ಅಭಿಪ್ರಾಯ / ಸಲಹೆಗಳು

Crime Report in  CEN Crime PS

ದಿನಾಂಕ:14-09-2023 ರಂದು ಪಿರ್ಯಾದಿದಾರರ ಟೆಲಿಗ್ರಾಂ ನಂಬ್ರ: ನೇಯದಕ್ಕೆ NIELIT GROUP TASK 4272190-N11-131-ME901307ಎಂಬ ಟೆಲಿಗ್ರಾಂ ಅಕೌಂಟ್ ಯಿಂದ ಅಪರಿಚಿತ ವ್ಯಕ್ತಿಯು ಸಂದೇಶ ಕಳುಹಿಸಿ ತಾನು Corp pvt Ltd..ಯಿಂದ ಎಂಬುದಾಗಿ ತನ್ನನ್ನು ಪರಿಚಯಸಿಕೊಂಡು ಪಾರ್ಟ್ ಟೈಮ್ ಉದ್ಯೋಗ ನೀಡುವುದಾಗಿ ತಿಳಿಸಿ, ಟೆಲಿಗ್ರಾಂ ಮೂಲಕ https://t.me-+MMGly2FL942NMFI ಎಂಬ ಲಿಂಕ್ ಕಳುಹಿಸಿ  ಈ ಲಿಂಕ್ ನಲ್ಲಿ ಬರುವ ಐಡಿಗೆ ರಿಜಿಸ್ಟರ್ ಆಗುವಂತೆ ತಿಳಿಸಿದರು.ಅದರಲ್ಲಿ ಬರುವಂತ ಟಾಸ್ಕ್ ಗಳನ್ನು ಆಡಿ ಟಾಸ್ಕ್ ಗಳನ್ನು ಕಂಪ್ಲಿಟ್ ಮಾಡಿದರೆ ನಿಮಗೆ ಹಣ ನೀಡುವುದಾಗಿ ತಿಳಿಸಿರುತ್ತಾರೆ. ಅದರಂತೆ ಪಿರ್ಯಾದಿದಾರರು ಅವರು ಕಳುಹಿಸಿಕೊಟ್ಟ Google Maps ನಲ್ಲಿ ರೆಸ್ಟೋರೆಂಟ್ಗೆ ಸಂಬಂಧಪಟ್ಟ ರಿವ್ಯೂ ಕಾಮೆಂಟ್ಗಳನ್ನು ಬರೆಯುವುದನ್ನು ಒಳಗೊಂಡಿರುತ್ತದೆ ಈ ರೀತಿಯಲ್ಲಿ ಟಾಸ್ಕ್ ಗಳನ್ನು ಆಡಿ ಮೊದಲಿಗೆ 200/-ರೂ,ಗಳನ್ನು ಪಿರ್ಯಾದಿದಾರರ ಐಸಿಐಸಿಐ ಖಾತೆ ಸಂಖ್ಯೆ ನೇದಕ್ಕೆ ವರ್ಗಾಯಿಸಿರುತ್ತಾರೆ.ನಂತರ ಸದ್ರಿ ಅಪರಿಚಿತ ವ್ಯಕ್ತಿಯು NIELET Receptionist17 ಎಂಬ ಟೆಲಿಗ್ರಾಂ ಐಡಿ ಕಳುಹಿಸಿ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದು ಅದರಂತೆ  ಪಿರ್ಯಾದಿದಾರರು ಸದ್ರಿ ಟೆಲಿಗ್ರಾಂ ಖಾತೆದಾರರನ್ನು ಸಂಪರ್ಕಿಸಿದ್ದು ಅವರು ಪಿರ್ಯಾದಿದಾರರ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡು ದಿನಾಂಕ 14-09-2023 ರಿಂದ 16-10-2023 ರವರೆಗೆ ಆರೋಪಿತರು ಕಳುಹಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಪಿರ್ಯಾದಿದಾರರ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ ನೇದ್ದರಿಂದ  ಹೆಚ್ಚಿನ ಹಣ ಗಳಿಸಬಹುದೆಂದು ನಂಬಿ ಅವರು ಟೆಲಿಗ್ರಾಂ ಚಾನೆಲ್ ಮೂಲಕ ಕಳುಹಿಸಿಕೊಟ್ಟ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ 40,97,000/- ರೂ,ಗಳನ್ನು ವರ್ಗಾಯಿಸಿದ್ದು ತದನಂತರ ಈ ವರೆಗೆ ಪಿರ್ಯಾದಿದಾರರಿಗೆ ಯಾವುದೇ ಹಣವನ್ನು ಮರುಪಾವತಿ ಮಾಡದೆ ಮೋಸ ಮಾಡಿರುತ್ತಾರೆ. ಎಂಬಿತ್ಯಾದಿಯಾಗಿರುತ್ತದೆ.

