Crime Report in Traffic North Police Station
ದಿನಾಂಕ 18-09-2023 ರಂದು ಪಿರ್ಯಾದಿ R K Poornesh ದಾರರು ಅವರ ತಂದೆಯ ಬಾಬ್ತು KA-19-EH-2100 ನಂಬ್ರದ ಸ್ಕೂಟರಿನಲ್ಲಿ ತನ್ನ ತಮ್ಮನಾದ ಆರ್.ಕೆ ಪ್ರಜ್ವಲ್ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಾರ್ನಾಡು ಜಂಕ್ಷನಿನಿಂದ ಗೇರುಕಟ್ಟೆಯ ದರ್ಗಾ ರಸ್ತೆಯ ಮೂಲಕ ಮನೆಯ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ದರ್ಗಾ ರಸ್ತೆಯ ಸರ್ಕಾರಿ ಜೂನಿಯರ್ ಕಾಲೇಜ್ ಗ್ರೌಂಡ್ ಬಳಿ ಸಮೀಪಿಸುತ್ತಿದಂತೆ ಬೆಳಿಗ್ಗೆ ಸಮಯ ಸುಮಾರು 08:30 ಗಂಟೆಗೆ ಎದುರಿನಿಂದ ಅಂದರೆ ಕಿನ್ನಿಗೋಳಿ ಕಡೆಯಿಂದ KA-25-Z-0617 ನಂಬ್ರದ ಮಾರುತಿ ಓಮ್ನಿ ಕಾರನ್ನು ಅದರ ಚಾಲಕನಾದ ಬಸವರಾಜ್ ಕೊರಗರ್ ಎಂಬಾತನು ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಬಲಬದಿಯ ಹ್ಯಾಂಡಲ್ ಕಾರ್ನರಿಗೆ ಡಿಕ್ಕಿ ಪಡಿಸಿದ್ದು, ಡಿಕ್ಕಿಯ ಪರಿಣಾಮ ಸಹಸವಾರನಾಗಿ ಕುಳ್ಳಿತಿದ ಪ್ರಜ್ವಲ್ ರವರು ಸ್ಕೂಟರಿನ ಬಲಭಾಗಕ್ಕೆ ಬಿದ್ದಿದು, ಅದೇ ವೇಳೆಗೆ ಅಪಘಾತ ಪಡಿಸಿದ ಓಮಿನಿ ಕಾರು ಸಹಸವಾರ ಪ್ರಜ್ವಲ್ ರವರನ್ನು ಡಾಮಾರು ರಸ್ತೆಯಲ್ಲಿ ಮುಂದಕ್ಕೆ ತಳ್ಳಿಕೊಂಡು ಹೋಗಿದ್ದು, ಇದರ ಪರಿಣಾಮ ಹಣೆಯ ಬಲಬದಿ ಗುದ್ದಿದ ಗಂಭೀರ ಸ್ವರೂಪದ ಗಾಯವಾಗಿ ಊದಿಕೊಂಡಿದ್ದು, ಮೈ ಕೈಯಲೆಲ್ಲಾ ಅಲ್ಲಲ್ಲಿ ಚರ್ಮ ತರಚಿಕೊಂಡಿದ್ದು, ಮೂಗಿನಲ್ಲಿ ರಕ್ತ ಹೊರ ಬಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಜ್ವಲ್ ರವರನ್ನು ಚಿಕಿತ್ಸೆಯ ಬಗ್ಗೆ ಮುಲ್ಕಿಯ ಸರಕಾರಿ ಆಸ್ಪತ್ರೆಗೆ ಸಾಗಿಸಲ್ಪಟ್ಟು, ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿರುತ್ತಾರೆ ಎಂಬಿತ್ಯಾದಿ.
