 17-07-2023  ರಂದು ಸಂಜೆ 06-00 ರ ವೇಳೆಗೆ ಎಲ್ಲರೂ  ಕೆಲಸ ಮುಗಿಸಿ, ಕೆಲಸಗಾರರೆಲ್ಲರೂ ರೂಮ್ ಗೆ ಹೋಗಿದ್ದು, ಪಿರ್ಯಾಧಿದಾರರು ಸಹ ನನ್ನ ರೂಮ್ ಗೆ ಹೋಗಿರುತ್ತಾರೆ. ದಿನಾಂಕ: 18-07-2023 ರಂದು ಬೆಳಗ್ಗಿನ ಜಾವ ಸಮಯ ಸುಮಾರು 00-30 ರ ವೇಳೆಗೆ ಇಮ್ತಿಯಾಜ್ ರವರ ರೂಮ್ ನಿಂದ  ಗಂಡ ಹೆಂಡತಿ ಮಧ್ಯೆ ಗಲಾಟೆಯ ಬೊಬ್ಬೆಯಾಗುತ್ತಿದ್ದ ಬಗ್ಗೆ, ಮಿಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ, ಸಂಜಯ್ ಷಾ ರವರು ಪಿರ್ಯಾಧಿಗೆ   ತಿಳಿಸಿದಾಗ  ಅವರು ಕೆಲಮೊಮ್ಮೆ ಜಗಳವಾಡುತ್ತಿರುವರಿಂದ  ಪಿರ್ಯಾಧಿ ಸುಮ್ಮನಿದ್ದು, ಸಂಜಯ್ ಷಾ ರವರು ವಾಪಸು ಪಿರ್ಯಾಧಿಗೆ ಸಮಯ ಸುಮಾರು 01-00 ರ ವೇಳೆಗೆ ಪೋನ್ ಮಾಡಿ, ಪೋನ್ ನಲ್ಲಿ “ ಇಮ್ತಿಯಾಜ್ ರವರ ಮಗ  ನಸೀಮ್ ಆಲಮ್ ಬಂದು ತನ್ನ ತಾಯಿ  ನಗ್ಮಾರವರಿಗೆ ತಂದೆ ಇಮ್ತಿಯಾಜ್ ಮರದ ರೀಪಿನಿಂದ ತಲೆಗೆ ಹೊಡೆದು,  ರಕ್ತಗಾಯಗೊಳಿಸಿದ ಬಗ್ಗೆ ಪಕ್ಕದ ರೂಮ್ ನಲ್ಲಿದ್ದವರಿಗೆ ತಿಳಿಸಲು ಬಾಗಿಲು ಬಡಿದು, ಅವರನ್ನು ಎಬ್ಬಿಸಿ ಅವರು ಹೊರಗೆ ಬರುತ್ತಿದ್ದ ಸಮಯ ಇಮ್ತಿಯಾಜ್  ರೂಮ್ ನಿಂದ ಓಡಿ ಹೋದ ಬಗ್ಗೆ ನನ್ನಲ್ಲಿ  ತಿಳಿಸಿದ್ದು”,  ವಿಷಯ ತಿಳಿದ ಪಿರ್ಯಾಧಿದಾರರು ಕೂಡಲೇ ಇಮ್ತಿಯಾಜ್ ರವರ ರೂಮ್ ಬಳಿ ಬಂದು , ಅಲ್ಲಿ ಹತ್ತಿರದ ರೂಮಿನವರೊಂದಿಗೆ ಒಳಗಡೆ ನೋಡಿದಾಗ, ಒಳಗಡೆ ಚಾಪೆಯ ಮೇಲೆ ನಗ್ಮಾರವರು ನರಳಾಡುತ್ತಿದ್ದು, ಅವರ ತಲೆಯ ಮಧ್ಯಭಾಗದಲ್ಲಿ  ತೀವ್ರ ಸ್ವರೂಪದ ರಕ್ತ ಗಾಯವಾಗಿರುವುದಲ್ಲದೇ, ಎಡ ಕೈಗೆ ಕೂಡ ಗಾಯವಾಗಿರುವುದು ಕಂಡುಬಂತು. ಪಕ್ಕದಲ್ಲಿ  ರಕ್ತ ತಾಗಿರುವ ಮರದ ರೀಪು ಕೂಡ ಬಿದ್ದಿದ್ದು, ತಲೆ ದಿಂಬು ಮತ್ತು ಬೆಡ್ ಶೀಟ್ ಕೂಡ ರಕ್ತದಿಂದ ತೊಯ್ದಿತ್ತು,  ನಗ್ಮಾರವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಪಿರ್ಯಾಧಿದಾರರು  ಕೂಡಲೇ ಮಾಲಕರಿಗೆ ವಿಷಯ ತಿಳಿಸಿ, ಅವರ  ಕಾರನ್ನು ತರಿಸಿ ಆ ಕಾರಿನಲ್ಲಿ ನಗ್ಮಾರವರನ್ನು ಚಿಕಿತ್ಸೆ ಬಗ್ಗೆ ಮಾರುತಿ, ವಿಕಾಸ್ ಮತ್ತು  ಆಪ್ತಾಬ್ ರವರ ಜೊತೆ ಮಾಲಕರು ತಿಳಿಸಿದಂತೆ ಕೆ.ಎಮ್.ಸಿ ಆಸ್ವತ್ರೆ ಮಂಗಳೂರಿಗೆ ಕಳುಹಿಸಿಕೊಟ್ಟಿರುತ್ತಾರೆ.