Bajpe PS

ಪಿರ್ಯಾದಿ Revanasiddappa G ದಾರರು ದಿನಾಂಕ 17.10.2023  ರಂದು ರಾತ್ರಿ  ರೌಂಡ್ಸ್ ಮಾಡುತ್ತಿರುವ ಸಮಯ ದಿನಾಂಕ 18-10-2023 ರಂದು  ಬೆಳಗ್ಗಿನ ಜಾವ  04.15 ಗಂಟೆಗೆ ಮಂಗಳೂರು ತಾಲೂಕು ಅಡ್ಡೂರು  ಗ್ರಾಮದ ಅಡ್ಡೂರು ಜಂಕ್ಷನ್ ಬಳಿ ತಲುಪಿದಾಗ ಅಡ್ಡೂರು ಮಸೀದಿ ರಸ್ತೆ ಕಡೆಯಿಂದ ಅಡ್ಡೂರು ಜಂಕ್ಷನ್ ಕಡೆಗೆ 3 ಟಿಪ್ಪರ್ ಲಾರಿಗಳು ಬರುತಿದ್ದು. ಅದರಲ್ಲಿ  ಮುಂದಿನ ಟಿಪ್ಪರ್ ಲಾರಿ ಚಾಲಕನು ಪೊಲೀಸ್ ಜೀಪನ್ನು ಕಂಡೊಡನೆ ಟಿಪ್ಪರ್ ಲಾರಿಯನ್ನು ಅಲ್ಲಿಯೇ ನಿಲ್ಲಿಸಿ ಇಳಿದು ಓಡಿಹೋಗುವಾಗ ಸದ್ರಿ ಟಿಪ್ಪರ್ ಲಾರಿಯ ಹಿಂಬಾಗದಿಂದ ಬರುತಿದ್ದ ಇನ್ನೆರೆಡು ಟಿಪ್ಪರ್ ಲಾರಿಗಳ ಚಾಲಕರೂ ಕೂಡ ಸ್ಥಳದಲ್ಲಿಯೇ ಟಿಪ್ಪರ್ ಲಾರಿಗಳನ್ನು ನಿಲ್ಲಿಸಿ ಲಾರಿಯಿಂದ ಇಳಿದು ಓಡಿ ಹೋಗಿದ್ದು, ಕೂಡಲೇ ಪಿರ್ಯಾದಿದಾರರು ಸಿಬ್ಬಂದಿಯವರ  ಜೊತೆ ಜೀಪಿನಿಂದ ಇಳಿದು ಟಿಪ್ಪರ್ ಲಾರಿಗಳನ್ನು ನೋಡಲಾಗಿ ಟಿಪ್ಪರ್ ಲಾರಿಗಳಲ್ಲಿ ಮರಳನ್ನು ತುಂಬಿಸಿದ್ದು ಕಂಡು ಬಂದಿದ್ದು,ನಂತರ ಟಿಪ್ಪರ್ ಲಾರಿಗಳ ನಂಬ್ರ ನೋಡಲಾಗಿ KA20-D-6801 ,KA19-AE-3086, KA33 /7254 ಆಗಿರುತ್ತದೆ, ಸದ್ರಿ ಟಿಪ್ಪರ್ ಗಳ  ಚಾಲಕರು ಅದರ ಮಾಲಕರ ಜೊತೆ ಸೇರಿ ಯಾವುದೇ ಪರವಾನಿಗೆಯಿಲ್ಲದೆ ಸರ್ಕಾರಕ್ಕೆ ರಾಜಧನವನ್ನು ಪಾವತಿ ಮಾಡದೇ ಎಲ್ಲಿಂದಲೋ ಸರ್ಕಾರಿ ಸ್ವತ್ತಾದ ಮರಳನ್ನು ಕಳುವು ಮಾಡಿ ಸಾಗಾಟ ಮಾಡುತಿದ್ದ ಟಿಪ್ಪರ್ ಲಾರಿಗಳನ್ನು ಮರಳು ಸಮೇತ ಮುಂದಿನ ಕಾನೂನು ಕ್ರಮದ ಬಗ್ಗೆ ಠಾಣೆಗೆ ತರಲಾಗಿದೆ ಎಂಬಿತ್ಯಾದಿ

