ಅಭಿಪ್ರಾಯ / ಸಲಹೆಗಳು

 

 

 

Crime Report in Mangalore East Traffic PS                                

ಪಿರ್ಯಾದಿದಾರರಾದ ಶಾಂಭವಿ ಎಸ್ ಶೆಟ್ಟಿ ಎಂಬುವರು ಈ ದಿನ ದಿನಾಂಕ: 18/08/2023 ರಂದು ಮನೆಯಲ್ಲಿದ್ದ ವೇಳೆ ಅವರ ಅಳಿಯ ಭರತೇಶ್ ಶೆಟ್ಟಿ ರವರು ದೂರವಾಣಿ ಕರೆ ಮಾಡಿ ತಮ್ಮ ತಾಯಿ ನಳೀನಿ ಆರ್ ಶೆಟ್ಟಿ ರವರಿಗೆ ನಂತೂರು ಬಳಿ ರಸ್ತೆ ಅಪಘಾತವಾಗಿದ್ದು ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಆಸ್ಪತ್ರೆಗೆ ಹೋಗಿ ನೋಡಿದಾಗ ಗಾಯಾಳು ನಳೀನಿ ಆರ್ ಶೆಟ್ಟಿರವರು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ಈ ಬಗ್ಗೆ ಗಾಯಾಳುವನ್ನು ಆಸ್ಪತ್ರೆಗೆ ಕರೆತಂದವರಲ್ಲಿ ವಿಚಾರಿಸಿದಾಗ ನೊಂದಣಿ ಸಂಖ್ಯೆ: KA-19-AC-5664 ನೇಯ ಆಟೋರಿಕ್ಷಾವನ್ನು ಅದರ ಚಾಲಕ ಲೋಕೇಶ್ ಅಮೀನ್ ಎಂಬಾತನು ನಂತೂರು ಕಡೆಯಿಂದ ಶಿವಭಾಗ್ ಕಡೆಗೆ ಇರುವ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು 12-40 (PM) ಗೆ ನಂತೂರು ಜಂಕ್ಷನ್ ಬಳಿಯ ಬಸ್ ನಿಲ್ದಾಣದಿಂದ ಸ್ಪಲ್ಪ ದೂರ ಮುಂದೆ ತಲುಪುತ್ತಿದ್ದಂತೆ ತನ್ನ ಮುಂಭಾಗದಲ್ಲಿ ಹೋಗುತ್ತಿದ್ದ ವಾಹನವೊಂದನ್ನು ಎಡ ಭಾಗದಿಂದ ಓವರ್ ಟೇಕ್ ಮಾಡುವ ಭರದಲ್ಲಿ ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಆಟೋ ರಿಕ್ಷಾ ರಸ್ತೆಯ ತೀರಾ ಎಡಕ್ಕೆ ಚಲಿಸಿ ರಸ್ತೆಯಿಂದ ಕೆಳಗೆ ಇಳಿದಿದ್ದು ಪುನಃ ರಸ್ತೆಗೆ ತಿರುಗಿಸುವ ವೇಳೆ ನಿಯಂತ್ರಣ ತಪ್ಪಿ ಎಡಕ್ಕೆ ವಾಲಿ ರಸ್ತೆಗೆ ಬಿದ್ದಿರುತ್ತದೆ, ಇದರಿಂದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ನಳೀನಿ ರವರಿಗೆ ತಲೆಗೆ ಜಜ್ಜಿದ ರೀತಿಯ ಒಟ್ಟೆಯಾದ ಗಾಯವಾಗಿದ್ದು ಅದೇ ಆಟೋರಿಕ್ಷಾದಲ್ಲಿಯೇ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿರುವುದಾಗಿ ತಿಳಿಸಿರುತ್ತಾರೆ, ಆದುದರಿಂದ ಸದ್ರಿ ಅಪಘಾತದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Panambur PS

ಪಿರ್ಯಾದಿ RAMESH ACHARYA ದಾರರು ಕಳೆದ 04 ವರ್ಷಗಳಿಂದ ಬೈಕಂಪಾಡಿಯ ಎ.ಪಿ.ಎಮ್.ಸಿಯಲ್ಲಿ ಸ್ವಿಸ್  ಸೆಕ್ಯೂರಿಟಿ ಖಾಸಗಿ ಕಂಪೆನಿಯ ಸೆಕ್ಯೂರಿಟಿ ಗಾರ್ಡ್  ಆಗಿ  ಕೆಲಸ ಮಾಡಿಕೊಂಡಿರುತ್ತಾರೆ, ದಿನಾಂಕ: 17-08-2023 ರಂದು ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ಜೊತೆ ಕೇಶವ ಆಚಾರ್ಯ ರವರಿಗೆ ರಾತ್ರಿ ಪಾಳಿಯಲ್ಲಿ ಡ್ಯೂಟಿ ಇದ್ದು, ಆದರಂತೆ ರಾತ್ರಿ 9-00 ಗಂಟೆಗೆ  ಕೆಲಸಕ್ಕೆ ಬಂದಿರುತ್ತಾರೆ. ಇಬ್ಬರು ಮೇನ್ ಗೇಟ್ ನಲ್ಲಿ ಡ್ಯೂಟಿಯಲ್ಲಿ ಇರುವ  ಸಮಯ ರಾತ್ರಿ 11-30 ಗಂಟೆಗೆ ಪಿರ್ಯಾದಿದಾರರ ಎ.ಪಿ.ಎಮ್.ಸಿ ಕಟ್ಟಡದ ವಾಣಿಜ್ಯ ಮಳಿಗೆಯ ಹಿಂಭಾಗದ ಹಳೆಯ ಹರಾಜು ಕಟ್ಟಡದ ಹತ್ತಿರದಿಂದ ಕಾಂಪ್ಲೆಕ್ಸ್ ಗೆ ಸುತ್ತುಹೊಡೆದು ವಾಪಸ್ಸು ಮೇನ್ ಗೇಟಿಗೆ ಹೋಗಿರುತ್ತಾರೆ. ಆ ಸಮಯದಲ್ಲಿ ಹರಾಜುಕಟ್ಟೆಯ ಒಳಗಡೆ ಕೆಲವು ಗುಜುರಿ ಹೆಕ್ಕುವವರು, ಭಿಕ್ಷುಕರು, ಮದ್ಯಪಾನ ಮಾಡಿದ ಕೆಲವು ಲಾರಿ ಚಾಲಕರು  ಮಲಗಿಕೊಂಡು ಹೆಚ್ಚಾಗಿ ಇರುತ್ತಾರೆ.  ನಿನ್ನೆ ದಿನ ಕೂಡ ಅವರಲ್ಲಿ ಕೆಲವರು ಮಲಗಿಕೊಂಡಿದ್ದರು. ಪಿರ್ಯಾದಿದಾರರಿಗೆ  ಬೆಳಿಗ್ಗೆ 09-00 ಗಂಟೆ ತನಕ ಡ್ಯೂಟಿ ಇದ್ದುದರಿಂದ ಪಿರ್ಯಾದಿದಾರರು ಮೇನ್ ಗೇಟ್ ನಲ್ಲಿಯೇ ಡ್ಯೂಟಿಯಲ್ಲಿ ಇದ್ದಾಗ ದಿನಾಂಕ: 18-08-2023 ರಂದು ಬೆಳಿಗ್ಗೆ 08-45 ಗಂಟೆಯ ಸುಮಾರಿಗೆ ತಮ್ಮ ಎ.ಪಿ.ಎಮ್.