 

Traffic North Police Station                   

ಪಿರ್ಯಾದಿದಾರರ ಸಂಬಂದಿ ಟೈಟಾಸ್ ಫೆರಾವೊ (69 ವರ್ಷ) ಎಂಬವರು ದಿನಾಂಕ 18-07-2023 ರಂದು ತನ್ನ ಬಾಬ್ತು KA-19-ES-0975 ನಂಬ್ರದ ಮೋಟಾರು ಸೈಕಲನ್ನು ಬೈಕಂಪಾಡಿ ಜಂಕ್ಷನ್ ಕಡೆಯಿಂದ ಪಣಂಬೂರು ಜಂಕ್ಷನ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ 11:10 ಗಂಟೆಗೆ ಪಣಂಬೂರಿನ NH-66 ನೇ ರಸ್ತೆಯ ಪೂರ್ವ ಬದಿಯಲ್ಲಿ ನಿರ್ಮಾಣ ಹಂತದ ಗೈಲ್ ಗ್ಯಾಸ್ ಪೆಟ್ರೋಲ್ ಬಂಕಿನ ಎದುರಿನ ರಸ್ತೆಯಲ್ಲಿ ಮಳೆಯಿಂದಾಗಿ ಸ್ವಲ್ಪ ದುರಸ್ದಿಗೊಂಡ ಸ್ಧಳದಲ್ಲಿ ಟೈಟಾಸ್ ಫೆರಾವೊರವರು ಸ್ಕೂಟರನ್ನು ನಿಧಾನವಾಗಿ ಸವಾರಿಮಾಡಿಕೊಂಡು ಹೋಗುತ್ತಿದ್ದಂತೆ ಅವರ ಹಿಂದಿನಿಂದ ಅಂದರೆ ಬೈಕಂಪಾಡಿ ಕಡೆಯಿಂದ ಪಣಂಬೂರು ಕಡೆಗೆ KA-27-B-0580 ನಂಬ್ರದ ಟಾಟಾ ಕಂಪೆನಿಯ ಗೂಡ್ಸ್ ವಾಹನವನ್ನು ಅದರ ಚಾಲಕನಾದ ಈರಣ್ಣ ಎಂಬಾತನು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವಂತೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಟೈಟಾಸ್ ಫೆರಾವೂ ಹಿಂಭಾಗಕ್ಕೆ ಢಿಕ್ಕಿ ಪಡಿಸಿಕೊಂಡು ಸ್ಕೂಟರ್ ಸಮೇತ ಟೈಟಾಸ್ ಫೆರಾವೂ ರವರನ್ನು ಡಾಮಾರು ರಸ್ತೆಯಲ್ಲಿ ಮುಂದಕ್ಕೆ ತಳ್ಳಿಕೊಂಡು ಹೋದ ಪರಿಣಾಮ ಗಂಭೀರ ಸ್ವರೂಪದ ಗಾಯಗೊಂಡ ಟೈಟಾಸ್ ಫೆರಾವೂ ರವರು ಸ್ಧಳದಲ್ಲಿಯೇ ಮೃತಪಟ್ಟಿರುತ್ತಾರೆ ಎಂಬಿತ್ಯಾದಿ.