Urva PS

ಪಿರ್ಯಾಧಿ AVINASH M V ದಾರರು ಅವರ ತಮ್ಮ ಅಭಿಜಿತ್ ರವರ ಮಾಲಕತ್ವದ ಕೆಎ.45.ವಿ.8162 ನೇ ಹೀರೋ ಸ್ಪ್ಲೆಂಡರ್ ದ್ವಿಚಕ್ರ ವಾಹನವನ್ನು ದಿನಾಂಕ 14-10-2023 ರಂದು ಬೆಳಿಗ್ಗೆ 10-00 ಗಂಟೆಗೆ ಕೊಟ್ಟಾರ ಚೌಕಿ ಪ್ಲೈ ಓವರ್ ನ ಅಡಿ ಭಾಗದ ಪಾರ್ಕಿಂಗ್ ನಲ್ಲಿ  ಪಾರ್ಕ್ ಮಾಡಿ ಕೆಲಸಕ್ಕೆ ಹೋಗಿದ್ದು, ಅದೇ ದಿನ ಸಂಜೆ ಸಮಯ ಸುಮಾರು 06-30 ರ ವೇಳೆಗೆ ಬಂದು ನೋಡಿದಾಗ ಪಿರ್ಯಾಧಿದಾರರು ಪಾರ್ಕಿಂಗ್ ಮಾಡಿ ಹೋದ ಜಾಗದಲ್ಲಿ ದ್ವಿಚಕ್ರ ವಾಹನ ಇಲ್ಲದೇ ಇದ್ದು, ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಬೈಕನ್ನು ಪಿರ್ಯಾಧಿದಾರರು ಹಾಗೂ ಪಿರ್ಯಾಧಿದಾರರ ಸ್ನೇಹಿತರು ಎಲ್ಲಾ ಕಡೆ ಹುಡುಕಾಡಿ ಸಿಗದೇ ಇದ್ದಿರುವುದರಿಂದ ದೂರು ನೀಡಿರುವುದಾಗಿದ್ದು, ಈ ಬೈಕಿನ ಅಂದಾಜು ಮೌಲ್ಯ- 15,000 ರುಪಾಯಿ ಆಗಿರುತ್ತದೆ ಎಂಬಿತ್ಯಾದಿ.

Surathkal PS

ಪಿರ್ಯಾದಿ Mathew P F Dsouza ದಾರರು ದಿನಾಂಕ: 12-10-2023 ರಂದು ಬೆಳಿಗ್ಗೆ ಕೆಲಸದ ಬಗ್ಗೆ ಹೋಗಿದ್ದು  ಸುರತ್ಕಲ್ ಸೆಕ್ರೇಡ್ ಹಾರ್ಟ್ ಚರ್ಚ್ ಬಳಿ ವಾಸದ ಮನೆ ಇರುತ್ತದೆ, ಮಧ್ಯಾಹ್ನ 13.00 ಗಂಟೆಗೆ  ವಾಪಾಸ್ಸು ಮನೆಗೆ ಬಂದು ನೋಡುವಾಗ ಪಿರ್ಯಾದಿದಾರರ ಮನೆಯ ಬಾಗಿಲು ತೆರೆದಿದ್ದು ನೋಡಲಾಗಿ ಮನೆಯ ಬಾಗಿಲಿನ ಬೀಗ ಮುರಿದಿದ್ದು ಮನೆಯ ಒಳಗಡೆ ಇದ್ದು ಸುಮಾರು 60000/- ಮೌಲ್ಯದ ಸೊತ್ತಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ.