ಸಿಯ ಹರಾಜುಕಟ್ಟೆಯ ಒಳಗಡೆ ವ್ಯಕ್ತಿಯೊಬ್ಬನಿಗೆ ಹಲ್ಲೆಯಾಗಿ ಬಿದ್ದುಕೊಂಡಿದ್ದಾನೆ ಎಂದು ಹರಾಜುಕಟ್ಟೆಯಲ್ಲಿ ಹೆಚ್ಚಾಗಿ ಮಲಗುತ್ತಿದ್ದ ವಯಸ್ಸಾದ ವ್ಯಕ್ತಿಯೊಬ್ಬನು ಹೇಳಿದ. ಪಿರ್ಯಾದಿದಾರರು ಕೂಡಲೆ ಅಲ್ಲಿಗೆ ಹೋಗಿ ನೋಡಿದ್ದು, ಪರಿಚಯವಿಲ್ಲದ ವ್ಯಕ್ತಿ ಒಬ್ಬಾತನು  ಚಾಪೆ ಮೇಲೆ ಅಂಗಾತನೆ ಬಿದ್ದಿದ್ದು, ತಲೆಯಲ್ಲಿ ಹಾಗೂ ಮುಖದ ಮೇಲೆ ಗಾಯಗಳು ಆಗಿ ಚಾಪೆ ಮತ್ತು ನೆಲದಲ್ಲಿ ರಕ್ತ ಹರಿದು ಬಿದ್ದಿರುವುದು ನೋಡಿದ್ದು, ಆತನು ಮೃತಪಟ್ಟಿರುತ್ತಾನೆ ಎಂದು ನೋಡಿದಾಗ ಗೊತ್ತಾಯಿತು. ಪಿರ್ಯಾದಿದಾರರು ಕೂಡಲೆ ತಮ್ಮ ಸೆಕ್ಯೂರಿಟಿ ಸುಪರ್ ವೈಸರ್ ವಿಜಯ್ ರವರಿಗೆ  ಪೋನ್ ಮಾಡಿ ಹೇಳಿರುತ್ತಾರೆ. ಆವರು ಕೂಡ ನೋಡಿ ಆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಿರುತ್ತಾರೆ.  ಆತನ ಪರಿಚಯ ಯಾರಿಗೂ ಇರುವುದಿಲ್ಲ. ಆತನು ಕೃಷಿ ಉತ್ಪನ್ನ ಮಾರುಕಟ್ಟೆಯ ಹರಾಜುಕಟ್ಟೆಯಲ್ಲಿ ಹೆಚ್ಚಾಗಿ ಮಲಗುತ್ತಿದ್ದ ವ್ಯಕ್ತಿಯಾಗಿರುತ್ತಾನೆ. ಆತನಿಗೆ ವಯಸ್ಸು ಸುಮಾರು 45 ವರ್ಷ ಅಗಬಹುದು. ಕಂದು ಬಣ್ಣದ ಪ್ಯಾಂಟ್ ಧರಿಸಿಕೊಂಡಿರುತ್ತಾನೆ, ಅಂಗಿ ಹಾಕದೆ ಬರಿಮೈಯಲ್ಲಿ ಇರುತ್ತಾನೆ. ಅತನನ್ನು ಯಾವುದೋ ಕಾರಣಕ್ಕಾಗಿ  ಯಾರೋ ದಿನಾಂಕ: 17-08-2023 ರ ರಾತ್ರಿ 11-30 ಗಂಟೆಯಿಂದ ದಿನಾಂಕ: 18-08-2023 ರ ಬೆಳಗ್ಗಿನ ಮದ್ಯೆ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾರೆ ಎಂಬಿತ್ಯಾದಿ.