Kankanady Town PS               

ಪಿರ್ಯಾದಿರವರು ಮಂಗಳೂರಿನ ಇಂಡಿಗೋ ಏರ್ ಲೈನ್ಸ್ ಗೆ ದಿನಾಂಕ 13-06-2023 ರಂದು ಕೆಲಸಕ್ಕೆಂದು ಮಾಹಿತಿಗಳೊಂದಿಗೆ ಆನ್ ಲೈನ್ ಮುಖೇನಾ ಅರ್ಜಿಯನ್ನು ಹಾಕಿದ್ದು ಅದೇ ದಿನ 12-28 ಗಂಟೆಗೆ 9598520567 ನೇ ನಂಬರ್ ನಿಂದ ಕರೆ ಮಾಡಿದ ವ್ಯಕ್ತಿ 1500/- ರೂಪಾಯಿಗಳನ್ನು ಪಾವತಿ ಮಾಡಿ ನಿಮ್ಮ  ಹೆಸರನ್ನು ನೊಂದಿಸಲಾಗುವುದು ಎಂದು ಹೇಳಿ ನೀಡಿದ A/C Holder Name INDIO AIRLINES A/C NO- 50100289941432 IFSC CODE- HDFC 0009384  ಖಾತೆಗೆ ಹಣವನ್ನು ಗೂಗಲ್ ಪೇ ಮೂಲಕ ಪಾವತಿಸಿರುತ್ತಾರೆ. ಮರುದಿನ ದಿನಾಂಕ 14-06-2023 ರಂದು ಇಂಟರ್ ವ್ಯೂವ್ ಇರುತ್ತದೆ. ಎಂದು ಹೇಳಿ 6000/- ರೂ ಪಾವತಿಸಿ ಎಂದು ಹೇಳಿದಂತೆ ಪಿರ್ಯಾದುದಾರರು ಹಣವನ್ನು ಪಾವತಿಸಿರುತ್ತಾರೆ. ಅದೇ ರೀತಿ ದಿನಾಂಕ 15-06-2023 ರಂದು ತರಬೇತಿಗೆ 10000/- ರೂ ಹಾಗೂ 16-06-2023 ರಂದು ಕೊರಿಯರ್ ಚಾರ್ಜ್ ಗೆಂದು 7500/- ರೂ ದಿನಾಂಕ 17-06-2023 ರಂದು 12500/- ರೂಗಳನ್ನುಮತ್ತು12-06-2023 ರಂದು ಬಟ್ಟೆಗೆ 8500/- ರೂ ಮತ್ತು ದಿನಾಂಕ 29-06-2033 ರಂದು ಇನ್ಸೂರೆನ್ಸ್ ಮಾಡಿಸಲೇಂದು 10500/- ರೂಪಾಯಿಗಳನ್ನು  A/C NO- 50100289941432 ಗೆ ಆರೋಪಿ ತಿಳಿಸಿದಂತೆ ಪಿರ್ಯಾದುದಾರರು ಪಾವತಿಸಿದ್ದು ಆರೋಪಿಯು ಕರೆ ಮಾಡಿ ದಿನಾಂಕ 02-07-2023 ರಂದು ಇಂಟರ್ ವ್ಯೂವ್ ಮತ್ತು 05-07-2023 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದು ಎಂದು ತಿಳಿಸಿರುತ್ತಾರೆ. ನಂತರ ಪಿರ್ಯಾದುದಾರರು ದಿನಾಂಕ 30-06-2023 ರಂದು ಆರೋಪಿತನಿಗೆ ಕರೆಯನ್ನು ಮಾಡಿ ಇಂಟರ್ ವ್ಯೂವ್ ಯಾವಾಗ ಎಂದು ಕೇಳಿದ್ದು ಇಂಟರ್ ವ್ಯೂವ್ ಯಾವಾಗ ಎಂದು ಕೇಳಿದ್ದು ಆರೋಫಿಯು 23-07-2023 ರಂದು ನೇರವಾಗಿ ಕರ್ತವ್ಯಕ್ಕೆ ವ್ರದಿ ಮಾಡಿಕೊಳ್ಳುವುದು ಎಂದು ತಿಳಿಸಿ ನಂತರ ಆರೋಪಿಯು ದಿನಾಂಕ 11-07-2023 ರಂದು ಪಿರ್ಯಾದುದಾರರಿಗೆ ಕರೆಯನ್ನು ಮಾಡಿ HR DONATION 9500/- ರೂ ಹಣವನ್ನು ಪಾವತಿಸಿ ಎಂದು ಹೇಳಿದ್ದು ಪಿರ್ಯಾದುದಾರರು ಹಣವನ್ನು ಪಾವತಿಸಿರುವುದಿಲ್ಲ. ಆರೋಪಿಯು ಪಿರ್ಯಾದುದಾರರಿಗೆ ಇಂಡಿಗೋ ಏರ್ ಲೈನ್ಸ್ ನಲ್ಲಿ ಕೆಲಸ ಮಾಡಿಸುವುದಾಗಿ ಒಟ್ಟು 56500/- ರೂಗಳನ್ನು ತನ್ನ ಖಾತೆಗೆ ಹಾಕಿಸಿಕೊಂಡು ಕೆಲಸ ಕೊಡಿಸದೇ ಮೋಸ ಮಾಡಿರುವುದಾಗಿ ಎಂಬತ್ಯಾದಿ.