Moodabidre PS
ಪಿರ್ಯಾದಿದಾರರಾದ ಇಮ್ರಾನ್ ಎಂಬುವರ ಹೆಂಡತಿ ವಸೀಮತ್ (ಪ್ರಾಯ 23) ವರ್ಷ ಎಂಬುವರು ತನ್ನ ಮಗು ಮತ್ತು ಗಂಡನೊಂದಿಗೆ ಅನ್ಯೋನ್ಯತೆಯಿಂದ ಇದ್ದು, ಪಿರ್ಯಾದಿದಾರರು ದಿನಾಂಕ 17-09-2023 ರಂದು ಎಂದಿನಂತೆ ಹೆಂಡತಿ ವಸೀಮತ್ ಮತ್ತು ಮನೆಯವರಿಗೆ ರಾತ್ರಿಯ ಊಟವನ್ನು ಕೊಟ್ಟು ತನ್ನ ಗೆಳೆಯರ ಜೊತೆಯಲ್ಲಿ ಹೋಗಿದ್ದು, ನಂತರ ಪಿರ್ಯಾದಿದಾರರು ರಾತ್ರಿ 11.00 ಗಂಟೆಗೆ ವಾಪಾಸು ಮನೆಗೆ ಬರುವಾಗ ಹೆಂಡತಿ ವಸೀಮತ್ ರವರು ಮನೆಯಲ್ಲಿ ಇಲ್ಲದೇ ಇದ್ದು, ಮನೆಯ ಸುತ್ತ ಮುತ್ತಲು ಹುಡುಕಾಡಿ ತನ್ನ ಬಾವನಿಗೂ ದೂರವಾಣಿ ಕರೆ ಮಾಡಿ ವಿಚಾರಿಸಿದಲ್ಲಿ ಇಲ್ಲದೇ ಇದ್ದು, ತನ್ನ ಮೊಬೈಲ್ ನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದು ಹಾಗೂ ಇನ್ನೊಂದು ಮೊಬೈಲ್ ನ್ನು ಮನೆಯಲ್ಲಿ ಇಟ್ಟು ಎಲ್ಲಿಗೋ ಹೋಗಿರುತ್ತಾರೆ ಎಂಬಿತ್ಯಾದಿ.
ಕಾಣೆಯಾದವರ ಚಹರೆ ಗುರುತು:
ಹೆಸರು: ವಸೀಮತ್ ಪ್ರಾಯ 23 ವರ್ಷ
ಜನ್ಮ ದಿನಾಂಕ: 09-05-1999
ಎತ್ತರ: 5 ಅಡಿ 4 ಇಂಚು
ಚಹರೆ: ದುಂಡು ಮುಖ, ಗೋದಿ ಮೈಬಣ್ಣ, ಸಾದಾರಣ ಶರೀರ
Barke PS
ಪಿರ್ಯಾದಿದಾರರಾದ ಶ್ರೀ ಸತೀಶ್ ರವರು ಸುಲ್ತಾನ್ ಭತ್ತೇರಿ ರಸ್ತೆಯ ಎಸ್. ಆರ್ ಭವನ ಹಿಂಬದಿ ಸತೀಶ್ ಸ್ಟೋರ್ ಎಂಬ ದಿನಸಿ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದು, ದಿನಾಂಕ: 17-09-2023 ರಂದು ಪಿರ್ಯಾದಿದಾರರ ಮನೆಯ ಕಂಪೌಂಡಿನ ಬಳಿಯಿರುವ ಚರಣ್ ಶೇಟ್ ಎಂಬಾತನು ಬೆಳಿಗ್ಗೆ ಸಮಯ ಸುಮಾರು 11-00 ಗಂಟೆಗೆ ಪಿರ್ಯಾದಿದಾರರು ತಮ್ಮ ದಿನಸಿ ಅಂಗಡಿಯಲ್ಲಿ ಕೆಲಸದಲ್ಲಿ ಬಂದು ರೂ. 50/- ಹಣವನ್ನು ಕೇಳಿದಾಗ ಕೊಟ್ಟು ಕಳಿಸಿಕೊಟ್ಟಿದ್ದು ನಂತರ ಸಂಜೆ ಸಮಯ ಸುಮಾರು 5-30 ಗಂಟೆಗೆ ಚರಣ್ ಶೇಟ್ ನು ವಾಪಾಸು ಪಿರ್ಯಾದಿಯವರ ಅಂಗಡಿಗೆ ಬಂದು ಪುನಃ ಹಣವನ್ನು ಕೊಡುವಂತೆ ಕೇಳಿದಾಗ ರೂ. 