 

2) ಪಿರ್ಯಾದಿದಾರರಾದ ಪ್ರಕಾಶ್ ಡಿ’ಸಿಲ್ವ ಎಂಬುವವರು ಜನತಾ ಕಾಲನಿಯಲ್ಲಿ ವೇರ್ ಹೌಸ್ ನಿರ್ಮಾಣ ಮಾಡುತ್ತಿದ್ದು ಅದರ ಫ್ಯಾಬ್ರಿಕೇಷನ್ ಕೆಲಸವನ್ನು ಕಿರಣ್ ಎಂಬವರಿಗೆ ನೀಡಿರುತ್ತಾರೆ. ದಿನಾಂಕ: 16-10-2023 ರಂದು ತಮ್ಮ ನಿರ್ಮಾಣ ಹಂತದ ಕಟ್ಟಡವನ್ನು ಬಂದು ನೋಡಿದಲ್ಲಿ ಕಟ್ಟಡ ನಿರ್ಮಾಣಕ್ಕೆ ತಂದಿರುವ ಸಾಮಾಗ್ರಿಗಳು ಕಾಣೆಯಾಗಿರುವುದು ಕಂಡು ಬರುತ್ತದೆ. ಈ ಬಗ್ಗೆ ಕಿರಣ್ ರವರಲ್ಲಿ ಪಿರ್ಯಾದಿದಾರರು ಕೇಳಿದಾಗ ಕಿರಣ್ ರವರು ತನ್ನ ಸಬ್ ಕಂಟ್ರಾಕ್ಟರ್ ಆಗಿರುವ ವಿಕಾಸ್ ನು ಸದ್ರಿ ಸಾಮಾಗ್ರಿಗಳನ್ನು ಕತ್ತರಿಸಿ ಜನತಾ ಕಾಲನಿಯ ಸುಗ್ಗಿ ಬಾರ್ ನ ಬಳಿ ಇರುವ ಗುಜರಿ ಅಂಗಡಿಗೆ ಮಾರಿದ್ದಾಗಿ ತಿಳಿಸಿದ್ದು ಈ ಬಗ್ಗೆ ಗುಜರಿ ಅಂಗಡಿಯವರನ್ನು ಕೇಳಿದಾಗ ಯುವಕನೊಬ್ಬ ಗೋಣಿ ಚೀಲದಲ್ಲಿ ಸ್ಟೀಲ್ ರಾಡ್ ಗಳನ್ನು ತಂದು ತನ್ನದೇ ಎಂದು ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ. ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ 35, 000/- ಆಗಿರುತ್ತದೆ

Mangalore East PS

ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕಿಯಾದ ರೋಸಮ್ಮ ದಿನಾಂಕ 17-10-2023 ರಂದು ಠಾಣಾ ವ್ಯಾಪ್ತಿಯಲ್ಲಿ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಸುಮಾರು  ಸಂಜೆ 17.30 ಗಂಟೆಗೆ ಮಂಗಳೂರು ನಗರದ ಕದ್ರಿ ಪಾರ್ಕ್ ಬಳಿಯಲ್ಲಿ ಓರ್ವ ವ್ಯಕ್ತಿ ರಸ್ತೆಯಲ್ಲಿ ತೂರಾಡುತ್ತಿದ್ದು, ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದಿದ್ದು. ಆತನನ್ನು ವಶಕ್ಕೆ ಪಡೆದುಕೊಂಡಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಕೌಶಲ್ ವಿ.ಎಸ್ ಪ್ರಾಯ 23 ವರ್ಷ ವಾಸ: 5-6-572/16 ಅನುಗ್ರಹ ಅಪಾರ್ಟ್ ಮೆಂಟ್ ಫ್ಲಾಟ್ ನಂಬ್ರ 201 ಕೊಡಿಯಾಲ್ ಗುತ್ತು ಭಗವತಿ ನಗರ ಮಂಗಳೂರು ಎಂದು ತಿಳಿಸಿರುತ್ತಾನೆ.  ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಪರೀಕ್ಷಿಸಿ ವರದಿ ನೀಡುವಂತೆ ಕಳುಹಿಸಿ ಕೊಟ್ಟಿದ್ದು ವೈದ್ಯಾಧಿಕಾರಿಯವರು ಈತನನ್ನು ಪರೀಕ್ಷಿಸಿ TETRAHYDARCANNABINOID(MARIJUANA) ಸೇವನೆ ಮಾಡಿರುವುದಾಗಿ ವರದಿ ನೀಡಿರುತ್ತಾರೆ. ಆದುದರಿಂದ ಈತನು ಮಾದಕ ವಸ್ತು ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ಧೃಢಪಟ್ಟಿರುವುದರಿಂದ ಈತನ ವಿರುದ್ದ NARCOTIC DRUGS AND PSYCHOTROPIC SUBSTANCES ACT 1985 ರಂತೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 18-10-2023 04:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080