Moodabidre PS  

ದಿನಾಂಕ 18-07-2023 ರಂದು ಬೆಳಿಗ್ಗೆ 4.15 ಗಂಟೆಗೆ ಠಾಣಾ ಸರಹದ್ದಿನ ಮಾರ್ಪಾಡಿ ಗ್ರಾಮದ ಸ್ವರಾಜ್ ಮೈದಾನದ ಹತ್ತಿರವಿರುವ ಮಾರ್ಕೆಟ್ ಬಳಿ 1) ಅಶೋಕ ಪ್ರಾಯ 52 ವರ್ಷ,  ವಾಸ; ಉರ್ಕಿ ಮನೆ, ಬಡಗ ಎಡಪದವು ಅಂಚೆ, ಮೂಡಬಿದ್ರೆ ತಾಲೂಕು. 2) ಮಂಜುನಾಥ್ ಪ್ರಾಯ: 39 ವರ್ಷ, ವಾಸ: ಅಚ್ಚರಿಕಟ್ಟೆ, ಪಡುಮಾರ್ನಾಡು ಗ್ರಾಮ, ಮೂಡಬಿದ್ರೆ ತಾಲೂಕು ಎಂಬುವರು ಯಾವುದೋ ಬೇವಾರೆಂಟು ತಕ್ಷೀರು ನಡೆಸುವ ಉದ್ದೇಶದಿಂದ ಕತ್ತಲೆಯಲ್ಲಿ ತಮ್ಮ ಇರುವಿಕೆಯನ್ನು ಮರೆ ಮಾಚುವ ರೀತಿಯಲ್ಲಿ ಕಂಡು ಬಂದಿದ್ದರಿಂದ ವಶಕ್ಕೆ ಪಡೆದು ಆರೋಪಿಗಳ ವಿರುದ್ದ ಕ್ರಮ ಜರುಗಿಸಿದ್ದಾಗಿದೆ.

 

2) ದಿನಾಂಕ 27.06.2023 ರಂದು ಪಿರ್ಯಾದಿ Savinaya ದಾರರ ಮನೆಯಿಂದ ಸುಮಾರು 4 ಕಿ. ಮೀ ದೂರದಲ್ಲಿರುವ ಅವರ ಕುಟುಂಬಕ್ಕೆ ಸಂಬಂಧಿಸಿದ ಬೆಳುವಾಯಿ ಗ್ರಾಮದ ಸರ್ವೆ ನಂಬರ್ 518/2 ಮತ್ತು 518/3 ರಲ್ಲಿ 0.09 ಎಕ್ರೆ ಸ್ಥಿರಾಸ್ತಿಯಲ್ಲಿದ್ದ ಸುಮಾರು 40 ವರ್ಷ ಮೇಲ್ಪಟ್ಟ ಮಾವು, ಹುಣಸೆ, ಹಾಗೂ ಉಪ್ಪರಿಕೆ ಜಾತಿಯ ಮರಗಳನ್ನು ಜಯಂತಿ ಪೂಜಾರಿ, ಅಶೋಕ ಮತ್ತು ಇತರರು ಸೇರಿ ಕಡಿದು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮರಗಳ ಮೌಲ್ಯ ಸುಮಾರು 3 ಲಕ್ಷ ರೂಪಾಯಿ ಗಳಷ್ಟು ಆಗಿರುತ್ತದೆ ಎಂಬಿತ್ಯಾದಿ

 