60/- ಹಣವನ್ನು ಕೊಟ್ಟಿದ್ದು ಹಣವನ್ನು ಪಿರ್ಯಾದಿದಾರರ ಅಂಗಡಿಯಲ್ಲಿ ಬೀಸಾಡಿ ನನಗೆ ಇಷ್ಟು ಹಣ ಸಾಕಾಗುವುದಿಲ್ಲ ಜಾಸ್ತಿ ಹಣವನ್ನು ನೀಡುವಂತೆ ಪಿರ್ಯಾದಿದಾರರಿಗೆ ಬೆದರಿಸಿ “ಬೇವರ್ಸಿ ರಂಡೇ ಮಗ” ಎಂದು ಅವಾಚ್ಯ ಶಬ್ದಗಳಿಂದ ಬೈದು ಇವತ್ತು ನಿನ್ನನ್ನು ಬೀಡುವುದಿಲ್ಲ ಎಂದು ಪಿರ್ಯಾದಿದಾರರನ್ನು ತಡೆದು ಕೊಲೆ ಮಾಡುವ ಉದ್ದೇಶದಿಂದ ಆತನಲ್ಲಿದ್ದ ಚಾಕು ಒಂದನ್ನು ತೆಗೆದು ಪಿರ್ಯಾದಿದಾರರ ಕುತ್ತಿಗೆಗೆ ತಿವಿಯಲು ಬಂದಾಗ ಪಿರ್ಯಾದಿದಾರರು ತಮ್ಮ ಬಲ ಕೈಯಿಂದ ತಡೆಯಲು ಪ್ರಯತ್ನಿಸಿದಾಗ ಚಾಕು ಪಿರ್ಯಾದಿದಾರರ ಬಲ ಕೈಯ ಮುಂಗೈಗೆ ತಾಗಿ ತೀವ್ರ ತರಹದ ರಕ್ತಗಾಯವಾಗಿರುತ್ತದೆ. ನಂತರ ಪಿರ್ಯಾದಿದಾರರು ತೀವ್ರ ನೋವಿನಿಂದ ರಕ್ತ ಬರುವುದನ್ನು ನೋಡಿ ಬೊಬ್ಬೆ ಹಾಕಿದಾಗ ಆಪಾದಿತ ಚರಣ್ ಶೇಟ್ ನು ನೋಡಿ ಚಾಕುವನ್ನು ಅಂಗಡಿಯಲ್ಲಿ ಬೀಸಾಡಿ ಓಡಿ ಹೋಗಿರುತ್ತಾನೆ. ಅದೇ ಸಮಯ ಪಿರ್ಯಾದಿದಾರರು ಬೊಬ್ಬೆ ಹಾಕುವುದನ್ನು ಕೇಳಿಸಿಕೊಂಡು ಅವರ ಮನೆಯ ಕಂಪೌಂಡ್ ಪಕ್ಕದಲ್ಲಿರುವ ಅಮರನಾಥ ಶೆಟ್ಟಿಯವರು ಅಂಗಡಿಗೆ ಬಂದು ಪಿರ್ಯಾದಿದಾರರನ್ನು ಆಟೋ ರಿಕ್ಷಾದಲ್ಲಿ ಕುಳ್ಳಿರಿಸಿ ಲೇಡಿ ಹಿಲ್ ಬಳಿಯಿರುವ ಉಳ್ಳಾಲ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ನಂತರ ಪಿರ್ಯಾದಿದಾರರು ಮಂಗಳೂರು ಜಿಲ್ಲಾ ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದಿರುವುದು ಎಂಬಿತ್ಯಾದಿ.
Mulki PS
ಪಿರ್ಯಾದಿದಾರೆ ಶ್ರೀಮತಿ ವಸಂತಿರವರು ಬೆಳ್ಳಾಯೂರು ಗ್ರಾಮದ ಕೋಲ್ನಾಡು ಚಂದ್ರಮೌಳೇಶ್ವರ ರಸ್ತೆಯ ಶ್ರೀನಿಧಿ ಮನೆಯಲ್ಲಿ ತನ್ನ ಗಂಡನೊಂದಿಗೆ ವಾಸವಾಗಿದ್ದು, ದಿನಾಂಕ: 17-09-2023 ರಂದು ಪಿರ್ಯಾದಿದಾರು ಔಷದಿ ತರಲು ಹಳೆಯಂಗಡಿಗೆ ಹೋಗಿ ವಾಪಾಸ್ಸು ತನ್ನ ಮನೆಗೆ ಬಂದ ವೇಳೆ ಅಪರಿಚಿತ ಯುವಕನೋರ್ವನು ಮನೆಗೆ ಬಂದು ಪೆಟ್ರೋಲ್ ತುಂಬಿಸಲು ಒಂದು ಬಾಟಲಿಯನ್ನು ಕೇಳಿದ್ದು, ಪಿರ್ಯಾದಿದಾರರು ಮನೆಯಲ್ಲಿದ್ದ ಒಂದು ಖಾಲಿ ಬಾಟಲಿಯನ್ನು ನೀಡಿದ್ದು, ಇದಾದ ಬಳಿಕ ಪಿರ್ಯಾದಿದಾರರು ಮಾತ್ರೆಯನ್ನು ಸೇವಿಸಿ ಮನೆಯೊಳಗಿದ್ದಾಗ ಮಧ್ಯಾಹ್ನ ಸುಮಾರು 12-30 ಗಂಟೆಗೆ ಬಾಟಲಿ ತೆಗೆದುಕೊಂಡು ಹೋಗಿದ್ದ ಯುವಕನು ಪಿರ್ಯಾದಿದಾರರನ್ನು ಕರೆದು ಈ ಬಾಟಲಿ ದೊಡ್ಡದಾಗುತ್ತದೆ ಸಣ್ಣ ಬಾಟಲಿ ಇದೆಯಾ ಎಂದು ಕೇಳಿದಾಗ ಪಿರ್ಯಾದಿದಾರರು ಮನೆಯ ಬಾಗಿಲನ್ನು ತೆರೆದು ಒಂದು ಕಾಲನ್ನು ಮನೆಯ ಹೊರಗೆ ಸಿಟ್ ಔಟ್ ಗೆ ಇರಿಸುತ್ತಿದ್ದಾಗ ಸಿಟ್ ಔಟ್ ನಲ್ಲಿ ನಿಂತಿದ್ದ ಇಬ್ಬರು ಅಪರಿಚಿತ ಯುವಕರು ಪಿರ್ಯಾದಿದಾರರ ಕುತ್ತಿಗೆಗೆ ಚಾಕುವನ್ನು ಇರಿಸಿ ಬೆದರಿಸಿ ಪಿರ್ಯಾದಿದಾರರ ಕುತ್ತಿಗೆಯಲ್ಲಿ ಧರಿಸಿದ್ದ ಸುಮಾರು 40 ಗ್ರಾಮ್ ತೂಕದ ಸುಮಾರು 2 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಎಳೆದುಕೊಂಡು ಅಂಗಳದಲ್ಲಿ ನಿಂತಿದ್ದ ಇತರ ಇಬ್ಬರು ಅಪರಿಚಿತರ ಜೊತೆ ಪರಾರಿಯಾಗಿದ್ದು, ಆರೋಪಿತರು ಪಿರ್ಯಾದಿದಾರರ ಕುತ್ತಿಗೆಯ ಚಿನ್ನದ ಸರವನ್ನು ಬಲತ್ಕಾರವಾಗಿ ಎಳೆದು ತೆಗೆದ ಪರಿಣಾಮ ಪಿರ್ಯಾದಿದಾರರ ಕುತ್ತಿಗೆಗೆ ನೋವುಂಟಾಗಿದ್ದು, ಎಡಕಿವಿಗೆ ಸಣ್ಣ ರಕ್ತಗಾಯವಾಗಿರುತ್ತದೆ. ಆರೋಪಿತರು 4 ಜನರು ಸಮಾನ ಉದ್ದೇಶಿತರಾಗಿ ಪಿರ್ಯಾದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದಲ್ಲದೇ ಪಿರ್ಯಾದಿದಾರರಿಗೆ ಗಾಯವುಂಟು ಮಾಡಿರುತ್ತಾರೆ ಎಂಬಿತ್ಯಾದಿ.
2) ಪಿರ್ಯಾದಿ Sooryaprakash N Rao ದಾರರು KA-19-EC-2398 ನೇ ನೋಂದಣಿ ಸಂಖ್ಯೆ ಬಜಾಜ್ ಡಿಸ್ಕವರ್ 150 ಸಿಸಿ ವಾಹನದ ಮಾಲಕರಾಗಿದ್ದು, ದಿನಾಂಕ:17-09-2023 ರಂದು ಬೆಳಿಗ್ಗೆ ಸುಮಾರು 07-30 ಗಂಟೆಗೆ ಕೊಲ್ನಾಡು ಸುಂದರ ರಾಮ್ ಶೆಟ್ಟಿ ಹಾಲ್ ನ ಎದುರು ಬದಿಯಲ್ಲಿರುವ ಎನ್.ಹೆಚ್ ರಸ್ತೆಯ ಬದಿಯಲ್ಲಿರುವ ಚಂದ್ರಮೌಳೀಶ್ವರ ದೇವಸ್ಥಾನದ ತಿರುವಿನ ಬಳಿ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ತನ್ನ ಬಾಬ್ತು KA-19-EC-2398 ನಂಬ್ರದ ಬೈಕ್ ಗೆ ಕೀ ಹಾಕಿ ಭದ್ರಪಡಿಸಿ ನಿಲ್ಲಿಸಿ ತನ್ನ ಸಹೊದ್ಯೋಗಿಯ ಬೈಕಿನಲ್ಲಿ ಮಂಗಳೂರಿಗೆ ಹೋಗಿ ವಾಪಸ್ಸು ಮಧ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರು ಬೈಕ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ಬೈಕ್ ಕಳವಾಗಿರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರ ಕಳವಾದ KA-19-EC-2398 ನೇ ನೋಂದಣಿ ಸಂಖ್ಯೆಯ ಬಜಾಜ್ ಡಿಸ್ಕವರ್ 150 ಸಿಸಿ ವಾಹನವು ನೀಲಿ ಕಪ್ಪು ಬಣ್ಣದಾಗಿದ್ದು, ಇದರ ಇಂಜಿನ್ ನಂಬ್ರ: JZMBTH29384 ಆಗಿದ್ದು ಚಾಸೀಸ್ ನಂಬ್ರ: MD2DSJZZZTWH28989 ಆಗಿರುತ್ತದೆ. ಇದರ ಅಂದಾಜು ಮೌಲ್ಯ 18,000/- ರೂ ಆಗ ಬಹುದು ಎಂಬಿತ್ಯಾದಿಯಾಗಿದೆ
Surathkal PS
ದಿನಾಂಕ 17-09-2023 ರಂದು ಬೆಳಿಗ್ಗೆ 07:00 ಗಂಟೆಗೆ ಪಿರ್ಯಾದಿ Smt Savithri ದಾರರ ತಮ್ಮನಾದ ಮಾಂತೇಶ್ (21) ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋದವನು ಕೆಲಸಕ್ಕೆ ಹೋಗದೆ ಆತನ ಸ್ನೇಹಿತನಾದ ಮಾಹಾಂತೇಶ್ ವಿಜಯಪುರ ಹಾಗೂ ಮತ್ತೊಬ್ಬ ಯುವಕನೊಂದಿಗೆ ಸುರತ್ಕಲ್ ಗ್ರಾಮದ ಸದಾಶಿವ ದೇವಸ್ಥಾನದ ಬಳಿಯ ಸಮುದ್ರ ತೀರಾದಲ್ಲಿ ಸಮಯ ಸುಮಾರು ಮಧ್ಯಾಹ್ನ 2:30 ಗಂಟೆಗೆ ಈಜಾಡುತ್ತಿರುವಾಗ ಸಮುದ್ರದ ಅಲೆಯ ಸುಳಿಗೆ ಸಿಲುಕಿ ಪಿರ್ಯಾದಿದಾರರ ತಮ್ಮ ಮಾಂತೇಶ್ ನು ನೀರಿನಲ್ಲಿ ಮುಳುಗಿದ್ದು ಸದ್ರಿ ಸಮಯ ಮಾಹಾಂತೇಶ್ ವಿಜಯಪುರನು ಸದ್ರಿ ಮಾಂತೇಶ್ ನ್ನು ಹಿಡಿದುಕೊಂಡು ತೀರಾಕ್ಕೆ ತರುವಾಗ ಮತ್ತೆ ಸಮುದ್ರ ನೀರಿನ ಸೆಳತಕ್ಕೆ ಸಿಲುಕಿ ಮಾಂತೇಶ್ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವುದಾಗಿದೆ ಎಂಬಿತ್ಯಾದಿ.
Moodabidre PS
ಪಿರ್ಯಾದಿ Naveen Poojaryದಾರರ ತಂದೆ ಪೂವಪ್ಪ ಪೂಜಾರಿ ಪ್ರಾಯ 60 ವರ್ಷ ಎಂಬುವರು ರಾತ್ರಿ ಸಮಯ ಲೈಟ್ ಹಿಡಿದುಕೊಂಡು ಟಾಯ್ಲೆಟ್‌ಗೆ ಹೋಗುವ ಅಭ್ಯಾಸವನ್ನು ಹೊಂದಿದ್ದು, ಎಂದಿನಂತೆ ದಿನಾಂಕ 14-09-2023 ರಂದು ಸಮಯ ರಾತ್ರಿ 10.00 ಗಂಟೆಗೆ ಲೈಟ್ ಹಿಡಿದುಕೊಂಡು ಟಾಯ್ಲೆಟ್‌ಗೆ ಹೋದವರು ವಾಪಸು ಮನೆಗೆ ಬಂದಿರುವುದಿಲ್ಲ. ನಂತರ ಪಿರ್ಯಾದಿದಾರರು ಮನೆಯ ಸುತ್ತ ಮುತ್ತ ಹುಡುಕಾಡಲಾಗಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಎಂಬಿತ್ಯಾದಿ.
ಕಾಣೆಯಾದವರ ಚಹರೆ ಗುರುತು:
ಹೆಸರು: ಪೂವಪ್ಪ ಪೂಜಾರಿ ಪ್ರಾಯ: 60 ವರ್ಷ
ಎತ್ತರ: 5.2 ಅಡಿ
ಮುಖ: ಕೋಲು ಮುಖ, ಎಣ್ಣೆಕಪ್ಪು ಮೈಬಣ್ಣ,