Urva PS

ದಿನಾಂಕ 18-08-2023 ರಂದು ಬೆಳಿಗ್ಗೆ 11-00 ಗಂಟೆಗೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ  ಉರ್ವ ಸ್ಟೋರ್ ಮೈದಾನದ ಬದಿಯಲ್ಲಿರುವ ಕಾರ್ಪೋರೇಷನ್ ಕಟ್ಟಡದಲ್ಲಿ ದಿನಸಿ ಅಂಗಡಿಯ ಬಳಿ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ GOKUL DAS(55) ವ್ಯಕ್ತಿಯು ಕಾನೂನು ಬಾಹಿರ ಮಟ್ಕಾ ಚೀಟಿ ದಂಧೆ ನಡೆಸುತ್ತಿರುವುದಾಗಿ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿ, ರೂ 4,24,490/- ಮಟ್ಕಾ ನಗದು ಹಣ ಹಾಗೂ 25-30 ಮಟ್ಕಾ ಚೀಟಿಗಳನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Mangalore South PS                              

ದಿನಾಂಕ : 17-08-2023 ರಂದು ರಾತ್ರಿ 10-15 ಗಂಟೆಯ ಸಮಾರಿಗೆ ಪ್ರಕರಣದ ಪಿರ್ಯಾದಿದಾರರಾದ ಈರಪ್ಪ ಕುರಿ @ ವೀರೇಶ್  ಹಾಗೂ ಅವರೊಂದಿಗೆ ಶ್ರೀಕಾಂತ್, ರಘು ಮತ್ತು ಆರೋಪಿ ಮಹಮ್ಮದ್ ಹನೀಫ್ ರವರು ಮಂಗಳೂರು ನಗರದ ಸರ್ವಿಸ್ ಬಸ್ ನಿಲ್ದಾಣದ ಫೂಟ್ ಪಾತ್ ನ ಗೂಡಿಗಂಡಿ ಬಳಿಯಿರುವ ಸಮಯ ಆರೋಪಿ ಮಹಮ್ಮದ್ ಹನೀಫ್ ನಲ್ಲಿ ಪಿರ್ಯಾದಿದಾರರು ತನಗೆ ಕೊಡಬೇಕಾದ ಡ್ರಿಂಕ್ಸ್ ಮಾಡಿದ ಬಿಲ್ ನ ಹಣವನ್ನು ಕೊಡುವಂತೆ ಕೇಳಿದಾಗ, ಆರೋಪಿಯು ಪಿರ್ಯಾದಿದಾರರಲ್ಲಿ ಹಣವನ್ನು ಕೊಡುವುದಿಲ್ಲ  ಎಂದು ಹೇಳಿರುತ್ತಾರೆ. ಈ ಸಮಯ ಪಿರ್ಯಾದಿದಾರರಿಗೆ ಹಾಗೂ ಆರೋಪಿಗೆ ಮಾತಿಗೆ ಮಾತು ಬೆಳೆದು ಉರುಡಾಟವಾಗಿ, ಪಿರ್ಯಾದಿದಾರರು ಆರೋಪಿಯನ್ನು ಕೈಯಿಂದ ದೂಡಿರುತ್ತಾರೆ. ಇದರಿಂದ ಕೋಪಗೊಂಡ ಆರೋಪಿಯು ಪಿರ್ಯಾದಿದಾರರಲ್ಲಿ “ನನ್ನಲ್ಲೇ ಹಣ ಕೇಳಿ, ನನ್ನ ಮೇಲೆ ಕೈ ಮಾಡುತ್ತೀಯಾ, ನಾನು ನಿನ್ನನ್ನು ನಾನು ಕೊಲ್ಲದೆ ಬಿಡುವುದಿಲ್ಲ” ಎಂದು ಹೇಳಿ ಪ್ಯಾಂಟ್ ಕಿಸೆಯಿಂದ ಫೋಲ್ಡಿಂಗ್ ಬ್ಲೇಡ್ ತೆಗೆದು, ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಕುತ್ತಿಗೆಗೆ ಗುರಿಯಿಟ್ಟು ಬೀಸಿದಾಗ,  ಪಿರ್ಯಾದಿದಾರರು ಎಡ ಕೈ ಅಡ್ಡ ಹಿಡಿದಿದ್ದರಿಂದ, ಅದು ಎಡ ಕೈಯ ಕೋಲು ಕೈಗೆ ತಾಗಿ ರಕ್ತಗಾಯವಾಗಿರುತ್ತದೆ. ಆರೋಪಿ ಮಹಮ್ಮದ್ ಹನೀಫ್ ಪುನಃ ಪಿರ್ಯಾದಿದಾರರನ್ನು ಕೊಲ್ಲಲು ಫೋಲ್ಡಿಂಗ್ ಬ್ಲೇಡ್ ನಿಂದ ಕುತ್ತಿಗೆಗೆ ಗುರಿಯಿಟ್ಟು ಬೀಸಿದಾಗ, ಪಿರ್ಯಾದಿದಾರರು ತಪ್ಪಿಸಿಕೊಳ್ಳಲು ತಿರುಗಿದ್ದರಿಂದ ಆ ಏಟು ಕುತ್ತಿಗೆಯ ಹಿಂಬದಿಗೆ ತಾಗಿ ರಕ್ತಗಾಯವಾಗಿರುತ್ತದೆ. ಅಷ್ಟರಲ್ಲಿ ಶ್ರೀಕಾಂತ್, ರಘು ಹಾಗೂ ಅಲ್ಲಿಯೇ ಇದ್ದ ಇತರ ಸಾರ್ವಜನಿಕರು ಬರುವುದನ್ನು ನೋಡಿ, ಆರೋಪಿಯು, ಪಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿ  ಸ್ಥಳದಿಂದ ಪರಾರಿಯಾಗಿರುತ್ತಾನೆ ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 21-08-2023 02:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080