3) ಪಿರ್ಯಾದಿ Eshan K ದಾರರ ಸ್ನೇಹಿತ ಅಕ್ಷಯ್ ರವರು ತನ್ನ ಬಾಬ್ತು KA-19-EL-0250 ನಂಬರಿನ KTM ಡ್ಯೂಕ್ ಮೋಟಾರು ಸೈಕಲ್ ನ್ನು OLX ನಲ್ಲಿ ಮಾರಾಟ ಮಾಡಲು ತಿಳಿಸಿದಂತೆ ಪಿರ್ಯಾದಿದಾರರು OLX ನಲ್ಲಿ ಸದ್ರಿ ಬೈಕ್ ಮಾರಾಟದ ಬಗ್ಗೆ ಮಾಹಿತಿಯನ್ನು ನೀಡಿದ್ದು, ದಿನಾಂಕ 16-07-2023 ರಂದು ಈಶಾನ್ ಶೆಟ್ಟಿ ಎಂಬಾತನು ಪಿರ್ಯಾದಿದಾರರ ಇನ್‌ಸ್ಟಾಗ್ರಾಮ್ ಖಾತೆಗೆ ಕರೆ ಮಾಡಿ ಸದ್ರಿ ಬೈಕ್ ನ್ನು ಖರೀದಿಸುವುದಾಗಿ ತಿಳಿಸಿ ಸಂಜೆ 6.20 ಗಂಟೆಗೆ ಮೂಡಬಿದ್ರೆ ಶಿರ್ತಾಡಿಯ ಬಸ್ಸು ನಿಲ್ದಾಣದ ಹತ್ತಿರ ಬಂದು ತಾನು ಬೈಕ್ ಟೆಸ್ಟ್ ಡ್ರೈವ್ ಮಾಡುವುದಾಗಿ ಹೇಳಿ ಬೈಕನ್ನು ತೆಗೆದುಕೊಂಡು ಹೋಗಿದ್ದು, ವಾಪಸು ನೀಡದೆ ವಂಚಿಸಿ ಮೋಸ  ಮಾಡಿರುವುದಾಗಿದೆ ಎಂಬಿತ್ಯಾದಿ.

 

Ullal PS

ಪಿರ್ಯಾದಿ ಶ್ರೀಮತಿ ಹಿಲ್ಡಾ ಡಿ’ಸೋಜ ರವರು ಡೋರ್ ನಂಬ್ರ 17-84/7, ಸಂತ ಜೋಸೆಫರ ಕಂಪೌAಡ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಒಂಬತ್ತುಕೆರೆ, ಉಳ್ಳಾಲ ಇಲ್ಲಿರುವ ತಮ್ಮ ಬಾಬ್ತು ಸುಮಾರು 40 ವರ್ಷ ಹಳೆಯದಾದ ಮತ್ತು ಮಣ್ಣಿನ ಗೋಡೆಗಳ ಮನೆಯಲ್ಲಿ ವಾಸವಾಗಿದ್ದು, ಸದ್ರಿ ಮನೆಯು ಮಳೆಗಾಲದಲ್ಲಿ ಅಲ್ಲಲ್ಲಿ ಸೋರುತ್ತಿರುವುದರಿಂದ ಈ ಬಗ್ಗೆ ಸದ್ರಿ ಮನೆಗೆ ಬೀಗ ಹಾಕಿ ಪಕ್ಕದಲ್ಲಿರುವ ತನ್ನ ತಂಗಿಯ ಮನೆಯಲ್ಲಿ ಮಗ ಹಾಗೂ ಅಕ್ಕನೊಂದಿಗೆ ವಾಸವಾಗಿರುವುದಾಗಿದೆ. ಪಿರ್ಯಾದಿದಾರರ ಹೆಂಚಿನ ಮನೆಗೆ ದಿನಾಂಕ 16/07/2023 ರಂದು ರಾತ್ರಿ ಸುಮಾರು 1 ರಿಂದ 3 ಗಂಟೆಯ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಮನೆಯ ಮಾಡಿನ ಹೆಂಚನ್ನು ತೆಗೆದು ಒಳಗೆ ನುಗ್ಗಿ ಮನೆಯಲ್ಲಿದ್ದ ಸುಮಾರು 63,800/- ರೂಪಾಯಿ ಮೌಲ್ಯದ ಸಾಮಾಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಕಳ್ಳರನ್ನು ಪತ್ತೆಮಾಡಿ ಕಳವಾದ ಮನೆಯ ಸೊತ್ತುಗಳನ್ನು ವಶಪಡಿಸಿಕೊಂಡು ನೀಡಬೇಕಾಗಿ ಕೋರಿಕೆ ಎಂಬುದು ಪ್ರಕರಣದ ಸಾರಾಂಶ ಎಂಬಿತ್ಯಾದಿ.

Last Updated: 21-08-2023 02:15 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080